Tag: Megastar Chiranjeevi

  • `ಕಾಂತಾರ’ ಸಕ್ಸಸ್ ನಂತರ ಚಿರಂಜೀವಿ ಅಳಿಯನ ಚಿತ್ರಕ್ಕೆ ಅಜನೀಶ್ ಸಂಗೀತ

    `ಕಾಂತಾರ’ ಸಕ್ಸಸ್ ನಂತರ ಚಿರಂಜೀವಿ ಅಳಿಯನ ಚಿತ್ರಕ್ಕೆ ಅಜನೀಶ್ ಸಂಗೀತ

    ಚಿತ್ರರಂಗದಲ್ಲಿ `ಕಾಂತಾರ’ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದೆ. ಸಿನಿಮಾ ಕಥೆ ಮಾತ್ರವಲ್ಲ. ಚಿತ್ರದ ಸಾಂಗ್ಸ್ ಕೂಡ ಸೂಪರ್ ಹಿಟ್ ಆಗಿದೆ. ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದ ಅಜನೀಶ್ ಲೋಕನಾಥ್‌ಗೂ ಭರ್ಜರಿ ಆಫರ್ಸ್‌ ಅರಸಿ ಬರುತ್ತಿದೆ. ಮೆಗಾಸ್ಟಾರ್ ಕುಟುಂಬದ ಸ್ಟಾರ್ ನಟನ ಸಿನಿಮಾಗೆ ಅಜನೀಶ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

    `ಕಾಂತಾರ’ ಚಿತ್ರದಲ್ಲಿ ಕಥೆಯಷ್ಟೇ ಅಲ್ಲ, ಹಾಡಿನ ಮೇಲೂ ಫ್ಯಾನ್ಸ್ ಸಿಕ್ಕಾಪಟ್ಟೆ ಕ್ರೇಜ್ ಇದೆ. ಪ್ರಮೋದ್ ಮರವಂತೆ ಬರೆದಿರುವ `ಸಿಂಗಾರ ಸಿರಿಯೇ’ ಸಾಹಿತ್ಯಕ್ಕೆ ಅಜನೀಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. `ವರಾಹ ರೂಪಂ’ ಸಾಂಗ್ ಬಿಗ್ ಹಿಟ್ ಆಗಿದೆ. ಈ ಸಕ್ಸಸ್ ಬೆನ್ನಲ್ಲೇ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್‌ಗೆ ತೆಲುಗಿನಿಂದ ಬುಲಾವ್ ಬಂದಿದೆ. ತೆಲುಗಿನಲ್ಲಿ ತೆರೆಕಂಡ ʻಕಿರಿಕ್ ಪಾರ್ಟಿʼ ಚಿತ್ರಕ್ಕೆ ಅಜನೀಶ್ ಸಂಗೀತ ನಿರ್ದೇಶನ ಮಾಡಿದ್ದರು. ಇದೀಗ ಮತ್ತೆ ಮೆಗಾಸ್ಟಾರ್ ಕುಟುಂಬದ ಕುಡಿ ಸಾಯಿ ಧರ್ಮ್ ತೇಜ್‌ ಮುಂಬರುವ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುವ ಮೂಲಕ ಮತ್ತೆ ಎಂಟ್ರಿ ಕೊಡ್ತಿದ್ದಾರೆ. ಇದನ್ನೂ ಓದಿ:ಚೇತನ್ ವಿವಾದಾತ್ಮಕ ಹೇಳಿಕೆಗೆ ನೋ ಕಾಮೆಂಟ್ಸ್ ಎಂದ `ಕಾಂತಾರ’ ನಟ ರಿಷಬ್

    ಮೆಗಾಸ್ಟಾರ್ ಚಿರಂಜೀವಿ ಅಳಿಯ ಸಾಯಿ ಧರ್ಮ್ ತೇಜ್ ಮುಂದಿನ ಪ್ರಾಜೆಕ್ಟ್‌ಗೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿರುವುದಾಗಿ ರಿವೀಲ್ ಮಾಡಿದ್ದಾರೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕಂಪ್ಲೀಟ್ ಅಪ್‌ಡೇಟ್‌ವೊಂದಿಗೆ ಅಧಿಕೃತವಾಗಿ ತಿಳಿಸುವುದಾಗಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವರುಣ್ ತೇಜ್ ಜೊತೆ ಲಾವಣ್ಯ ತ್ರಿಪಾಠಿ ಮದುವೆ?

    ವರುಣ್ ತೇಜ್ ಜೊತೆ ಲಾವಣ್ಯ ತ್ರಿಪಾಠಿ ಮದುವೆ?

    ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ, ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ ಮದುವೆಗೆ ತೆರೆಮರೆಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ವರುಣ್‌ ತೇಜ್‌, ತೆಲುಗಿನ ಸ್ಟಾರ್ ನಟಿಯ ಕೈಹಿಡಿಯಲಿದ್ದಾರೆ.

    ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟ ವರುಣ್ ತೇಜ್ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರಂತೆ. ಮೆಗಾಸ್ಟಾರ್ ಕುಟುಂಬದಲ್ಲಿ ಗಟ್ಟಿಮೇಳ ಶುರುವಾಗುವುದಕ್ಕೆ ಕೌಂಟ್ ಡೌನ್ ಶುರುವಾಗಲಿದೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಸದ್ಯ ವರುಣ್ ತೇಜ್, ನಟಿ ಲಾವಣ್ಯ ತ್ರಿಪಾಠಿ ಅವರನ್ನ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಸಾಕಷ್ಟು ವರ್ಷಗಳಿಂದ ಪರಿಚಿತರಾಗಿರುವ ಈ ಜೋಡಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಂದ ಬೆನ್ನಲ್ಲೇ ನಟಿ ಲಾವಣ್ಯ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ಸಂದರ್ಶನವೊಂದರಲ್ಲಿ ವರುಣ್ ತೇಜ್ ಜತೆಗಿನ ಮದುವೆ ಗಾಸಿಪ್ ಬಗ್ಗೆ ಕೇಳಲಾಗಿದೆ. ನಾನು ಒಂಟಿಯಾಗಿದ್ದೇನೆ, ನನಗೆ ಸರಿಯಾದ ಜೋಡಿ ಸಿಕ್ಕಿಲ್ಲ ಎಂದು ಹೇಳುವ ಮೂಲಕ ಎಲ್ಲಾ ಗಾಸಿಪ್‌ಗೂ ನಟಿ ಬ್ರೇಕ್ ಹಾಕಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪುತ್ರಿಯ ಮೂರನೇ ಮದುವೆ ಸಿದ್ಧತೆಯ ಬೆನ್ನಲ್ಲೇ ಆಸ್ತಿ ಹಂಚಿಕೆಗೆ ಮೆಗಾಸ್ಟಾರ್ ನಿರ್ಧಾರ

    ಪುತ್ರಿಯ ಮೂರನೇ ಮದುವೆ ಸಿದ್ಧತೆಯ ಬೆನ್ನಲ್ಲೇ ಆಸ್ತಿ ಹಂಚಿಕೆಗೆ ಮೆಗಾಸ್ಟಾರ್ ನಿರ್ಧಾರ

    ಟಾಲಿವುಡ್‌ನ ಬಿಗ್ ಸ್ಟಾರ್ ಚಿರಂಜೀವಿ, ಕುಟುಂಬದ ವಿಚಾರ ಈಗ ಗಾಸಿಪ್ ಮಂದಿಗೆ ಹಾಟ್ ಟಾಪಿಕ್ ಆಗಿದೆ. ಪುತ್ರಿ ಶ್ರೀಜಾಳ ಎರಡೆರೆಡು ಮದುವೆ, ಡಿವೋರ್ಸ್‌ನಲ್ಲಿ ಅಂತ್ಯವಾಗಿರುವ ಬೆನ್ನಲ್ಲೇ ಮೆಗಾಸ್ಟಾರ್ ಚಿರಂಜೀವಿ ಮಹತ್ತರದ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ.

    ನೇಮು ಫೇಮು ಎಲ್ಲಾ ಇದ್ದರೂ ನಟ ಚಿರಂಜೀವಿ ಕುಟುಂಬದಲ್ಲಿ ಖುಷಿಯಿಲ್ಲ. ಕೆಲ ವರ್ಷಗಳ ಹಿಂದೆ ಪುತ್ರಿ ಶ್ರೀಜಾ ಪ್ರೀತಿಸಿ ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದರು. ಬಳಿಕ ಮೊದಲ ಪತಿಗೆ ಡಿವೋರ್ಸ್ ನೀಡಿ, ಮತ್ತೆ ಮನೆಗೆ ಸೇರಿದ್ದರು. ನಂತರ ಮನೆಯವರೇ ಮುಂದೆ ನಿಂತು ಕಲ್ಯಾಣ್ ಜೊತೆ ಎರಡನೇ ಮದುವೆ ಮಾಡಿದ್ದರು. ಆ ಮದುವೆ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಈಗ ಚಿರಂಜೀವಿ ಪುತ್ರಿ ಮೂರನೇ ಮದುವೆಯ ವಿಚಾರದ ಬೆನ್ನಲ್ಲೇ ಮೆಗಾಸ್ಟಾರ್ ಮಹತ್ತರ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ಇದನ್ನೂ ಓದಿ:ವೀಡಿಯೋ ಲೀಕ್ ಬಗ್ಗೆ ಕಣ್ಣೀರಿಟ್ಟ ಸೋನು ಶ್ರೀನಿವಾಸ್ ಗೌಡ

    ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾಗೆ ಮೂರನೇ ಮದುವೆ ಮಾಡಲು ನಿರ್ಧರಿಸಿದ್ದಾರೆ. ಮದುವೆಯ ಬಳಿಕವೇ ಆಸ್ತಿಯನ್ನು ಮಕ್ಕಳ ಹೆಸರಿನಲ್ಲಿ ಹಂಚಿಕೆ ಮಾಡಲು ಮೆಗಾಸ್ಟಾರ್‌ ನಿರ್ಧಾರ ಮಾಡಿದ್ದಾರೆ. ತಮ್ಮ ಅಷ್ಟು ಆಸ್ತಿಯನ್ನು ಪಾಲು ಮಾಡಲು ಮೆಗಾಸ್ಟಾರ್ ರೆಡಿಯಾಗಿದ್ದಾರೆ ಎಂಬ ಮಾತು ಟಿಟೌನ್ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಚಿರಂಜೀವಿ ಪುತ್ರಿ ಶ್ರೀಜಾಗೆ ಮೂರಲ್ಲ, ನಾಲ್ಕು ಮದುವೆಯಂತೆ!

    ಚಿರಂಜೀವಿ ಪುತ್ರಿ ಶ್ರೀಜಾಗೆ ಮೂರಲ್ಲ, ನಾಲ್ಕು ಮದುವೆಯಂತೆ!

    ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ಮಗಳು ಶ್ರೀಜಾ ಮದುವೆಯದ್ದೇ ಸುದ್ದಿ. ಕಲ್ಯಾಣ್ ದೇವ್ ಜತೆ ಶ್ರೀಜಾ ಡಿವೋರ್ಸ್ ವದಂತಿಯ ಬೆನ್ನಲ್ಲೇ ಶಾಕಿಂಗ್ ವಿಚಾರವೊಂದು ಟಿಟೌನ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಚಿರಂಜೀವಿ ಪುತ್ರಿ ಶ್ರೀಜಾ ಮೂರಲ್ಲ, ನಾಲ್ಕು ಮದುವೆ ಆಗುತ್ತಾರೆ ಅಂತಾ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಈಗಾಗಲೇ ಎರಡು ಮದುವೆ ಆಗಿದೆ. ಮೊದಲು ಸಿರೀಶ್ ಜತೆ ಮದುವೆಯಾಗಿದ್ದರು. ಕಾರಣಾಂತರಗಳಿಂದ ಈ ಮದುವೆ ಮುರಿದು ಬಿತ್ತು. ಬಳಿಕ ಮನೆಯಲ್ಲಿ ನಿಶ್ಚಿಯಿಸಿದ ವರ ಕಲ್ಯಾಣ್ ದೇವ್ ಅವರನ್ನ ಶ್ರೀಜಾ ಮದುವೆಯಾಗಿದ್ದರು. ಇದೀಗ ಈ ಸಂಬಂಧವೂ ಕೂಡ ಡಿವೋರ್ಸ್ ಆಗಿದೆ ಎಂಬ ವದಂತಿಯ ಬೆನ್ನಲ್ಲೇ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಶ್ರೀಜಾ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ:ಸ್ಟಾರ್ ನಟನ ಜೊತೆ ಮದುವೆಯಾಗಲಿದ್ದಾರಾ ‘ಮೈನಾ’ ಹುಡುಗಿ ನಿತ್ಯಾ ಮೆನನ್?

    ಕಲ್ಯಾಣ್ ದೇವ್‌ಗೆ ಡಿವೋರ್ಸ್ ನೀಡಿದ್ದಾರೆ ಎಂಬ ವದಂತಿಯಿದೆ. ಮೂರನೇ ಮದುವೆಗೆ ರೆಡಿಯಾಗಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಮೂರಲ್ಲ, ಶ್ರೀಜಾಗೆ ನಾಲ್ಕು ಮದುವೆಯಾಗುತ್ತದೆ ಎಂದು ಜ್ಯೋತಿಷಿ ಹೇಳಿದ್ದಾರೆ. ಶ್ರೀಜಾ ಜಾತಕದ ಪ್ರಕಾರ ಈಕೆಗೆ ನಾಲ್ಕು ಮದುವೆಯಾಗುತ್ತದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಪವನ್ ಕಲ್ಯಾಣ್‌ಗೂ ನಾಲ್ಕು ಮದುವೆಯಾಗುತ್ತದೆ ಎಂದು ವೇಣು ಸ್ವಾಮಿ ಹೇಳಿಕೆ ನೀಡಿದ್ದರು. ಅಷ್ಟಕ್ಕೂ ಈ ಸುದ್ದಿ ನಿಜವಾಗುತ್ತ ಅಂತಾ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ಆಚಾರ್ಯ’ ಸಿನಿಮಾಗೆ ಮಹೇಶ್ ಬಾಬು ಧ್ವನಿ

    `ಆಚಾರ್ಯ’ ಸಿನಿಮಾಗೆ ಮಹೇಶ್ ಬಾಬು ಧ್ವನಿ

    ಟಾಲಿವುಡ್‌ನಲ್ಲಿ ಸದ್ಯ ಹೈಪ್ ಕ್ರಿಯೇಟ್ ಮಾಡಿರೋ ಚಿತ್ರ ಮೆಗಾಸ್ಟಾರ್ ಚಿರಂಜೀವಿ ನಟನೆಯ `ಆಚಾರ್ಯ’ ಸಿನಿಮಾಗೆ ಪ್ರಿನ್ಸ್ ಮಹೇಶ್ ಬಾಬು ಸಾಥ್ ನೀಡಿದ್ದಾರೆ. `ಆಚಾರ್ಯ’ ಚಿತ್ರಕ್ಕೆ ಸ್ಟಾರ್ ನಟ ಮಹೇಶ್ ಬಾಬು ಧ್ವನಿ ನೀಡಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಆಚಾರ್ಯ ಚಿತ್ರಕ್ಕೆ ಮಹೇಶ್ ಬಾಬು ವಾಯ್ಸ್ ನೀಡಿದ್ದಾರೆ. ಚಿತ್ರದ ಭಾಗವಾಗಿರೋ `ಪದಘಟ್ಟಂ’ಗೆ ತಮ್ಮ ಧ್ವನಿ ನೀಡುವುದರ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಮಹೇಶ್ ಬಾಬು ಪವರ್‌ಫುಲ್ ವಾಯ್ಸ್ಗೆ ಮತ್ತು ಚಿತ್ರತಂಡಕ್ಕೆ ಜೊತೆಯಾಗಿರೋದಕ್ಕೆ ಚಿರಂಜೀವಿ ಮತ್ತು ರಾಮ್ ಚರಣ್ ಖುಷಿಪಟ್ಟಿದ್ದಾರೆ.

    `ಆಚಾರ್ಯ’ ತಂಡ ಸೇರಿ ಈ ಚಿತ್ರ ಮತ್ತಷ್ಟು ವಿಶೇಷವನ್ನಾಗಿ ಮಾಡಿದ್ದೀರಾ ಎಂದು ಈ ಕುರಿತು ಟ್ವಿಟರ್ ಮೂಲಕ `ಸರ್ಕಾರಿ ವಾರಿ ಪಾಟ’ ಸ್ಟಾರ್‌ಗೆ ಚಿರಂಜೀವಿ ಮತ್ತು ರಾಮ್ ಚರಣ್ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರದ ಮೊದಲ ಸಾಂಗ್ ಇಂದು ರಿಲೀಸ್

    ಚಿತ್ರದ ಟ್ರೇಲರ್ ಮತ್ತು ಹಾಡುಗಳಿಂದ ಮೋಡಿ ಮಾಡಿರೋ `ಆಚಾರ್ಯ’ ಚಿತ್ರ ಇದೇ ಏಪ್ರಿಲ್ 29ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಚಿರಂಜೀವಿ ಮತ್ತು ರಾಮ್ ಚರಣ್ ಜತೆಗೆ ಕಾಜಲ್ ಮತ್ತು ಪೂಜಾ ಹೆಗ್ಡೆ ಕೂಡ ನಟಿಸಿದ್ದಾರೆ.

  • ಮಾಸ್ ಮಹಾರಾಜ ರವಿತೇಜ್‌ ಸಿನಿಮಾಗೆ ಮೆಗಾಸ್ಟಾರ್ ಚಿರಂಜೀವಿ ಸಾಥ್

    ಮಾಸ್ ಮಹಾರಾಜ ರವಿತೇಜ್‌ ಸಿನಿಮಾಗೆ ಮೆಗಾಸ್ಟಾರ್ ಚಿರಂಜೀವಿ ಸಾಥ್

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಬಳಿಕ ನಿರ್ಮಾಪಕ ಅಭಿಷೇಕ್ ಅರ್ಗವಾಲ್ ಟೈಗರ್ ನಾಗೇಶ್ವರ್ ರಾವ್ ಎಂಬ ಪ್ಯಾನ್ ಇಂಡಿಯಾ ಸಿನಿಮಾಗೆ ಮುನ್ನುಡಿ ಬರೆದಿದ್ದಾರೆ. ಮಾಸ್ ಮಹಾರಾಜ ರವಿತೇಜ್‌ ನಾಯಕನಾಗಿ ಬಣ್ಣ ಹಚ್ಚಿದ್ದು, ಯುಗಾದಿ ಹಬ್ಬಕ್ಕೆ ಅದ್ಧೂರಿಯಾಗಿ ಮುಹೂರ್ತ ನೆರವೇರಿದೆ. ಮೆಗಾಸ್ಟಾರ್ ಚಿರಂಜೀವಿ, ಈ ಸಿನಿಮಾಗೆ ಕ್ಲಾಪ್ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ಬಳಿಕ ಟೈಗರ್ ನಾಗೇಶ್ವರ್ ರಾವ್ ಪ್ರಿ ಲುಕ್ ರಿಲೀಸ್ ಮಾಡಿ ಮಾತಿಗೆ ಇಳಿದ ಚಿರಂಜೀವಿ, ಕೋವಿಡ್ ಸಂದರ್ಭದಲ್ಲಿ ಟೈಗರ್ ನಾಗೇಶ್ವರ್ ರಾವ್  ಕಥೆಯನ್ನು ಹೇಳಿದ್ದರು. ಆದರೆ ಕೆಲ ಸಮಸ್ಯೆಯಿಂದ ನಾನು ಈ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಈಗ ನನ್ನ ತಮ್ಮ ರವಿತೇಜ್‌ ಈ ಸಿನಿಮಾ ಮಾಡ್ತಿದ್ದಾರೆ. ನಾನು ಚಿಕ್ಕವನಿದ್ದಾಗ ಸ್ಟುವರ್ಟ್‍ಪುರಂ ನಾಗೇಶ್ವರ ರಾವ್ ಬಗ್ಗೆ ಕೇಳಿದ್ದೆ. ನನ್ನ ತಂದೆ ಚಿರಾಳ ಪೇರಾಲದಲ್ಲಿ ಕೆಲಸ ಮಾಡುತ್ತಿದ್ದರು. ಸ್ಟುವರ್ಟ್‍ಪುರಂ ಪಕ್ಕದಲ್ಲೇ ಇತ್ತು. ಅಲ್ಲಿನ ಜನರೆಲ್ಲ ನಾಗೇಶ್ವರನನ್ನು ಹೀರೋ ಎಂದು ಹೊಗಳುತ್ತಿದ್ದರು. ವರ್ಷಗಳ ನಂತರ ವಂಶಿ ಒಂದು ಕಮರ್ಷಿಯಲ್ ಕಥೆಯೊಂದಿಗೆ ಬಂದರು. ರವಿತೇಜ ಈ ಸಿನಿಮಾ ಮಾಡುತ್ತಿರುವುದು ಚೆನ್ನಾಗಿದೆ. ಅಭಿಷೇಕ್ ಅಗರ್ವಾಲ್ ಇದನ್ನು ಮಾಡುತ್ತಿರುವುದು ನನಗೆ ಖುಷಿ ತಂದಿದೆ. ರವಿತೇಜ್‌, ಅಭಿಷೇಕ್ ಮತ್ತು ವಂಶಿ ಅವರು ಕಾಶ್ಮೀರ ಫೈಲ್‍ಗಳಿಗಿಂತ ದೊಡ್ಡ ಹಿಟ್ ಆಗಲಿ ಎಂದು ಹಾರೈಸಿದರು. ಇದನ್ನೂ ಓದಿ : ಪಾವನಾ ನಾಯಕಿಯಾಗಿ ನಟಿಸಿದ ‘ಇನ್’ ಚಿತ್ರದ ಟೀಸರ್ ರಿಲೀಸ್ ಮಾಡಿದ ಕಿಚ್ಚ

    ನಾಯಕ ಕಿಶನ್ ರೆಡ್ಡಿ, ಅಭಿಷೇಕ್ ಅಗರ್ವಾಲ್ ಮತ್ತು ಅವರ ತಂದೆ ಹಲವು ವರ್ಷಗಳಿಂದ ಕುಟುಂಬ ಸ್ನೇಹಿತರು. ಅವರು ಇತ್ತೀಚೆಗೆ ದಿ ಕಾಶ್ಮೀರ್ ಎಂಬ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಕಾಶ್ಮೀರಿ ಪಂಡಿತರ ಸಂಕಟವನ್ನು ಭಾರತೀಯರೆಲ್ಲರಿಗೂ ತಿಳಿಯುವಂತೆ ಮಾಡಿದರು. ನಿರ್ದೇಶಕ ವಿವೇಕ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಥೆಯನ್ನು ತೋರಿಸಿದರು. ಪಂಡಿತರ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ ಇದೆ. ಹೆಚ್ಚು ಜನ ಸಿನಿಮಾ ಮಾಡುತ್ತಾರೆ. ಈಗ ಅವರು ಟೈಗರ್ ನಾಗೇಶ್ವರ ರಾವ್ ಅವರ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಈ ಚಿತ್ರವೂ ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವರು ಹೇಳಿದರು.

    ನಿರ್ದೇಶಕ ವಂಶಿ, ನಾನು ರವಿತೇಜ ಅವರೊಂದಿಗೆ ನಾಲ್ಕು ವರ್ಷ ಪ್ರಯಾಣ ಮಾಡಿದ್ದೇನೆ. ಅವರು ಕಥೆಯನ್ನು ಇಷ್ಟಪಟ್ಟಿದ್ದಾರೆ ಮತ್ತು ಅದನ್ನು ಮಾಡಲು ಒಪ್ಪಿಕೊಂಡಿದ್ದಾರೆ. ರವಿತೇಜ್‌ ಅಭಿಮಾನಿಗಳು ಮಾತ್ರವಲ್ಲದೆ ಎಲ್ಲಾ ತೆಲುಗು ನಾಯಕರ ಅಭಿಮಾನಿಗಳು ಚಿತ್ರವನ್ನು ಮೆಚ್ಚುತ್ತಾರೆ ಎನ್ನುವ ಆತ್ಮವಿಶ್ವಾಸದಿಂದ ಹೇಳಿದರು.

    ನಿರ್ಮಾಪಕ ಅಭಿಷೇಕ್ ಅಗರ್ವಾಲ್, ಚಿರಂಜೀವಿ, ಕಿಶನ್ ರೆಡ್ಡಿ ಅವರಿಗೆ ಧನ್ಯವಾದಗಳು. ಕಾಶ್ಮೀರ್ ಫೈಲ್ಸ್ ಅನ್ನು ದೊಡ್ಡ ಹಿಟ್ ಮಾಡಿದ ಪ್ರೇಕ್ಷಕರಿಗೆ ನಾನು ಮತ್ತೊಮ್ಮೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರು ಟೈಗರ್ ನಾಗೇಶ್ವರ ರಾವ್ ಸಿನಿಮಾ ಆಶೀರ್ವಾದ ಮಾಡಿ ಎಂದರು.

    ರವಿತೇಜ ಸಿನಿಕರಿಯರ್ ಬಿಗ್ ಬಜೆಟ್ ಚಿತ್ರ: ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಮೂಲಕ ಬಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಕನಸಿನ ಸಿನಿಮಾವಾಗಿರುವ ಟೈಗರ್ ನಾಗೇಶ್ವರ್ ರಾವ್ ಸಿನಿಮಾ, 1970ರಲ್ಲಿ ಸ್ಟುವರ್ಟ್‍ಪುರಂ ಎಂಬಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾವಾಗಿದ್ದು, ಕುಖ್ಯಾತ ಹಾಗೂ ಧೈರ್ಯಶಾಲಿ ಕಳ್ಳನ ಕಥಾನಕವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ರವಿತೇಜ ಸಂಪೂರ್ಣವಾಗಿ ತಮ್ಮ ಮೇಕ್ ಓವರ್‌ನ್ನು ಬದಲಿಸಿಕೊಂಡಿದ್ದಾರೆ. ಒಂದು ವಿಭಿನ್ನ ಪಾತ್ರದಲ್ಲಿ ರವಿತೇಜ್‌ ಮಿಂಚಲಿದ್ದಾರೆ. ಬಾಲಿವುಡ್ ಬ್ಯೂಟಿ ಕೃತಿ ಸನೂನ್ ಸಹೋದರಿ ನೂಪೂರ್ ಸನೂನ್ ರವಿತೇಜ್‍ಗೆ ಜೋಡಿಯಾಗಿ ಮಿಂಚಲಿದ್ದಾರೆ. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪುರಸ್ಕಾರ

    ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದ್ದು, 70ರ ದಶಕದ ಟಚ್ ಜೊತೆಗೆ ಮೈ ಜುಮ್ ಎನಿಸುವ ಆಕ್ಷನ್ ಸೀನ್ಸ್ ಸಿನಿಮಾದಲ್ಲಿರಲಿದೆ. ಆರ್.ಮ್ಯಾಥಿ ಐಎಸ್ ಸಿ ಕ್ಯಾಮೆರಾ ವರ್ಕ್, ಜೆವಿ ಪ್ರಕಾಶ್ ಕುಮಾರದ್ ಸಂಗೀತ, ಶ್ರೀಕಾಂತ್ ವಿಸ್ಸಾ ಸಂಭಾಷಣೆ ಬರೆದಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

    ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಶರತ್ ಮಂಡವ, ತ್ರಿನಾಧ್ ರಾವ್ ನಿಕ್ಕಿನಾ, ಸುಧೀರ್ ವರ್ಮಾ, ತೇಜ ಮತ್ತು ಇತರರು ಉಪಸ್ಥಿತಿರಿದ್ದರು.

  • ಮೆಗಾಸ್ಟಾರ್ ಜೊತೆ ತೆರೆ ಹಂಚಿಕೊಂಡ ಬಾಲಿವುಡ್ ಬಾದ್ ಶಾ

    ಮೆಗಾಸ್ಟಾರ್ ಜೊತೆ ತೆರೆ ಹಂಚಿಕೊಂಡ ಬಾಲಿವುಡ್ ಬಾದ್ ಶಾ

    ಮುಂಬೈ: ಸ್ಟಾರ್ ನಟರು ಒಂದೇ ಸಿನಿಮಾದಲ್ಲಿ ನಟಿಸುವ ಟ್ರೆಂಡ್ ಬಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್ ಅಂಗಳದಲ್ಲಿ ಟ್ರೆಂಡಿಂಗ್ ಆಗಿದೆ. ಇದೀಗ ಮೆಗಾಸ್ಟಾರ್ ಚಿರಂಜೀವಿ(Megastar Chiranjeevi), ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ಗಾಡ್‍ಫಾದರ್(Godfather) ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.


    ಈ ಸಿನಿಮಾಕ್ಕೆ ನಿಮ್ಮ ಪ್ರವೇಶ ಎಲ್ಲರಿಗೂ ಶಕ್ತಿ ಮತ್ತು ಉತ್ಸಾಹವು ತಂದಿದೆ. ನಿಮ್ಮೊಂದಿಗೆ ಪರದೆಯನ್ನು ಹಂಚಿಕೊಳ್ಳುತ್ತಿರುವುದು ತುಂಬಾ ಸಂತೋಷವಾಗಿದೆ. ಈ ಸಿನಿಮಾದಲ್ಲಿ ನಿಮ್ಮ ಉಪಸ್ಥಿತಿ ಪ್ರೇಕ್ಷಕರಿಗೆ ಮ್ಯಾಜಿಕ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮೆಗಾಸ್ಟಾರ್ ಚಿರಂಜೀವಿ ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇಬ್ಬರು ಒಟ್ಟಿಗೆ ನಿಂತಿರುವ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಸ್ಟಾರ್ ನಟರನ್ನು ಒಟ್ಟಿಗೆ ಒಂದೇ ಪರೆದೆ ಮೇಲೆ ನೋಡಲು ಕಾತುರರಾಗಿರುವ ಅಭಿಮಾನಿಗಳು ಇಬ್ಬರಿಗೂ ಶುಭ ಹಾರೈಸಿ ಕಾಮೆಂಟ್ ಮಾಡುತ್ತಿದ್ದಾರೆ.  ಇದನ್ನೂ ಓದಿ : ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ

    ಮೆಗಾಸ್ಟಾರ್ ಚಿರಂಜೀವಿ ಅವರ ಮುಂಬರುವ ಚಿತ್ರ ಗಾಡ್‍ಫಾದರ್. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವು ಮಲಯಾಳಂನ ಸೂಪರ್ಹಿಟ್ ಚಿತ್ರ ‘ಲೂಸಿಫರ್’ ರಿಮೇಕ್ ಆಗಿದೆ. ಗಾಡ್ ಫಾದರ್ ಸಿನಿಮಾ ರಾಜಕೀಯ ಆಕ್ಷನ್ ಥ್ರಿಲ್ಲರ್ ಆಗಿದ್ದು, ಮೋಹನ್ ರಾಜ್ ನಿರ್ದೇಶಿಸಿದ್ದಾರೆ. ಚಿತ್ರವನ್ನು ಕೊನಿಡೆಲಾ ಪ್ರೊಡೆಕ್ಷನ್ ಕಂಪನಿ, ಜಯಂ ಕಂಪನಿ ಮತ್ತು ಎನ್‌ವಿಆರ್‌ ಸಿನಿಮಾ ಎಲ್ಎಲ್‌ಪಿ ಜಂಟಿಯಾಗಿ ನಿರ್ಮಿಸುತ್ತಿದೆ. ನೀರವ್ ಶಾ ಅವರ ಛಾಯಾಗ್ರಹಣ ಮತ್ತು ಎಸ್ ಥಮನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

    ಚಿರಂಜೀವಿ ಮತ್ತು ಸಲ್ಮಾನ್ ಖಾನ್ ಹೊರತುಪಡಿಸಿ, ಗಾಡ್‍ಫಾದರ್‌ನಲ್ಲಿ ನಯನತಾರಾ, ಸತ್ಯದೇವ್ ಕಾಂಚರಣ, ಹರೀಶ್ ಉತ್ತಮನ್, ಜಯಪ್ರಕಾಶ್ ಮತ್ತು ವಂಶಿ ಕೃಷ್ಣ ನಟಿಸಲಿದ್ದಾರೆ. ಮತ್ತೊಂದು ವಿಶೇಷ ಅಂದರೆ ಈ ಚಿತ್ರದಲ್ಲಿ ರಾಮ್ ಚರಣ್, ಅನುಷ್ಕಾ ಶೆಟ್ಟಿ ಮತ್ತು ಶ್ರುತಿ ಹಾಸನ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಬಹುದು ಎಂದು ವದಂತಿಗಳಿವೆ.

  • ನಿಜವಾಗಲೂ ಭಗವಂತ ಪುನೀತ್‍ಗೆ ಬಹಳ ದೊಡ್ಡ ಅನ್ಯಾಯ ಮಾಡಿದ್ದಾನೆ: ಚಿರಂಜೀವಿ

    ನಿಜವಾಗಲೂ ಭಗವಂತ ಪುನೀತ್‍ಗೆ ಬಹಳ ದೊಡ್ಡ ಅನ್ಯಾಯ ಮಾಡಿದ್ದಾನೆ: ಚಿರಂಜೀವಿ

    ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ಶುಕ್ರವಾರ ವಿಧಿವಶರಾಗಿದ್ದು, ಪುನೀತ್ ಅಂತಿಮ ದರ್ಶನ ಪಡೆಯಲು ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದರು.

    ಪುನೀತ್ ಅಂತಿಮ ದರ್ಶನ ಪಡೆದು ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್‍ಕುಮಾರ್ ಕುಟುಂಬಕ್ಕೂ ಹಾಗೂ ನಮ್ಮ ಕುಟುಂಬಕ್ಕೂ ಬಹಳ ಉತ್ತಮ ಬಾಂಧವ್ಯ ಮತ್ತು ಅನುಬಂಧವಿದೆ. ಅವರ ಮನೆಯಲ್ಲಿ ಯಾವುದೇ ಸಮಾರಂಭ ನಡೆದರೂ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್ ಕುಮಾರ್ ವೈಯಕ್ತಿಕವಾಗಿ ನಮ್ಮ ಮನೆಗೆ ಆಗಮಿಸಿ ಆಹ್ವಾನಿಸುತ್ತಿದ್ದರು. ಹಾಗೆಯೇ ನಮ್ಮ ಮನೆಯಲ್ಲಿ ಕೂಡ ಯಾವುದೇ ಕಾರ್ಯಕ್ರಮ ನಡೆದರೂ ಅವರು ಪಾಲ್ಗೊಳ್ಳುತ್ತಿದ್ದರು. ಆದರೆ ಇಂದು ಯಾರು ಅಂದುಕೊಳ್ಳದೇ ಇದ್ದ ನಮ್ಮ ಅಪ್ಪು, ನಮ್ಮ ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣ ಹೊಂದಿದ್ದಾರೆ. ಇದು ದೊಡ್ಡ ಅನ್ಯಾಯ. ಬಹಳ ಬೇಸರವಾಗುತ್ತಿದೆ ಎಂದರು. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

    ಪುನೀತ್ ಸಾವು ಜೀರ್ಣಿಸಿಕೊಳ್ಳಲು ಆಗದೇ ಇರುವಂತಹ ವಿಚಾರ. ನಿಜವಾಗಲೂ ಭಗವಂತ ಪುನೀತ್ ರಾಜ್‍ಕುಮಾರ್ ಅವರಿಗೆ ಬಹಳ ದೊಡ್ಡ ಅನ್ಯಾಯ ಮಾಡಿದ್ದಾನೆ. ಯಾರು ವಿಧಿಯನ್ನು ಬೇಡ ಎಂದು ತಡೆಯಲು ಸಾಧ್ಯವಾಗುವುದಿಲ್ಲ. ಆ ಭಗವಂತ ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ನೀಡಲಿ. ನಮ್ಮ ಪುನೀತ್ ರಾಜ್‍ಕುಮಾರ್ ಸ್ವರ್ಗದಲ್ಲಿ ಇರಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ಸಾವು ದೊಡ್ಡ ಅನ್ಯಾಯ: ಸೃಜನ್ ಲೋಕೇಶ್

  • ಚಿರಂಜೀವಿ ಸರ್ಜಾ ನಿಧನ – ಶೋಭಾ ಡೇ ಎಡವಟ್ಟು

    ಚಿರಂಜೀವಿ ಸರ್ಜಾ ನಿಧನ – ಶೋಭಾ ಡೇ ಎಡವಟ್ಟು

    ಬೆಂಗಳೂರು: ಖ್ಯಾತ ಲೇಖಕಿ, ಅಂಕಣಗಾರ್ತಿ ಶೋಭಾ ಡೇ ಚಿರಂಜೀವಿ ಸರ್ಜಾ ನಿಧನ ಸುದ್ದಿಯನ್ನು ಟ್ವೀಟ್ ಮಾಡುವ ಸಂದರ್ಭದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಸಂಜೆ 4 ಗಂಟೆ 8 ನಿಮಿಷಕ್ಕೆ ಮತ್ತೊಬ್ಬ ಶೈನಿಂಗ್ ಸ್ಟಾರ್ ಹೋಗಿದ್ದಾರೆ. ಎಂತ ದುರಂತ ಅಂತ್ಯ. ದು:ಖವನ್ನು ಬರಿಸುವ ಶಕ್ತಿ ಆ ಕುಟುಂಬ ಸದಸ್ಯರಿಗೆ ಸಿಗಲಿ ಎಂದು ಚಿರುಸರ್ಜಾ  ಟ್ಯಾಗ್ ಮಾಡಿ ಮೆಗಾ ಸ್ಟಾರ್ ಚಿರಂಜೀವಿ ಅವರ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

    ಈ ಟ್ವೀಟ್ ನೋಡಿದ ಕೂಡಲೇ ನೆಟ್ಟಿಗರು ಮೆಗಾಸ್ಟಾರ್ ಚಿರಂಜೀವಿ ಮೃತಪಟ್ಟಿಲ್ಲ. ಕನ್ನಡ ಚಿರಂಜೀವಿ ಸರ್ಜಾ ನಿಧನರಾಗಿದ್ದಾರೆ ಎಂದು ಹೇಳಿ ಶೋಭಾ ಡೇ ಅವರಿಗೆ ತಿಳಿಸಿದ್ದಾರೆ.

    ಎಡವಟ್ಟು ತಿಳಿಯುತ್ತಿದ್ದಂತೆ ಶೋಭಾ ಡೇ ತಾವು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಇದಾದ ಬಳಿಕ ಚಿರ ಸರ್ಜಾಗೆ ಸಂಬಂಧಿಸಿದ ಯಾವುದೇ ಟ್ವೀಟ್ ಅನ್ನು ಶೋಭಾ ಡೇ ಮಾಡಿಲ್ಲ.

    ಜನ ಸಾಮಾಜಿಕ ಜಾಲತಾಣದಲ್ಲಿ ಶೋಭಾ ಡೇ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಬಾಲಿವುಡ್ ಸ್ಟಾರ್ ಗಳ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ದಕ್ಷಿಣ ಭಾರತ ಸ್ಟಾರ್ ಗಳ ಬಗ್ಗೆ ನಿಮಗೆ ಎಷ್ಟು ಪರಿಚಯವಿದೆ ಎನ್ನುವುದು ನಿಮ್ಮ ಟ್ವೀಟ್ ನಿಂದಲೇ ತಿಳಿಯುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    https://twitter.com/nbollapr/status/1269654209063944195

    ಒಟ್ಟು 22 ಚಿತ್ರಗಳಲ್ಲಿ ನಟಿಸಿದ್ದ ಚಿರುಗೆ ಕೇವಲ 39 ವರ್ಷವಾಗಿತ್ತು. ಹಠಾತ್ ಆಗಿ ಇಷ್ಟು ಚಿಕ್ಕ ವಯಸ್ಸಿಗೇ ನಿಧನರಾಗಿರೋದು ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಚಿತ್ರರಂಗದ ಎಲ್ಲಾ ಹಿರಿಯ, ಕಿರಿಯ ಕಲಾವಿದರು ಆಸ್ಪತ್ರೆಗೆ ಭೇಟಿ ನೀಡಿ, ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದ್ರು. ಅಯ್ಯೋ.. ಇದೊಂದು ಅನ್ಯಾಯದ ಸಾವು, ಕ್ರೂರ ವಿಧಿಯಾಟ ಅಂತ ಹೃದಯ ಕಿತ್ತುಬರುವಂತೆ ಭಾವುಕರಾಗಿದ್ದಾರೆ. ಅದರಲ್ಲೂ 2 ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿ ಮೇಘನಾ ಇದೀಗ ಗರ್ಭಿಣಿಯಾಗಿದ್ದು ಎಲ್ಲರೂ ಮರುಕಪಟ್ಟಿದ್ದಾರೆ.

    https://twitter.com/Naveen_Guptaa/status/1269656507651469312

    ಶನಿವಾರ ರಾತ್ರಿಯೇ ಚಿರುಗೆ ಎದೆನೋವು ಕಾಣಿಸಿಕೊಂಡಿತ್ತು. ಇಂದು ಮಧ್ಯಾಹ್ನ ಕೂಡ ಮತ್ತೆ ಎದೆನೋವು ಕಾಣಿಸಿಕೊಂಡಿದೆ. ಬಳಿಕ ಜಯನಗರದ ಖಾಸಗಿ ಆಸ್ಪತ್ರೆ ಸಾಗರ್ ಅಪೋಲೋಗೆ ದಾಖಲಿಸಿದಾಗ ಅಲ್ಲಿ ಹೃದಯಾಘಾತವಾಗಿ ನಿಧನರಾಗಿದ್ದಾರೆ.

    ಜಯನಗರದ ಆಸ್ಪತ್ರೆಯಿಂದ ಬಸವನಗುಡಿಯ ಚಿರು ನಿವಾಸಕ್ಕೆ ಪಾರ್ಥಿವ ಶರೀರವನ್ನು 8.15ರ ಹೊತ್ತಿಗೆ ಶಿಫ್ಟ್ ಮಾಡಲಾಯಿತು. ಈಗ ಬಸವನಗುಡಿಯ ನಿವಾಸದ ಬಳಿ ಇಡಲಾಗಿದೆ.

     

  • My dear hero ಅಂದ್ರು ಮಿಸಸ್ ಪ್ರಿಯಾ

    My dear hero ಅಂದ್ರು ಮಿಸಸ್ ಪ್ರಿಯಾ

    ಬೆಂಗಳೂರು: ಇಂದು ರಾಜ್ಯಾದ್ಯಂತ ಬಹುನಿರೀಕ್ಷಿತ ಸಿನಿಮಾ ‘ದಿ ವಿಲನ್’ ಚಿತ್ರ ಬಿಡುಗಡೆಯಾಗಿದೆ. ಆದರೆ ಸಿನಿಮಾ ಬಿಡುಗಡೆಯ ಮೊದಲೇ ಈ ಬಗ್ಗೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.

    ಪ್ರಿಯಾ ಸುದೀಪ್ ಅವರು, ”ನಾನು ಇದುವೆರೆಗೂ ಈ ರೀತಿಯ ಕ್ರೇಜ್ ಅನ್ನು ಈ ಹಿಂದೆ ನೋಡಿಯೇ ಇರಲಿಲ್ಲ. ರಾಜ್ಯಾದ್ಯಂತ ಇದು ಹಬ್ಬದ ರೀತಿ ಆಗಿದೆ. ಎನರ್ಜಿಟಿಕ್ ಶಿವಣ್ಣ, ನಿರ್ದೇಶಕ ಪ್ರೇಮ್ ಹಾಗೂ ನನ್ನ ಪ್ರೀತಿಯ ಹೀರೋ ಸುದೀಪ್ ಸೇರಿದಂತೆ ಇಡೀ ‘ದಿ ವಿಲನ್’ ಚಿತ್ರತಂಡಕ್ಕೆ ನನ್ನ ಶುಭಾಶಯಗಳು”  ಎಂದು ಬರೆದು  ಟ್ವೀಟ್ ಮಾಡಿದ್ದಾರೆ.

    ಇಂದು ಹಲವು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಿ ಭರ್ಜರಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಇತ್ತೀಚೆಗೆ ಸುದೀಪ್ ಕುಟುಂಬ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಭೇಟಿಯಾಗಿದ್ದರು. ಭೇಟಿಯಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ನಟ ಸುದೀಪ್ ‘ಅವುಕು ರಾಜಾ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮುಖ್ಯ ಪಾತ್ರ ಪೋಷಿಸುತ್ತಿರುವ ಸುದೀಪ್ ಅವರ ಲುಕ್ ಈಗಾಗಲೇ ಬಹಿರಂಗವಾಗಿದೆ.

    ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಶೂಟಿಂಗ್ ನ ಬಿಡುವಿನ ವೇಳೆ ಚಿರಂಜೀವಿ ಜೊತೆಗೆ ಸುದೀಪ್ ಕುಟುಂಬ ಸಮಯ ಕಳೆದಿದೆ. ಚಿರಂಜೀವಿ ಜೊತೆಗೆ ಸುದೀಪ್ ಪುತ್ರಿ ಸಾನ್ವಿ ಕೂಡ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

    ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಚಿರಂಜೀವಿ, ಸುದೀಪ್ ಜೊತೆಗೆ ಜಗಪತಿ ಬಾಬು, ವಿಜಯ್ ಸೇತುಪತಿ, ನಯನತಾರಾ, ತಮನ್ನಾ, ಪೂನಂ ಕೌರ್ ನಟಿಸಿದ್ದಾರೆ. ವಿಶೇಷ ಪಾತ್ರವೊಂದರಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಬಣ್ಣ ಹಚ್ಚಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv