Tag: Megastar Chiranjeevi

  • ಕ್ಯಾನ್ಸರ್ ಸುದ್ದಿ ಹಬ್ಬಿದ್ದಕ್ಕೆ, ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ ಮೆಗಾಸ್ಟಾರ್ ಚಿರಂಜೀವಿ

    ಕ್ಯಾನ್ಸರ್ ಸುದ್ದಿ ಹಬ್ಬಿದ್ದಕ್ಕೆ, ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ ಮೆಗಾಸ್ಟಾರ್ ಚಿರಂಜೀವಿ

    ತೆಲುಗಿನ ನಟ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರನ್ನ ಪೂಜಿಸುವ, ಆರಾಧಿಸುವ ಅಪಾರ ಅಭಿಮಾನಿಗಳಿದ್ದಾರೆ. ಇತ್ತೀಚಿಗೆ ಚಿರಂಜೀವಿ ಅವರಿಗೆ ಕ್ಯಾನ್ಸರ್ ಸುದ್ದಿ ವೈರಲ್ ಆಗಿದ್ದರ ಬಗ್ಗೆ ನಟ ರಿಯಾಕ್ಟ್ ಮಾಡಿದ್ದಾರೆ. ಇದೀಗ ಅವರ ಆರೋಗ್ಯ ಸ್ಥಿತಿ ಹೇಗಿದೆ.? ಅಷ್ಟಕ್ಕೂ ಆಗಿದ್ದೇನು.? ಎಂಬ ಮಾಹಿತಿ ಇಲ್ಲಿದೆ. ಇದನ್ನೂ ಓದಿ:ಅಭಿಷೇಕ್ ಅಂಬರೀಶ್ ಮದುವೆ : ಭಾಗಿಯಾಗಲಿದೆ ತಾರಾ ದಂಡು

    ನಟ ಚಿರಂಜೀವಿ ಕೊನಿಡೆಲಾ ಅವರು ಅನಾರೋಗ್ಯದ (Health) ಅಪ್‌ಡೇಟ್ ಕೇಳಿ, ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇದೀಗ ನಟ ತಮ್ಮ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ನಾನು ಕ್ಯಾನ್ಸರ್ ಸೆಂಟರ್ ಉದ್ಘಾಟನೆ ವೇಳೆ ಕ್ಯಾನ್ಸರ್ ಜಾಗೃತಿ ಬಗ್ಗೆ ಮಾತನಾಡಿದ್ದೆ. ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸಿದರೆ ಕ್ಯಾನ್ಸರ್ ತಡೆಗಟ್ಟಬಹುದು ಅಂತ ಹೇಳಿದ್ದೆ. ನಾನೂ ಕೂಡ ಎಚ್ಚರಿಕೆ ವಹಿಸಿ, ಪರೀಕ್ಷೆ ಮಾಡಿಸಿದ್ದೆ. ನನ್ನಲ್ಲಿ ಕ್ಯಾನ್ಸರಸ್ ಅಲ್ಲದ ಊತ ಕಾಣಿಸಿತ್ತು. ಬಳಿಕ ಅದನ್ನು ತೆಗೆಯಲಾಯಿತು. ಆ ಪರೀಕ್ಷೆ ಮಾಡಿಸಿಕೊಳ್ಳದೇ ಇದ್ದಿದ್ದರೆ ಅದು ಕ್ಯಾನ್ಸರ್ ಆಗಿ ಬದಲಾಗುವ ಸಾಧ್ಯತೆ ಇತ್ತು. ಹಾಗಾಗಿಯೇ ಎಲ್ಲರೂ ಮುಂಜಾಗೃತೆ ವಹಿಸಿ, ಪರೀಕ್ಷೆ ಮಾಡಿಸಿಕೊಳ್ಳಬೇಕು ಅಂತ ಮಾತ್ರ ನಾನು ಹೇಳಿದ್ದೆ ಎಂದು ನಟ ಟ್ವೀಟ್ ಮಾಡಿದ್ದಾರೆ.

    ಕೆಲವರು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನನಗೆ ಕ್ಯಾನ್ಸರ್ ಆಗಿದೆ ಮತ್ತು ಚಿಕಿತ್ಸೆಯಿಂದ ಬದುಕಿದೆ ಅಂತ ಸುದ್ದಿ ಮಾಡಿದ್ದಾರೆ. ಇದರಿಂದ ಅನಗತ್ಯವಾಗಿ ಗೊಂದಲ ಶುರುವಾಗಿದೆ. ಅನೇಕ ಹಿತೈಷಿಗಳು ನನಗೆ ಸಂದೇಶ ಕಳಿಸಲು ಆರಂಭಿಸಿದ್ದಾರೆ. ಅವರಿಗೆಲ್ಲ ಇದು ನನ್ನ ಸ್ಪಷ್ಟನೆ. ವಿಷಯ ಅರ್ಥವಾಗದೇ ಅಸಂಬದ್ಧಗಳನ್ನೆಲ್ಲ ಬರೆಯಬೇಡಿ ಅಂತ ಮಾಧ್ಯಮದವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಇದರಿಂದಾಗಿ ಅನೇಕರಿಗೆ ಭಯ ಮತ್ತು ನೋವು ಆಗುತ್ತದೆ ಎಂದು ಚಿರಂಜೀವಿ ಅವರು ಸ್ಪಷ್ಟನೆ ನೀಡಿದ್ದಾರೆ.

    ನೆಚ್ಚಿನ ನಟನಿಗೆ ಕ್ಯಾನ್ಸರ್ ಎಂಬ ಸುದ್ದಿ ಕೇಳಿ ಆತಂಕಕ್ಕೆ ಒಳಗಾಗಿದ್ದ ಅಭಿಮಾನಿಗಳಿಗೆ ಇದೀಗ ಚಿರಂಜೀವಿ ನೀಡಿರುವ ಸ್ಪಷ್ಟನೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಚಿರಂಜೀವಿ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಖುಷಿಪಟ್ಟಿದ್ದಾರೆ.

  • ‘ಹಾಸಿಗೆಯಲ್ಲಿ ರೋಷನ್ ಇರಬೇಕು’ ಡೈಲಾಗ್ ಬಿಟ್ಟ ನಿಹಾರಿಕಾ ವಿರುದ್ಧ ಕಿಡಿಕಾರಿದ ನೆಟ್ಟಿಗರು

    ‘ಹಾಸಿಗೆಯಲ್ಲಿ ರೋಷನ್ ಇರಬೇಕು’ ಡೈಲಾಗ್ ಬಿಟ್ಟ ನಿಹಾರಿಕಾ ವಿರುದ್ಧ ಕಿಡಿಕಾರಿದ ನೆಟ್ಟಿಗರು

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆಮಗಳು ನಿಹಾರಿಕಾ Niharika) ಡಿವೋರ್ಸ್ (Divorce) ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ಚೈತನ್ಯ ಜಿವಿ ಜೊತೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ವೆಬ್ ಸಿರೀಸ್‌ನಲ್ಲಿ ನಟಿಸುವ ಮೂಲಕ ನಟಿ ಸುದ್ದಿಯಲ್ಲಿದ್ದಾರೆ. ‘ಡೆಡ್ ಫಿಕ್ಸೆಲ್’ (Dead Pixel) ಟ್ರೈಲರ್‌ನಲ್ಲಿ ಹೇಳಿರುವ ಹೇಳಿಕೆ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಮಕ್ಕಳಿಗೆ ಪೋಷಕರ ಪ್ರೀತಿ ಸಿಗಬೇಕು ಎಂದು ಶ್ರೀಜಾಗೆ ಕಲ್ಯಾಣ್ ದೇವ್ ಟಾಂಗ್

    ನಿಹಾರಿಕಾ- ಚೈತನ್ಯ (Chaitanya) ಇಬ್ಬರು ಪರಸ್ಪರ ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಆ ದಾಂಪತ್ಯ ಕೊನೆಯವರೆಗೂ ಬಾಳಿಕೆಗೆ ಬರಲೇ ಇಲ್ಲ. ಹಲವು ವರ್ಷಗಳ ಪ್ರೀತಿಗೆ ಡಿವೋರ್ಸ್ ಮೂಲಕ ಅಂತ್ಯ ಹಾಡಿದ್ದಾರೆ ಎಂದು ಹೇಳಲಾಗುತ್ತಿದೆ. ವೈಯಕ್ತಿಕ ಜೀವನ ಸರಿ ಇಲ್ಲದೇ ಇರುವ ಕಾರಣ ಸಿನಿಮಾ- ನಿರ್ಮಾಣ ಸಂಸ್ಥೆ ಅಂತಾ ನಿಹಾರಿಕಾ ವೃತ್ತಿ ಬದುಕಿನತ್ತ ಬ್ಯುಸಿಯಾಗಿದ್ದಾರೆ.

     

    View this post on Instagram

     

    A post shared by Niharika Konidela (@niharikakonidela)

    ಡಿವೋರ್ಸ್ ವಿಚಾರ ಸಖತ್ ಸದ್ದು ಮಾಡ್ತಿದ್ದರು ಕೂಡ ಯಾವುದೇ ಸ್ಪಷ್ಟನೆ ನೀಡದೇ ನಿಹಾರಿಕಾ ಮತ್ತು ಮೆಗಾ ಫ್ಯಾಮಿಲಿ (Mega Family) ಮೌನವಾಗಿದ್ದಾರೆ. ಇದೀಗ ಡೆಡ್ ಫಿಕ್ಸೆಲ್ ಸಿರೀಸ್‌ನಲ್ಲಿ ಆನ್‌ಲೈನ್ ಗೇಮ್ ತೋರಿಸಲಾಗಿದೆ. ಆನ್‌ಲೈನ್ ಗೇಮ್ ಯಾವ ಹಂತಕ್ಕೆ ತಲುಪಿಸುತ್ತದೆ ಎಂದು ಟ್ರೈಲರ್‌ ಮೂಲಕ ಝಲಕ್ ತೋರಿಸಲಾಗಿದೆ. ಈ ಟ್ರೈಲರ್‌ನಲ್ಲಿ ನಿಹಾರಿಕಾ ಡೈಲಾಗ್ ಸದ್ದು ಮಾಡ್ತಿದೆ. ರೋಷನ್ ಬೆಡ್ ಮೇಲೆ, ಭಾರ್ಗವ್ ಮನಸ್ಸಿನಲ್ಲಿ ಎಂಬರ್ಥದಲ್ಲಿ ನಿಹಾರಿಕಾ ಡೈಲಾಗ್ ಹೊಡೆದಿದ್ದಾರೆ. ಈ ಟ್ರೈಲರ್‌ ಇದೀಗ ಪ್ರೇಕಕ್ಷಕ ಕುತೂಹಲಕ್ಕೆ ಕಾರಣವಾಗಿದೆ. ಹಾಗೆಯೇ ಅಭಿಮಾನಿಗಳು ಟ್ರೈಲರ್‌ ನೋಡಿ ತೀವ್ರ ವಿರೋಧ ಕೂಡ ವ್ಯಕ್ತಪಡಿಸಿದ್ದಾರೆ.

    ಓಕಾ ಮನಸ್ಸು ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಮೆಗಾಸ್ಟಾರ್ ಮನೆಮಗಳು ನಿಹಾರಿಕಾ, ಮದುವೆ ನಂತರ ನಟನೆಯಿಂದ ದೂರ ಸರಿದ್ದರು. ಇದೀಗ ಮತ್ತೆ ನಟನೆಯತ್ತ ನಿಹಾರಿಕಾ ಮುಖ ಮಾಡಿದ್ದಾರೆ. ‘ಡೆಡ್ ಫಿಕ್ಸೆಲ್’ ವೆಬ್ ಸಿರೀಸ್‌ನಿಂದ ಸದ್ದು ಮಾಡ್ತಿದ್ದಾರೆ.

  • ಮಕ್ಕಳಿಗೆ ಪೋಷಕರ ಪ್ರೀತಿ ಸಿಗಬೇಕು ಎಂದು ಶ್ರೀಜಾಗೆ ಕಲ್ಯಾಣ್ ದೇವ್ ಟಾಂಗ್

    ಮಕ್ಕಳಿಗೆ ಪೋಷಕರ ಪ್ರೀತಿ ಸಿಗಬೇಕು ಎಂದು ಶ್ರೀಜಾಗೆ ಕಲ್ಯಾಣ್ ದೇವ್ ಟಾಂಗ್

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಪುತ್ರಿ ಶ್ರೀಜಾ (Sreeja) ದಾಂಪತ್ಯದಲ್ಲಿ ಬಿರುಕಾಗಿರುವ ವಿಚಾರ ಸಾಕಷ್ಟು ಸಮಯದಿಂದ ಚರ್ಚೆಗೆ ಗ್ರಾಸವಾಗಿದೆ. ಆದರೆ ಡಿವೋರ್ಸ್ ಬಗ್ಗೆ ಯಾವುದೇ ಸ್ಪಷ್ಟನೆಯನ್ನ ಇದುವರೆಗೂ ಈ ಜೋಡಿ ನೀಡಿಲ್ಲ. ಹೀಗಿರುವಾಗ ಶ್ರೀಜಾ ಪತಿ ಕಲ್ಯಾಣ್ ದೇವ್ (Kalyan Dev) ಮಾಡಿರುವ ಪೋಸ್ಟ್ ವೈರಲ್ ಆಗಿದೆ.

    ಮೆಗಾ ಫ್ಯಾಮಿಲಿಯಲ್ಲಿ ರಾಮ್ ಚರಣ್ (Ram Charan) ಸಕ್ಸಸ್ ದಾರಿಯಲ್ಲಿ ಸುದ್ದಿ ಮಾಡ್ತಿದ್ರೆ ಶ್ರೀಜಾ ಡಿವೋರ್ಸ್ ವಿಚಾರವಾಗಿ ಸಂಚಲನ ಮೂಡಿಸಿದ್ದಾರೆ. ಶ್ರೀಜಾಗೆ ಈ ಹಿಂದೆಯೇ ಒಂದು ಮದುವೆಯಾಗಿತ್ತು. ತಂದೆ ಚಿರಂಜೀವಿ (Chiranjeevi) ಅವರನ್ನೇ ಎದುರು ಹಾಕಿಕೊಂಡು ಪ್ರೀತಿಸಿದ ಹುಡುಗನ ಮದುವೆಯಾಗಿದ್ದರು. ಆದರೆ ಆ ಬದುಕು ಹೆಚ್ಚು ದಿನ ಕೈಹಿಡಿಯಲಿಲ್ಲ. ಮೊದಲ ಪತಿಗೆ ಡಿವೋರ್ಸ್ ಕೊಟ್ಟು, ಕುಟುಂಬದವರ ಸಮ್ಮತಿಯಂತೆ ಕಲ್ಯಾಣ್ ದೇವ್ ಜೊತೆ 2ನೇ ಮದುವೆಯಾಗಿದ್ದರು. ಇದೀಗ ಕಲ್ಯಾಣ್ ದೇವ್ (Kalyan Dev) ಜೊತೆಗಿನ ದಾಂಪತ್ಯ ಸರಿಯಿಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ನನ್ನ ಪಯಣ ಮುಗಿಯಿತು : ನಟಿ ಮೇಘಾ ಶೆಟ್ಟಿ ಭಾವುಕ

    ಶ್ರೀಜಾ- ಕಲ್ಯಾಣ್ ಇಬ್ಬರೂ ದೂರಾಗುತ್ತಾರೆ ಎಂದು ಸುದ್ದಿ ಆಗುತ್ತಿದ್ದರೂ ಎರಡು ಫ್ಯಾಮಿಲಿಯಿಂದ ಸ್ಪಷ್ಟನೆ ಸಿಕ್ಕಿಲ್ಲ. ಇನ್ನು ಶ್ರೀಜಾ ತವರು ಮನೆಯಲ್ಲಿ ಇದ್ದಾರೆ. ಇನ್ನು ಮೆಗಾ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಕಲ್ಯಾಣ್ ದೇವ್ ಕಾಣಿಸಿಕೊಳ್ಳುತ್ತಿಲ್ಲ. ಇದೀಗ ಕಲ್ಯಾಣ್ ಇನ್‌ಸ್ಟಾ ಸ್ಟೋರಿ ಮತ್ತೊಮ್ಮೆ ಡಿವೋರ್ಸ್ ಬಗ್ಗೆ ಅನುಮಾನ ಹುಟ್ಟುಹಾಕಿದೆ.

    ಮಕ್ಕಳು ಪೋಷಕರನ್ನು ನೋಡುತ್ತಿದ್ದಂತೆ ಎಕ್ಸೈಟ್ ಆಗುವ ಫೋಟೊವನ್ನು ಶೇರ್ ಮಾಡಿ ಕಲ್ಯಾಣ್ ದೇವ್ “ಮಕ್ಕಳಿಗೆ ತಂದೆ ತಾಯಿ ಪ್ರೀತಿ, ಬೆಂಬಲ ಬಹಳ ಮುಖ್ಯ, ಮಿಸ್ಸಿಂಗ್ ನಿವಿಷ್ಕ, ನಿವಿತ್ರಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪತ್ನಿಗೆ ಕಲ್ಯಾಣ್ ಟಾಂಗ್ ಕೊಟ್ಟಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಕಲ್ಯಾಣ್ ದೇವ್ ಹಾಗೂ ಶ್ರೀಜಾ ದೂರ ದೂರ ಇರುವುದು ನಿಜ. ಶೀಘ್ರದಲ್ಲೇ ಡಿವೋರ್ಸ್ ಕೂಡ ತೆಗೆದುಕೊಳ್ಳುತ್ತಾರೆ ಎನ್ನುತ್ತಿದ್ದಾರೆ. ಜೊತೆಗೆ ಗಂಡ ಹೆಂಡತಿ ದೂರಾದರೂ ಮಕ್ಕಳಿಗೆ ಇಬ್ಬರ ಪ್ರೀತಿ ಸಿಗಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ಚಿರು ಪುತ್ರಿ ಶ್ರೀಜಾ ಪತಿಯಿಂದ ಮಕ್ಕಳನ್ನು ದೂರ ಮಾಡಿದ್ದಾರೆ ಎನ್ನುವ ಅರ್ಥದಲ್ಲಿ ಈಗ ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ. ಇದಕ್ಕೆಲ್ಲಾ ದಂಪತಿ ಸ್ಪಷ್ಟನೆ ನೀಡಬೇಕಿದೆ. ಇನ್ನು ಶ್ರೀಜಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಹೆಸರಿನ ಜೊತೆಗಿದ್ದ ಕಲ್ಯಾಣ್ ದೇವ್ ಹೆಸರು ಕೈಬಿಟ್ಟಿದ್ದಾರೆ. ಇಬ್ಬರು ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

  • ಡಿವೋರ್ಸ್ ಸುದ್ದಿ ಬೆನ್ನಲ್ಲೇ ‘ಪುಷ್ಪ 2’ ಸಿನಿಮಾದಲ್ಲಿ ನಿಹಾರಿಕಾ ಕೊನಿಡೆಲಾ

    ಡಿವೋರ್ಸ್ ಸುದ್ದಿ ಬೆನ್ನಲ್ಲೇ ‘ಪುಷ್ಪ 2’ ಸಿನಿಮಾದಲ್ಲಿ ನಿಹಾರಿಕಾ ಕೊನಿಡೆಲಾ

    ಭಾರತೀಯ ಚಿತ್ರರಂಗದಲ್ಲಿ ಹೊಸ ಹೈಪ್ ಕ್ರಿಯೇಟ್ ಮಾಡಿದ ‘ಪುಷ್ಪ’ (Pushpa) ಸಿನಿಮಾ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು. ಹಾಗಾಗಿ ಸಹಜವಾಗಿ ಪುಷ್ಪ 2 (Pushpa) ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಅಲ್ಲು ಅರ್ಜುನ್ (Allu Arjun) , ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ನಟನೆಯ ಈ ಸಿನಿಮಾಗೆ ಹೊಸ ನಟಿಯ ಆಗಮನವಾಗಿದೆ. ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆ ಮಗಳು ‘ಪುಷ್ಪ’ 2 ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ.

    ಶ್ರೀಜಾ ಬಳಿಕ ಮೆಗಾಸ್ಟಾರ್ ಚಿರಂಜೀವಿ ಅವರ ಅಣ್ಣನ ಮಗಳು ನಾಗಬಾಬು (Nagababu) ಪುತ್ರಿ ನಿಹಾರಿಕಾ ಕೊನಿಡೆಲಾ ದಾಂಪತ್ಯದಲ್ಲಿ ಬಿರುಕಾಗಿದೆ. ಉದ್ಯಮಿ ಚೈತನ್ಯ ಜೊತೆ ವೈವಾಹಿಕ ಜೀವನಕ್ಕೆ (Divorce) ಬ್ರೇಕ್ ಬಿದ್ದ ಮೇಲೆ ಸಿನಿಮಾಗಳತ್ತ ಮುಖ ಮಾಡಿರುವ ನಟಿ ನಿಹಾರಿಕಾ ಅವರು ಅಲ್ಲು ಅರ್ಜುನ್ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಭಜರಂಗಿ’ ಹೆಸರಿನಲ್ಲಿ ನಟಿಸಿ, ಬಜರಂಗದಳದ ನಿಷೇಧದ ಬಗ್ಗೆ ನಿಮ್ಮ ನಡೆಯೇನು? ಶಿವಣ್ಣಗೆ ಸಂಬರ್ಗಿ ಕೌಂಟರ್

    ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರು ಮುಖ್ಯವಾದೊಂದು ಪಾತ್ರ ಮಾಡುತ್ತಿದ್ದಾರೆ. ಅವರ ಪತ್ನಿಯ ಪಾತ್ರಕ್ಕೆ ಸಾಯಿ ಪಲ್ಲವಿ ಬಣ್ಣ ಹಚ್ಚುತ್ತಾರೆ ಎಂದು ಈ ಮೊದಲು ಗಾಸಿಪ್ ಹಬ್ಬಿತ್ತು. ಆದರೆ ಆ ಪಾತ್ರ ಮಾಡಲು ಸಾಯಿ ಪಲ್ಲವಿ ಅವರು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಈಗ ಅದೇ ಪಾತ್ರವನ್ನು ನಿಹಾರಿಕಾ ಕೊನಿಡೆಲಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

    ಟಾಲಿವುಡ್‌ನಲ್ಲಿ ನಟಿ, ನಿರ್ಮಾಪಕಿಯಾಗಿ ನಿಹಾರಿಕಾ ಕೊನಿಡೆಲಾ (Niharika Konidela) ಅವರು ತೊಡಗಿಕೊಂಡಿದ್ದಾರೆ. ‘ಒಕ ಮನಸು’, ‘ಸೂರ್ಯಕಾಂತಂ’, ‘ಹ್ಯಾಪಿ ವೆಡ್ಡಿಂಗ್’ ಮುಂತಾದ ಸಿನಿಮಾಗಳಲ್ಲಿ ಅವರ ನಟಿಸಿದ್ದಾರೆ. 2015ರಲ್ಲಿ ಅವರು ‘ಪಿಂಕ್ ಎಲಿಫೆಂಟ್ ಪಿಕ್ಚರ್ಸ್’ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದರು. ಇದರ ಹೊಸ ಕಚೇರಿಯನ್ನು ಅವರು ಇತ್ತೀಚೆಗೆ ತೆರೆದಿದ್ದಾರೆ. ನಟಿಯಾಗಿ ಅವರು ಕಮ್‌ಬ್ಯಾಕ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.

  • ಬದುಕಲು ಬಿಡಿ: ಹೊಸ ಪೋಸ್ಟ್ ಮೂಲಕ ಡಿವೋರ್ಸ್ ಸುಳಿವು ನೀಡಿದ್ರಾ ಮೆಗಾ ಕುಟುಂಬದ ಪುತ್ರಿ?

    ಬದುಕಲು ಬಿಡಿ: ಹೊಸ ಪೋಸ್ಟ್ ಮೂಲಕ ಡಿವೋರ್ಸ್ ಸುಳಿವು ನೀಡಿದ್ರಾ ಮೆಗಾ ಕುಟುಂಬದ ಪುತ್ರಿ?

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆ ಮಗಳು ನಿಹಾರಿಕಾ ಕೊನಿಡೆಲಾ (Niharika Konidela)  ಅವರ ವೈಯಕ್ತಿಕ ಜೀವನ ಸುದ್ದಿಯಲ್ಲಿದೆ. ನಟ ಚಿರಂಜೀವಿ ಮಗಳು ಶ್ರೀಜಾ ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದ ಬಳಿಕ ನಿಹಾರಿಕಾ ವೈವಾಹಿಕ ಬದುಕು ಕೂಡ ಏರುಪೇರಾಗಿದೆ. ಡಿವೋರ್ಸ್ (Divorce)  ವಿಚಾರಕ್ಕೆ ಸಂಬಂಧಿಸಿದಂತೆ ನಟಿ ನಿಹಾರಿಕಾ ‘ಬದುಕಲು ಬಿಡಿ’ ಎಂದು ಇದೀಗ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ ಇದೀಗ ಹಲವರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗ್ಬೇಕು – ದುನಿಯಾ ವಿಜಯ್

    ನಟಿ ನಿಹಾರಿಕಾ- ಉದ್ಯಮಿ ಚೈತನ್ಯ (Chaitanya) ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಹಲವು ವರ್ಷಗಳ ಪ್ರೀತಿಗೆ ಗುರುಹಿರಿಯರ ಸಮ್ಮತಿ ಪಡೆದು 2020ರಲ್ಲಿ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೆ ಇದೀಗ ಕೆಲ ತಿಂಗಳಿಂದ ಡಿವೋರ್ಸ್ ವದಂತಿ ಕೇಳಿ ಬರುತ್ತಿದೆ. ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೇ ಇದ್ದರೂ ಈಗ ಹೊಸ ಪೋಸ್ಟ್‌ನಿಂದ ನಟಿ ಸದ್ದು ಮಾಡ್ತಿದ್ದಾರೆ.

    ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋ ನಿಹಾರಿಕಾ ಶೇರ್ ಮಾಡಿ ವೀಡಿಯೋದಲ್ಲಿ ಒಂದಷ್ಟು ಅಡಿಬರಹ ನೀಡಿದ್ದಾರೆ. ನಿಮ್ಮ ಎನರ್ಜಿ ಸೇವ್ ಮಾಡಿ, ನೀವು ಸಮರ್ಥರು, ನಿಮ್ಮ ಬಗ್ಗೆ ನೀವು ದಯೆ ತೋರಿ, ಯೋಚಿಸುವುದಕ್ಕಿಂತ ನೀವು ಬಲಶಾಲಿ, ನಿಮ್ಮ ನಿದ್ರೆಗೆ ಆದ್ಯತೆ ನೀಡಿ, ಹೆಚ್ಚು ನೀರನ್ನು ಕುಡಿಯಿರಿ, ಬದುಕಿ ಮತ್ತು ಇತರರನ್ನು ಬದುಕಲು ಬಿಡಿ ಎನ್ನುವ ವಿಚಾರವನ್ನ ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Niharika Konidela (@niharikakonidela)

    ನಿಹಾರಿಕಾ- ಚೈತನ್ಯ ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಮೆಗಾ ಫ್ಯಾಮಿಲಿಯ (Mega Family) ಎಲ್ಲರನ್ನೂ ಫಾಲೋ ಮಾಡುತ್ತಿರುವ ಚೈತನ್ಯ, ನಿಹಾರಿಕಾ ಅವರನ್ನು ಮಾತ್ರ ಅನ್‌ಫಾಲೋ ಮಾಡಿದ್ದರು. ಮದುವೆಯ ಫೋಟೋಸ್‌ನ ಇಬ್ಬರೂ ಡಿಲೀಟ್ ಮಾಡಿದ್ದಾರೆ. ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.

  • ಮೆಗಾಸ್ಟಾರ್ ಚಿರಂಜೀವಿ ಮಗಳ ದಾಂಪತ್ಯದಲ್ಲಿ ಬಿರುಕು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

    ಮೆಗಾಸ್ಟಾರ್ ಚಿರಂಜೀವಿ ಮಗಳ ದಾಂಪತ್ಯದಲ್ಲಿ ಬಿರುಕು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮಗಳ ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ. ಚಿರಂಜೀವಿ ಸಹೋದರ ನಾಗೇಂದ್ರ ಬಾಬು (Nagendra Babu) ಮಗಳು ನಿಹಾರಿಕಾ (Niharika) ಡಿವೋರ್ಸ್ ಅಂತೆ ಕಂತೆ ಸುದ್ದಿಗೆ ಇದೀಗ ಸಾಕ್ಷಿ ಸಿಕ್ಕಿದೆ. ನಿಹಾರಿಕಾ ವೈವಾಹಿಕ ಬದುಕಿನಲ್ಲಿ ಏರುಪೇರಾಗಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಈ ವಿಚಾರ ನಿಜ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ.

    ನಿಹಾರಿಕಾ ಕೊನಿಡೆಲಾ ಅವರು ಚೈತನ್ಯ ಅವರನ್ನ 2020ರಲ್ಲಿ ಪ್ರೀತಿಸಿ, ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಈಗ ಮದುವೆಯಾಗಿ ಎರಡೇ ವರ್ಷಕ್ಕೆ ದಾಂಪತ್ಯ ಬದುಕಿಗೆ ಅಂತ್ಯ ಹಾಡಲಿದ್ದಾರೆ. ಡಿವೋರ್ಸ್ ಬಗ್ಗೆ ಮೌನವಾಗಿರುವ ಈ ಜೋಡಿ, ದಾಂಪತ್ಯದಲ್ಲಿ ಬಿರುಕಾಗಿರುವ ಬಗ್ಗೆ ಸುಳಿವು ಸಿಕ್ಕಿದೆ. ಇದನ್ನೂ ಓದಿ:‘ರಾಮನ ಅವತಾರ’ ಟೀಸರ್ ರಿಲೀಸ್ : ರಿಷಿ ಸಖತ್ ಕಾಮಿಡಿ ಮಾಡ್ತಾರಪ್ಪ

    ನಟಿ ನಿಹಾರಿಕಾ ಮತ್ತು ಚೈತನ್ಯ ನಡುವೆ ವೈಮನಸ್ಸು ಉಂಟಾಗಿದೆ ಎಂಬುದಕ್ಕೆ ಒಂದಷ್ಟು ದಿನಗಳ ಹಿಂದೆಯೇ ಸಾಕ್ಷಿ ಸಿಕ್ಕಿತ್ತು. ವೆಂಕಟ ಚೈತನ್ಯ ಅವರು ನಿಹಾರಿಕಾರನ್ನು ಅನ್‌ಫಾಲೋ ಮಾಡಿದ್ದರು. ಮದುವೆ – ಎಂಗೇಜ್‌ಮೆಂಟ್ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಆದರೂ ಕೂಡ ನಿಹಾರಿಕಾ ಅವರು ಸೈಲೆಂಟ್ ಆಗಿದ್ದರು. ಆದರೆ ಈಗ ಅವರು ಕೂಡ ಗಂಡನನ್ನು ಅನ್‌ಫಾಲೋ ಮಾಡಿ, ಫೋಟೋಸ್ ತೆಗೆದುಹಾಕಿರುವುದು ಡಿವೋರ್ಸ್ ಅನುಮಾನಕ್ಕೆ ಪುಷ್ಠಿ ನೀಡಿದೆ.

    ಮೆಗಾ ಸ್ಟಾರ್ ಚಿರಂಜೀವಿ ಅವರದ್ದು ಪ್ರತಿಷ್ಠಿತ ಕುಟುಂಬ. ಈ ಫ್ಯಾಮಿಲಿಯ ಕೆಲವು ಹಿರಿಯರ ಸಮ್ಮುಖದಲ್ಲಿ ಸಂಧಾನ ಮಾತುಕಥೆ ಕೂಡ ನಡೆಯುತ್ತಿದ್ದು, ನಿಹಾರಿಕಾ- ಚೈತನ್ಯ ಮತ್ತೆ ಒಂದಾಗುವ ಸೂಚನೆ ಇದೆ ಎನ್ನಲಾಗಿತ್ತು. ಆದರೆ ಸಂಧಾನ ಸಫಲ ಆದಂತೆ ಕಾಣುತ್ತಿಲ್ಲ. ನಿಹಾರಿಕಾ ಕೊನಿಡೆಲಾ ಅವರು ಕೊನೆಗೂ ಗಟ್ಟಿ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿದೆ. ಈ ಬಗ್ಗೆ ಅವರು ಅಧಿಕೃತವಾಗಿ ಘೋಷಿಸುವುದೊಂದೇ ಬಾಕಿ ಇದೆ.

    ನಿಹಾರಿಕಾ ಕೂಡ ನಿರ್ಮಾಪಕಿಯಾಗಿ ಆಗಿ ಕಂಬ್ಯಾಕ್ ಆಗಿದ್ದಾರೆ. ನಿರ್ಮಾಣದ ಜೊತೆ ನಟನೆಯ ಕಡೆಗೂ ಒಲವು ತೋರಿಸ್ತಿದ್ದಾರೆ ಎನ್ನಲಾಗುತ್ತಿದೆ. ಹೊಸ ಆಫೀಸ್ ಕೂಡ ನಿಹಾರಕಾ ಓಪನ್ ಮಾಡಿದ್ದಾರೆ. ಸಿನಿಮಾ ಕಾರ್ಯಕ್ಕೆ ಸಂಬಂಧಿಸಿದ ಕೆಲಸಗಳಿಗಾಗಿ ನಟಿ ಹೊಸ ಹೆಜ್ಜೆ ಇಟ್ಟಿದ್ದಾರೆ.

  • ರಶ್ಮಿಕಾ ಮಂದಣ್ಣ- ನಿತಿನ್ ಚಿತ್ರಕ್ಕೆ ಮೆಗಾಸ್ಟಾರ್ ಚಿರಂಜೀವಿ ಕ್ಲಾಪ್

    ರಶ್ಮಿಕಾ ಮಂದಣ್ಣ- ನಿತಿನ್ ಚಿತ್ರಕ್ಕೆ ಮೆಗಾಸ್ಟಾರ್ ಚಿರಂಜೀವಿ ಕ್ಲಾಪ್

    ಪುಷ್ಪ 2, ಅನಿಮಲ್, ಚಿತ್ರದ ನಂತರ ಹೊಸ ಚಿತ್ರಕ್ಕೆ ರಶ್ಮಿಕಾ ಮಂದಣ್ಣ (Rashmika Mandanna) ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. `ಭೀಷ್ಮ’ (Bheeshma) ಹೀರೋ ಜೊತೆ ಮತ್ತೆ ರೊಮ್ಯಾನ್ಸ್ ಮಾಡಲು ಶ್ರೀವಲ್ಲಿ ರೆಡಿಯಾಗಿದ್ದಾರೆ. ರಶ್ಮಿಕಾ- ನಿತಿನ್ (Nithin) ಚಿತ್ರಕ್ಕೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ಕ್ರೇಜಿ ಕ್ವೀನ್ ರಕ್ಷಿತಾ ಜೊತೆ ಕಾಂಪಿಟೇಶನ್ ಶುರುವಾಗಿದ್ಹೇಗೆ, ರಮ್ಯಾ ಹೇಳಿದ್ದೇನು?

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಸೌತ್- ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ಸಿನಿಮಾಗಳಿಗೆ, ಪ್ರತಿಷ್ಠಿತ ಬ್ರ್ಯಾಂಡ್‌ಗಳಿಗೆ ಇವರೇ ಬೇಕು ಅನ್ನೋಷ್ಟರ ಮಟ್ಟಿಗೆ ರಶ್ಮಿಕಾ ಹವಾ ಕ್ರಿಯೆಟ್ ಆಗಿದೆ. ಈ ಹಿಂದೆ ಭೀಷ್ಮ ಹೀರೋ ನಿತಿನ್ ಜೊತೆ ರಶ್ಮಿಕಾ ನಟಿಸಿದ್ದರು. ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈಗ ಮತ್ತೊಮ್ಮೆ ನಿತಿನ್‌ಗೆ `ಪುಷ್ಪ’ ಬ್ಯೂಟಿ ನಾಯಕಿಯಾಗಿದ್ದಾರೆ.

    ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಹೊಸ ಚಿತ್ರಕ್ಕೆ ನಿತಿನ್- ರಶ್ಮಿಕಾ ಜೋಡಿಯಾಗಿ ಸಿನಿಮಾ ಮಾಡಲಿದ್ದಾರೆ. ಸಿನಿಮಾದ ಪೂಜೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ರಶ್ಮಿಕಾ- ನಿತಿನ್‌ಗೆ ಮೆಗಾಸ್ಟಾರ್ ಚಿರಂಜೀವಿ ಕ್ಲಾಪ್ ಮಾಡುವ ಶುಭಕೋರಿದ್ದಾರೆ.

    ರಶ್ಮಿಕಾ-ನಿತಿನ್ ಲವ್ ರೊಮ್ಯಾನ್ಸ್ ಜನರಿಗೆ ತಲಪುವಲ್ಲಿ ಯಶಸ್ವಿಯಾಗುತ್ತಾರಾ ಎಂಬುದನ್ನ ಕಾದುನೋಡಬೇಕಿದೆ. ಸದ್ಯ ಇಬ್ಬರು ಜೊತೆಯಾಗುತ್ತಿರುವ ಸುದ್ದಿ ಕೇಳಿಯೇ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

  • ಅಪ್ಪು ಹೆಸರಿನಲ್ಲಿ ಅಂಬುಲೆನ್ಸ್ ವಿತರಣೆ: ನುಡಿದಂತೆ ನಡೆದುಕೊಂಡ ಯಶ್, ಪ್ರಕಾಶ್ ರಾಜ್

    ಅಪ್ಪು ಹೆಸರಿನಲ್ಲಿ ಅಂಬುಲೆನ್ಸ್ ವಿತರಣೆ: ನುಡಿದಂತೆ ನಡೆದುಕೊಂಡ ಯಶ್, ಪ್ರಕಾಶ್ ರಾಜ್

    ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ಆಪ್ತರಾಗಿದ್ದ ಬಹುಭಾಷಾ ನಟ ಪ್ರಕಾಶ್ ರೈ ಸಹ ಅಪ್ಪು ಹೆಸರಲ್ಲಿ ಸೇವಾ ಕಾರ್ಯ ಮಾಡುತ್ತಿದ್ದು, ಅಪ್ಪು ಎಕ್ಸ್‌ಪ್ರೆಸ್ (Appu Express) ಹೆಸರಿನ ಅಂಬುಲೆನ್ಸ್ (Ambulence) ವಾಹನಗಳನ್ನು ಉಚಿತವಾಗಿ ಆಸ್ಪತ್ರೆಗಳಿಗೆ ನೀಡುತ್ತಿದ್ದಾರೆ. ಈ ಕಾರ್ಯಕ್ಕೆ ಅವರು ಕಾಲಿವುಡ್ ನಟ ಸೂರ್ಯ ಮತ್ತು ಮೆಗಾಸ್ಟಾರ್ ಚಿರಂಜೀವಿ ಅವರ ಸಹಾಯ ಪಡೆದಿದ್ದರು. ಈ ಹಿಂದೆ `ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ (Prakashraj) ಅವರ ಕಾರ್ಯದಲ್ಲಿ ಯಶ್ (Yash)ಕೈ ಜೋಡಿಸುವುದಾಗಿ ಹೇಳಿದ್ದರು. ನಮ್ಮ ರಾಜ್ಯದ ಪ್ರತಿ ಜಿಲ್ಲೆಗೂ ಒಂದೊಂದು ಅಂಬುಲೆನ್ಸ್ ತಲುಪಿಸೋಣ ಎಂದಿದ್ದರು. ಇದೀಗ ಕೊಟ್ಟ ಮಾತ್ನ ಈಡೇರಿಸಿದ್ದಾರೆ.

    ಇದೀಗ 5 ಜಿಲ್ಲೆಗಳಿಗೆ ಅಪ್ಪು ಅಂಬುಲೆನ್ಸ್ ಅನ್ನು ಪ್ರಕಾಶ್ ರೈ ಅವರು ಉಚಿತವಾಗಿ ನೀಡಿದ್ದಾರೆ. ಈ ಬಗ್ಗೆ ವಿಡಿಯೋವನ್ನು ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಹಾಯ ಮಾಡಿದ ನಟ ಯಶ್, ಸೂರ್ಯ (Suriya) ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರುಗಳಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಪ್ರಕಾಶ್ ರಾಜ್ ಅಪ್ಪು ನಮ್ಮೆಲ್ಲರೊಟ್ಟಿಗೆ ಶಾಶ್ವತವಾಗಿ ಉಳಿಯಬೇಕೆಂದರೆ ಅವರು ಮಾಡುತ್ತಿದ್ದ ಸಮಾಜ ಸೇವೆಯನ್ನು ನಾವು ಮುಂದುವರೆಸಬೇಕಾಗಿದೆ. ಹಾಗಾಗಿ ನಾನು ನನ್ನ `ಪ್ರಕಾಶ್ ರಾಜ್’ ಫೌಂಡೇಶನ್ ಮೂಲಕ ಅಪ್ಪು ಎಕ್ಸ್‌ಪ್ರೆಸ್ ಕನಸು ಕಂಡೆ. ಪ್ರತಿಜಿಲ್ಲೆಗೂ ಅಪ್ಪು ಎಕ್ಸ್‌ಪ್ರೆಸ್ ಅಂಬುಲೆನ್ಸ್ ಸೇವೆ ನೀಡುವ ಕಾರ್ಯವನ್ನು ನಾವು ಮೈಸೂರಿನಿಂದ ಆರಂಭಿಸಿದೆವು. ಇದೀಗ ಅದರ ಎರಡನೇ ಹಂತವಾಗಿ ಬೀದರ್, ಕಲಬುರ್ಗಿ, ಕೊಳ್ಳೆಗಾಲ, ಕೊಪ್ಪಳ, ಉಡುಪಿಗಳಿಗೆ ಆಂಬುಲೆನ್ಸ್ ವಿತರಿಸುತ್ತಿದ್ದೇವೆ ಎಂದಿದ್ದಾರೆ.

    ಆದರೆ ಈ ಬಾರಿ ನನ್ನ ಜೊತೆ ನಮ್ಮೊಂದಿಗೆ ಚಿರಂಜೀವಿ, ನಟ ಸೂರ್ಯ, ನಟ ಯಶ್ ಹಾಗೂ ಕೆವಿಎನ್ ನಿರ್ಮಾಣ ಸಂಸ್ಥೆಯ ನಿರ್ಮಾಪಕರಾದ ವೆಂಕಟ್ ಅವರುಗಳು ಇದ್ದಾರೆ. ಯಶ್ ಹೇಳಿದ ಮಾತು ನನಗೆ ಬಹಳ ಇಷ್ಟವಾಯಿತು. ಸರ್, ಇದು ನಿಮ್ಮೊಬ್ಬರ ಕನಸಲ್ಲ, ನಮ್ಮೆಲ್ಲರ ಕನಸು ಎಂದಿದ್ದರು. ಅವರ ಉದಾರತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

    ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ, ಪ್ರತಿ ಜಿಲ್ಲೆಗೂ ಅಂಬುಲೆನ್ಸ್ ತಲುಪಿಸುತ್ತೇವೆ ಎಂದು ಯಶ್ ಹೇಳಿದ್ದ ವಿಡಿಯೋ ಹಂಚಿಕೊಂಡು ಆಂಬುಲೆನ್ಸ್ ಬಂತಾ ಎಂದು ಕೆಲವರು ಕಾಲೆಳೆದಿದ್ದರು. ಇದೀಗ ಕೊಟ್ಟ ಮಾತಿನಂತೆ ನಟರು ನಡೆದುಕೊಂಡಿದ್ದಾರೆ.

  • ಮಗನ ಸಿನಿಮಾಗೆ ಆಸ್ಕರ್ ಸಿಕ್ಕಿದ್ದಕ್ಕೆ ಮೆಗಾಸ್ಟಾರ್ ರಿಯಾಕ್ಷನ್

    ಮಗನ ಸಿನಿಮಾಗೆ ಆಸ್ಕರ್ ಸಿಕ್ಕಿದ್ದಕ್ಕೆ ಮೆಗಾಸ್ಟಾರ್ ರಿಯಾಕ್ಷನ್

    ಸ್ಕರ್ (Oscars 2023) ಅಂಗಳದಲ್ಲಿ ಭಾರತದ 2 ಸಿನಿಮಾಗಳು ಸದ್ದು ಮಾಡಿದೆ. ಅದರಲ್ಲಿ `ಆರ್‌ಆರ್‌ಆರ್’ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಗನ ಸಿನಿಮಾಗೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

    `ದಿ ಎಲಿಫೆಂಟ್ ಎಸ್ಪರರ್ಸ್’ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಲಭಿಸಿದೆ. ತೆಲುಗಿನ `ಆರ್‌ಆರ್‌ಆರ್’ (RRR) ಸಿನಿಮಾದ `ನಾಟು ನಾಟು’ ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗಟ್ಟಿಸಿಕೊಂಡಿದೆ. ಆಸ್ಕರ್ (Oscar) ಗೆದ್ದು ಬೀಗುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

    `ನಾಟು ನಾಟು’ ಹಾಡು ಉಕ್ರೇನ್‌ನಲ್ಲಿ ಚಿತ್ರೀಕರಣವಾಗಿತ್ತು. ರಾಮ್ ಚರಣ್- ಜ್ಯೂ.ಎನ್‌ಟಿಆರ್ ಜಬರ್‌ದಸ್ತ್ ಆಗಿ ಕುಣಿದಿದ್ದರು. `ಆರ್‌ಆರ್‌ಆರ್’ ತಂಡ ಆಸ್ಕರ್ ಗೆದ್ದಿರುವುದ್ದಕ್ಕೆ ಮೆಗಾಸ್ಟಾರ್ ಸಂಭ್ರಮಿಸಿದ್ದಾರೆ. ಮಗನ ಸಿನಿಮಾ ಎಂದು ಖುಷಿಪಟ್ಟಿದ್ದಾರೆ. ನಾಟು ನಾಟು ಗೆದ್ದಿರೋದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ರಾಜಮೌಳಿ, ಕೀರವಾಣಿ, ಚರಣ್, ಜ್ಯೂ.ಎನ್‌ಟಿಆರ್ ಸೇರಿದಂತೆ ಇಡೀ `ಆರ್‌ಆರ್‌ಆರ್’ ತಂಡಕ್ಕೆ ಅಭಿನಂದನೆಗಳು ಎಂದು ಚಿರಂಜೀವಿ ಶುಭಕೋರಿದ್ದರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಸತ್ಯ’ ಸೀರಿಯಲ್ ನಟ ಸೀರುಂಡೆ ರಘು

    ಆಸ್ಕರ್ ಗೆದ್ದಿರುವ ಸಂಭ್ರಮದಲ್ಲಿ ಮಗ ರಾಮ್ ಚರಣ್ (Ramcharan) ಕೂಡ ಪಾಲಿರೋದ್ರಲ್ಲಿ ನಮಗೆ ಗರ್ವವಿದೆ ಖುಷಿಯಿದೆ ಎಂದು ಮಾಧ್ಯಮಕ್ಕೆ ಮೆಗಾಸ್ಟಾರ್ ಚಿರಂಜೀವಿ ರಿಯಾಕ್ಟ್ ಮಾಡಿದ್ದಾರೆ.

  • ಸಂಕ್ರಾಂತಿಯಂದು ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ರಾಮ್ ಚರಣ್ ಪತ್ನಿ ಉಪಾಸನಾ

    ಸಂಕ್ರಾಂತಿಯಂದು ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ರಾಮ್ ಚರಣ್ ಪತ್ನಿ ಉಪಾಸನಾ

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಇತ್ತೀಚೆಗೆ ಜ್ಯೂ.ರಾಮ್ ಚರಣ್ ಆಗಮನದ ಬಗ್ಗೆ ಚಿರಂಜೀವಿ ತಿಳಿಸಿದ್ದರು. ಇದೀಗ ಈ ಬೆನ್ನಲ್ಲೇ ರಾಮ್ ಚರಣ್ ಪತ್ನಿ ಉಪಾಸನಾ  ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೇಬಿ ಬಂಪ್ ಫೋಟೋಶೂಟ್ ಮೂಲಕ ಹಬ್ಬಕ್ಕೆ ಶುಭಕೋರಿದ್ದಾರೆ.

    ಒಂದು ಕಡೆ `ಆರ್‌ಆರ್‌ಆರ್’ (Rrr Film)  ಚಿತ್ರದ ಸಂಗೀತಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿರುವ ಸಂಭ್ರಮ, ಇನ್ನೊಂದು ಕಡೆ ಮನೆಗೆ ಪುಟ್ಟ ಮಗುವಿನ ಆಗಮನದ ಖುಷಿಯ ನಡುವೆ ಸಂಕ್ರಾಂತಿ ಹಬ್ಬವನ್ನು ಸ್ಪೆಷಲ್ ಆಗಿ ರಾಮ್ ಚರಣ್ ದಂಪತಿ ಆಚರಿಸಿದ್ದಾರೆ. ಈ ವೇಳೆ ರಾಮ್ ಪತ್ನಿ ಉಪಾಸನಾ ಚೆಂದದ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಇದನ್ನೂ ಓದಿ: `ವಾರಿಸು’ ನಟಿ ರಶ್ಮಿಕಾ ಹಾಡಿಗೆ ತಾಯಿ ಗರ್ಭದಲ್ಲಿರುವ ಮಗು ಡ್ಯಾನ್ಸ್!

    ಬೇಬಿ ಬಂಪ್ ಫೋಟೋಸ್ ಹಂಚಿಕೊಂಡ ಉಪಾಸನಾ, ನನಗೆ ಈ ಸಂಕ್ರಾಂತಿ ಮಾತೃತ್ವ ಮತ್ತು ಹೊಸ ಆರಂಭವನ್ನು ಆಚರಿಸುವ ಅವಕಾಶ ಕೊಟ್ಟಿದೆ ಎಂದು  ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದಿದ್ದಾರೆ. ಸಂಕ್ರಾಂತಿಯ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.

    ರಾಮ್ ಚರಣ್ ಪತ್ನಿ ಉಪಾಸನಾ ಅವರು ಹೊಸ ಫೋಟೋನಲ್ಲಿ ಪ್ರೆಗ್ನೆನ್ಸಿ ಗ್ಲೋ ಕಾಣಬಹುದು. ಉಪಾಸನಾ ಅವರ ನಯಾ ಫೋಟೋಸ್ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k