Tag: Megastar Chiranjeevi

  • ಮೆಗಾಸ್ಟಾರ್ ಮನೆಮಗಳು ನಿಹಾರಿಕಾ ಜೊತೆಗಿನ ಮದುವೆ ಬಗ್ಗೆ ತರುಣ್ ಸ್ಪಷ್ಟನೆ

    ಮೆಗಾಸ್ಟಾರ್ ಮನೆಮಗಳು ನಿಹಾರಿಕಾ ಜೊತೆಗಿನ ಮದುವೆ ಬಗ್ಗೆ ತರುಣ್ ಸ್ಪಷ್ಟನೆ

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆಮಗಳು ನಿಹಾರಿಕಾ ಕೊನಿಡೆಲಾ (Niharika Konidela) ಅವರು ಪತಿ ಚೈತನ್ಯ ಅವರಿಗೆ ಡಿವೋರ್ಸ್ ನೀಡಿ ಈಗ ಸಿಂಗಲ್ ಲೈಫ್ ಲೀಡ್ ಮಾಡ್ತಿದ್ದಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ನಿಹಾರಿಕಾ 2ನೇ ಮದುವೆ ಬಗ್ಗೆ ಸಖತ್ ಚರ್ಚೆ ನಡೆಯುತ್ತಿದೆ. ತೆಲುಗಿನ ಹೀರೋ ತರುಣ್ ಜೊತೆ ನಟಿ ಮದುವೆಯಾಗುತ್ತಾರೆ ಎಂಬ ವಿಚಾರ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಇದು ನಿಜಾನಾ? ಈ ಬಗ್ಗೆ ತರುಣ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಈ ನಟಿಯರಿಂದ ರಶ್ಮಿಕಾ, ಪೂಜಾ ಹೆಗ್ಡೆ, ಕೃತಿ ಶೆಟ್ಟಿ ಆಫರ್‌ಗೆ ಬಿತ್ತು ಕತ್ತರಿ

    ನಿಹಾರಿಕಾ ಕೊನಿಡೆಲಾ ಅವರು ಚೈತನ್ಯ ಅವರನ್ನ ಪ್ರೀತಿಸಿ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ನಿಹಾರಿಕಾ ಅವರ ಮದುವೆ ಇಡೀ ಮೆಗಾಸ್ಟಾರ್ ಕುಟುಂಬದ ಬೆಂಬಲ ಮತ್ತು ಹಾರೈಕೆಯಿತ್ತು. ಆದರೆ ನಿಹಾರಿಕಾ ದಾಂಪತ್ಯ, ಮದುವೆಯಾಗಿ ಎರಡೂವರೆ ವರ್ಷಕ್ಕೆ ಅಂತ್ಯವಾಯಿತು. ಚೈತನ್ಯಗೆ ಡಿವೋರ್ಸ್ ನೀಡಿ ಮತ್ತೆ ಸಿನಿಮಾದತ್ತ ನಟಿ ಮುಖ ಮಾಡಿದ್ದಾರೆ.

    ವೈಯಕ್ತಿಕ ಜೀವನ ಸರಿ ಇಲ್ಲದೇ ಇರುವ ಕಾರಣ, ಮತ್ತೆ ಬೆಳ್ಳಿಪರದೆಯಲ್ಲಿ ನಟಿ ಮಿಂಚ್ತಾರೆ ಎಂಬ ಸುದ್ದಿ ವೈರಲ್ ಆಗಿತ್ತು. ನಿಹಾರಿಕಾ ನಿರ್ಧಾರಕ್ಕೆ ಕುಟುಂಬದ ಸಹಮತವಿಲ್ಲ. ಆದರೂ ಅವರ ವಿರುದ್ಧ ನಿಂತು ನಿಹಾರಿಕಾ ನಾಯಕಿಯಾಗಲು ತಯಾರಿ ಮಾಡ್ತಿದ್ದಾರೆ ಎನ್ನಲಾಗಿತ್ತು. ಇದೀಗ ಈ ಸುದ್ದಿ ನಡುವೆ ಮತ್ತೊಂದು ಸುದ್ದಿ ಸೌಂಡ್ ಮಾಡ್ತಿದೆ. ತೆಲುಗಿನ ನಟ ತರುಣ್ (Actor Tarun) ಜೊತೆ ನಿಹಾರಿಕಾ 2ನೇ ಮದುವೆಯಾಗಲು (Wedding) ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ವಿಚಾರ ನಿಜಾನಾ ಎಂಬುದರ ಬಗ್ಗೆ ತರುಣ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಸಿದ್ದರಾಮಯ್ಯ ಬಯೋಪಿಕ್: ಪಾರ್ಟ್ 1 ಚಿತ್ರಕ್ಕೆ ನಿರೂಪ್ ಭಂಡಾರಿ ಹೀರೋ

    ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಮಿಂಚಿದ್ದ ನಟ ತರುಣ್ ಈಗ ಬ್ಯುಸಿನೆಸ್ ಫೀಲ್ಡ್‌ನಲ್ಲಿ ಗುರುತಿಸಿಕೊಳ್ತಿದ್ದಾರೆ. ಇತ್ತೀಚಿಗೆ ತರುಣ್ ತಾಯಿ ರೋಜಾ ಅವರು ನನ್ನ ಮಗ ಮದುವೆಯಾಗುತ್ತಾನೆ. ದೊಡ್ಮನೆಯ ಹುಡುಗಿಯನ್ನೇ ಮದುವೆಯಾಗುತ್ತಾರೆ ಎಂದು ಮಾತನಾಡಿದ್ದರು. ಹಾಗಾಗಿ ನಿಹಾರಿಕಾ ಜೊತೆ ತರುಣ್ ಹೆಸರು ಕೇಳಿ ಬಂದಿತ್ತು.

    ನಿಹಾರಿಕಾ ಜೊತೆಗಿನ ಮದುವೆ ಬಗ್ಗೆ ನಟ ಪ್ರತಿಕ್ರಿಯಿಸಿ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು, ನಿಹಾರಿಕಾ ಜೊತೆ ನಾನು ಮದುವೆಯಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬಳಿಕ ನನ್ನ ಮದುವೆ ಬಗ್ಗೆ ಮುಂದಿನ ದಿನಗಳಲ್ಲಿ ನಾನೇ ತಿಳಿಸುತ್ತೇನೆ ಎಂದು ತರುಣ್ ರಿಯಾಕ್ಟ್ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೆಗಾ ಫ್ಯಾಮಿಲಿ ವಿರುದ್ಧ ಗಟ್ಟಿ ನಿರ್ಧಾರ ಕೈಗೊಂಡ ನಿಹಾರಿಕಾ

    ಮೆಗಾ ಫ್ಯಾಮಿಲಿ ವಿರುದ್ಧ ಗಟ್ಟಿ ನಿರ್ಧಾರ ಕೈಗೊಂಡ ನಿಹಾರಿಕಾ

    ಟಾಲಿವುಡ್ ನಟಿ, ನಿರ್ಮಾಪಕಿ ನಿಹಾರಿಕಾ ಕೊನಿಡೆಲಾ (Niharika Konidela) ಅವರು ಇತ್ತೀಚಿಗೆ ತಮ್ಮ ಡಿವೋರ್ಸ್ (Divorce) ಅಧಿಕೃತವಾಗಿ ಅನೌನ್ಸ್ ಮಾಡಿದ್ದರು. ಈಗ ಸಿಂಗಲ್ ಲೈಫ್ ಲೀಡ್ ಮಾಡ್ತಿರೋ ನಟಿ, ತಮ್ಮ ಬದುಕಿನ ಬಗ್ಗೆ ಗಟ್ಟಿ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ನಿಹಾರಿಕಾ ನಡೆ ಮೆಗಾ ಫ್ಯಾಮಿಲಿ ಖುಷಿ ಇಲ್ವಂತೆ. ಕುಟುಂಬದ ವಿರೋದಧ ನಡುವೆಯೂ ನಿಹಾರಿಕಾ ಹೊಸ ಹೆಜ್ಜೆ ಇಡ್ತಿದ್ದಾರೆ. ಏನದು? ಇಲ್ಲಿದೆ ಮಾಹಿತಿ.

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆ ಮಗಳು ನಿಹಾರಿಕಾ ಅವರು ಚೈತನ್ಯ ಜೊತೆಗಿನ 2 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಈಗ ಮತ್ತೆ ಸಿನಿಮಾ, ನಟನೆ, ನಿರ್ಮಾಣ ಅಂತಾ ನಿಹಾರಿಕಾ ಕೆರಿಯರ್ ಕಡೆ ಗಮನ ಕೊಡಲು ನಿರ್ಧರಿಸಿದ್ದಾರೆ. ಮದುವೆಗೂ ಮುನ್ನ ಒಕ ಮನಸ್ಸು ಎಂಬ ಸಿನಿಮಾ ಮೂಲಕ ನಾಯಕಿಯಾಗಿ ನಿಹಾರಿಕಾ ಎಂಟ್ರಿ ಕೊಟ್ಟಿದ್ದರು. ಇದನ್ನೂ ಓದಿ:ಕಂಗನಾ ರಣಾವತ್ ಹಿಂದೆ ಬಿದ್ದಿದ್ದಾನಂತೆ ಹೆಣ್ಣುಬಾಕ ನಟ

    ‘ಸೂರ್ಯಕಾಂತಂ’ (Suryakantam) ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಕೂಡ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ಈಗ ಮತ್ತೆ ನಾಯಕಿಯಾಗಿ ಲೈಮ್‌ಲೈಟ್‌ನಲ್ಲಿ ಮಿಂಚಲು ನಿಹಾರಿಕಾ ಮನಸ್ಸು ಮಾಡಿದ್ದಾರಂತೆ. ನಿರ್ಮಾಪಕಿಯಾಗಿ ಗುರುತಿಸಿಕೊಳ್ತಿರೋ ಮೆಗಾ ಕುಟುಂಬ ಕುಡಿ ಈಗ ಮತ್ತೆ ಹೀರೋಯಿನ್ ಆಗಿ ಮಿಂಚೋಕೆ ರೆಡಿಯಾಗಿದ್ದಾರೆ.

    ಈ ನಿಟ್ಟಿನಲ್ಲಿ ಅವರು ಯುವ ನಿರ್ದೇಶಕರೊಬ್ಬರ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈಗಾಗಲೆ ಕಥೆ ಸಿದ್ಧಗೊಂಡಿದ್ದರೂ ನಿಹಾರಿಕಾ ನಾಯಕಿಯಾಗಿ ಎಂಟ್ರಿ ಕೊಡಲು ಮೆಗಾ ಫ್ಯಾಮಿಲಿ ಒಪ್ಪುತ್ತಿಲ್ಲ ಎಂಬುದು ಒಳಗಿನ ಮಾತು. ಸಿನಿಮಾ ವಿಚಾರದಲ್ಲಿ ನಿಹಾರಿಕಾ ನಿರ್ಧಾರಕ್ಕೆ ಮೆಗಾ ಫ್ಯಾಮಿಲಿ ನೋ ಹೇಳುತ್ತಿದೆ. ಆದರೆ ನಿಹಾರಿಕಾ ಮತ್ತೆ ನಾಯಕಿಯಾಗಿ ಸಿನಿಮಾಗೆ ಬರುವುದು ಮೆಗಾ ಫ್ಯಾಮಿಲಿಗೆ ಇಷ್ಟವಿಲ್ಲ ಎಂಬ ಪ್ರಚಾರ ನಡೆಯುತ್ತಿದೆ. ನಟಿಯ ಕುಟುಂಬ ನೋ ಅಂದ್ರು ಕೂಡ ನಿಹಾರಿಕಾ ಈ ವಿಚಾರದಲ್ಲಿ ಸಖತ್ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಮಾತಿಗೆ ಸೊಪ್ಪು ಹಾಕದೇ ತನ್ನದೇ ನಿರ್ಧಾರ ಅಂತಿಮ ಅಂತಾ ನಟಿ ಹಠ ಮಾಡ್ತಿದ್ದಾರೆ ಎಂದು ಗುಸು ಗುಸು ಸುದ್ದಿ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ. ಇದು ನಿಜಾನಾ? ಅಥವಾ ಗಲ್ಲಿ ಗಾಸಿಪ್‌ ಅಂತಾ ನಟಿ ಸ್ಪಷ್ಟನೆ ನೀಡುವವರೆಗೂ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿರಂಜೀವಿಯನ್ನು ಹಾಡಿ ಹೊಗಳಿದ ‘ಕಾವಾಲಾ’ ಬ್ಯೂಟಿ ತಮನ್ನಾ

    ಚಿರಂಜೀವಿಯನ್ನು ಹಾಡಿ ಹೊಗಳಿದ ‘ಕಾವಾಲಾ’ ಬ್ಯೂಟಿ ತಮನ್ನಾ

    ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಅವರಿಗೆ ಈಗ ಡಿಮ್ಯಾಂಡ್ ಜಾಸ್ತಿಯಾಗಿದೆ. ಬಾಲಿವುಡ್- ಟಾಲಿವುಡ್ ಎರಡು ಕಡೆ ಮಿಲ್ಕಿ ಬ್ಯೂಟಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ‘ಭೋಲಾ ಶಂಕರ್’ (Bhola Shankar) ಸಿನಿಮಾದಲ್ಲಿ ಮೆಗಾಸ್ಟಾರ್ ನಾಯಕಿಯಾಗಿರುವ ತಮನ್ನಾ ಅವರು ಈಗ ಸಹನಟ ಚಿರಂಜೀವಿ ಬಗ್ಗೆ ಸೀಕ್ರೆಟ್ ಒಂದನ್ನ ಬಿಚ್ಚಿಟ್ಟಿದ್ದಾರೆ. ಸಿನಿಮಾ ಕಾರ್ಯಕ್ರಮವೊಂದರಲ್ಲಿ ನಟಿ ಮೆಗಾಸ್ಟಾರ್ ಅವರನ್ನು ಹಾಡಿ ಹೊಗಳಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ಭೋಲಾ ಶಂಕರ್ ಸಿನಿಮಾ ಆಗಸ್ಟ್ 11ಕ್ಕೆ ತೆರೆ ಕಾಣುತ್ತಿದೆ. ಮೆಗಾಸ್ಟಾರ್ ತಂಗಿಯಾಗಿ ಮಹಾನಟಿ ಕೀರ್ತಿ ಸುರೇಶ್, ನಾಯಕಿಯಾಗಿ ತಮನ್ನಾ ನಟಿಸಿದ್ದಾರೆ. ಸಿನಿಮಾದ ಟ್ರೈಲರ್, ಫಸ್ಟ್ ಲುಕ್ ಎಲ್ಲವೂ ಅಭಿಮಾನಿಗಳ ಗಮನ ಸೆಳೆದಿದೆ. ಮೆಗಾಸ್ಟಾರ್ ಭರ್ಜರಿ ಆ್ಯಕ್ಷನ್ ನೋಡೋದ್ದಕ್ಕೆ ಫ್ಯಾನ್ಸ್ ಕಾಯ್ತಿದ್ದಾರೆ. ಇದನ್ನೂ ಓದಿ:18 ವರ್ಷಗಳ ದಾಂಪತ್ಯಕ್ಕೆ ನಟ ಫರ್ದೀನ್ ಖಾನ್ ವಿದಾಯ?

    ಈ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ತಮನ್ನಾ (Tamannah) ಅವರು ಚಿರಂಜೀವಿ ಬಗ್ಗೆ ಮಾತನಾಡಿದ್ದಾರೆ. ಸೆಟ್‌ನಲ್ಲಿ ನಡೆದ ಘಟನೆಯೊಂದನ್ನ ಅವರು ಶೇರ್ ಮಾಡಿದ್ದಾರೆ. ಚಿರಂಜೀವಿ ಅವರು ಶ್ರಮಜೀವಿ. ಯಾಕೆಂದರೆ ನಾವು ಹಾಡೊಂದರ ಚಿತ್ರೀಕರಣ ಮಾಡುವಾಗ ಅವರಿಗೆ ಮೊಣಕಾಲು ನೋವು ಕಾಣಿಸಿಕೊಂಡಿತ್ತು. ಇದರಿಂದ ಅವರು ತೀವ್ರವಾಗಿ ಬಳಲುತ್ತಿದ್ದರು. ಹೀಗಿದ್ದರೂ ಸಹ ನೋವಿನ ನಡುವೆಯೇ ಶೂಟಿಂಗ್ ಮುಂದುವರೆಸಿದರು. ಸಿನಿಮಾ ಶೂಟಿಂಗ್ ಮುಂದುವರೆಯಲು ಏನು ಮಾಡಬೇಕೋ ಅದನ್ನು ಚಿರು ಅವರು ಮಾಡಿದರು.

    ಈಗ ತಾನೇ ಹೆಜ್ಜೆಯಿಟ್ಟವರಂತೆ ಮೆಗಾ ಸ್ಟಾರ್ ಸದಾ ಉತ್ಸಾಹ, ಬದ್ಧತೆಯನ್ನು ಹೊಂದಿರುತ್ತಾರೆ. ಅವರ ಪಯಣವನ್ನು ನೋಡಿ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ನಟನನ್ನು ತಮನ್ನಾ ಹೊಗಳಿದ್ದಾರೆ. ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ನಂತರ ಚಿರಂಜೀವಿ ಜೊತೆ ತಮನ್ನಾಗೆ ಇದು ಎರಡನೇ ಸಿನಿಮಾವಾಗಿದೆ.

    ‘ಜೈಲರ್ʼ (Jailer) ಸಿನಿಮಾ ಕೂಡ ಇದೇ ಆಗಸ್ಟ್ 10ಕ್ಕೆ ತೆರೆಗೆ ಬರಲಿದೆ. ತಲೈವಾ- ಶಿವಣ್ಣ ಕಾಂಬೋ ಸಿನಿಮಾದಲ್ಲಿ ತಮನ್ನಾ ಸೊಂಟ ಬಳುಕಿಸಿರುವ ಕಾವಾಲಾ ಸಾಂಗ್ ಸೂಪರ್ ಹಿಟ್ ಆಗಿದೆ. ರಜನಿಕಾಂತ್ (Rajanikanth) ಜೊತೆ ಮಿಲ್ಕಿ ಬ್ಯೂಟಿ ಹೆಜ್ಜೆ ಹಾಕಿದ್ದಾರೆ. ಒಂದು ದಿನದ ಅಂತರದಲ್ಲಿ ಜೈಲರ್ ಮತ್ತು ಭೋಲಾ ಶಂಕರ್ ತೆರೆಕಾಣುತ್ತಿದೆ. ಯಾವ ಸಿನಿಮಾಗೆ ಪ್ರೇಕ್ಷಕರ ಬೆಂಬಲವಿರಲಿದೆ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಭೋಲಾ ಶಂಕರ್’ ಸಿನಿಮಾಗಾಗಿ ಮೆಗಾಸ್ಟಾರ್ ಪಡೆದ ಸಂಭಾವನೆ ಕೇಳಿದ್ರೆ ಅಚ್ಚರಿಪಡ್ತೀರಿ

    ‘ಭೋಲಾ ಶಂಕರ್’ ಸಿನಿಮಾಗಾಗಿ ಮೆಗಾಸ್ಟಾರ್ ಪಡೆದ ಸಂಭಾವನೆ ಕೇಳಿದ್ರೆ ಅಚ್ಚರಿಪಡ್ತೀರಿ

    ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರು ಭೋಲಾ ಶಂಕರ್ (Bhola Shankar) ಸಿನಿಮಾದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸದ್ಯ ಸಿನಿಮಾದ ಟ್ರೈಲರ್ ಹೈಪ್ ಕ್ರಿಯೆಟ್ ಮಾಡ್ತಿದ್ರೆ, ಮತ್ತೊಂದು ಕಡೆ ಅವರ ಸಂಭಾವನೆ ವಿಚಾರ ನೆಟ್ಟಿರ ಚರ್ಚೆಗೆ ಗ್ರಾಸವಾಗಿದೆ. ಭೋಲಾ ಶಂಕರ್ ಮೆಗಾಸ್ಟಾರ್ ಸಂಭಾವನೆ ಪಡೆದಿರೋದನ್ನ ಕೇಳಿದ್ರೆ ನೀವು ಅಚ್ಚರಿಪಡ್ತೀರಾ.

    ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ತಮನ್ನಾ ನಟಿಸಿದ್ದಾರೆ. ತಂಗಿ ಪಾತ್ರದಲ್ಲಿ ಕೀರ್ತಿ ಸುರೇಶ್ (Keerthi Suresh) ಜೀವತುಂಬಿದ್ದಾರೆ. ಸದ್ಯ ಟ್ರೇಲರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ್ಯಕ್ಷನ್, ಎಮೋಷನ್, ಕಾಮಿಡಿ ದೃಶ್ಯಗಳನ್ನು ಎಡಿಟ್ ಮಾಡಿ ಟ್ರೇಲರ್‌ನಲ್ಲಿ ಹಾಕಲಾಗಿದೆ. ವಿಲನ್ ಪಾತ್ರದಲ್ಲಿ ಕನ್ನಡದ ರವಿಶಂಕರ್ ಅವರು ಮಿಂಚಿದ್ದಾರೆ. ಅವರು ಹೇಳುವ ಖಡಕ್ ಡೈಲಾಗ್ ಎಲ್ಲರ ಗಮನ ಸೆಳೆದಿದೆ. ಚಿರಂಜೀವಿ ಅವರ ಮಾಸ್ ಡೈಲಾಗ್ ಡೆಲಿವರಿ ಟ್ರೈಲರ್‌ನ ವಿಶೇಷ ಆಕರ್ಷಣೆಯಾಗಿದೆ. ಟ್ರೇಲರ್‌ನ ಕೊನೆಯಲ್ಲಿ ಪವನ್ ಕಲ್ಯಾಣ್ ಅವರ ಮ್ಯಾನರಿಸಂ ಅನ್ನು ಚಿರು ಅನುಕರಿಸಿದ್ದಾರೆ. ಇದು ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಇದನ್ನೂ ಓದಿ:ಮಗಳ ವಯಸ್ಸಿನ ನಟಿ ಜೊತೆ ಅನಿಲ್ ಕಪೂರ್ ಲಿಪ್‌ಲಾಕ್- ನೆಟ್ಟಿಗರಿಂದ ಛೀಮಾರಿ

    ನನ್ನ ಹಿಂದೆ ಮಾಫಿಯಾ ಇದೆ ಎಂದು ರವಿಶಂಕರ್ ಹೇಳುತ್ತಾರೆ. ಮಾಫಿಯಾ ನಿನ್ನ ಹಿಂದೆ ಇದ್ದರೆ ಜಗತ್ತೇ ನನ್ನ ಹಿಂದೆ ಇದೆ ಎಂದು ರವಿಶಂಕರ್‌ಗೆ ತಿರುಗೇಟು ನೀಡುವ ಚಿರು ಡೈಲಾಗ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಿನಿಮಾದಲ್ಲಿ ಚಿರಂಜೀವಿ ಅವರು ಮಾಸ್ & ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಗಮನ ಸೆಳೆಯುತ್ತಿರೋ ಭೋಲಾ ಶಂಕರ್ ಇದೇ ಆಗಸ್ಟ್ 11ಕ್ಕೆ ತೆರೆಗೆ ಬರಲಿದೆ.

    ದುಬಾರಿ ನಟ ಮೆಗಾಸ್ಟಾರ್ ಅವರು ‘ಭೋಲಾ ಶಂಕರ್’ (Bhola Shankar) ಸಿನಿಮಾಗಾಗಿ ಒಂದು ರೂಪಾಯಿ ಕೂಡ ಸಂಭಾವನೆ ಪಡೆಯದೇ ನಟಿಸಿದ್ದಾರಂತೆ. ಈ ಸುದ್ದಿ ಗಾಸಿಪ್ ಪ್ರಿಯರಿಗೆ ಅಚ್ಚರಿ ಮೂಡಿಸಿದೆ. ಆದರೆ ಒಂದು ರೂಪಾಯಿ ಪಡೆಯದೇ ಚಿರಂಜೀವಿ ನಟಿಸಿರೋದು ಮೂಲಗಳ ಪ್ರಕಾರ ನಿಜ ಎಂದು ಹೇಳಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ತಿಗೆ ಮಾಡಿದ ದ್ರೋಹದಿಂದ ಇಲ್ಲಿದ್ದೇನೆ ಎಂದು ವರಸೆ ಬದಲಿಸಿದ ಪವನ್ ಕಲ್ಯಾಣ್

    ಅತ್ತಿಗೆ ಮಾಡಿದ ದ್ರೋಹದಿಂದ ಇಲ್ಲಿದ್ದೇನೆ ಎಂದು ವರಸೆ ಬದಲಿಸಿದ ಪವನ್ ಕಲ್ಯಾಣ್

    ಟಾಲಿವುಡ್ (Tollywood) ನಟ ಪವನ್ ಕಲ್ಯಾಣ್ (Pawan Kalyan) ಮತ್ತೊಮ್ಮೆ ಹಳೇ ದಿನ ನೆನಪು ಮಾಡಿಕೊಂಡಿದ್ದಾರೆ. ಸಿನಿಮಾ ಹೀರೋ ಆಗಬೇಕೆನ್ನುವ ಕನಸು ಇರದಿದ್ದ ಹೊತ್ತಿನಲ್ಲಿ ಅದ್ಯಾರು ಈ ಲೋಕಕ್ಕೆ ದೂಡಿದರು? ಅದ್ಯಾಕೆ ಸ್ಟಾರ್ ಮಾಡುವ ದ್ರೋಹ ಮಾಡಿದರೆಂದು ತಮಾಷೆಯಾಗಿ ಹೇಳಿದ್ದಾರೆ. ಹಾಗಿದ್ದರೆ ಪವನ್ ಪ್ರಕಾರ ಆ ದ್ರೋಹಿ ಯಾರು? ಇಲ್ಲಿದೆ ಡಿಟೈಲ್ಸ್

    ಪವನ್‌ಕಲ್ಯಾಣ್ ಇಂದು ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಆದರೆ ನಿಜ ಹೇಳಬೇಕೆಂದರೆ ಅವರಿಗೆ ಸಿನಿಮಾ ಆಸಕ್ತಿ ಅಗುಳಿನಷ್ಟೂ ಇರಲಿಲ್ಲ. ವ್ಯವಸಾಯ ಮಾಡಿಕೊಂಡು…ಆಧ್ಯಾತ್ಮ ಓದಿಕೊಂದು ಬದುಕು ನಡೆಸುವ ಕನಸು ಕಂಡಿದ್ದರು. ಆದರೆ ಸಿನಿಮಾಕ್ಕೆ ಬರುವಂತೆ ಮಾಡಿದ್ದು ಯಾರು ಗೊತ್ತೆ? ಇದನ್ನೂ ಓದಿ:‘ಜವಾನ್’ ಸಿನಿಮಾದಲ್ಲಿ ದಳಪತಿ ವಿಜಯ್ ಕೂಡ ಇದ್ದಾರೆ: ಭರ್ಜರಿ ಸುದ್ದಿ

    ಸಾಮಾನ್ಯ ಜೀವನ ನಡೆಸುವ ಕನಸು ಕಂಡಿದ್ದೆ. ಜನಜಂಗುಳಿ ಇಷ್ಟ ಆಗುತ್ತಿರಲಿಲ್ಲ. ಆದರೆ ನನ್ನ ಅಣ್ಣ-ಅತ್ತಿಗೆ ಸಿನಿಮಾಕ್ಕೆ ಹೋಗುವಂತೆ ಮಾಡಿದರು. ಒಮ್ಮೆ ಥೇಟರ್ ಮುಂದೆ ಲಾರಿ ಏರಿ ಕುಣಿಯುವಂತೆ ಜನರು ಒತ್ತಾಯಿಸಿದರು. ಆಗ ನಾನು ಸತ್ತೇ ಹೋಗುತ್ತೇನೆ ಎನ್ನುವಷ್ಟು ಸಂಕೋಚವಾಗಿತ್ತು. ಅತ್ತಿಗೆ ಫೋನ್ ಮಾಡಿ…ಯಾಕೆ ನನ್ನನ್ನು ಇಲ್ಲಿಗೆ ಕಳಿಸಿದಿರಿ ಎಂದು ದಬಾಯಿಸಿದೆ. ಇಷ್ಟು ದೊಡ್ಡ ಹೀರೊ…ಇಷ್ಟು ಫ್ಯಾನ್ಸ್ ಸಿಗುತ್ತಾರೆಂದು ಕನಸಲ್ಲೂ ಊಹಿಸಿರಲಿಲ್ಲ. ಇದಕ್ಕೆಲ್ಲ ನನ್ನ ಅತ್ತಿಗೆ ಮಾಡಿದ ಆ ದ್ರೋಹವೇ ಕಾರಣ ಎಂದು ಪವನ್ ಕಲ್ಯಾಣ್ ಮಾತನಾಡಿದ್ದಾರೆ.

    ಅಣ್ಣ ಚಿರು (Chiranjeevi) ಹಾಗೂ ಅತ್ತಿಗೆ ಸುರೇಖಾ (Surekha) ಅಂದರೆ ಪವನ್‌ಗೆ ಪ್ರಾಣ. ಅವರಿಂದಲೇ ಇಂದು ಪವನ್ ಎಷ್ಟೋ ಅವಘಡಗಳಿಂದ ಪಾರಾಗಿ ಇಂದು ಇಷ್ಟು ಎತ್ತರಕ್ಕೆ ಏರಿದ್ದಾರೆ. ಅದನ್ನೇ ‘ಬ್ರೋ’ (Bro) ಸಿನಿಮಾ ಪ್ರಿ ರಿಲೀಸ್ ಇವೆಂಟ್ ಸಮಯದಲ್ಲಿ ತಮಾಷೆಯಾಗಿ ಹೇಳಿದರು. ನೋಡಿ ಎಲ್ಲರೂ ಬಯಸೋದು…ಇವರಿಗೆ ಬೇಡವಾಗಿತ್ತು. ದೇವರ ಆಟ ಬಲ್ಲರ‍್ಯಾರು?

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೆಗಾಸ್ಟಾರ್ ಸೊಸೆ ಲಾವಣ್ಯಗೆ ವಿಚಿತ್ರ ಕಾಯಿಲೆ- ಫ್ಯಾನ್ಸ್ ಕಾಡ್ತಿದೆ ಆ ಚಿಂತೆ

    ಮೆಗಾಸ್ಟಾರ್ ಸೊಸೆ ಲಾವಣ್ಯಗೆ ವಿಚಿತ್ರ ಕಾಯಿಲೆ- ಫ್ಯಾನ್ಸ್ ಕಾಡ್ತಿದೆ ಆ ಚಿಂತೆ

    ಟಾಲಿವುಡ್ ಬ್ಯೂಟಿ ಲಾವಣ್ಯ ತ್ರಿಪಾಠಿ (Lavanya Tripati) ಅವರು ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆಗೆ ಸೊಸೆಯಾಗಿ ಸದ್ಯದಲ್ಲೇ ಕಾಲಿಡಲಿದ್ದಾರೆ. ಇತ್ತೀಚಿಗೆ ಮೆಗಾಸ್ಟಾರ್ ಕುಟುಂಬದ ಮನೆಮಗ ವರುಣ್ ತೇಜ್ ಜೊತೆ ಅದ್ದೂರಿಯಾಗಿ ಲಾವಣ್ಯ ಎಂಗೇಜ್‌ಮೆಂಟ್ ಮಾಡಿಕೊಂಡರು. ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದರು. ಇದೀಗ ನಟಿ ಲಾವಣ್ಯ ಬಗ್ಗೆ ಹೊಸದೊಂದು ವಿಚಾರ ಚರ್ಚೆಯಾಗುತ್ತಿದೆ. ಲಾವಣ್ಯ ಅವರು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದಾರಂತೆ. ಈ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ.

    ನಟ ವರುಣ್ ತೇಜ್ (Varun Tej)- ಲಾವಣ್ಯ ಅವರು ಒಟ್ಟಿಗೆ 2 ಸಿನಿಮಾ ಮಾಡಿದ್ದರು. ಸಿನಿಮಾಗಾಗಿ ಆದ ಪರಿಚಯ ಇಂದು ಮದುವೆವರೆಗೂ ತಂದು ನಿಲ್ಲಿಸಿದೆ. ಸತತ 6 ವರ್ಷಗಳ ಪ್ರೀತಿಯನ್ನ ಮನೆಯವರಿಗೆ ತಿಳಿಸಿ, 2 ಕುಟುಂಬದ ಸಮ್ಮತಿ ಪಡೆದು ಎಂಗೇಜ್ ಆಗಿದ್ದಾರೆ. ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗ ಜೋಡಿಯ ಬಗ್ಗೆ ಅಭಿಮಾನಿಗಳಿಗೆ ಹೊಸ ತಲೆನೋವು ಶುರುವಾಗಿದೆ. ಲಾವಣ್ಯ ಅವರ ವಿಚಿತ್ರ ಕಾಯಿಲೆ ಸಮಸ್ಯೆಯಿಂದ ಮದುವೆ ಮುರಿದು ಬೀಳುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದನ್ನೂ ಓದಿ:ರಾಘವ್ ಲಾರೆನ್ಸ್-ಕಂಗನಾ ನಟನೆಯ ‘ಚಂದ್ರಮುಖಿ 2’ ಎಂಟ್ರಿಗೆ ಮುಹೂರ್ತ ಫಿಕ್ಸ್

    ಲಾವಣ್ಯ ಮೆಗಾ ಫ್ಯಾಮಿಲಿ ಸೊಸೆಯಾಗುತ್ತಾರೆ ಎನ್ನುವ ವಿಷಯ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಇನ್ನು ಲಾವಣ್ಯ ಹಿನ್ನೆಲೆ ಏನು? ಆಕೆಯ ಜಾತಿ ಏನು? ಆಕೆಯ ಆಸ್ತಿ ಮೌಲ್ಯ ಎಷ್ಟು ಅಂತೆಲ್ಲಾ ಅಂತರ್ಜಾಲದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಆಕೆ ತನಗಿರುವ ವಿಚಿತ್ರ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿದ್ದ ವೀಡಿಯೋವೊಂದು ಸದ್ದು ಮಾಡುತ್ತಿದೆ.

    ಸೆಲೆಬ್ರೆಟಿಗಳು ಕೂಡ ಮನುಷ್ಯರೇ ಅಲ್ಲವೇ. ಸೂಪರ್ ಸ್ಟಾರ್‌ಗಳು ಕೂಡ ಚಿತ್ರವಿಚಿತ್ರ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಕ್ಯಾನ್ಸರ್‌ನಿಂದ ಬಳಲುವವರು ಕೂಡ ಇದ್ದಾರೆ. ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿರುತ್ತಾರೆ. ಆದರೆ ಸೆಲೆಬ್ರೆಟಿಗಳು ಎನ್ನುವ ಕಾರಣಕ್ಕೆ ಅವರ ಪ್ರತಿಯೊಂದು ವಿಚಾರ ದೊಡ್ಡದಾಗಿ ಸುದ್ದಿಯಾಗುತ್ತದೆ ಅಷ್ಟೇ. 2 ವರ್ಷಗಳ ಹಿಂದೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫಾಲೋವರ್ಸ್ ಜೊತೆ ಮಾತನಾಡುತ್ತಾ ನಟಿ ಲಾವಣ್ಯ ತಮಗಿರುವ ವಿಚಿತ್ರ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು.

    ಸ್ವತಃ ಲಾವಣ್ಯ ತ್ರಿಪಾಠಿ ತಾವು ಟ್ರಿಪೋಫೋಬಿಯಾದಿಂಧ ಬಳಲುತ್ತಿರುವ ಬಗ್ಗೆ ಮಾತನಾಡಿದ್ದರು. ಚರ್ಮದ ರಂಧ್ರಗಳು, ಜೇನುಗೂಡು, ಕಮಲದ ಕಣ್ಣುಗಳ ರಂಧ್ರಗಳ ಅಥವಾ ಉಬ್ಬುಗಳನ್ನು ಹೊಂದಿರುವ ವಸ್ತುವನ್ನು ನೋಡಲು ಆಕೆ ಪ್ರಜ್ಞಾಪೂರ್ವಕವಾಗಿ ಹೆದರುತ್ತೀನಿ. ಇದರಿಂದ ಸಾಕಷ್ಟು ಬಾರಿ ಸಮಸ್ಯೆ ಎದುರಿಸಿರುವುದಾಗಿ ಹೇಳಿಕೊಂಡಿದ್ದರು. ಇದರಿಂದ ಹೊರ ಬರಲು ಪ್ರಯತ್ನ ನಡೆಸುತ್ತಿರುವುದಾಗಿ ವಿವರಿಸಿದ್ದರು. ನಾವು ಸಂತೋಷವಾಗಿ ಇರಬೇಕು. ನಮ್ಮ ಸುತ್ತಲಿನ ಪ್ರಪಂಚದಲ್ಲಿ ಸಂತಸ ಹರಡಬೇಕು, ಇದನ್ನು ನಾನು ನಂಬುತ್ತೇನೆ ಎಂದು ಲಾವಣ್ಯ ಮಾತನಾಡಿದ್ದರು.

    ಇನ್ನೂ ಈಗಲೂ ಈ ವಿಚಿತ್ರ ಕಾಯಿಲೆಯಿಂದ ನಟಿ ಬಳಲುತ್ತಿದ್ದಾರಾ.? ಅಥವಾ ಗುಣಮುಖರಾಗಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಮೊದಲೇ ಶ್ರೀಜಾ, ನಿಹಾರಿಕಾ ಬದುಕು ಡಿವೋರ್ಸ್ ಪಡೆಯುವ ಮೂಲಕ ಮೂರಾ ಬಟ್ಟೆಯಾಗಿದೆ. ವರುಣ್- ಲಾವಣ್ಯ ಜೋಡಿಯ ಮಧ್ಯೆ ಈ ವಿಚಿತ್ರ ಕಾಯಿಲೆ ವಿಷ್ಯವಾಗಿ ಮದುವೆ ಬ್ರೇಕಪ್ ಆಗುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಲ್ಯಾಣ್‌ ದೇವ್‌ ಮಾಡಿದ ಪೋಸ್ಟ್‌ನಿಂದ ಬಯಲಾಯ್ತು ಶ್ರೀಜಾ ಜೊತೆಗಿನ ಡಿವೋರ್ಸ್‌ ಗುಟ್ಟು

    ಕಲ್ಯಾಣ್‌ ದೇವ್‌ ಮಾಡಿದ ಪೋಸ್ಟ್‌ನಿಂದ ಬಯಲಾಯ್ತು ಶ್ರೀಜಾ ಜೊತೆಗಿನ ಡಿವೋರ್ಸ್‌ ಗುಟ್ಟು

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆಯಲ್ಲಿ ಸದ್ಯ ವರುಣ್ ತೇಜ್- ಲಾವಣ್ಯ (Lavanya) ಎಂಗೇಜ್‌ಮೆಂಟ್ ಆಗಿರುವ ಖುಷಿ ಮನೆ ಮಾಡಿದೆ. ಮತ್ತೆ ಮೆಗಾಫ್ಯಾಮಿಲಿ ಬಗ್ಗೆ ಹೊಸ ವಿಚಾರವೊಂದು ಸೌಂಡ್ ಮಾಡುತ್ತಿದೆ. ಚಿರಂಜೀವಿ ಪುತ್ರಿ ಶ್ರೀಜಾ (Sreeja) 2ನೇ ಮದುವೆ ಕೂಡ ಸರಿಯಿಲ್ಲ. 2ನೇ ಪತಿ ಕಲ್ಯಾಣಗೂ (Kalyan Dev) ಕೂಡ ಡಿವೋರ್ಸ್ (Divorce) ನೀಡಿದ್ರಾ ಎಂಬ ಅನುಮಾನ ಶುರುವಾಗಿದೆ. ಇದನ್ನೂ ಓದಿ:ನಟಿ ತಮನ್ನಾ ಹಾಟ್‌ ಫೋಟೋಗೆ ಸ್ವೀಟ್‌ 16 ಎಂದ ನೆಟ್ಟಿಗರು

    ಶ್ರೀಜಾ ಅವರು ಚಿಕ್ಕ ವಯಸ್ಸಿನಲ್ಲೇ ಸಿರೀಶ್ ಭಾರಧ್ವಜ್ ಎನ್ನುವವರನ್ನು ಪ್ರೀತಿಸಿ ಓಡಿ ಹೋಗಿ ಮದುವೆಯಾಗಿದ್ದರು. ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದರೂ ಆ ಸಂಬಂಧವನ್ನು ತುಂಬಾ ಉಳಿಸಿಕೊಳ್ಳುವಲ್ಲಿ ಶ್ರೀಜಾ ಸೋತರು. ಮೊದಲ ಪತಿಗೆ ಡಿವೋರ್ಸ್ ನೀಡಿ ಮನೆಗೆ ಬಂದಿದ್ದ ಶ್ರೀಜಾ ಮತ್ತೆ 2ನೇ ಮದುವೆಯಾದರು. ಚಿರಂಜೀವಿ ಅವರೇ ಸೂಚಿಸಿದ, ಉದ್ಯಮಿ ಕಲ್ಯಾಣ್ ದೇವ್ ಜೊತೆ ಶ್ರೀಜಾ 2ನೇ ಬಾರಿ ಬೆಂಗಳೂರಿನಲ್ಲಿ ಮದುವೆಯಾದರು. ಆದರೆ 2ನೇ ಪತಿಯಿಂದನೂ ದೂರ ಆಗಿದ್ದರು. ಇದೀಗ ಕಲ್ಯಾಣ್ ದೇವ್ ಅವರಿಗೆ ಡಿವೋರ್ಸ್ ನೀಡಿರೋದು ಖಚಿತ ಎಂಬುದಕ್ಕೆ ನಟ ಚಿರಂಜೀವಿ ಕುಟುಂಬದಿಂದ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಆದರೆ ಈಗ ಕಲ್ಯಾಣ ದೇವ್ ಮಾಡಿರುವ ಪೋಸ್ಟ್‌ನಿಂದ ಡಿವೋರ್ಸ್ ಆಗಿರೋದು ಖಚಿತ ಎಂದು ಹೇಳಲಾಗುತ್ತಿದೆ.

    ನಟ ಕಲ್ಯಾಣ್ ದೇವ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಮಗಳ ಜೊತೆ ಕಾಲ ಕಳೆದ ವೀಡಿಯೋ ಶೇರ್ ಮಾಡಿ ಭಾವುಕರಾಗಿದ್ದಾರೆ. ವಾರಕ್ಕೆ 4 ಗಂಟೆ ಮಾತ್ರ ಮಗಳ ಜೊತೆ ಸಮಯ ಕಳೆಯಲು ಸಿಗುತ್ತೆ ಎಂದು ಹೇಳಿದ್ದಾರೆ. ಮತ್ತೊಂದು ವಿಡಿಯೋ ಶೇರ್ ಮಾಡಿ ನಾವು ಮತ್ತೆ ಭೇಟಿಯಾಗುವವರೆಗೂ, ನಿನ್ನ ಈ ವಿಶೇಷ ನೆನಪುಗಳು ಯಾವಾಗಲೂ ನಗುವನ್ನು ತರುತ್ತದೆ. ಮಿಸ್ ಯು ನವ್ವು ಎಂದು ಬರೆದುಕೊಂಡಿದ್ದಾರೆ.

    ಕಲ್ಯಾಣ್ ದೇವ್ ಅವರು ಈ ರೀತಿ ಪೋಸ್ಟ್ ಮಾಡ್ತಿದ್ದಂತೆ ನೆಟ್ಟಿಗರ ಚರ್ಚೆಗೆ ಶ್ರೀಜಾ ದಾಂಪತ್ಯದ ವಿಚಾರ ಸುದ್ದಿಯಾಗುತ್ತಿದೆ. ಇತ್ತೀಚಿಗೆ ವರುಣ್- ಲಾವಣ್ಯ ಎಂಗೇಜ್‌ಮೆಂಟ್‌ಗೆ ಶ್ರೀಜಾ ಪತಿ ಕಲ್ಯಾಣ್ ದೇವ್ ಆಗಲಿ, ನಿಹಾರಿಕಾ (Niharika) ಪತಿ ಚೈತನ್ಯ ಆಗಲಿ ಬಂದಿರಲಿಲ್ಲ. ಹಾಗಾಗಿ ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಇಬ್ಬರೂ ಅಧಿಕೃತವಾಗಿ ಹೇಳುವವರೆಗೂ ಕಾದುನೋಡಬೇಕಿದೆ.

  • ಮೆಗಾಸ್ಟಾರ್ ಕುಟುಂಬಕ್ಕೆ ಸೊಸೆಯಾಗಿ ಬರುತ್ತಿರುವ ಲಾವಣ್ಯ ಜಾತಿ ಬಗ್ಗೆ ತಲೆಕೆಡಿಸಿಕೊಂಡ ಫ್ಯಾನ್ಸ್

    ಮೆಗಾಸ್ಟಾರ್ ಕುಟುಂಬಕ್ಕೆ ಸೊಸೆಯಾಗಿ ಬರುತ್ತಿರುವ ಲಾವಣ್ಯ ಜಾತಿ ಬಗ್ಗೆ ತಲೆಕೆಡಿಸಿಕೊಂಡ ಫ್ಯಾನ್ಸ್

    ಮೆಗಾಸ್ಟಾರ್ ಕುಟುಂಬದ ಕುಡಿ ವರುಣ್ ತೇಜ್- ನಟಿ ಲಾವಣ್ಯ ತ್ರಿಪಾಠಿ (Lavanya Tripati) ಜೋಡಿ ತಮ್ಮ 7 ವರ್ಷದ ಪ್ರೀತಿಗೆ ಉಂಗುರ ಮುದ್ರೆ ಒತ್ತುವ ಮೂಲಕ ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟಿದ್ದರು. ಜೂನ್ 9ರಂದು ವರುಣ್ (Varun Tej) ಜೊತೆ ಲಾವಣ್ಯ ಅದ್ದೂರಿಯಾಗಿ ನಿಶ್ಚಿತಾರ್ಥ (Engagement) ಮಾಡಿಕೊಂಡರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಿದ್ದಂತೆ ಈಗ ಹೊಸ ಚರ್ಚೆಯೊಂದು ಶುರುವಾಗುತ್ತಿದೆ. ಲಾವಣ್ಯ ಅವರ ಜಾತಿ ಯಾವುದು ಎನ್ನುವ ಕುತೂಹಲ ಫ್ಯಾನ್ಸ್‌ಗೆ ಹೆಚ್ಚಾಗಿದೆ.

    ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, 2016ರಲ್ಲಿ ಬಳಿಕ 2017ರಲ್ಲಿ ಇಬ್ಬರು ‘ಮಿಸ್ಟರ್’ (Mister) ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್ (Varun Tej), ಲಾವಣ್ಯ ತ್ರಿಪಾಠಿ (Lavanya Tripathi) ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದಾರೆ. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ, ಅಂತರಿಕ್ಷಂ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು. ಅಲ್ಲಿಂದ ಇಬ್ಬರ ಡೇಟಿಂಗ್ ಸುದ್ದಿ ಚಾಲ್ತಿಗೆ ಬಂದಿತ್ತು.

    ಆಗಾಗ ವರುಣ್, ಲಾವಣ್ಯ ಇಬ್ಬರೂ ಹಲವು ಕಾರ್ಯಕ್ರಮಗಳು ಹಾಗೂ ಪಾರ್ಟಿಗಳಲ್ಲಿ ಭೇಟಿಯಾಗುತ್ತಿದ್ದರು. ಇದು ಗಾಳಿಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ವರುಣ್, ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸಿದ್ದರು. ಹೀಗಾಗಿ ಡಿಸೆಂಬರ್ 15 ಲಾವಣ್ಯ ಹುಟ್ಟುಹಬ್ಬದಂದು ಮದುವೆಗೆ ಪ್ರಪೋಸ್ ಮಾಡಿದ್ದರು. ಎರಡೂ ಮನೆಯವರು ಒಪ್ಪಿದರೂ, ಈ ಜೋಡಿ ಮದುವೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಇದನ್ನೂ ಓದಿ:ಖ್ಯಾತ ಕಥೆಗಾರ ಟಿ.ಕೆ. ದಯಾನಂದ್ ಬರೆದ ಕಥೆಯೇ ‘ಟೋಬಿ’ ಸಿನಿಮಾ

    ಯಂಗ್ ಜೋಡಿ ವರುಣ್- ಲಾವಣ್ಯ ಅವರು ಹೈದರಾಬಾದ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ಎಂಗೇಜ್ ಆಗಿದ್ದಾರೆ. ಜೂನ್ 9ರ ರಾತ್ರಿ ಎರಡು ಕುಟುಂಬದವರು ಆಪ್ತರಷ್ಟೇ ಭಾಗಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ಅವರ ಇಡೀ ಕುಟುಂಬ, ಅಲ್ಲು ಅರ್ಜುನ್ ಫ್ಯಾಮಿಲಿ, ವೆಂಕಟೇಶ್ವರ ರಾವ್ ಕುಟುಂಬದವರಷ್ಟೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಸದ್ಯ ಎಂಗೇಜ್ ಆಗಿರುವ ಈ ಜೋಡಿ ಈ ವರ್ಷದ ಅಂತ್ಯದಲ್ಲಿ ಮದುವೆ ಆಗಲಿದ್ದಾರೆ. ಎಂಗೇಜ್‌ಮೆಂಟ್‌ನಲ್ಲಿ ನಟಿ ಲಾವಣ್ಯ ಗಿಳಿ ಹಸಿರು ಸೀರೆಯಲ್ಲಿ ಮಿಂಚಿದ್ರೆ, ವರುಣ್ ಗೋಲ್ಡನ್ ಬಣ್ಣದ ಶೆರ್ವಾನಿಯಲ್ಲಿ ಹೈಲೆಟ್ ಆಗಿದ್ದಾರೆ. ನನ್ನ ಪ್ರೀತಿಯನ್ನ 2016ರಲ್ಲಿಯೇ ಕಂಡುಕೊಂಡಿದ್ದೆ ಎಂದು ನಟಿ ನಿಶ್ಚಿತಾರ್ಥದ ಫೋಟೋ ಸಮೇತ ಪೋಸ್ಟ್ ಮಾಡಿದ್ದರು.

    ನಿಶ್ಚಿತಾರ್ಥದ ಬೆನ್ನಲ್ಲೇ ಚಿರು ಕುಟಂಬಕ್ಕೆ ಸೊಸೆಯಾಗಿ ಬರುತ್ತಿರುವ ಲಾವಣ್ಯಾ ತ್ರಿಪಾಠಿ ಅವರ ಜಾತಿಗಾಗಿ ಹುಡುಕಾಟ ಪ್ರಾರಂಭವಾಗಿದೆ. ಇಂಟರ್‌ನೆಟ್‌ನಲ್ಲಿ ಲಾವಣ್ಯಾ ಜಾತಿಯ ಬಗ್ಗೆ ಹುಡುಕಾಟ ಹೆಚ್ಚಾಗಿದೆ. ಉತ್ತರ ಪ್ರದೇಶ ಮೂಲದ ನಟಿ ಲಾವಣ್ಯಾ ಚಿರು ಕುಟುಂಬದ ಸೊಸೆಯಾಗಿ ಬರ್ತಿದ್ದಾರೆ ಎಂದರೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಹಾಗಾಗಿ ಜಾತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.

    ಅಂದಹಾಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಲಾವಣ್ಯಾ ಜಾತಿ ಬಗ್ಗೆ ಮಾತನಾಡಿದ್ದರು. ತನಗೆ ಜಾತಿ (Caste) ಮುಖ್ಯವಲ್ಲ ಎಂದು ಹೇಳಿದ್ದರು. ಒಬ್ಬ ವ್ಯಕ್ತಿ ತನ್ನ ಕಾರ್ಯಗಳಿಂದ ಶ್ರೇಷ್ಠನಾಗುತ್ತಾನೆ ಅವರ ಜಾತಿಯಿಂದ ಅಲ್ಲ ಎಂದು ನಾನು ನಂಬಿದ್ದೇನೆ ಎಂದು ನಟಿ ಹೇಳಿದ್ದರು. ಹಾಗಾಗಿ ಲಾವಣ್ಯ ಜಾತಿಯ ಬಗ್ಗೆ ಇದೀಗ ಕುತೂಹಲ ಹೆಚ್ಚಾಗಿದೆ.

  • ವರುಣ್, ಲಾವಣ್ಯ ನಿಶ್ಚಿತಾರ್ಥದಲ್ಲಿ ನಿಹಾರಿಕಾ ಪತಿ ಗೈರು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

    ವರುಣ್, ಲಾವಣ್ಯ ನಿಶ್ಚಿತಾರ್ಥದಲ್ಲಿ ನಿಹಾರಿಕಾ ಪತಿ ಗೈರು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

    ಮೆಗಾಸ್ಟಾರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಜೂನ್ 9ಕ್ಕೆ ವರುಣ್ ತೇಜ್- ಲಾವಣ್ಯ(Lavanya) ಎಂಗೇಜ್‌ಮೆಂಟ್ ಅದ್ದೂರಿಯಾಗಿ ನಡೆಯಿತು. ಕುಟುಂಬಸ್ಥರು, ಆಪ್ತರಿಗಷ್ಟೇ ಇದ್ದ ಆಹ್ವಾನದಲ್ಲಿ ನಟ ಚಿರಂಜೀವಿ ಅವರ ಅಳಿಯ ಚೈತನ್ಯ ಜಿವಿ ಗೈರಾಗಿದ್ದು, ನಿಹಾರಿಕಾ(Niharika) ಡಿವೋರ್ಸ್ (Divorce) ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

    ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, 2016ರಲ್ಲಿ ಬಳಿಕ 2017ರಲ್ಲಿ ಇಬ್ಬರು ಮಿಸ್ಟರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್, ಲಾವಣ್ಯ ತ್ರಿಪಾಠಿ ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು. ಇದನ್ನೂ ಓದಿ:ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು

    ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದಾರೆ. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ, ಅಂತರಿಕ್ಷಂ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು. ಅಲ್ಲಿಂದ ಎಂಗೇಜ್‌ಮೆಂಟ್ ಆಗುವವರೆಗೂ ಪ್ರೀತಿಯ ಬಗ್ಗೆ ಎಲ್ಲೂ ಈ ಜೋಡಿ ರಿಯಾಕ್ಟ್ ಮಾಡಿರಲಿಲ್ಲ. ಇದೀಗ ವರುಣ್-ಲಾವಣ್ಯ ಅವರ ಎಂಗೇಜ್‌ಮೆಂಟ್‌ನಲ್ಲಿ ನಿಹಾರಿಕಾ ಪತಿ ಚೈತನ್ಯ ಗೈರಾಗಿರೋದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

    ಈ ದಿನಕ್ಕಾಗಿ ಕಾಯುತ್ತಿದ್ದೆ, ನನ್ನ ಕುಟುಂಬಕ್ಕೆ ಸ್ವಾಗತ ಅಂತಾ ಸಹೋದರ ವರುಣ್ (Varun Tej) ಮತ್ತು ಭಾವಿ ಅತ್ತಿಗೆ ಜೊತೆ ಖುಷಿಯಿಂದ ಪೋಸ್ ಕೊಟ್ಟಿರುವ ಫೋಟೋವನ್ನ ನಟಿ ನಿಹಾರಿಕಾ ಪೋಸ್ಟ್‌ ಮಾಡಿದ್ದಾರೆ. ಈ ಫೋಟೋ ಅಪ್‌ಲೋಡ್ ಮಾಡ್ತಿದ್ದಂತೆ ಚೈತನ್ಯ ಎಲ್ಲಿ ಎಂದು ನಟಿ ಕಾಮೆಂಟ್ಸ್‌ಗಳ ಮೂಲಕ ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ.

    ವರುಣ್ ನಿಶ್ಚಿತಾರ್ಥದ ಸಂಭ್ರಮದಲ್ಲಿ ಚೈತನ್ಯ ಮಿಸ್ಸಿಂಗ್ ಆಗಿರೋದು ನಿಹಾರಿಕಾ ಜೊತೆಗಿನ ಡಿವೋರ್ಸ್ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಮೂಲಗಳ ಪ್ರಕಾರ, ನಿಹಾರಿಕಾ- ಚೈತನ್ಯ (Chaitanya) ಡಿವೋರ್ಸ್ ಪಡೆದಿರುವುದು ನಿಜ. ಹಾಗಾಗಿ ಇದೀಗ ನಿಹಾರಿಕಾ, ಆಕ್ಟಿಂಗ್-ನಿರ್ಮಾಣ ಅಂತಾ ಬ್ಯುಸಿಯಾಗಿದ್ದಾರೆ. ಮೆಗಾಸ್ಟಾರ್ ಕುಟುಂಬದಲ್ಲಿ ಮಕ್ಕಳಾದ ಶ್ರೀಜಾ, ನಿಹಾರಿಕಾ ಡಿವೋರ್ಸ್ ವಿಚಾರ ಸದ್ಯ ಟಾಲಿವುಡ್ ಹಾಟ್ ಟಾಪಿಕ್ ಆಗಿದೆ.

  • ಮೆಗಾ ಪ್ರಿನ್ಸ್ ವರುಣ್ ತೇಜ್- ಲಾವಣ್ಯ ತ್ರಿಪಾಠಿ ಗ್ರ್ಯಾಂಡ್‌ ಎಂಗೇಜ್‌ಮೆಂಟ್

    ಮೆಗಾ ಪ್ರಿನ್ಸ್ ವರುಣ್ ತೇಜ್- ಲಾವಣ್ಯ ತ್ರಿಪಾಠಿ ಗ್ರ್ಯಾಂಡ್‌ ಎಂಗೇಜ್‌ಮೆಂಟ್

    ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಹಲವು ವರ್ಷಗಳ ಪ್ರೀತಿಗೆ ಟಾಲಿವುಡ್‌ನ ಯಂಗ್ ಕಪಲ್ ವರುಣ್ ತೇಜ್- ಲಾವಣ್ಯ ತ್ರಿಪಾಠಿ (Lavanya Tripathi) ಉಂಗುರದ ಮುದ್ರೆ ಒತ್ತಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೂ ಈ ಜೋಡಿ ಬ್ರೇಕ್ ಹಾಕಿದ್ದಾರೆ. ಸದ್ಯ ಯಂಗ್ ಜೋಡಿಯ ಎಂಗೇಜ್‌ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, 2016ರಲ್ಲಿ ಬಳಿಕ 2017ರಲ್ಲಿ ಇಬ್ಬರು ‘ಮಿಸ್ಟರ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್, ಲಾವಣ್ಯ ತ್ರಿಪಾಠಿ ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು.

    ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದಾರೆ. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ, ‘ಅಂತರಿಕ್ಷಂʼ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು.ಅಲ್ಲಿಂದ ಎಂಗೇಜ್‌ಮೆಂಟ್ ಆಗುವವರೆಗೂ ರೂಮರ್ ಕಪಲ್ ಆಗಿದ್ದರು. ಇದನ್ನೂ ಓದಿ:4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಸುಶ್ಮಿತಾ ಸೇನ್ ಸಹೋದರ ರಾಜೀವ್

    ಆಗಾಗ ವರುಣ್, ಲಾವಣ್ಯ ಇಬ್ಬರೂ ಕಾರ್ಯಕ್ರಮಗಳು ಹಾಗೂ ಪಾರ್ಟಿಗಳಲ್ಲಿ ಭೇಟಿಯಾಗುತ್ತಿದ್ದರು. ಇದು ಗಾಳಿಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ವರುಣ್, ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸಿದ್ದರು. ಹೀಗಾಗಿ ಡಿಸೆಂಬರ್ 15 ಲಾವಣ್ಯ ಹುಟ್ಟುಹಬ್ಬದಂದು ಮದುವೆಗೆ ಪ್ರಪೋಸ್ ಮಾಡಿದ್ದರು. ಎರಡೂ ಮನೆಯವರು ಒಪ್ಪಿದರೂ, ಈ ಜೋಡಿ ಮದುವೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ.

    ಯಂಗ್ ಜೋಡಿ ವರುಣ್- ಲಾವಣ್ಯ ಅವರು ಹೈದರಾಬಾದ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ಎಂಗೇಜ್ ಆಗಿದ್ದಾರೆ. ಜೂನ್ ೯ರ ರಾತ್ರಿ ಎರಡು ಕುಟುಂಬದವರು ಆಪ್ತರಷ್ಟೇ ಭಾಗಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ಅವರ ಇಡೀ ಕುಟುಂಬ, ಅಲ್ಲು ಅರ್ಜುನ್ ಫ್ಯಾಮಿಲಿ, ವೆಂಕಟೇಶ್ವರ ರಾವ್ ಕುಟುಂಬದವರಷ್ಟೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಸದ್ಯ ಎಂಗೇಜ್ ಆಗಿರುವ ಈ ಜೋಡಿ ಈ ವರ್ಷದ ಅಂತ್ಯದಲ್ಲಿ ಮದುವೆ ಆಗಲಿದ್ದಾರೆ.

     

    View this post on Instagram

     

    A post shared by Lavanya tripathi (@itsmelavanya)

    ಎಂಗೇಜ್‌ಮೆಂಟ್‌ನಲ್ಲಿ (Engagement) ನಟಿ ಲಾವಣ್ಯ ಗಿಳಿ ಹಸಿರು ಸೀರೆಯಲ್ಲಿ ಮಿಂಚಿದ್ರೆ, ವರುಣ್ ಗೋಲ್ಡನ್ ಬಣ್ಣದ ಶೆರ್ವಾನಿಯಲ್ಲಿ ಹೈಲೆಟ್ ಆಗಿದ್ದಾರೆ. ನನ್ನ ಪ್ರೀತಿಯನ್ನ 2016ರಲ್ಲಿಯೇ ಕಂಡುಕೊಂಡಿದ್ದೆ ಎಂದು ನಟಿ ನಿಶ್ಚಿತಾರ್ಥದ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ. ಹೊಸ ಜೋಡಿಗೆ ಫ್ಯಾನ್ಸ್‌ ಶುಭಕೋರಿದ್ದಾರೆ.