Tag: Megastar Chiranjeevi

  • ಮೆಗಾಸ್ಟಾರ್ ಚಿರಂಜೀವಿ ಭೇಟಿ ಮಾಡಿದ ಕನ್ನಡ ನಟ  ಅನೀಶ್

    ಮೆಗಾಸ್ಟಾರ್ ಚಿರಂಜೀವಿ ಭೇಟಿ ಮಾಡಿದ ಕನ್ನಡ ನಟ ಅನೀಶ್

    ಮರ್ಶಿಯಲ್ ಸಿನಿಮಾ ಹೀರೋ ಆಗಿ ಮಿಂಚಿರುವ ನಟ, ನಿರ್ದೇಶಕ ಅನೀಶ್ (Anish Tejaswar) ರೋಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸದ್ಯ ‘ಆರಾಮ್ ಅರವಿಂದ್ ಸ್ವಾಮಿ’ಆಗಿ ತೆರೆ ಮೇಲೆ ನಯಾ ಅವತಾರದಲ್ಲಿ ಬರಲು ರೆಡಿಯಾಗಿರುವ ಅವರು,  ಧಿಡೀರನೇ ಟಾಲಿವುಡ್ ಮೆಗಾ ಸ್ಟಾರ್ ಚಿರಜೀವಿ (Megastar Chiranjeevi) ಜೊತೆ ಪ್ರತ್ಯಕ್ಷರಾಗಿದ್ದಾರೆ.

    ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಗೆ ಭಜನರಾಗಿರುವ ಮೆಗಾಸ್ಟಾರ್ ಚಿರಂಜೀವಿ ಅವರನ್ನು ನಟ ಅನೀಶ್ ಭೇಟಿಯಾಗಿದ್ದಾರೆ (Meets), ಇಂದು ಚಿರು  ಹೈದ್ರಾಬಾದ್ ನಿವಾಸದಲ್ಲಿ ಭೇಟಿಯಾಗಿರುವ ಅವರು, ಮೆಗಾಸ್ಟಾರ್ ಗೆ ಶುಭಾಶಯ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಬಹುನಿರೀಕ್ಷಿತ ಆರಾಮ್ ಅರವಿಂದ ಸ್ವಾಮಿ ಚಿತ್ರದ ಕಂಟೆಂಟ್ ತೋರಿಸಿದ್ದಾರೆ. ಸಿನಿಮಾದ ಕಂಟೆಂಟ್ ನೋಡಿ ಮೆಚ್ಚಿಕೊಂಡ ಚಿರಂಜೀವಿ ಅನೀಶ್ ಚಿತ್ರಕ್ಕೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ.

    ಅನೀಶ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾಗಿದ್ದ  ಆರಾಮ್ ಅರವಿಂದ ಸ್ವಾಮಿ ಟೈಟಲ್ ಟ್ರ್ಯಾಕ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅರ್ಜುನ್ ಜನ್ಯ ಮ್ಯೂಸಿಕ್, ನಾಗಾರ್ಜುನ್ ಶರ್ಮಾ ಸಾಹಿತ್ಯದ ಹಾಡಿಗೆ ಬೊಂಬಾಟ್ ಆಗಿ ಅನೀಶ್ ಕುಣಿದು ಕುಪ್ಪಳಿಸಿದ್ದರು. ಬಾಬಾ ಭಾಸ್ಕರ್ ಮಾಸ್ಟರ್ ಕೊರಿಯೋಗ್ರಾಫಿಯಲ್ಲಿ ಮೂಡಿಬಂದಿದ್ದ ಟೈಟಲ್ ಟ್ರ್ಯಾಕ್ 1 ಕೋಟಿಗೂ ಅಧಿಕ ವೀವ್ಸ್ ಪಡೆದುಕೊಂಡಿದೆ.

    ತನ್ನ ಪ್ರಮೋಷನ್ ಕಂಟೆಂಟ್ ನಿಂದಲೇ ಈಗಾಗಲೇ ಸದ್ದು ಮಾಡುತ್ತಿರುವ ’ಆರಾಮ ಅರವಿಂದ ಸ್ವಾಮಿ’ ಸಿನಿಮಾಗೆ ಅಭಿಷೇಕ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ನಮ್ ಗಣಿ ಬಿಕಾಂ ಪಾಸ್, ಗಜಾನನ ಅಂಡ್ ಗ್ಯಾಂಗ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೂರನೇ ಸಿನಿಮಾವಿದು. ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ’ಆರಾಮ ಅರವಿಂದ ಸ್ವಾಮಿ’ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದ್ದಾನೆ.

     

    ಅಕಿರ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನ ಚಿತ್ರಕ್ಕಿದೆ.

  • ಮೆಗಾಸ್ಟಾರ್ ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ

    ಮೆಗಾಸ್ಟಾರ್ ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ

    ಣರಾಜ್ಯೋತ್ಸವದ ಮುನ್ನಾ ದಿನ 2024ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು (Padma Awards 2024) ಪ್ರಕಟಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ದೊರೆತಿದೆ. ಸಾಧಕರಿಗೆ ಪದ್ಮ ವಿಭೂಷಣ, ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ. ಅದರಂತೆ ಹಲವು ವರ್ಷಗಳಿಂದ ಕಲಾ ಸೇವೆ ಮಾಡಿರುವ ಮೆಗಾಸ್ಟಾರ್ ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ. ಇದನ್ನೂ ಓದಿ:ಕರ್ನಾಟಕದ ಇಬ್ಬರು ಸೇರಿ 34 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ

    ಕಲೆ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಭಾಜನರಾದವರು

    1. ವೈಜಯಂತಿಮಾಲಾ ಬಾಲಿ (ತಮಿಳುನಾಡು)

    2.ಮೆಗಾಸ್ಟಾರ್ ಚಿರಂಜೀವಿ (ಆಂಧ್ರಪ್ರದೇಶ)

    3.ಪದ್ಮ ಸುಬ್ರಹ್ಮಣ್ಯಂ (ತಮಿಳುನಾಡು)

    ಕಲೆ ಕ್ಷೇತ್ರದಲ್ಲಿ ಪದ್ಮ ಭೂಷಣ ಪ್ರಶಸ್ತಿ ಭಾಜನರಾದವರು

    ಮಿಥುನ್ ಚಕ್ರವರ್ತಿ

    ದತ್ತಾತ್ರೇಯ ಅಂಬಾದಾಸ್ ಮೇಲು

    ಉಷಾ ಉತ್ತುಪ್

    ತಮಿಳಿನ ನಟ ವಿಜಯಕಾಂತ್

  • ಸೋಲಿನ ಸುಳಿಯಲ್ಲಿ ಚಿರಂಜೀವಿ, ಹೊಸ ನಿರ್ಧಾರ ಕೈಗೊಂಡ ಮೆಗಾಸ್ಟಾರ್

    ಸೋಲಿನ ಸುಳಿಯಲ್ಲಿ ಚಿರಂಜೀವಿ, ಹೊಸ ನಿರ್ಧಾರ ಕೈಗೊಂಡ ಮೆಗಾಸ್ಟಾರ್

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕೊನೆಗೂ ಮಣಿದಿದ್ದಾರೆ. ಒಂದರ ಹಿಂದೊಂದು ಸಿನಿಮಾ ಸೋಲುತ್ತಿವೆ. ಈಗಲೂ ಅದೇ ರೋಮ್ಯಾನ್ಸ್, ಇಬ್ಬಿಬ್ಬರ ನಾಯಕಿಯರ ಜೊತೆ ಸುತ್ತಾಟ ಡ್ಯುಯೇಟ್ ಸಾಂಗ್ ಬೇಕಿಲ್ಲ ಎಂದು ಜನರು ತೀರ್ಮಾನಿಸಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟಿದ್ದಾರೆ ಮೆಗಾಸ್ಟಾರ್. ಹಾಗಿದ್ದರೆ ಅದೇನು ಬದಲಾವಣೆ ಮಾಡಿಕೊಂಡರು ಚಿರಂಜೀವಿ? ರಜನಿಕಾಂತ್ ಹಾಗೂ ಕಮಲ್‌ಹಾಸನ್ ಹಾದಿಯನ್ನೇಕೆ ತುಳಿಯಲು ಮನಸು ಮಾಡಿದರು? ಇಲ್ಲಿದೆ ಮಾಹಿತಿ.

    ಒಂದು ಕಾಲದಲ್ಲಿ ಚಿರಂಜೀವಿ ಮುಟ್ಟಿದ್ದೆಲ್ಲ ಚಿನ್ನ. ಮಾಡಿದ ಸಿನಿಮಾಗಳೆಲ್ಲ ಸೂಪರ್‌ಹಿಟ್. ಚಿರಂಜೀವಿ (Chiranjeevi) ಸಿನಿಮಾ ರಿಲೀಸ್ ಆಗಿ ಒಂದು ವಾರ ಆಯ್ತು, ಇನ್ನೂ ನೋಡಿಲ್ವಾ? ಹೀಗೆ ಕೇಳುತ್ತಿದ್ದರು ಅಖಂಡ ಆಂಧ್ರದ ಜನತೆ. ಮೊದಲ ಬಾರಿ ಕೋಟಿ ರುಪಾಯಿ ಸಂಭಾವನೆ ಪಡೆದು ಇಂಡಿಯಾ ಇತಿಹಾಸದಲ್ಲಿ ಹೊಸ ಧಮಾಕಾ ಸೃಷ್ಟಿಸಿದ್ದರು. ಆದರೆ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಆ ಖಬರ್ ಕಾಣುತ್ತಿಲ್ಲ. ಖೈದಿ ನಂ.150 ಹಿಟ್ ಆಯಿತು. ಆದರೆ ಇತ್ತೀಚಿನ ಸಿನಿಮಾ ಮಕಾಡೆ ಮಲಗುತ್ತಿವೆ. ಆಚಾರ್, ವಾಲ್ಟರ್ ವೀರಯ್ಯ, ಗಾಡ್‌ಫಾದರ್ ಮತ್ತು ಭೋಳಾ ಶಂಕರ್. ಇದೆಲ್ಲ ಚಿರಂಜೀವಿ ನಿದ್ದೆ ಕೆಡಿಸಿವೆ. ಪರಿಣಾಮ, ಜೈಲರ್ ರಜನಿಕಾಂತ್ (Rajanikanth)- ವಿಕ್ರಮ್ ಕಮಲ್ ಹಾಸನ್ (Kamal Haasan) ಹಾದಿ ಹಿಡಿದಿದ್ದಾರೆ ಮೆಗಾಸ್ಟಾರ್. ಇದನ್ನೂ ಓದಿ:ಕಾವೇರಿ ಹೋರಾಟಕ್ಕೆ ಬೆಂಬಲಿಸಿ ಮಂಡ್ಯ ಚಿತ್ರಮಂದಿರಗಳು ಬಂದ್

    ಚಿರಂಜೀವಿ ಅಭಿನಯದ 157 ಸಿನಿಮಾ ಮಹೂರ್ತಕ್ಕೆ ಸಜ್ಜಾಗಿದೆ. ಇದನ್ನು ವಸಿಷ್ಠ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಮೂವರು ನಾಯಕಿಯರಿದ್ದಾರೆ. ಐಶ್ವರ್ಯ ರೈ(Aishwarya Rai), ಅನುಷ್ಕಾ ಶೆಟ್ಟಿ- ಮೃಣಾಲ್ ಠಾಕೂರ್ (Mrunal Thakur) ಸಿನಿಮಾದ ಭಾಗವಾಗ್ತಿದ್ದಾರೆ.

    ಆದರೆ ಮೂವರಿದ್ದರೂ ಚಿರು ರೊಮ್ಯಾನ್ಸ್ ಮಾಡಲ್ಲ ಡ್ಯುಯೇಟ್ ಹಾಡಲ್ಲ. ಕಾರಣ ತಮ್ಮ ವಯಸ್ಸಿಗೆ ತಕ್ಕ ಪಾತ್ರ ಮಾಡುತ್ತಿದ್ದಾರೆ. ಫೈಟಿಂಗ್ ಹಾಡು ಇದ್ದರೂ ಅದು ಸಿಂಗಲ್ ಸಿಂಗಲ್. ದಶಕಗಳ ಹಿಂದೆ ಬಂದ ಜಗದೇಕವೀರುಡು ಅತಿಲೋಕ ಸುಂದರಿ ಸಿನಿಮಾದಂತೆ ಫಿಕ್ಷನ್ ಕತೆ. ಅದನ್ನು ಅದ್ದೂರಿಯಾಗಿ ಮಾಡಲಾಗುತ್ತಿದೆ. ಚಿರುಜೀವಿ ಹೊಸ ನಿರ್ಣಯ ಅವರ ಗೆಲುವಿಗೆ ಕಾರಣವಾಗುತ್ತಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೊಂದು ಬಿಗ್ ಪ್ರಾಜೆಕ್ಟ್ ಒಪ್ಪಿಕೊಂಡ ಅನುಷ್ಕಾ ಶೆಟ್ಟಿ

    ಮತ್ತೊಂದು ಬಿಗ್ ಪ್ರಾಜೆಕ್ಟ್ ಒಪ್ಪಿಕೊಂಡ ಅನುಷ್ಕಾ ಶೆಟ್ಟಿ

    ರಾವಳಿ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಸದ್ಯ ನಟಿಸಿದ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾ ಸಕ್ಸಸ್ ಆಗಿದೆ. ಈ ಬೆನ್ನಲ್ಲೇ ಮೆಗಾ ಪ್ರಾಜೆಕ್ಟ್‌ವೊಂದನ್ನ ನಟಿ ಒಪ್ಪಿಕೊಂಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿಗೆ (Megastar Chiranjeevi) ನಾಯಕಿಯಾಗಿ ಸ್ವೀಟಿ ಸೆಲೆಕ್ಟ್ ಆಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟಿ ಸಿಹಿಸುದ್ದಿ ಕೊಟ್ಟಿದ್ದಾರೆ.

    ವರ್ಷಗಳ ನಂತರ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ (Miss Shetty Mr Polishetty) ಚಿತ್ರದ ಮೂಲಕ ಅನುಷ್ಕಾ ಶೆಟ್ಟಿ ಕಮ್ ಬ್ಯಾಕ್ ಆಗಿ ತೆರೆಯ ಮೇಲೆ ಕಮಾಲ್ ಮಾಡಿದ್ದಾರೆ. ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕೂಡ ಕಾಣುತ್ತಿದೆ. ಇದನ್ನೂ ಓದಿ:ಒಳ ಉಡುಪಿನಲ್ಲಿ ಫೋಟೋಶೂಟ್- ಟ್ರೋಲರ್ಸ್ ಬಳಿ ‘ಕೆಜಿಎಫ್’ ನಟಿ ಮನವಿ

    ಸದ್ಯ ಚಿರಂಜೀವಿ ನಟನೆಯ 157 ಚಿತ್ರಕ್ಕೆ ಅನುಷ್ಕಾ ಶೆಟ್ಟಿ ಹೀರೋಯಿನ್ ಎಂಬ ಸುದ್ದಿ ಸೌಂಡ್ ಮಾಡ್ತಿದೆ. ಕೆಲ ದಿನಗಳ ಹಿಂದೆ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾವನ್ನು ನೋಡಿ ತಂಡಕ್ಕೆ ಶುಭಕೋರಿದ್ದರು. ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಈಗ ಮೆಗಾಸ್ಟಾರ್‌ಗೆ ನಾಯಕಿಯಾಗುವ ಮೂಲಕ ಅನುಷ್ಕಾ ಫ್ಯಾನ್ಸ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಈ ಹಿಂದೆ ಸ್ಪಾಲಿನ್ (Stalin Film) ಎಂಬ ಸಿನಿಮಾದಲ್ಲಿ ಸ್ಪೆಷಲ್ ಹಾಡಿಗೆ ಮೆಗಾಸ್ಟಾರ್ ಜೊತೆ ಅನುಷ್ಕಾ ಹೆಜ್ಜೆ ಹಾಕಿದ್ದರು. ಬಳಿಕ ಸೈರಾ ನರಸಿಂಹ ರೆಡ್ಡಿ (Saira Narasimha Reddy) ಸಿನಿಮಾದಲ್ಲಿ ಝಾನ್ಸಿ ರಾಣಿಯಾಗಿ ನಟಿಸಿದ್ದರು. ಆದರೆ ಚಿರಂಜೀವಿ ಜೊತೆ ತೆರೆ ಹಂಚಿಕೊಂಡಿರಲಿಲ್ಲ. ಈಗ ಮೆಗಾಸ್ಟಾರ್ 157ನೇ ಚಿತ್ರದಲ್ಲಿ ಇಬ್ಬರು ಜೋಡಿಯಾಗಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ವಶಿಷ್ಠ ನಿರ್ದೇಶನ ಮಾಡ್ತಿದ್ದಾರೆ. ಯುವಿ ಕ್ರಿಯೇಷನ್ಸ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

    ಒಟ್ನಲ್ಲಿ ಬಾಹುಬಲಿ (Bahubali) ನಟಿ ಅನುಷ್ಕಾ ಗೆಲುವಿನ ಟ್ರ್ಯಾಕ್‌ನಲ್ಲಿರೋದು, ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ ನಟರನ್ನ ಫ್ಲಾಪ್‌ ಹೀರೋಸ್ ಎಂದು ಕರೆದು ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ವಿಜಯ್

    ಆ ನಟರನ್ನ ಫ್ಲಾಪ್‌ ಹೀರೋಸ್ ಎಂದು ಕರೆದು ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ವಿಜಯ್

    ವಿಜಯ್ ದೇವರಕೊಂಡ (Vijay Devarakonda) ಅಕ್ಷರಶಃ ಹೊಂಡಕ್ಕೆ ಬಿದ್ದಿದ್ದಾರೆ. ಖುಷಿ (Kushi) ಸಿನಿಮಾ ಇನ್ನೆನು ಬಿಡುಗಡೆಯಾಗಲಿದೆ. ಈ ಹೊತ್ತಲ್ಲಿ ರಜನಿ, ದಳಪತಿ ವಿಜಯ್ ಹಾಗೂ ಚಿರು ಭಕ್ತಗಣವನ್ನು ಕೆರಳಿಸಿದ್ದಾರೆ. ಫ್ಲಾಪ್ ಹೀರೋಸ್ ಎಂದು ಇನ್‌ಡೈರೆಕ್ಟಾಗಿ ಈ ಸ್ಟಾರ್‌ಗಳನ್ನು ಕರೆದಿದ್ದಾರೆ. ಏನಿದು ಸುದ್ದಿ? ಏನಾಗಲಿದೆ ದೇವರಕೊಂಡ ಖುಷಿ ಸಿನಿಮಾ? ನೋಡಿ.

    ಸುಮ್ಮನಿರಲಾದೆ ಇರುವೆ ಬಿಟ್ಟುಕೊಂಡರು ಅನ್ನೋದು ಇದಕ್ಕೇನೆ. ವಿಜಯ್ ಹಾಗೂ ಸಮಂತಾ ಅಭಿನಯದ ಖುಷಿ ಬಿಡುಗಡೆ ಹೊಸ್ತಿನಲ್ಲಿದೆ. ಸಿನಿಮಾ ಪ್ರಚಾರ ಮಾಡೋದು ಬಿಟ್ಟು. ಇನ್ಯಾರೋ ಹೀರೋಗಳನ್ನು ಎಳೆದು ತಂದರೆ ಅವರವರ ಫ್ಯಾನ್ಸ್ ಸುಮ್ಮನಿರುತ್ತಾರಾ? ಈ ಸ್ಟಾರ್‌ಗಳೆಲ್ಲ ಫ್ಲಾಪ್ ಸಿನಿಮಾ ಕೊಟ್ಟರೂ ನಾವು ಮುಚ್ಚಿಕೊಂಡು ನೋಡಬೇಕು ಎಂದಿರುವುದು ರಜನಿ, ವಿಜಯ್ ಹಾಗೂ ಚಿರು ಫ್ಯಾನ್ಸ್‌ಗೆ ಖಾರ ಕಲಿಸಿದಂತಾಗಿದೆ. ಏನಂದರು ವಿಜಯ್ ದೇವರಕೊಂಡ?

    ರಜನಿ(Rajanikanth), ವಿಜಯ್ (Thalapathy Vijay) ಹಾಗೂ ಚಿರಂಜೀವಿ (Megastar Chiranjeevi) ಹಲವಾರು ಫ್ಲಾಪ್ ಕೊಟ್ಟಿದ್ದಾರೆ. ಆರಾರು ಸಿನಿಮಾ ಸೋತರೂ ಜೈಲರ್ ರೀತಿ ಮತ್ತೆ ಹಿಟ್ ಕೊಟ್ಟು ಎದ್ದು ಬರುತ್ತಾರೆ. ಸೋಲು ಅವರನ್ನು ಕಂಗೆಡಿಸುವುದಿಲ್ಲ. ಅವರು ಸೂಪರ್‌ಸ್ಟಾರ್ಸ್. ಅವರ ಸಿನಿಮಾಗಳನ್ನು ಮುಚ್ಚಿಕೊಂಡು ನೋಡಬೇಕು.‌ ಇದನ್ನೂ ಓದಿ:ಚಂದ್ರಯಾನ ವ್ಯಂಗ್ಯ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

    ವಿಜಯ್ ಸತ್ಯ ಹೇಳಿದ್ದಾರೆ. ಆದರದನ್ನು ವಿವರಿಸಿದ ರೀತಿ ಫ್ಯಾನ್ಸ್ ಅರಗಿಸಿಕೊಂಡಿಲ್ಲ. ರಜನಿ, ವಿಜಯ್, ಚಿರು ಭಕ್ತಗಣ ಈ ಕಾರಣಕ್ಕೆ ಕೊಂಡ ವಿರುದ್ಧ ಕೆಂಡ ಕಾರುತ್ತಿದೆ. ಯಾವಾಗ ಫ್ಯಾನ್ಸ್ ಆಕ್ರೋಶ ಹೆಚ್ಚಾಯಿತೊ. ವಿಜಯ್ ಕ್ಷಮೆ ಕೇಳಿಲ್ಲ. ಯಾರಿಗೂ ತಲೆ ಕೆಡಿಸಿಕೊಳ್ಳಲ್ಲ ಎಂದು ಗಹಗಹಿಸಿದ್ದಾರೆ. ಖುಷಿ ಚಿತ್ರಕ್ಕೆ ಗತಿ ಕಾಣಿಸುತ್ತೇವೆ ತೊಡೆ ತಟ್ಟಿದೆ ಮೂರೂ ಸ್ಟಾರ್ಸ್ ಬಳಗ. ಲೈಗರ್ ಸೋಲು ಪಾಠ ಕಲಿಸಿಲ್ಲ ಈ ವ್ಯಕ್ತಿಗೆ. ಎಣಿಸಿ ಎಣಿಸಿ ಮೊಂಬತ್ತಿ ಇಡಿಸಿಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್‌ ಚಿರಂಜೀವಿ

    ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್‌ ಚಿರಂಜೀವಿ

    ಮೆಗಾ ಸ್ಟಾರ್ ಚಿರಂಜೀವಿ (Megastar Chiranjeevi) ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ(Knee Surgery) ಒಳಗಾಗಿದ್ದಾರೆ. ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಆಪರೇಷನ್ ಮಾಡಲಾಗಿದೆ. ಒಂದು ವಾರಗಳ ಕಾಲ ಅವರು ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಹೈದರಾಬಾದ್‌ಗೆ(Hydrabad) ಚಿರಂಜೀವಿ ವಾಪಸ್ ಬರಲಿದ್ದಾರೆ ಎಂದು ಸುದ್ದಿ ಆಗಿದೆ.

    ನಟ ಚಿರಂಜೀವಿ ಅವರಿಗೆ ಆಗಾಗ ಮೊಣಕಾಲು ನೋವು ಕಾಣಿಸಿಕೊಳ್ಳುತ್ತಿತ್ತು. ಆ ಕಾರಣದಿಂದ ಅವರು ಪರೀಕ್ಷೆ ಮಾಡಿಸಿದ್ದರು. ನೋವು ನಿವಾರಣೆಗಾಗಿ ಅವರು ಮೊಣಕಾಲಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಮೊಣಕಾಲು ಚಿಪ್ಪಿನಲ್ಲಿ ಇರುವ ಸೋಂಕನ್ನು ನಿವಾರಿಸುವ ಸಲುವಾಗಿ ಈ ಸರ್ಜರಿ ಮಾಡಲಾಗುತ್ತದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಇದನ್ನೂ ಓದಿ:ಮದುವೆ ನಂತರ ನೀರು ಬಿಸಿ ಮಾಡಿದ್ದು ಬಿಟ್ಟು ಬೇರೆ ಅಡುಗೆ ಮಾಡಿಲ್ವಂತೆ- ಕಿಯಾರಾ ಅಡ್ವಾಣಿ

    ಆಗಸ್ಟ್ 11ರಂದು ಚಿರಂಜೀವಿ ನಟನೆಯ ‘ಭೋಲಾ ಶಂಕರ್’ (Bhola Shankar) ಸಿನಿಮಾ ರಿಲೀಸ್ ಆಗಿತ್ತು. ಚಿತ್ರಮಂದಿರದಲ್ಲಿ ಈ ಚಿತ್ರ ಮಕಾಡೆ ಮಲಗಿತ್ತು. ಸ್ಟಾರ್ ಕಲಾವಿದರ ದಂಡೇ ಸಿನಿಮಾದಲ್ಲಿ ಇದ್ರು ಸಿನಿಮಾ ಗೆಲ್ಲೋದ್ರಲ್ಲಿ ಎಡವಿತ್ತು. ಅದರ ಜೊತೆಗೆ ಕೆಲವು ಗಾಸಿಪ್ ಕೂಡ ಹಬ್ಬಿತ್ತು. ನಟನ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಕುರಿತಂತೆ ಅನೇಕ ಅಂತೆ-ಕಂತೆಗಳು ಹರಿದಾಡಿದ್ದವು. ಚಿರಂಜೀವಿ ಆರೋಗ್ಯದ ಬಗ್ಗೆ ಗಾಸಿಪ್‌ಗಳು ಕೇಳಿ ಅಭಿಮಾನಿಗಳು ಆತಂಕಗೊಂಡಿದ್ದರು. ಆದರೆ ಈಗ ಅವರು ದೆಹಲಿಯಲ್ಲಿ ಆಪರೇಷನ್ ಮಾಡಿಸಿಕೊಂಡಿರುವುದು ಖಚಿತವಾಗಿದೆ. ಸರ್ಜರಿಯ ಬಳಿಕ ನಟ ವಿಶ್ರಾಂತಿ ಪಡೆಯುತ್ತಿದ್ದಾರೆ.

    ‘ಭೋಲಾ ಶಂಕರ್'(Bhola Shankar)  ಸಿನಿಮಾ ಜೈಲರ್ (Jailer) ಸಿನಿಮಾ ಮುಂದೆ ಮಕಾಡೆ ಮಲಗಿದೆ. ಹೀಗಿದ್ರೂ ಚಿತ್ರತಂಡ ಹುಮ್ಮಸ್ಸು ಕಮ್ಮಿಯಾಗಿಲ್ಲ. ಭೋಲಾ ಶಂಕರ್ ಸಿನಿಮಾ ಹಿಂದಿ ವರ್ಷನ್‌ನಲ್ಲಿ ರಿಲೀಸ್ ಮಾಡಲು ತಯಾರಿ ನಡೆಯುತ್ತಿದೆ. ಚಿತ್ರದ ಟ್ರೈಲರ್ ಕೂಡ ರಿಲೀಸ್ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Jailer ಮುಂದೆ ನಡೆಯಲಿಲ್ವಾ ಬೋಲಾ ಶಂಕರ್ ಆಟ? ಏನಾಯ್ತು ಮೆಗಾಸ್ಟಾರ್ ಸಿನಿಮಾ ಕಥೆ

    Jailer ಮುಂದೆ ನಡೆಯಲಿಲ್ವಾ ಬೋಲಾ ಶಂಕರ್ ಆಟ? ಏನಾಯ್ತು ಮೆಗಾಸ್ಟಾರ್ ಸಿನಿಮಾ ಕಥೆ

    ದ್ಯಾಕೋ ಮೆಗಾಸ್ಟಾರ್ ಅದೃಷ್ಟ ನೆಟ್ಟಗಿಲ್ಲ. ‘ಬೋಲಾ ಶಂಕರ್’ (Bhola Shankar) ರಿಲೀಸ್ ಆಗಿದ್ದೇ ಎಷ್ಟೋ ಜನಕ್ಕೆ ಗೊತ್ತಾಗ್ತಿಲ್ಲ. ಹೀಗಿದ್ಮೇಲೆ ಬಾಕ್ಸಾಫೀಸ್ ಕಲೆಕ್ಷನ್ ಕಥೆ ಏನಪ್ಪಾ? ಏನಾಯ್ತು ‘ಬೋಲಾ ಶಂಕರ್’ ಹಣೆಬರಹ? ಡಲ್ ಆಗಿದ್ದು ಯಾಕೆ.? ಜೈಲರ್ ಸಿನಿಮಾ ಮುಂದೆ ರಿಲೀಸ್ ಆಗಿದ್ದೇ ಎಫೆಕ್ಟ್ ಆಯ್ತಾ?

    ಬೋಲಾ ಶಂಕರ್ ತೆರೆಕಂಡಿದೆ. ಚಿರಂಜೀವಿ(Megastar Chiranjeevi) ಅಭಿನಯದ ಸಿನಿಮಾ. ಹಾಗ್ ನೋಡೋದಾದ್ರೆ ಬೋಲಾ ಶಂಕರ್ ಆರಂಭದಿಂದಲೂ ಅಷ್ಟೊಂದು ನಿರೀಕ್ಷೆ ಹುಟ್ಟುಹಾಕಲೇ ಇಲ್ಲ. ಜೈಲರ್ (Jailer) ಅಪೋಸಿಟ್ ಆಗಿ ಬಂದಿದ್ದಕ್ಕೋ ಇನ್ನಷ್ಟು ನೆಲಕಚ್ಚುವಂತಾಗಿದೆ. ಮೊದಲ ದಿನ ಅಬ್ಬಬ್ಬಾ ಅಂದ್ರೂ 20 ಕೋಟಿ ಕಲೆಕ್ಷನ್ ತುಂಬಿಕೊಳ್ಳಲು ತಡವರಿಸುತ್ತಿದೆ ಚಿರಂಜೀವಿ ಸಿನಿಮಾ ಅನ್ನೋದೇ ದುರಂತ. ಇದನ್ನೂ ಓದಿ:Jailer ಸಿನಿಮಾ ಸಕ್ಸಸ್- ಬದರೀನಾಥ್ ದೇವಾಲಯಕ್ಕೆ ತಲೈವಾ ಭೇಟಿ

    ಮೆಗಾಸ್ಟಾರ್ ಸಾಲು ಸಾಲು ಸಿನಿಮಾಗಳು ಪಾತಾಳ ನೋಡೋಕೆ ಆರಂಭಿಸಿವೆ. ಅದರ ಸಾಲಿಗೆ ಹೊಸ ಸೇರ್ಪಡೆ ಬೋಲಾ ಶಂಕರ್. ಯಾಕಂದ್ರೆ ಮುಖ್ಯ ಕಾರಣವೇ ಇದು ವೇದಾಲಂ ರಿಮೇಕ್ ಅನ್ನೋದು. ಅಜಿತ್ ಅಭಿನಯಿಸಿದ್ದ ವೇದಾಲಂ ತೆಲುಗು ಕಾಪಿಯೇ ಬೋಲಾ ಶಂಕರ್. ಹೀಗಾಗೇ ಟಾಲಿವುಡ್‌ನಲ್ಲಿ ಬೋಲಾ ಶಂಕರ್ ದೊಡ್ಡ ಸೌಂಡ್ ಮಾಡ್ಲಿಲ್ಲ. ಇನ್ನು ಕಾಲಿವುಡ್‌ನಲ್ಲಿ ಕೇಳೋರೇ ಇಲ್ಲ. ಇಷ್ಟೆಲ್ಲಾ ಹಣೆಬರಹ ಗೊತ್ತಿರೋದಕ್ಕೆ ಚಿರಂಜೀವಿ ತಲೆ ಕೆಡಿಸಿಕೊಳ್ಳದೆ ಮನೆಯೊಳಗೆ ಬೆಚ್ಚಗೆ ಕುಳಿತಿದ್ದಾರೆ. ಏನೇ ಆದ್ರೂ ಅಸಲಿ ಮೆಗಾಸ್ಟಾರ್ ಅಬ್ಬರ ಯಾವಾಗ ಶುರುವಾಗುತ್ತಪ್ಪಾ ಎಂದು ಮೆಗಾ ಫ್ಯಾನ್ಸ್ ಕಾದು ಕುಳಿತಿದ್ದಾರೆ.

    ‘ಬೋಲಾ ಶಂಕರ್’ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ತಮನ್ನಾ ಭಾಟಿಯಾ(Tamannaah Bhatia), ಕೀರ್ತಿ ಸುರೇಶ್(Keerthi Suresh), ನಟಿಸಿದ್ದಾರೆ. ಸ್ಟಾರ್ ಕಲಾವಿದರು ಸಿನಿಮಾದಲ್ಲಿ ಇದ್ರೂ ಸಿನಿಮಾ ದೊಡ್ಡ ಮಟ್ಟದ ಹಿಟ್ ಅಲ್ಲದೇ ಇದ್ರೂ ಹಿಟ್ ಲಿಸ್ಟ್‌ಗೆ ಹೋಗೋದ್ರಲ್ಲಿ ಸಿನಿಮಾ ಮಕಾಡೆ ಮಲಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿವೋರ್ಸ್ ಆದ್ರು ಡೋಂಟ್ ಕೇರ್- ಮಸ್ತ್ ಲುಕ್‌ನಲ್ಲಿ ಮೆಗಾಸ್ಟಾರ್ ಮನೆಮಗಳು

    ಡಿವೋರ್ಸ್ ಆದ್ರು ಡೋಂಟ್ ಕೇರ್- ಮಸ್ತ್ ಲುಕ್‌ನಲ್ಲಿ ಮೆಗಾಸ್ಟಾರ್ ಮನೆಮಗಳು

    ಮೆಗಾಸ್ಟಾರ್ (Megastar) ಮನೆಮಗಳು ನಿಹಾರಿಕಾ (Niharika) ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದಿದೆ. ಆದರೂ ಕ್ಯಾರೆ ಎನ್ನದೇ ಮಸ್ತ್ ಫೋಟೋಶೂಟ್‌ನಲ್ಲಿ ನಟಿ ಮಿಂಚಿದ್ದಾರೆ.  ಕ್ಯಾಮೆರಾ ಕಣ್ಣಿಗೆ ನಟಿ ಬೋಲ್ಡ್‌ ಆಗಿ ಪೋಸ್‌ ಕೊಟ್ಟಿದ್ದಾರೆ. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಚೈತನ್ಯ (Chaitanya) ಜೊತೆಗಿನ ಡಿವೋರ್ಸ್ ನಂತರ ನಟಿ ಫ್ರಿ ಬರ್ಡ್ ಆಗಿದ್ದಾರೆ. ಸಖತ್ ಟ್ರಾವೆಲ್ ಮಾಡ್ತಿದ್ದಾರೆ. ಜೊತೆಗೆ ಬಗೆ ಬಗೆಯ ಫೋಟೋಶೂಟ್‌ನಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ. ಈಗ ಹಳದಿ ಬಣ್ಣದ ಉಡುಗೆಯಲ್ಲಿ ನಿಹಾರಿಕಾ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಸ್ಲೀವ್‌ಲೆಸ್ ಡ್ರೆಸ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋಸ್ ನೋಡ್ತಿದ್ದಂತೆ ನೆಟ್ಟಿಗರು, ನಿಮ್ಮ ಜೀವನದ ಬಗ್ಗೆ ನಿಮಗೆ ಚಿಂತೆನೇ ಇಲ್ವಾ ಅಂತಾ ನಿಹಾರಿಕಾಗೆ ಪ್ರಶ್ನೆ ಮಾಡಿದ್ದಾರೆ.

    ದಾಂಪತ್ಯಕ್ಕೆ (Wedding) ಅಂತ್ಯ ಹಾಡಿದ ಮೇಲೆ ಸಮಂತಾರಂತೆ ನಿಹಾರಿಕಾ ಕೂಡ ಮತ್ತೆ ಸಿನಿಮಾ, ನಟನೆ, ನಿರ್ಮಾಣ ಅಂತಾ ಕೆರಿಯರ್ ಕಡೆ ಗಮನ ಕೊಡಲು ನಿರ್ಧರಿಸಿದ್ದಾರೆ. ಮದುವೆಗೂ ಮುನ್ನ ‘ಒಕ ಮನಸ್ಸು’ ಎಂಬ ಸಿನಿಮಾ ಮೂಲಕ ನಾಯಕಿಯಾಗಿ ನಿಹಾರಿಕಾ ಎಂಟ್ರಿ ಕೊಟ್ಟಿದ್ದರು. ಇದನ್ನೂ ಓದಿ:ಗ್ಲ್ಯಾಮರ್ ಡಾಲ್‌ನಂತೆ ಕಂಗೊಳಿಸಿದ ಮೇಘಾ ಶೆಟ್ಟಿ

    ‘ಸೂರ್ಯಕಾಂತಂ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಕೂಡ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ಈಗ ಮತ್ತೆ ನಾಯಕಿಯಾಗಿ ಲೈಮ್‌ಲೈಟ್‌ನಲ್ಲಿ ಮಿಂಚಲು ನಿಹಾರಿಕಾ ಮನಸ್ಸು ಮಾಡಿದ್ದಾರಂತೆ. ನಿರ್ಮಾಪಕಿಯಾಗಿ ಗುರುತಿಸಿಕೊಳ್ತಿರೋ ನಿಹಾರಿಕಾ ಈಗ ಮತ್ತೆ ಸಿನಿಮಾದಲ್ಲಿ ಹೀರೋಯಿನ್ ಆಗಿ ಮಿಂಚಲು ರೆಡಿಯಾಗಿದ್ದಾರೆ.

    ಈ ನಿಟ್ಟಿನಲ್ಲಿ ಅವರು ಯುವ ನಿರ್ದೇಶಕರೊಬ್ಬರ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈಗಾಗಲೆ ಕಥೆ ಸಿದ್ಧಗೊಂಡಿದ್ದರೂ ನಿಹಾರಿಕಾ ನಾಯಕಿಯಾಗಿ ಎಂಟ್ರಿ ಕೊಡಲು ಮೆಗಾ ಫ್ಯಾಮಿಲಿ ಒಪ್ಪುತ್ತಿಲ್ಲ ಎಂಬುದು ಒಳಗಿನ ಮಾತು. ಸಿನಿಮಾ ವಿಚಾರದಲ್ಲಿ ನಿಹಾರಿಕಾ ನಿರ್ಧಾರಕ್ಕೆ ಮೆಗಾ ಫ್ಯಾಮಿಲಿ ನೋ ಹೇಳುತ್ತಿದೆ. ಆದರೆ ನಿಹಾರಿಕಾ ಮತ್ತೆ ನಾಯಕಿಯಾಗಿ ಸಿನಿಮಾಗೆ ಬರುವುದು ಮೆಗಾ ಫ್ಯಾಮಿಲಿಗೆ ಇಷ್ಟವಿಲ್ಲ ಎಂಬ ಪ್ರಚಾರ ನಡೆಯುತ್ತಿದೆ. ನಟಿಯ ಕುಟುಂಬ ನೋ ಅಂದ್ರು ಕೂಡ ನಿಹಾರಿಕಾ ಈ ವಿಚಾರದಲ್ಲಿ ಸಖತ್ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಮಾತಿಗೆ ಸೊಪ್ಪು ಹಾಕದೇ ತನ್ನದೇ ನಿರ್ಧಾರ ಅಂತಿಮ ಅಂತಾ ನಟಿ ಹಠ ಮಾಡ್ತಿದ್ದಾರೆ ಎಂದು ಗುಸು ಗುಸು ಸುದ್ದಿ ಕೆಲದಿನಗಳಿಂದ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲುಗಿನ ಈ ನಟನಿಗೆ ತಾಯಿಯಾಗಿ ನಟಿಸುತ್ತಾರಾ ‘ಪವರ್‌’ ಚಿತ್ರದ ನಟಿ ತ್ರಿಷಾ?

    ತೆಲುಗಿನ ಈ ನಟನಿಗೆ ತಾಯಿಯಾಗಿ ನಟಿಸುತ್ತಾರಾ ‘ಪವರ್‌’ ಚಿತ್ರದ ನಟಿ ತ್ರಿಷಾ?

    ‘ಪೊನ್ನಿಯನ್ ಸೆಲ್ವನ್ 2′ (Ponniyin Selvan 2) ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳು ತ್ರಿಷಾ ಕೃಷ್ಣನ್‌ಗೆ (Trisha Krishnan) ಅರಸಿ ಬರುತ್ತಿದೆ. ನವನಟಿಯರನ್ನು ನಾಚಿಸೋ ಹಾಗೆಯೇ ಇರುವ ತ್ರಿಷಾಗೆ ಸ್ಟಾರ್ ನಟನಿಗೆ ತಾಯಿಯಾಗುವ ಆಫರ್ ಸಿಕ್ಕಿದೆಯಂತೆ. ತೆಲುಗಿನ ಹೀರೋಗೆ ತ್ರಿಷಾ ತಾಯಿಯಾಗಿ ನಟಿಸುತ್ತಾರಾ? ಇಲ್ಲಿದೆ ಮಾಹಿತಿ.

    ಮಲಯಾಳಂ ‘ಬ್ರೋ ಡ್ಯಾಡಿ’ (Bro Daddy) ಸಿನಿಮಾ ತೆಲುಗಿಗೆ ರಿಮೇಕ್ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಶ್ರೀಲೀಲಾ (Sreeleela) ಹೊಸ ಚಿತ್ರಕ್ಕೆ ಹೀರೋ ಆಗಿ ಶರ್ವಾನಂದ್ ಕಾಣಿಸಿಕೊಳ್ತಿದ್ದಾರೆ. ಶರ್ವಾನಂದ್ ತಾಯಿಯ ಪಾತ್ರಕ್ಕೆ ತ್ರಿಷಾ ಅವರನ್ನ ಕೇಳಲಾಗಿದೆ. ಮೆಗಾಸ್ಟಾರ್ ಚಿರಂಜೀವಿಗೆ (Megastar Chiranjeevi)  ನಾಯಕಿಯಾಗಿ ತ್ರಿಷಾಗೆ ನಟಿಸಲು ಬುಲಾವ್ ಬಂದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ವಿಜಯ ರಾಘವೇಂದ್ರಗೆ ಧೈರ್ಯ ತುಂಬಿದ ಯಶ್

    40ನೇ ವರ್ಷದ ವಯಸ್ಸಿನಲ್ಲೂ 20ರ ಯುವತಿಯಂತೆ ಕಾಣೋ ತ್ರಿಷಾ, 39ನೇ ವಯಸ್ಸಿನ ನಟ ಶರ್ವಾನಂದ್‌ಗೆ ತಾಯಿಯಾಗಿ ನಟಿಸುತ್ತಾರಾ ಎಂಬ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಮೆಗಾಸ್ಟಾರ್ ಚಿರಂಜೀವಿ, ಶ್ರೀಲೀಲಾ(Sreeleela), ಶರ್ವಾನಂದ್ (Sharwanand) ಹೊಸ ಚಿತ್ರಕ್ಕೆ ತ್ರಿಷಾ ಕೈಜೋಡಿಸ್ತಾರಾ ಎಂಬುದನ್ನ ಕಾದುನೋಡಬೇಕಿದೆ. ಹೀರೋಯಿನ್‌ ಆಗಿಯೇ ಕನ್ನಡದ ಪವರ್‌ ಚಿತ್ರದ ನಾಯಕಿ ತ್ರಿಷಾಗೆ ಬಂಪರ್‌ ಆಫರ್ಸ್‌ಗಳಿದ್ದು, ಶರ್ವಾನಂದ್‌ಗೆ ತಾಯಿಯಾಗಿ ನಟಿಸಲು ಓಕೆ ಅಂದ್ರಾ? ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

    ‘ಪೊನ್ನಿಯನ್ ಸೆಲ್ವನ್ 2’ ನಂತರ ವಿಜಯ್ ದಳಪತಿ ನಟನೆಯ ‘ಲಿಯೋ’ ಸಿನಿಮಾಗೆ ತ್ರಿಷಾ ನಾಯಕಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರೀಲೀಲಾಗೆ ಒಲಿದು ಬಂದ ಅದೃಷ್ಟ- ಮೆಗಾಸ್ಟಾರ್ ಸಿನಿಮಾದಲ್ಲಿ ಕನ್ನಡತಿ

    ಶ್ರೀಲೀಲಾಗೆ ಒಲಿದು ಬಂದ ಅದೃಷ್ಟ- ಮೆಗಾಸ್ಟಾರ್ ಸಿನಿಮಾದಲ್ಲಿ ಕನ್ನಡತಿ

    ನ್ನಡದ ಬ್ಯೂಟಿ ಶ್ರೀಲೀಲಾ (Sreeleela) ತೆಲುಗಿನಲ್ಲಿ ಆಫರ್ ಮೇಲೆ ಆಫರ್. ರಶ್ಮಿಕಾ ಮಂದಣ್ಣ(Rashmika Mandanna)- ಪೂಜಾ ಹೆಗ್ಡೆಗೆ ಸೆಡ್ಡು ಹೊಡೆದು ಶ್ರೀಲೀಲಾ ಈಗ ಟಾಲಿವುಡ್‌ನಲ್ಲಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ತೆಲುಗು ಅಡ್ಡಾದಿಂದ ನಯಾ ಖಬರ್ ಗಿರಕಿ ಹೊಡೆಯುತ್ತಿದೆ. ಮೆಗಾಸ್ಟಾರ್ ಚಿರಂಜೀವಿ- ತ್ರಿಷಾ ನಟನೆಯ ಸಿನಿಮಾದಲ್ಲಿ ಭರಾಟೆ ನಟಿ ನಟಿಸುವ ಬಂಪರ್ ಆಫರ್ ಬಾಚಿಕೊಂಡಿದ್ದಾರೆ.

    ಡೇಂಜರ್ ಪಿಲ್ಲಾ ಶ್ರೀಲೀಲಾ ನಸೀಬು ಚೆನ್ನಾಗಿದೆ. ಕನ್ನಡದ 3 ಸಿನಿಮಾ, ತೆಲುಗಿನಲ್ಲಿ ಎರಡೇ ಚಿತ್ರಕ್ಕೆ ಬ್ಯಾಕ್ ಟು ಬ್ಯಾಕ್ 8ಕ್ಕೂ ಹೆಚ್ಚು ಚಿತ್ರಗಳಿಗೆ ಲೀಲಾ ನಾಯಕಿಯಾಗಿದ್ದಾರೆ. ತೆಲುಗಿನಲ್ಲಿ ಬಿಗ್ ಬ್ಯಾನರ್ ಚಿತ್ರಗಳಿಗೆ ರಶ್ಮಿಕಾ, ಪೂಜಾ, ಕೃತಿ ಶೆಟ್ಟಿ (Krithi Shetty) ಅವರೇ ಬೇಕು ಎಂದು ಭಜನೆ ಮಾಡುತ್ತಿದ್ದ ನಿರ್ಮಾಪಕರ ಪಾಲಿಗೆ ಇಷ್ಟದೇವತೆಯಾಗಿ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ.

    ತೆಲುಗಿನ ಬಿಗ್ ಬಜೆಟ್ ಸಿನಿಮಾವೊಂದಕ್ಕೆ ಮೆಗಾಸ್ಟಾರ್ ಚಿರಂಜೀವಿ- ನಟಿ ತ್ರಿಷಾ ಕೃಷನ್ ಜೋಡಿಯಾಗಿ ಬರುತ್ತಿದ್ದಾರೆ. ಮಲಯಾಳಂ ಬ್ರೋ ಡ್ಯಾಡಿ ಸಿನಿಮಾವನ್ನ ತೆಲುಗಿಗೆ ರಿಮೇಕ್ ಮಾಡಲಾಗುತ್ತಿದೆ. ಹಾಗಾಗಿ ಸಿನಿಮಾದ ಪ್ರಮುಖ ಪಾತ್ರದಲ್ಲಿ ಮೆಗಾಸ್ಟಾರ್, ತ್ರಿಷಾ ಇರಲಿದ್ದಾರೆ. ಇವರ ಜೊತೆ ತೆಲುಗಿನ ಹೀರೋ ಶರ್ವಾನಂದ್ ಕೂಡ ಆಕ್ಟ್ ಮಾಡ್ತಿದ್ದಾರೆ.

    ಬ್ರೋ ಡ್ಯಾಡಿ (Bro Daddy)  ತಂದೆ-ಮಗನ ಕುರಿತ ಸಿನಿಮಾವಾಗಿದ್ದು ಚಿರಂಜೀವಿ- ತ್ರಿಷಾ(Trisha), ಪತಿ ಮತ್ತು ಪತ್ನಿ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿರಂಜೀವಿ ಮಗನ ಪಾತ್ರಕ್ಕೆ ಶರ್ವಾನಂದ್ ಫೈನಲ್ ಆಗಿದ್ದಾರೆ. ಶರ್ವಾನಂದ್‌ಗೆ (Sharwanand) ನಾಯಕಿಯಾಗಿ ಶ್ರೀಲೀಲಾ (Sreeleela) ಫಿಕ್ಸ್ ಆಗಿದ್ದಾರೆ. ಈ ಚಿತ್ರಕ್ಕೆ ಮೆಗಾಸ್ಟಾರ್ ಪುತ್ರಿ ಸುಶ್ಮಿತಾ ಕೊನಿಡೆಲಾ ಅವರು ನಿರ್ಮಾಣ ಮಾಡ್ತಿದ್ದಾರೆ. ಇದನ್ನೂ ಓದಿ:ಕೇವಲ ಒಂದು ಹಾಡಿಗೆ 90 ಕೋಟಿ ಖರ್ಚು ಮಾಡ್ತಾರಂತೆ ‘ಗೇಮ್‌ಚೇಂಜರ್’ ಚಿತ್ರತಂಡ

    ಮಲಯಾಳಂನಲ್ಲಿ 2022ರಲ್ಲಿ ಬ್ರೋ ಡ್ಯಾಡಿ ಸಿನಿಮಾ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಮೋಹನ್ ಲಾಲ್(Mohanlal), ಪೃಥ್ವಿರಾಜ್ ಸುಕುಮಾರನ್, ಮೀನಾ, ಕಲ್ಯಾಣಿ ಪ್ರಿಯಾದರ್ಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಮಾಲಿವುಡ್‌ನಲ್ಲಿ ಹಿಟ್ ಆಗಿತ್ತು.ಈಗ ಇದೇ ಚಿತ್ರವನ್ನು ತೆಲುಗಿನಲ್ಲಿ ತರಲು ಪ್ಲ್ಯಾನ್ ಮಾಡಿದ್ದಾರೆ. ಇದು ಸದ್ಯ ಟಾಲಿವುಡ್‌ನ ಹಾಟ್ ಟಾಪಿಕ್ ಆಗಿದ್ದು, ಚಿತ್ರತಂಡ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]