ಮೆಗಾಸ್ಟಾರ್ ಚಿರಂಜೀವಿಯವರ (Megastar Chiranjeevi) ಸ್ವಭಾವದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅವರಿಗೆ ಒಮ್ಮೆ ಒಬ್ಬ ವ್ಯಕ್ತಿ ಇಷ್ಟವಾದರೆ, ಆ ಸ್ನೇಹವನ್ನು ತಮ್ಮ ಜೀವನದುದ್ದಕ್ಕೂ ಹೃದಯದಲ್ಲಿಟ್ಟುಕೊಂಡು ಕಾಪಾಡುತ್ತಾರೆ. ಅದಕ್ಕೆ ಉದಾಹರಣೆ ಎಂಬಂತೆ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಟಾಲಿವುಡ್ ನಿರ್ದೇಶಕರಿಗೆ ಅಚ್ಚರಿಯ ಗಿಫ್ಟ್ ಕೊಟ್ಟಿದ್ದಾರೆ.
View this post on Instagram
ಚಿರಂಜೀವಿ ನಿರ್ದೇಶಕ ಬಾಬಿಯವರಿಗೆ (Bobby) ವಿಶೇಷ ಗಿಫ್ಟ್ ನೀಡಿದ್ದಾರೆ. ಈ ವಾಚಿನ ಬೆಲೆ ಸುಮಾರು 6-10 ಲಕ್ಷ ರೂ. ಮೌಲ್ಯದ್ದು ಎನ್ನಲಾಗಿದೆ. ಒಮೆಗಾ ಸೀಮಾಸ್ಟರ್ ವಾಚ್ ಇದಾಗಿದ್ದು, ಈ ವಿಚಾರವನ್ನು ನಿರ್ದೇಶಕ ಬಾಬಿಯವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಸ್ಟ್‌ನಲ್ಲಿ, ಚಿರಂಜೀವಿ ಗಾರು ಅವರಿಂದ ಒಂದು ಅಚ್ಚರಿಯ ಉಡುಗೊರೆ ಸಿಕ್ಕಿದೆ. ಈ ಉಡುಗೊರೆಗೆ ನಾನು ಬೆಲೆ ಕಟ್ಟಲು ಸಾಧ್ಯವಿಲ್ಲ. ಧನ್ಯವಾದಗಳು ಸಹೋದರ! ಈ ಕ್ಷಣವನ್ನು ನಾನು ಸದಾ ನೆನಪಲ್ಲಿಟ್ಟುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕೈಯಲ್ಲಿ ವಾಚ್ ಧರಿಸಿರುವ ಫೋಟೋಗಳನ್ನು ಸಹ ಬಾಬಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದನ್ನು ನೋಡಿದವರೆಲ್ಲರೂ, ಚಿರಂಜೀವಿಯ ಸ್ನೇಹಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಚಿರಂಜೀವಿ ಪ್ರಸ್ತುತ ವಿಶ್ವಂಭರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಿಂಬಿಸಾರ ಖ್ಯಾತಿಯ ವಶಿಷ್ಠ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರ ಜೊತೆಗೆ ಚಿರಂಜೀವಿ ಬ್ಲಾಕ್‌ಬಸ್ಟರ್ ನಿರ್ದೇಶಕ ಅನಿಲ್ ರವಿಪುಡಿ ನಿರ್ದೇಶನದಲ್ಲಿ ಒಂದು ಸಿನಿಮಾ ಕೂಡ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ.




ಇಂದು ತ್ರಿಷಾಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಫ್ಯಾನ್ಸ್‌ಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ. ‘ವಿಶ್ವಂಭರ’ ಸಿನಿಮಾದಲ್ಲಿ ತ್ರಿಷಾ ಯಾವ ಲುಕ್‌ನಲ್ಲಿ ಕಾಣುತ್ತಾರೆ ಎಂಬುದನ್ನು ಪೋಸ್ಟರ್ ಅನ್ನು ತಂಡ ರಿವೀಲ್ ಮಾಡಿದೆ. ಅವನಿ ಎಂಬ ಪಾತ್ರದಲ್ಲಿ ನಟಿಸಿರುವ ತ್ರಿಷಾ ಚೆಂದದ ಸೀರೆಯುಟ್ಟು ಕಂಗೊಳಿಸಿದ್ದಾರೆ. ನಟಿಯ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:















