Tag: meetoo

  • ಪಾತ್ರಕ್ಕಾಗಿ ಅವನು ಸಹಕರಿಸು ಅಂದ: ಕರಾಳ ಘಟನೆ ಬಿಚ್ಚಿಟ್ಟ ನಟಿ ಮಾಳವಿಕಾ

    ಪಾತ್ರಕ್ಕಾಗಿ ಅವನು ಸಹಕರಿಸು ಅಂದ: ಕರಾಳ ಘಟನೆ ಬಿಚ್ಚಿಟ್ಟ ನಟಿ ಮಾಳವಿಕಾ

    ಮೀಟೂ (MeeToo) ಅಭಿಯಾನದ ನಂತರ ಅನೇಕ ಕಲಾವಿದೆಯರು ತಮ್ಮ ಬದುಕಿನಲ್ಲಿ ನಡೆದಂತಹ ಕಹಿ ಘಟನೆಗಳನ್ನು ಬಿಚ್ಚಿಡುತ್ತಿದ್ದಾರೆ. ಅವಕಾಶಕ್ಕಾಗಿ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ತಮ್ಮ ಬದುಕಿನಲ್ಲಿ ಆಟವಾಡಿದ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಲಿವುಡ್ ನಿಂದ ಶುರುವಾದ ಮೀಟೂ ಭಾರತೀಯ ಸಿನಿಮಾ ರಂಗದ ನಾನಾ ಭಾಗಗಳಿಗೂ ಬಿಸಿಮುಟ್ಟಿಸಿದೆ.

    ಈಗಾಗಲೇ ಹೆಸರಾಂತ ಕಲಾವಿದರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದು ಇವರ ಸಾಲಿಗೆ ಮಲಯಾಳಂ (Malayalam) ಸಿನಿಮಾ ತಾರೆ ಮಾಳವಿಕಾ ಶ್ರೀನಾಥ್ (Malavika Srinath) ಕೂಡ ಸೇರಿದ್ದಾರೆ. ಅವಕಾಶಕ್ಕಾಗಿ ತಮ್ಮೊಂದಿಗೆ ಸಹಕರಿಸುವಂತೆ ಒಬ್ಬರು ಕೇಳಿದ್ದರು ಎನ್ನುವ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ದತ್ತಣ್ಣ ಮದುವೆ ಆಗಲಿಲ್ಲ ಏಕೆ? ಗೆಳೆಯರು ಬಿಚ್ಚಿಟ್ಟ ರಹಸ್ಯ

    ಮೂರು ವರ್ಷಗಳ ಹಿಂದೆ ನಡೆದ ಘಟನೆಯನ್ನು ಅವರು ನೆನಪಿಸಿಕೊಂಡಿದ್ದು, ಮಂಜು ವಾರಿಯರ್ ಮಗಳ ಪಾತ್ರಕ್ಕೆ ಆಯ್ಕೆಯಾಗಲು ಹತ್ತು ನಿಮಿಷ ನನ್ನೊಂದಿಗೆ ಸಹಕರಿಸು ಎಂದು ಡ್ರೆಸ್ಸಿಂಗ್ ರೂಮ್ ನಲ್ಲಿ ಓರ್ವ ವ್ಯಕ್ತಿ ಕೇಳಿದ. ಅಲ್ಲದೇ, ನನ್ನನ್ನು ತಬ್ಬಿಕೊಂಡು ಗುಪ್ತಾಂಗ ಮುಟ್ಟಿದ. ನಾನು ಅಳುತ್ತಲೇ ಓಡಿಹೋದೆ ಎಂದು ಅವರು ಹೇಳಿಕೊಂಡಿದ್ದಾರೆ.

    ಆಡಿಷನ್ ನೆಪದಲ್ಲಿ ಕರೆಯಿಸಿಕೊಂಡು ಈ ರೀತಿಯಲ್ಲಿ ಆತ ವರ್ತಿಸಿದ. ನನ್ನೊಂದಿಗೆ ನನ್ನ ತಾಯಿ ಕೂಡ ಬಂದಿದ್ದರು. ಅವರು ಡ್ರೆಸ್ಸಿಂಗ್ ರೂಮ್ ಹೊರಗೆ ನನಗಾಗಿ ಕಾಯುತ್ತಿದ್ದರು. ನಾನು ಒಳಗಿದ್ದೆ. ಆ ವೇಳೆಯಲ್ಲಿ ಈ ಘಟನೆ ನಡೆಯಿತು ಎಂದು ಮಾಳವಿಕಾ ಹೇಳಿಕೊಂಡಿದ್ದಾರೆ.  ಅಂದಹಾಗೆ ಮಧುರಂ, ಸಾಟರ್ಡೆ ನೈಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಾಳವಿಕಾ ನಟಿಸಿದ್ದಾರೆ.

  • ಲೇಖಕ ಚೇತನ್ ಭಗತ್, ನಟಿ ಉರ್ಫಿ ಜಾವೇದ್ ಜಟಾಪಟಿ: ಸ್ಕ್ರೀನ್ ಶಾಟ್ ಶೇರ್

    ಲೇಖಕ ಚೇತನ್ ಭಗತ್, ನಟಿ ಉರ್ಫಿ ಜಾವೇದ್ ಜಟಾಪಟಿ: ಸ್ಕ್ರೀನ್ ಶಾಟ್ ಶೇರ್

    ಮ್ಮ ವಿಭಿನ್ನ ಕಾಸ್ಟ್ಯೂಮ್ ಮೂಲಕವೇ ಸದಾ ಸುದ್ದಿ ಆಗುವ ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್, ಲೇಖಕ ಚೇತನ್ ಭಗತ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಚೇತನ್ ಭಗತ್ ಅವರ ಮೀಟು ಆರೋಪದ ವೇಳೆಯಲ್ಲಿ ಹರಿದಾಡಿದ ವಾಟ್ಸ್ ಅಪ್ ಚಾಟ್ ಗಳನ್ನು ಉರ್ಫಿ ಮತ್ತೆ ಶೇರ್ ಮಾಡಿದ್ದಾಳೆ. ಜೊತೆಗೆ ಮಹಿಳೆಯರು ಇಂತಿಷ್ಟೇ ಬಟ್ಟೆಗಳನ್ನು ಹಾಕಿಕೊಳ್ಳಿ ಅಂತ ಹೇಳುವುದಕ್ಕೆ ನೀವ್ಯಾರು ಎಂದು ಕೇಳಿದ್ದಾರೆ.

    ಚೇತನ್ ಭಗತ್ ಕಾರ್ಯಕ್ರಮವೊಂದರಲ್ಲಿ ಯುವಕರ ಬಗ್ಗೆ ಮಾತನಾಡುತ್ತಾ, ‘ಇಂದಿನ ಯುವಕರಿಗೆ ಮೊಬೈಲ್ ಅಡ್ಡಿಯಾಗಿದೆ. ಅವರು ದಿನದ ಬಹಳ ಹೊತ್ತು ಮೊಬೈಲ್ ನಲ್ಲೇ ಕಳೆಯುತ್ತಾರೆ. ಉರ್ಫಿ ಜಾವೇದ್ ಹಾಕುವ ಕಾಸ್ಟ್ಯೂಮ್ ಗೆ ಲೈಕ್ ಹಾಗೂ ಕಾಮೆಂಟ್ ಮಾಡುವುದರಲ್ಲೇ ದಿನಗಳನ್ನು ಕಳೆಯುತ್ತಿದ್ದಾರೆ. ಪ್ರತಿಯೊಬ್ಬರಿಗೂ ಈ ಉರ್ಫಿ ಜಾವೇದ್ ಗೊತ್ತು ಅಂತೆಲ್ಲ ಮಾತನಾಡಿದ್ದರು. ಯಾವುದೇ ಕಾರ್ಯಕ್ರಮದಲ್ಲಿ ತನ್ನ ಹೆಸರನ್ನು ಪ್ರಸ್ತಾಪ ಮಾಡಿದ್ದಕ್ಕೆ ಉರ್ಫಿ ಗರಂ ಆಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಚೇತನ್ ಭಗತ್ ಸುದೀರ್ಘವಾಗಿ ಬರೆದುಕೊಂಡಿದ್ದರು. ಇದನ್ನೂ ಓದಿ:ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ರು `ಅಗ್ನಿಸಾಕ್ಷಿ’ಯ ವೈಷ್ಣವಿ ಗೌಡ

    ಸೋಷಿಯಲ್ ಮೀಡಿಯಾ ಮೂಲಕ ಚೇತನ್ ಭಗತ್ ಅವರಿಗೆ ಟಾಂಗ್ ನೀಡಿದ್ದ ಉರ್ಫಿ, ‘ಕಾರ್ಯಕ್ರಮದಲ್ಲಿ ಅವರು ನನ್ನ ಹೆಸರನ್ನು ಎಳೆತರಬಾರದಿತ್ತು. ಯುವಕರ ಮನಸ್ಸನ್ನು ನಾನು ಹಾಳು ಮಾಡಿಲ್ಲ. ನನ್ನ ಚಿಕ್ಕಪ್ಪನ ವಯಸ್ಸಿನ ಚೇತನ್, ಈ ಹಿಂದೆ ಹುಡುಗಿಯರಿಗೆ ಅಶ್ಲೀಲ ಮಸೇಜ್ ಕಳುಹಿಸಿ ಮೀಟೂ ಆರೋಪಿಯಾಗಿದ್ದರು. ನನ್ನ ಕಾಸ್ಟ್ಯೂಮ್ ಬಗ್ಗೆ ಅವರಿಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ’ ಎಂದು ಬರೆದುಕೊಂಡಿದ್ದರು.

    ಉರ್ಫಿಗೆ ಮತ್ತೆ ಪ್ರತಿಕ್ರಿಯೆ ನೀಡಿದ್ದ ಚೇತನ್ ಭಗತ್, ‘ನಾನು ಹೇಳಿದ್ದು ಬೇರೆ ಅರ್ಥದಲ್ಲಿ. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಯುವಕರಿಗೆ ಆ ರೀತಿ ಸಲಹೆ ನೀಡಿದ್ದೆ. ಆದರೆ, ನನ್ನ ಮಾತನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ. ಆ ರೀತಿ ತಗೆದುಕೊಂಡಿದ್ದಕ್ಕೆ ವಿಷಾದವಿದೆ’ ಎಂದು ಹೇಳುವ ಮೂಲಕ ಈ ಪ್ರಕರಣವನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದರು. ಆದರೆ, ಅದು ತಣ್ಣಗಾಗುವಂತೆ ಕಾಣುತ್ತಿಲ್ಲ. ಚೇತನ್ ಭಗತ್ ಅವರ ಮೀಟೂ ಸಂದೇಶದ ಸ್ಕ್ರೀನ್ ಶಾಟ್ ಹಾಕುವ ಮೂಲಕ ಈ ಜಗಳವನ್ನು ಉರ್ಫಿ ಮುಂದುವರೆಸಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ, ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • MeeToo : ಆ ಅಸಹ್ಯ ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ ರತನ್ ರಾಜಪೂತ್

    MeeToo : ಆ ಅಸಹ್ಯ ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ ರತನ್ ರಾಜಪೂತ್

    ಹಿಂದಿ ಕಿರುತೆರೆಯ ಖ್ಯಾತ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿಯೂ ಆಗಿರುವ ರತನ್ ರಾಜಪೂತ್ (Ratan Rajput) ತಮಗಾದ ಕಾಸ್ಟಿಂಗ್ ಕಾಚ್ (Casting Couch) ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಒಂದು ವೇಳೆ ನಾನು ಅವನು ಹೇಳಿದಂತೆ ಕೇಳಿದ್ದರೆ, ಸ್ಟಾರ್ ನಟಿಯಾಗಿರುತ್ತಿದ್ದೆ. ಆದರೆ, ಅದು ನನಗಿಷ್ಟವಾಗದ ದಾರಿ. ಹಾಗಾಗಿ ಅವನ ಮುಖಕ್ಕೆ ಉಗಿದು ಬಂದೆ ಎಂದು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಹದಿನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ.

    ಆ ನಿರ್ದೇಶಕನಿಗೆ ಅರವತ್ತರ ವಯಸ್ಸು. ನನ್ನನ್ನು ನಾಯಕಿಯನ್ನಾಗಿ ಮಾಡುತ್ತೇನೆ ಅಂದ. ನನಗೆ ಗಾಡ್ ಫಾದರ್ ಆಗುತ್ತೇನೆ ಅಂತಾನೂ ಹೇಳಿದ. ನನ್ನ ಚರ್ಮ, ಮುಖ ಸರಿ ಇಲ್ಲ. ತಲೆಗೂದಲು ಚೆನ್ನಾಗಿಲ್ಲ ಹೀಗೆ ಅನೇಕ ಸಂಗತಿಗಳನ್ನು ಪಟ್ಟಿಮಾಡಿ, ಇದೆಲ್ಲವನ್ನೂ ಸರಿ ಮಾಡಿ ನಿನ್ನನ್ನು ಹೀರೋಯಿನ್ ಆಗಿ ಆಯ್ಕೆ ಮಾಡಿಕೊಳ್ಳಬೇಕು ಅಂದರೆ ಒಂದಷ್ಟು ಲಕ್ಷ ರೂಪಾಯಿ ಖರ್ಚಾಗುತ್ತದೆ. ನಿನಗಾಗಿ ನಾನು ಆ ಖರ್ಚು ಮಾಡಬೇಕು ಅಂದರೆ, ನೀನು ನನ್ನವಳಾಗಬೇಕು ಎಂದಿದ್ದರಂತೆ ನಿರ್ದೇಶಕರು. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ

    ಆ ವ್ಯಕ್ತಿಯು ನನ್ನೊಂದಿಗೆ ಫ್ರೆಂಡ್ ರೀತಿ ಇರಬೇಕು, ನಾನು ಕೇಳಿದ್ದನ್ನು ಕೊಡಬೇಕು ಅಂದಾಗ ನನಗೆ ಅರಿವಾಯಿತು. ನೀವು ನನ್ನ ತಂದೆ ಸಮಾನರು, ಗುರು ಕೂಡ. ದೊಡ್ಡವರಾಗಿ ಹೀಗೆ ಮಾತನಾಡಬಾರದು. ನಿಮ್ಮನ್ನು ನಾನು ಗೌರವದಿಂದ ಕಾಣುತ್ತಿದ್ದೇನೆ ಅಂದೆ. ನನ್ನ ಮಗಳು ನಟಿಯಾಗಿದ್ದರೂ, ನಾನು ಅವಳ ಜೊತೆ ಮಲಗುತ್ತಿದ್ದೆ ಎಂದು ಅಸಹ್ಯವಾಗಿ ಹೇಳಿದ. ಅಂತಹ ಅಸಹ್ಯ ವ್ಯಕ್ತಿಯಿಂದ ದೂರ ಬಂದು ಬಿಟ್ಟೆ. ಹೀಗೆ ಬಾಲಿವುಡ್ ನಲ್ಲಿ ಅನೇಕರಿಗೆ ಇಂತಹ ಅನುಭವ ಆಗಿರುತ್ತದೆ ಎಂದಿದ್ದಾರೆ ರತನ್.

    ರತನ್ ಬಿಹಾರ(Bihar) ಮೂಲದವರು. ಹಿಂದಿ ಕಿರುತೆರೆಯಲ್ಲಿ ಫೇಮಸ್ ಹೆಸರು. ಸಾಕಷ್ಟು ಹಿಂದಿ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 9 ಹಿಂದಿಯಲ್ಲಿ ಭಾಗಿಯಾಗಿದ್ದರು. ಅಲ್ಲದೇ, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ವೊಂದನ್ನು ಅವರು ನಡೆಸುತ್ತಿದ್ದು, ಮುಂಬೈಗೆ ಬಂದಾಗಿನ ಕೆಲ ಸಂಗತಿಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ಮಾಫಿಯಾ ನನ್ನನ್ನು ಬೆಳೆಯಲು ಬಿಡಲಿಲ್ಲ ಎಂದ ನಟಿ ತನುಶ್ರೀ ದತ್ತ

    ಬಾಲಿವುಡ್ ಮಾಫಿಯಾ ನನ್ನನ್ನು ಬೆಳೆಯಲು ಬಿಡಲಿಲ್ಲ ಎಂದ ನಟಿ ತನುಶ್ರೀ ದತ್ತ

    ಬಿಟೌನ್ ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಈ ಹಿಂದೆ ಮೀಟೂ ಆರೋಪ ಮಾಡಿ ಬಾಲಿವುಡ್ ನಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ತನುಶ್ರೀ ದತ್ತ, ಇದೀಗ ಮತ್ತೊಮ್ಮೆ ಗುಡುಗಿದ್ದಾಳೆ. ಮೀಟೂ ಆರೋಪ ಮಾಡಿದ್ದಕ್ಕೆ ತನಗಾದ ಅನ್ಯಾಯವನ್ನು ಮತ್ತೆ ತೆರೆದಿಟ್ಟಿದ್ದಾರೆ. ಈ ಆರೋಪದಿಂದ ಅವರು ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂದು ಮನದಾಳವನ್ನು ಬಿಚ್ಚಿಟ್ಟಿದ್ದಾರೆ.

    ತನುಶ್ರೀ ದತ್ತ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಮೀಟೂ ಬಿರುಗಾಳಿಯನ್ನು ಎಬ್ಬಿಸಿದ ನಟಿ. ಬಾಲಿವುಡ್ ನ ಅನೇಕ ಕಲಾವಿದರ ಮತ್ತು ತಂತ್ರಜ್ಞರ ಬಣ್ಣ ಬಯಲು ಮಾಡಿದ್ದರು. ಈ ಕುರಿತು ಅವರು ಕಾನೂನು ಕ್ರಮಕ್ಕೂ ಮುಂದಾದರು. ಆರೋಪ ಪ್ರತ್ಯಾರೋಪಗಳು ನಡೆದು ಆನಂತರ ಅನೇಕರು ಇವರಿಗೆ ಕಿರುಕುಳ ನೀಡಿದರಂತೆ. ಬಾಲಿವುಡ್ ನಲ್ಲಿ ಬೆಳೆಯಲಿಕ್ಕೆ ಬಿಡಲಿಲ್ಲವಂತೆ. ಬಾಲಿವುಡ್ ಮಾಫಿಯಾ ತಮ್ಮ ವೃತ್ತಿ ಬದುಕನ್ನೇ ಕತ್ತಲಿನಲ್ಲಿ ಇಟ್ಟಿತ್ತು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್‌ ನಟನೆಯ ಹಾಲಿವುಡ್ ಚಿತ್ರತಂಡ

    ಬಾಲಿವುಡ್ ಮಾಫಿಯಾದಿಂದ ಬಿಡಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಅವರು ಹೇಳಿದಂತೆ ಕೇಳಿದರೆ, ಯಾರು ಬೇಕಾದರೂ ಸ್ಟಾರ್ ನಟಿಯರು ಆಗಬಹುದು ಎಂದು ಕೆಲವರನ್ನು ಮತ್ತೆ ಟೀಕಿಸಿದ್ದಾರೆ. ಆದರೆ, ಯಾವ ಮಾಫಿಯಾಗೂ ನಾನು ತಲೆಬಾಗದೇ ಇರುವ ಕಾರಣಕ್ಕಾಗಿ ನಾನಾ ರೀತಿಯ ಕಿರುಕುಳವನ್ನು ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ ತನುಶ್ರೀ ದತ್ತ. ಇವತ್ತಿಗೂ ಅವರು ಮೀಟು ಪ್ರಕರಣದಿಂದಾಗಿ ಸಂಕಟಗಳನ್ನು ಅನುಭವಿಸುವುದು ತಪ್ಪಿಲ್ಲ ಎಂದಿದ್ದಾರೆ ತನುಶ್ರೀ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಟಿ ತನುಶ್ರೀ ದತ್ತಾ ಕಾರು ಅಪಘಾತ: ಗಾಯದ ಕಾಲು ತೋರಿದ ನಟಿ

    ಬಾಲಿವುಡ್ ನಟಿ ತನುಶ್ರೀ ದತ್ತಾ ಕಾರು ಅಪಘಾತ: ಗಾಯದ ಕಾಲು ತೋರಿದ ನಟಿ

    ಮೀಟೂ ಪ್ರಕರಣದ ನಂತರ ದೇಶದಾದ್ಯಂತ ಸುದ್ದಿ ಮಾಡಿದ ಬಾಲಿವುಡ್ ತಾರೆ ತನುಶ್ರೀ ದತ್ತಾ ಅವರ ಕಾರು ಅಪಘಾತವಾಗಿದೆ. ಈ ಘಟನೆಯಿಂದಾಗಿ ಅವರ ಕಾಲಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲೂ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?

    ತನುಶ್ರೀ ಅವರು ಉಜ್ಜಯಿನಿಯ ಮಹಾಕಾಲ್ ದೇವಸ್ಥಾನಕ್ಕೆ ಹೊರಟಿದ್ದರು ದಾರಿ ಮಧ್ಯೆ ಕಾರಿನ ಬ್ರೇಕ್ ಫೇಲ್ ಆಗಿದೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕಾರು ಅಪಘಾತಕ್ಕೀಡಾಗಿದೆ. ಹೀಗಾಗಿ ಅವರ ಕಾಲಿಗೆ ಅನೇಕ ಗಾಯಗಳು ಆಗಿವೆ. ಆದರೂ, ದತ್ತಾ ದೇವರ ದರ್ಶನವನ್ನು ತಪ್ಪಿಸಿಲ್ಲ. ಆ ನೋವಿನಲ್ಲೇ ದೇವರ ದರ್ಶನ ಪಡೆದಿದ್ದಾರಂತೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

    ಮಹಾಕಲ್ ದೇವಸ್ಥಾನಕ್ಕೆ ಹೋಗುವುದು ನನ್ನ ಸಂಕಲ್ಪವಾಗಿತ್ತು. ಹೀಗಾಗಿ ಕಾರು ಅಪಘಾತವಾದರೂ, ನಾನು ದೇವರ ದರ್ಶನವನ್ನು ತಪ್ಪಿಸಲಿಲ್ಲ. ನೋವಿನಿಂದ ಕೂಡಿದ ಕಾಲುಗಳಿಂದಲೇ ದೇವಸ್ಥಾನಕ್ಕೆ ಹೋದೆ. ದೇವರ ದರ್ಶನ ಮಾಡಿದೆ. ಆ ದೇವರ ಅನುಗ್ರಹದಿಂದಾಗಿ ನನಗೆ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅವರು ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ದತ್ತಾ ಅವರು ಈ ಸುದ್ದಿಯನ್ನು ಪೋಸ್ಟ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಅವರಿಗೆ ಹಾರೈಸಿದ್ದಾರೆ. ಶೀಘ್ರದಲ್ಲೇ ನಿಮ್ಮ ಕಾಲಿನ ನೋವು ಕಳೆದು ಹೋಗಲಿ ಎಂದು ಪ್ರಾರ್ಥಿಸಿದ್ದಾರೆ. ಅವರ ದೈವಭಕ್ತಿಯ ಕುರಿತಾಗಿಯೂ ಹಲವರು ಕೊಂಡಾಡಿದ್ದಾರೆ.

  • ಸ್ಯಾಂಡಲ್‍ವುಡ್‍ನಲ್ಲೂ ಮೀಟೂ ಬಿರುಗಾಳಿ – ರಘು ದೀಕ್ಷಿತ್ ವಿರುದ್ಧ ಆರೋಪ

    ಸ್ಯಾಂಡಲ್‍ವುಡ್‍ನಲ್ಲೂ ಮೀಟೂ ಬಿರುಗಾಳಿ – ರಘು ದೀಕ್ಷಿತ್ ವಿರುದ್ಧ ಆರೋಪ

    – ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿ ಕ್ಷಮೆಯಾಚನೆ

    ನವದೆಹಲಿ: ದೇಶಾದ್ಯಂತ ಬಿರುಗಾಳಿ ಎಬ್ಬಿಸಿರುವ ಲೈಂಗಿಕ ಕಿರುಕುಳ ವಿರುದ್ಧದ ‘ಮೀಟೂ’ ಅಭಿಯಾನ ಹೊಸ ಆರೋಪಗಳ ಸೇರ್ಪಡೆಯೊಂದಿಗೆ ಮತ್ತಷ್ಟು ತೀವ್ರಗೊಂಡಿದೆ.

    ತಮಿಳಿನ ಖ್ಯಾತ ಗೀತ ಸಾಹಿತಿ ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ವಿರುದ್ಧ ಅಂತಹದ್ದೇ ಆರೋಪ ಮಾಡಿದ್ದಾರೆ. ಈ ಮೂಲಕ ಸ್ಯಾಂಡಲ್‍ವುಡ್‍ಗೂ ಈ ಕಿಡಿ ಹೊತ್ತಿಕೊಂಡಿದೆ.

    ಚಿನ್ಮಯ್ ತನ್ನ ಸ್ನೇಹಿತರಿಗೆ ಆದ ಅನುಭವಗಳನ್ನು 2 ಪತ್ರಗಳ ಮೂಲಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಆರೋಪ ಕೇಳಿಬರುತ್ತಿದ್ದಂತೆಯೇ ಪ್ರತಿಕ್ರಿಯಿಸಿರೋ ಗಾಯಕ ರಘು ದೀಕ್ಷಿತ್, ಚಿನ್ಮಯಿ ಶ್ರೀಪಾದ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಆದರೆ ಅವರು ಹೇಳಿದರಲ್ಲಿ ಕೆಲ ಭಾಗ ನಿಜವಿದ್ದರೂ, ಎಲ್ಲವೂ ನಿಜವಲ್ಲ ಎಂದು ಟ್ವಿಟ್ಟರ್‍ನಲ್ಲಿ ಪ್ರಕಟಿಸಿದ್ದಾರೆ.

    ನಾನು ಆಕೆಯನ್ನ ಹಗ್ ಮಾಡಿ ಕಿಸ್ ಮಾಡುವುದಕ್ಕೆ ಪ್ರಯತ್ನಿಸಿದ್ದು ನಿಜ.. ಆದ್ರೆ ಅದಕ್ಕೆ ನಾನು ಕ್ಷಮೆ ಕೂಡ ಕೇಳಿದ್ದೇನೆ. ಈಗಲೂ ಕ್ಷಮೆ ಕೇಳುತ್ತೇನೆ ಅಂದಿದ್ದಾರೆ.

    https://twitter.com/Raghu_Dixit/status/1049981078243545089

    ರಘು ದೀಕ್ಷಿತ್ ಬಗ್ಗೆ ಆರೋಪ ಬರುತ್ತಿದ್ದಂತೆಯೇ ಪತ್ನಿ ಮಯೂರಿ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಬಲಿಪಶುಗಳಾದ ಪರವಾಗಿ ನಾನು ಸದಾ ನಿಲ್ಲುತ್ತೇನೆ. ಅಲ್ಲದೇ ಸದಾ ನನ್ನ ಬೆಂಬಲವಿದೆ. ಇಂತಹ ಕಿರುಕುಳ ಆದಾಗ ಕಾನೂನು ಹೋರಾಟ ಮಾಡೋದು ಸೂಕ್ತ ಎನಿಸಿಸುತ್ತದೆ. ಯಾಕೆಂದ್ರೆ ಆವಾಗ ಇತರೆ ಮಹಿಳೆಯರ ಘನತೆಗೆ ಚ್ಯುತಿ ತರುವ ಧೈರ್ಯ ಪುರುಷರಿಗೆ ಬರಲ್ಲವೆಂದು ಅಂದುಕೊಂಡಿದ್ದೇನೆ ಅಂತ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv