Tag: meetings

  • ಸಭೆಯಲ್ಲಿ ಬಿಸ್ಕೆಟ್‍ಗೆ ಎಂಟ್ರಿ ಇಲ್ಲ, ಆರೋಗ್ಯಕರ ಸ್ನ್ಯಾಕ್ಸ್ ಮಾತ್ರ ಕೊಡಿ: ಆರೋಗ್ಯ ಇಲಾಖೆ ಸೂಚನೆ

    ಸಭೆಯಲ್ಲಿ ಬಿಸ್ಕೆಟ್‍ಗೆ ಎಂಟ್ರಿ ಇಲ್ಲ, ಆರೋಗ್ಯಕರ ಸ್ನ್ಯಾಕ್ಸ್ ಮಾತ್ರ ಕೊಡಿ: ಆರೋಗ್ಯ ಇಲಾಖೆ ಸೂಚನೆ

    ನವದೆಹಲಿ: ಇನ್ಮುಂದೆ ಕೇಂದ್ರ ಸರ್ಕಾರ ಆರೋಗ್ಯ ಇಲಾಖೆಯ ಸಭೆಗಳಲ್ಲಿ ಬಿಸ್ಕೆಟ್‍ಗೆ ಎಂಟ್ರಿ ಇಲ್ಲ. ಅದರ ಬದಲಿಗೆ ಆರೋಗ್ಯಕರ ಸ್ನ್ಯಾಕ್ಸ್ ಮಾತ್ರ ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವರಾದ ಹರ್ಷವರ್ಧನ್ ಅವರು ಸೂಚನೆ ನೀಡಿದ್ದಾರೆ.

    ಹೌದು. ಸಾಮನ್ಯವಾಗಿ ಎಲ್ಲಾ ಸಭೆಗಳಲ್ಲಿ ಸ್ಯಾಕ್ಸ್ ಗೆ ಟೀ ಜೊತೆ ಬಿಸ್ಕೆಟ್ ನೀಡುತ್ತಾರೆ. ಆದರೆ ಆರೋಗ್ಯಯುತ ಆಹಾರದ ಬಗ್ಗೆ ಕಾಳಜಿವಹಿಸಿರುವ ಹರ್ಷ ವರ್ಧನ್ ಅವರು ಇಲಾಖೆಯ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ವಿಶೇಷ ಸುತ್ತೋಲೆ ಹೊರಡಿಸಿದ್ದಾರೆ.

    ಇನ್ಮುಂದೆ ಸರ್ಕಾರಿ ಸಭೆಯಲ್ಲಿ ಬಿಸ್ಕೆಟ್ ನೀಡುವಂತಿಲ್ಲ, ಅದರ ಬದಲಿಗೆ ಡ್ರೈ ಫ್ರೂಟ್ಸ್ಗಳಾದ ಬಾದಾಮಿ, ವಾಲ್ನೆಟ್ ಸೇರಿದಂತೆ ಹುರಿದ ಕಾಳುಗಳನ್ನು ಸ್ನ್ಯಾಕ್ಸ್ ಗೆ ನೀಡಿ ಎಂದು ತಿಳಿಸಿದ್ದಾರೆ.

    ಜೂನ್ 19ರಂದು ಈ ಬಗ್ಗೆ ಆರೋಗ್ಯ ಸಚಿವಾಲಯ ಸುತ್ತೋಲೆ ಹೊರಡಿಸಿದ್ದು, ಇನ್ಮುಂದೆ ಅನಾರೋಗ್ಯಯುತ ಆಹಾರಗಳನ್ನು ಇಲಾಖೆಯ ಸಭೆಗಳಲ್ಲಿ ನೀಡುವಂತಿಲ್ಲ ಎಂದು ಹೇಳಿದೆ.

    ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಕೇಳಿದರೆ, ಇದು ಒಳ್ಳೆಯ ನಿರ್ಧಾರ. ನಮ್ಮ ಬಗ್ಗೆ ಸಚಿವರು ಕಾಳಜಿ ವಹಿಸುತ್ತಿರುವುದು ನಮಗೆ ಸಂತೋಷವಾಗಿದೆ. ಸಚಿವರು ವೈದ್ಯರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಅನಾರೋಗ್ಯವಾದ ಪದಾರ್ಥಗಳು ಯಾವ ರೀತಿ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅರಿವಿದೆ. ಆದ್ದರಿಂದ ಈ ರೀತಿ ನಿರ್ಣಯ ಕೈಗೊಂಡಿದ್ದಾರೆ. ನಾವು ಈ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

  • ಸಭೆಯಲ್ಲಿ ಮೊಬೈಲ್ ಬಳಸ್ಬೇಡಿ: ಸಚಿವರಿಗೆ ಯೋಗಿ ಸೂಚನೆ

    ಸಭೆಯಲ್ಲಿ ಮೊಬೈಲ್ ಬಳಸ್ಬೇಡಿ: ಸಚಿವರಿಗೆ ಯೋಗಿ ಸೂಚನೆ

    – ಕ್ಯಾಬಿನೆಟ್ ಸಭೆಗೂ ಸೂಚನೆ ಅನ್ವಯ

    ಲಕ್ನೋ: ಅಧಿಕೃತ ಸಭೆಯಲ್ಲಿ ಮೊಬೈಲ್ ಫೋನ್ ಬಳಸದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಚಿವರಿಗೆ ಸೂಚನೆ ನೀಡಿದ್ದಾರೆ.

    ಚರ್ಚೆಯಲ್ಲಿ ಸಚಿವರು ಭಾಗಿಯಾಗುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಮೊಬೈಲ್‍ನಿಂದ ಉಂಟಾಗುವ ಅಡಚಣೆ ತಡೆಯುವ ನಿಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಆದೇಶವು ಕ್ಯಾಬಿನೆಟ್ ಸಭೆಗೂ ಅನ್ವಯವಾಗುತ್ತದೆ ಎಂದು ಮುಖ್ಯಮಂತ್ರಿಗಳ ಹಿರಿಯ ಕಾರ್ಯದರ್ಶಿಯೊಬ್ಬರು ತಿಳಿಸಿದ್ದಾರೆ.

    ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರ ಎದುರಿಸುತ್ತಿರುವ ಸವಾಲುಗಳ ಕುರಿತಾದ ಚರ್ಚೆಯಲ್ಲಿ ಸಚಿವರು ಗಮನ ಕೇಂದ್ರಿಕರಿಸಬೇಕು. ಸಭೆ ನಡೆದಾಗ ಮೊಬೈಲ್‍ನಿಂದ ಅಡಚಣೆ ಉಂಟಾಗುತ್ತಿದೆ. ಅಷ್ಟೇ ಅಲ್ಲದೆ ಕೆಲವು ಸಚಿವರು ಸಭೆಯಲ್ಲಿಯೂ ಮೊಬೈಲ್ ಹಿಡಿದುಕೊಂಡು ವಾಟ್ಸಪ್ ಮೆಸೇಜ್ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಅಧಿಕೃತ ಸಭೆಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಮೊಬೈಲ್ ಫೋನ್ ಹ್ಯಾಕ್ ಮಾಡುವ ಮೂಲಕ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ಬಹಿರಂಗವಾಗುತ್ತವೆ ಎಂಬ ಕಾರಣಕ್ಕೂ ಯೋಗಿ ಆದಿತ್ಯನಾಥ್ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೇಳಿ ಬಂದಿದೆ.

    ಈ ಹಿಂದೆ ಸಭೆಗೆ ಮೊಬೈಲ್ ಫೋನ್ ತರಲು ಮಂತ್ರಿಗಳಿಗೆ ಅವಕಾಶವಿತ್ತು. ಆದರೆ ಸೈಲೆಂಟ್ ಮೂಡ್‍ನಲ್ಲಿ ಇಡಬೇಕು, ಇಲ್ಲವೆ ಸ್ವಿಚ್‍ಆಫ್ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಈಗ ಸಭೆಗೂ ಮುನ್ನ ಕೌಂಟರ್ ನಲ್ಲಿ ಮೊಬೈಲ್ ಇಟ್ಟು ಟೋಕನ್ ಪಡೆಯಬೇಕು. ಸಭೆಯ ಬಳಿಕ ಟೋಕನ್ ನೀಡಿ ತಮ್ಮ ತಮ್ಮ ಮೊಬೈಲ್ ಪಡೆಬೇಕು ಎನ್ನುವ ಸೂಚನೆಯನ್ನು ಯೋಗಿ ಆದಿತ್ಯನಾಥ್ ನೀಡಿದ್ದಾರೆ ಎನ್ನಲಾಗಿದೆ.

    ಈ ಸೂಚನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಿಗೆ ನೀಡಿದ್ದರು.

  • ಪ್ರಧಾನಿ ಮೋದಿ ತಮ್ಮ ಸಭೆಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿದ್ದು ಯಾಕೆ?

    ಪ್ರಧಾನಿ ಮೋದಿ ತಮ್ಮ ಸಭೆಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿದ್ದು ಯಾಕೆ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುವ ಸಭೆಗಳಲ್ಲಿ ಅಧಿಕಾರಿಗಳ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ.

    ಸಭೆ ನಡೆಸುವ ವೇಳೆ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ಬಳಕೆಯನ್ನು ಮೋದಿ ನಿಷೇಧಿಸಿದ್ದಾರೆ.

    ನಾಗರಿಕ ಸೇವಾ ದಿನಾಚರಣೆ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಈಗ ಗಮನಿಸಿದ್ದೇನೆ. ಈಗ ಜಿಲ್ಲೆಗಳ ಅಧಿಕಾರಿಗಳು ಹೆಚ್ಚು ಸಮಯವನ್ನು ಸಾಮಾಜಿಕ ಜಾಲತಾಣದಲ್ಲಿ ಕಳೆಯುತ್ತಿದ್ದಾರೆ. ಸಭೆ ನಡೆಯುತ್ತಿರುವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗುತ್ತಿದ್ದಾರೆ. ಹೀಗಾಗಿ ನನ್ನ ಸಭೆಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣಗಳನ್ನು ಅಧಿಕಾರಿಗಳು ಜನರ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಿಗೆ ಬಳಸಬೇಕೇ ವಿನಾ: ಕೆಲಸದ ಅವಧಿಯಲ್ಲಿ ಸ್ವಯಂ ಪ್ರಶಂಸೆಗಾಗಿ ವೈಯಕ್ತಿಕ ವಿಚಾರಗಳಿಗೆ ಬಳಕೆ ಮಾಡಬಾರದು ಎಂದು ಅವರು ತಿಳಿಸಿದರು.

    ಇದನ್ನೂ ಓದಿ: ಮೋದಿಗೆ ಜೀವ ಬೆದರಿಕೆ ಇದ್ರೆ ಸಾಯಲಿ ಬಿಡಿ: ಬಸವರಾಜ ರಾಯರೆಡ್ಡಿ ಉಡಾಫೆಯ ಹೇಳಿಕೆ