ಮೈಸೂರು: ಇಲ್ಲಿನ ಕ್ಯಾತಮಾರನಹಳ್ಳಿ(Kyathamaranahalli) ವಿವಾದಿತ ಸ್ಥಳದಲ್ಲಿ ಮದರಸಾ (ಅರೇಬಿಕ್ ಶಾಲೆ) ತೆರೆಯಲು ಜಿಲ್ಲಾಧಿಕಾರಿ ಅನುಮತಿ ನೀಡಿದ ಹಿನ್ನಲೆ ಹುಲಿಯಮ್ಮ ದೇವಸ್ಥಾನ ಬಳಿ ಹಿಂದೂ ಪರ ಮುಖಂಡರು ಹಾಗೂ ಗ್ರಾಮಸ್ಥರು ಸಭೆ ನಡೆಸಿದರು.
ಸಭೆಯಲ್ಲಿ ಅರೇಬಿಕ್ ಶಾಲೆ(Arabic School) ತೆರೆಯುವುದರಿಂದ ಆಗುವ ಸಾಧಕ ಭಾದಕಗಳ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಗ್ರಾಮಸ್ಥರ ಅಭಿಪ್ರಾಯದ ವಿರುದ್ಧವಾಗಿ ಡಿಸಿ ಆದೇಶ ನೀಡಿದ್ದಾರೆ, ಇದು ಸರಿಯಲ್ಲ. ಸದರಿ ಜಾಗ ವಸತಿ ವಲಯ, ಯಾವ ಭೂ ಪರಿವರ್ತನೆಯಾಗಿಲ್ಲ. ಇದನ್ನು ಪರಿಗಣಿಸದೇ ಶಾಲೆಗೆ ಅನುಮತಿ ನೀಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: Raichur | ಗ್ರಾನೈಟ್ ಕ್ವಾರಿಯಲ್ಲಿ ಸಿಡಿಮದ್ದು ಸ್ಫೋಟ – ಓರ್ವ ಸಾವು, ಇನ್ನೋರ್ವ ಗಂಭೀರ
ಡಿಸಿ ಆದೇಶದ ವಿರುದ್ಧ ಕಾನೂನು ರೀತಿ ಹೋರಾಟಕ್ಕೆ ಗ್ರಾಮಸ್ಥರು ನಿರ್ಣಯಿಸಿದರು. ಡಿಸಿ ಅನುಮತಿಯನ್ನು ರದ್ದುಪಡಿಸಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ವಿವಾದಿತ ಸ್ಥಳದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುವುದನ್ನು ತಪ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ದೇವಸ್ಥಾನ ಬಳಿ ಸಭೆ ಸೇರಿದ್ದ ನೂರಾರು ಜನರಲ್ಲಿ, ಮಹಿಳೆಯರ ಸಂಖ್ಯೆಯೇ ಹೆಚ್ಚಿತ್ತು. ಇದನ್ನೂ ಓದಿ: ಈ ಸರ್ಕಾರ ಪೋಸ್ಟ್ ಮಾರ್ಟಂಗೂ ದರ ವಿಧಿಸಿಬಿಟ್ರೆ ಸಾಯೋದಕ್ಕೂ ಜನ ಹಿಂಜರೀತಾರೆ – ಸಿ.ಟಿ ರವಿ ಲೇವಡಿ
ಹತ್ಯೆಯಾದ ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ತಾಯಿ ಚಂದ್ರಮ್ಮ ಸಭೆಯಲ್ಲಿ ಮಾತನಾಡಿ, ನನ್ನ ಮಗ ಕೊಲೆಯಾಗಿದ್ದು ಮಸೀದಿ ಕಾರಣಕ್ಕೆ ಈ ಜಾಗದಲಿ ಈಗ ಅಲ್ಲಿ ಮದರಸಾಕ್ಕೆ ಅನುಮತಿ ನೀಡಿದ್ದಾರೆ. ಇದನ್ನ ನಾವು ಒಪ್ಪುವುದಿಲ್ಲ. ಆ ಸ್ಥಳದಲ್ಲಿರುವ ಕಟ್ಟಡವನ್ನ ಹೊಡೆದು ಹಾಕಬೇಕು. ಅದನ್ನ ಹೊಡೆದು ಹಾಕದಿದ್ದರೆ ನಾನು ಮೊಮ್ಮಕ್ಕಳ ಸಮೇತ ನನ್ನ ಮಗನ ಸ್ಥಳಕ್ಕೆ ಹೋಗುತ್ತೇವೆ. ಯಾವುದೇ ಕಾರಣಕ್ಕೂ ಮದರಸಾ ತೆರೆಯಬಾರದು. ನಾನು ಈ ವಿಚಾರವಾಗಿ ಹೋರಾಟ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಾಲಕನ ಮೇಲೆ ಹಲ್ಲೆ ನಡೆಸಿ, ಚಡ್ಡಿಯೊಳಗೆ ಇರುವೆ ಬಿಟ್ಟು ವಿಕೃತಿ – ಆರೋಪಿಗಳು ಅಂದರ್
ಗ್ರಾಮಸ್ಥರ ಪರ ಕಾನೂನು ಹೋರಾಟ ಮಾಡುತ್ತಿರುವ ವಕೀಲರಾದ ಹಾಮಾ ಭಾಸ್ಕರ್ ಮಾತನಾಡಿ, ಕ್ಯಾತಮಾರನಹಳ್ಳಿ ವಿವಾದಿತ ಸ್ಥಳದಲ್ಲಿ ಅರೇಬಿಕ್ ಶಾಲೆ ಆರಂಭ ಮಾಡುವ ಡಿಸಿ ಆದೇಶ ಕಾನೂನು ಬಾಹಿರ. ಇದು ಕೋಮು ಸೌಹಾರ್ದತೆ ಹಾಳು ಮಾಡುವ ಆದೇಶ. ಈ ಆದೇಶದ ವಿರುದ್ಧ ಸ್ಥಳೀಯರೆಲ್ಲಾ ಸೇರಿ ಕಾನೂನು ಹೋರಾಟ ಮಾಡುತ್ತೇವೆ. ಶಾಲೆ ಆರಂಭಕ್ಕೆ ಅವಕಾಶ ಕೊಡಲ್ಲ ಎಂದು ಹೇಳಿದರು.
ನವದೆಹಲಿ: ಲೋಕಸಭಾ ಚುನಾವಣೆಯ (Loksabha Elections 2024) ಫಲಿತಾಂಶವು ಜೂನ್ 4 ರಂದು ಹೊರಬಿದ್ದಿದೆ. ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ 292 ಸ್ಥಾನಗಳನ್ನು ಗೆದ್ದಿದ್ದು, ನರೇಂದ್ರ ಮೋದಿ ಮೂರನೇ ಅವಧಿಗೆ ಅಧಿಕಾರ ನಡೆಸುವುದು ಖಚಿತವಾಗಿದೆ. ಆದರೆ ಬಿಜೆಪಿ ಗೆದ್ದರೂ ಮಿತ್ರ ಪಕ್ಷಗಳ ಬೆಂಬಲದಿಂದ ಬಹುಮತ ಸಾಬೀತು ಪಡಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಸಭೆಯನ್ನು ಕರೆಯಲಾಗಿದೆ. ನರೇಂದ್ರ ಮೋದಿ (Narendra Modi) ನಿವಾಸದಲ್ಲಿ ನಡೆಯುವ ಈ ಮಹತ್ವದ ಸಭೆಯಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಬಿಹಾರ ಸಿಎಂ ನಿತೀಶ್ ಕುಮಾರ್, ಏಕನಾಥ್ ಶಿಂಧೆ, ಪವನ್ ಕಲ್ಯಾಣ್ ಹಾಗೂ ಹೆಚ್‌ಡಿಕೆ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಆದರೆ ಎನ್‌ಡಿಎ ಮೈತ್ರಿಕೂಟದ ಈ ಸಭೆಗೆ ಅಜಿತ್ ಪವಾರ್ ಗೈರಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಮಿತ್ ಶಾ, ನಡ್ಡಾ ಹಾಗೂ ರಾಜನಾಥ್ ಸಿಂಗ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದಾರೆ. ಎನ್‌ಡಿಎ ಅಂಗಪಕ್ಷಗಳು ಹಕ್ಕು ಪ್ರತಿಪಾದನೆಗೆ ಒಪ್ಪಿಗೆ ಸೂಚಿಸಿವೆ. ಹೀಗಾಗಿ ಸಭೆಯ ಬಳಿಕ ಸರ್ಕಾರ ರಚನೆಗೆ ಹಕ್ಕು ಪ್ರತಿಪಾದನೆ ಮಾಡುವ ಸಾಧ್ಯತೆಗಳಿವೆ.
ಇತ್ತ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಜೂನ್ 8 ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಮೋದಿಯವರು ಈಗಾಗಲೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇಂದು ರಾಷ್ಟ್ರಪತಿ ಭವನಕ್ಕೆ ತೆರಳಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
ಬೆಂಗಳೂರು: ಕಾವೇರಿ ನದಿ (Kaveri Water) ನೀರು ವಿಚಾರವಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾಳೆ ದೆಹಲಿಯಲ್ಲಿ (New Delhi) ರಾಜ್ಯದ ಎಲ್ಲಾ ಸಂಸದರ ಸಭೆ ಕರೆಯಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.
ಸದಾಶಿವನಗರ (Sadashivanagar) ನಿವಾಸದ ಬಳಿ ದೆಹಲಿಗೆ ಹೊರಡುವ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾವೇರಿ ನದಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ವಿಚಾರಣೆ ನಡೆಯಲಿದ್ದು, ಕೇಂದ್ರ ಸಚಿವರು ಹಾಗೂ ರಾಜ್ಯದ ಸಂಸದರನ್ನು ಭೇಟಿ ಮಾಡಲು ಮುಖ್ಯಮಂತ್ರಿ ನಾನು, ಸಿಎಂ ಸಿದ್ದರಾಮಯ್ಯ, ಸಚಿವರಾದ ಚೆಲುವರಾಯಸ್ವಾಮಿ, ಮಹದೇವಪ್ಪ, ಹೆಚ್.ಕೆ ಪಾಟೀಲ್ ಹಾಗೂ ರಾಜ್ಯದ ಪ್ರತಿನಿಧಿಗಳು ದೆಹಲಿಗೆ ತೆರಳುತ್ತಿದ್ದೇವೆ ಎಂದರು. ಇದನ್ನೂ ಓದಿ: ವರುಣಾದಲ್ಲಿ ಕುಕ್ಕರ್ ಹಂಚಿಕೆ : ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದ ಬೊಮ್ಮಾಯಿ
ನವದೆಹಲಿ: ವಿದೇಶ ಪ್ರವಾಸ ಮುಗಿಸಿ ವಾಪಸ್ಸಾದ ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದರು. ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಅವರು ಮಣಿಪುರ (Manipura) ದ ಪರಿಸ್ಥಿತಿ ಸೇರಿದಂತೆ ಪ್ರಮುಖ ವಿದ್ಯಮಾನಗಳ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ (AmitShah), ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman), ನಗರಾಭಿವೃದ್ಧಿ ಸಚಿವ ಹರ್ದೀಪ್ ಪುರಿ, ಪ್ರಧಾನಮಂತ್ರಿ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ (PK Mishra) ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ ನೇರ ಹೊಣೆ – ಪ್ರಮೋದ್ ಮುತಾಲಿಕ್ ಕಿಡಿ
#WATCH | Prime Minister Narendra Modi chairs an important meeting, in Delhi
PM arrived in Delhi last night after concluding his US and Egypt state visits. pic.twitter.com/Gb4i6XicnR
ಇದಕ್ಕೂ ಮುನ್ನ ಪ್ರತ್ಯೇಕವಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಅಮಿತ್ ಶಾ, ಮಣಿಪುರದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ (Biren Singh) ಉಪಸ್ಥಿತರಿದ್ದರು. ಹಿಂಸಾಚಾರವನ್ನು ನಿಯಂತ್ರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮರ್ಥವಾಗಿವೆ ಎಂದು ತಿಳಿಸಿದ್ದಾರೆ.
ಶನಿವಾರ ಗೃಹ ಸಚಿವ ಅಮಿತ್ ಶಾ ಮಣಿಪುರದ ಪರಿಸ್ಥಿತಿ ಕುರಿತು ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೂರು ಗಂಟೆಗಳ ಸುದೀರ್ಘ ಸಭೆಯಲ್ಲಿ 18 ರಾಜಕೀಯ ಪಕ್ಷಗಳು, ಈಶಾನ್ಯದ ನಾಲ್ಕು ಸಂಸದರು ಮತ್ತು ಪ್ರದೇಶದ ಇಬ್ಬರು ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ದಿನದಿಂದ ಮಣಿಪುರದ ಪರಿಸ್ಥಿತಿಯನ್ನು ನಿರಂತರವಾಗಿ ಅವಲೋಕಿಸುತ್ತಿದ್ದಾರೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಸೂಕ್ಷ್ಮ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವರು ಸರ್ವಪಕ್ಷ ಸಭೆಗೆ ತಿಳಿಸಿದ್ದರು.
– ರಾಜ್ಯ ಬಿಜೆಪಿಯಲ್ಲಿ ಒಳಬೇಗುದಿ ಕೊತಕೊತ – ನಾಯಕರ ಹೊಂದಾಣಿಕೆ ರಾಜಕೀಯಕ್ಕೆ ಕಿಡಿ
ಬೆಂಗಳೂರು: ರಾಜ್ಯ ಬಿಜೆಪಿ (Karnataka BJP) ಈಗ ಸಿಟ್ಟಿನ ಗಿರಣಿ ಆದಂತಿದೆ. ಪಕ್ಷದ ವಿರುದ್ಧ ಕಾರ್ಯಕರ್ತರ ಆಕ್ರೋಶ ತಣಿಸುತ್ತಲೇ ಇಲ್ಲ. ಆಡಳಿತದಲ್ಲಿದ್ದಾಗಲೂ ಕಾರ್ಯಕರ್ತರು ರೆಬೆಲ್ ಆಗಿದ್ದರು. ಈಗ ವಿಪಕ್ಷದಲ್ಲಿದ್ದಾಗಲೂ ಕಾರ್ಯಕರ್ತರು ರೆಬೆಲ್ ಆಗಿದ್ದಾರೆ.
ವಿಧಾನಸಭೆ (Vidhan sabha Election) ಸೋಲಿನಿಂದ ಎದೆಯೊಳಗಿನ ಜ್ವಾಲಾಮುಖಿ ಧಗಧಗ ಉರಿಯುತ್ತಿದೆ. ಇಷ್ಟು ದಿನ ಅದುಮಿಟ್ಟಿದ್ದ ಸಿಟ್ಟು ಜಿಲ್ಲಾವಾರು ಕಾರ್ಯಕರ್ತರ ಸಭೆಗಳಲ್ಲಿ ಹೊರಬೀಳುತ್ತಿದೆ. ಅದರಲ್ಲೂ ಪಕ್ಷದ ದಿಗ್ಗಜ ನಾಯಕರ ಸಭೆಗಳಲ್ಲಿ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ.
ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿವಿ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ್ ಜೋಷಿ ಸಭೆಗಳಲ್ಲಿ ಆಕ್ರೋಶ ಸ್ಫೋಟಗೊಂಡಿದೆ. ಚುನಾವಣೆ ಮುಗಿದು ತಿಂಗಳಾದರೂ ಕಾರ್ಯಕರ್ತರ ಬಳಿ ಬಾರದಕ್ಕೆ ಸಿಟ್ಟಾಗಿದ್ದಾರೆ. ಪಕ್ಷಕ್ಕಾಗಿ ಪ್ರಾಮಾಣಿಕ ಸೇವೆ ಮಾಡಿದ ಕಾರ್ಯಕರ್ತರಿಗೆ ಗೌರವ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಪ್ರತಾಪ್ ಸಿಂಹ, ಸಿಪಿ ಯೋಗೇಶ್ವರ್, ಸಿಟಿ ರವಿ, ರೇಣುಕಾಚಾರ್ಯರಂಥ ನಾಯಕರೇ `ಹೊಂದಾಣಿಕೆ-ಒಳ ಒಪ್ಪಂದ ರಾಜಕೀಯ’ದ ಬಗ್ಗೆ (Adjustment Politics) ಬಹಿರಂಗ ಹೇಳಿಕೆ ಕೊಟ್ಟಿದ್ದರು. ಇದೀಗ ನಾಯಕರು ವಿರುದ್ಧ ಕಾರ್ಯಕರ್ತರೇ ಮುಗಿಬಿದ್ದು ಸಿಟ್ಟು ಹೊರ ಹಾಕುತ್ತಿದ್ದಾರೆ.
ಮುಂದಿನ ಲೋಕಸಭೆಗೆ (Lok Sabha Election) ಸಿದ್ಧತೆ ನಡೆಸುತ್ತಿರುವ ಬಿಜೆಪಿ, ಜಿಲ್ಲಾವಾರು ಕಾರ್ಯಕರ್ತರ ಸಭೆ ನಡೆಸುತ್ತಿದೆ. ಚುನಾವಣೆಯಲ್ಲಿ ಪಕ್ಷದ ಸೋಲಿಗೆ ನಾಯಕರ ಒಳ ಒಪ್ಪಂದ, ಡೀಲ್ ರಾಜಕೀಯವೇ ಕಾರಣ ಎಂದು ಕಿಡಿಕಾರಿದ್ದಾರೆ. ಬಿಜೆಪಿಯಲ್ಲಿ ಪ್ರಭಾವಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ವಾರವೊಂದರಲ್ಲಿ 4 ಜಿಲ್ಲೆಗಳಲ್ಲಿ ನಡೆದ ಚುನಾವಣಾ ಸೋಲಿನ ಪರಾಮರ್ಶೆ ಸಭೆಯಲ್ಲಿ ಕಾರ್ಯಕರ್ತರು ಸಿಟ್ಟು ಹೊರ ಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲೇ ಯತ್ನಾಳ್‍ಗೆ ಬೊಮ್ಮಾಯಿ ತಿರುಗೇಟು
ಸೋತ ಅಭ್ಯರ್ಥಿ ಆಕ್ರೋಶ ದಿನಾಂಕ: 25.06.2023 ಸ್ಥಳ: ಮಹಾಲಕ್ಷ್ಮಿ ಲೇಔಟ್
ಮಹಾಲಕ್ಷ್ಮಿ ಲೇಔಟ್‍ನಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಭೆ ನಡೆಯಿತು. ಈ ವೇಳೆ ಬ್ಯಾಟರಾಯನಪುರದ ಬಿಜೆಪಿ ಅಭ್ಯರ್ಥಿಯಾಗಿದ್ದ ತಮ್ಮೇಶ್‍ಗೌಡ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪರ ಕೆಲಸ ಮಾಡಿರುವ ಮುನೇಂದ್ರ ಕುಮಾರ್ ಹೊರಗೆ ಕಳಿಸುವಂತೆ ಅಶ್ವಥ್ ನಾರಾಯಣ್ ಎದುರು ಸಿಟ್ಟು ಹೊರ ಹಾಕಿದರು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಯಡಿಯೂರಪ್ಪ ಕಾಲಿಗೆ ಎರಗಿ ಬೇಸರ ಹೊರಹಾಕಿದರು ತಮ್ಮೇಶ್ ಗೌಡ. ವೇದಿಕೆ ಮೇಲೆ ಮುನೇಂದ್ರ ಕುಮಾರ್‌ನ್ನು ಕೂರಿಸಿದ್ದಾರೆ. ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದರು. ಕೊನೆಗೆ ಯಡಿಯೂರಪ್ಪ ಸಮಾಧಾನ ಪಡಿಸಿದರು.
ಇದೇ ಸಭೆಯಲ್ಲಿ ದಾಸರಹಳ್ಳಿ ಕ್ಷೇತ್ರದ ಶಾಸಕ ಮುನಿರಾಜು ಭಾಷಣ ಮಾಡುತ್ತಿದ್ದರು. ಈ ವೇಳೆ, ಬಿಜೆಪಿ ಕಾರ್ಯಕರ್ತರು ಗದ್ದಲ ಸೃಷ್ಟಿಸಿದರು. ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಮುಖಂಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಬೆನ್ನಿಗೆ ಚೂರಿ ಹಾಕಿದವರನ್ನು ಪಕ್ಷದಿಂದ ದೂರ ಇಡಬೇಕು. ಸಾಮಾನ್ಯ ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡೋಣ ಅಂತ ಮುನಿರಾಜು ಹೇಳಿದರು.
ಮುನಿರಾಜು ಭಾಷಣಕ್ಕೆ ಅಡ್ಡಿ ಪಡಿಸಿ, ಕೆರಳಿದ ಕಾರ್ಯಕರ್ತರು, ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶಗಳು ಸಿಗುತ್ತಿಲ್ಲ ನಾವು ತಪ್ಪು ಮಾಡಿದಾಗ ಬುದ್ದಿ ಹೇಳುತ್ತೀರಿ. ನಾಯಕರು ತಪ್ಪುಮಾಡಿದಾಗ ಯಾಕೆ ಬುದ್ದಿ ಹೇಳುವುದಿಲ್ಲ ಎಂದು ಖಾರವಾಗಿ ಪ್ರಶ್ನೆ ಮಾಡಿದರು. ಶಾಸಕ ಮುನಿರಾಜು ಸಮಾಧಾನಪಡಿಸಿದರೂ ಕಾರ್ಯಕರ್ತರು ಬಗ್ಗಲಿಲ್ಲ. ಕೊನೆಗೆ ಯಡಿಯೂರಪ್ಪ ಮಧ್ಯ ಪ್ರವೇಶಿಸಿದರು. ನೀವು ಸುಮ್ಮನಾಗದಿದ್ದರೆ ಸಭೆಯಿಂದ ಹೊರ ಹೋಗ್ತೇನೆ. ನಿಮ್ಮ ಸಮಸ್ಯೆ ನಾನು ಬಗೆ ಹರಿಸ್ತೇನೆ ಅಂತ ಆಶ್ವಾಸನೆ ಕೊಟ್ಟರು.
ರಾಮನಗರದ ಸಭೆಯಲ್ಲಿ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡರು. ಚುನಾವಣೆಯಲ್ಲಿ ಸರಿಯಾಗಿ ಹಣ ಹಂಚಿಕೆ ಮಾಡಿಲ್ಲ ಎಂದು ಕನಕಪುರ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ್ ಹಾಗೂ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಿದ್ದಮರಿಗೌಡ ನಡುವೆ ಗುದ್ದಾಟ ನಡೆಯಿತು. ಈ ವೇಳೆ ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ್ ವಿರುದ್ಧವೂ ಅಸಮಧಾನ ಹೊರ ಹಾಕಿದರು. ಸಭೆಯಲ್ಲಿ ಕೆಲ ಕಾಲ ಗೊಂದಲ ವಾತವರಣ ಸೃಷ್ಟಿಯಾಗಿತ್ತು. ಬಿಜೆಪಿ ಮುಖಂಡರು ಇಬ್ಬರನ್ನೂ ಸಮಾಧಾನ ಪಡಿಸಿದರು.
ಹೊಂದಾಣಿಕೆಯಿಂದ ಸೋಲು ದಿನಾಂಕ: 22.06.2023 ಸ್ಥಳ: ಕೋಲಾರ
ಜೂನ್ 22 ರಂದು ಕೋಲಾರದಲ್ಲಿ ಅಶೋಕ್, ಸುಧಾಕರ್, ಸಂಸದರಾದ ಪ್ರತಾಪ್ ಸಿಂಹ, ಮುನಿಸ್ವಾಮಿ ಜಿಲ್ಲಾ ಮಟ್ಟದ ಸಭೆ ನಡೆಸಿದರು. ಈ ವೇಳೇ, ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣದಿಂದ ಪಕ್ಷಕ್ಕೆ ಸೋಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಕಿಡಿಕಾರಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುನಾಥ್ ರೆಡ್ಡಿ ವಿರುದ್ಧ ಮಾಲೂರು ತಾಲ್ಲೂಕು ಕಾರ್ಯಕರ್ತರು ರೊಚ್ಚಿಗೆದ್ದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿ ಪಕ್ಷೇತರ ಅಭ್ಯರ್ಥಿ ಪರವಾಗಿ ಚುನಾವಣೆ ಮಾಡಿರುವ ಗುರುನಾಥ್ ರೆಡ್ಡಿಯನ್ನು ಈ ಸ್ಥಾನದಿಂದಲೇ ಕೆಳಗಿಳಿಸುವಂತೆ ಒತ್ತಾಯಿಸಿದರು.
ಸೋಮಣ್ಣ ಸೋಲಿಗೆ ನೀವೇ ಕಾರಣ ದಿನಾಂಕ: 22.06.2023 ಸ್ಥಳ: ಚಾಮರಾಜನಗರ
ಚಾಮರಾಜನಗರದದಲ್ಲಿ ವಿ.ಸೋಮಣ್ಣ ಸೋಲಿಗೆ ನೀವೇ ಕಾರಣ ಅಂತ ಜಿಲ್ಲಾ ಬಿಜೆಪಿ ಮುಖಂಡರನ್ನುಸೋಮಣ್ಣ ಬೆಂಬಲಿಗನೊಬ್ಬ ಮಾಜಿ ಸಿಎಂ ಡಿವಿ ಸದಾನಂದಗೌಡರ ಎದುರೇ ತರಾಟೆ ತೆಗೆದುಕೊಂಡರು. ಸೋಮಣ್ಣ ಸೋಲಿಗೆ ಕಾಂಗ್ರೆಸ್‍ನ ಗ್ಯಾರಂಟಿ ಕಾರಣವಲ್ಲ, ನಾಯಕರಾದ ನೀವೇ ಕಾರಣ. ಮೊದಲು ಕಾರ್ಯಕರ್ತರಿಗೆ ಮಾತನಾಡಲು ಅವಕಾಶ ನೀಡಿ. ಚುನಾವಣೆಯಲ್ಲಿ ನಮಗೆ ಯಾಕೆ ಹಿನ್ನಡೆಯಾಗಿದೆ ಅಂತ ನಾವು ಹೇಳ್ತೇವೆ ಅಂತ ಸೋಮಣ್ಣ ಆಪ್ತ ಕುಮಾರ್ ಕಿಡಿಕಾರಿದರು.
– ಅಧಿಕಾರಕ್ಕಾಗಿ ಅಲ್ಲ: ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ವಿಪಕ್ಷಗಳು
ಪಾಟ್ನಾ: ಲೋಕಸಭಾ ಚುನಾವಣೆ (Lok Sabha Election) ಹತ್ತಿರವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು (Opposition) ಮೈಕೊಡವಿ ಎದ್ದಿವೆ. ಬಿಜೆಪಿ (BJP) ವಿರುದ್ಧ ಪರಿಣಾಮಕಾರಿ ಒಕ್ಕೂಟ ರಚಿಸಿ ಹೋರಾಟ ನಡೆಸುವ ಕುರಿತು ಮೊದಲ ಹೆಜ್ಜೆ ಇಟ್ಟಿವೆ.
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಏಕೈಕ ಗುರಿಯೊಂದಿಗೆ ಬಿಹಾರ ರಾಜಧಾನಿ ಪಾಟ್ನಾದಲ್ಲಿ (Patna) ವಿಪಕ್ಷ ನಾಯಕರು ಸಭೆ ಸೇರಿದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಮಮತಾ ಬ್ಯಾನರ್ಜಿ, ಶರದ್ ಪವಾರ್, ಹೇಮಂತ್ ಸೊರೇನ್, ಉದ್ಧವ್ ಠಾಕ್ರೆ, ಸೀತಾರಾಂ ಯೆಚೂರಿ, ಅಖಿಲೇಶ್ ಯಾದವ್, ಎಎಪಿಯ ರಾಘವ್ ಚಡ್ಡಾ, ಮೆಹಬೂಬಾ ಮುಫ್ತಿ ಸೇರಿ 15 ಪಕ್ಷಗಳ ರಾಜಕೀಯ ಮುಖಂಡರು ಸಭೆ ಸೇರಿ, ಮೋದಿ ಸರ್ಕಾರವನ್ನು ಗದ್ದುಗೆಯಿಂದ ಇಳಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.
ಕರ್ನಾಟಕ ಗೆಲುವಿನ ಜೋಶ್‌ನಲ್ಲಿರುವ ಕಾಂಗ್ರೆಸ್ ನಾಯಕರು, ನಾವೆಲ್ಲಾ ಒಗ್ಗೂಡಿದಲ್ಲಿ ಮೋದಿಯನ್ನು ಮನೆಗೆ ಕಳಿಸೋದು ದೊಡ್ಡ ವಿಚಾರವಲ್ಲ. ನಾವೆಲ್ಲಾ ಒಗ್ಗೂಡಿ ಹೋರಾಟ ನಡೆಸೋಣ ಎಂದು ಕರೆ ನೀಡಿದರು. ಇದೇ ವೇಳೆ ಸಭೆಯಲ್ಲಿ ತಮ್ಮೊಳಗೆ ಇರುವ ತಿಕ್ಕಾಟದ ಬಗ್ಗೆಯೂ ಚರ್ಚೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ-ಕಾಂಗ್ರೆಸ್ ನಡುವೆ ಸೆಣಸಿದೆ. ದೆಹಲಿ, ಪಂಜಾಬ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ನಡುವಿನ ತಿಕ್ಕಾಟದ ಬಗ್ಗೆ ಚರ್ಚೆ ನಡೆದಿದೆ. ಇದನ್ನೂ ಓದಿ: ಇನ್ಫೋಸಿಸ್ ಸುಧಾಮೂರ್ತಿಗೆ ಬಾಲ ಸಾಹಿತ್ಯ ಪುರಸ್ಕಾರ
ಈ ಸಭೆಯಲ್ಲಿ ಯಾವುದೇ ಪ್ರಮುಖ ನಿರ್ಧಾರ ಹೊರಬಿದ್ದಿಲ್ಲ. ಶೀಘ್ರವೇ ಶಿಮ್ಲಾದಲ್ಲಿ 2 ದಿನಗಳ ಸಭೆ ನಡೆಸಲು ಇಂದಿನ ಮೀಟಿಂಗ್‌ನಲ್ಲಿ ತೀರ್ಮಾನಿಸಲಾಗಿದೆ. ಶಿಮ್ಲಾ ಸಭೆಯಲ್ಲಿ ಸಂಚಾಲಕರನ್ನು ಆಯ್ಕೆ ಮಾಡುವ ಸಂಭವ ಇದೆ. ಆದರೆ 80 ಲೋಕಸಭಾ ಸ್ಥಾನಗಳಿರುವ ಉತ್ತರ ಪ್ರದೇಶದಿಂದ ಕೇವಲ ಸಮಾಜವಾದಿ ಪಕ್ಷ ಮಾತ್ರ ಈ ಕೂಟದಲ್ಲಿ ಕಾಣಿಸಿಕೊಂಡಿರೋದು ಚರ್ಚೆಗೆ ಗ್ರಾಸವಾಗಿದೆ.
ಈ ಸಭೆಗೆ ಬಿಎಸ್‌ಪಿ ನಾಯಕಿ ಮಾಯಾವತಿಯನ್ನು ಆಹ್ವಾನಿಸಿಲ್ಲ. ಕರ್ನಾಟಕದ ಜೆಡಿಎಸ್, ಆಂಧ್ರದ ವೈಎಸ್‌ಆರ್, ತೆಲುಗುದೇಶಂ, ತೆಲಂಗಾಣದ ಬಿಆರ್‌ಎಸ್, ಒಡಿಶಾದ ಬಿಜೆಡಿ ಈ ಕೂಟದಲ್ಲಿ ಕಾಣಿಸಿಕೊಂಡಿಲ್ಲ. ಇವರಿಗೆ ಜೆಡಿಯು ಕೂಡ ಆಹ್ವಾನ ನೀಡಿಲ್ಲ. ಈ ಪಕ್ಷಗಳನ್ನು ಹೊರಗಿಟ್ಟು ಬಿಜೆಪಿ ವಿರುದ್ಧ ಗೆಲ್ಲುವುದು ಸಾಧ್ಯವೇ ಎಂಬ ಪ್ರಶ್ನೆಯೂ ಈಗ ಎದ್ದಿದೆ. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ – ಜಗದೀಶ್ ಶೆಟ್ಟರ್ ಸೇರಿ ಕಾಂಗ್ರೆಸ್‌ನ ಮೂವರೂ ಅವಿರೋಧ ಆಯ್ಕೆ
ಇದು ಆರಂಭ ಮಾತ್ರ ಆಗಿದ್ದು, ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ.
ಲಕ್ನೋ: ಉತ್ತರಪ್ರದೇಶದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಶರ್ಟ್ (Shirtless) ಧರಿಸದೇ ಸಭೆಗೆ ಹಾಜರಾಗಿ ಫಜೀತಿಗೆ ಒಳಗಾಗಿದ್ದಾರೆ.
ಪರಿಶೀಲನಾ ಸಭೆಯಲ್ಲಿ ಶಿಕ್ಷಣ ಇಲಾಖೆ ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್, ವಿವಿಧ ಜಿಲ್ಲೆಗಳಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳೊಂದಿಗೆ ಇಲಾಖಾ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಲು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಕರೆದಿದ್ದರು. ಈ ಸಭೆಗೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಶರ್ಟ್ ಹಾಕದೆ, ಬನಿಯನ್ ಧರಿಸಿ ಬಂದಿದ್ದರು.
ಇದನ್ನು ಗಮನಿಸಿದ ವಿಜಯ್ ಕಿರಣ್ ಆನಂದ್ (Vijay Kiran Anand) ಅವರು ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಬನಿಯನ್ ಧರಿಸಿ ವಿಡಿಯೋ ಕಾನ್ಫರೆನ್ಸ್ ಸಭೆಗೆ ಹಾಜರಾಗಿರುವುದನ್ನು ಅನುಚಿತ ವರ್ತನೆ ಎಂದು ಪರಿಗಣಿಸಿ ಕೆಲಸದಿಂದ ಅಮಾನತು ಮಾಡಲಾಗಿದೆ. ಇದನ್ನೂ ಓದಿ: ತಮಿಳುನಾಡು ಅಬಕಾರಿ ಸಚಿವರ ಬಂಧನ; ಇದು BJP ಸೇಡಿನ ರಾಜಕಾರಣ – ಎಂ.ಕೆ ಸ್ಟಾಲಿನ್
ಈ ವೇಳೆ ಅಧಿಕಾರಿ ಬನಿಯನ್ ಧರಿಸಿ ಹಾಜರಾಗಿರುವುದು ಎಲ್ಲರ ಮುಜುಗರಕ್ಕೆ ಕಾರಣವಾಗಿದೆ. ಹೀಗಾಗಿ ಹೀಗಾಗಿ ಅವರು ಅಮಾನತುಗೊಂಡಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ತನಿಖೆ ಆರಂಭಿಸಿದೆ. ಆದರೆ ಅಮಾನತುಗೊಂಡಿರುವ ಅಧಿಕಾರಿ ಯಾವ ಜಿಲ್ಲೆಯವರು ಎಂಬುದು ಬಹಿರಂಗವಾಗಿಲ್ಲ.
ಬೆಂಗಳೂರು: ಇಂದು ರಾಜ್ಯ ಬಿಜೆಪಿ (BJP Meeting) ನಾಯಕರಿಂದ ಸರಣಿ ಸಭೆಗಳು ನಡೆಯುತ್ತಿವೆ. ಈ ಸಭೆಯಲ್ಲಿ ಸೋಲಿನ ಪರಾಮರ್ಶೆಯನ್ನು ಬಿಜೆಪಿ ನಾಯಕರು ನಡೆಸಲಿದ್ದಾರೆ.
ಮಧ್ಯಾಹ್ನ ಪರಾಜಿತ ಅಭ್ಯರ್ಥಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಒಟ್ಟು 66 ಶಾಸಕರ ಜತೆ ಆತ್ಮಾವಲೋಕನ ಸಭೆಯನ್ನು ನಾಯಕರು ನಡೆಸಲಿದ್ದಾರೆ. ವಿಪಕ್ಷ ನಾಯಕರ ಆಯ್ಕೆ, ಪರಿಷತ್ ಚುನಾವಣೆ ಬಗ್ಗೆಯೂ ಮಹತ್ವದ ಚರ್ಚೆ ಹಾಗೂ ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಹೋರಾಟ ರೂಪಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ. ಇನ್ನು ಇಂದು ಸಂಜೆ 6.30ಕ್ಕೆ ನಿಗದಿಯಾಗಿದ್ದ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.
ಸಭೆಗಳ ಬಳಿಕ ಸೋಲಿನ ಆತ್ಮಾವಲೋಕನ, ಸೋಲಿನ ಕಾರಣಗಳ ಸಂಬಂಧ ಹೈಕಮಾಂಡ್ ಗೆ ಬಿಜೆಪಿ ರಾಜ್ಯ ಘಟಕ ವರದಿ ಕಳಿಸಲಿದೆ. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ರಾಜ್ಯದ ಪ್ರಭಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಆರ್. ಅಶೋಕ್ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತ ಬೆನ್ನಲ್ಲೇ ಮತ್ತೊಂದು ದುರಂತ – ಗೂಡ್ಸ್ ರೈಲಿಗೆ ಸಿಲುಕಿ 6 ಕಾರ್ಮಿಕರು ಸಾವು
ಗೆದ್ದ ಶಾಸಕರ ಜೊತ ಮತ್ತು ಪರಾಜಿತ ಶಾಸಕರ ಜತೆ ಪ್ರತ್ಯೇಕ ಆತ್ಮಾವಲೋಕನ ಸಭೆ ನಡೆಯಲಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಬೊಮ್ಮಾಯಿ, ಉಸ್ತುವಾರಿ ಅರುಣ್ ಸಿಂಗ್ ಮುಂತಾದವರು ಭಾಗಿಯಾಗಲಿದ್ದಾರೆ.
ಕಳೆದ ಸರ್ಕಾರದಲ್ಲಿ ಸಿಎಂ ಸಚಿವರು ಎಲ್ಲಾ 6 ತಿಂಗಳಿನಿಂದ ಎಲೆಕ್ಷನ್ ಮೂಡ್ ನಲ್ಲಿ ಇದ್ದರು. ಆಡಳಿತದ ಕಡೆ ಯಾರು ಜಾಸ್ತಿ ಆಸಕ್ತಿ ತೋರಿಸಿಲ್ಲ. ಆಗ ನೀವುಗಳು ಏನು ಮಾಡಿದ್ದೀರಿ 6 ತಿಂಗಳಲ್ಲಿ?. ಇಲಾಖಾವಾರು ಪ್ರೊಗ್ರೆಸ್ ರಿಪೋರ್ಟ್ ಏನಿದೆ ಅಂತ ಹೇಳ್ತೀರಾ?. ಅಧಿಕಾರಿಗಳಾಗಿ ನೀವು 6 ತಿಂಗಳು ಏನು ಕೆಲಸ ಮಾಡಿದ್ದೀರಿ ಅನ್ನೋದು ಮುಖ್ಯ ಅಲ್ವಾ ಎಂದು ಅಧಿಕಾರಗಳನ್ನ ಸಿಎಂ ಪ್ರಶ್ನಿಸಿದರು.
ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಆಡಳಿತದಲ್ಲಿ ಸುಧಾರಣೆ, ಪಾರದರ್ಶಕ ಆಡಳಿತ ನೀಡಲು ಅಧಿಕಾರಿಗಳ ಸಹಕಾರ ಕೋರಿದ್ದೇವೆ. ಉತ್ತಮ ಆಡಳಿತ ನೀಡಲು ತ್ವರಿತವಾಗಿ ಕಡತ ವಿಲೇವಾರಿ ಮಾಡಿ. ಟೈಂ ಬಾಂಡ್‍ನೊಳಗೆ ಕಡತ ವಿಲೇವಾರಿ ಮಾಡಿ. ಜನರಿಗೆ ಸರ್ಕಾರಿ ಯೋಜನೆಗಳನ್ನ ತಲುಪಿಸಲು ಕ್ರಮವಹಿಸಿ. ಸರ್ಕಾರದ ಯೋಜನೆಗಳನ್ನ ನಿಗಧಿತ ಕಾಲಾವಧಿಯೊಳಗೆ ಅನುಷ್ಠಾನಗೊಳಿಸಿ. ತಡವಾದರೆ ಭ್ರಷ್ಟಾಚಾರಕ್ಕೆ ಆಸ್ಪದವಾಗುತ್ತೆ. ಜೊತೆಗೆ ಯೋಜನೆ ಅನುಧಾನ ವೆಚ್ಚ ಹೆಚ್ಚಳವಾಗುತ್ತೆ ಹಾಗಾಗಿ ಸೂಕ್ತ ಸಮಯಕ್ಕೆ ಯೋಜನೆಯನ್ನ ಜನರಿಗೆ ತಲುಪಿಸಿ. ಆಡಳಿತದಲ್ಲಿ ಪಾರದರ್ಶಕತೆ ತಂದು ಉತ್ತಮ ಆಡಳಿತ ನೀಡಲು ಕ್ರಮವಹಿಸಿ ಎಂದು ಸೂಚನೆ ನೀಡಿದ್ದೇನೆ ಎಂದರು.
ಇದೇ ವೇಳೆ ಬಿಜೆಪಿ (BJP) ಆಡಳಿತದಲ್ಲಿ ಆಗಿರುವ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವ ವಿಚಾರದ ಕುರಿತು ಪ್ರಶ್ನಿಸಿದಾಗ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡ್ತೇವೆ ಅಂತ ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ದೋಣಿ ಮುಳುಗಡೆ – 12 ಮೀನುಗಾರರ ರಕ್ಷಣೆ