Tag: Meet

  • ಬಿಬಿಎಂಪಿ ಪೌರಕಾರ್ಮಿಕರಲ್ಲೂ ಆರಂಭವಾಯ್ತು #MeToo ಅಭಿಯಾನ!

    ಬಿಬಿಎಂಪಿ ಪೌರಕಾರ್ಮಿಕರಲ್ಲೂ ಆರಂಭವಾಯ್ತು #MeToo ಅಭಿಯಾನ!

    ಬೆಂಗಳೂರು: ಬಾಲಿವುಡ್, ಸ್ಯಾಂಡಲ್‍ವುಡ್ ಆಯ್ತು, ಈಗ ಬಿಬಿಎಂಪಿಯಲ್ಲೂ ಮೀಟೂ ಆರೋಪ ಕೇಳಿ ಬಂದಿದೆ. ಕೆಲಸದ ವೇಳೆ ಪೌರ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟವಾಗಿದೆ.

    ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು, ಪೌರಕಾರ್ಮಿಕೆಯಾಗಿ ಕೆಲಸ ಮಾಡುವ ತನ್ನ ಅತ್ತೆಗೆ, ಪಾಲಿಕೆ ಅಧಿಕಾರಿಗಳಿಂದ ಆಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಬಡವರು ಪೌರಕಾರ್ಮಿಕ ಕೆಲಸಕ್ಕಾಗಿ ಬರುತ್ತಾರೆ. ಆದರೆ ನೀಚ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡ್ತಾರೆ. ನನ್ನ ಅತ್ತೆಯನ್ನು ಕೂಡಾ ನೀಚ ಅಧಿಕಾರಿಗಳು ಕಾಮಾಲೆ ಕಣ್ಣಿಂದ ನೋಡುತ್ತಾರೆ. ಈ ಬಗ್ಗೆ ಒಂದು ಗಂಟೆಗಳ ಕಾಲ ನಮ್ಮತ್ತೆ ಕಣ್ಣೀರು ಹಾಕಿದ್ದಾರೆ. ಇವರ ಕಾಮಚೇಷ್ಟೆಗೆ ಬಿಬಿಎಂಪಿ ಯಾವಾಗ ಬ್ರೇಕ್ ಹಾಕುತ್ತೆ?

    ಬೆಂಗಳೂರಿನ ಪೌರಕಾರ್ಮಿಕರ ಮೇಲೆ ನಿತ್ಯ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಅನಕ್ಷರಸ್ಥರು ಎಂಬ ಕಾರಣಕ್ಕೆ ಅಧಿಕಾರಿಗಳು ಅವರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ಹೇಳಿದ ಹಾಗೆ ಕೇಳದಿದ್ದರೆ ಹಾಜರಾತಿ ಕಟ್ ಮಾಡುತ್ತಾರೆ. ಪೌರಕಾರ್ಮಿಕರ ಬಳಿ ಸ್ಮಾರ್ಟ್ ಫೋನ್ ಇಲ್ಲ, ಇಲ್ಲದಿದ್ದರೆ ಎಲ್ಲರ ಮುಖವಾಡ ಬಯಲಾಗುತ್ತಿತ್ತು ಎಂದು ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂದು ದಾವಣಗೆರೆಗೆ ನಟ ಸುದೀಪ್ ಭೇಟಿ

    ಇಂದು ದಾವಣಗೆರೆಗೆ ನಟ ಸುದೀಪ್ ಭೇಟಿ

    ದಾವಣಗೆರೆ: ಸ್ಯಾಂಡಲ್‍ವುಡ್ ನಟ ಸುದೀಪ್ ಇಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಳ್ಳಿನಲ್ಲಿ ಇರುವ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಲಿದ್ದಾರೆ.

    ಸುದೀಪ್ ಅವರು ಬೆಳಗ್ಗೆ 11ಕ್ಕೆ ವಾಲ್ಮೀಕಿ ಗುರುಪೀಠದ ಪ್ರಸನಾನಂದ ಪುರಿ ಸ್ವಾಮೀಜಿ ಭೇಟಿ ಮಾಡಲಿದ್ದಾರೆ. ಇತ್ತೀಚೆಗೆ ಮದಕರಿ ಚಿತ್ರದ ವಿಚಾರವಾಗಿ ಕೇಳಿ ಬಂದ ವಿವಾದಗಳಿಗೆ ಸ್ಪಷ್ಟನೆ ನೀಡುವ ಸಾಧ್ಯತೆಗಳಿವೆ. ನಂತರ ದಾವಣಗೆರೆಯಲ್ಲಿ ದೊಣ್ಣೆ ಬಿರಿಯಾನಿ ಹೋಟೆಲ್ ಉದ್ಘಾಟಿಸಲಿದ್ದಾರೆ.

    ಸೆಪ್ಟಂಬರ್ 30 ರಂದು ನಟ ಕಿಚ್ಚ ಸುದೀಪ್ ದಾವಣಗೆರೆ ಜಿಲ್ಲೆಗೆ ಆಗಮಿಸಬೇಕಿತ್ತು. ಆದರೆ ಕಾರಣಾಂತರದಿಂದ ಸುದೀಪ್ ಬರಲು ಸಾಧ್ಯವಾಗದೇ ವಿಡಿಯೋ ಮೂಲಕ ಸಂದೇಶ ರವಾನಿಸಿ ಕ್ಷಮೆ ಕೇಳಿದ್ದರು. ದಾವಣಗೆರೆಯ ಬಿಐಟಿ ಕಾಲೇಜ್ ರೋಡಿನಲ್ಲಿರುವ ಕಿಚ್ಚ ಸುದೀಪ್, ದೊನ್ನೆ ಬಿರಿಯಾನಿ ಹೋಟೆಲ್ ಪ್ರಾರಂಭೋತ್ಸವಕ್ಕೆ ಸುದೀಪ್ ಅವರು ಆಗಮಿಸಬೇಕಿತ್ತು. ನಿರ್ದೇಶಕ ನಂದ ಕಿಶೋರ್ ಒಡೆತನದ ದೊನ್ನೆ ಬಿರಿಯಾನಿ ಹೋಟೆಲ್ ಇದಾಗಿದೆ. ಈ ಹೋಟೆಲ್ ಉದ್ಘಾಟನೆಗೆ ಸುದೀಪ್ ಬರಬೇಕಿತ್ತು.

    ಎಲ್ಲರಿಗೂ ಕಿಚ್ಚನ ನಮಸ್ಕಾರ, ನಾನು ದಾವಣಗೆರೆಯಲ್ಲಿರುವ ಒಂದು ಹೋಟೆಲ್ ಓಪನಿಂಗ್ ಗೆ ಬರಬೇಕಿತ್ತು. ಕಾರಣಾಂತರದಿಂದ ಬರಲು ಸಾಧ್ಯವಾಗುತ್ತಿಲ್ಲ. ಕ್ಷಮೆ ಇರಲಿ, ಇದನ್ನು ಮುಂದಕ್ಕೆ ಹಾಕಿ ನಾನು ಅಕ್ಟೋಬರ್ 19 ರಂದು ನಾನು ಬರುತ್ತಿದ್ದೇನೆ. ಶಾಸಕ ಎಸ್ ವಿ ರಾಮಚಂದ್ರಪ್ಪ, ಹಾಗೂ ವಾಲ್ಮೀಕಿ ಶ್ರೀ ಸೇರಿದಂತೆ ನನ್ನನ್ನು ಕರೆದಿದ್ದರೋ ಅವರಿಗೆಲ್ಲ ನಂದಕಿಶೋರ್ ಪರ ಕ್ಷಮೆ ಕೇಳುತ್ತಿದ್ದೇನೆ. ಕಾರಣಾಂತರದಿಂದ ನಾನು ಹೈದರಾಬಾದಿನಲ್ಲಿ ಉಳಿದುಕೊಂಡಿದ್ದೇನೆ. 19ಕ್ಕೆ ಖಂಡಿತ ನಾನು ಬರುತ್ತೇನೆ ಎಂದು ಸುದೀಪ್ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದ ಯುವಕನಿಗೆ ಚಾಕು ಇರಿತ

    ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದ ಯುವಕನಿಗೆ ಚಾಕು ಇರಿತ

    ಕಲಬುರಗಿ: ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ಕಡಗಂಚಿ ಬಳಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಬಳಿ ನಡೆದಿದೆ.

    ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಮನೋಜ್ ಮೃತ ದುರ್ದೈವಿ. ಇವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮನೋಜ್ ಹೈದರಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದು, ಭಾಲ್ಕಿ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದನು. ಈಕೆ ಎಂ.ಎ ಎಕನಾಮಿಕ್ಸ್ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಹೀಗಾಗಿ ಆಕೆಯನ್ನು ಭೇಟಿಯಾಗಲು ಬಂದಿದ್ದನು. ಶನಿವಾರ 7.30ರ ಸುಮಾರಿಗೆ ಇಬ್ಬರು ದುಷ್ಕರ್ಮಿಗಳು ಮನೋಜ್ ಗೆ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಮನೋಜ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.

    ಘಟನಾ ಸ್ಥಳಕ್ಕೆ ಎಸ್‍ಪಿ ಎನ್.ಶಶಿಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ನರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮೋದಿ ಭೇಟಿಯ ಹಿಂದಿನ ರಹಸ್ಯ ಬಿಚ್ಚಿಟ್ಟ ಮೋಹನ್ ಲಾಲ್

    ಮೋದಿ ಭೇಟಿಯ ಹಿಂದಿನ ರಹಸ್ಯ ಬಿಚ್ಚಿಟ್ಟ ಮೋಹನ್ ಲಾಲ್

    ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಚಿತ್ರ ನಟ ಮೋಹನ್ ಲಾಲ್ ತಮ್ಮ ಭೇಟಿಯ ಕುರಿತ ಮಾಹಿತಿಯನ್ನು ತಿಳಿಸಿದ್ದಾರೆ.

    ಈ ತಮ್ಮ ಫೇಸ್‍ಬುಕ್ ಖಾತೆಯಲ್ಲಿ 8 ಪುಟಗಳ ವಿವರಣೆಯುಳ್ಳ ಮಾಹಿತಿಯನ್ನು ಮೋಹನ್ ಲಾಲ್ ಪೋಸ್ಟ್ ಮಾಡಿದ್ದಾರೆ. ಮೋದಿ ಅವರೊಂದಿಗಿನ ಭೇಟಿ ಕುರಿತು ಮಾಧ್ಯಮಗಳಲ್ಲಿ ವರದಿಗಳು ಬಿತ್ತರವಾಗುತ್ತಿದೆ. ಆದರೆ ಒಬ್ಬ ಭಾರತೀಯನಾಗಿ ನಾನು ಪ್ರಧಾನಿಯನ್ನ ಯಾವಾಗ ಬೇಕಾದರು ಭೇಟಿ ಮಾಡುವುದಕ್ಕೆ ಅವಕಾಶವಿದೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಮೋದಿ ಹಾಗೂ ನನ್ನ ಭೇಟಿಯ ವೇಳೆ ಯಾವುದೇ ರಾಜಕೀಯ ಅಂಶಗಳ ಕುರಿತು ಚರ್ಚೆ ನಡೆದಿಲ್ಲ ಎಂದು ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವನ್ನು ಉಲ್ಲೇಖಿಸದೆ ಮಾಹಿತಿ ನೀಡಿದ್ದಾರೆ.

    ಸೆಪ್ಟೆಂಬರ್ 3 ರಂದು ಪ್ರಧಾನಿ ಮೋದಿರನ್ನು ಭೇಟಿ ಮಾಡಿದ್ದ ಕುರಿತು ಸರಣಿ ಟ್ವೀಟ್ ಮಾಡಿ ಫೋಟೋ ಶೇರ್ ಮಾಡಿದ್ದರು. ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಭೇಟಿ ಮಾಡಿದ್ದೇನೆ. ಈ ವೇಳೆ ವಿಶ್ವಶಾಂತಿ ಫೌಂಡೇಶನ್ ಹಾಗೂ ನಮ್ಮ ಬಹುಮುಖಿ ಸಾಮಾಜಿಕ ಕಾರ್ಯಗಳ ಬಗ್ಗೆ ವಿವರಿಸಲಾಗಿದೆ ಎಂದು ಮೋಹನ್ ಲಾಲ್ ಬರೆದುಕೊಂಡಿದ್ದರು. ಮತ್ತೊಂದು ಟ್ವೀಟ್ ನಲ್ಲಿ ಪ್ರಧಾನಿ ಮೋದಿ ಅವರು ಗ್ಲೋಬಲ್ ಮಲಯಾಳಿ ರೌಂಡ್ ಟೇಬಲ್ ಕಾರ್ಯಕ್ರಮದಲ್ಲಿ ಭಾವಹಿಸಲು ಆಹ್ವಾನ ನೀಡಿದ್ದೇನೆ. ಪ್ರಧಾನಿ ಮೋದಿ ಕೇರಳಕ್ಕೆ ಬೇಕಾದ ಎಲ್ಲಾ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ವೇಳೆ ಮೋದಿ ಭಾರತ ವಿಶ್ವಶಾಂತಿ ಫೌಂಡೇಶನ್ ಅಡಿಯಲ್ಲಿ ಕ್ಯಾನ್ಸರ್ ಕೇರ್ ಸೆಂಟರ್ ಅನ್ನು ಸ್ಥಾಪಿಸುವ ನಮ್ಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದರು.

    ಪ್ರಧಾನಿ ಮೋದಿ ಕೂಡ ಟ್ವಿಟ್ಟರ್ ನಲ್ಲಿ ಮೋಹನ್ ಲಾಲ್ ಭೇಟಿ ಕುರಿತು ಬರೆದುಕೊಂಡಿದ್ದರು. ಈ ಟ್ವೀಟ್ ಗಳ ಬೆನ್ನಲ್ಲೇ ಶೀಘ್ರವೇ ನಟ ಮೋಹನ್‍ಲಾಲ್ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ‘ಯಜಮಾನ’ ಸೆಟ್‍ಗೆ ವಿಜಯಲಕ್ಷ್ಮಿ ಭೇಟಿ ನೀಡಿದ ಸೀಕ್ರೆಟ್ ರಿವೀಲ್

    ‘ಯಜಮಾನ’ ಸೆಟ್‍ಗೆ ವಿಜಯಲಕ್ಷ್ಮಿ ಭೇಟಿ ನೀಡಿದ ಸೀಕ್ರೆಟ್ ರಿವೀಲ್

    ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಬಹು ನಿರೀಕ್ಷಿತ `ಯಜಮಾನ’ ಚಿತ್ರದ ಶೂಟಿಂಗ್ ಸೆಟ್‍ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಆದರೆ ಈಗ ಆ ಭೇಟಿ ಹಿಂದಿನ ರಹಸ್ಯ ಬಹಿರಂಗವಾಗಿದೆ.

    ನಗರದ ಪ್ಯಾಲೇಸ್ ಗ್ರೌಂಡ್‍ನಲ್ಲಿ ಯಜಮಾನ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಸದ್ಯ ಈ ಚಿತ್ರದಿಂದ ಈಗ ಹೊಸದಂದು ಸಿಕ್ರೇಟ್ ರಿವೀಲ್ ಆಗಿದ್ದು, ಈ ಚಿತ್ರದಲ್ಲಿ ದರ್ಶನ್ ಅವರ ಪುತ್ರ ವಿನೀಶ್ ಕೂಡ ನಟಿಸುತ್ತಿದ್ದಾನೆ.

    ಯಜಮಾನ ಚಿತ್ರದಲ್ಲಿ ಜೂನಿಯರ್ ದರ್ಶನ್, ವಿನೀಶ್ ಒಂದು ವಿಶೇಷ ಹಾಡಿನಲ್ಲಿ ನಟಿಸುತ್ತಿದ್ದಾರೆ. ಈ ಹಾಡಿನಲ್ಲಿ ಅಪ್ಪ ಮಗ ಒಟ್ಟಿಗೆ ಹೆಜ್ಜೆ ಹಾಕಲಿದ್ದಾರೆ. ‘ಐರಾವತ’ ಚಿತ್ರದ ನಂತರ ಯಜಮಾನ ಚಿತ್ರದಲ್ಲಿ ದರ್ಶನ್ ಹಾಗೂ ವಿನೀಶ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಯಜಮಾನ ಶೂಟಿಂಗ್ ಸೆಟ್ಟಿನಲ್ಲಿ ಕಾಣಿಸಿಕೊಂಡ್ರು ಯಜಮಾನಿ – ಫೋಟೋ ವೈರಲ್

    ವಿಜಯಲಕ್ಷ್ಮಿ ಹಲವು ಬಾರಿ ತನ್ನ ಪತಿ ದರ್ಶನ್ ಅವರ ನಟನೆಯನ್ನು ನೋಡಲು ಶೂಟಿಂಗ್ ಸೆಟ್‍ಗೆ ಹೋಗುತ್ತಿದ್ದರು. ಆದರೆ ಈಗ ತಮ್ಮ ಮಗ ವಿನೀಶ್ ನಟನೆಯನ್ನು ನೋಡಲು ವಿಜಯಲಕ್ಷ್ಮಿ ಶನಿವಾರ ಯಜಮಾನ ಚಿತ್ರದ ಸೆಟ್‍ಗೆ ಭೇಟಿ ನೀಡಿದ್ದರು.

    ಸತತ ಎರಡ್ಮೂರು ತಿಂಗಳಿನಿಂದ ಯಜಮಾನ ಸಿನಿಮಾ ಚಿತ್ರೀಕರಣದಲ್ಲಿ ಭಾಗಹಿಸುತ್ತಿರುವ ದರ್ಶನ್ ನಿರಂತರ ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದಾರೆ. ಮೈಸೂರು, ಬೆಂಗಳೂರಿನಲ್ಲಿ ನಿರ್ಮಿಸಲಾಗಿದ್ದ ವಿಶೇಷವಾದ ಸೆಟ್ಟಿನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದ್ದು, ಅಂತಿಮ ಹಂತ ತಲುಪಿದೆ. ಖ್ಯಾತ ನಿರ್ದೇಶಕ ಬಿ. ಸುರೇಶ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ದರ್ಶನ್ ಜೊತೆಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದಲ್ಲಿ ದರ್ಶನ್ ಅವರ ಲುಕ್ ಹೇಗಿದೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಇದೆ. ದರ್ಶನ್ ರೊಂದಿಗೆ ರಶ್ಮಿಕಾ ಮಂದಣ್ಣ ಜೋಡಿಯನ್ನು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಯರ ದರ್ಶನ ಪಡೆದ ಆರ್‌ಎಸ್‌ಎಸ್‌ ಮುಖ್ಯಸ್ಥ

    ರಾಯರ ದರ್ಶನ ಪಡೆದ ಆರ್‌ಎಸ್‌ಎಸ್‌ ಮುಖ್ಯಸ್ಥ

    ರಾಯಚೂರು: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನವನ್ನು ಪಡೆದುಕೊಂಡಿದ್ದಾರೆ.

    ಮಂತ್ರಾಲಯದಲ್ಲಿ ಶನಿವಾರದಿಂದ ನಡೆಯಲಿರುವ ಆರ್‌ಎಸ್‌ಎಸ್‌ ಬೈಠಕ್ ಹಾಗೂ ಕಾರ್ಯಕಾರಣಿ ಸಭೆಗೆ ಆಗಮಿಸಿರುವ ಅವರು ಶುಕ್ರವಾರ ಬೆಳಗ್ಗೆ ರಾಯರ ದರ್ಶನ ಪಡೆದು, ಆಶೀರ್ವಾದ ಪಡೆದುಕೊಂಡಿದ್ದಾರೆ. ಅಲ್ಲದೇ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರರು ಮೋಹನ್ ಭಾಗವತ್ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.

    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರಮಟ್ಟದ ಸಭೆ ಮಂತ್ರಾಲಯದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿದ್ದು, ಖುದ್ದು ಮೋಹನ ಭಾಗವತ್ ಅವರು ಟಿಟಿಡಿ ಪ್ರವಾಸಿ ಮಂದಿರದಲ್ಲಿ ನಡೆಯುವ ಸಭೆಯ ಸಿದ್ಧತೆಯನ್ನು ಪರಿಶೀಲನೆ ನಡೆಸಿದ್ದಾರೆ. ಅವರಿಗೆ ಸುಜಯೀಂದ್ರ ವಿಶ್ರಾಂತಿ ಭವನದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.

    ಆರ್‌ಎಸ್‌ಎಸ್‌ನ ವಿವಿಧ ಕ್ಷೇತ್ರಗಳ 150 ಕ್ಕೂ ಹೆಚ್ಚು ಜನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಸಂಜೆ ಮಂತ್ರಾಲಯಕ್ಕೆ ಆಗಮಿಸಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಧಾನಿಯಾಗಿ ಅಟಲ್ ಬಿಹಾರಿ ವಾಜಪೇಯಿ: ಫೋಟೋಗಳಲ್ಲಿ ನೋಡಿ

    ಪ್ರಧಾನಿಯಾಗಿ ಅಟಲ್ ಬಿಹಾರಿ ವಾಜಪೇಯಿ: ಫೋಟೋಗಳಲ್ಲಿ ನೋಡಿ

    ಅಜಾತ ಶತ್ರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ವಿದೇಶಿ ನಾಯಕರುಗಳ ಭೇಟಿ, ಉದ್ಘಾಟನಾ ಸಮಾರಂಭ ಹಾಗೂ ಇನ್ನೂ ಅನೇಕ ಅಪರೂಪದ ಫೋಟೋಗಳನ್ನು ನೋಡಿ.

    2003ರ ಮೇ 21ರಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಂದ ಲಕ್ನೋದ ಕೊರಿಯಾ ಘಾಟ್ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕು ಸ್ಥಾಪನೆ.
    2003ರ ಮೇ 24ರಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ನವದೆಹಲಿಯಲ್ಲಿ ನಡೆದ ನೂತನ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ, ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಉಪ ರಾಷ್ಟ್ರಪತಿ ಶ್ರೀ ಭೈರೋನ್ ಸಿಂಗ್ ಶೇಕಾವತ್‍ರೊಂದಿಗೆ.
    2003ರ ಜನವರಿ 3ರಂದು ಬೆಂಗಳೂರಿನಲ್ಲಿ ನಡೆದ 90ನೇ ಭಾರತೀಯ ವಿಜ್ಞಾನ ಸಮಾವೇಶ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗ.
    2003ರ ಮೇ 3ರಂದು ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಯ ರಾಷ್ಟ್ರೀಯ ಸಮಾವೇಶ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಅಟಲ್ ಜೀ.
    2003 ಮೇ 4ರಂದು ಬೆಂಗಳೂರಿನ ಎಚ್.ಎ.ಎಲ್ ನಡೆದ ವಿಜ್ಞಾನಿಗಳೊಂದಿಗೆ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳೊಂದಿಗೆ ವಾಜಪೇಯಿ.
    2003ರ ಜನವರಿ 6ರಂದು ಮುಂಬೈನಲ್ಲಿ ನಡೆದ 14ನೇ ವರ್ಷದ ಶ್ರೀ ಹಸುಅಡ್ವಾನಿ ಮೆಮೋರಿಯಲ್ ನ ವಿವೇಕಾನಂದ ಶಿಕ್ಷಣ ಸಂಸ್ಥೆಯನ್ನು ದೀಪ ಹಚ್ಚುವ ಮೂಲಕ ಉದ್ಘಾಟಿಸಿದ ಪ್ರಧಾನಿ.
    2003ರ ಮೇ 7ರಂದು ನವದೆಹಲಿಯಲ್ಲಿ ಬೊಸ್ನಿಯಾ ಮತ್ತು ಹರ್ಜೆಗೋವಿನಾ ವಿದೇಶಾಂಗ ಸಚಿವ ಡಾ. ಮೆಲೇಡೆನ್ ಐವೊಯಿಕ್ ರವರ ಜೊತೆ ಮಾತುಕತೆ.
    2003ರ ಮೇ 7ರಂದು ನವದೆಹಲಿಯಲ್ಲಿ ಲಾವೋಸ್ ನ ಉಪಪ್ರಧಾನಿ ಶ್ರೀ ಸೋಮಸಾವತ್ ಲೆಂಗ್ಸಾವ್ದ್ ಅವರೊಂದಿಗೆ.
    2003ರ ಮೇ 11 ರಂದು ನವದೆಹಲಿಯಲ್ಲಿ ನಡೆದ ಡಿ.ಆರ್.ಡಿ.ಓ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸುತ್ತಿರುವ ಪ್ರಧಾನಿ ವಾಜಪೇಯಿ.
    2003ರ ಮೇ 12ರಂದು ನವದೆಹಲಿಯ ಸಮಾರಂಭಕ್ಕೆ ಆಗಮಿಸಿದ್ದ ಮೊಜಾಂಬಿಕ್ ಗಣರಾಜ್ಯದ ಅಧ್ಯಕ್ಷ ಜೋಕ್ವಿಮ್ ಅಲ್ಬೆರ್ಟೊ ಚಿಸ್ಸಾನೋರವರನ್ನು ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂರೊಂದಿಗೆ ಸ್ವಾಗತಿಸುತ್ತಿರುವುದು.
    ಮೇ 15, 2003 ರಂದು ಮನಾಲಿಯಲ್ಲಿನ ಪ್ರನಿ ಗ್ರಾಮದ ಸ್ಥಳೀಯ ಕಲಾವಿದರೊಂದಿಗೆ.
    2003ರ ಮೇ 18ರಂದು ನವದೆಹಲಿಗೆ ತೆರಳುವ ಮೊದಲು ಮನಾಲಿ ವಿಮಾನ ನಿಲ್ದಾಣದ ಮಧ್ಯಮದವರಿಗೆ ಪ್ರತಿಕ್ರಿಯಿಸುತ್ತಿರುವ ಪ್ರಧಾನಿ.
    2003ರ ಮೇ 24ರಂದು ನವದೆಹಲಿಯಲ್ಲಿ ಕೆ. ಕಸ್ತೂರಿರಂಗನ್ ಅವರ ನೇತೃತ್ವದ ವಿಜ್ಞಾನಿಗಳ ತಂಡದಿಂದ ಜಿ.ಎಸ್.ಎಲ್.ವಿ-3 ಮಾದರಿಯನ್ನು ಪ್ರಸ್ತುತಪಡಿಸುತ್ತಿರುವುದು.
    2003ರ ಮೇ 27 ನವದೆಹಲಿಯಿಂದ ಜರ್ಮನಿ, ರಷ್ಯಾ ಮತ್ತು ಸ್ವಿಜ್ಜರ್ಲೆಂಡ್ ಹಾಗೂ ಫ್ರಾನ್ಸ್ ಪ್ರವಾಸಕ್ಕೆ ತೆರಳುವ ಮೊದಲು ಅಡ್ವಾಣಿಗೆ ಹಸ್ತಲಾಘವ.
    2003 ಮೇ 28ರಂದು ಜರ್ಮನಿ ಪ್ರವಾಸದ ವೇಳೆ ವಾಜಪೇಯಿಯವರಿಗೆ ಜರ್ಮನಿಯ ಚಾನ್ಸೆಲರ್ ಮಿ. ಗೆರ್ಹಾರ್ಡ್ ಶ್ರೋಡರ್ ರವರು ಸ್ವಾಗತಿಸುತ್ತಿರುವುದು.
    2003ರ ಮೇ 31 ರಂದು ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರೊಂದಿಗೆ ಮಾತುಕತೆ.
    2003ರ ಮೇ 31ರಂದು ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ನೆವಾ ನದಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಅಟಲ್ ಜೀ.
    ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ.
    2000ದ ಜನವರಿ 2ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸಂತ ಬ್ಯಾನೇಶ್ವರ ಮಹಾರಾಜ ಸಭೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವರಾಗಿದ್ದ ಅನಂತ ಕುಮಾರ್ ಹಾಗೂ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ರೊಂದಿಗೆ ಪಾಲ್ಗೊಂಡಿದ್ದಾಗ.
    2003ರ ಮೇ 2ರಂದು ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅಟಲ್ ಜೀಯವರನ್ನು ನವದೆಹಲಿಯಲ್ಲಿ ಭೇಟಿಯಾದ ವೇಳೆ.
    2003ರ ಮೇ 20ರಂದು ನವದೆಹಲಿಯಲ್ಲಿ ನಡೆದ ಮೊದಲ ಬಾರಿ ಮೌಂಟ್ ಎವರೆಸ್ಟ್ ಏರಿದ ಸರ್ ಎಡ್ಮಂಡ್ ಹಿಲರಿಯವರನ್ನು ಸನ್ಮಾನಿಸುತ್ತಿರುವುದು.
    2003ರ ಮೇ 21ರಂದು ಲಕ್ನೋದ ವಿಮಾನ ನಿಲ್ದಾಣದಿಂದ ಲಕ್ನೋ-ಜೆಡ್ಡಾ ಗೆ ವಿಮಾನಯಾನಕ್ಕೆ ಚಾಲನೆ ನೀಡಿದ ಅಟಲ್ ಜೀ.
    2003ರ ಮೇ 22ರಂದು ನವದೆಹಲಿಯಲ್ಲಿ ಬಾಂಗ್ಲಾದೇಶದ ಹಣಕಾಸು ಸಚಿವ ಎಂ. ಸೈಫೂರ್ ರೆಹಮಾನ್ ರವರೊಂದಿಗೆ ಮಾತುಕತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕರುಣಾನಿಧಿ ಮನೆಗೆ ಪುನೀತ್ ಭೇಟಿ!

    ಕರುಣಾನಿಧಿ ಮನೆಗೆ ಪುನೀತ್ ಭೇಟಿ!

    ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾನಿಧಿ ಅವರ ಮನೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

    ಪುನೀತ್ ರಾಜ್‍ಕುಮಾರ್ ಚೆನ್ನೈನ ಗೋಪಾಲಪುರಂನಲ್ಲಿರುವ ಕರುಣಾನಿಧಿ ಅವರ ಮನೆಗೆ ಭೇಟಿ ನೀಡಿ ಅವರ ಮಗ ಸ್ಟಾಲಿನ್ ಹಾಗೂ ಕುಟುಂಬಸ್ಥರ ಜೊತೆ ಮಾತನಾಡಿ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

    ಕರುಣಾನಿಧಿ ಅವರ ಮನೆಗೆ ಭೇಟಿ ನೀಡಿದ ಬಳಿಕ ಪುನೀತ್ ಮಾಧ್ಯಮಗಳ ಜೊತೆ ಮಾತನಾಡಿ, “ಕರುಣಾನಿಧಿ ದಿಗ್ಗಜ ನಾಯಕ. ಅವರ ನಿಧನಕ್ಕೆ ಸಂತಾಪ ಸೂಚಿಸಬೇಕಾಗಿರುವುದು ನಮ್ಮ ಕರ್ತವ್ಯ. ಹಾಗಾಗಿ ಅವರ ಮನೆಗೆ ಬಂದಿದ್ದೇನೆ. ನಮ್ಮ ತಂದೆ ರಾಜ್‍ಕುಮಾರ್ ಕಿಡ್ನಾಪ್ ಆಗಿದ್ದ ವೇಳೆ ಕರುಣಾನಿಧಿ ನಮಗೆ ತುಂಬಾ ಸಹಾಯ ಮಾಡಿದ್ದರು. ಅಂದಿನಿಂದ ಕರುಣಾನಿಧಿ ಅವರ ಕುಟುಂಬದ ಜೊತೆ ನಮ್ಮ ಕುಟುಂಬದ ಒಳ್ಳೆಯ ನಂಟು ಹೊಂದಿದೆ. ನಾನು ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಲು ಬಂದೆ ಎಂದು ಪುನೀತ್ ಹೇಳಿದರು.

    ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಮಂಗಳವಾರ (7.8.2018) ವಿಧಿವಶರಾಗಿದ್ದರು. ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ 6.10ಕ್ಕೆ ಕೊನೆಯುಸಿರೆಳೆದಿದ್ದಾರೆ.

    ಕರುಣಾನಿಧಿ ಅವರು 1924 ಜೂನ್ 3ರಂದು ಮದ್ರಾಸ್ ನ ನಾಗಪಟ್ಟಿನಂ ಜಿಲ್ಲೆಯ ಥಿರುಕ್ಕುವಲೈ ನಲ್ಲಿ ಜನಿಸಿದ್ದರು. ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ತಮಿಳುನಾಡಿನ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂನ ಅಧ್ಯಕ್ಷರಾಗಿದ್ದರು. 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮತ್ತೆ 2006 ಮೇ 13 ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ

    ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ

    ಚೆನ್ನೈ: ತಮಿಳುನಾಡಿನ ಡಿಎಂಕೆ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಆರೋಗ್ಯ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ಜ್ವರ ಹಾಗೂ ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿಯವರನ್ನು ಜುಲೈ 28ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಇಂದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಕಾವೇರಿ ಆಸ್ಪತ್ರೆ ಆಡಳಿತ ಮಂಡಳಿ ಪುತ್ರಿ ಕನಿಮೋಳಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ಕಳೆದ ವಾರದಿಂದ ಚಿಕಿತ್ಸೆಗೆ ಸ್ಪಂದಿಸಿದ್ದ ಅವರು ಸ್ವಲ್ಪ ಚೇತರಿಕೆ ಕಂಡಿದ್ದರು. ಆದರೆ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಅವರ ಆರೋಗ್ಯ ಮತ್ತಷ್ಟು ಗಂಭೀರವಾಗಿದೆ. ಕರುಣಾನಿಧಿಯವರಿಗೆ ಉನ್ನತ ವೈದ್ಯರುಗಳು ಚಿಕಿತ್ಸೆ ಮುಂದುವರಿಸಿದ್ದು, ಆರೋಗ್ಯ ಸುಧಾರಣೆ ಕಾಣುವವರೆಗೂ ಆಸ್ಪತ್ರೆಯಲ್ಲೇ ದಾಖಲಾಗಿರುತ್ತಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ.

    ಕರುಣಾನಿಧಿಯವರು ಆಸ್ಪತ್ರೆಗೆ ದಾಖಲಿಸಿದ ದಿನದಿಂದಲೂ ಆಸ್ಪತ್ರೆ ಬಳಿಯೇ ಜಮಾಯಿಸುವ ಅಭಿಮಾನಿಗಳಿಗೆ ವೈದ್ಯರ ಹೇಳಿಕೆಯಿಂದಾಗಿ ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ಅಲ್ಲದೇ ಅಭಿಮಾನಿಗಳು ಕರುಣಾನಿಧಿಯವರು ಆದಷ್ಟು ಬೇಗ ಗುಣಮುಖರಾಗಿಬರಲೆಂದು ಹಾರೈಸುತ್ತಿದ್ದಾರೆ.

    ಭಾನುವಾರ ರಾಷ್ಟ್ರಪತಿ ರಾಮನಾಥ ಕೋವಿಂದರವರು ಕಾವೇರಿ ಆಸ್ಪತ್ರೆಗೆ 5 ಬಾರಿ ಭೇಟಿ ನೀಡಿ ಕರುಣಾನಿಧಿಯವರ ಆರೋಗ್ಯವನ್ನು ಖುದ್ದು ವಿಚಾರಿಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಪುತ್ರ ಸ್ಟಾಲಿನ್ ಹಾಗೂ ವೈದ್ಯರ ಬಳಿ ದೀರ್ಘ ಮಾತುಕತೆಯನ್ನು ನಡೆಸಿದ್ದರು. ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿತಿಸಿದ ಅವರು, ಕರುಣಾನಿಧಿಯವರು ಶೀಘ್ರವೇ ಗುಣಮುಖರಾಗಿ ಸಹಜ ಸ್ಥಿತಿಗೆ ಮರಳುತ್ತಾರೆಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಯೋಧ ವಿಜಯಾನಂದ ನಾಯ್ಕ ಮನೆಗೆ ಆರ್ ವಿ ದೇಶಪಾಂಡೆ ಭೇಟಿ

    ಯೋಧ ವಿಜಯಾನಂದ ನಾಯ್ಕ ಮನೆಗೆ ಆರ್ ವಿ ದೇಶಪಾಂಡೆ ಭೇಟಿ

    ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದ ಹುತಾತ್ಮ ಯೋಧ ವಿಜಯಾನಂದ ನಾಯ್ಕ ಮನೆಗೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಇಂದು ಭೇಟಿ ನೀಡಿ ಶ್ರದ್ಧಾಂಜಲಿ ಅರ್ಪಿಸಿದರು.

    ಕಳೆದ ಆರು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಬಿಎಸ್‍ಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ವಿಜಯಾನಂದ ಅವರು, ಕಳೆದ ತಿಂಗಳು ಛತ್ತೀಸಗಡದಲ್ಲಿ ನಕ್ಸಲ್ ಕಾರ್ಯಾಚರಣೆ ವೇಳೆ ನೆಲಬಾಂಬ್ ದಾಳಿಗೆ ಸಿಕ್ಕು ವೀರ ಮರಣವನ್ನಪ್ಪಿದ್ದರು. ಇಂದು ಆರ್ ವಿ ದೇಶಪಾಂಡೆ ನಗರದ ಕುಮಾರ ಪಂಥವಾಡಾದಲ್ಲಿರುವ ವಿಜಯಾನಂದರವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದಲ್ಲದೇ, ಮನೆಯವರ ಯೋಗಕ್ಷೇಮ ವಿಚಾರಿಸಿದರು.

    ಈ ವೇಳೆ ತಮ್ಮ ಎರಡನೇ ಮಗನಿಗೆ ಸರ್ಕಾರಿ ಉದ್ಯೋಗ ಹಾಗೂ ನಗರದ ರಾಕ್ ಗಾರ್ಡನ್ ಅಥವಾ ವಾರ್ ಶಿಪ್ ಮ್ಯೂಸಿಯಂ ಬಳಿ ಯೋಧ ವಿಜಯಾನಂದನರ ಪುತ್ಥಳಿಯನ್ನು ನಿರ್ಮಿಸುವಂತೆ ಕುಟುಂಬಸ್ಥರು ಸಚಿವ ದೇಶಪಾಂಡೆ ಬಳಿ ಮನವಿ ಮಾಡಿದರು.