Tag: Meet

  • ನಟಿ ಕಾಜಲ್‍ಗಾಗಿ 60 ಲಕ್ಷ ರೂ. ಕಳೆದುಕೊಂಡ ಅಭಿಮಾನಿ

    ನಟಿ ಕಾಜಲ್‍ಗಾಗಿ 60 ಲಕ್ಷ ರೂ. ಕಳೆದುಕೊಂಡ ಅಭಿಮಾನಿ

    ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್‌ವಾಲ್ ಅವರನ್ನು ಭೇಟಿ ಮಾಡಲು ಅಭಿಮಾನಿಯೊಬ್ಬ ಬರೋಬ್ಬರಿ 60 ಲಕ್ಷ ರೂ. ಕಳೆದುಕೊಂಡಿದ್ದಾನೆ.

    ತಮಿಳುನಾಡಿನ ರಾಮನಾಥಪುರಂ ನಿವಾಸಿಯಾಗಿರುವ ಅಭಿಮಾನಿ ಕಾಜಲ್ ಅಗರ್‌ವಾಲ್ ನ ಅಪ್ಪಟ ಅಭಿಮಾನಿ. ಕಾಜಲ್ ಅವರನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿ ಆಗಬೇಕು ಎಂದುಕೊಂಡಿದ್ದನು. ಈ ವೇಳೆ ಇನ್‍ಸ್ಟಾಗ್ರಾಂ ಪೇಜ್ ಒಂದು ಕಾಜಲ್ ಅಗರ್‌ವಾಲ್ ಅವರನ್ನು ಭೇಟಿಯಾಗುವ ಅವಕಾಶವನ್ನು ನೀಡಿತ್ತು. ಇದನ್ನು ನೋಡಿದ ಅಭಿಮಾನಿ ವೆಬ್‍ಪೇಜ್ ಆಡ್ಮಿನ್‍ನನ್ನು ಸಂಪರ್ಕಿಸಿ ಕಾಜಲ್‍ರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದನು.

    ವೆಬ್‍ಪೇಜ್ ಆಡ್ಮಿನ್ ಮೊದಲು ಅಭಿಮಾನಿಯ ಬಳಿ 50 ಸಾವಿರ ರೂ. ತೆಗೆದುಕೊಂಡಿದ್ದಾನೆ. ಅಲ್ಲದೆ ಅಭಿಮಾನಿಯ ಫೋಟೋ ಹಾಗೂ ವೈಯಕ್ತಿಕ ಮಾಹಿತಿಯನ್ನು ಕೇಳಿದ್ದಾನೆ. ಕಾಜಲ್‍ರನ್ನು ಭೇಟಿ ಮಾಡುವ ಖುಷಿಯಲ್ಲಿ ಅಭಿಮಾನಿ ಯೋಚಿಸದೇ ಎಲ್ಲ ವಿವರವನ್ನು ಆಡ್ಮಿನ್ ಬಳಿ ಹಂಚಿಕೊಂಡಿದ್ದಾನೆ. ಈ ವೆಬ್‍ಪೇಜ್ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿದ್ದು, ಕಾಜಲ್ ಅಭಿಮಾನಿಯನ್ನು ಯಾಮಾರಿಸಿದೆ.

    ಅಭಿಮಾನಿ ಆಗರ್ಭ ಶ್ರೀಮಂತ ಕುಟುಂಬಕ್ಕೆ ಸೇರಿದ್ದಾನೆ ಎನ್ನುವುದು ಗೊತ್ತಾದ ಬಳಿಕ ಈ ಗ್ಯಾಂಗ್ ಸದಸ್ಯರು ಪ್ರತಿದಿನ ಆತನಿಂದ ಹಣ ವಸೂಲಿ ಮಾಡುತ್ತಿದ್ದರು. ಹಣ ಪಡೆದ ನಂತರ ಕಾಜಲ್ ಭೇಟಿ ಬಗ್ಗೆ ಮಾತನಾಡದೇ ಇದ್ದಾಗ ಅಭಿಮಾನಿಗೆ ಅನುಮಾನ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಅಭಿಮಾನಿ ಗ್ಯಾಂಗ್‍ಗೆ ಬೆದರಿಕೆ ಹಾಕಿದ್ದಾನೆ. ಅಭಿಮಾನಿ ಬೆದರಿಕೆ ಹಾಕಿದ್ದಕ್ಕೆ ಗ್ಯಾಂಗ್ ಸದಸ್ಯರು ಆತನ ವೈಯಕ್ತಿಕ ಫೋಟೋವನ್ನು ಮಾರ್ಫ್ ಮಾಡಿ ವೈಯಕ್ತಿಕ ಮಾಹಿತಿಯನ್ನು ಲೀಕ್ ಮಾಡುತ್ತೇವೆ ಎಂದು ಹೆದರಿಸಿ 60 ಲಕ್ಷ ರೂ. ಕಸಿದುಕೊಂಡಿದ್ದಾರೆ.

    ಅಭಿಮಾನಿ 60 ಲಕ್ಷ ರೂ. ಕಳೆದುಕೊಂಡ ಮೇಲೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ.

  • ರಾಮಲಿಂಗಾ ರೆಡ್ಡಿ ಮನೆಗೆ ಎಚ್ ವಿಶ್ವನಾಥ್ ಭೇಟಿ

    ರಾಮಲಿಂಗಾ ರೆಡ್ಡಿ ಮನೆಗೆ ಎಚ್ ವಿಶ್ವನಾಥ್ ಭೇಟಿ

    ಬೆಂಗಳೂರು: ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಮನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್. ವಿಶ್ವನಾಥ್ ಭೇಟಿ ನೀಡಿದರು.

    ವಿಶ್ವನಾಥ್ ಕಳೆದ ವಾರವಷ್ಟೇ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿದ್ದರು. ಈಗ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿದ್ದು, ಎಲ್ಲರಿಗೂ ಕುತೂಹಲ ಮೂಡಿಸಿದೆ. ರಾಮಲಿಂಗಾ ರೆಡ್ಡಿ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದ್ದರು.

    ವಿಶ್ವನಾಥ್ ಅವರು ರಾಮಲಿಂಗಾ ರೆಡ್ಡಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ವರ್ತನೆಯಿಂದ ಕಾಂಗ್ರೆಸ್‍ನ ಕೆಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರ ವಿರೋಧಿ ಬಣವನ್ನು ಒಟ್ಟಿಗೆ ಮಾಡಿ ಮತ್ತೊಂದು ರೀತಿಯ ಕಾರ್ಯ ತಂತ್ರಕ್ಕೆ ರೂಪಿಸುತ್ತಿದ್ದಾರಾ ಎಂಬ ಅನುಮಾನ ಶುರುವಾಗಿದೆ.

    ಒಟ್ಟಿನಲ್ಲಿ ಕಳೆದ ವಾರವಷ್ಟೇ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿದ್ದ ಎಚ್. ವಿಶ್ವನಾಥ್, ಇದೀಗ ರಾಮಲಿಂಗಾ ರೆಡ್ಡಿ ಅವರ ಮನೆಗೆ ಭೇಟಿ ನೀಡಿದ್ದು, ಎಲ್ಲರಿಗೂ ಕೂತೂಹಲ ಮೂಡಿದೆ.

  • ಸಿದ್ದರಾಮಯ್ಯರನ್ನು ಭೇಟಿ ಮಾಡಿದ ದುನಿಯಾ ವಿಜಯ್

    ಸಿದ್ದರಾಮಯ್ಯರನ್ನು ಭೇಟಿ ಮಾಡಿದ ದುನಿಯಾ ವಿಜಯ್

    ಬೆಂಗಳೂರು: ಸ್ಯಾಂಡಲ್‍ವುಡ್ ಕರಿಚಿರತೆ ದುನಿಯಾ ವಿಜಯ್ ಅವರು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.

    ದುನಿಯಾ ವಿಜಯ್ ತಮ್ಮ ಮುಂಬರುವ ‘ಸಲಗ’ ಚಿತ್ರತಂಡದ ಜೊತೆ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದು, ಈಗ ಈ ಫೋಟೋಗಳನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಆದರೆ ದುನಿಯಾ ವಿಜಯ್ ಭೇಟಿ ಮಾಡಿದ್ದು ಯಾಕೆ ಎಂಬ ವಿಷಯವನ್ನು ಹೇಳಿಕೊಂಡಿಲ್ಲ.

    “ಸಲಗ ಚಿತ್ರತಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಆದ ಕ್ಷಣ” ಎಂದು ಟ್ವಿಟ್ಟರಿನಲ್ಲಿ ಹಂಚಿಕೊಂಡಿರುವ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ.

    ಇತ್ತೀಚೆಗೆ ಸಲಗ ಚಿತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಫೋಟೋದಲ್ಲಿ ದುನಿಯಾ ವಿಜಯ್, ಪೊಲೀಸ್ ವೇಷದಲ್ಲಿ ಇದ್ದ ಡಾಲಿ ಧನಂಜಯ್ ಅವರನ್ನು ಗುರಾಯಿಸುತ್ತಿದ್ದರು.

    ಈ ಚಿತ್ರವನ್ನು ರಘು ಶಿವಮೊಗ್ಗ ಅವರು ನಿರ್ದೇಶನ ಮಾಡುತ್ತಿದ್ದು, ಕೆ.ಪಿ ಶ್ರೀಕಾಂತ್ ಅವರು ಚಿತ್ರಕ್ಕೆ ಬಂಡವಾಳ ಹೂಡಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಹಿನ್ನೆಲೆ ಸಂಗೀತ ನೀಡಲಿದ್ದು, ನವೀನ್ ಸಜ್ಜು ಸಂಗೀತ ನಿರ್ದೇಶಕರಾಗಿ ಹೊಸ ಟ್ರೆಂಡ್ ಸೆಟ್ ಮಾಡಲು ತಯಾರಿ ಆರಂಭಿಸಿದ್ದಾರೆ.

  • ಮಂಡ್ಯ ಟೆನ್ಶನ್ – ರೆಸಾರ್ಟಿಗೆ ಪುತ್ರನನ್ನ ಕರೆಸಿಕೊಂಡ ಸಿಎಂ ಹೆಚ್‍ಡಿಕೆ

    ಮಂಡ್ಯ ಟೆನ್ಶನ್ – ರೆಸಾರ್ಟಿಗೆ ಪುತ್ರನನ್ನ ಕರೆಸಿಕೊಂಡ ಸಿಎಂ ಹೆಚ್‍ಡಿಕೆ

    ಉಡುಪಿ: ಲೋಕಸಭಾ ಚುನಾವಣೆಯ ಬಳಿಕ ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಹೊಗೆ ಕಾಣಿಸಿಕೊಂಡಿದ್ದು, ಮಂಡ್ಯದಲ್ಲಿ ಬಂಡಾಯ ಎದ್ದ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹೈಕಮಾಂಡ್‍ಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಎಚ್‍ಡಿಕೆ ವಿಶ್ರಾಂತಿ ಪಡೆಯುತ್ತಿರುವ ರೆಸಾರ್ಟಿಗೆ ನಿಖಿಲ್ ಆಗಮಿಸಿದ್ದಾರೆ.

    ಇಂದು ಉಡುಪಿಯ ಕಾಪುವಿನಲ್ಲೇ ನಿಖಿಲ್ ಅವರು ಸಿಎಂ ಅವರೊಂದಿಗೆ ಉಳಿಯಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇತ್ತ ಮಂಡ್ಯ ಫಲಿತಾಂಶದ ವಿಚಾರವಾಗಿ ಬಹುಮುಖ್ಯ ಚರ್ಚೆ ನಡೆಯಲಿದೆ ಎಂಬ ಮಾಹಿತಿ ಲಭಿಸಿದ್ದು, ಕ್ಷೇತ್ರದ ಫಲಿತಾಂಶದ ಬಗ್ಗೆ ನಿಖಿಲ್ ಚಿಂತಿತರಾಗಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಪುತ್ರನಿಗೆ ಸಿಎಂ ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

    ಮಂಡ್ಯ ರೆಬೆಲ್ ಕಾಂಗ್ರೆಸ್ ನಾಯಕರೆಲ್ಲರೂ ಕೂಡ ಸುಮಲತಾ ಅವರೊಂದಿಗೆ ಡಿನ್ನರ್ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ಎಲ್ಲಾ ನಾಯಕರು ಕೂಡ ಸುಮಲತಾ ಅಂಬರೀಶ್ ಅವರ ಪರ ಕೆಲಸ ಮಾಡಿದ್ದಾರೆ ಎಂಬ ಮಾತು ಕೇಳಿಬಂದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇತ್ತ ಕಾಂಗ್ರೆಸ್ ಪಕ್ಷದ ನಾಯಕರು ಮಂಡ್ಯ ಮುಖಂಡರ ಪರ ಪರೋಕ್ಷವಾಗಿ ಹೇಳಿಕೆ ನೀಡಿ ಸಮರ್ಥಿಸಿಕೊಂಡಿದ್ದಾರೆ.

  • ಮಧ್ಯರಾತ್ರಿ ಬಳ್ಳಾರಿ ರೆಡ್ಡಿ ಜೊತೆ ಸಿದ್ದರಾಮಯ್ಯ ಮಾತುಕತೆ!

    ಮಧ್ಯರಾತ್ರಿ ಬಳ್ಳಾರಿ ರೆಡ್ಡಿ ಜೊತೆ ಸಿದ್ದರಾಮಯ್ಯ ಮಾತುಕತೆ!

    ಬಳ್ಳಾರಿ: ಮಾಜಿ ಸಿಎಂ ಸಿದ್ದರಾಮಯ್ಯ ಗುರುವಾರ ಮಧ್ಯರಾತ್ರಿ ಬಳ್ಳಾರಿ ರೆಡ್ಡಿ ಅವರನ್ನು ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮಿಡ್ ನೈಟ್‍ನಲ್ಲಿ ಮೀಟ್ ಮಾಡಿದ್ದು ಜನಾರ್ದನರೆಡ್ಡಿ ಅವರನ್ನಲ್ಲ. ಬದಲಾಗಿ ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ.

    ಚುನಾವಣೆ ಘೋಷಣೆಯಾದ ದಿನದಿಂದ ಪಕ್ಷದೊಂದಿಗೆ ಮುನಿಸುಕೊಂಡಿರುವ ಸೂರ್ಯನಾರಾಯಣ ರೆಡ್ಡಿ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿ ಚರ್ಚೆ ನಡೆಸಿದರು. ಏನೇ ಭಿನ್ನಾಭಿಪ್ರಾಯ ಇದ್ದರೂ ಚುನಾವಣೆ ಮುಗಿದ ನಂತರ ಚರ್ಚೆ ಮಾಡೋಣ. ಸದ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪರನ್ನು ಗೆಲ್ಲಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ, ಮಾಜಿ ಸಚಿವ ಸಂತೋಷ ಲಾಡ್, ಶಾಸಕ ನಾಗೇಂದ್ರ ಸಹ ಸೂರ್ಯನಾರಾಯಣ ರೆಡ್ಡಿ ಮನವೊಲಿಸುವ ಪ್ರಯತ್ನ ಮಾಡಿದರು. ಸಿದ್ದರಾಮಯ್ಯ ಮನವೊಲಿಕೆ ನಂತರವೂ ಸೂರ್ಯನಾರಾಯಣ ರೆಡ್ಡಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡ್ತಾರೋ ಇಲ್ವೋ ಎನ್ನುವುದು ಇಂದು ಬಹಿರಂಗವಾಗಲಿದೆ.

    ಕಳೆದ ಒಂದು ವಾರದ ಹಿಂದೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಸಹ ಸೂರ್ಯನಾರಾಯಣ ರೆಡ್ಡಿ ಅವರನ್ನು ಭೇಟಿ ಮಾಡಿ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದರು. ಆದರೆ ಡಿಕೆಶಿ ಸಂಧಾನಕ್ಕೆ ಜಗ್ಗದ ರೆಡ್ಡಿ ಸಿದ್ದರಾಮಯ್ಯನವರ ಮಾತುಕತೆಯಿಂದ ತೃಪ್ತಿಯಾದ್ರಾ ಎನ್ನುವುದನ್ನು ಸೂೂರ್ಯನಾರಾಯಣರೆಡ್ಡಿ ಅವರೇ ತಿಳಿಸಬೇಕಾಗಿದೆ.

  • ಅನಂತ್‍ಕುಮಾರ್ ಹೆಗ್ಡೆ ಮನೆಗೆ ನಾಗಸಾಧುಗಳು ದಿಢೀರ್ ಭೇಟಿ – ನುಡಿದ ಭವಿಷ್ಯವೇನು?

    ಅನಂತ್‍ಕುಮಾರ್ ಹೆಗ್ಡೆ ಮನೆಗೆ ನಾಗಸಾಧುಗಳು ದಿಢೀರ್ ಭೇಟಿ – ನುಡಿದ ಭವಿಷ್ಯವೇನು?

    ಕಾರವಾರ: ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿರುವ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಅವರ ಮನೆಗೆ ಏಳು ಜನ ನಾಗಾ ಸಾಧುಗಳು ಭಾನುವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿದ್ದಾರೆ.

    ಮನೆಯಲ್ಲೇ ಇದ್ದ ಅನಂತಕುಮಾರ್ ಹೆಗ್ಡೆಗೆ ಇವರ ಭೇಟಿ ಅನಿರೀಕ್ಷಿತವಾಗಿತ್ತು. ಹೀಗಾಗಿ ಮೊದಲು ಅವರನ್ನು ಹೆಗ್ಡೆ ಭೇಟಿಮಾಡಲು ಬಿಡದಿದ್ದರೂ ನಂತರ ಅವರು ತಮ್ಮ ಪರಿಚಯ ಹೇಳಿದ ನಂತರ ಅವರನ್ನು ಖುದ್ದು ಅನಂತಕುಮಾರ್ ಹೆಗ್ಡೆ ಹಾಗೂ ಪತ್ನಿ ಶ್ರೀರೂಪ ಹೆಗ್ಡೆ ಅವರು ಬರಮಾಡಿಕೊಂಡು ಪಾದಪೂಜೆ ನೆರವೇರಿಸಿದರು.

    ಭೇಟಿ ನೀಡಿದ್ದು ಯಾಕೆ?
    ಮುಂಜಾನೆ ಶಿರಸಿ ನಗರಕ್ಕೆ ಆಗಮಿಸಿದ್ದ ಉತ್ತರ ಪ್ರದೇಶದ ನಾಗಸಾಧು ಮಹಾಂತ ರಾಮಗಿರಿ ಸ್ವಾಮೀಜಿ ಹಾಗೂ ಅವರ ಶಿಷ್ಯರು ಎಲ್ಲರೂ ಆಶ್ಚರ್ಯ ಪಡುವಂತೆ ನೇರವಾಗಿ ಶಿರಸಿಯ ಕೆ.ಹೆಚ್.ಬಿ ಕಾಲೋನಿಯ ಅನಂತಕುಮಾರ್ ಹೆಗ್ಡೆ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅವರ ಆಗಮನ ಅನಂತಕುಮಾರ್ ಹೆಗ್ಡೆಗೆ ಆಶ್ಚರ್ಯ ತಂದಿತ್ತು. ಯಾವುದೇ ಮಾಹಿತಿ ನೀಡದೇ ಭೇಟಿ ನೀಡಿದ್ದರೂ ಪತ್ನಿ ಸಮೇತರಾಗಿ ಅವರನ್ನು ಮನೆಯೊಳಗೆ ಕರೆದು ಪಾದಪೂಜೆ ಮಾಡಿ ಫಲಪುಷ್ಪಗಳನ್ನು ನೀಡಿ ಗೌರವಿಸಿದರು.

    ನಂತರ ಏಳುಜನ ನಾಗಸಾಧುಗಳು ಹೆಗ್ಡೆ ಕುಟುಂಬಕ್ಕೆ ಆಶಿರ್ವಾದ ಮಾಡಿದರು. ಇದರ ಜೊತೆಗೆ ಅನಂತಕುಮಾರ್ ಹೆಗ್ಡೆಗೆ ನಿಮ್ಮ ಹೆಸರು ರಾಷ್ಟಮಟ್ಟದಲ್ಲಿ ಉಜ್ಜಲಿಸಲಿದೆ, ನೀವು ಉತ್ತಮ ಪದವಿ ಪಡೆಯುತ್ತೀರಿ, ನಿಮ್ಮ ಹೆಸರು ಅಜರಾಮರವಾಗಲಿದೆ. ಸತ್ಯ ನಿಷ್ಟೆಯಿಂದ ಹೆಸರು ಮಾಡುತ್ತೀರಿ, ಈ ಬಾರಿ ವಿಜಯ ನಿಮ್ಮದಾಗಲಿದೆ ಎಂದು ಭವಿಷ್ಯ ನುಡಿದು ಹರಸಿದರು.

    ಸುಮಾರು ಒಂದು ಗಂಟೆಗಳ ಕಾಲ ಹೆಗ್ಡೆ ಮನೆಯಲ್ಲಿದ್ದ ನಾಗಸಾಧುಗಳು ರಾಮಮಂದಿರ ಸೇರಿದಂತೆ ರಾಜಕೀಯ ಕುರಿತು ಮಾತುಕತೆ ನಡೆಸಿದರು ಎಂಬುದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ. ಉತ್ತರ ಪ್ರದೇಶದ ಮಹಾಂತ ರಾಮಗಿರಿ ಸ್ವಾಮೀಜಿ, ತಾವು ದೇಶ ಸುತ್ತುತ್ತಿದ್ದು ದೇಶದ ಪ್ರಮುಖ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ. ಈ ವೇಳೆ ಆ ಪ್ರದೇಶದ ಪ್ರಮುಖ ಜನರನ್ನು ಭೇಟಿ ಮಾಡಿ ಹೋಗುತ್ತಿದ್ದೇವೆ. ಮುಂದೆ ಯಾವ ದಿಕ್ಕಿಗೆ ಹೋಗುತ್ತೇವೆ ಎಂಬುದು ತಿಳಿದಿಲ್ಲ. ದೇವರ ಇಚ್ಚೆಯಂತೆ ಪ್ರತಿ ಸ್ಥಳವನ್ನೂ ಭೇಟಿ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

  • ಉರುಳಿದ ಕಾಲಚಕ್ರ, ರಾತ್ರೋರಾತ್ರಿ ಸಿದ್ದರಾಮಯ್ಯ ಮನೆಗೆ ದೇವೇಗೌಡರ ಸೊಸೆ!

    ಉರುಳಿದ ಕಾಲಚಕ್ರ, ರಾತ್ರೋರಾತ್ರಿ ಸಿದ್ದರಾಮಯ್ಯ ಮನೆಗೆ ದೇವೇಗೌಡರ ಸೊಸೆ!

    ಬೆಂಗಳೂರು: ಶಾಸಕಿ ಅನಿತಾ ಕುಮಾರಸ್ವಾಮಿ ಅವರು ರಾತ್ರೋರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಭೇಟಿ ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾನು ಯಾರ ಜೊತೆಗೂ ಭಿಕ್ಷೆ ಬೇಡಲ್ಲ ಎಂದಿದ್ದರು. ಆದರೆ ಈಗ ಅನಿವಾರ್ಯವಾಗಿ ಸಿಎಂ ಸಿದ್ದರಾಮಯ್ಯ ಜೊತೆ ಸಂಧಾನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

    ಮಂಡ್ಯ ಅಖಾಡದಲ್ಲಿ ಹಿಂದುಳಿದ ದಲಿತ ಹಾಗೂ ಅಲ್ಪ ಸಂಖ್ಯಾತ ಮತಗಳನ್ನ ಸೆಳೆಯಬೇಕಾದರೆ ಸಿದ್ದರಾಮಯ್ಯ ನೆರವು ಅನಿವಾರ್ಯ ಎಂದು ದೇವೇಗೌಡರ ಕುಟುಂಬಕ್ಕೆ ಅರ್ಥವಾಗಿದೆ. ಆದ್ದರಿಂದ ಶಾಸಕಿ ಅನಿತಾ ಕುಮಾರಸ್ವಾಮಿ ಸ್ವತ: ಅಖಾಡಕ್ಕೆ ಇಳಿದು ಮಗನ ಗೆಲುವಿಗೆ ಸಹಕರಿಸುವಂತೆ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದಾರೆ. ಜೊತೆಗೆ ಸೋಮವಾರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೂ ಮಂಡ್ಯಕ್ಕೆ ಬರುವಂತೆ ಅನಿತಾ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಕಾಂಗ್ರೆಸ್ ಮುಖಂಡರ ಒಳ ಏಟಿನ ಭಯದ ಬಗ್ಗೆಯು ಆತಂಕ ವ್ಯಕ್ತಪಡಿಸಿ ಅದನ್ನು ಸರಿ ಪಡಿಸುವಂತೆ ಮನವಿ ಮಾಡಿದ್ದಾರೆ. ಅನಿತಾ ಕುಮಾರಸ್ವಾಮಿ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಮೈತ್ರಿ ಸೂತ್ರ ಪಾಲನೆಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಹಾಸನ ಜಿಲ್ಲೆಯಲ್ಲಿ ದಶಕಗಳ ಕಾಲ ಕಾಂಗ್ರೆಸ್ ನಾಯಕರ ಮುಖವೆತ್ತಿ ನೋಡದ ರೇವಣ್ಣ ಸಿದ್ದರಾಮಯ್ಯ ಸಮ್ಮುಖದಲ್ಲಿ ರಾಜಿ ಸಂಧಾನದ ಮಾತನಾಡಿದ್ದು, ಮುಂದೆಯು ಜಿಲ್ಲೆಯಲ್ಲಿ ಕಾಂಗ್ರೆಸ್ ಜೊತೆ ಜೊತೆಗೆ ಹೋಗುವ ಮಾತನಾಡಿದ್ದಾರೆ.

    ಒಂದು ಕಾಲದಲ್ಲಿ ದೇವೇಗೌಡರನ್ನು ಎದುರು ಹಾಕಿಕೊಂಡ ಸಿದ್ದರಾಮಯ್ಯರ ರಾಜಕೀಯ ಭವಿಷ್ಯವೇ ಮುಗಿದು ಹೋಯ್ತು ಎನ್ನಲಾಗುತ್ತಿತ್ತು. ದೇವೇಗೌಡರಿಗೆ ಸೆಡ್ಡು ಹೊಡೆದು ಪಕ್ಷ ಬಿಟ್ಟ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿ 5 ವರ್ಷ ಕಾಲ ಮುಖ್ಯಮಂತ್ರಿಯು ಆಗಿದ್ದರು. ಮೈತ್ರಿಯ ಹೊರತಾಗಿಯು ಗೌಡರ ಕುಟುಂಬದೊಂದಿಗೆ ಒಂದು ಹಂತದ ಅಂತರ ಕಾಪಾಡಿಕೊಂಡಿದ್ದ ಸಿದ್ದರಾಮಯ್ಯಗೆ ಈಗ ಹೊಸ ಧರ್ಮ ಸಂಕಟ ಶುರುವಾಗಿದೆ.

    ಈಗ ಕಾಲ ಚಕ್ರ ತಿರುಗಿದೆ ಗೌಡರ ಕುಟುಂಬ ಸಿದ್ದರಾಮಯ್ಯ ಮನೆ ಬಾಗಿಲಿಗೆ ಬಂದು ನೆರವು ಕೇಳಿದೆ. ನೆರವು ನೀಡಬೇಕಾದ ಅನಿವಾರ್ಯತೆಗೆ ಸಿದ್ದರಾಮಯ್ಯ ಸಿಲುಕಿದ್ದಾರೆ.

  • ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರನ್ನು ಭೇಟಿ ಮಾಡಿದ ನಿಖಿಲ್

    ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರನ್ನು ಭೇಟಿ ಮಾಡಿದ ನಿಖಿಲ್

    ಮಂಡ್ಯ: ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

    ಶುಕ್ರವಾರ ನಾಗಮಂಗಲ ತಾಲೂಕಿನ ಸಂಕನಹಳ್ಳಿ ಬಳಿ ನಡೆದಿದ್ದ ಅಪಘಾತದಲ್ಲಿ 5 ಜನ ಮೃತಪಟ್ಟು 5 ಜನ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಬೆಳ್ಳೂರು ಕ್ರಾಸ್‍ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ನಿಖಿಲ್ ಮೃತರ ಕುಟುಂಬದವರು ಮತ್ತು ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ.

    ಅಪಘಾತ ನಡೆದಿದ್ದು ಹೇಗೆ?
    ಶುಕ್ರವಾರ ಸಂಜೆ ಆಟೋಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಐದು ಮಂದಿ ಮೃತಪಟ್ಟಿದ್ದರು. ಮೃತರನ್ನು ಮಂಡ್ಯ ಜಿಲ್ಲೆಯ ಸುಖದಾರೆ ಗ್ರಾಮದ ಕುಮಾರ್ (42), ಕಾಳೇನಹಳ್ಳಿಯ ಅರಸಮ್ಮ(40), ಆಟೋ ಡ್ರೈವರ್ ಸತೀಶ್(40), ಬೋರಲಿಂಗ(40) ಮತ್ತು ತಮಿಳುನಾಡಿನ ಸುರೇಶ್ ಎಂದು ಗುರುತಿಸಲಾಗಿದೆ.

    ಮೃತರು ಹಾಗೂ ಗಾಯಾಳುಗಳೆಲ್ಲರೂ ಶುಕ್ರವಾರ ಸಂತೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನಾಗಮಂಗಲಕ್ಕೆ ಆಟೋದಲ್ಲಿ ಹೋಗಿದ್ದರು. ಬಳಿಕ ಕೆಲಸ ಮುಗಿಸಿಕೊಂಡು ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದರು. ಆದರೆ ಸಂಕನಹಳ್ಳಿ ಗೇಟ್ ಬಳಿ ಆಟೋ ಬರುತ್ತಿದ್ದಂತೆ ಎದುರಿನಿಂದ ಬಂದ ಟಿಪ್ಪರ್‍ಗೆ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೆ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಟಿಪ್ಪರ್ ನ ಕೆಳಗೆ ಸಿಲುಕಿದ್ದು, ಸುಮಾರು ಅರ್ಧ ಕಿಲೋ ಮೀಟರ್ ದೂರದವರೆಗೆ ಆಟೋವನ್ನು ಟಿಪ್ಪರ್ ಎಳೆದುಕೊಂಡು ಹೋಗಿದೆ. ಪರಿಣಾಮ ಟಿಪ್ಪರ್ ಕೆಳಗೆ ಸಿಲುಕಿದ ಆಟೋದಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದರು.

  • ಇಂದು ಹುತಾತ್ಮ ಯೋಧನ ಕುಟುಂಬಕ್ಕೆ ಸುಮಲತಾ  ಸಾಂತ್ವಾನ- 20 ಗುಂಟೆ ಜಮೀನು ಹಸ್ತಾಂತರ

    ಇಂದು ಹುತಾತ್ಮ ಯೋಧನ ಕುಟುಂಬಕ್ಕೆ ಸುಮಲತಾ ಸಾಂತ್ವಾನ- 20 ಗುಂಟೆ ಜಮೀನು ಹಸ್ತಾಂತರ

    ಮಂಡ್ಯ: ನಟಿ ಸುಮಲತಾ ಅವರು ಇಂದು ಹುತಾತ್ಮ ಯೋಧ ಗುರು ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಲಿದ್ದಾರೆ. ಅಲ್ಲದೆ ಇದೇ ವೇಳೆ ತಮ್ಮ ಪುತ್ರ ಅಭಿಷೇಕ್ ಹೆಸರಲ್ಲಿರೋ 20 ಗುಂಟೆ ಜಮೀನನ್ನು ಯೋಧನ ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.

    ಬುಧವಾರವಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಭೇಟಿ ಆಗಿದ್ದ ಸುಮಲತಾ ಅಂಬರೀಶ್ ಅವರು ಇಂದು ಮಂಡ್ಯಕ್ಕೆ ಹೋಗ್ತಿದ್ದಾರೆ. ಚಿಕ್ಕರಸಿಕೆರೆಯಲ್ಲಿರೋ ಕಾಲಭೈರವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿರುವ ಗುಡಿಗೆರೆ ಗುರು ಮನೆಗೆ ಭೇಟಿ ನೀಡ್ತಾರೆ. ಇದನ್ನೂ ಓದಿ: ಮಂಡ್ಯ ಜನರ ಅಭಿಪ್ರಾಯವೇ ಅಂತಿಮ: ಸುಮಲತಾ ಅಂಬರೀಶ್

    ಸಾಂತ್ವನ ಹೇಳೋದರ ಜೊತೆಗೆ ಪುತ್ರ ಅಭಿಷೇಕ್ ಹೆಸರಲ್ಲಿರೋ 20 ಗುಂಟೆ ಜಮೀನನ್ನು ಯೋಧನ ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ. ಈ ನೆಲದ ಮಗಳಾಗಿ ಸೊಸೆಯಾಗಿ ನಾನು ಮಾಡುವ ಪುಟ್ಟ ಸೇವೆ ಅಂತ ಯೋಧನ ಅಂತ್ಯಸಂಸ್ಕಾರ ನಡೆದಿದ್ದ ದಿನ ಸುಲಮತಾ ಹೇಳಿದ್ದರು. ಈ ಹಿಂದೆ ಸಿಎಂ ಕುಮಾರಸ್ವಾಮಿ ಮಂಡ್ಯಕ್ಕೆ ಸುಮಲತಾ ಕೊಡುಗೆ ಏನು ಅಂತ ಪ್ರಶ್ನಿಸಿ ವಿವಾದಕ್ಕೊಳಗಾಗಿದ್ದರು. ಇದನ್ನೂ ಓದಿ:  ಅಂಬರೀಶ್ ಹೆಸರಲ್ಲಿರೋ ಅರ್ಧ ಎಕರೆ ಜಮೀನನ್ನು ಗುರು ಕುಟುಂಬಕ್ಕೆ ಕೊಡುತ್ತೇನೆ: ಸುಮಲತಾ

    https://www.youtube.com/watch?v=8VMxyfP3zjM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೆಟ್‍ನಲ್ಲಿ ಕಿಚ್ಚನನ್ನು ಭೇಟಿ ಮಾಡಿದ ಶ್ರೀಮುರಳಿ

    ಸೆಟ್‍ನಲ್ಲಿ ಕಿಚ್ಚನನ್ನು ಭೇಟಿ ಮಾಡಿದ ಶ್ರೀಮುರಳಿ

    ಹೈದರಾಬಾದ್: ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಹೈದರಾಬಾದ್‍ನ ರಾಮೋಜಿ ಸಿಟಿಯಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರನ್ನು ಭೇಟಿ ಮಾಡಿದ್ದರು. ಮಹೇಶ್ ಬಾಬು ಅವರನ್ನು ಭೇಟಿ ಮಾಡಿದ ನಂತರ ಮುರಳಿ ಅವರು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.

    ಶ್ರೀಮುರಳಿ ಅವರು ತಮ್ಮ ಮುಂದಿನ ಚೇತನ್ ಕುಮಾರ್ ನಿರ್ದೇಶನದ ‘ಭರಾಟೆ’ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸೆಂಟರ್ ಗೆ ಹೋಗಿದ್ದಾರೆ. ಕಿಚ್ಚ ಸುದೀಪ್ ಅವರು ಕೂಡ ತಮ್ಮ ‘ಪೈಲ್ವಾನ್’ ಚಿತ್ರದ ಚಿತ್ರೀಕರಣವನ್ನು ರಾಮೋಜಿ ಸಿಟಿಯಲ್ಲಿ ನಡೆಸುತ್ತಿದ್ದಾರೆ. ಈ ವೇಳೆ ಇಬ್ಬರು ನಟರು ಭೇಟಿ ಆಗಿದ್ದಾರೆ. ಇದನ್ನೂ ಓದಿ: ಟಾಲಿವುಡ್ ಪ್ರಿನ್ಸ್ ಮಹೇಶ್ ಜೊತೆ ರೋರಿಂಗ್ ಸ್ಟಾರ್ ಮುರಳಿ

    ಶ್ರೀಮುರಳಿ ಅವರು ಕಿಚ್ಚ ಸುದೀಪ್ ಹಾಗೂ ನಟಿ ತಾರಾ ಅವರನ್ನು ಭೇಟಿ ಮಾಡಿರುವ ಫೋಟೋಗಳನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. “ಭರಾಟೆ ಸಿನಿಮಾದ ಚಿತ್ರೀಕರಣದ ವೇಳೆ ನನ್ನ ಆತ್ಮೀಯ ಗೆಳೆಯ ಕಿಚ್ಚ ಸುದೀಪ್ ಅವರನ್ನು ‘ಪೈಲ್ವಾನ್’ ಸೆಟ್‍ನಲ್ಲಿ ಭೇಟಿ ಮಾಡಿದೆ. ತುಂಬಾ ದಿನಗಳ ನಂತರ ಅವರನ್ನು ಭೇಟಿ ಮಾಡಿ ಖುಷಿಯಾಯಿತು. ನಾವಿಬ್ಬರು ಖುಷಿಯ ಕ್ಷಣಗಳನ್ನು ಕಳೆದವು. ಇಂದು ಸುದೀಪ್ ಅವರು ಭರಾಟೆ ಸೆಟ್‍ಗೆ ಭೇಟಿ ನೀಡಿದ್ದಾರೆ” ಎಂದು ಶ್ರೀಮುರಳಿ ಟ್ವೀಟ್ ಮಾಡಿದ್ದಾರೆ.

    ಶ್ರೀಮುರಳಿ ಅವರ ಟ್ವೀಟ್‍ಗೆ ಕಿಚ್ಚ ಸುದೀಪ್ ಅವರು, “ನನಗೂ ಯಾವಾಗಲೂ ಖುಷಿ ಆಗುತ್ತದೆ. ಭರಾಟೆ ಚಿತ್ರದ ಟೀಸರ್ ಅದ್ಭುತವಾಗಿ ಕಾಣಿಸುತ್ತದೆ. ಭರಾಟೆ ಚಿತ್ರತಂಡಕ್ಕೆ ಶುಭಾಶಯಗಳು” ಎಂದು ರೀ-ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv