Tag: Meet

  • ಮಾಂಸಪ್ರಿಯರಿಗೆ ಗುಡ್‍ನ್ಯೂಸ್- KMF ಮಾದರಿಯಲ್ಲೇ ಮಾರಾಟಕ್ಕೆ ಪ್ಲಾನ್

    ಮಾಂಸಪ್ರಿಯರಿಗೆ ಗುಡ್‍ನ್ಯೂಸ್- KMF ಮಾದರಿಯಲ್ಲೇ ಮಾರಾಟಕ್ಕೆ ಪ್ಲಾನ್

    ಬೆಂಗಳೂರು: ನಾನ್ ಪ್ರೀಯರಿಗೆ ಸರ್ಕಾರ ಗುಡ್ ನ್ಯೂಸ್ ನೀಡುತ್ತಿದೆ. ಬರುವ ಹೊಸ ವರ್ಷದಿಂದ ಕೆಎಂಎಫ್ (KMF) ಮಾದರಿಯಲ್ಲೇ ಕುರಿ ಹಾಗೂ ಮೇಕೆ ಮಾಂಸ ಮಾರಾಟ (Meet Sale) ಮಾಡುವ ಪ್ಲಾನ್ ಮಾಡಲಾಗಿದೆ.

    ರಾಜ್ಯದ ತುಮಕೂರು (Tumakuru) ಹಾಗೂ ಚಿತ್ರದುರ್ಗದ (Chitradurga) ಕುರಿ ಹಾಗೂ ಮೇಕೆ ಮಾಂಸಕ್ಕೆ ಎಲ್ಲೆಡೆ ಭಾರೀ ಬೇಡಿಕೆ ಇದೆ. ಈ ಉತ್ತಮ ಗುಣಮಟ್ಟದ, ರೋಗರಹಿತ ಮಾಂಸವನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಸರ್ಕಾರ ಸಜ್ಜಾಗುತ್ತಿದೆ. ಕರ್ನಾಟಕ ಸರ್ಕಾರ, ಪಶುಸಂಗೋಪನೆ ಇಲಾಖೆ (Department of Animal Husbandry)  ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ಉತ್ಪನ್ನಗಳ ಮಳಿಗೆ ಮಾದರಿಯಲ್ಲಿಯೇ ರಾಜ್ಯದಾದ್ಯಂತ ತನ್ನ ಮಳಿಗೆಗಳ ಮೂಲಕ ಪ್ಯಾಕ್ ಮಾಡಿದ ಕುರಿ ಮತ್ತು ಮೇಕೆ ಮಾಂಸವನ್ನು ಸಮಂಜಸವಾದ ಬೆಲೆಯಲ್ಲಿ ಮಾರಾಟ ಮಾಡಲು ಯೋಜಿಸುತ್ತಿದೆ.

    ಪಶುಸಂಗೋಪನಾ ಇಲಾಖೆ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಈ ಮಳಿಗೆಗಳು ಹೊಸ ವರ್ಷದಿಂದ ಆರಂಭವಾಗುವ ಪ್ಲಾನ್ ಮಾಡಲಾಗಿದೆ. ಈಗಾಗಲೇ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚೀಲನಹಳ್ಳಿಯಲ್ಲಿ 46 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಕಸಾಯಿಖಾನೆ ಕಾಮಗಾರಿ ನಡೆಯುತ್ತಿದ್ದು, ಜನವರಿ ವೇಳೆಗೆ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ: ರಾಜ್ಯವನ್ನ ಕತ್ತಲೆಗೆ ದೂಡಿ ಇಂಧನ ಸಚಿವರು ನಾಪತ್ತೆ- ಬಿಜೆಪಿಯಿಂದ ಪೋಸ್ಟರ್ ವಾರ್

    ಈ ಕುರಿತು ಎಂಎಲ್‍ಸಿ ಟಿ.ಬಿ ಜಯಚಂದ್ರ ಪ್ರತಿಕ್ರಿಯಿಸಿ, ರೈತರು ತಮ್ಮ ಕುರಿ ಮತ್ತು ಮೇಕೆಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಮತ್ತು ಜನರಿಗೆ ಗುಣಮಟ್ಟದ ಮಾಂಸವನ್ನು ಒದಗಿಸಲು ಸಹಾಯ ಮಾಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ, ರೈತರಿಂದ ನೇರವಾಗಿ ಪ್ರಾಣಿಗಳನ್ನು ಖರೀದಿಸಲಾಗುತ್ತದೆ. ರಾಜ್ಯದೆಲ್ಲೆಡೆ ವಿಸ್ತರಿಸುವ ಪ್ಲಾನ್ ಇದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಸರ್ಕಾರದ ಈ ಪ್ಲಾನ್ ಮಾಂಸಪ್ರಿಯರಿಗೆ ಸಂತಸ ತಂದಿದೆ.

  • ಧೋನಿ ಭೇಟಿಯ ಹಿಂದೆ ರಾಮ್ ಚರಣ್ ಅಭಿಮಾನಿಗಳ ಲೆಕ್ಕಾಚಾರ

    ಧೋನಿ ಭೇಟಿಯ ಹಿಂದೆ ರಾಮ್ ಚರಣ್ ಅಭಿಮಾನಿಗಳ ಲೆಕ್ಕಾಚಾರ

    ಭಾರತೀಯ ಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಮತ್ತು ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ನಿನ್ನೆಯಷ್ಟೇ ಭೇಟಿ  (Meet)ಮಾಡಿದ್ದಾರೆ. ಇಬ್ಬರು ದಿಗ್ಗಜರ ಈ ಭೇಟಿ ಸಾಕಷ್ಟು ಕುತೂಹಲ ಮತ್ತು ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಧೋನಿ ಅವರು ನಿರ್ಮಾಪಕರಾಗಿ ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದರಿಂದ ಭೇಟಿ ಮಹತ್ವ ಕೂಡ ಪಡೆದುಕೊಂಡಿದೆ.

    ಈಗಾಗಲೇ ಧೋನಿ ನಿರ್ಮಾಣ ಸಂಸ್ಥೆಯು ಒಂದು ಸಿನಿಮಾವನ್ನು ತಯಾರು ಮಾಡಿ, ಅದನ್ನು ಬಿಡುಗಡೆ ಕೂಡ ಮಾಡಿದೆ. ಆ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಹಾಗಾಗಿ ಹಲವಾರು ಸಿನಿಮಾಗಳನ್ನು ಮಾಡುವುದಾಗಿ ಧೋನಿ ಪತ್ನಿ ಸಾಕ್ಷಿ ಘೋಷಣೆ ಮಾಡಿದ್ದರು. ಈ ಬ್ಯಾನರ್ ನಲ್ಲೇ ಧೋನಿ ಕೂಡ ನಟಿಸಬೇಕು ಎನ್ನುವ ಆಸೆಯನ್ನೂ ವ್ಯಕ್ತ ಪಡಿಸಿದ್ದರು. ಈ ನಡುವೆ ಧೋನಿ ಮತ್ತು ರಾಮ್ ಚರಣ್ ಭೇಟಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಇದನ್ನೂ ಓದಿ:ಕುತೂಹಲ ಮೂಡಿಸುವ ‘ವೇಷ’ ಸಿನಿಮಾದ ಟ್ರೈಲರ್ ರಿಲೀಸ್

    ಮೂಲಗಳ ಪ್ರಕಾರ ಧೋನಿ ನಿರ್ಮಾಣ ಸಂಸ್ಥೆಯಲ್ಲಿ ರಾಮ್ ಚರಣ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮ್ ಚರಣ್‍ಗಾಗಿಯೇ ವಿಶೇಷ ಕಥೆಯೊಂದನ್ನು ನಿರ್ಮಾಣ ಸಂಸ್ಥೆ ಹುಡುಕಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಜೋಡಿ ಮುಂದೆ ಸಿನಿಮಾ ಮಾಡುವ ವಿಚಾರವನ್ನು ಫೋಟೋ ರಟ್ಟು ಮಾಡಿದೆ.

     

    ಧೋನಿಯನ್ನು ಭೇಟಿ ಮಾಡಿ ನಂತರ ಆ ಫೋಟೋಗಳನ್ನು ರಾಮ್ ಚರಣ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಭೇಟಿಯ ವಿಚಾರವನ್ನು ಮಾತ್ರ ಅವರು ತಿಳಿಸಿಲ್ಲ. ಹಾಗಂತ ಅಭಿಮಾನಿಗಳು ಸುಮ್ಮನೆ ಕೂತಿಲ್ಲ. ಈ ಭೇಟಿಯ ಗುಟ್ಟನ್ನು ಕೆದಕುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಖಿಲ್ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡ ಧ್ರುವ ಸರ್ಜಾ

    ನಿಖಿಲ್ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡ ಧ್ರುವ ಸರ್ಜಾ

    ಟ ನಿಖಿಲ್ ಕುಮಾರ್ (Nikhil Kumar) ಸದ್ಯ ಶೂಟಿಂಗ್ (Shooting) ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಅತ್ತ ರಾಜಕೀಯ ವಿಚಾರದಲ್ಲಿ ಓಡಾಟ, ಗಣ್ಯರ ಭೇಟಿ, ದೆಹಲಿ ಪ್ರವಾಸ ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಈಗಾಗಲೇ ಅನೌನ್ಸ್ ಮಾಡಿ ಶೂಟಿಂಗ್ ಶುರು ಮಾಡಿರೋ ಸಿನಿಮಾ ಕಂಪ್ಲೀಟ್ ಮಾಡಬೇಕಿದೆ. ನಿಖಿಲ್ ರಾಜಕೀಯ ಅಖಾಡಕ್ಕೆ ಅಧಿಕೃತವಾಗಿ ಎಂಟ್ರಿಕೊಡದೇ ಇದ್ದರೂ ಎಂಪಿ ಚುನಾವಣೆಗೆ ಬೇಕಿರೋ ಸದೃಢವಾದ ವೇದಿಕೆಯನ್ನ ಪಕ್ಷದ ಪರವಾಗಿ ತಾವೇ ಸಜ್ಜು ಮಾಡಬೇಕಿದೆ. ಹಾಗಾಗಿ ರಾಜಕೀಯ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುವಲ್ಲಿ ಅವರು ನಿರತರಾಗಿದ್ದಾರೆ.

    ಸದ್ಯ ಲೈಕಾ ಸಂಸ್ಥೆ ನಿರ್ಮಾಣದ, ಲಕ್ಷ್ಮಣ್ ನಿರ್ದೇಶನದ ಚಿತ್ರದಲ್ಲಿ ನಿಖಿಲ್ ನಟಿಸುತ್ತಿದ್ದು ಚಿತ್ರದ ಸೆಕೆಂಡ್ ಶೆಡ್ಯೂಲ್ ಸ್ಟಾರ್ಟ್ ಆಗಿದೆ. ಐದು ತಿಂಗಳಲ್ಲಿ ಸಿನಿಮಾ ಕಂಪ್ಲೀಟ್ ಮಾಡಬೇಕು ಎನ್ನುವ ಟಾರ್ಗೆಟ್ ಇಟ್ಟುಕೊಂಡಿರುವ ಟೀಂ  ಬಿರುಸಿನಲ್ಲಿ ಶೂಟಿಂಗ್ ಮಾಡುತ್ತಿದೆ. ಈ ನಡುವೆ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ನಟ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ದೊಡ್ಮನೆ ಆಟಕ್ಕೆ ಜೊತೆಯಾಗ್ತಾರಾ ಮೇಘಾ ಶೆಟ್ಟಿ? ಕೊನೆಗೂ ಸಿಕ್ತು ಉತ್ತರ

    ನಿಖಿಲ್ ಹಾಗೂ ಧ್ರುವಾ ಸರ್ಜಾ (Dhruva Sarja) ಒಟ್ಟಿಗೆ ಕಾಣಿಸಿಕೊಂಡಿದ್ದು ತೀರ ಕಡಿಮೆ. ಆದರೆ ಇದೇ ಮೊದಲ ಬಾರಿಗೆ ಇಬ್ಬರು ಭೇಟಿ ಮಾಡಿ ಕೆಲ ಸಮಯ ಮಾತುಕತೆ ನಡೆಸಿದ್ದಾರೆ. ಇದೇ ಸಮಯದಲ್ಲಿ ನಿಖಿಲ್ ಅವರ ಹೊಸ ಸಿನಿಮಾ ಬಗ್ಗೆ ಹಾಗೂ ಧ್ರುವ ಅವರ ಮಾರ್ಟಿನ್ ಚಿತ್ರದ ಬಗ್ಗೆ  ಚರ್ಚಿಸಿದ್ದಾರೆ. ಇದಷ್ಟೇ ಅಲ್ಲದೇ ಇಬ್ಬರೂ ಒಂದಿಷ್ಟು ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡುತ್ತಾ ಕೆಲ ಸಮಯ ಕಳೆದಿದ್ದಾರೆ.

     

    ಅಪರೂಪಕ್ಕೆ ಸೆಟ್ ಗೆ ಬಂದ ಧ್ರುವ ಅವರನ್ನು ಕಂಡು ನಿಖಿಲ್ ಕೂಡ ಸರ್ಪ್ರೈಸ್ ಆಗಿದ್ದು ಅಪರೂಪದ ಗೆಳೆಯನನ್ನ ಪ್ರೀತಿಯಿಂದ ಬರಮಾಡಿಕೊಂಡು ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ. ಒಟ್ಟಾರೆ ಈ ಇಬ್ಬರು ಸ್ಟಾರ್ ನಟರ ಭೇಟಿ ಅಭಿಮಾನಿಗಳಿಗೆ ಖುಷಿ ಕೊಡುವುದರ ಜೊತೆಗೆ ಕುತೂಹಲವನ್ನೂ ಹುಟ್ಟುಹಾಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಲೇಷ್ಯಾ ಪ್ರಧಾನಿ ಭೇಟಿ ಮಾಡಿದ ರಜನಿಕಾಂತ್: ಅಚ್ಚರಿಯ ಹೇಳಿಕೆ ನೀಡಿದ ಪ್ರಧಾನಿ

    ಮಲೇಷ್ಯಾ ಪ್ರಧಾನಿ ಭೇಟಿ ಮಾಡಿದ ರಜನಿಕಾಂತ್: ಅಚ್ಚರಿಯ ಹೇಳಿಕೆ ನೀಡಿದ ಪ್ರಧಾನಿ

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ‘ಜೈಲರ್’ ಸಿನಿಮಾದ ಗೆಲುವಿನ ಬೆನ್ನಲ್ಲೇ ಮಲೇಷ್ಯಾದ (Malaysia) ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ಅವರು ರಜನಿಯನ್ನು ಭೇಟಿ ಮಾಡಿದ್ದಾರೆ. ತಮ್ಮಿಬ್ಬರ ಭೇಟಿಯ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಭೇಟಿಯ ಕುರಿತು ಅಚ್ಚರಿಯ ಸಂಗತಿಗಳನ್ನು ಹೊರ ಹಾಕಿದ್ದಾರೆ.

    ಜೈಲರ್ ಸಿನಿಮಾ ಬಿಡುಗಡೆಗೂ ಮುನ್ನ ರಜನಿಕಾಂತ್ ಉತ್ತರ ಪ್ರದೇಶದ ಪ್ರವಾಸ ಮಾಡಿದ್ದರು. ಹಿಮಾಲಯದ ಪ್ರವಾಸ ಮುಗಿದ ನಂತರ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದರು. ಜೊತೆಗೆ ಜಾರ್ಖಂಡ್ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರನ್ನು ಭೇಟಿಯಾಗಿದ್ದರು. ಇದೀಗ ಮಲೇಷ್ಯಾದ ಪ್ರಧಾನಿಯನ್ನೇ ತಲೈವ ಮುಖಾಮುಖಿಯಾಗಿದ್ದಾರೆ. ಹಾಗಾಗಿ ರಜನಿ ಬಗ್ಗೆ ಹಲವಾರು ಚರ್ಚೆಗಳು ನಡೆದಿವೆ.

    ರಜನಿಕಾಂತ್ ರಾಜಕಾರಣಕ್ಕೆ ಬರುವ ವಿಚಾರ ಇಂದು ನೆನ್ನೆಯದಲ್ಲ. ಹಲವು ವರ್ಷಗಳಿಂದ ಈ ವಿಷಯ ಚಾಲ್ತಿಯಲ್ಲಿದೆ. ರಜನಿ ಕೂಡ ಹಲವಾರು ಬಾರಿ ರಾಜಕಾರಣಕ್ಕೆ ಬರುವ ಆಸೆಯನ್ನೂ ವ್ಯಕ್ತ ಪಡಿಸಿದ್ದಾರೆ. ಆದರೆ, ಇದೀಗ ಅವರಿಗೆ ರಾಜಕಾರಣದ ಬಗ್ಗೆ ಆಸಕ್ತಿ ಇಲ್ಲವೆಂದು ಹೇಳಲಾಗುತ್ತಿದೆ. ಆದರೆ, ರಾಜ್ಯಪಾಲರ ಹುದ್ದೆಯು ಅವರನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:‘ಛೂಮಂತರ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದ ರವಿಚಂದ್ರನ್

    ರಜನಿಕಾಂತ್ ಅವರನ್ನು ರಾಜ್ಯಪಾಲರನ್ನು ಮಾಡುವ ಯೋಜನೆಯೊಂದು ಸಿದ್ಧವಾಗಿದ್ದು, ರಜನಿಕಾಂತ್ ಅದಕ್ಕಾಗಿ ಹಲವಾರು ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಹಾಗಾಗಿ ರಾಜಕಾರಣಿಗಳನ್ನು ರಜನಿ ಭೇಟಿ ಮಾಡುತ್ತಿದ್ದಾರೆ ಎನ್ನುವುದು ಕೆಲವರ ವಾದ. ಮಲೇಷ್ಯಾದಲ್ಲಿ ಸಾಕಷ್ಟು ಸಂಖ್ಯೆಯ ತಮಿಳರೂ ಇರುವುದರಿಂದ ಪ್ರಧಾನಿ ಭೇಟಿ ಮಹತ್ವ ಪಡೆದುಕೊಂಡಿದೆ.

     

    ಅಲ್ಲದೇ, ಮಲೇಷ್ಯಾದ ಪ್ರಧಾನಿ ಭೇಟಿಯ ಸಂಗತಿಗಳು ಮುಂದಿನ ಸಿನಿಮಾದಲ್ಲೂ ಇರಲಿವೆ ಎಂದು ಪ್ರಧಾನಿ ಆಡಿದ್ದಾರೆ ಎನ್ನಲಾದ ಮಾತುಗಳು ಕೂಡ ಮಹತ್ವ ಪಡೆದುಕೊಂಡಿವೆ. ಅವರ ಮಾತುಕತೆ ಯಾವುದು? ಏನೆಲ್ಲ ಮಾತನಾಡಿದ್ದಾರೆ ಎನ್ನುವುದು ಮಾತ್ರ ಸಸ್ಪೆನ್ಸ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ಶಿವರಾಜ್ ಕುಮಾರ್ ಮನೆಯಲ್ಲಿ ಸುರ್ಜೆವಾಲ: ಎಲ್ಲವೂ ನಿಗೂಢ ನಿಗೂಢ

    ನಟ ಶಿವರಾಜ್ ಕುಮಾರ್ ಮನೆಯಲ್ಲಿ ಸುರ್ಜೆವಾಲ: ಎಲ್ಲವೂ ನಿಗೂಢ ನಿಗೂಢ

    ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ರಣ್ ದೀಪ್ ಸಿಂಗ್ ಸುರ್ಜೆವಾಲ (Randeep Singh Surjewala) ಇಂದು ಬೆಳಗ್ಗೆ ನಟ ಶಿವರಾಜ್ ಕುಮಾರ್ (Shivraj Kumar) ಮನೆಗೆ ಭೇಟಿ ನೀಡಿದ್ದಾರೆ. ಈ ಭೇಟಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಗೀತಾ (Geetha) ಶಿವರಾಜ್ ಕುಮಾರ್ ಸಹೋದರ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರನ್ನು ಸಮಾಧಾನ ಪಡಿಸುವಂತೆ ಮನವಿ ಮಾಡುವುದಕ್ಕಾಗಿ ಸರ್ಜೆವಾಲ ಬಂದಿದ್ದರು ಎಂದು ಹೇಳಲಾಗುತ್ತಿದೆ.

    ಮಧು ಬಂಗಾರಪ್ಪ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆಯೇ ‘ತಮ್ಮ ಸಹೋದರ ಈ ಬಾರಿ ಮಂತ್ರಿಯಾಗಲಿದ್ದಾರೆ’ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ‘ಮಧು ಈ ಸಲ ಗ್ಯಾರಂಟಿ ಮಂತ್ರಿಯಾಗಲಿದ್ದಾರೆ’ ಎಂದು ಭವಿಷ್ಯ ನುಡಿದಿದ್ದರು. ಆದರೆ, ಕಾಂಗ್ರೆಸ್ ಸರಕಾರ ಮೊದಲ ಹಂತದ ಮಂತ್ರಿಗಳ ಪಟ್ಟಿಯಲ್ಲಿ ಮಧು ಬಂಗಾರಪ್ಪ ಹೆಸರನ್ನು ಸೇರಿಸದೇ ಭವಿಷ್ಯವನ್ನು ಸುಳ್ಳಾಗಿಸಿತ್ತು. ಹಾಗಾಗಿಯೇ ಸಿಎಂ, ಡಿಸಿಎಂ ಪ್ರಮಾಣ ವಚನ ವೇಳೆ ಮಧು ಗೈರಾಗಿದ್ದರು. ಇದನ್ನೂ ಓದಿ:‘ಯಶ್ 19’ ಸಿನಿಮಾದ ಫೋಟೋ ಲೀಕ್? ರಾಕಿ ಭಾಯ್ ನಯಾ ಲುಕ್

    ಒಂದು ಕಡೆ ಮಧು ಬಂಗಾರಪ್ಪ (Madhu Bangarappa) ಅವರನ್ನು ಸಮಾಧಾನಿಸಲು ಗೀತಾ ಅವರಿಗೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದ್ದರೆ, ಮತ್ತೊಂದು ಕಡೆ ಪ್ರಚಾರಕ್ಕೆ ಬಂದಿದ್ದ ಶಿವರಾಜ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಸುರ್ಜೆವಾಲ ಬಂದಿದ್ದರು ಎಂದು ಹೇಳಲಾಗುತ್ತಿದೆ. ಶಿವರಾಜ್ ಕುಮಾರ್ ಹಲವು ಕ್ಷೇತ್ರಗಳ ಪ್ರಚಾರದಲ್ಲಿ ಭಾಗಿಯಾಗಿದ್ದರು. ಜಗದೀಶ್ ಶೆಟ್ಟರ ಹೊರತು ಪಡಿಸಿ ಶಿವಣ್ಣ ಹೋದ ಕಡೆಯಲ್ಲ ಕಾಂಗ್ರೆಸ್ ಗೆದ್ದಿದೆ. ಹಾಗಾಗಿ ಧನ್ಯವಾದಗಳನ್ನು ತಿಳಿಸಲು ಶಿವಣ್ಣ ಮನೆಗೆ ಸುರ್ಜೆವಾಲ ಬಂದಿದ್ದರು ಎಂಬ ಮಾಹಿತಿಯೂ ಇದೆ.

    ಇಷ್ಟೆಲ್ಲ ಊಹಾಪೋಹಗಳು ಹರಿದಾಡುತ್ತಿದ್ದರೂ, ಭೇಟಿಯ ವಿಚಾರವನ್ನೂ ನಿಗೂಢವಾಗಿ ಇಡಲಾಗಿದೆ. ಸುರ್ಜೆವಾಲ ಬಂದಿದ್ದ ಕಾರಣವನ್ನು ಶಿವಣ್ಣ ಆಗಲಿ ಅಥವಾ ಕಾಂಗ್ರೆಸ್ ಪಕ್ಷವಾಗಲಿ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಈ ಭೇಟಿ ರಹಸ್ಯವಾಗಿ ಉಳಿದುಕೊಂಡಿದೆ.

  • ಮಾಜಿ ಪತ್ನಿಯೊಂದಿಗೆ ಕಾಶ್ಮೀರದ ಗವರ್ನರ್ ಭೇಟಿಯಾದ ಅಮಿರ್ ಖಾನ್

    ಮಾಜಿ ಪತ್ನಿಯೊಂದಿಗೆ ಕಾಶ್ಮೀರದ ಗವರ್ನರ್ ಭೇಟಿಯಾದ ಅಮಿರ್ ಖಾನ್

    ಶ್ರೀನಗರ: ಬಾಲಿವುಡ್ ಸೂಪರ್ ಸ್ಟಾರ್ ಅಮಿರ್ ಖಾನ್ ಹಾಗೂ ಮಾಜಿ ಪತ್ನಿ ಕಿರಣ್ ರಾವ್ ನಿನ್ನೆ ಜಮ್ಮು- ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರನ್ನ  ಭೇಟಿಯಾಗುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಕೇಂದ್ರಾಡಳಿತ ಪ್ರದೇಶವನ್ನು ನೆಚ್ಚಿನ ಸಿನಿಮಾ ತಾಣವನ್ನಾಗಿಸುವ ಸಂಬಂಧ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದಿರುವ ಲೆಫ್ಟಿನೆಂಟ್ ಗವರ್ನರ್ ಗವರ್ನರ್ ಫಿಲ್ಮ್ ಆ್ಯಕ್ಟರ್ ಅಮಿರ್ ಖಾನ್ ಮತ್ತು ಕಿರಣ್ ರಾವ್ ಅವರು ಭೇಟಿಯಾದರು. ಈ ವೇಳೆ ಜಮ್ಮು- ಕಾಶ್ಮೀರದಲ್ಲಿ ಚಿತ್ರೀಕರಣಕ್ಕೆ ನೀಡಲಾದ ಹೊಸ ಪಾಲಿಸಿ ಬಗ್ಗೆ ಮಾತನಾಡಿದರು. ಶೀಘ್ರದಲ್ಲೇ ಹೊಸ ಪಾಲಿಸಿಯನ್ನು ಬಿಡುಗಡೆ ಮಾಡಲಾಗುವುದು. ಬಾಲಿವುಡ್‍ನಲ್ಲಿ ಮತ್ತೆ ಜಮ್ಮು- ಕಾಶ್ಮೀರವನ್ನಾ ಉತ್ತಮ ತಾಣನ್ನಾಗಿಸುವ ಸಂಬಧ ಚರ್ಚೆ ಮಾಡಲಾಯಿತ್ತು ಎಂದಿದ್ದಾರೆ.ಇದನ್ನೂ ಓದಿ: ಫಸ್ಟ್ ನೈಟ್ ದಿನ ವಧು ಟೆರೇಸ್ ಹಾರಿ ಎಸ್ಕೇಪ್

    ಅಮೀರ್ ಖಾನ್ ಅವರು ಲಾಲ್ ಸಿಂಗ್ ಚಡ್ಡಾ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. 15 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಅಮಿರ್ ಖಾನ್ ಮತ್ತು ಕಿರಣ್ ರಾವ್ ಅವರು ಇತ್ತೀಚೆಗಷ್ಟೇ ವಿಚ್ಛೇದನವನ್ನು ಪಡೆದುಕೊಂಡು ದೂರವಾಗಿದ್ದಾರೆ. ಕೇವಲ ದಾಂಪತ್ಯ ಜೀವನಕ್ಕೆ ಮಾತ್ರ ವಿಚ್ಛೆದನ ಕೊಟ್ಟಿದ್ದು, ತಾವು ಸ್ನೇಹಿತರಾಗಿಯೇ ಮುಂದುವರಿಯುತ್ತೇವೆ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ. ಅದರಂತೆ ಇಬ್ಬರು ಸಿನಿಮಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

  • 75 ವರ್ಷದ ಹಿರಿಯ ಅಭಿಮಾನಿಯನ್ನು ಭೇಟಿಯಾಗಿ ಭಾವುಕರಾದ ಅಪ್ಪು

    75 ವರ್ಷದ ಹಿರಿಯ ಅಭಿಮಾನಿಯನ್ನು ಭೇಟಿಯಾಗಿ ಭಾವುಕರಾದ ಅಪ್ಪು

    ಕಾರವಾರ: ರಾಮನಿಗಾಗಿ ಕಾದ ಶಬರಿಯಂತೆ 12 ವರ್ಷದಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿಯಾಗಬೇಕು ಎಂದು ಕಾಯುತ್ತಿದ್ದ ವೃದ್ಧೆಯನ್ನು ಪವರ್ ಸ್ಟಾರ್ ಭೇಟಿ ಮಾಡಿದ್ದಾರೆ.

    ಜೋಯಿಡಾದ 75 ವರ್ಷದ ವೃದ್ಧೆ ಕರಿಯವ್ವ ಬಾಳೆಗೌಡ ನಾಯ್ಕ ಹಾಗೂ ಆಕೆಯ ಪತಿ ಬಾಳೆಗೌಡ ನಾಯ್ಕ ಕಟ್ಟಾ ಡಾ. ರಾಜ್ ಕುಮಾರ್ ಅವರ ಅಭಿಮಾನಿಗಳಾಗಿದ್ದಾರೆ. ಪತಿ ಬಾಳೆಗೌಡ ನಾಯ್ಕ ಗೋಕಾಕ್ ಚಳುವಳಿಯಲ್ಲಿ ರಾಜ್ ಕುಮಾರ್ ಅವರ ಜೊತೆಗೆ ಹೋರಾಟ ಮಾಡಿದ್ದರು. ಬಾಳೆಗೌಡರು ಮನೆಯಲ್ಲಿ ಕವಿರತ್ನ ಕಾಳಿದಾಸ ಸಿನಿಮಾ ನೋಡುವಾಗ ಹೃದಯಾಘಾತವಾಗಿ ಮೃತಪಟ್ಟಿದ್ದರು.

    ಹೀಗಾಗಿ ಈ ವಿಷಯವನ್ನು ರಾಜ್ ಕುಟುಂಬದವರಿಗೆ ತಿಳಿಸಬೇಕು ತಮ್ಮ ಅಭಿಮಾನ ವ್ಯಕ್ತಪಡಿಸಬೇಕು ಎಂಬ ಹಂಬಲ ಕರಿಯವ್ವ ಅವರಿಗೆ ಇತ್ತು. ಆದರೆ ಆ ಕಾಲ ಕೂಡಿಬಂದಿರಲಿಲ್ಲ. 12 ವರ್ಷದ ನಂತರ ಇಂದು ಜೋಯಿಡಾದಲ್ಲಿ ಸಿನಿಮಾ ಶೂಟಿಂಗ್ ನಿಮಿತ್ತ ಆಗಮಿಸಿದ್ದ ಪುನೀತ್ ರಾಜ್‍ಕುಮಾರ್ ಅವರನ್ನು ನೋಡುವ ತವಕದಲ್ಲಿ ಕರಿಯವ್ವ ಶೂಟಿಂಗ್ ಸೆಟ್‍ಗೆ ಕೂಡ ಹೋಗಿದ್ದರು. ಆದರೆ ಪೊಲೀಸರು ಭೇಟಿಗೆ ಅವಕಾಶ ನೀಡರಲಿಲ್ಲ.

    ಇದರಿಂದ ಬೇಸತ್ತ ಕರಿಯವ್ವ ಪುನೀತ್ ಅವರನ್ನು ನೋಡಲು ಅವಕಾಶ ನೀಡದೇ ಇದ್ದರೆ, ನಾನು ಸಾಯುತ್ತೇನೆ ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. ಈ ವಿಚಾರ ಪುನೀತ್ ರಾಜ್‍ಕುಮಾರ್ ಅವರ ಕಿವಿಗೆ ಬಿದ್ದಿದೆ. ಆಗ ತಕ್ಷಣ ಕರಿಯವ್ವ ಮತ್ತು ಅವರನ್ನು ಕುಟುಂಬವನ್ನು ಪುನೀತ್ ಅವರು ತಮ್ಮ ಬಳಿ ಕರೆಸಿಕೊಂಡು ಮಾತನಾಡಿದ್ದಾರೆ. ಜೊತೆಗೆ ಕರಿಯವ್ವ ಅವರ ಅಭಿಮಾನ ಕಂಡು ಭಾವುಕರಾಗಿದ್ದಾರೆ.

  • ಕೌರವನ ಜೊತೆ ಕಾಲ ಕಳೆದ ಡಿ ಬಾಸ್

    ಕೌರವನ ಜೊತೆ ಕಾಲ ಕಳೆದ ಡಿ ಬಾಸ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟ, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿ ಕಾಲ ಕಳೆದಿದ್ದಾರೆ. ಸಚಿವರೊಂದಿಗೆ ಕಾಲ ಕಳೆದಿರು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

    ಬಿ.ಸಿ.ಪಾಟೀಲ್ ಅವರ ಅಧೀಕೃತ ನಿವಾಸಕ್ಕೆ ಭೇಟಿ ನೀಡಿದ್ದ ಡಿ ಬಾಸ್ ಸ್ವಲ್ಪ ಹೊತ್ತು ಹರಟೆ ಹೊಡೆದು ಕಾಲ ಕಳೆದಿದ್ದಾರೆ. ಈ ವೇಳೆ ಬಿ.ಸಿ.ಪಾಟೀಲ್ ಮಾತ್ರವಲ್ಲದೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಕಾಣಿಸಿಕೊಂಡಿದ್ದು, ಇಬ್ಬರು ಸಚಿವರ ಜೊತೆ ದರ್ಶನ್ ಮಾತುಕತೆ ನಡೆಸಿದ್ದಾರೆ. ಯಜಮಾನನ ಈ ಭೇಟಿ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ.

    ದರ್ಶನ್ ಇಬ್ಬರು ಸಚಿವರ ಭೇಟಿ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ. ಆದರೆ ಭೇಟಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ರಾಜರಾಜೇಶ್ವರಿ ನಗರದ ಉಪ ಚುನಾವಣೆಯ ಪ್ರಚಾರದ ವೇಳೆ ದರ್ಶನ್ ಹಾಗೂ ಬಿ.ಸಿ.ಪಾಟೀಲ್ ಒಟ್ಟಿಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡಿದ್ದರು. ಇಬ್ಬರು ನಟರಾಗಿರುವುದರಿಂದ ಪ್ರಚಾರದ ವೇಳೆ ಸಹಜವಾಗಿಯೇ ಬೆರೆತಿದ್ದರು.

    ಈ ಹಿಂದೆ ಸಹ ದರ್ಶನ್ ಹಲವು ಬಾರಿ ಬಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿದ್ದರು. ಆದರೆ ಆಗ ಹೆಚ್ಚು ಚರ್ಚೆಯಾಗಿರಲಿಲ್ಲ. ಇದೀಗ ಇಬ್ಬರು ಸಚಿವರನ್ನು ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

    ಇನ್ನೂ ಅಚ್ಚರಿ ಎಂದರೆ ಬಿ.ಸಿ.ಪಾಟೀಲ್ ಹಾಗೂ ದರ್ಶನ್ ಅವರಿಗೆ ದುರ್ಯೋಧನ ಪಾತ್ರ ಅಚ್ಚುಮೆಚ್ಚು. ಬಿ.ಸಿ.ಪಾಟೀಲ್ ಸಹ ನಾಟಕ ಹಾಗೂ ಸಿನಿಮಾಗಳಲ್ಲಿ ಧುರ್ಯೋಧನನ ಪಾತ್ರದಲ್ಲಿ ಘರ್ಜಿಸಿದ್ದಾರೆ. ಅದೇ ರೀತಿ ದರ್ಶನ್ ಸಹ ಕುರುಕ್ಷೇತ್ರ ಸಿನಿಮಾದಲ್ಲಿ ದುಯೋಧನನ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು. ಹೀಗೆ ಇಬ್ಬರ ನಟರ ಮಧ್ಯೆ ಪಾತ್ರಗಳ ಸಾಮ್ಯತೆ ಇದೆ. ಹೀಗಾಗಿ ಎಲ್ಲೆಯೇ ಭೇಟಿಯಾದರೂ, ಇಬ್ಬರೂ ತುಂಬಾ ಕ್ಲೋಸ್ ಆಗಿ ಬೆರೆಯುತ್ತಾರೆ.

  • ಸುಳ್ವಾಡಿ ವಿಷ ಪ್ರಸಾದ ದುರಂತ – ಸಾಮೂಹಿಕ ಶ್ರದ್ಧಾಂಜಲಿ ಸಭೆ

    ಸುಳ್ವಾಡಿ ವಿಷ ಪ್ರಸಾದ ದುರಂತ – ಸಾಮೂಹಿಕ ಶ್ರದ್ಧಾಂಜಲಿ ಸಭೆ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಯನ್ನು ಕೋರುವ ಸಲುವಾಗಿ ಸಾಮೂಹಿಕ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

    ಏನಿದು ಪ್ರಕರಣ?
    ಸುಳ್ವಾಡಿ ಮಾರಮ್ಮನ ವಿಷ ದುರಂತ ಪ್ರಕರಣ ನಡೆದು ಶನಿವಾರಕ್ಕೆ ಒಂದು ವರ್ಷವಾಗಿದೆ. ದೇವಾಲಯದ ಆಡಳಿತ ಚುಕ್ಕಾಣಿಗೋಸ್ಕರ ಕಿಚ್ ಗುತ್ ಮಾರಮ್ಮನ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿದ ಪರಿಣಾಮ 17 ಜನ ಸಾವನ್ನಪ್ಪಿದ್ದು, 120 ಮಂದಿ ಅಸ್ವಸ್ಥರಾಗಿದ್ದರು. ಈ ಪ್ರಕರಣ ಸಂಬಂಧ ಇಮ್ಮಡಿ ಮಹದೇವಸ್ವಾಮಿ, ದೊಡ್ಡಯ್ಯ, ಅಂಬಿಕಾ, ಮಾದೇಶ್ ಎಂಬ ಆರೋಪಿಗಳ ಬಂಧನವಾಗಿತ್ತು.

    ಕಳೆದ ಬಾರಿಯೂ ಸಹ ಮೃತಪಟ್ಟ ಎಲ್ಲಾ ಕುಟುಂಬಸ್ಥರು ಸೇರಿ ಸುಳ್ವಾಡಿ ಗ್ರಾಮದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ್ದರು. ಸಾವನ್ನಪ್ಪಿದ ಎಲ್ಲರ ಆತ್ಮಕ್ಕೆ ಶಾಂತಿ ಕೋರಿದರು. ಅದೇ ರೀತಿ ಈ ಬಾರಿಯೂ ಸಹ ಸುಳ್ವಾಡಿ ದೇವಾಲಯದ ಮುಂಭಾಗ ವಿಷ ಪ್ರಸಾದ ತಿಂದು ಮಡಿದವರ ಆತ್ಮಕ್ಕೆ ಶಾಂತಿ ಕೋರಲು ಸಾಮೂಹಿಕ ಶ್ರದ್ಧಾಂಜಲಿ ನಡೆಸಲಾಯಿತು. ಈ ಸಭೆ ನಡೆಯುವಾಗ ಕೆಲವರು ತಮ್ಮ ಮನೆಯವರನ್ನು ನೆನೆದು ಕಣ್ಣೀರು ಹಾಕಿದರು.

    ಈ ಸಭೆಯಲ್ಲಿ ಸ್ಥಳೀಯ ಶಾಸಕ ನರೇಂದ್ರ, ಮಾಜಿ ಶಾಸಕಿ ಪರಿಮಳಾ ನಾಗಪ್ಪ ಸೇರಿದಂತೆ ಇತರರು ಸೇರಿದ್ದು, ಮೃತಪಟ್ಟ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

  • ಮಂಗಳವಾರ ಮೋದಿ ಭೇಟಿಯಾಗಲಿದ್ದಾರೆ ಮಮತಾ

    ಮಂಗಳವಾರ ಮೋದಿ ಭೇಟಿಯಾಗಲಿದ್ದಾರೆ ಮಮತಾ

    ನವದೆಹಲಿ: ಸಮಯ ಸಿಕ್ಕಾಗಲೆಲ್ಲ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮಮತಾ ಬ್ಯಾನರ್ಜಿಯವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದು, ಭಾರೀ ಕುತೂಹಲ ಕೆರಳಿಸಿದೆ. ಈ ಮೂಲಕ ಲೋಕಸಭಾ ಚುನಾವಣೆ ನಂತರ ಮೋದಿ ಹಾಗೂ ದೀದಿಯವರ ಮೊದಲ ಭೇಟಿ ಇದಾಗಿದೆ.

    ಮೂಲಗಳ ಪ್ರಕಾರ ನಾಳೆ ದೆಹಲಿಗೆ ತೆರಳಲಿರುವ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ ಹೆಸರು ಬದಲಾವಣೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಇಂಗ್ಲಿಷಿನ ‘ವೆಸ್ಟ್’ ತೆಗೆದು ಬಂಗಾಳ ಎಂದು ಬದಲಿಸಲು ಬಯಸಿದೆ. ಈ ಹಿಂದೆ ಬಜೆಟ್ ಅಧಿವೇಶನದ ವೇಳೆ ಸುದೀಪ್ ಬಂದೋಪಾಧ್ಯಾಯ ನೇತೃತ್ವದ ಪಕ್ಷದ ನಿಯೋಗವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಈ ಬೇಡಿಕೆಯನ್ನು ಇಟ್ಟಿತ್ತು. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.

    ಅಜೆಂಡಾದಲ್ಲಿ ಡನ್‍ಲಾಪ್ ಕಾರ್ಖಾನೆಯನ್ನು ರಾಜ್ಯದ ಸುಪರ್ದಿಗೆ ಪಡೆಯುವುದು ಸಹ ಸೇರಿದೆ. ಈ ಕುರಿತು ರಾಷ್ಟ್ರಪತಿಗಳ ಅಂಕಿತ ಹಾಕುವುದನ್ನು ನಿರೀಕ್ಷಿಸಲಾಗುತ್ತಿದೆ. ಅಲ್ಲದೆ, ಮನ್ರೇಗಾ(ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಇದರ ಧನಸಹಾಯದ ಕುರಿತು ಸಹ ಚರ್ಚಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಪ್ರಧಾನಿ ನರೇಂದ್ರ ಮೋದಿಯವರನ್ನು ಸದಾ ಟೀಕಿಸುವ ಮಮತಾ ಬ್ಯಾನರ್ಜಿ ರಾಜ್ಯದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವುದು ಸೇರಿದಂತೆ ಅನೇಕ ವಿಷಯಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಟಿಎಂಸಿ ಮತ್ತು ಎಡ ಪಕ್ಷಗಳಿಗೆ ಶಾಕ್ ನೀಡಿತ್ತು.

    ಇತ್ತೀಚೆಗೆ ಪ್ರಧಾನಿ ಮೋದಿ ಚಂದ್ರಯಾನದ-2ನ ವಿಕ್ರಂ ಲ್ಯಾಂಡರ್ ಚಂದ್ರನಲ್ಲಿ ಲ್ಯಾಂಡ್ ಅಗುವುದನ್ನು ವೀಕ್ಷಿಸಲು ಬೆಂಗಳೂರಿಗೆ ಆಗಮಿಸಿದಾಗಲೂ ಟೀಕಿಸಿದ್ದರು. ಈ ಹಿಂದೆ ಯಾವುದೇ ಸರ್ಕಾರ ಚಂದ್ರಯಾನದಂತಹ ಪ್ರಯತ್ನ ಮಾಡಿಲ್ಲವೇ ಬಿಜೆಪಿ ಸರ್ಕಾರ ಮಾತ್ರ ಮೊದಲ ಬಾರಿಗೆ ಮಾಡುತ್ತಿದೆಯೇ ಎಂದು ಹರಿಹಾಯ್ದಿದ್ದರು.

    ಕಳೆದ ವರ್ಷ ಮಾರ್ಚ್‍ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ಈ ವೇಳೆ ರಾಜ್ಯ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದರು.