Tag: meerut

  • ‌ʻಬೆತ್ತಲೆಯಾಗಿ ಬರ್ತಾರೆ, ಮಹಿಳೆಯರನ್ನ ಹೊತ್ತೊಯ್ತಾರೆʼ – ಮೀರತ್‌ನಲ್ಲಿ ನಡುಕ ಹುಟ್ಟಿಸಿದ ʻನಗ್ನ ಗ್ಯಾಂಗ್‌ʼ

    ‌ʻಬೆತ್ತಲೆಯಾಗಿ ಬರ್ತಾರೆ, ಮಹಿಳೆಯರನ್ನ ಹೊತ್ತೊಯ್ತಾರೆʼ – ಮೀರತ್‌ನಲ್ಲಿ ನಡುಕ ಹುಟ್ಟಿಸಿದ ʻನಗ್ನ ಗ್ಯಾಂಗ್‌ʼ

    – ರಕ್ಷಣೆಗೆ ಡ್ರೋನ್‌, ಸಿಸಿಟಿವಿ ಕಣ್ಗಾವಲು

    ಲಕ್ನೋ: ʻದಂಡುಪಾಳ್ಯʼ ಸಿನಿಮಾವನ್ನ ನೀವು ನೋಡಿರಬಹುದು, ಈ ಸಿನಿಮಾದಲ್ಲಿ (Cinema) ಒಂಟಿ ಮನೆಗಳನ್ನ ಟಾರ್ಗೆಟ್‌ ಮಾಡುವ ಗ್ಯಾಂಗ್‌ ಮಹಿಳೆಯರನ್ನ ಅತ್ಯಾಚಾರಗೈದು ಭೀಕರವಾಗಿ ಕೊಲೆ ಮಾಡಿ ಎಸ್ಕೇಪ್‌ ಆಗ್ತಿತ್ತು. ಇದೀಗ ಅದಕ್ಕಿಂತಲೂ ಭಯಾನಕವಾದ ಗ್ಯಾಂಗ್‌ವೊಂದು ಉತ್ತರ ಪ್ರದೇಶದ ಮೀರತ್‌ನಲ್ಲಿ (UP’s Meerut) ಹುಟ್ಟಿಕೊಂಡಿದೆ.

    ಹೌದು.. ಇದಕ್ಕೆ ʻನಗ್ನ ಗ್ಯಾಂಗ್‌ ಅಥವಾ ಬೆತ್ತಲೆ ಗ್ಯಾಂಗ್‌ʼ (Nude Gang) ಅಂತ ಕರೆಯಲಾಗ್ತಿದೆ. ಬೆತ್ತಲೆಯಾಗಿ ಬರುವ ಈ ಗ್ಯಾಂಗ್‌ ಸದಸ್ಯರು ಮಹಿಳೆಯರನ್ನ ಹೊತ್ತೊಯ್ಯುತ್ತಿದ್ದಾರೆ. ಮೀರತ್‌ನಲ್ಲಿ ಇತ್ತೀಚೆಗೆ ಇಂತಹ ನಾಲ್ಕು ಪ್ರಕರಣ ವರದಿಯಾಗಿದ್ದು, ದೌರಾಲಾ ಗ್ರಾಮದ ಮಹಿಳೆಯರಲ್ಲಿ ನಡುಕ ಹುಟ್ಟಿಸಿದೆ. ರಾತ್ರಿ ವೇಳೆ ಮಹಿಳೆಯರು ಮನೆಯಿಂದಾಚೆ ಬರೋದಕ್ಕೆ ಭಯ ಪಡುವಂತಾಗಿದೆ. ವಿಷಯದ ಗಂಭೀರತೆ ಪರಿಗಣಿಸಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗ್ಯಾಂಗ್‌ ಪತ್ತೆಹಚ್ಚಲು ಡ್ರೋನ್‌, ಸಿಸಿಟಿವಿಗಳನ್ನು (Drone And CCTV) ಕಣ್ಗಾವಲಿಗೆ ಇರಿಸಲಾಗಿದೆ.

    ಈ ಕುರಿತು ದೌರಾಲಾ ಗ್ರಾಮದ ಮುಖ್ಯಸ್ಥ ರಾಜೇಂದ್ರ ಕುಮಾರ್ ಮಾತನಾಡಿ, ಕಳೆದ ಕೆಲ ದಿನಗಳಲ್ಲಿ ಮಹಿಳೆಯರನ್ನು ಹೊತ್ತೊಯ್ದ ನಾಲ್ಕು ಘಟನೆಗಳು ವರದಿಯಾಗಿವೆ. ಇದಕ್ಕೂ ಹಿಂದಿನ ಕೆಲ ಘಟನೆಗಳು ಜನರ ಭಯದಿಂದ ಬೆಳಕಿಗೆ ಬಂದಿಲ್ಲ. ಈ ಮೊದಲು ಗ್ರಾಮಸ್ಥರು ಇಲ್ಲಿನ ಘಟನೆಯನ್ನ ಗಂಭೀರವಾಗಿ ಪರಿಗಣಿಸಲಿಲ್ಲ. ಆದ್ರೆ ಈಗ ಪರಿಸ್ಥಿತಿ ಕೈಮೀರಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಈ ಗ್ಯಾಂಗ್‌ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಹೊತ್ತೊಯ್ಯುತ್ತಿದ್ದಾರೆ. ಪೊಲೀಸರು ಕೂಡಲೇ ಗ್ಯಾಂಗ್‌ಅನ್ನು ಪತ್ತೆಹಚ್ಚಬೇಕೆಂದು ಆಗ್ರಹಿಸಿದ್ದಾರೆ.

    ಸಿಸಿಟಿವಿ, ಡ್ರೋನ್‌ ಕಣ್ಗಾವಲು
    ಪ್ರಕರಣದ ಗಂಭೀರತೆ ಪರಿಗಣಿಸಿದ ಬಳಿಕ ಪೊಲೀಸರು ತನಿಖೆಗಿಳಿದಿದ್ದಾರೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಲವು ಗಂಟೆಗಳ ಕಾಲ ಡ್ರೋನ್‌ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ಜೊತೆಗೆ ಹತ್ತಿರದ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗಿದ್ದು, ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

    ಇನ್ನೂ ಈ ಪ್ರದೇಶದಲ್ಲಿ ಮಹಿಳಾ ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದ್ದು, ಶಂಕಿತರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಸ್ಥಳ ಪರಿಶೀಲನೆ ನಡೆಸಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಟಾಡಾ ತಿಳಿಸಿದ್ದಾರೆ.

  • Video Viral | ಯೋಧನನ್ನ ಕಂಬಕ್ಕೆ ಕಟ್ಟಿ ಟೋಲ್ ಪ್ಲಾಜಾ ಸಿಬ್ಬಂದಿಯಿಂದ ಥಳಿತ; ನಾಲ್ವರು ಅರೆಸ್ಟ್‌

    Video Viral | ಯೋಧನನ್ನ ಕಂಬಕ್ಕೆ ಕಟ್ಟಿ ಟೋಲ್ ಪ್ಲಾಜಾ ಸಿಬ್ಬಂದಿಯಿಂದ ಥಳಿತ; ನಾಲ್ವರು ಅರೆಸ್ಟ್‌

    ಲಕ್ನೋ: ದೇಶದಲ್ಲಿ ಇತ್ತೀಚೆಗೆ ಪುಂಡರ ಅಟ್ಟಹಾಸ ಹೆಚ್ಚಾಗುತ್ತಿದ್ದು, ದೇಶ ಕಾಯುವ ಯೋಧರಿಗೂ ಬೆಲೆ ಕೊಡದ ಸ್ಥಿತಿ ನಿರ್ಮಾಣವಾಗಿದೆ. ಕರ್ತವ್ಯಕ್ಕೆ ಮರಳುತ್ತಿದ್ದ ಯೋಧನನ್ನ ಟೋಲ್‌ ಪ್ಲಾಜಾ ಸಿಬ್ಬಂದಿ (Toll Plaza Workers) ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ (Meerut) ನಡೆದಿದೆ.

    ಯೋಧ ಕಪಿಲ್ ಕವಾಡ್ ಹಲ್ಲೆಗೊಳಗಾದವರು. ಯೋಧನ (Army Jawan) ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿರುವ ಅಮಾನವೀಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬಳಿಕ ತನಿಖೆ ನಡೆಸಿದ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ʻಧರ್ಮಸ್ಥಳದ ಮಂಜುನಾಥನನ್ನು ರಕ್ಷಿಸಿʼ – ವಿಧಾನಸೌಧಕ್ಕೆ ಪೋಸ್ಟರ್ ಹಿಡಿದು ಬಂದ ಜೆಡಿಎಸ್ ಶಾಸಕ

    ಏನಿದು ಘಟನೆ?
    ಭಾರತೀಯ ಸೇನೆಯ ರಜಪೂತ ರೆಜಿಮೆಂಟ್‌ನಲ್ಲಿದ್ದ ಕಪಿಲ್‌ ಕವಾಡ್‌, ರಜೆಯ ನಿಮಿತ್ತ ಮನೆಗೆ ತೆರಳಿದ್ದರು. ಶ್ರೀನಗರದಲ್ಲಿರುವ ತಮ್ಮ ಕರ್ತವ್ಯದ ಸ್ಥಳಕ್ಕೆ ಮರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಟೋಲ್ ಬೂತ್‌ನಲ್ಲಿ ಸಿಲುಕಿಕೊಂಡಿದ್ದಾರೆ. ತನ್ನ ವಿಮಾನಕ್ಕೆ ತಡವಾಗುತ್ತಿದೆ ಎಂಬ ಆತಂಕದಿಂದ ಕಪಿಲ್ ಕಾರಿನಿಂದ ಇಳಿದು ಟೋಲ್ ಬೂತ್ ಸಿಬ್ಬಂದಿಯೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ ವಾಗ್ವಾದ ಉಂಟಾಗಿದೆ. ಇದನ್ನೂ ಓದಿ: ಧರ್ಮಾಧಿಕಾರಿಗಳ ವಿರುದ್ಧ ಯಾರೂ ಇಲ್ಲ: ರಾಮಲಿಂಗಾರೆಡ್ಡಿ

    ಟೋಲ್ ಪ್ಲಾಜಾದ ಐವರು ಸಿಬ್ಬಂದಿ ಕಪಿಲ್ ಮತ್ತು ಅವರ ಸೋದರ ಸಂಬಂಧಿಯನ್ನ ಥಳಿಸಿದ್ದಾರೆ. ಕಪಿಲ್‌ಗೆ ದೊಣ್ಣೆಯಿಂದ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲವು ದಾಳಿಕೋರರು ಕಪಿಲ್ ಅವರನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ವಿಡಿಯೋ ವೈರಲ್‌ ಆಗ್ತಿದ್ದಂತೆ ಕೇಸ್‌ ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

    ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಎಸ್ಪಿ ರಾಕೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ: ಸಿ.ಟಿ ರವಿ

  • ಹುಡ್ಗಿ‌ ತೋರಿಸಿ ಆಕೆಯ ಅಮ್ಮನ ಜೊತೆ ಮದ್ವೆ; ಮುಖ ನೋಡಿ ಕಕ್ಕಾಬಿಕ್ಕಿಯಾದ ಮದುಮಗ

    ಹುಡ್ಗಿ‌ ತೋರಿಸಿ ಆಕೆಯ ಅಮ್ಮನ ಜೊತೆ ಮದ್ವೆ; ಮುಖ ನೋಡಿ ಕಕ್ಕಾಬಿಕ್ಕಿಯಾದ ಮದುಮಗ

    ಲಕ್ನೋ: ʻನೂರು ಸುಳ್ಳು ಹೇಳಿ ಒಂದು ಮದ್ವೆ ಮಾಡುʼ ಎಂಬ ಗಾದೆ ಮಾತನ್ನ ನಿಜ ಮಾಡಲೇಬೇಕು ಎನ್ನುವಂತ ಘಟನೆಯೊಂದು ಉತ್ತರಪ್ರದೇಶದ ಮೀರತ್‌ನಲ್ಲಿ (Meerut) ನಡೆದಿದೆ.

    ಮೊಹಮ್ಮದ್ ಅಜೀಂ ಎಂಬ 22 ವರ್ಷದ ಬ್ರಹ್ಮಪುರಿ ನಿವಾಸಿ ಯುವಕನ ಮದುವೆಯನ್ನು ಅವನ ಸಹೋದರ ನದೀಂ ಮತ್ತು ಅತ್ತಿಗೆ ಶೈದಾ, ಶಾಮ್ಲ ಜಿಲ್ಲೆಯ ಮನ್ತಾಶಾ ಎಂಬ ಯುವತಿಯೊಂದಿಗೆ ನಿಗದಿಪಡಿಸಿದ್ದರು. ಅದರಂತೆ ಮಾ.31ರಂದು ಮದುವೆಯೂ (Marriage) ನಡೆಯಿತು. ಇದನ್ನೂ ಓದಿ: Uttar Pradesh | ಅಳಿಯನ ತಂದೆಯೊಂದಿಗೆ 4 ಮಕ್ಕಳ ತಾಯಿ ಪರಾರಿ

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ಈ ವೇಳೆ, ಸಂಪ್ರಾದಾಯದಂತೆ ಮೌಲ್ವಿ ಅವರು ಹುಡುಗಿಯ ಹೆಸರನ್ನು ತಾಹಿರಾ ಎಂದು ಹೇಳಿದಾಗ ಅಜೀಂ ಕಳವಳಗೊಂಡಿದ್ದಾನೆ. ಬಳಿಕ ಆಕೆಯ ಮುಸುಕು ತೆಗೆದಾಗ 21 ವರ್ಷದ ಯುವತಿಯ ಬದಲು, ವಧುವಿನ ಉಡುಗೆಯಲ್ಲಿದ್ದ ಆಕೆಯ 45 ವರ್ಷದ ವಿದವಾ ತಾಯಿಯ ದರ್ಶನವಾಗಿದೆ. ಹೀಗೆ ತಾನು ವರಿಸಿದ್ದು ವಧುವಿನ ತಾಯಿಯನ್ನು ಎಂದು ತಿಳಿದು ಮದುಮಗ ಕಕ್ಕಾಬಿಕ್ಕಿಯಾಗಿದ್ದಾನೆ. ಇದನ್ನೂ ಓದಿ: ರಾಹುಲ್ಲನನ್ನ ಬಿಟ್ಟು ಬದುಕಲ್ಲ – ಭಾವಿ ಅಳಿಯನೊಂದಿಗೆ ಒಟ್ಟಿಗೆ ಜೀವನ ನಡೆಸಲು ಮುಂದಾದ ಮಹಿಳೆ

    ತನಗಾದ ವಂಚನೆಯ ವಿರುದ್ಧ ಅಜೀಂ ಪ್ರತಿಭಟಿಸಿದಾಗ, ಆತನ ಮೇಲೆ ಸುಳ್ಳು ಅತ್ಯಾಚಾರದ ಆರೋಪ ಹೊರಿಸುವುದಾಗಿ ನದೀಂ ಮತ್ತು ಶೈದಾ ಬೆದರಿಸಿದ್ದಾರೆ. ಆದರೂ ಅಜೀಂ ಪೊಲೀಸ್‌ ಠಾಣೆಯಲ್ಲಿ ದೂರುದಾಖಲಿಸಿದ್ದು, ವಧುವಿನ ಕುಟುಂಬಕ್ಕೆ 5 ಲಕ್ಷ ರೂ. ಹಣವನ್ನೂ ಕೊಡಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾನೆ.

    ಮದುವೆ ಪ್ರಕರಣದ ಕುರಿತುಮಾತನಾಡಿದ ಬ್ರಹ್ಮಪುರಿಯ ಸಿಇಒ ಸೌಮ್ಯಾ ಆಸ್ಥಾನಾ, ವಧು-ವರರ ಕುಟುಂಬಗಳು ಇತ್ಯರ್ಥ ಮಾಡಿಕೊಂಡಿದ್ದು, ತಾನು ಕಾನೂನು ಕ್ರಮ ಬಯಸುವುದಿಲ್ಲ ಎಂದು ಹೇಳಿ ಅಜೀಂ ತಾನು ನೀಡಿದ ದೂರನ್ನು ಹಿಂಪಡೆದಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮರಾಠಿ ಜನರ ಹಿತಾಸಕ್ತಿಗಾಗಿ ಭಿನ್ನಾಭಿಪ್ರಾಯ ಬದಿಗಿಡಲು ಸಿದ್ಧ – ಮೈತ್ರಿ ಸುಳಿವು ನೀಡಿದ ಉದ್ಧವ್, ರಾಜ್ ಠಾಕ್ರೆ ಸಹೋದರರು

  • ಮೀರತ್‌ ಮಾದರಿ ಪೀಸ್‌ ಪೀಸ್‌ ಮಾಡಿ ಡ್ರಮ್‌ಗೆ ತುಂಬಿಬಿಡ್ತೀನಿ – ಮಚ್ಚು ಹಿಡಿದು ಗಂಡನಿಗೆ ಎಚ್ಚರಿಕೆ ಕೊಟ್ಟ ʻಮಚ್ಚೇಶ್ವರಿʼ!

    ಮೀರತ್‌ ಮಾದರಿ ಪೀಸ್‌ ಪೀಸ್‌ ಮಾಡಿ ಡ್ರಮ್‌ಗೆ ತುಂಬಿಬಿಡ್ತೀನಿ – ಮಚ್ಚು ಹಿಡಿದು ಗಂಡನಿಗೆ ಎಚ್ಚರಿಕೆ ಕೊಟ್ಟ ʻಮಚ್ಚೇಶ್ವರಿʼ!

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಮೀರತ್‌ನಲ್ಲಿ (Meerut) ನಡೆದ ಭೀಕರ ಹತ್ಯೆಯಂತೆಯೇ, ನಿನ್ನನ್ನು ಕತ್ತರಿಸಿ ಡ್ರಮ್‌ನಲ್ಲಿ ಹಾಕಿಬಿಡ್ತೀನಿ ಎಂದು ಮಹಿಳೆಯೊಬ್ಬಳು ಮಚ್ಚು ಹಿಡಿದು ತನ್ನ ಪತಿಗೆ (Husband) ಬೆದರಿಕೆ ಹಾಕಿದ್ದಾಳೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

    ಗೊಂಡಾದ ಜಲ ನಿಗಮದಲ್ಲಿ ಕೆಲಸ ಮಾಡುತ್ತಿರುವ ಝಾನ್ಸಿ ಮೂಲದ ಜೂನಿಯರ್ ಎಂಜಿನಿಯರ್ (ಜೆಇ) ಧರ್ಮೇಂದ್ರ ಕುಶ್ವಾಹ ಮೇಲೆ ಪತ್ನಿ (Wife) ಮಾಯಾ ಮೌರ್ಯ ಮತ್ತು ಆಕೆಯ ಪ್ರೇಮಿ ನೀರಜ್ ಮೌರ್ಯ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಗಂಡನ ತಲೆ ಕಡಿದ ಶವವನ್ನು ಬೆಡ್ ಬಾಕ್ಸ್‌ನಲ್ಲಿಟ್ಟು ನಿದ್ದೆ ಮಾಡಿದ್ದಳು ಪತ್ನಿ – ಮೀರತ್ ಕೊಲೆ ಪ್ರಕರಣದ ರಹಸ್ಯ ಬಯಲು 

    2016ರಲ್ಲಿ ಕುಶ್ವಾಹ ಅವರು ಬಸ್ತಿ ಜಿಲ್ಲೆಯ ನಿವಾಸಿ ಮಾಯಾ ಮೌರ್ಯ ಅವರನ್ನು ಪ್ರೇಮ ವಿವಾಹವಾಗಿದ್ದರು. ಬಳಿಕ ಕುಶ್ವಾಹ 2022 ರಲ್ಲಿ ಮಾಯಾಳ ಹೆಸರಿನಲ್ಲಿ ಭೂಮಿಯನ್ನು ಖರೀದಿಸಿದ್ದರು. ನಂತರ ಮಾಯಾ ಸಂಬಂಧಿ ನೀರಜ್ ಮೌರ್ಯ ಅವರಿಗೆ ಆ ಜಾಗದಲ್ಲಿ ಮನೆ ನಿರ್ಮಾಣದ ಕೆಲಸವನ್ನು ವಹಿಸಿದ್ದರು. ಇದಾದ ಬಳಿಕ ಮಾಯಾ ಹಾಗೂ ನೀರಜ್‌ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಳು. ಕೋವಿಡ್ -19 ಸಮಯದಲ್ಲಿ ನೀರಜ್ ಪತ್ನಿಯ ಮರಣದ ನಂತರ ಅವರ ಸಂಬಂಧ ಇನ್ನೂ ಹೆಚ್ಚಾಗಿತ್ತು. 2024 ರಂದು ಮಾಯಾ ಮತ್ತು ನೀರಜ್‌ ಖಾಸಗಿ ಕ್ಷಣಗಳನ್ನು ಕುಶ್ವಾಹ ಗಮನಿಸಿ ಗಲಾಟೆ ಮಾಡಿದ್ದರು. ಈ ವೇಳೆ ಅವರ ಮೇಲೆ ಹಲ್ಲೆ ಮಾಡಿ, ಮಾಯಾ ಮನೆ ತೊರೆದಿದ್ದಳು.

    2024ರ ಆಗಸ್ಟ್‌ನಲ್ಲಿ ನೀರಜ್ ಜೊತೆಗೆ ಬಂದಿದ್ದ ಮಾಯಾ ಮನೆಯ ಬೀಗ ಮುರಿದು 15 ಗ್ರಾಂ ಚಿನ್ನದ ಸರ ಮತ್ತು ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಕುಶ್ವಾಹ ಸೆಪ್ಟೆಂಬರ್ 2024ರಲ್ಲಿ ದೂರು ದಾಖಲಿಸಿದ್ದರು. ಇನ್ನೂ, ಇದೇ ತಿಂಗಳ 29ರಂದು ಮಾಯಾ ಮತ್ತು ನೀರಜ್ ತನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಇತ್ತೀಚೆಗೆ ಮೀರತ್‌ನಲ್ಲಿ ನಡೆದ ವ್ಯಕ್ತಿಯ ಕೊಲೆ ಮಾದರಿಯಲ್ಲೇ ನನ್ನನ್ನು ಹತ್ಯೆಗೈದು ಡ್ರಮ್‌ನಲ್ಲಿ ಪ್ಯಾಕ್ ಮಾಡುತ್ತೇನೆ ಎಂದು ಮಾಯಾ ಬೆದರಿಕೆ ಹಾಕಿದ್ದಾಳೆ ಎಂದು ಕುಶ್ವಾಹ ಆರೋಪಿಸಿದ್ದಾರೆ.

    ಇದರ ಬೆನ್ನಲ್ಲೇ ಮಾಯಾ, ತನ್ನ ಪತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕಿರುಕುಳ ನೀಡುತ್ತಿದ್ದಾರೆ ಮತ್ತು ನಾಲ್ಕು ಬಾರಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾಳೆ. ಇದನ್ನೂ ಓದಿ: Exclusive | ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್‌ – ಆಡಿಯೋದಲ್ಲಿ ಬಯಲಾಯ್ತು ಸಂಚಿನ ರಹಸ್ಯ

  • ರಸ್ತೆಯಲ್ಲಿ ನಮಾಜ್ ಮಾಡಿದ್ರೆ ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್ ರದ್ದು: ಮಿರತ್‌ ಪೊಲೀಸರಿಂದ ಎಚ್ಚರಿಕೆ

    ರಸ್ತೆಯಲ್ಲಿ ನಮಾಜ್ ಮಾಡಿದ್ರೆ ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್ ರದ್ದು: ಮಿರತ್‌ ಪೊಲೀಸರಿಂದ ಎಚ್ಚರಿಕೆ

    ಲಕ್ನೋ: ಈದ್-ಉಲ್-ಫಿತರ್ ಮತ್ತು ರಂಜಾನ್‌ನ (Ramzan) ಕೊನೆಯ ಶುಕ್ರವಾರದಂದು ರಸ್ತೆಗಳಲ್ಲಿ ನಮಾಜ್ ಮಾಡಿದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಉತ್ತರ ಪ್ರದೇಶದ (Uttar Pradesh) ಮಿರತ್‌ (Meerut) ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

    ರಸ್ತೆಗಳಲ್ಲಿ ನಮಾಜ್‌ ಮಾಡಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಅಂತಹವರ ಪಾಸ್‌ಪೋರ್ಟ್‌ (Passport) ಹಾಗೂ ಚಾಲನಾ ಪರವಾನಗಿಯನ್ನೂ (Driving Licence) ರದ್ದುಗೊಳಿಸಬಹುದು ಎಂದು ಮೀರತ್ ಪೊಲೀಸ್ ಅಧೀಕ್ಷಕ (ನಗರ) ಆಯುಷ್ ವಿಕ್ರಮ್ ಸಿಂಗ್ ಎಚ್ಚರಿಸಿದ್ದಾರೆ. ಸ್ಥಳೀಯ ಮಸೀದಿಗಳು ಅಥವಾ ಗೊತ್ತುಪಡಿಸಿದ ಈದ್ಗಾಗಳಲ್ಲಿ ಈದ್ ಪ್ರಾರ್ಥನೆ ಸಲ್ಲಿಸಬೇಕು ಮತ್ತು ಯಾರೂ ರಸ್ತೆಗಳಲ್ಲಿ ನಮಾಜ್ ಮಾಡಬಾರದು ಎಂದಿದ್ದಾರೆ.ಇದನ್ನೂ ಓದಿ: ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್‌ – ನಾಲ್ವರು ಪೊಲೀಸರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ

    ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ನಾಯಕ ಜಯಂತ್ ಸಿಂಗ್ ಚೌಧರಿ, ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೆ ಅಂತವರ ಪಾಸ್‌ಪೋರ್ಟ್‌ ಮತ್ತು ಪರವಾನಗಿಗಳನ್ನು ರದ್ದುಗೊಳಿಸಬಹುದು. ನ್ಯಾಯಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಇಲ್ಲದೆ ಹೊಸ ಪಾಸ್‌ಪೋರ್ಟ್ ಪಡೆಯುವುದು ಕಷ್ಟಕರವಾಗುತ್ತದೆ. ನ್ಯಾಯಾಲಯದಿಂದ ವ್ಯಕ್ತಿಗಳು ದೋಷಮುಕ್ತರಾಗುವವರೆಗೆ ಅಂತಹ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

    ಮೀರತ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ವಿಪಿನ್ ಟಾಡಾ ಪ್ರತಿಕ್ರಿಯಿಸಿ, ಹಬ್ಬದ ಸಮಯದಲ್ಲಿ, ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿಗಳನ್ನು ಹರಡಿದರೆ ಅಥವಾ ಅಶಾಂತಿಯನ್ನು ಉಂಟು ಮಾಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾವು ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಡುತ್ತಿದ್ದೇವೆ. ಕೋಮು ಸಾಮರಸ್ಯವನ್ನು ಹಾಳು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

    ಭದ್ರತೆಗಾಗಿ ಹಿಂದಿನ ಅನುಭವಗಳ ಆಧಾರದ ಮೇಲೆ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ ಮತ್ತು ಅಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಶಾಂತಿಯನ್ನು ಕಾಪಾಡಲು ಮತ್ತು ಮುಂಬರುವ ಹಬ್ಬಗಳನ್ನು ಸುಗಮವಾಗಿ ಆಚರಿಸಲು ಆಡಳಿತವು ಪ್ರಮುಖ ನಾಗರಿಕರು ಮತ್ತು ಧಾರ್ಮಿಕ ನಾಯಕರೊಂದಿಗೆ ಸಭೆ ನಡೆಸಲಾಗಿದೆ. ಕೆಲವೆಡೆ ಡ್ರೋನ್‌ಗಳನ್ನು ನಿಯೋಜಿಸಲಾಗುವುದು. ಎಲ್ಲಾ ಸೂಕ್ಷ್ಮ ಸ್ಥಳಗಳಲ್ಲಿ ಮಫ್ತಿಯಲ್ಲಿ ಅಧಿಕಾರಿಗಳನ್ನು ಸಹ ನಿಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ 50 ಕೋಟಿ ರೂ.ನಿಗದಿ: ಸಚಿವ ರಾಜಣ್ಣ

  • ಪತಿಯನ್ನು ಪೀಸ್‌ ಪೀಸ್‌ ಮಾಡಿ ಕೊಂದ ಹಂತಕಿ – ಜೈಲಲ್ಲಿ ಪ್ರಿಯಕರನ ಜೊತೆ ಇರಲು ಬಿಡಿ ಎಂದ ಮುಸ್ಕಾನ್!

    ಪತಿಯನ್ನು ಪೀಸ್‌ ಪೀಸ್‌ ಮಾಡಿ ಕೊಂದ ಹಂತಕಿ – ಜೈಲಲ್ಲಿ ಪ್ರಿಯಕರನ ಜೊತೆ ಇರಲು ಬಿಡಿ ಎಂದ ಮುಸ್ಕಾನ್!

    – ಮಾದಕ ವಸ್ತುವಿಗಾಗಿ ಜೈಲಲ್ಲಿ ಪರದಾಟ, ಮೌನಕ್ಕೆ ಶರಣಾದ ಹಂತಕರು

    ಲಕ್ನೋ: ಪತಿಯನ್ನು (Husband)  ಕೊಂದು ಜೈಲುಪಾಲಾಗಿರುವ ಮುಸ್ಕಾನ್ ರಸ್ತೋಗಿ ಮತ್ತು ಅವಳ ಪ್ರೇಮಿ ಸಾಹಿಲ್ ಶುಕ್ಲಾ ಜೈಲಿನಲ್ಲಿ ಒಟ್ಟಿಗೆ ಇರಲು ಬಯಸಿದ್ದರು. ಆದರೆ ಜೈಲು ಕೈಪಿಡಿಯ ಪ್ರಕಾರ ಅದು ಸಾಧ್ಯವಿಲ್ಲದ ಕಾರಣ ಇಬ್ಬರನ್ನೂ ಬೇರೆ ಬೇರೆ ಸೆಲ್‌ನಲ್ಲಿ ಇರಿಸಲಾಗಿದೆ ಎಂದು ಮೀರತ್‌ನ (Meerut) ಚೌಧರಿ ಚರಣ್ ಸಿಂಗ್ ಜೈಲಿನ ಹಿರಿಯ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

    ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಬ್ಬರು ಮಾದಕ ವ್ಯಸನಿಗಳೆಂದು ತಿಳಿದುಬಂದಿದೆ. ಇಬ್ಬರೂ ಮಾದಕ ವಸ್ತುವಿಗಾಗಿ ಜೈಲಲ್ಲಿ ಹಂಬಲಿಸುತ್ತಿದ್ದಾರೆ. ಇಬ್ಬರೂ ಸಹ ಕೈದಿಗಳ ಜೊತೆ ಮಾತನಾಡದೇ ಸೆಲ್‌ನಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಜೈಲಿನಲ್ಲಿರುವ ವ್ಯಸನ ಮುಕ್ತ ಕೇಂದ್ರದಲ್ಲಿ ಇಬ್ಬರಿಗೂ ಕೌನ್ಸೆಲಿಂಗ್ ನೀಡಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೈಲು ಸಿಬ್ಬಂದಿಗೆ ಅವರ ಮೇಲೆ ನಿಗಾ ಇಡಲು ತಿಳಿಸಲಾಗಿದೆ. ಮುಸ್ಕಾನ್ ಜೈಲಿಗೆ ಬಂದ ಮೊದಲ ದಿನ ಏನನ್ನೂ ತಿನ್ನಲಿಲ್ಲ. ಈಗ ಊಟ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಆರೋಪಿಗಳ ಕುಟುಂಬದವರು ಯಾರೂ ಅವರನ್ನು ಭೇಟಿ ಮಾಡಲು ಇನ್ನೂ ಬಂದಿಲ್ಲ. ಮುಸ್ಕಾನ್ ಅವರ ಕುಟುಂಬ ಆಕೆಯ ಪರವಾಗಿ ವಕೀಲರನ್ನು ನೇಮಿಸುವುದಿಲ್ಲ ಎಂದು ಜೈಲು ಅಧಿಕಾರಿಗಳಿಗೆ ತಿಳಿಸಿದ್ದರು. ಪ್ರಕರಣವನ್ನು ವಾದಿಸಲು ಸರ್ಕಾರಿ ವಕೀಲರನ್ನು ನೇಮಿಸಬೇಕು ಎಂದು ವಿನಂತಿಸಿದ್ದರು ಎನ್ನಲಾಗಿದೆ.

    ಕಳೆದ ವಾರ ಬಂಧನಕ್ಕೊಳಗಾದ ನಂತರ ಇಬ್ಬರೂ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ತನಿಖೆಯ ಭಾಗವಾಗಿ ವಿವರವಾದ ವಿಚಾರಣೆಗಾಗಿ ಅವರ ಕಸ್ಟಡಿಗೆ ಕೋರುವುದಾಗಿ ಮೀರತ್ ಪೊಲೀಸರು ತಿಳಿಸಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಕಳೆದ ವಾರ ಮುಸ್ಕಾನ್ ಮತ್ತು ಸಾಹಿಲ್‌ನನ್ನು ಬಂಧಿಸಲಾಗಿತ್ತು. ಸೌರಭ್ ಕಳೆದ ತಿಂಗಳು ಮನೆಗೆ ಬಂದಿದ್ದರು. ಮಾ.4 ರಂದು ಸೌರಭ್‌ಗೆ ಮಾದಕ ವಸ್ತು ನೀಡಿ ನಂತರ ಇರಿದು ಕೊಲ್ಲಲಾಗಿತ್ತು. ನಂತರ ಅವಳು ಮತ್ತು ಸಾಹಿಲ್ ಮೃತದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಸೀಲ್‌ ಮಾಡಿದ್ದರು. ನಂತರ ಇಬ್ಬರೂ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು.

    ಸೌರಭ್ ಮತ್ತು ಮುಸ್ಕಾನ್ 2016 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಆರು ವರ್ಷದ ಮಗಳಿದ್ದಾಳು. ಸೌರಭ್ ಕುಟುಂಬದೊಂದಿಗೆ ಮುಸ್ಕಾನ್‌ನ ಸಂಬಂಧ ಹಾಳಾಗಿತ್ತು. ಇದರಿಂದ ದಂಪತಿಗಳು ಬಾಡಿಗೆ ಮನೆ ಮಾಡಿಕೊಂಡಿದ್ದರು. 2019ರಲ್ಲಿ ಸೌರಭ್ ತನ್ನ ಹೆಂಡತಿಗೆ ಸಾಹಿಲ್ ಜೊತೆಗಿನ ಸಂಬಂಧದ ಬಗ್ಗೆ ತಿಳಿದಿತ್ತು. ಬಳಿಕ ವಿಚ್ಛೇದನಕ್ಕೆ ಯೋಚಿಸಿದ್ದರು. ಆದರೆ ಮಗಳ ಭವಿಷ್ಯದ ಬಗ್ಗೆ ಯೋಚಿಸಿ ಹಿಂದೆ ಸರಿದಿದ್ದರು. ಬಳಿಕ ಲಂಡನ್‌ಗೆ ತೆರಳಿ ಕೆಲಸ ಮಾಡುತ್ತಿದ್ದರು. ಸೌರಭ್‌ ಕುಟುಂಬಸ್ಥರು ಹಣಕ್ಕಾಗಿ ಮುಸ್ಕಾನ್‌ ಅವರನ್ನು ಮದುವೆಯಾಗಿದ್ದಳು ಎಂದು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

  • ಓಯೋ ಹೊಸ ನಿಯಮ – ಇನ್ಮುಂದೆ ಅವಿವಾಹಿತ ಜೋಡಿಗೆ ಹೋಟೆಲ್‌ ರೂಮ್‌ ಇಲ್ಲ!

    ಓಯೋ ಹೊಸ ನಿಯಮ – ಇನ್ಮುಂದೆ ಅವಿವಾಹಿತ ಜೋಡಿಗೆ ಹೋಟೆಲ್‌ ರೂಮ್‌ ಇಲ್ಲ!

    ನವದೆಹಲಿ: ಓಯೋ ಹೋಟೆಲ್‌ (OYO Hotel Rooms) ಬುಕ್ಕಿಂಗ್‌ ಕಂಪನಿ ಚೆಕ್‌ ಇನ್‌ಗೆ ಸಂಬಂಧಿಸಿದಂತೆ ಅವಿವಾಹಿತರಿಗೆ ನಿರ್ಬಂಧ ವಿಧಿಸಿ ಹೊಸ ನಿಯಮವನ್ನು ಜಾರಿಗೊಳಿಸಿದೆ. ಅದರಂತೆ ಇನ್ಮುಂದೆ ಅವಿವಾಹಿತ ಪುರುಷ – ಮಹಿಳಾ ಜೋಡಿಗೆ (Unmarried Couples) ಹೋಟೆಲ್‌ಗಳಲ್ಲಿ ಅನುಮತಿ ಇರುವುದಿಲ್ಲ ಎಂದು ಹೇಳಿದೆ.

    ಹೌದು. ದೇಶದ ಪ್ರಮುಖ ಲಾಡ್ಜ್ ಬುಕ್ಕಿಂಗ್ ಕಂಪನಿಗಳಲ್ಲಿ ಓಯೋ ಕೂಡ ಒಂದಾಗಿದೆ. ದೇಶದ ಎಲ್ಲಾ ನಗರಗಳಲ್ಲಿಯೂ ತನ್ನ ಹೋಟಲ್‌ ಬುಕ್ಕಿಂಗ್‌ ಜಾಲವನ್ನು ವಿಸ್ತರಣೆ ಮಾಡಿಕೊಂಡಿದೆ. ಕಡಿಮೆ ದರ, ಗುಣಮಟ್ಟದ ಸೇವೆ, ದೊಡ್ಡ ಜಾಲದಿಂದ ಈ ಓಯೋ ಹೋಟೆಲ್‌ಗಳು ಹೆಸರುವಾಸಿಯಾಗಿವೆ. ಅದರಲ್ಲೂ ಅವಿವಾಹಿತರಿಗೆ ಹೋಟೆಲ್‌ ಚೆಕ್‌ಇನ್‌ಗೆ ಅವಕಾಶ ನೀಡುವ ಕಾರಣಕ್ಕೆ ಈ ಹೋಟೆಲ್‌ ಗ್ರಾಹಕರ ನೆಚ್ಚಿನ ಆಯ್ಕೆಯಾಗಿತ್ತು. ಇದೀಗ ಅವಿವಾಹಿತರಿಗೆ ನಿರ್ಬಂಧ ವಿಧಿಸಿ ಹೊಸ ನಿಯಮ ಜಾರಿಗೊಳಿಸಿದೆ. ಇದನ್ನೂ ಓದಿ: ʻನನ್ನ ಹೆಂಡತಿಗೆ ಪಾಠ ಕಲಿಸಿʼ – ಪತ್ನಿಯ ಕಿರುಕುಳದ ಬಗ್ಗೆ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

    ಮೀರತ್‌ನಲ್ಲಿ ಜಾರಿ:
    ಓಯೋನ ಈ ಹೊಸ ನಿಯಮವು ಮೀರತ್‌ನಲ್ಲಿ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ನಗರಗಳಲ್ಲಿಯೂ ಜಾರಿಗೆ ತರಲಿದೆ.
    ಓಯೋ ನಾಗರಿಕ ಸಮಾಜದ ಹಲವು ಗುಂಪುಗಳಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿದೆ. ಹಲವು ದೂರುಗಳು ಜನಸಾಮಾನ್ಯರಿಂದ ಬಂದಿವೆ. ಹಲವು ನಗರಗಳ ನಿವಾಸಿಗಳು ಅವಿವಾಹಿತರಿಗೆ ಚೆಕ್-ಇನ್ ಮಾಡಲು ಅವಕಾಶ ನೀಡದಂತೆ ಅರ್ಜಿ ಸಲ್ಲಿಸಿದ್ದರು. ಹೀಗೆ ಹಲವು ವಿಚಾರವಾಗಿ ದೂರು ಸ್ವೀಕರಿಸಿದ್ದ ಓಯೋ ಹೊಸ ನಿಯಮ ಜಾರಿಗೆ ತಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಕಾರಿಗೆ ಟ್ರಕ್‌ ಡಿಕ್ಕಿ – ಕಾರಿನಲ್ಲಿದ್ದ ಇಬ್ಬರು ಬಿಜೆಪಿ ನಾಯಕರು ಸಾವು

    ಐಡಿ ಪ್ರೂಫ್‌ ಕಡ್ಡಾಯ
    ಹೊಸ ನಿಯಮದ ಪ್ರಕಾರ, ಹೊಟೇಲ್‌ಗೆ ಬರುವ ಜೋಡಿಗಳು ಕಡ್ಡಾಯವಾಗಿ ತಮ್ಮ ಸಂಬಂಧದ ದಾಖಲೆ ತರುವುದು ಕಡ್ಡಾಯವಾಗಿದೆ. ಆನ್‌ಲೈನ್ ಬುಕ್ಕಿಂಗ್‌ಗೂ ಕೂಡಾ ಇದು ಕಡ್ಡಾಯವಾಗಿದೆ. ಬೇರೆ ನಗರಗಳಿಗೂ ಇದೆ ನಿಯಮ ವಿಸ್ತರಿಸುವ ಬಗ್ಗೆ ಯೋಚನೆ ಮಾಡಲಾಗುವುದು.

    ಒಟ್ಟಾರೆ ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಪದ್ಧತಿಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂದು ಓಯೋ ಉತ್ತರ ಭಾರತ ಪ್ರಾದೇಶಿಕ ಮುಖ್ಯಸ್ಥ ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆ ಹಗರಣ ಬಗ್ಗೆ ವರದಿ ಮಾಡಿದ್ದ ಪತ್ರಕರ್ತನ ಶವ ಕಂಟ್ರಾಕ್ಟರ್‌ ಮನೆಯಲ್ಲಿ ಪತ್ತೆ

  • ನಾಯಿ ಮರಿಯ ಶಬ್ದ ಕೇಳಲಾಗದೇ ಮೀರತ್‌ನಲ್ಲಿ 5 ನಾಯಿ ಮರಿಗಳಿಗೆ ಬೆಂಕಿ ಹಚ್ಚಿದ ಮಹಿಳೆಯರು: ಕೇಸ್ ದಾಖಲು

    ನಾಯಿ ಮರಿಯ ಶಬ್ದ ಕೇಳಲಾಗದೇ ಮೀರತ್‌ನಲ್ಲಿ 5 ನಾಯಿ ಮರಿಗಳಿಗೆ ಬೆಂಕಿ ಹಚ್ಚಿದ ಮಹಿಳೆಯರು: ಕೇಸ್ ದಾಖಲು

    ಲಕ್ನೋ: ನಾಯಿ ಮರಿಗಳ ಶಬ್ದ ಕೇಳೋಕಾಗದೇ ಇಬ್ಬರು ಮಹಿಳೆಯರು ಹಾಗೂ ಸಿಐಎಸ್‌ಎಫ್ ಸಿಬ್ಬಂದಿ ಸೇರಿ 5 ನಾಯಿ ಮರಿಗಳನ್ನು ಸಜೀವ ದಹನ ಮಾಡಿರುವ ಘಟನೆ ಉತ್ತರಪ್ರದೇಶದ (Uttar Pradesh) ಮೀರತ್ (Meerut) ಜಿಲ್ಲೆಯ ಕಂಕರ್ ಖೇರಾದ ಸಂತ ನಗರ ಕಾಲೋನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೃತ್ಯ ಎಸಗಿದ ಇಬ್ಬರು ಮಹಿಳೆಯರನ್ನು ಶೋಭಾ ಮತ್ತು ಆರತಿ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ನಾಯಿಮರಿಗಳು ಬೊಗಳುತ್ತಿದ್ದು, ಅದನ್ನು ಸಹಿಸಲಾಗದೇ ಇದ್ದ ಜಾಗದಿಂದ ಕಳುಹಿಸಿದ್ದಾರೆ. ಅದಾದ ಮೂರು ದಿನಗಳ ಬಳಿಕ ಪೆಟ್ರೋಲ್ ಸುರಿದು ನಾಯಿಮರಿಗಳನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ.ಇದನ್ನೂ ಓದಿ: ಯೋಗ ಶಿಕ್ಷಕಿ ಜೀವಂತ ಸಮಾಧಿ ಕೇಸ್‌ | ಮರ್ಡರ್‌ ಮಾಡೋಕೆ 4 ಲಕ್ಷ ಸುಪಾರಿ, 1 ಲಕ್ಷ ಅಡ್ವಾನ್ಸ್ – ರಹಸ್ಯ ಸ್ಫೋಟ

    ಗುರುವಾರ ಸ್ಥಳೀಯರಿಗೆ ವಿಷಯದ ತಿಳಿದಿದ್ದು, ನಂತರ ಪೊಲೀಸರಿಗೆ ಗಮನಕ್ಕೆ ತಂದ್ದಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವಿಷಯ ತಿಳಿದ ಅನಿಮಲ್ಸ್ ಕೇರ್ ಸೊಸೈಟಿಯ (Animal Care Society) ಕಾರ್ಯದರ್ಶಿ ಅಂಶುಮಾಲಿ ವಶಿಷ್ಠ ಪ್ರತಿಭಟನೆ ನಡೆಸಿದ್ದು, ಬಳಿಕ ಮಹಿಳೆಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು.

    ಈ ಕುರಿತು ಅಂಶುಮಾಲಿ ವಶಿಷ್ಠ ಮಾತನಾಡಿ, ಈ ವಿಷಯವನ್ನು ಗುರುವಾರ ಎಸ್‌ಎಸ್‌ಪಿ ವಿಪಿನ್ ತಾಡಾ ಅವರ ಗಮನಕ್ಕೆ ತಂದಿದ್ದು, ತನಿಖೆಗೆ ಆದೇಶಿಸಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಠಾಣೆಗೆ ತೆರಳಿ, ಇಬ್ಬರು ಮಹಿಳೆಯರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ.

    ಇನ್ನೂ ಎಸ್‌ಎಸ್‌ಪಿ ವಿಪಿನ್ ಟಾಡಾ ಮಾತನಾಡಿ, ಮಂಗಳವಾರ ಘಟನೆ ನಡೆದಿದ್ದು, ಗುರುವಾರ ಸ್ಥಳೀಯರಿಗೆ ತಿಳಿದಿದೆ. ಇಬ್ಬರು ಆರೋಪಿ ಮಹಿಳೆಯರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 325 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಈ ಸರ್ಕಾರ ತೆಗೆಯೋವರೆಗೆ ಮನೆಯಲ್ಲಿ ಮಲಗಲ್ಲ – ಗುಡುಗಿದ ಗೌಡರು

  • 3 ಅಂತಸ್ಥಿನ ಕಟ್ಟಡ ಕುಸಿದು 10 ಮಂದಿ ಸಾವು – ಸಿಎಂ ಯೋಗಿ ಸಂತಾಪ

    3 ಅಂತಸ್ಥಿನ ಕಟ್ಟಡ ಕುಸಿದು 10 ಮಂದಿ ಸಾವು – ಸಿಎಂ ಯೋಗಿ ಸಂತಾಪ

    ಲಕ್ನೋ: ಭಾರೀ ಮಳೆಯಿಂದಾಗಿ ಮೂರು ಅಂತಸ್ತಿನ ಕಟ್ಟಡ ಕುಸಿದು (Meerut Building Collapses) ಕನಿಷ್ಠ 10 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಮೀರತ್‌ನ ಜಾಕಿರ್ ಕಾಲೋನಿಯಲ್ಲಿ ನಡೆದಿದೆ.

    ಇದುವರೆಗೆ ಅಧಿಕಾರಿಗಳು ಒಟ್ಟು ಐವರನ್ನು ಅವಶೇಷಗಳಿಂದ ರಕ್ಷಿಸಿದ್ದಾರೆ. ಬಲಿಯಾದ 10 ಮಂದಿಯಲ್ಲಿ 1 ವರ್ಷದ ಮಗು ಸೇರಿದಂತೆ ನಾಲ್ವರು ಮಕ್ಕಳಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: Video | ಕೇಸರಿ ಶಾಲು ಹಿಡಿದು ವೇದಿಕೆಗೆ ನುಗ್ಗಿದ ಯುವಕ – ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ?

    ಮಳೆಯಿಂದಾಗಿ ಬಿಲ್ಡಿಂಗ್‌ ಕುಸಿದಿದೆ ಎಂದು ಮೀರತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ಮೀನಾ ತಿಳಿಸಿದ್ದಾರೆ. ಭಾರೀ ಮಳೆಯ ನಡುವೆಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಇದನ್ನೂ ಓದಿ: ಅಕ್ಕಪಕ್ಕದ ಮನೆಗಳಿಗೆ ಚಿಲಕ ಹಾಕಿ, ಪ್ರೀ ಪ್ಲ್ಯಾನ್ಡ್‌ ದರೋಡೆ – ಬೆಚ್ಚಿಬಿದ್ದ ರಾಯಚೂರು ಜನ

    ಸುಮಾರು 35 ವರ್ಷಗಳಷ್ಟು ಹಳೆಯದಾದ ಕಟ್ಟಡವೂ ಶಿಥಿಲಾವಸ್ಥೆಯಲ್ಲಿತ್ತು ಎಂದು ಹೇಳಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್‌ ಘಟನೆಯ ದೃಶ್ಯಗಳನ್ನು ಗಮನಿಸಿದ್ದು, ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಇದೇ ಸೆಪ್ಟೆಂಬರ್ 7 ರಂದು, ಲಕ್ನೋದ ಟ್ರಾನ್ಸ್‌ಪೋರ್ಟ್ ನಗರ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡದ ಗೋಡೌನ್‌ಗಳು ಮತ್ತು ಮೋಟಾರ್ ವರ್ಕ್‌ಶಾಪ್ ಕುಸಿದು 8 ಜನ ಸಾವನ್ನಪ್ಪಿದರು. 28ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದನ್ನೂ ಓದಿ: Kolkata Horror | ಸಾಕ್ಷಿ ನಾಶ, FIR ದಾಖಲಿಸಲು ವಿಳಂಬ; ಸಂದೀಪ್‌ ಘೋಷ್‌ ಸೇರಿ ಸಿಬಿಐನಿಂದ ಇಬ್ಬರ ಬಂಧನ

  • ಸಹೋದರಿಯ ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್‌ ಮಾಡುತ್ತಲೇ ಕುಸಿದು ಬಿದ್ಳು!

    ಸಹೋದರಿಯ ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್‌ ಮಾಡುತ್ತಲೇ ಕುಸಿದು ಬಿದ್ಳು!

    ಲಕ್ನೋ: ಸಹೋದರಿಯ ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸ್‌ ಮಾಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದು ಯುವತಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ (Uttar Pradesh’s Meerut) ನಡೆದಿದೆ.

    ಮೃತಳನ್ನು ರಿಮ್ಶಾ (18) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಸಹೋದರಿಯ ಮೆಹಂದಿ ಕಾರ್ಯಕ್ರಮವಿತ್ತು. ಈ ವೇಳೆ ರಿಮ್ಶಾ ಮೃತಪಟ್ಟಿದ್ದಾಳೆ. ಇದೀಗ ರಿಮ್ಶಾ ಡ್ಯಾನ್ಸ್ ಮಾಡುತ್ತಾ ಕುಸಿದು ಬೀಳುತ್ತಿರುವ‌ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

    ಮದುವೆಗೂ ಮುನ್ನ ನಡೆಯುವ ಮೆಹಂದಿ ಕಾರ್ಯಕ್ರಮದಲ್ಲಿ ರಿಮ್ಶಾ ತನ್ನ ಕುಟುಂಬ ಸದಸ್ಯರೊಂದಿಗೆ ಡ್ಯಾನ್ಸ್‌ ಮಾಡುತ್ತಿರುತ್ತಾಳೆ. ಆದರೆ ಕೆಲವೇ ಸೆಕೆಂಡುಗಳಲ್ಲಿ ಆಕೆಗೆ ತಲೆಸುತ್ತು ಬಂದಂತೆ ಆಗಿದ್ದು, ಎದೆ ಹಿಡಿದುಕೊಂಡು ಅಲ್ಲೇ ಇದ್ದ ಪುಟ್ಟ ಹುಡುಗನ ಕೈ ಹಿಡಿದುಕೊಳ್ಳಲು ಪ್ರಯತ್ನಿಸುತ್ತಾಳೆ. ನಂತರ ಅಲ್ಲೇ ಕುಸಿದು ಬೀಳುತ್ತಾಳೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣರನ್ನ ಪಕ್ಷದಿಂದ ಅಮಾನತು ಮಾಡಿ- ಹೆಚ್‌ಡಿಡಿಗೆ ಕಂದಕೂರು ಒತ್ತಾಯ

    ರಿಮ್ಶಾ ಬೀಳುತ್ತಿದ್ದಂತೆಯೇ ಕಾರ್ಯಕ್ರಮ ಬಂದ ಕೆಲವರು ಆಕೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸುತ್ತಾರೆ. ಆಕೆಗೆ ಹೃದಯಾಘಾತವಾಗಿದೆ ಎಂದು ಶಂಕಿಸಲಾಗಿದೆ. ಸದ್ಯ ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಇದೀಗ ನೀರವ ಮೌನ ಆವರಿಸಿದೆ.