Tag: Meera Rajput

  • ಗಂಡು ಮಗುವಿಗೆ ತಂದೆಯಾದ ಶಾಹಿದ್ ಕಪೂರ್

    ಗಂಡು ಮಗುವಿಗೆ ತಂದೆಯಾದ ಶಾಹಿದ್ ಕಪೂರ್

    ಮುಂಬೈ: ಬಾಲಿವುಡ್ ಚಾಕಲೇಟ್ ಹೀರೋ ಶಾಹಿದ್ ಕಪೂರ್ ಬುಧವಾರ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಮೀರಾ ರಜಪೂತ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.

    ಬುಧವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಿದ್ದ ಮೀರಾ ರಜಪೂತ್ ಸಂಜೆ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆಸ್ಪತ್ರೆಯಲ್ಲಿ ಮೀರಾ ತಾಯಿ ಬೇಲಾ ರಜಪೂತ್, ಅತ್ತೆ ನೀಲಿಮಾ ಅಜಿಮ್, ಶಾಹಿದ್ ಸೋದರ ಇಶಾನ್ ಖಟ್ಟರ್ ಎರಡೂ ಕುಟುಂಬದ ಸದಸ್ಯರು ಗಂಡು ಮಗವನ್ನು ಸ್ವಾಗತಿಸಿದ್ದಾರೆ.

    ಶಾಹಿದ್ ಮತ್ತು ಮೀರಾ ಜುಲೈ 6, 2015ರಂದು ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದರು. ಶಾಹಿದ್ ಮತ್ತು ಮೀರಾ ಬಾಲಿವುಡ್ ಅಂಗಳದಲ್ಲಿ ಬಹು ಚರ್ಚೆಗೆ ಒಳಗಾದ ಜೋಡಿ ಅಂತಾನೇ ಕರೆಸಿಕೊಳ್ಳುವುದುಂಟು. ಮೀರಾ 2016ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದಂಪತಿ ತಮ್ಮ ಹೆಸರಿನ ಮೊದಲ ಅಕ್ಷರ ಸೇರಿದಿ ಮಗಳಿಗೆ ‘ಮಿಶಾ’ ಎಂದು ನಾಮಕರಣ ಮಾಡಿದ್ದರು. ಶಾಹಿದ್ ಸದ್ಯ ‘ಬತ್ತಿ ಗುಲ್ ಮೀಟರ್ ಚಾಲು’ ಸಿನಿಮಾದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎರಡನೇ ಮಗುವನ್ನು ಸ್ವಾಗತಿಸುವ ಸಂಭ್ರಮದಲ್ಲಿ ಬಿ-ಟೌನ್ ಕ್ಯೂಟ್ ಕಪಲ್ಸ್

    ಎರಡನೇ ಮಗುವನ್ನು ಸ್ವಾಗತಿಸುವ ಸಂಭ್ರಮದಲ್ಲಿ ಬಿ-ಟೌನ್ ಕ್ಯೂಟ್ ಕಪಲ್ಸ್

    ಮುಂಬೈ: ಬಿ-ಟೌನ್‍ನ ಕ್ಯೂಟ್ ಜೋಡಿಗಳಾದ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ದಂಪತಿ ತಮ್ಮ ಎರಡನೇ ಮಗುವಿನ ಆಗಮನವನ್ನು ಸ್ವಾಗತಿಸುವ ಸಂತಸದಲ್ಲಿದ್ದಾರೆ.

    ಭಾನುವಾರದಂದು ಮೀರಾ ಅವರ ಎರಡನೇ ಸೀಮಂತ ಕಾರ್ಯಕ್ರಮ ನಡೆಯಿತು. ಶಾಹಿದ್ ಕಪೂರ್ ಮುದ್ದಿನ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಿಯ ಗೆಳೆಯರು ಹಾಗೂ ಕುಟುಂಬದವರೊಂದಿಗೆ ಸಂಭ್ರಮಿಸಿದರು. ಪಂಕಜ್ ಕಪೂರ್, ಜಾನ್ವಿ ಕಪೂರ್ ಹಾಗೂ ಇಶಾನ್ ಖಟ್ಟರ್ ಸೇರಿದಂತೆ ಹಲವರು ಸಂಭ್ರಮದಲ್ಲಿ ಭಾಗಿಯಾಗಿದ್ದರು

    ಕಾರ್ಯಕ್ರಮದಲ್ಲಿ ಮೀರಾ ಆಫ್ ಶೋಲ್ಡರ್ ಪೋಲ್ಕಾ ಡಾಟ್ ಡ್ರೆಸ್ ಹಾಗೂ ಶಾಹಿದ್ ಕಪೂರ್ ಫ್ಲಾರಲ್ ಶರ್ಟ್ ಧರಿಸಿ ಕೂಲ್ ಆಗಿ ತಮ್ಮ ಖುಷಿಯನ್ನು ಸಂಭ್ರಮಿಸಿದರು.

    ಶಾಹಿದ್ ಹಾಗೂ ಮೀರಾ ಅವರ ಪುತ್ರಿ ಮಿಶಾ ಕೈಯಲ್ಲಿ `ಹಿರಿಯ ಸಹೋದರಿ’ ಎಂದು ಬರೆದಿದ್ದ ಬಲೂನ್‍ನನ್ನು ಹಿಡಿದು ಪೋಸ್ ಕೊಟ್ಟಿರುವ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ದಂಪತಿ ಶೇರ್ ಮಾಡಿದ್ದಾರೆ. ಈ ಮೂಲಕ ದಂಪತಿಯು ತಮ್ಮ ಎರಡನೇ ಮಗುವಿನ ಆಗಮನದ ವಿಷಯವನ್ನು ಅಭಿಮಾನಿಗಳಿಗೆ ಹೊಸ ಬಗೆಯಲ್ಲಿ ತಿಳಿಸಿದ್ದಾರೆ.

    ಶಾಹಿದ್ ಹಾಗೂ ಮೀರಾ 2015ರ ಜುಲೈ 7 ರಂದು ದೆಹಲಿಯಲ್ಲಿ ವಿವಾಹವಾಗಿದ್ದರು. 2016ರ ಆಗಸ್ಟ್ 26 ರಂದು ಅವರ ಮೊದಲ ಮಗವನ್ನು ದಂಪತಿ ಸ್ವಾಗತಿಸಿದ್ದರು. ಹಾಗೆಯೇ ಶಾಹಿದ್ ಹಾಗೂ ಮೀರಾ ಇಬ್ಬರ ಹೆಸರಿನ ಮೊದಲ ಅಕ್ಷರವನ್ನು ಜೋಡಿಸಿ ಅವರ ಮಗಳಿಗೆ ‘ಮಿಶಾ’ ಎಂದು ನಾಮಕರಣ ಮಾಡಿದ್ದರು.

    https://www.instagram.com/p/BlR9pTeFZpS/?taken-by=shahidkapoor

    https://www.instagram.com/p/BlQq31DleoD/?taken-by=bollywood

  • ಶಾಹಿದ್ ಕಪೂರ್ ರನ್ನು ಮನೆಯಿಂದ ಹೊರಗೆ ಹಾಕಿದ್ದೆ ಎಂದ ಪತ್ನಿ ಮೀರಾ!

    ಶಾಹಿದ್ ಕಪೂರ್ ರನ್ನು ಮನೆಯಿಂದ ಹೊರಗೆ ಹಾಕಿದ್ದೆ ಎಂದ ಪತ್ನಿ ಮೀರಾ!

    ಮುಂಬೈ: ನನ್ನ ಪತಿ ಶಾಹಿದ್ ಕಪೂರ್ ರನ್ನು ಮನೆಯಿಂದ ಹೊರಹಾಕಿದ್ದೆ ಎಂದು ಪತ್ನಿ ಮೀರಾ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

    ಇತ್ತೀಚಿಗೆ ನಟ ಶಾಹಿದ್ ಕಪೂರ್ ಹಾಗೂ ಪತ್ನಿ ಮೀರಾ, ನೇಹಾ ದುಪಿಯಾ ನಡೆಸಿಕೊಡುವ ಬಿಎಫ್‍ಎಫ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮೀರಾ ಈ ಹಿಂದೆ ಶಾಹಿದ್ ರನ್ನು ಮನೆಯಿಂದ ಹೊರಹಾಕಿದ್ದೆ ಎಂದು ತಿಳಿಸಿದರು.

    ಶಾಹಿದ್ ಪದ್ಮಾವತ್ ಚಿತ್ರದ ಶೂಟಿಂಗ್ ಮುಗಿಸಿ ಬಂದಿದ್ದಾಗ ಅವರನ್ನು ಮನೆಯಿಂದ ಹೊರಹಾಕಿದ್ದೆ. ಅವರು ಬೆಳಗ್ಗೆ 8 ಗಂಟೆಗೆ ಶೂಟಿಂಗ್ ಮುಗಿಸಿಕೊಂಡು ಬಂದು ಮಧ್ಯಾಹ್ನ 2 ಗಂಟೆಗೆ ಏಳುತ್ತಿದ್ದರು. ಇಡೀ ರಾತ್ರಿ ಸಿನಿಮಾ ಶೂಟಿಂಗ್‍ನಲ್ಲಿ ತೊಡಗಿ ಮನೆಗೆ ಬಂದು ಮಲಗುವ ಸಮಯದಲ್ಲಿ ಅವರಿಗೆ ಯಾವುದೇ ರೀತಿ ತೊಂದರೆ ಆಗಬಾರದೆಂಬುದು ನನಗೆ ತಿಳಿದಿತ್ತು. ಆದರೆ ಅದೇ ಸಮಯದಲ್ಲಿ ನನ್ನ ಮಗಳು ಮಿಷಾ ಕೂಡ ಆಟವಾಡುತ್ತಿದ್ದಳು. ಮಿಷಾಳ ಗಲಾಟೆ ಕೇಳಿ ಶಾಹಿದ್ ಈ ಬಗ್ಗೆ ಎನ್ನನ್ನೂ ಮಾತನಾಡಲಿಲ್ಲ. ಆದರೆ ಅವರಿಗೆ ಡಿಸ್ಟರ್ಬ್ ಆಗುತ್ತಿತ್ತು ಎಂಬುದು ನನಗೆ ತಿಳಿಯಿತು. ಇದೇ ವೇಳೆ ನಾನು ಮಿಷಾಗೆ ಸುಮ್ಮನಿರಲು ಹೇಳಲು ಸಾಧ್ಯವಿಲ್ಲ. ಇದರಿಂದಾಗಿ ನಾನು ಶಾಹಿದ್‍ರನ್ನು ಮನೆಯಿಂದ ಹೊರಗೆ ಕಳುಹಿಸಿ ಹೊಟೇಲ್‍ನಲ್ಲಿ ತಂಗಲು ಹೇಳಿದ್ದೆ ಎಂದು ಮೀರಾ ಹೇಳಿದರು.

    ಆಗ ಶಾಹಿದ್ ಕಪೂರ್ ತನ್ನ ಜುಹು ಮನೆಯನ್ನು ಬಿಟ್ಟು, ಸಿನಿಮಾ ಸೆಟ್‍ಗೆ ಹತ್ತಿರವಿದ್ದ ಗುರ್ ಗಾಂವ್‍ನ ಸ್ಟಾರ್ ಹೊಟೇಲಿನಲ್ಲಿ ತಂಗಿದ್ದರು ಎಂದು ಮೀರಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

    ಸದ್ಯ ಶಾಹಿದ್ ಕಪೂರ್ ‘ಬತ್ತಿ ಗುಲ್ ಮೀಟರ್ ಚಾಲೂ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಕಪೂರ್ ಹಾಗೂ ಯಾಮಿ ಗೌತಮ್ ನಾಯಕಿಯರಾಗಿ ನಟಿಸುತ್ತಿದ್ದಾರೆ.

  • ತನ್ನೆದುರೇ ನಟಿಯನ್ನು ತಬ್ಬಿಕೊಂಡ ಪತಿ ಶಾಹಿದ್‍ಗೆ ಕ್ಷಣಾರ್ಧದಲ್ಲಿ ಚಮಕ್ ಕೊಟ್ಟ ಪತ್ನಿ ಮೀರಾ

    ತನ್ನೆದುರೇ ನಟಿಯನ್ನು ತಬ್ಬಿಕೊಂಡ ಪತಿ ಶಾಹಿದ್‍ಗೆ ಕ್ಷಣಾರ್ಧದಲ್ಲಿ ಚಮಕ್ ಕೊಟ್ಟ ಪತ್ನಿ ಮೀರಾ

    ಮುಂಬೈ: ಫೆಬ್ರವರಿ 1ರಂದು ನಗರದಲ್ಲಿ ಖಾಸಗಿ ಮಾಧ್ಯಮವೊಂದು ಮೋಸ್ಟ್ ಸ್ಟೈಲಿಶ್ ಅವಾರ್ಡ್-2018 ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಪ್ರಶಸ್ತಿ ಸಮಾರಂಭಕ್ಕೆ ಬಾಲಿವುಡ್‍ನ ಎಲ್ಲ ತಾರೆಯರು ಆಗಮಿಸಿ, ಕಲರ್ ಕಲರ್ ಡ್ರೆಸ್ ಗಳಲ್ಲಿ ಮಿಂಚಿದ್ದರು. ಬಾಲಿವುಡ್ ತಾರೆಯರು ತಮ್ಮ ಜೋಡಿಗಳೊಂದಿಗೆ ರೆಡ್ ಕಾರ್ಪೆಟ್ ನಲ್ಲಿ ನಡೆದು ಮಿಂಚು ಹರಿಸಿದ್ದರು.

    ಇದೇ ಕಾರ್ಯಕ್ರಮಕ್ಕೆ ಬಾಲಿವುಡ್ ಕ್ಯೂಟ್ ಆ್ಯಂಡ್ ಯಂಗ್ ಕಪಲ್ ಶಾಹಿದ್ ಕಪೂರ್ ತಮ್ಮ ಪತ್ನಿ ಮೀರಾ ರಜಪೂತ್ ಜೊತೆ ಆಗಮಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಶಾಹಿದ್ ಕಪೂರ್ ಮತ್ತು ಮೀರಾ ಮಾಧ್ಯಮಗಳೊಂದಿಗೆ ‘ಪದ್ಮಾವತ್’ ಸಿನಿಮಾದ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಪಕ್ಕದಲ್ಲಿ ನಟಿ ವಾಣಿ ಕಪೂರ್ ಆಗಮಿಸುತ್ತಿದ್ದಂತೆ ಶಾಹಿದ್ ಮಾಧ್ಯಮಗೋಷ್ಠಿಯನ್ನು ಅರ್ಧಕ್ಕೆ ಬಿಟ್ಟು ಹೋಗಿ ಹಗ್ ಮಾಡಿಕೊಂಡು ಬರ ಮಾಡಿಕೊಂಡರು.

    ಶಾಹಿದ್ ಪಕ್ಕದಲ್ಲಿ ನಿಂತಿದ್ದ ಪತ್ನಿ ಮೀರಾ ದೂರದಿಂದಲೇ ಮುಗಳ್ನಕ್ಕರು. ಆದ್ರೆ ಮೀರಾ ಮುಖದಲ್ಲಾದ ಆ ಕ್ಷಣದ ಭಾವನೆಗಳು ಮಾತ್ರ ಬೇಸರ ತೋರಿಸುವಂತಿತ್ತು. ವಾಣಿ ಕಪೂರ್ ತಾವಾಗಿಯೇ ಬಂದು ಮೀರಾರನ್ನು ಹಗ್ ಮಾಡಿಕೊಂಡು ಕ್ಷೇಮ ವಿಚಾರಿಸಿದ್ರು. ವಾಣಿ ಕಪೂರ್ ಕಪ್ಪು ಬಣ್ಣದ ಬ್ಯಾಕ್ ಲೆಸ್ ನೆಟ್ ಗೌನ್ ಧರಿಸಿ ಹಾಟ್ ಆಗಿ ಮಿಂಚುತ್ತಿದ್ದರು. ಇದನ್ನೂ ಓದಿ: ಶಾಹಿದ್ ಕಪೂರ್ ಹಾಟ್ ಫೋಟೋಗೆ ಪತ್ನಿ ಕಮೆಂಟ್ ಮಾಡಿದ್ದು ಹೀಗೆ

    ಪತಿಗೆ ತಿರುಗೇಟು?: ನಟಿಯನ್ನು ಬರಮಾಡಿಕೊಂಡ ಶಾಹಿದ್ ಮಾಧ್ಯಮಗಳ ಜೊತೆ ಮಾತುಕತೆ ನಡೆಸಿದರು. ಮಾಧ್ಯಮಗಳ ಜೊತೆ ಮಾತನಾಡುವಾಗ ಮೀರಾ ಪತಿ ಪಕ್ಕವೇ ನಿಂತುಕೊಂಡು ಕ್ಯಾಮೆರಾಗಳಿಗೆ ಸ್ಮೈಲ್ ನೀಡುತ್ತಿದ್ರು. ವಾಣಿ ಕಪೂರ್ ಹಿಂದೆಯೇ ‘ಐಸ್’ ಚಿತ್ರದ ನಿರ್ದೇಶಕ ಇಮ್ತಿಯಾಜ್ ಅಲಿ ಬಂದರು. ಕೂಡಲೇ ಪತಿ ಪಕ್ಕದಲ್ಲಿ ನಿಂತಿದ್ದ ಮೀರಾ ಮುಂದೆ ಹೋಗಿ ಇಮ್ತಿಯಾಜ್ ಅಲಿಯನ್ನು ಹಗ್ ಮಾಡಿಕೊಂಡು ಸ್ವಾಗತ ಮಾಡಿಕೊಂಡರು.

    ಈ ಬಾರಿ ಪತ್ನಿಯನ್ನು ನೋಡಿದ ಶಾಹಿದ್ ಸ್ವಲ್ಪ ಕಸಿವಿಸಿಗೊಂಡರು. ಈ ಎಲ್ಲ ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಶಾಹಿದ್ ಕಪೂರ್ ಹಾಟ್ ಫೋಟೋಗೆ ಪತ್ನಿ ಕಮೆಂಟ್ ಮಾಡಿದ್ದು ಹೀಗೆ

    ಶಾಹಿದ್ ಕಪೂರ್ ಹಾಟ್ ಫೋಟೋಗೆ ಪತ್ನಿ ಕಮೆಂಟ್ ಮಾಡಿದ್ದು ಹೀಗೆ

    ಮುಂಬೈ: ಬಾಲಿವುಡ್‍ನ ಕ್ಯೂಟ್ ಸ್ಟಾರ್ ಶಾಹಿದ್ ಕಪೂರ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಸಖತ್ ಹಾಟ್ ಆಗಿರೋ ಫೋಟೋವನ್ನು ಅಪ್ಲೋಡ್ ಮಾಡಿದ್ದು, ಫೋಟೋ ನೋಡಿದ ಪತ್ನಿ ಮೀರಾ ಇದಕ್ಕೆ ಕಮೆಂಟ್ ಮಾಡಿದ್ದಾರೆ.

    https://www.instagram.com/p/BWO6emLAfbM/?taken-by=shahidkapoor

    ಶುಕ್ರವಾರದಂದು ಮೀರಾ- ಶಾಹಿದ್ ದಂಪತಿ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದು, ಬಹುಶಃ ಇಬ್ಬರ ಲವ್ವಿ ಡವ್ವಿ ಫೋಟೋ ಬರಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ರು. ಆದ್ರೆ ಶಾಹಿದ್ ತನ್ನ ಜಿಮ್ ಬಾಡಿ ತೋರಿಸುವಂತಹ ಶರ್ಟ್‍ಲೆಸ್ ಫೋಟೋವನ್ನ ಹಾಕಿ `ಬೆಳಗ್ಗೆ ಬೆಳಗ್ಗೆ ಕೆಲಸ ಆರಂಭ’ ಎಂದು ಬರೆದು ಪೋಸ್ಟ್ ಮಾಡಿದ್ರು. ಈ ಫೋಟೋಗೆ ಪತ್ನಿ ಮೀರಾ ಕೂಡ ಮನಸೋತು ಮೂರು ಫೈರ್ ಎಮೋಜಿ ಜೊತೆಗೆ ಪ್ರೀತಿಯಲ್ಲಿ ಬಿದ್ದಿರೋದನ್ನ ಸೂಚಿಸೋ ಎಮೋಜಿ ಹಾಕಿ ಕಮೆಂಟ್ ಮಡಿದ್ದಾರೆ.

    ಯುವ ದಂಪತಿಯಾದ ಶಾಹಿದ್ ಮತ್ತು ಮೀರಾ ಜುಲೈ 7, 2015 ರಂದು ಸಂಪ್ರದಾಯಬದ್ದವಾಗಿ ವಿವಾಹವಾಗಿದ್ದರು. ಈ ಕ್ಯೂಟ್ ಜೋಡಿಗೆ ಅಗಸ್ಟ್ 26, 2016ರಂದು ಮುದ್ದಾದ ಹೆಣ್ಣು ಮಗು ಹುಟ್ಟಿದ್ದು, ತಾರಾ ಜೋಡಿ ತಮ್ಮ ಹೆಸರುಗಳ ಮೊದಲ ಅಕ್ಷರ ಸೇರಿಸಿ ಮಗುವಿಗೆ `ಮಿಶಾ’ ಎಂದು ಹೆಸರಿಟ್ಟಿದ್ದಾರೆ.

    ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ `ಪದ್ಮಾವತಿ’ ಸಿನಿಮಾದಲ್ಲಿ ಶಾಹಿದ್ ನಟಿಸುತ್ತಿದ್ದು, ರಾಣಿ ಪದ್ಮಾವತಿ ಪಾತ್ರದಲ್ಲಿ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಬಣ್ಣ ಹಚ್ಚಿದ್ದಾರೆ. ಇಲ್ಲಿ ಪದ್ಮಾವತಿಯ ಪತಿ ರಾಣಾ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಾಣಿಸಿಕೊಂಡಿದ್ದಾರೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಬಣ್ಣ ಹಚ್ಚಿದ್ದಾರೆ.

     

    https://www.instagram.com/p/BU2HgEIAxPL/?taken-by=shahidkapoor

    https://www.instagram.com/p/BRLqRxIggeE/?taken-by=shahidkapoor

    https://www.instagram.com/p/BUwKiQjgFO0/?taken-by=shahidkapoor

    https://www.instagram.com/p/BTViH4ogfZN/?taken-by=shahidkapoor

    https://www.instagram.com/p/BTvZXJsgLXG/?taken-by=shahidkapoor

    https://www.instagram.com/p/BTiesQHApfC/?taken-by=shahidkapoor