Tag: meera jasmine

  • ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ‘ಅರಸು’ ನಟಿ- ತೆಲುಗಿಗೆ ಮೀರಾ ಜಾಸ್ಮಿನ್ ಕಮ್‌‌ ಬ್ಯಾಕ್

    ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ‘ಅರಸು’ ನಟಿ- ತೆಲುಗಿಗೆ ಮೀರಾ ಜಾಸ್ಮಿನ್ ಕಮ್‌‌ ಬ್ಯಾಕ್

    ನ್ನಡದ ಮೌರ್ಯ, ಅರಸು, ಹೂ ಸಿನಿಮಾಗಳು ಮೂಲಕ ಮೋಡಿ ಮಾಡಿದ ಬಹುಭಾಷಾ ನಟಿ ಮೀರಾ ಜಾಸ್ಮಿನ್ (Meera Jasmine) ಇದೀಗ ಹಲವು ವರ್ಷಗಳ ನಂತರ ತೆಲುಗಿಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಹೊಸ ಸಿನಿಮಾದಲ್ಲಿ ಮಹಾರಾಣಿಯಂತೆ ಮೀರಾ ಕಂಗೊಳಿಸಿದ್ದಾರೆ. ಸಿನಿಮಾದ ಪೋಸ್ಟರ್ ಕೂಡ ಇದೀಗ ರಿಲೀಸ್ ಆಗಿದೆ.

    ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದ ನಟಿ ಸಿನಿಮಾದಿಂದ ದೂರಾಗಿದ್ದರು. ಕಳೆದ ಎರಡ್ಮೂರು ವರ್ಷಗಳಿಂದ ಸಿನಿಮಾದಲ್ಲಿ ನಟಿ ಆ್ಯಕ್ಟೀವ್ ಆಗಿದ್ದಾರೆ. ಹಲವು ವರ್ಷಗಳ ಬಳಿಕ ಮತ್ತೆ ಟಾಲಿವುಡ್‌ಗೆ ಮೀರಾ ಕಮ್‌ ಬ್ಯಾಕ್‌ ಆಗಿದ್ದು, ಒಂದೊಳ್ಳೆ ಸಿನಿಮಾ ಟೀಮ್‌ ಜೊತೆ ನಟಿ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಸಾಮಾನ್ಯರಂತೆ ರೋಡ್ ಸೈಡ್‌ನಲ್ಲಿ ಸ್ನೇಹಿತರ ಜೊತೆ ಚಾಟ್ಸ್ ಸವಿದ ಧ್ರುವ ಸರ್ಜಾ

     

    View this post on Instagram

     

    A post shared by Meera Jasmine (@meerajasmine)

    ತೆಲುಗಿನ ಹೀರೋ ಶ್ರೀವಿಷ್ಣು ಜೊತೆ ಮೀರಾ ಎಂಟ್ರಿ ಕೊಟ್ಟಿದ್ದಾರೆ. ‘ಸ್ವಾಗ್’ (Swag Film) ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ರಾಣಿ ಉತ್ಪಲಾ ದೇವಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಸದ್ಯ ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಈ ಪೋಸ್ಟರ್‌ನಲ್ಲಿ ‘ಅರಸು’ ನಟಿ ಕಂಗೊಳಿಸಿದ್ದಾರೆ.

    ಟಾಲಿವುಡ್‌ನಲ್ಲಿ ಪವನ್‌ ಕಲ್ಯಾಣ್‌, ರವಿ ತೇಜ, ಬಾಲಯ್ಯ, ಜೊತೆ ಮೀರಾ ದಶಕಗಳ ಹಿಂದೆ ನಟಿಸಿದ್ದರು. ಈಗ ಮತ್ತೆ ರೀ ಎಂಟ್ರಿ ಕೊಟ್ಟಿರುವ ಮೀರಾರನ್ನು ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ. ಪ್ರಸ್ತುತ ತಮಿಳಿನ ‘ದಿ ಟೆಸ್ಟ್’ ಮತ್ತು ತೆಲುಗಿನ ‘ಸ್ವಾಗ್’ ಸಿನಿಮಾಗಳು ನಟಿಯ ಕೈಯಲ್ಲಿವೆ.

  • ನಟಿ ಮೀರಾ ಜಾಸ್ಮಿನ್ ತಂದೆ ನಿಧನ

    ನಟಿ ಮೀರಾ ಜಾಸ್ಮಿನ್ ತಂದೆ ನಿಧನ

    ನ್ನಡದಲ್ಲಿ ಮೌರ್ಯ, ಅರಸು ಸೇರಿದಂತೆ ಹಲವಾರು ಚಿತ್ರಗಳನ್ನು ಮಾಡಿರುವ ನಟಿ ಮೀರಾ ಜಾಸ್ಮಿನ್ (Meera Jasmine) ಅವರ ತಂದೆ ನಿಧನರಾಗಿದ್ದಾರೆ (Passed away). ಈ ವಿಷಯವನ್ನು ನಟಿಯೇ ಸೋಷಿಯಲ್ ಮೀಡಿಯಾ ಮೂಲಕ ಖಚಿತ ಪಡಿಸಿದ್ದಾರೆ.

    ಮೀರಾ ತಂದೆ ಜೋಸೆಫ್ ಫಿಲಿಪ್ (Joseph Philip) ಅವರಿಗೆ 83 ವರ್ಷ ವಯಸ್ಸಾಗಿತ್ತು. ಕೇರಳದ ಎರ್ನಾಕುಲಂ ನಲ್ಲಿ ನಿಧನರಾಗಿದ್ದಾರೆ ಎಂದು ಫೋಟೋ ಸಮೇತ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು.

     

    ಮೀರಾ ಜಾಸ್ಮಿನ್ ಸಿನಿಮಾ ರಂಗಕ್ಕೆ ಬರುವುದಕ್ಕೆ ಮತ್ತು ಅವರ ಬೆಳವಣಿಗೆ ಹಿಂದೆ ತಂದೆಯ ಬಲವಾದ ಒತ್ತಾಸೆ ಇತ್ತು ಎನ್ನುವುದನ್ನು ಈ ಮೂಲಕ ಅವರು ಹೇಳಿದ್ದಾರೆ.

  • ಅಭಿಮಾನಿಗಳಿಗೆ ಬಿಗ್ ಅಪ್‌ಡೇಟ್ ಕೊಟ್ಟ `ಮೌರ್ಯ’ ನಾಯಕಿ ಮೀರಾ ಜಾಸ್ಮಿನ್

    ಅಭಿಮಾನಿಗಳಿಗೆ ಬಿಗ್ ಅಪ್‌ಡೇಟ್ ಕೊಟ್ಟ `ಮೌರ್ಯ’ ನಾಯಕಿ ಮೀರಾ ಜಾಸ್ಮಿನ್

    ಹುಭಾಷಾ ನಟಿ ಮೀರಾ ಜಾಸ್ಮಿನ್ (Meera Jasmine) ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ನಟಿ ಗುಡ್ ನ್ಯೂಸ್ ನೀಡಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಸುಳಿವು ನೀಡುವ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಹೃದಯಂ’ ಚಿತ್ರದ ನಟಿ ಕಲ್ಯಾಣಿ ಸಹೋದರ ಸಿದ್ಧಾರ್ಥ್

     

    View this post on Instagram

     

    A post shared by Meera Jasmine (@meerajasmine)

    ಕನ್ನಡದ ಮೌರ್ಯ (Mourya), ಅರಸು (Arasu)ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗುವ ಗಮನ ಸೆಳೆದ ನಟಿ ಮೀರಾ ಜಾಸ್ಮಿನ್ ಮತ್ತೆ ಸುದ್ದಿಯಲ್ಲಿದ್ದಾರೆ. ವೈಯಕ್ತಿಕ ಜೀವನ ಅಂತಾ ಬ್ಯುಸಿಯಿದ್ದ ನಟಿ ಈಗ 10 ವರ್ಷಗಳ ನಂತರ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಈಗ ನಟಿ ಮತ್ತಷ್ಟು ಫಿಟ್ ಮತ್ತು ಗ್ಲ್ಯಾಮರಸ್  ಆಗಿ ಹೊಸ ಬಗೆಯ ಫೋಟೋಗಳ ಮೂಲಕ ಆಗಾಗ ಮಿಂಚ್ತಿರುತ್ತಾರೆ.

    ಸಿನಿಮಾದಲ್ಲಿ ಮತ್ತಷ್ಟು ಆಕ್ಟೀವ್ ಆಗಲು ನಿರ್ಧರಿಸಿದ್ದಾರೆ. 2022ರಲ್ಲಿ ಮಲಯಾಳಂನ `ಮಕಲ್’ ಚಿತ್ರದ ಮೂಲಕ ಜಯರಾಮ್‌ಗೆ ನಾಯಕಿಯಾಗಿ ನಟಿಸಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಡಬ್ಬಿಂಗ್‌ನಲ್ಲಿ ತೊಡಗಿರುವ ಫೋಟೋ ಶೇರ್ ಮಾಡಿ ಹೊಸ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ.

     

    View this post on Instagram

     

    A post shared by Meera Jasmine (@meerajasmine)

    ಸದ್ಯ ರಾಮ್-ಬೋಪಪತಿ ಶ್ರೀನು ಕಾಂಬಿನೇಷನ್ ಸಿನಿಮಾದಲ್ಲಿ ನಟಿ ಮೀರಾ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಿ ನಟಿ ಮೀರಾ ಜಾಸ್ಮಿನ್ ಇನ್ ಸ್ಟಾಗ್ರಾಮ್ ನಲ್ಲಿ ಹಾಟ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಸದಾ ಸಾಂಪ್ರದಾಯಿಕ ಉಡುಗಿಯಲ್ಲೇ ಕಾಣಿಸಿಕೊಳ್ಳುತ್ತಿದ್ದ ಈ ನಟಿ, ದಿಢೀರ್ ಅಂತ ಅಂತ ಆ ವಿಡಿಯೋ ಹಾಕಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ : ಮಾರ್ಚ್ 14ಕ್ಕೆ ಆರ್.ಆರ್.ಆರ್ ‘ಎತ್ತುವ ಜಂಡಾ’ ಸಾಂಗ್ ರಿಲೀಸ್

    ಕನ್ನಡದಲ್ಲಿ ಪುನೀತ್, ಶಿವರಾಜ್ ಕುಮಾರ್, ರವಿಚಂದ್ರನ್ ಸೇರಿದಂತೆ ಹಲವು ನಟರೊಂದಿಗೆ ತೆರೆ ಹಂಚಿಕೊಂಡಿರುವ ಮೀರಾ ಜಾಸ್ಮಿನ್, ಕನ್ನಡ ಸಿನಿಮಾ ರಂಗದಲ್ಲಿ ‘ದೇವರು ಕೊಟ್ಟ ತಂಗಿ’ ಎಂದೇ ಫೇಮಸ್. ಓ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ತಂಗಿಯಾಗಿ ಮೀರಾ ನಟಿಸಿದ್ದರು. ಕನ್ನಡಿಗರ ಮನದಲ್ಲಿ ತಂಗಿಯಾಗಿಯೇ ಭಾವನಾತ್ಮಕವಾಗಿ ಬೆರೆತು ಹೋಗಿದ್ದರು. ಇದೀಗ ಮೀರಾ ಬದಲಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ

     

    View this post on Instagram

     

    A post shared by Meera Jasmine (@meera_jasminn)

    ಸೋಷಿಯಲ್ ಮೀಡಿಯಾದಿಂದ ಸದಾ ದೂರ ಇರುತ್ತಿದ್ದ ಮತ್ತು ಅವರು ದಪ್ಪ ಆಗಿದ್ದನ್ನು ಟ್ರೋಲ್ ಮಾಡಿದ್ದ ಕಾರಣದಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದರು. ಇತ್ತೀಚೆಗಷ್ಟೇ ಇನ್ ಸ್ಟಾಗ್ರಾಮ್ ಪೇಜ್ ತೆರೆದು, ಅಭಿಮಾನಿಗಳ ಜತೆ ಸಂವಾದ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ದಿನಕ್ಕೊಂದು ಫೋಟೋ ಮತ್ತು ನೆನಪಿನ ಮಾತುಗಳನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿದ್ದರು. ಏಕಾಏಕಿ ಎದೆ ಸೀಳು ಕಾಣುವಂತಹ ವಿಡಿಯೋ ಹಾಕಿ, ಅಭಿಮಾನಿಗಳ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ : ಸೋಲೊ ಟ್ರಿಪ್ ನಲ್ಲಿ ಪ್ಯಾರ್ಗೆ ಹುಡುಗಿ ಪಾರುಲ್ ಯಾದವ್

    ಮೀರಾ ಜಾಸ್ಮೀನ್ ಅವರ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ರಾಶಿ ರಾಶಿ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ಅಭಿಮಾನಿಗಳ ಸಂದೇಶಕ್ಕೆ ಸ್ವತಃ ಮೀರಾ ಬೆಚ್ಚಿ ಬಿದ್ದಿದ್ದಾರೆ.

  • 40ರ ಹರೆಯದಲ್ಲೂ ಬೋಲ್ಡ್ ಫೋಟೋಶೂಟ್- ಮೀರಾ ಜಾಸ್ಮಿನ್ ಲುಕ್‍ಗೆ ಅಭಿಮಾನಿಗಳು ಫಿದಾ

    40ರ ಹರೆಯದಲ್ಲೂ ಬೋಲ್ಡ್ ಫೋಟೋಶೂಟ್- ಮೀರಾ ಜಾಸ್ಮಿನ್ ಲುಕ್‍ಗೆ ಅಭಿಮಾನಿಗಳು ಫಿದಾ

    ಬೆಂಗಳೂರು: ನಟಿ ಮೀರಾ ಜಾಸ್ಮಿನ್ ಬೋಲ್ಡ್ ಆಗಿ ಪೋಸ್ ಕೊಟ್ಟು ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

    ಮಲಯಾಳಂ, ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ ಮೀರಾ ಮೀರಾ ಜಾಸ್ಮಿನ್‌ಗೆ ಇಂದು (ಫ.15) ಜನ್ಮದಿನದ ಸಂಭ್ರಮ. ಅವರಿಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಅಭಿಮಾನಿಗಳು, ಆತ್ಮೀಯರು ಶುಭಾಶಯಗಳನ್ನು ತಿಳಿಸಿದ್ದಾರೆ. ಇತ್ತಿಚೆಗಷ್ಟೇ ಇನ್‍ಸ್ಟಾಗ್ರಾಮ್‍ಗೆ ಎಂಟ್ರಿ ಕೊಟ್ಟಿರುವ ಮೀರಾ, ಹುಟ್ಟಿದ ಹಬ್ಬದ ದಿನದಂದು ವಿಶೇಷ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ.

    ಸಖತ್ ಬೋಲ್ಡ್ ಅವತಾರದಲ್ಲಿ ಅವರು ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. 40ರ ಹರೆಯದಲ್ಲೂ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಅವರ ಫೋಟೋಗಳನ್ನು ನೋಡಿ, ಫ್ಯಾನ್ಸ್ ಫಿದಾ ಆಗಿದ್ದಾರೆ. ಅಂದಹಾಗೆ, ಕಳೆದ 3-4 ವರ್ಷಗಳಿಂದ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದ ಮೀರಾ, ಈಗ ಪುನಃ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮಲಯಾಳಂ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:  ಸ್ಯಾಂಡಲ್‍ವುಡ್ ಪದ್ಮಾವತಿ ರಮ್ಯಾ ಕಮ್ ಬ್ಯಾಕ್ ಪಕ್ಕಾ

     

    View this post on Instagram

     

    A post shared by Meera Jasmine (@meerajasmine)

    2001ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಮೀರಾ ಚತುರ್ಭಾಷಾ ತಾರೆಯಾಗಿ ಮಿಂಚಿದ್ದಾರೆ. ಮೌರ್ಯ ಚಿತ್ರದ ಮೂಲಕ ಕನ್ನಡಕ್ಕೆ ಪಾದರ್ಪಣೆ ಮಾಡಿದ್ದರು. 2014ರಲ್ಲಿ ದುಬೈ ಮೂಲದ ಅನಿಲ್ ಜೊತೆಗೆ ಮೀರಾ ಮದುವೆಯಾದ ಬಳಿಕ ಮೂರ್ನಾಲ್ಕು ವರ್ಷಗಳಿಂದ ಬಣ್ಣದ ಲೋಕದಿಂದ ದೂರ ಉಳಿದಿದ್ದರು. ಮೀರಾ ಪುನಃ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಚಂದನವನದಲ್ಲಿ ಲವ್ಲಿ ವ್ಯಾಲೆಂಟೈನ್ಸ್ ಡೇ – ಅಭಿಮಾನಿಗಳೊಂದಿಗೆ ಹಂಚಿಕೊಂಡ್ರು ಸ್ಪೆಷಲ್ ಫೋಟೋ!

  • ಇನ್‍ಸ್ಟಾಗ್ರಾಮ್‍ಗೆ ಎಂಟ್ರಿಕೊಟ್ಟ ಮೀರಾ ಜಾಸ್ಮಿನ್

    ಇನ್‍ಸ್ಟಾಗ್ರಾಮ್‍ಗೆ ಎಂಟ್ರಿಕೊಟ್ಟ ಮೀರಾ ಜಾಸ್ಮಿನ್

    ಬೆಂಗಳೂರು: ಮಲಯಾಳಂ, ಸ್ಯಾಂಡಲ್‍ವುಡ್‍ನಲ್ಲಿ ಮಿಂಚಿದ ನಟಿ ಮೀರಾ ಜಾಸ್ಮಿನ್ ಇನ್‍ಸ್ಟಾಗ್ರಾಮ್‍ಗೆ ಎಂಟ್ರಿಕೊಟ್ಟ ಮೊದಲ ದಿನವೇ ಒಂದುವರೆ ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್ ಹೋಂದುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಮೀರಾ ಜಾಸ್ಮಿನ್ ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿದಿದ್ದರು. ಮದುವೆ ಬಳಿಕ ಚಿತ್ರರಂಗದಿಂದನೂ ದೂರವಾಗಿದ್ದಾರೆ. ಆದರೆ ಇದೀಗ ಮತ್ತೆ ಅಭಿಮಾನಿಗಳ ಜೊತೆಗೆ ನೇರವಾಗಿ ಸಂಪರ್ಕವನ್ನು ಸಾಧಿಸಲು ಸೋಶಿಯಲ್ ಮೀಡಿಯಾಕ್ಕೆ ಎಂಟ್ರಿಕೊಟ್ಟಿದ್ದಾರೆ. ಮೀರಾ ಜಾಸ್ಮಿನ್ ಅವರ ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ.

     

    View this post on Instagram

     

    A post shared by Meera Jasmine (@meerajasmine)

    ಇನ್‍ಸ್ಟಾಗ್ರಾಮ್ ತೆರೆದು 2 ದಿನಗಳಾಗಿವೆ. 2 ಪೋಸ್ಟ್‌ಗಳನ್ನು  ಕೂಡಾ ಹಂಚಿಕೊಂಡಿದ್ದಾರೆ. ಮೊದಲ ಪೋಸ್ಟ್‌ನಲ್ಲಿ ಸೀರೆಯುಟ್ಟ ಫೋಟೋವನ್ನು ಹಂಚಿಕೊಂಡಿದ್ದು, ನಾವು ಯಾವಾಗಲೂ ಪ್ರಾರಂಭವನ್ನು ಘೋಷಿಸೋಣ, ನಮ್ಮೆಲ್ಲರನ್ನೂ ಒಬ್ಬರಿಗೊಬ್ಬರು ಹತ್ತಿರವಾಗಿಸುವ ಈ ಹೆಜ್ಜೆಯನ್ನು ಇಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇನ್ನೋಂದು ಪೋಸ್ಟ್‌ನಲ್ಲಿ ಡಾನ್ಸ್ ಮಾಡುತ್ತಿರುವ ವೀಡಿಯೋ ಶೇರ್ ಮಾಡಿಕೊಂಡು ನನಗೆ ನಿಮ್ಮ ಅಮೂಲ್ಯವಾದ ಸಮಯವನ್ನು ನೀಡಿದ್ದೀರಾ ಕೃತಜ್ಞತೆ ಎಂದು ಬರೆದಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನಾಡುತ್ತಾ ಕಾಮೆಂಟ್ ಮಾಡುತ್ತಿದ್ದಾರೆ.

     

    View this post on Instagram

     

    A post shared by Meera Jasmine (@meerajasmine)

    ಮೀರಾ ಜಾಸ್ಮಿನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಖಾತೆ ತೆರೆದ ಮೂರೇ ದಿನಕ್ಕೆ ಒಂದುವರೆ ಲಕ್ಷಕ್ಕೂ ಅಧಿಕ ಮಂದಿ ಅಭಿಮಾನಿಗಳು ಇವರನ್ನು ಫಾಲೋ ಮಡುತ್ತಿದ್ದಾರೆ. 131 ಮಂದಿಯನ್ನು ಮೀರಾ ಫಾಲೋ ಮಾಡುತ್ತಿದ್ದಾರೆ. ಇದನ್ನೂ ಓದಿ:  ಕೆಜಿಎಫ್ ಸಿನಿಮಾದ ಹಾಡಿಗೆ ಕಿಲಿ ಪೌಲ್ ಮಸ್ತ್ ಸ್ಟೆಪ್ಸ್

    2016ರಲ್ಲೇ ಸಿನಿಮಾ ಕ್ಷೇತ್ರದಿಂದ ದೂರವಾಗಿದ್ದ ನಟಿ ಕೆಲವು ವೈಯಕ್ತಿಕ ಸಮಸ್ಯೆಯಿಂದಾಗಿ ಪತಿಯಿಂದ ದೂರವಾಗಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾಕ್ಕೆ ಎಂಟ್ರಿ ಕೊಡುವ ಮೂಲಕವಾಗಿ ಮತ್ತೆ ತೆರೆ ಮೇಲೆ ಬರುತ್ತಾರೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಇದನ್ನೂ ಓದಿ: ‘ತೋತಾಪುರಿ’ ಚಿತ್ರತಂಡದಿಂದ ಪ್ರೇಕ್ಷಕರಿಗೆ ಸಿಕ್ತು ಸಿಹಿಸುದ್ದಿ- ಜನವರಿ 24ಕ್ಕೆ ಆಡಿಯೋ ಟೀಸರ್ ರಿಲೀಸ್