Tag: meera

  • ಆತ್ಮಹತ್ಯೆಗೆ ಶರಣಾದ ಮಗಳ ಬಗ್ಗೆ ಭಾವುಕ ಪತ್ರ ಬರೆದ ನಟ ವಿಜಯ್

    ಆತ್ಮಹತ್ಯೆಗೆ ಶರಣಾದ ಮಗಳ ಬಗ್ಗೆ ಭಾವುಕ ಪತ್ರ ಬರೆದ ನಟ ವಿಜಯ್

    ರಡ್ಮೂರು ದಿನಗಳ ಹಿಂದೆಯಷ್ಟೇ ಮಗಳನ್ನು ಕಳೆದುಕೊಂಡಿರುವ ನಟ ವಿಜಯ್ ಆಂಥೋನಿ ಭಾವುಕ ಪತ್ರವೊಂದನ್ನು (Letter) ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅದನ್ನು ಶೇರ್ ಮಾಡಿದ್ದು, ಮಗಳನ್ನು ತಾವು ಎಷ್ಟು ಇಷ್ಟಪಡುತ್ತಿದ್ದರು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಮಗಳು ಮೀರಾ ಸತ್ತ ದಿನವೇ ನಾನೂ ಕೂಡ ನನ್ನೊಳಗೆ ಸುತ್ತು ಹೋಗಿದ್ದೇನೆ ಎಂದು ಕಂಬನಿ ಮಿಡಿದಿದ್ದಾರೆ.

    ನನ್ನ ಮಗಳು ಮೀರಾ ಧೈರ್ಯಶಾಲಿ, ಕರುಣಾಮಯಿ. ಹಣ, ಅಸೂಯೆ, ಜಾತಿ, ಧರ್ಮಗಳೇ ಇಲ್ಲದ ಪ್ರಶಾಂತ ಸ್ಥಳಕ್ಕೆ ಆಕೆ ಹೋಗಿದ್ದಾಳೆ. ಇನ್ನೂ ಆಕೆ ನನ್ನೊಂದಿಗೆ ಮಾತನಾಡುತ್ತಾಳೆ. ನನ್ನ ಯಾವುದೇ ಶುಭ ಕಾರ್ಯಗಳು ಇದ್ದರೂ, ಆಕೆಗೆ ಅರ್ಪಿಸುವ ಮೂಲಕ ಕೆಲಸ ಶುರು ಮಾಡುತ್ತೇನೆ. ನನ್ನ ಜೊತೆ ಆಕೆ ಯಾವತ್ತಿಗೂ ಇರುತ್ತಾಳೆ’ ಎಂದು ವಿಜಯ್ ಬರೆದುಕೊಂಡಿದ್ದಾರೆ.

    ನಟ, ನಿರ್ಮಾಪಕ, ಸಂಗೀತ ನಿರ್ದೇಶಕ ವಿಜಯ್ ಆಂಟೋನಿ (Vijay Antony) ಪುತ್ರಿ ಮೀರಾ (Meera) ಮೊನ್ನೆಯಷ್ಟೇ ಬೆಳಗ್ಗೆ ಆತ್ಮಹತ್ಯೆಗೆ (Suicide) ಶರಣಾಗಿದ್ದರು. ಹನ್ನೆರಡನೇ ತರಗತಿ ಓದುತ್ತಿದ್ದ ಮೀರಾ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರು ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದ್ದರು. 16ರ ವಯಸ್ಸಿನ ಮೀರಾ ಬೆಳಗ್ಗೆ ತಮ್ಮ ಮಲಗುವ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದರು.

    ಬೆಳಗ್ಗೆ ಆಕೆಯ ಕೋಣೆಯ ಬಾಗಿಲು ತುಂಬಾ ಹೊತ್ತಾದರೂ ತೆರೆಯದೇ ಇರುವ ಕಾರಣಕ್ಕಾಗಿ, ಬಾಗಿಲು ತೆರೆದು ನೋಡಿದಾಗ, ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೀರಾ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಷ್ಟರಲ್ಲಿ ಮೀರಾ ಪ್ರಾಣಬಿಟ್ಟಿದ್ದರು.

    ಶಾಲೆಯಲ್ಲಿ ಉತ್ತಮ ಅಂಕಗಳನ್ನೇ ಪಡೆಯುತ್ತಿದ್ದ ಮೀರಾ, ಮಾನಸಿಕ ಖಿನ್ನತೆಗೆ ಜಾರುವುದಕ್ಕೆ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ವಿಜಯ್ ಆಂಟೋನಿ ಮತ್ತು ಫಾತಿಮಾ ದಂಪತಿಯ ಮೊದಲ ಮಗು ಮೀರಾ. ಈ ದಂಪತಿಗೆ ಮತ್ತೊಬ್ಬ ಮಗನಿದ್ದಾನೆ. ವಿಜಯ್ ಆಂಟೋನಿ ತಮಿಳು ಚಿತ್ರರಂಗದಲ್ಲಿ ನಟ, ಸಂಗೀತ ನಿರ್ದೇಶಕ, ನಿರ್ಮಾಪಕರಾಗಿ ಪ್ರಸಿದ್ಧಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖ್ಯಾತ ನಟ ವಿಜಯ್ ಪುತ್ರಿ ಮೀರಾ ಆತ್ಮಹತ್ಯೆಗೆ ಶರಣು

    ಖ್ಯಾತ ನಟ ವಿಜಯ್ ಪುತ್ರಿ ಮೀರಾ ಆತ್ಮಹತ್ಯೆಗೆ ಶರಣು

    ಟ, ನಿರ್ಮಾಪಕ, ಸಂಗೀತ ನಿರ್ದೇಶಕ ವಿಜಯ್ ಆಂಟೋನಿ (Vijay Antony) ಪುತ್ರಿ ಮೀರಾ (Meera) ಇಂದು ಬೆಳಗ್ಗೆ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಹನ್ನೆರಡನೇ ತರಗತಿ ಓದುತ್ತಿದ್ದ ಮೀರಾ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರು ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದ್ದರು. 16ರ ವಯಸ್ಸಿನ ಮೀರಾ ಬೆಳಗ್ಗೆ ತಮ್ಮ ಮಲಗುವ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

    ಬೆಳಗ್ಗೆ ಆಕೆಯ ಕೋಣೆಯ ಬಾಗಿಲು ತುಂಬಾ ಹೊತ್ತಾದರೂ ತೆರೆಯದೇ ಇರುವ ಕಾರಣಕ್ಕಾಗಿ, ಬಾಗಿಲು ತೆರೆದು ನೋಡಿದಾಗ, ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೀರಾ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಷ್ಟರಲ್ಲಿ ಮೀರಾ ಪ್ರಾಣಬಿಟ್ಟಿದ್ದರು.

    ಶಾಲೆಯಲ್ಲಿ ಉತ್ತಮ ಅಂಕಗಳನ್ನೇ ಪಡೆಯುತ್ತಿದ್ದ ಮೀರಾ, ಮಾನಸಿಕ ಖಿನ್ನತೆಗೆ ಜಾರುವುದಕ್ಕೆ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ವಿಜಯ್ ಆಂಟೋನಿ ಮತ್ತು ಫಾತಿಮಾ ದಂಪತಿಯ ಮೊದಲ ಮಗು ಮೀರಾ. ಈ ದಂಪತಿಗೆ ಮತ್ತೊಬ್ಬ ಮಗನಿದ್ದಾನೆ. ವಿಜಯ್ ಆಂಟೋನಿ ತಮಿಳು ಚಿತ್ರರಂಗದಲ್ಲಿ ನಟ, ಸಂಗೀತ ನಿರ್ದೇಶಕ, ನಿರ್ಮಾಪಕರಾಗಿ ಪ್ರಸಿದ್ಧಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಚ್ಚರಂತೆ ಯಾಕೆ ಕೂಗುತ್ತಿದ್ದೀರಾ? ಪಾಪರಾಜಿಗಳಿಗೆ ಶಾಹಿದ್ ಕಪೂರ್ ಕ್ಲಾಸ್

    ಹುಚ್ಚರಂತೆ ಯಾಕೆ ಕೂಗುತ್ತಿದ್ದೀರಾ? ಪಾಪರಾಜಿಗಳಿಗೆ ಶಾಹಿದ್ ಕಪೂರ್ ಕ್ಲಾಸ್

    ಬಾಲಿವುಡ್ ನಟ ಶಾಹಿದ್ ಕಪೂರ್ (Shahid Kapoor) ಈಗ ಸಿನಿಮಾ ವಿಚಾರದ ಬದಲಾಗಿ ಕಿರಿಕ್ ಸುದ್ದಿ ಮೂಲಕ ಸದ್ದು ಮಾಡ್ತಿದ್ದಾರೆ. ಕಾರ್ಯಕ್ರಮವೊಂದಕ್ಕೆ ಪತ್ನಿ ಮೀರಾ (Meera) ಜೊತೆ ಶಾಹಿದ್ ಆಗಮಿಸುತ್ತಿದ್ದ ವೇಳೆ ಪಾಪರಾಜಿಗಳ ವರ್ತನೆಗೆ ನಟ ಸಿಡಿದೆದ್ದಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

    ಶಾಹಿದ್ ಕಪೂರ್ (Shahid Kapoor) ಸ್ಟಾರ್‌ಡಮ್ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಬಹಳಷ್ಟು ಪಾಪರಾಜಿಗಳು ಯಾವಾಗಲೂ ಅವರ ಹಿಂದೆ ಇರುತ್ತಾರೆ. ನಿನ್ನೆ (ಸೆ.2) ಕೂಡ ಶಾಹಿದ್ ಕಪೂರ್ ಅವರು ಪೋಸ್ ನೋಡುವಂತೆ ಅನೇಕ ಪಾಪರಾಜಿಗಳು ಹೆಸರಿಡಿದು ಕೂಗಿದ್ದಾರೆ. ಇದಕ್ಕೆ ಅಲ್ಲೇ ನಿಂತಿದ್ದ ನಟ ಕೋಪಗೊಂಡಿದ್ದಾರೆ. ಇದನ್ನೂ ಓದಿ:ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ಚಿನ್ನು-ಗೊಂಬೆ

    View this post on Instagram

    A post shared by Varinder Chawla (@varindertchawla)

    ತಮ್ಮ ಪತ್ನಿ ಮೀರಾ ರಜಪೂತ್ ಅವರೊಂದಿಗೆ ಸಮಾರಂಭವೊಂದರಲ್ಲಿ ಭಾಗವಹಿಸಲು ಶಾಹಿದ್ ಹೊರಗೆ ಹೋಗಿದ್ದರು. ಈ ವೇಳೆ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ನೀವು ಯಾಕೆ ಕೂಗುತ್ತಿದ್ದೀರಿ? ನಾನು ಇಲ್ಲಿಯೇ ಇದ್ದೇನೆ. ನೀವು ಹುಚ್ಚನಂತೆ ಏಕೆ ಕೂಗುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದರು. ನಾನು ನನ್ನ ಕಾರಿನಲ್ಲಿ ಇಲ್ಲಿಂದ ತೆರಳಿದ ನಂತರ ನೀವು ಕೂಗಬಹುದು. ಅದರಲ್ಲಿ ಅರ್ಥವಿದೆ. ನಾನು ಇಲ್ಲಿಯೇ ಇದ್ದರೂ ಯಾಕೆ ಹಿಂಗೆ ಕೂಗುತ್ತಿದ್ದಿರಿ? ಎಂದು ತುಂಬಾ ಕೋಪದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಅವರ ಜೊತೆಗೆ ಅವರ ತಾಯಿ ಮತ್ತು ಪತ್ನಿ ಇದ್ದರು.

    ಶಾಹಿದ್ ಕಪೂರ್ ‘ಡಬಲ್ ಟ್ರಬಲ್’ (Double Trouble) ಎಂಬ ಸಿನಿಮಾದಲ್ಲಿ ನಟಿಸಬೇಕಿತ್ತು. ಕಾರಣಾಂತರಗಳಿಂದ ಈ ಚಿತ್ರದಿಂದ ಅವರು ಹೊರಬಂದಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ(Rashmika Mandanna) ನಾಯಕಿಯಾಗಿದ್ದರು. ಸದ್ಯ ನಟ, ಕೋಯಿ ಶಕ್ ಎಂಬ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಕರೀನಾ ಕಪೂರ್ (Kareena Kapoor) ಜೊತೆಗಿನ ಹೊಸ ಸಿನಿಮಾಗೆ ಶಾಹಿದ್ ಓಕೆ ಎಂದಿದ್ದಾರೆ.