Tag: meena thoogudeepa

  • ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ದರ್ಶನ್ ತಾಯಿ

    ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ದರ್ಶನ್ ತಾಯಿ

    ಮೈಸೂರು: ಸುಪ್ರೀಂ ಕೋರ್ಟ್‌ನಲ್ಲಿ ಇಂದು (ಬುಧವಾರ) ದರ್ಶನ್ (Darshan) ಜಾಮೀನು ರದ್ದು ಅರ್ಜಿ ವಿಚಾರಣೆ ಹಿನ್ನೆಲೆ ದರ್ಶನ್ ತಾಯಿ ಮೀನಾ ತೂಗುದೀಪ (Meena Thoogudeepa) ದೇವರ ಮೊರೆ ಹೋಗಿದ್ದಾರೆ.

    ನಂಜನಗೂಡಿನ (Nanjangud) ನಂಜುಂಡೇಶ್ವರನಿಗೆ ಮೀನಾ ತೂಗುದೀಪ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ| ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಮೂವರು ದುರ್ಮರಣ

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಗ್ಯಾಂಗ್‌ಗೆ ಕರ್ನಾಟಕ ಹೈಕೋರ್ಟ್ ಬೇಲ್ ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಹಿನ್ನೆಲೆ ಇಂದು ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದೇ ವೇಳೆ ದರ್ಶನ್ ತಾಯಿ ಟೆಂಪಲ್ ರನ್ ಮಾಡಿದ್ದಾರೆ. ಇದನ್ನೂ ಓದಿ: ಗದಗ| ಬೀದಿ ನಾಯಿಗಳ ದಾಳಿ – ಮಹಿಳೆಗೆ ಗಂಭೀರ ಗಾಯ

  • ರಾಮನಗರ | ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ದರ್ಶನ್ ತಾಯಿ ಭೇಟಿ

    ರಾಮನಗರ | ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ದರ್ಶನ್ ತಾಯಿ ಭೇಟಿ

    – ಸಂಕಷ್ಟ ನಿವಾರಣೆಗೆ ಚಾಮುಂಡೇಶ್ವರಿ ಮೊರೆಹೋದ ಮೀನಾ ತೂಗುದೀಪ

    ರಾಮನಗರ: ಗೌಡಗೆರೆ (Goudagere) ಚಾಮುಂಡೇಶ್ವರಿ ದೇವಾಲಯಕ್ಕೆ ನಟ ದರ್ಶನ್ ತಾಯಿ ಮೀನಾ ತೂಗುದೀಪ (Meena Thoogudeepa) ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಚನ್ನಪಟ್ಟಣ (Channapatna) ತಾಲೂಕಿನ ಗೌಡಗೆರೆ ಗ್ರಾಮದಲ್ಲಿರುವ ಪ್ರಸಿದ್ಧ 60 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹದ ದೇವಾಲಯದಲ್ಲಿ ಮೀನಾ ತೂಗುದೀಪ ಪವಾಡ ಬಸಪ್ಪನ ಆಶೀರ್ವಾದ ಪಡೆದಿದ್ದಾರೆ. ಮಗನ ಸಂಕಷ್ಟಗಳನ್ನ ನಿವಾರಣೆ ಮಾಡುವಂತೆ ಪವಾಡ ಬಸಪ್ಪನ ಬಳಿ ಪ್ರಾರ್ಥನೆ ಮಾಡಿದ ಮೀನಾ ತೂಗುದೀಪಗೆ ಪವಾಡ ಬಸಪ್ಪ ತನ್ನ ಬಲಗಾಲನ್ನು ಕೊಟ್ಟು ಆಶೀರ್ವಾದ ಮಾಡಿದೆ. ಇದನ್ನೂ ಓದಿ: ಹಾವೇರಿ | ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

    ಇನ್ನೂ ಮೀನಾಗೆ ದೇವಾಲಯ ಆಡಳಿತ ಮಂಡಳಿಯಿಂದ ಗೌರವ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಮೀನಾ, ಈ ಕ್ಷೇತ್ರದಲ್ಲಿ ಚಾಮುಂಡೇಶ್ವರಿ ನೆಲೆಸಿದ್ದಾಳೆ. ಇಲ್ಲಿ ಎಲ್ಲಾ ಕಡೆ ಪಾಸಿಟಿವ್ ಎನರ್ಜಿ ಇದೆ. ಹಾಗಾಗಿ ಬಂದು ದರ್ಶನ ಪಡೆದಿದ್ದೇನೆ. ಇಲ್ಲಿಗೆ ಬರುವ ಎಲ್ಲಾ ಭಕ್ತರಿಗೂ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: 8 ದಿನಗಳಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ – ಲಕ್ಷ್ಮಿ ಹೆಬ್ಬಾಳ್ಕರ್‌ ಭರವಸೆ

  • ಮಗನನ್ನು ನೋಡಲು ವಿಜಯಲಕ್ಷ್ಮಿ ಮನೆಗೆ ಆಗಮಿಸಿದ ಮೀನಾ ತೂಗುದೀಪ

    ಮಗನನ್ನು ನೋಡಲು ವಿಜಯಲಕ್ಷ್ಮಿ ಮನೆಗೆ ಆಗಮಿಸಿದ ಮೀನಾ ತೂಗುದೀಪ

    ಕೊಲೆ ಪ್ರಕರಣ ಸಂಬಂಧ ಅ.30ರಂದು ದರ್ಶನ್‌ಗೆ (Darshan) 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆ ರಿಲೀಸ್ ಆಗಿದ್ದಾರೆ. 5 ತಿಂಗಳ ಜೈಲುವಾಸದ ಬಳಿಕ ಮನೆಗೆ ಬಂದಿರುವ ಮಗನನ್ನು ನೋಡಲು ಮೀನಾ ತೂಗುದೀಪ (Meena Thoogudeepa) ಆಗಮಿಸಿದ್ದಾರೆ. ಇದನ್ನೂ ಓದಿ:1 ವರ್ಷದಿಂದ ನಾನು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದೇನೆ- ಶ್ರೀದೇವಿ ಭೈರಪ್ಪ

    ವಿಜಯಲಕ್ಷ್ಮಿ (Vijayalakshmi) ನೆಲೆಸಿರುವ ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ಗೆ ಮೊಮ್ಮಗ ಚಂದನ್ ಜೊತೆ ಮಗನನ್ನು ನೋಡಲು ಆಗಮಿಸಿದ್ದಾರೆ. ದೀಪಾವಳಿ ಹಬ್ಬ, ಮೊಮ್ಮಗ ವಿನೀಶ್ ಹುಟ್ಟುಹಬ್ಬವನ್ನು ಆಚರಿಸುವುದರ ಜೊತೆಗೆ ಮಗ ದರ್ಶನ್‌ನನ್ನು ನೋಡಿ ಮೀನಾ ಖುಷಿಪಟ್ಟಿದ್ದಾರೆ. ಇದೇ ವೇಳೆ, ಅಪಾರ್ಟ್‌ಮೆಂಟ್‌ ಬಳಿ ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಫ್ಯಾನ್ಸ್ ಜಮಾಯಿಸಿದ್ದಾರೆ.

    ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11ರಂದು ಆರೋಪಿ ದರ್ಶನ್‌ಗೆ ನ್ಯಾಯಾಂಗ ಬಂಧನವಾಗಿತ್ತು.

  • ದರ್ಶನ್ ನೋಡಲು ಬಳ್ಳಾರಿ ಜೈಲಿಗೆ ಬಂದ ತಾಯಿ ಮೀನಾ ತೂಗುದೀಪ

    ದರ್ಶನ್ ನೋಡಲು ಬಳ್ಳಾರಿ ಜೈಲಿಗೆ ಬಂದ ತಾಯಿ ಮೀನಾ ತೂಗುದೀಪ

    ಕೊಲೆ ಕೇಸ್‌ನಲ್ಲಿ (Renukaswamy Murder Case) ಅರೆಸ್ಟ್ ಆಗಿರುವ ದರ್ಶನ್ (Darshan) ನೋಡಲು ತಾಯಿ ಮೀನಾ ತೂಗುದೀಪ (Meena Thoogudeepa) ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾರೆ. ಮಗಳ ಜೊತೆ ಮೀನಾ ಜೈಲಿಗೆ ಆಗಮಿಸಿದ್ದಾರೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ಗೆದ್ದ ಕೋಡಳ್ಳಿ ಶಿವರಾಮ್ ವಿಧಿವಶ

    ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರ ದರ್ಶನ್ ನೋಡಲು ಮೀನಾ ಬಂದಿರಲಿಲ್ಲ. ಇದೀಗ ದರ್ಶನ್ ತಾಯಿ, ಸಹೋದರಿ ದಿವ್ಯಾ, ಬಾವ ಮಂಜುನಾಥ ಹಾಗೂ ಅಕ್ಕನ ಮಕ್ಕಳು ಆಗಮಿಸಿ ದರ್ಶನ್ ಕುಶಲೋಪರಿ ವಿಚಾರಿಸಿದ್ದಾರೆ. ಮಗನನ್ನು ಕಂಡೊಡನೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ತಾಯಿ ಮೀನಾ ಹಾಗೂ ಸಹೋದರಿ.

    ಇನ್ನೂ ಸೆ.17ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್ ಗೌಡ ಜೈಲಿಗೆ ಭೇಟಿ ನೀಡಿದ್ದರು. ಮನೆಯ ತಿನಸುಗಳು ಮತ್ತು ಹಣ್ಣುಗಳನ್ನು ನೀಡಿ ಕಾನೂನು ಸಮರ ಬಗ್ಗೆ ಚರ್ಚಿಸಿ ಹೋಗಿದ್ದರು.

  • ಜೈಲಿಗೆ ದರ್ಶನ್ ಕುಟುಂಬ ಭೇಟಿ- ತಾಯಿಯನ್ನು ನೋಡ್ತಿದಂತೆ ನಟ ಕಣ್ಣೀರು

    ಜೈಲಿಗೆ ದರ್ಶನ್ ಕುಟುಂಬ ಭೇಟಿ- ತಾಯಿಯನ್ನು ನೋಡ್ತಿದಂತೆ ನಟ ಕಣ್ಣೀರು

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ದರ್ಶನ್‌ರನ್ನು ನೋಡಲು ತಾಯಿ ಮೀನಾ, ಪತ್ನಿ ಮತ್ತು ಮಗ ಜೈಲಿಗೆ ಭೇಟಿ ನೀಡಿದ್ದಾರೆ. ಈ ವೇಳೆ, ತಾಯಿಯನ್ನು ನೋಡಿ ದರ್ಶನ್‌ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಕೆಟ್ಟ ಕಾಮೆಂಟ್ ಮಾಡೋರನ್ನ ಬ್ಲಾಕ್ ಮಾಡಿಬಿಡಿ ಅಷ್ಟೇ: ಅದ್ವಿತಿ ಶೆಟ್ಟಿ

    ಇಂದು (ಜು.1) ಬೆಳಗ್ಗೆ ದರ್ಶನ್ ತಾಯಿ ಮೀನಾ, ತಮ್ಮ ದಿನಕರ್, ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಜೈಲಿಗೆ ಮಾಧ್ಯಮಗಳ ಕಣ್ಣು ತಪ್ಪಿಸಲು ಖಾಸಗಿ ವಾಹನದಲ್ಲಿ ಬಂದ ದರ್ಶನ್ ಕುಟುಂಬ ಜೈಲಿನ ಒಳಗೆ ಹೋಗಿ ಭೇಟಿ ಮಾಡಿದೆ. ಮಗನ ಸ್ಥಿತಿ ನೋಡ್ತಿದ್ದಂತೆ ತಾಯಿ ಮೀನಾ ತೂಗುದೀಪ್ ಭಾವುಕರಾಗಿದ್ದಾರೆ. ದರ್ಶನ್‌ಗೆ ಸಹೋದರ ದಿನಕರ್ ಧೈರ್ಯ ತುಂಬಿದ್ದಾರೆ. ಮುಂದಿನ ಕಾನೂನು ಹೋರಾಟಕ್ಕೆ ಕುಟುಂಬಸ್ಥರ ಜೊತೆ ಚರ್ಚಿಸಿದ್ದಾರೆ.

    ಇದೀಗ ಖಾಸಗಿ ವಾಹನದಲ್ಲೇ ದರ್ಶನ್ ಕುಟುಂಬ ಭೇಟಿ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಬಂಧಿಖಾನೆ ಇಲಾಖೆ ಕಾನೂನನ್ನು ಗಾಳಿಗೆ ತೂರಿ ರಾಜಾತಿಥ್ಯ ನೀಡಿದೆ. ಸಾಮಾನ್ಯರು ಜೈಲಿಗೆ ಎಂಟ್ರಿ ಕೊಡಬೇಕಾದರೆ ಹತ್ತಾರು ರೂಲ್ಸ್ ಹೇಳುತ್ತಾರೆ. ಅದೇ ನಟ ದರ್ಶನ್ ಕುಟುಂಬಕ್ಕೆ ಮಾತ್ರ ಕಂಡಿಷನ್ ಇಲ್ಲವೆಂಬಂತಾಗಿದೆ ಎಂದು ಅನೇಕರು ದೂರಿದ್ದಾರೆ.

    ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಬೇಟಿ ಮಾಡಲು ಅವಕಾಶ ಇರುತ್ತದೆ. ಕಳೆದ ವಾರ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಭೇಟಿ ಮಾಡಿದ್ದರು. ನಂತರ ನಟ ವಿನೋದ್ ಪ್ರಭಾಕರ್, ರಕ್ಷಿತಾ ಪ್ರೇಮ್ ದಂಪತಿ ಭೇಟಿ ಮಾಡಿ ಮಾತನಾಡಿದ್ದರು. ಇದನ್ನೂ ಓದಿ:ಜುಲೈ 2ರಂದು ಥೈಲ್ಯಾಂಡ್‌ನಲ್ಲಿ ಖ್ಯಾತ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮದುವೆ

    ಅಂದಹಾಗೆ, ಜೂನ್ 11ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ದರ್ಶನ್‌ರನ್ನು ಬಂಧಿಸಲಾಯಿತು.