Tag: meena

  • ತಮಿಳು ಬೇಡ ಹಿಂದಿಯಲ್ಲಿ ಮಾತನಾಡಿ ಎಂದಿದ್ದಕ್ಕೆ ಮೀನಾ ಗರಂ

    ತಮಿಳು ಬೇಡ ಹಿಂದಿಯಲ್ಲಿ ಮಾತನಾಡಿ ಎಂದಿದ್ದಕ್ಕೆ ಮೀನಾ ಗರಂ

    ನ್ನಡದ ‘ಪುಟ್ನಂಜ’ ನಟಿ ಮೀನಾ (Meena) ಅವರು ಸಿನಿಮಾ ಜೊತೆಗೆ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ ವೇಳೆ, ತಮಿಳು ಬೇಡ ಹಿಂದಿಯಲ್ಲಿ ಮಾತನಾಡಿ ಎಂದಿದ್ದಕ್ಕೆ ಮೀನಾ ಗರಂ ಆಗಿದ್ದಾರೆ. ಈ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ದುಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಬಹುಭಾಷೆಯ ಕಲಾವಿದರು ಭಾಗಿಯಾಗಿದ್ದರು. ತಂಡದ ಆಹ್ವಾನ ಮೇರೆಗೆ ನಟಿ ಮೀನಾ ಕೂಡ ಈ ಸಮಾರಂಭಕ್ಕೆ ಬಂದಿದ್ದರು. ಈ ವೇಳೆ, ತಮಿಳು ಬೇಡ, ಹಿಂದಿಯಲ್ಲಿ ಮಾತನಾಡಿ ಎಂದಿದ್ದಕ್ಕೆ ನಟಿ ಮೀನಾ ಸಿಟ್ಟಾದ ಘಟನೆ ನಡೆದಿದೆ. ಮಾಧ್ಯಮಗಳ ಮುಂದೆ ನಟಿ ಮೀನಾ ಎಂದಿನಂತೆ ತಮಿಳಿನಲ್ಲಿ ಮಾತಾನಾಡಲು ಆರಂಭಿಸಿದ್ದರು. ಆದರೆ ಕೆಲವರು, ಹಿಂದಿಯಲ್ಲಿ ಮಾತನಾಡಿ ಎಂದಿದ್ದಕ್ಕೆ ಮೀನಾ ಗರಂ ಆದರು. ಹಿಂದಿಯಲ್ಲಿ (Hindi) ಮಾತನಾಡಬೇಕಿದ್ರೆ ನನ್ನನೇಕೆ ಕರೆದ್ರಿ ಅಂತ ಮೀನಾ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಗುಂಡೇಟಿನಿಂದ ಚೇತರಿಸಿಕೊಳ್ಳುತ್ತಿರುವ ಗೋವಿಂದರನ್ನು ನೋಡಲು ಆಸ್ಪತ್ರೆಗೆ ಬಂದ ಶಿಲ್ಪಾ ಶೆಟ್ಟಿ

    ಆ ನಂತರ ಇಂಗ್ಲೀಷ್‌ನಲ್ಲಿ ಮಾತನಾಡಿ, ದಕ್ಷಿಣ ಭಾರತದ ಸಿನಿಮಾಗಳು ಅದ್ಭುತವಾಗಿದೆ. ನಾನು ದಕ್ಷಿಣ ಭಾರತೀಯಳಾಗಿರುವುದ್ದಕ್ಕೆ ಹೆಮ್ಮೆ ಇದೆ ಎಂದರು. ಇಂದು ಸಿನಿಮಾ ರಂಗದಲ್ಲಿ ದಕ್ಷಿಣ ಮತ್ತು ಉತ್ತರ ಎಂಬ ವ್ಯತ್ಯಾಸವಿಲ್ಲ. ಇಂದು ಎಲ್ಲಾ ಭಾಷೆಯ ಕಲಾವಿದರು ಬೇರೇ ಬೇರೇ ಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ ಎಂದು ನಟಿ ಮಾತನಾಡಿದರು. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೀನಾ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • 2ನೇ ಮದುವೆಗೆ ಒಪ್ಪಿಗೆ ನೀಡಿದ್ರಾ ‘ಪುಟ್ನಂಜ’ ನಟಿ ಮೀನಾ? ಕೊನೆಗೂ ಸಿಕ್ತು ಉತ್ತರ

    2ನೇ ಮದುವೆಗೆ ಒಪ್ಪಿಗೆ ನೀಡಿದ್ರಾ ‘ಪುಟ್ನಂಜ’ ನಟಿ ಮೀನಾ? ಕೊನೆಗೂ ಸಿಕ್ತು ಉತ್ತರ

    ನ್ನಡದ ನಟಿ ಮೀನಾ (Meena) 2ನೇ ಮದುವೆ ವಿಚಾರ ಆಗಾಗ ಚರ್ಚೆಯ ವಿಷಯವಾಗಿರುತ್ತದೆ. ಈಗಲೂ ಆ ವಿಚಾರ ಮುನ್ನಲೆಗೆ ಬಂದಿದೆ. ಮೀನಾ 2ನೇ ಮದುವೆ (Second Wedding) ಆಗೋಕೆ ಒಪ್ಪಿಕೊಂಡಿದ್ದಾರಾ? ಇಲ್ಲವಾ ಜೀವನಪೂರ್ತಿ ಒಬ್ಬಂಟಿಯಾಗೇ ಕಳೆಯಲು ಇಷ್ಟ ಪಡುತ್ತಿದ್ದಾರಾ? ಆ ಎಲ್ಲಾ ವಿಚಾರಗಳ ಬಗ್ಗೆ ಆಕೆ ಗೆಳತಿ ಮಾತನಾಡಿದ್ದಾರೆ. ಹಾಗಾದ್ರೆ ಏನಿದೆ ಮೀನಾ ಮನದಾಳ? ಇಲ್ಲಿದೆ ಮಾಹಿತಿ. ಇದನ್ನೂ ಓದಿ:ಮೊದಲ ಚಿತ್ರದ ಶೂಟಿಂಗ್‌ ಎಲ್ಲಿಗೆ ಬಂತು? ಅಪ್‌ಡೇಟ್‌ ಕೊಟ್ರು ಸಾನ್ಯ ಅಯ್ಯರ್

    ಬಹುಭಾಷಾ ನಟಿ ಮೀನಾ, ಪತಿ ವಿಧ್ಯಾ ಸಾಗರ್ (Vidya Sagar) ಅನಾರೋಗ್ಯದಿಂದ ನಿಧನರಾಗಿ ಎರಡು ವರ್ಷಗಳು ಉರುಳಿವೆ. ಹೀಗಾಗಿ ಮೀನಾ 2ನೇ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇರುತ್ತೆ. ಮೀನಾ ಹೆಸರು ಹಲವು ನಟರ ಜೊತೆ ಕೇಳಿಬಂತು. ಹಲವು ಗಾಸಿಪ್‌ಗಳು ಶುರುವಾಯಿತು. ಆದರೂ ಮೀನಾ ಯಾವುದರ ಬಗ್ಗೆಯೂ ಪ್ರತಿಕ್ರಿಯಿಸದೆ ಸುಮ್ಮನೇ ಇದ್ದಾರೆ. ಆದರೆ ಇದೀಗ ಮೀನಾ ಗೆಳತಿ ಡ್ಯಾನ್ಸ್ ಕೋರಿಯೋಗ್ರಾಫರ್ ಕಲಾ‌, ಮೀನಾಳ ಅಂತರಾಳದಲ್ಲಿ ಏನಿದೆ ಅನ್ನೋ ವಿಚಾರ ಹೇಳಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ತಾಯಿಯಾದ ‘ಬಿಗ್‌ ಬಾಸ್‌’ ಮಾಜಿ ಸ್ಪರ್ಧಿ ಆಶಿತಾ ಚಂದ್ರಪ್ಪ

    ಮೀನಾಳ ಕಷ್ಟ ಸುಖದಲ್ಲಿ ಜೊತೆಯಾಗಿದ್ದ ಗೆಳತಿ ಕಲಾ, ಇದೀಗ ಮೀನಾಗೆ ಎರಡನೇ ಮದುವೆ ಬಗ್ಗೆ ಯಾವ ಅಭಿಪ್ರಾಯವಿದೆ ಅನ್ನೋದರ ಬಗ್ಗೆ ಸಂದರ್ಶನವೊಂದರಲ್ಲಿ ಹೇಳ್ಕೊಂಡಿದ್ದಾರೆ. ಹಲವು ಬಾರಿ ಕಲಾ ಮೀನಾಗೆ ಎರಡನೇ ಮದುವೆ ಬಗ್ಗೆ ಒತ್ತಾಯಿಸಿದ್ದರಂತೆ. ಆದರೆ ಮೀನಾ ಮಾತ್ರ ಯಾವ ಸಂದರ್ಭದಲ್ಲೂ 2ನೇ ಮದುವೆ ಆಗದಿರೋದಕ್ಕೆ ಯೋಚಿಸಿದ್ದಾರೆ. ಮದುವೆ ಬಗ್ಗೆ ಒತ್ತಾಯಿಸುವ ಸ್ನೇಹಿತೆಗೆ, ನನ್ನ ವೈಯಕ್ತಿಕ ವಿಚಾರದಲ್ಲಿ ತಲೆ ಹಾಕಬೇಡ ಎಂದು ಸೂಚಿಸಿದ್ದಾರೆ ಎನ್ನುತ್ತಾರೆ ಆಪ್ತೆ ಕಲಾ.

    ಅಂದಹಾಗೆ, ಮೀನಾ ಮತ್ತೀಗ ಅಭಿನಯಕ್ಕೆ ಮರಳಿದ್ದಾರೆ. ಹೀಗೆ ಜೀವನಪೂರ್ತಿ ಮಗಳ ಜೊತೆ ಕಳೆದುಬಿಡಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಇಷ್ಟಾದ್ಮೇಲೂ ಎರಡನೇ ಮದುವೆ ಬಗ್ಗೆ ಗಾಸಿಪ್ ಆಗ್ತಿರೋದು ದುರಂತ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧನುಷ್‌ ಜೊತೆಗಿನ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ಬಹುಭಾಷಾ ನಟಿ ಮೀನಾ

    ಧನುಷ್‌ ಜೊತೆಗಿನ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ಬಹುಭಾಷಾ ನಟಿ ಮೀನಾ

    ಕಾಲಿವುಡ್ (Kollywood) ಅಂಗಳದಲ್ಲಿ ಸದ್ಯ ಸುದ್ದಿಯಾಗಿರುವ ವಿಚಾರ ಅಂದರೆ ನಟಿ ಮೀನಾ- ಧನುಷ್ (Dhanush) ಮದುವೆ ಮ್ಯಾಟರ್. ಈ ಗಾಸಿಪ್ ದೊಡ್ಡ ಮಟ್ಟದಲ್ಲಿ ವೈರಲ್ ಆಗಿರೋ ಬೆನ್ನಲ್ಲೇ ಬಹುಭಾಷಾ ನಟಿ ಮೀನಾ (Meena) ಪ್ರತಿಕ್ರಿಯೆ ನೀಡಿದ್ದಾರೆ. ಧನುಷ್ ಜೊತೆಗಿನ ಮದುವೆ ವಿಚಾರಕ್ಕೆ ನಟಿ ಮೌನ ಮುರಿದಿದ್ದಾರೆ.

    ಪುಟ್ನಂಜ, ಚೆಲುವ, ಗ್ರಾಮದೇವತೆ, ಸಿಂಹಾದ್ರಿಯ ಸಿಂಹ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಮೀನಾ ಬಗ್ಗೆ ಮದುವೆ ಸುದ್ದಿಯೊಂದು ಹರಿದಾಡುತ್ತಿದೆ. ಪತಿಯ ಸಾವಿನ ನೋವಿನಿಂದ ಚೇತರಿಸಿಕೊಂಡಿರುವ ನಟಿ ಮೀನಾ ಅವರು 2ನೇ ಮದುವೆಯಾಗುತ್ತಿದ್ದಾರೆ. ಕಾಲಿವುಡ್ ನಟ ಧನುಷ್ ಜೊತೆ ಮೀನಾ ಮದುವೆ ಎಂದು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಬೈಲ್ವಾನ್ ರಂಗನಾಥನ್ ಬಾಂಬ್ ಸಿಡಿಸಿದ್ದರು. ಇದನ್ನೂ ಓದಿ: ಮಾಜಿ ಪತ್ನಿ, ಸಹೋದರನ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ನವಾಜುದ್ದೀನ್ ಸಿದ್ದಿಕಿ

    ಬೈಲ್ವಾನ್ ರಂಗನಾಥನ್ ಆಡಿರುವ ಮಾತುಗಳು ಇದೀಗ ನಟಿ ಮೀನಾ ಅವರ ಕಿವಿಗೂ ಬಿದ್ದಿದೆ. ಪರಿಣಾಮ, ಎರಡನೇ ಮದುವೆ ಗಾಸಿಪ್ ಬಗ್ಗೆ ನಟಿ ಮೀನಾ ಮೌನ ಮುರಿದಿದ್ದಾರೆ. ಹಬ್ಬಿರುವ ಗಾಸಿಪ್ ಶುದ್ಧ ಸುಳ್ಳು ಎಂದು ಮೀನಾ ಮಾತನಾಡಿದ್ದಾರೆ.

    ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಮೀನಾ, ನಾನಿನ್ನೂ ಪತಿಯನ್ನ ಕಳೆದುಕೊಂಡ ನೋವಿನಲ್ಲಿದ್ದೇನೆ. ಇಂತಹ ಸಮಯದಲ್ಲಿ ಎರಡನೇ ಮದುವೆಯ ಗಾಸಿಪ್ ಹಬ್ಬಿರುವುದು ತೀರಾ ಬೇಸರ ತರಿಸಿದೆ. ವಿದ್ಯಾಸಾಗರ್ ನಿಧನದ ನೋವನ್ನ ಅರಗಿಸಿಕೊಳ್ಳುವುದೇ ಕಷ್ಟವಾಗುತ್ತಿದೆ. ಅಂಥದ್ರಲ್ಲಿ ಈ ತರಹದ ಗಾಸಿಪ್ ಹಬ್ಬಿದರೆ ತೀವ್ರ ನೋವುಂಟಾಗುತ್ತದೆ. ನನ್ನ ಗಮನ ಈಗ ಏನಿದ್ದರೂ ಮಗಳ ಭವಿಷ್ಯದ ಮೇಲೆ ಮಾತ್ರ. ಸಿನಿಮಾ ಹಾಗೂ ಪಾತ್ರಗಳ ಆಯ್ಕೆ ವಿಚಾರದಲ್ಲೂ ನಾನು ಚ್ಯೂಸಿ ಆಗಿದ್ದೇನೆ ಎಂದು ಮೀನಾ ಮಾತನಾಡಿದ್ದಾರೆ.

  • `ಸಿಂಹಾದ್ರಿಯ ಸಿಂಹ’ ನಟಿ ಮೀನಾ ಜೊತೆ ಧನುಷ್ ಮದುವೆ

    `ಸಿಂಹಾದ್ರಿಯ ಸಿಂಹ’ ನಟಿ ಮೀನಾ ಜೊತೆ ಧನುಷ್ ಮದುವೆ

    ಪುಟ್ನಂಜ, ಚೆಲುವ, ಗ್ರಾಮದೇವತೆ, ಸಿಂಹಾದ್ರಿಯ ಸಿಂಹ (Simhadriya Simha) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಮೀನಾ (Meena) ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಪತಿಯ ಸಾವಿನ ನೋವಿನಿಂದ ಚೇತರಿಸಿಕೊಂಡಿರುವ ನಟಿ ಮೀನಾ ಅವರ 2ನೇ ಮದುವೆ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕಾಲಿವುಡ್ ನಟ ಧನುಷ್ (Actor Dhanush) ಜೊತೆ ಮೀನಾ ಮದುವೆ ಎಂದು ಸುದ್ದಿಯಾಗಿದೆ. ಇದನ್ನೂ ಓದಿ: ಕರದಂಟು ಉದ್ಯಮಿ ಬೆನ್ನಿಗೆ ನಿಂತ ಅಶ್ವಿನಿ ಪುನೀತ್ ರಾಜ್ ಕುಮಾರ್

    ರಜನಿಕಾಂತ್ (Rajanikanth) ಪುತ್ರಿ ಐಶ್ವರ್ಯಾಗೆ ಧನುಷ್ ಡಿವೋರ್ಸ್ ನೀಡಿರೋದು ಎಲ್ಲರಿಗೂ ಗೊತ್ತೆ ಇದೆ. ಇಬ್ಬರೂ ಇದೀಗ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಧನುಷ್ ಮತ್ತು ಮೀನಾ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರ ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ನಟ ಬೈಲಾನ್ ರಂಗನಾಥನ್ ಮಾಹಿತಿ ಹಂಚಿಕೊಂಡಿದ್ದಾರೆ.

    ಧನುಷ್- ಮೀನಾ ಇಬ್ಬರು ಒಂಟಿ ಜೀವನ ನಡೆಸುತ್ತಿದ್ದಾರೆ. ಮುಂಬರುವ ಜುಲೈನಲ್ಲಿ ಇಬ್ಬರೂ ಮದುವೆಯಾಗುತ್ತಾರೆ ಎಂದು ಬೈಲಾನ್ ರಂಗನಾಥನ್ ಹೇಳಿದ್ದಾರೆ. ಈ ಸುದ್ದಿ ಕೇಳ್ತಿದ್ದಂತೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಅಷ್ಷಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

  • ಮೀನಾ ಪತಿ ಸಾವಿಗೆ ಕುರಿತ ಅನುಮಾನಕ್ಕೆ ಸ್ಪಷ್ಟನೆ ನೀಡಿದ ನಟಿ ಖೂಷ್ಬೂ

    ಮೀನಾ ಪತಿ ಸಾವಿಗೆ ಕುರಿತ ಅನುಮಾನಕ್ಕೆ ಸ್ಪಷ್ಟನೆ ನೀಡಿದ ನಟಿ ಖೂಷ್ಬೂ

    ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್ ಅವರು ನಿಧನರಾಗಿದ್ದಾರೆ. ನಟಿ ಖೂಷ್ಬೂ ಮೀನಾ ಅವರ ಬೆನ್ನಿಗೆ ನಿಂತಿದ್ದಾರೆ. ಅವರ ಸಾವಿನ ಬೆನ್ನಲ್ಲೇ ಕೊರೊನಾದಿಂದ ಮೃತರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೀನಾ ಪತಿಯ ಸಾವಿನ ಕುರಿತು ನಟಿ ಖೂಷ್ಬೂ ಸ್ಪಷ್ಟನೆ ನೀಡಿದ್ದಾರೆ.

    ಕನ್ನಡ ಮತ್ತು ದಕ್ಷಿಣ ಚಿತ್ರರಂಗದಲ್ಲಿ ಗಮನ ಸೆಳೆದ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಇತ್ತಿಚೆಗೆಷ್ಟೇ ನಿಧನರಾದರು. ಇಡೀ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿರುವ ಈ ಸಮಯದಲ್ಲಿ ಮೀನಾ ಪತಿಯ ಸಾವಿನ ಕುರಿತು ನಾನಾ ವದಂತಿಗಳು ಹರಿದಾಡುತ್ತಿದೆ. ಕೊರೊನಾದಿಂದಲೇ ಮೀನಾ ಪತಿ ಸಾವಾಗಿದೆ ಎಂಬ ಸುದ್ದಿಯ ಬೆನ್ನಲ್ಲೇ ನಟಿ ಖೂಷ್ಬೂ ಮೀನಾ ಪತಿ ಸಾವಿಗೆ ಕೊರೋನಾ ಕಾರಣ ಅಲ್ಲ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಟೆನ್ನಿಸ್ ಕ್ಲಬ್ ಮತ್ತು ಬಾಲಿವುಡ್ ನಟ ಆಮೀರ್ ಖಾನ್ ಫಸ್ಟ್ ಲವ್

    ಕೆಲ ತಿಂಗಳ ಮೀನಾ ಕುಟುಂಬದವರಿಗೆ ಕೊರೋನಾ ತಗುಲಿತ್ತು ಬಳಿಕ ಎಲ್ಲರೂ ಗುಣಮುಖರಾಗಿದ್ದರು. ಇತ್ತೀಚೆಗೆ ಮೀನಾ ಪತಿ ಶ್ವಾಸಕೋಶದ ಸೋಕಿನಿಂದ ಬಳಲುತ್ತಿದ್ದರು. ಬಳಿಕ ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕೊರೋನಾ ಬಳಿಕ ಶ್ವಾಸಕೋಶದ ಸಮಸ್ಯೆಯಿಂದ ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಊಹಾಪೋಹಗಳಿಗೂ ನಟಿ ಖೂಷ್ಬೂ, ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

    ಮಾಧ್ಯಮದವರು ಜವಾಬ್ದಾರಿಯುತವಾಗಿ ಇರಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಮೀನಾ ಪತಿಗೆ ಮೂರು ತಿಂಗಳ ಹಿಂದೆಯೇ ಕೊವೀಡ್ ಆಗಿತ್ತು. ಆದರಿಂದ ಶ್ವಾಸಕೋಶದ ಸ್ಥಿತಿ ಹದಗೆಟ್ಟಿತ್ತು. ಅವರು ಕೊವೀಡ್‌ನಿಂದಲೇ ಮೃರಾಗಿದ್ದಾರೆ ಎಂದು ತಪ್ಪು ಮಾಹಿತಿ ನೀಡುವ ಮೂಲಕ ಭಯ ಹುಟ್ಟುಹಾಕಬೇಡಿ. ನಾವು ಎಚ್ಚರಿಕೆಯಿಂದ ಇರಬೇಕು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸ್ನೇಹಿತೆ ಮೀನಾ ಕುಟುಂಬಕ್ಕೆ ನಟಿ ಖೂಷ್ಬೂ ಬೆನ್ನಿಗೆ ನಿಂತಿದ್ದಾರೆ.

     

    View this post on Instagram

     

    A post shared by Meena Sagar (@meenasagar16)

    ಇದೀಗ ಪತಿ ವಿದ್ಯಾ ಸಾಗರ್ ಸಾವಿನ ಕುರಿತು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬೇಡಿ ಅಂತಾ ನಟಿ ಮೀನಾ ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಿಕೊಂಡಿದ್ದಾರೆ. ಸಂಕಷ್ಟದ ಸಮಯದಲ್ಲಿ ನೆರವಿಗೆ ನಿಂತವರಿಗೆ ಧನ್ಯವಾದ ತಿಳಿಸಿದ್ದಾರೆ.

    Live Tv

  • ನಟಿ ಮೀನಾ ಪತಿ ವಿದ್ಯಾಸಾಗರ್ ಸಾವಿಗೆ ಪಾರಿವಾಳದ ಹಿಕ್ಕೆ ಕಾರಣವಾಯ್ತಾ?

    ನಟಿ ಮೀನಾ ಪತಿ ವಿದ್ಯಾಸಾಗರ್ ಸಾವಿಗೆ ಪಾರಿವಾಳದ ಹಿಕ್ಕೆ ಕಾರಣವಾಯ್ತಾ?

    ದೀರ್ಘಕಾಲದಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ದಕ್ಷಿಣದ ಹೆಸರಾಂತ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ನಿನ್ನೆಯಷ್ಟೇ ನಿಧನರಾಗಿದ್ದಾರೆ. ಹಲವು ತಿಂಗಳಿನಿಂದ ಶ್ವಾಸಕೋಶ ಸಂಬಂಧಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ವಿದ್ಯಾಸಾಗರ್ ನಿಧನದ ನಂತರ  ಆ ಸಾವಿನ ಕುರಿತು ಹಲವು ರೀತಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಅವರ ಸಾವಿಗೆ ಪಾರಿವಾಳ ಕೂಡ ಕಾರಣ ಎನ್ನಲಾಗುತ್ತಿದೆ.

    ವಿದ್ಯಾ ಸಾಗರ್ ಅವರಿಗೆ ಕೋವಿಡ್ ಆಗಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೂಡ ಪಡೆದಿದ್ದರಂತೆ. ಹುಷಾರಾದ ನಂತರ ಮತ್ತೆ ಅವರಿಗೆ ಜ್ವರ ಮತ್ತಿತರ ಸಮಸ್ಯೆಗಳು ಕಾಣಿಸಿಕೊಂಡಿವೆ. ಆನಂತರ ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಅದಕ್ಕೂ ಚಿಕಿತ್ಸೆ ಪಡೆಯುತ್ತಿದ್ದರಂತೆ. ಅಂಗಾಂಗ ದಾನಿಗಳು ಸಿಕ್ಕರೆ, ಈ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತಂತೆ. ಅದಕ್ಕಾಗಿ ಅವರು ಕಾಯುತ್ತಿದ್ದರಂತೆ. ಅಷ್ಟರಲ್ಲಿ ಅವರಿಗೆ ತೀವ್ರ ಶ್ವಾಸಕೋಶದ ತೊಂದರೆ ಆಯಿತಂತೆ. ಅದಕ್ಕೆ ಕಾರಣ ಪಾರಿವಾಳದ ಹಿಕ್ಕೆ ಎನ್ನಲಾಗುತ್ತಿದೆ. ಅವರ ಮನೆ ಸುತ್ತಮುತ್ತಲೂ ಪಾರಿವಾಳಗಳು ಜಾಸ್ತಿ. ಆಹಿಕ್ಕೆ ಯ ವಾಸನೆಯು ಅವರ ಅಲರ್ಜಿಗೆ ಕಾರಣವಾಗಿತ್ತಂತೆ. ಈ ರೀತಿಯ ಸುದ್ದಿಗಳು ಹರಡುತ್ತಿವೆ. ಇದನ್ನೂ ಓದಿ:ಸಾವರ್ಕರ್ ಅವಹೇಳನ : ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹತ್ಯೆ ಮಾಡುವುದಾಗಿ ಪತ್ರ

    ಪಾರಿವಾಳದ ಹಿಕ್ಕೆ ಯಿಂದ ಬರುತ್ತಿದ್ದ ದುರ್ವಾಸನೆಯನ್ನು ಅವರಿಂದ ತಡೆದುಕೊಳ್ಳಲು ಆಗುತ್ತಿರಲಿಲ್ಲವಂತೆ. ಅದನ್ನು ತುಂಬಾ ಸಲ ಹೇಳಿದ್ದೂ ಉಂಟಂತೆ. ಈ ಹಿಕ್ಕೆಯಿಂದಾಗಿಯೇ ಅವರಿಗೆ ಅಲರ್ಜಿ ಜಾಸ್ತಿ ಆಯಿತಂತೆ. ವಿದ್ಯಾಸಾಗರ್ ಅವರ ಸಾವಿಗೂ ಇದೂ ಒಂದು ಕಾರಣ ಇರಬಹುದು ಎಂದು ವರದಿ ಆಗುತ್ತಿದೆ.

    Live Tv

  • ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ

    ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ

    ಕ್ಷಿಣ ಭಾರತದ ಖ್ಯಾತ ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ವಿದ್ಯಾಸಾಗರ್ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

    ವಿದ್ಯಾಸಾಗರ್ ಅವರು ಕೆಲವು ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಜನವರಿಯಲ್ಲಿ ಕುಟುಂಬ ಕೋವಿಡ್ 19 ಪರೀಕ್ಷೆ ನಡೆಸಿತ್ತು. ಈ ವೇಳೆ ಸೋಂಕು ಉಲ್ಬಣಗೊಂಡಿದ್ದರೂ ವಿದ್ಯಾಸಾಗರ್ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು. ಆದರೆ ಸೋಂಕು ಮತ್ತೆ ಕಾಣಿಸಿಕೊಂಡಿದ್ದು, ಹೀಗಾಗಿ ಕೆಲವು ವಾರಗಳ ಹಿಂದೆ ವಿದ್ಯಾಸಾಗರ್ ಅವರಿಗೆ ಶ್ವಾಸಕೋಶದ ಸೋಂಕಿನ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ಕಸಿ ಮಾಡಿಸಿಕೊಳ್ಳಲು ದಾನಿಗಳು ಸರಿಯಾಗಿ ಸಿಗಲಿಲ್ಲ ಎಂದು ತಿಳಿದುಬಂದಿದೆ.

    ವೈದ್ಯರು ಔಷಧಿಗಳ ಮೂಲಕ ಪರಿಸ್ಥಿತಿಯನ್ನು ಗುಣಪಡಿಸಲು ಪ್ರಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗದೇ ಅವರು ಮೃತಪಟ್ಟಿದ್ದಾರೆ. ವಿದ್ಯಾಸಾಗರ್ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಗಣ್ಯರು ಸೇರಿದಂತೆ ಅನೇಕ ಮಂದಿ ಸಂತಾಪ ಸೂಚಿಸುತ್ತಿದ್ದಾರೆ. ಇದನ್ನೂ ಓದಿ: ಈ ಬಾರಿ ಖಾಕಿ ಕಣ್ಗಾವಲಿನಲ್ಲಿ ಬಕ್ರೀದ್ ಆಚರಣೆ

    2009ರಲ್ಲಿ ನಟಿ ಮೀನಾ ಅವರು ಬೆಂಗಳೂರು ಮೂಲದ ವಿದ್ಯಾಸಾಗರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ವಿದ್ಯಾ ಸಾಗರ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಮದುವೆಯ ನಂತರ ಈ ಜೋಡಿ ಚೆನ್ನೈನಲ್ಲಿ ನೆಲೆಸಿತ್ತು.

    Live Tv

  • ಹುಟ್ಟಿದ ಮಗು ಹೆಣ್ಣೆಂದು ಗೊತ್ತಾಗ್ತಿದ್ದಂತೆ ಬಾಯೊಳಗೆ ಬೆರಳು ತುರುಕಿ ಉಸಿರುಗಟ್ಟಿಸಿ ಕೊಂದ!

    ಹುಟ್ಟಿದ ಮಗು ಹೆಣ್ಣೆಂದು ಗೊತ್ತಾಗ್ತಿದ್ದಂತೆ ಬಾಯೊಳಗೆ ಬೆರಳು ತುರುಕಿ ಉಸಿರುಗಟ್ಟಿಸಿ ಕೊಂದ!

    ಶಿಮ್ಲಾ: ಆಗ ತಾನೇ ಹುಟ್ಟಿದ ಮಗು ಹೆಣ್ಣು ಎಂದು ಗೊತ್ತಾಗುತ್ತಿದ್ದಂತೆ ಅದರ ಬಾಯೊಳಗೆ ತನ್ನ ಬೆರಳು ತುರುಕಿ ಉಸಿರುಗಟ್ಟಿಸಿ ಕೊಲೆಗೈದ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಕೃತ್ಯ ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಆರೋಪಿಯನ್ನು ಹರೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಜಿಲ್ಲೆಯ ನಸ್ಲೋಹ್ ಗ್ರಾಮದ ನಿವಾಸಿ. ಈತನ ವಿರುದ್ಧ ಪತ್ನಿ ಮೀನಾ ದೇವಿ(27) ಪೊಲೀಸರ ಬಳಿ ಪತಿಯ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾಳೆ.

    8 ವರ್ಷಗಳ ಹಿಂದೆ ನಾನು ಕುಮಾರ್ ನನ್ನು ಮದುವೆಯಾಗಿದ್ದು, ಈಗಾಗಲೇ ನಮಗೆ 7 ಮತ್ತು 4 ವರ್ಷದ ಹೆಣ್ಣು ಹಾಗೂ ಗಂಡು ಮಕ್ಕಳಿದ್ದಾರೆ. ಮದುವೆಯಾದಾಗಿನಿಂದ ನನಗೆ ಇಬ್ಬರು ಗಂಡು ಮಕ್ಕಳು ಬೇಕು ಎಂದು ಕುಮಾರ್ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದನು ಎಂದು ಮೀನಾ ಪೊಲೀಸರ ಬಳಿ ತಿಳಿಸಿದ್ದಾಳೆ.

    ಇತ್ತ ಬುಧವಾರ ಮೀನಾ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇದರಿಂದ ಸಿಟ್ಟಿಗೆದ್ದ ಕುಮಾರ್, ಪತ್ನಿಗೆ ಚೆನ್ನಾಗಿ ಥಳಿಸಿದ್ದಾನೆ. ಅಲ್ಲದೆ ಆಗ ತಾನೇ ಹುಟ್ಟಿದ ಮಗುವನ್ನು ತಲೆಕೆಳಗೆ ಮಾಡಿ ಹಿಡಿದುಕೊಂಡು ಬಾಯೊಳಗೆ ತನ್ನ ಕೈ ಬೆರಳು ತುರುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಇಷ್ಟಾದ ನಂತರ ಕೆಲ ಸಮಯದ ಬಳಿಕ ಮತ್ತೆ ನನ್ನ ಬಳಿ ಬಂದು ತಾನು ಮಗುವನ್ನು ಸಮಾಧಿ ಮಾಡಿದೇನೆ ಎಮದು ಹೇಳಿದ್ದಾನೆ ಅಂತ ಮೀನಾ ಪೊಲೀಸರ ಬಳಿ ಕಣ್ಣೀರು ಹಾಕಿದ್ದಾಳೆ.