Tag: Meeka Singh

  • ಖ್ಯಾತ ಗಾಯಕ ಮಿಕಾ ಸಿಂಗ್ ಸ್ವಯಂವರ : ನೀವೂ ಭಾಗಿಯಾಗಬಹುದು

    ಖ್ಯಾತ ಗಾಯಕ ಮಿಕಾ ಸಿಂಗ್ ಸ್ವಯಂವರ : ನೀವೂ ಭಾಗಿಯಾಗಬಹುದು

    ತನ್ ರಜಪೂತ್, ಮಲ್ಲಿಕಾ ಶರಾವತ್, ರಾಖಿ ಸಾವಂತ್ ಟಿವಿ ಕಾರ್ಯಕ್ರಮದ ಮೂಲಕ ‘ಸ್ವಯಂವರ’ ನಡೆಸಿ ಮದುವೆಯಾದವರು. ಇದೀಗ ಅದೇ ಹಾದಿಯಲ್ಲಿದ್ದಾರೆ ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕ ಮಿಕಾ ಸಿಂಗ್. ಹೊಸ ಜೀವನಕ್ಕೆ ಕಾಲಿಡಲು ಅವರು ತುದಿಗಾಲಲ್ಲಿ ನಿಂತಿದ್ದು, ಹುಡುಗಿಯ ಆಯ್ಕೆಗಾಗಿ ಅವರು ಚಾನೆಲ್ ವೊಂದರ ಕಾರ್ಯಕ್ರಮಕ್ಕೆ ಮೊರೆ ಹೋಗಿದ್ದಾರಂತೆ. ಇದನ್ನೂ ಓದಿ : ಉಕ್ರೇನ್ ನಿಂದ ಪಲಾಯನ ಮಾಡಿದ ಹಾಲಿವುಡ್ ಸ್ಟಾರ್

    ಸ್ವಯಂವರ ರೀತಿಯಲ್ಲಿಯೇ ಈ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಭಾಗಿಯಾಗಿ ಅಂತಿಮ ಸುತ್ತಿನಲ್ಲಿ ಗೆದ್ದವರನ್ನು ಮಿಕಾ ಮದುವೆಯಾಗಲಿದ್ದಾರಂತೆ. ಕಾರ್ಯಕ್ರಮದಲ್ಲಿ ಭಾಗಿಯಾಗಲು ಹಲವು ಸುತ್ತಿನ ಸ್ಪರ್ಧೆಗಳಿವೆ. ಅದರಲ್ಲಿ ಆಯ್ಕೆಯಾದವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತಾರಂತೆ. ಎರಡು ಹಂತ ದಾಟಿಕೊಂಡು ಬಂದ ನಂತರ ಮಿಕಾ, ಸ್ಪರ್ಧಾಳುಗಳ ಜತೆ ಮಾತನಾಡಲಿದ್ದಾರೆ. ಇದನ್ನೂ ಓದಿ : ಪಟ್ಟಭದ್ರ ಹಿತಾಸಕ್ತಿಯಿಂದ ಪೆದ್ರೊ ವಂಚಿತ : ಚಿತ್ರೋತ್ಸವದ ಬಗ್ಗೆ ರಿಷಭ್ ಶೆಟ್ಟಿ ಅಸಮಾಧಾನ

    ಟಿವಿಯಲ್ಲಿ ಸ್ವಯಂವರ ಮಾತ್ರ ಪ್ರಸಾರವಾಗಲಿದ್ದು, ಅದೇ ವೇದಿಯಲ್ಲಿಯೇ ಮಿಕಾ ಮದುವೆಯಾಗಲಾರರು. ಗೆದ್ದವರ ಜೊತೆ ಕಾರ್ಯಕ್ರಮ ಮುಗಿದ ನಂತರ ಸಪ್ತಪದಿ ತುಳಿಯಲಿದ್ದಾರಂತೆ ಮಿಕಾ. ಇದನ್ನೂ ಓದಿ : EXCLUSIVE: ಸ್ಯಾಂಡಲ್‌ವುಡ್‌ಗೆ ವಾಪಸ್ಸಾದ ಮೀಟೂ ಪರ ಧ್ವನಿ ಎತ್ತಿದ್ದ ನಟಿ ಸಂಗೀತಾ

    ತಮ್ಮದೇ ಶೈಲಿಯ ಹಾಡುಗಳ ಮೂಲಕ ಅಪಾರ ಕೇಳುಗರನ್ನು ಹೊಂದಿರುವ ಮಿಕಾ, ಬಾಲಿವುಡ್ ಸೇರಿದಂತೆ ನಾನಾ ಭಾಷೆಯ ಚಿತ್ರಗಳಲ್ಲಿ ಹಾಡಿದ್ದಾರೆ. ಇದೀಗ ಸ್ವಯಂವರ ಕಾರ್ಯಕ್ರಮದ ಮೂಲಕ ಕಿರುತೆರೆ ಪ್ರಪಂಚಕ್ಕೂ ಕಾಲಿಡುತ್ತಿದ್ದಾರೆ.