Tag: Meditation Centre

  • ಮಕ್ಕಳೊಂದಿಗೆ ಮಗುವಾದ ಮೋದಿ – ತನಗಾಗಿ ವಿಶೇಷ ಕವಿತೆ ಹಾಡಿದ ಬಾಲಕಿಗೆ ಭೇಷ್‌ ಎಂದ ಪ್ರಧಾನಿ

    ಮಕ್ಕಳೊಂದಿಗೆ ಮಗುವಾದ ಮೋದಿ – ತನಗಾಗಿ ವಿಶೇಷ ಕವಿತೆ ಹಾಡಿದ ಬಾಲಕಿಗೆ ಭೇಷ್‌ ಎಂದ ಪ್ರಧಾನಿ

    ಲಕ್ನೋ: ವಾರಣಾಸಿಯಲ್ಲಿ (Varanas) ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರವಾದ ʻಸ್ವರವೇದ ಮಹಾಮಂದಿರʼ (Swarved Mahamandir) ಉದ್ಘಾಟಿಸಿದರು. ಬಳಿಕ ಕೆಲ ಕಾಲ ಬಿಡುವು ಮಾಡಿಕೊಂಡು ಶಾಲಾ ಮಕ್ಕಳೊಂದಿಗೆ ಕಾಲ ಕಳೆದ ಪ್ರಸಂಗ ಕಂಡುಬಂದಿತು.

    ಸಿಎಂ ಯೋಗಿ ಆದಿತ್ಯನಾಥ್‌ ಅವರೊಂದಿಗೆ ವಾರಣಾಸಿಯ ಶಾಲೆಯೊಂದಕ್ಕೆ (Varanasi School) ಭೇಟಿ ನೀಡಿದ ಮೋದಿ, ಪುಟ್ಟ ಮಕ್ಕಳೊಂದಿಗೆ ಸಂವಾದ ನಡೆಸುತ್ತಾ? ತಾವೂ ಮಕ್ಕಳಾಗಿಯೇ ಕಾಲ ಕಳೆದರು. ಈ ವೀಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಾರಣಾಸಿಯಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರ ಉದ್ಘಾಟಿಸಿದ ಪಿಎಂ ಮೋದಿ- ವಿಶೇಷತೆ ಏನು?

    ಮೋದಿ ಶಾಲೆಯೊಳಗೆ ಬರುತ್ತಿದ್ದಂತೆ ವಿಶೇಷ ಗೀತೆಯೊಂದನ್ನು ಹಾಡಿದ ಮಕ್ಕಳು ಗೌರವದಿಂದ ತಲೆಭಾಗಿ ನಮಸ್ಕರಿಸಿದರು. ಬಳಿಕ ಅಲ್ಲಿಯೇ ಮೋದಿ ಮಕ್ಕಳ ಸಾಮರ್ಥ್ಯ ಪರೀಕ್ಷಿಸುವ ಸಣ್ಣ ಪ್ರಯತ್ನ ಮಾಡಿದರು. ಮಕ್ಕಳಿಗೆ ಏನು ಇಷ್ಟ? ಇಂತಹ ಸುಂದರ ಶಾಲೆಯಲ್ಲಿ ಹೇಗೆ ಕಲಿಯುತ್ತಿದ್ದೀರಿ? ಎಂದು ಪ್ರಶ್ನಿಸಿದರು. ಅದಕ್ಕೆ ಮಕ್ಕಳು ಹಾಡಿನ ಮೂಲಕವೇ ಉತ್ತರ ಕೊಟ್ಟು ಪ್ರಧಾನಿಗಳನ್ನು ಸಂತಸಪಡಿಸಿದರು.

    ಈ ವೇಳೆ ಪುಟ್ಟ ಬಾಲಕಿಯೊಬ್ಬಳು ʻನಿಮಗಿಷ್ಟವಾದ ಒಂದು ಕವಿತೆಯೊಂದನ್ನು ಬರೆದಿದ್ದೇನೆ ನಿಮಗೆ ಹೇಗನ್ನಿಸುತ್ತದೆ ಹೇಳಿ? ಎಂದು ಕೇಳಿದಳು, ಅದಕ್ಕೆ ಮೋದಿ ಹೌದಾ.. ಹಾಡು ನೋಡೋಣ ಎಂದು ನಯವಾಗಿಯೇ ಹೇಳಿದರು. ಆಗ ಬಾಲಕಿ ʻಜನಮನ ನಾಯಕ ಶ್ರೇಷ್ಠ ವಿಧಾಯಕ, ವಿಶ್ವ ಚೇತನಕೆ ಅಧಿನಾಯಕ, ಜೈ ಮೋದಿ ಜೈ ಹಿಂದೂಸ್ತಾನ್‌ʼ ಎಂದು ಕವಿತೆ ಹಾಡಿದಳು. ಇದಕ್ಕೆ ಮೋದಿ ವ್ಹಾ ವ್ಹಾ ಎಂದು ಚಪ್ಪಾಳೆ ಬಾರಿಸಿ, ಬೆನ್ನುತಟ್ಟಿದರು.

    ಬಳಿಕ ಮತ್ತೊಂದು ಕೊಠಡಿಯಲ್ಲಿದ್ದ ಮಕ್ಕಳನ್ನು ಭೇಟಿಯಾಗಿ ಸ್ಮಾರ್ಟ್‌ ಕ್ಲಾಸ್‌ ನಿಮಗೆ ಹೇಗೆ ಅನ್ನಿಸುತ್ತಿದೆ? ನೀರಿನ ಸೌಲಭ್ಯ ಚೆನ್ನಾಗಿದೆಯೇ ಎಂದೆಲ್ಲಾ ಪ್ರಶ್ನಿಸಿದರು. ಮಕ್ಕಳು ಅದಕ್ಕೆಲ್ಲ ಸುಲಲಿತವಾಗಿಯೇ ಉತ್ತರ ಕೊಟ್ಟರು. ಇದನ್ನೂ ಓದಿ: ಐಸಿಸ್ ಉಗ್ರರ ನಂಟು ಪ್ರಕರಣ – ಬೆಂಗ್ಳೂರು ಸೇರಿದಂತೆ 4 ರಾಜ್ಯಗಳ 19 ಕಡೆ NIA ದಾಳಿ

  • ವಾರಣಾಸಿಯಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರ ಉದ್ಘಾಟಿಸಿದ ಪಿಎಂ ಮೋದಿ- ವಿಶೇಷತೆ ಏನು?

    ವಾರಣಾಸಿಯಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರ ಉದ್ಘಾಟಿಸಿದ ಪಿಎಂ ಮೋದಿ- ವಿಶೇಷತೆ ಏನು?

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಾರಣಾಸಿಯಲ್ಲಿ (Varanasi) ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರವಾದ (Meditation Centre) ‘ಸ್ವರವೇದ ಮಹಾಮಂದಿರ’ವನ್ನು (Swarved Mahamandir) ಸೋಮವಾರ ಉದ್ಘಾಟಿಸಿದರು.

    ಉದ್ಘಾಟನೆಯ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಪ್ರಧಾನಿ ಮೋದಿ ಧ್ಯಾನ ಮಂದಿರವನ್ನು ವೀಕ್ಷಿಸಿದರು. ಅಲ್ಲದೇ ಮಂದಿರದ ಒಳವಿನ್ಯಾಸ, ರಚನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಮಂದಿರದಲ್ಲಿ ಏಕಕಾಲದಲ್ಲಿ 20,000 ಜನರು ಧ್ಯಾನಕ್ಕಾಗಿ ಕುಳಿತುಕೊಳ್ಳಬಹುದಾಗಿದೆ. ಇದನ್ನೂ ಓದಿ: ಐಸಿಸ್ ಉಗ್ರರ ನಂಟು ಪ್ರಕರಣ – ಬೆಂಗ್ಳೂರು ಸೇರಿದಂತೆ 4 ರಾಜ್ಯಗಳ 19 ಕಡೆ NIA ದಾಳಿ

    ಈ ಮಹಾಮಂದಿರ ಏಳು ಅಂತಸ್ತಿನ ಮೇಲ್ವಿನ್ಯಾಸವನ್ನು ಒಳಗೊಂಡಿದ್ದು, ಗೋಡೆಗಳ ಮೇಲೆ ಸ್ವರವೇದದ ಶ್ಲೋಕಗಳನ್ನು ಕೆತ್ತಲಾಗಿದೆ. ಸ್ವರವೇದ ಮಹಾಮಂದಿರವು ಪ್ರಾಚೀನ ತತ್ವಶಾಸ್ತ್ರ, ಆಧ್ಯಾತ್ಮಿಕತೆ ಮತ್ತು ಆಧುನಿಕ ವಾಸ್ತುಶಿಲ್ಪದ ಸಂಯೋಜನೆಯಾಗಿದೆ. ಇದನ್ನೂ ಓದಿ: ಗುಡ್‌ನ್ಯೂಸ್‌ – ಕುನೋ ಪಾರ್ಕ್‌ನಲ್ಲಿ ಇನ್ಮುಂದೆ ಪ್ರವಾಸಿಗರಿಗೆ ಚೀತಾ ವೀಕ್ಷಣೆ ಭಾಗ್ಯ

    ಬಳಿಕ ಮಾತನಾಡಿದ ಮೋದಿ, ಸಂತರ ಒಡನಾಟದಲ್ಲಿರುವ ಕಾಶಿಯ ಜನರು ಒಟ್ಟಾಗಿ ಅಭಿವೃದ್ಧಿ ಮತ್ತು ಆವಿಷ್ಕಾರದ ಹೊಸ ದಾಖಲೆಗಳನ್ನು ರಚಿಸಿದ್ದಾರೆ ಮತ್ತು ಕಾಶಿಯ ಪುನರುಜ್ಜೀವನಕ್ಕಾಗಿ ಸರ್ಕಾರ, ಸಮಾಜ ಮತ್ತು ಸಂತರು ಎಲ್ಲರೂ ಒಟ್ಟಾಗಿ ಶ್ರಮಿಸುತ್ತಿದ್ದಾರೆ ಎಂದು. ಈ ವೇಳೆ ಮಹರ್ಷಿ ಸದಾಫಲ್ ದೇವ್ ಜಿ ಅವರನ್ನು ಸ್ಮರಿಸಿದ ಮೋದಿ ವಾರಣಾಸಿಯ ಈ ಮಹಾನ್ ದೇವಾಲಯ ಸದಾಫಲ್ ದೇವ್ ಜಿಯವರ ಬೋಧನೆ ಮತ್ತು ಬೋಧನೆಗಳ ಸಂಕೇತವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ ಕೇಸ್‌ – ತನಿಖೆಗೆ ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ವಿಶೇಷ ಸೆಲ್‌

    ನಮ್ಮ ದೇಶವು ತನ್ನ ಪರಂಪರೆಯ ಬಗ್ಗೆ ಹೆಮ್ಮೆಪಡುವುದನ್ನು ಮರೆತಿದೆ ಮತ್ತು ಈ ದೇಶದಲ್ಲಿ ಸೋಮನಾಥ ದೇವಾಲಯದ ಪುನರ್ನಿರ್ಮಾಣಕ್ಕೂ ವಿರೋಧವಿದೆ. ಆದರೆ ಈಗ ಕಾಲ ಬದಲಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ ಎಂದರು. ಇದನ್ನೂ ಓದಿ: ಕೇಂದ್ರದಲ್ಲಿ ಬೇರೆ ಪಕ್ಷ ಇರ್ತಿದ್ರೆ ಬಿಜೆಪಿ ಇಡೀ ದೆಹಲಿ ಬಂದ್ ಮಾಡ್ತಿತ್ತು: ಸಂಜಯ್ ರಾವತ್