Tag: medical

  • ರಾಜ್ಯದಲ್ಲಿ ಮೆಡಿಕಲ್ ಸೀಟ್‍ಗಳ ಶುಲ್ಕ ಕಡಿತಕ್ಕೆ ಚಿಂತನೆ – ಏನಿದು ಬೊಮ್ಮಾಯಿ ಎಬಿಸಿ ಸೂತ್ರ?

    ರಾಜ್ಯದಲ್ಲಿ ಮೆಡಿಕಲ್ ಸೀಟ್‍ಗಳ ಶುಲ್ಕ ಕಡಿತಕ್ಕೆ ಚಿಂತನೆ – ಏನಿದು ಬೊಮ್ಮಾಯಿ ಎಬಿಸಿ ಸೂತ್ರ?

    ದಾವಣಗೆರೆ: ಕರ್ನಾಟಕದಲ್ಲಿ ಮೆಡಿಕಲ್ ಸೀಟುಗಳ ಶುಲ್ಕವನ್ನು ಕಡಿತಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ದಾವಣಗೆರೆಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಿ ಮೆಡಿಕಲ್ ಕಾಲೇಜುಗಳ ಸೀಟುಗಳು ಕಡಿಮೆ ಶುಲ್ಕವೇ ಇದೆ. ಖಾಸಗಿ ಕಾಲೇಜುಗಳಲ್ಲಿ ಮಾತ್ರ ಶುಲ್ಕ ಹೆಚ್ಚಾಗಿದೆ. ಶೇ.90 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೂ ಮೆಡಿಕಲ್ ಸೀಟು ಸಿಗುತ್ತಿಲ್ಲ. ಹಾಗಾಗಿ ಅವರು ಎನ್‍ಆರ್‍ಐ ಅಥವಾ ಮ್ಯಾನೇಜ್ಮೆಂಟ್ ಸೀಟುಗಳನ್ನು ಬಯಸುತ್ತಾರೆ. ಇದರಿಂದ ಶುಲ್ಕ ಹೆಚ್ಚಾಗುತ್ತಿರುವ ಕಾರಣ ಅವರು ವಿದೇಶಗಳಲ್ಲಿ ವ್ಯಾಸಂಗ ಮಾಡಲು ತೆರಳುತ್ತಿದ್ದಾರೆ. ಹಾಗಾಗಿ ಶುಲ್ಕ ಕಡಿತಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

    ನಮ್ಮ ರಾಜ್ಯದಲ್ಲಿ ಶುಲ್ಕ ಕಡಿತಗೊಳಿಸಲು ಎ-ಬಿ-ಸಿ ಕೆಟಗೆರಿ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಈ ಬಗ್ಗೆ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಸಹ ಚಿಂತನೆ ನಡೆಸಿದೆ. ಜೊತೆಗೆ ಉಕ್ರೇನ್ ಮಾತ್ರವಲ್ಲದೇ ಬೇರೆ ದೇಶಗಳಿಂದಲೂ ವಿದ್ಯಾಭ್ಯಾಸ ಮೊಟಕುಗೊಳಿಸಿ ಕರ್ನಾಟಕಕ್ಕೆ ಆಗಮಿಸಿರುವ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

    ದೇಶಾದ್ಯಂತ ಸದ್ದು ಮಾಡಿತ್ತು ಬ್ಯಾನ್‍ನೀಟ್
    ವಿದ್ಯಾರ್ಥಿ ನವೀನ್ ಉಕ್ರೇನ್‍ನಲ್ಲಿ ಸಾವಿಗೀಡಾದ ಬೆನ್ನಲ್ಲೇ ರಾಜ್ಯದಲ್ಲಿ ಈಚೆಗಷ್ಟೇ #ಬ್ಯಾನ್ ನೀಟ್ ಅಭಿಯಾನ ನಡೆದಿತ್ತು. ರಾಜ್ಯದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿ ಇರುವ ಮೆಡಿಕಲ್ ಕಾಲೇಜುಗಳಲ್ಲಿ ಸೀಟ್ ಸಿಗದ ಪರಿಣಾಮ ಉಕ್ರೇನ್ ನಂಹತ ದೇಶಗಳಿಗೆ ತೆರಳಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಉಕ್ರೇನ್-ರಷ್ಯಾ ಯುದ್ಧದಿಂದ ನಮ್ಮ ರಾಜ್ಯದ ನವೀನ್ ಅವರನ್ನು ಕಳೆದುಕೊಳ್ಳಬೇಕಾಯಿತು. ಇದೆಲ್ಲಕ್ಕೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೀಟ್ ಪರೀಕ್ಷೆ ಕಾರಣವಾಗಿದೆ ಎಂದು ಹಲವರು ಆರೋಪಿಸಿ ಸೋಷಲ್ ಮೀಡಿಯಾಗಳಲ್ಲಿ #ಬ್ಯಾನ್‍ನೀಟ್’ ಅಭಿಯಾನ ಆರಂಭಿಸಿದ್ದರು. ಇದನ್ನೂ ಓದಿ: 13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ

    ಅಂಡಮಾನ್ ಮತ್ತು ನಿಕೋಬಾರ್ ಐಲ್ಯಾಂಡ್‍ನಲ್ಲಿ 1, ಆಂಧ್ರಪ್ರದೇಶದಲ್ಲಿ 31, ಅರುಣಾಚಲಂನಲ್ಲಿ 1, ಅಸ್ಸಾಂನಲ್ಲಿ 8, ಬಿಹಾರದಲ್ಲಿ 16, ಛಂಡೀಘರ್‍ನಲ್ಲಿ 1, ಛತ್ತಿಸ್‍ಘರ್‍ನಲ್ಲಿ 10, ದಾದ್ರಾ ನಗರಲ್ಲಿ 1, ದೆಹಲಿಯಲ್ಲಿ 10, ಗೋವಾದಲ್ಲಿ 1, ಗುಜರಾತ್‍ನಲ್ಲಿ 29, ಹರಿಯಾಣದಲ್ಲಿ 12, ಹಿಮಾಚಲ್ ಪ್ರದೇಶದಲ್ಲಿ 7, ಜಮ್ಮು ಮತ್ತು ಕಾಶ್ಮೀರದಲ್ಲಿ 8, ಜಾಖರ್ಂಡ್‍ನಲ್ಲಿ 7, ಕರ್ನಾಟಕದಲ್ಲಿ 60, ಕೇರಳದಲ್ಲಿ 32, ಮಧ್ಯಪ್ರದೇಶದಲ್ಲಿ 22, ಮಹಾರಾಷ್ಟ್ರದಲ್ಲಿ 22, ಮಣಿಪುರದಲ್ಲಿ 2, ಮೇಘಾಲಯ- ಮಿಜೋರಾಂನಲ್ಲಿ ತಲಾ 1, ಒಡಿಶಾದಲ್ಲಿ 12, ಪುದುಚೆರಿನಲ್ಲಿ 9, ಪಂಜಾಬ್‍ನಲ್ಲಿ 10, ರಾಜಾಸ್ತಾನ್‍ನಲ್ಲಿ 23, ಸಿಕ್ಕಿಂನಲ್ಲಿ 1, ತಮಿಳುನಾಡಿನಲ್ಲಿ 50, ತೆಲಂಗಾಣದಲ್ಲಿ 33, ತ್ರಿಪುರದಲ್ಲಿ 2 ಹಾಗೂ ಉತ್ತರ ಪ್ರದೇಶದಲ್ಲಿ 22 ವೈದ್ಯಕೀಯ ಕಾಲೇಜುಗಳು ಇವೆ. ಆದರೆ, ಇಲ್ಲಿನ ದುಬಾರಿ ವೆಚ್ಚದ ಪರಿಣಾಮದಿಂದಾಗಿ ವಿದೇಶಗಳಿಗೆ ತೆರಳಿತ್ತಿದ್ದಾರೆ ಎಂದು ಆರೋಪಿಸಿದ್ದರು.

    ಇದರ ಜೊತೆಗೆ ಫೇಸ್‍ಬುಕ್, ಟ್ವಿಟ್ಟರ್ ಗಳಲ್ಲಿ #ಬ್ಯಾನ್‍ನೀಟ್ ಟ್ರೆಂಡಿಂಗ್ ಸದ್ದು ಮಾಡಿತ್ತು. ಚಲನಚಿತ್ರನಟ ಸೂರ್ಯ ಸಹ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್

  • ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ನವದೆಹಲಿ: ಭಾರತೀಯರು ಸೇರಿ ವಿಶ್ವದಲ್ಲೇ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್, ರಷ್ಯಾಗೆ ಯಾಕೆ ಹೋಗುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಮಾಹಿತಿ.

    ಉನ್ನತ ಶಿಕ್ಷಣ ನೀಡುವಲ್ಲಿ ಭಾರತವೂ ಖ್ಯಾತಿ ಹೊಂದಿರುವಾಗ ಸಾವಿರಾರು ವಿದ್ಯಾರ್ಥಿಗಳು ಏಕೆ ರಷ್ಯಾ ಮತ್ತು ಉಕ್ರೇನ್‍ಗೆ ಮೆಡಿಕಲ್ ಮಾಡಲು ಹೋಗುತ್ತಾರೆ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಬರುವುದು ಸಹಜವಾಗಿದೆ. ಇದಕ್ಕೆ ಉತ್ತರ ಇಲ್ಲಿದೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    Medical education needs to stop burning out students. Now - STAT

    ಭಾರತದಲ್ಲಿ ಸರ್ಕಾರಿ ಕೋಟಾದಡಿ ಸೀಟು ಸಿಕ್ಕವರು ಮೆಡಿಕಲ್ ಶಿಕ್ಷಣವನ್ನು ಸುಲಭವಾಗಿ ಪಡೆಯಬಹುದು. ಒಂದು ವೇಳೆ ಸಿಗದಿದ್ದರೆ ಖಾಸಗಿ ಕಾಲೇಜು ಕೇಳಿದಷ್ಟು ಹಣ ಕಟ್ಟಿ ಓದಬೇಕಾಗುತ್ತೆ. ಆದರೆ ಎಲ್ಲ ಜನರು ಸ್ಥಿತಿವಂತರಾಗಿರುವುದಿಲ್ಲ. ಭಾರತಕ್ಕೆ ಹೋಲಿಸಿದರೆ ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಶುಲ್ಕ ಬಹಳ ಕಡಿಮೆ ಇರುತ್ತೆ. ಇಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಶೇ.60 ರಿಂದ 70ರಷ್ಟು ಕಡಿಮೆ ಅಗ್ಗದಲ್ಲಿ ಶುಲ್ಕವಿರುತ್ತದೆ.

    ಅಲ್ಲದೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡರೆ ಉಕ್ರೇನ್ ನಲ್ಲಿ ಸೀಟ್ ಪಡೆಯುವುದು ಸುಲಭದ ಕೆಲಸ. ಭಾರತಕ್ಕೆ ಹೋಲಿಸಿದರೆ ಉಕ್ರೇನ್‍ನಲ್ಲಿ ಜೀವನ ನಿರ್ವಹಣೆ ವೆಚ್ಚವೂ ಕಡಿಮೆ ಇರುತ್ತೆ. ಇದರ ಜೊತೆಗೆ ಇಲ್ಲಿನ ವೈದ್ಯಕೀಯ ಕಾಲೇಜುಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಯುನೆಸ್ಕೋ, ಯುರೋಪಿಯನ್ ದೇಶಗಳ ಮಾನ್ಯತೆ ಇದೆ.

    A Time for Change: Nutrition Education in Medicine

    ಉಕ್ರೇನ್ ನಲ್ಲಿ ವಿದ್ಯಾರ್ಥಿಗಳ ಜೀವನ ವೆಚ್ಚ ಅಗ್ಗವಾಗಿರುವುದರಿಂದ ಇಲ್ಲಿಗೆ ಎಷ್ಟೋ ಜನರು ಶಿಕ್ಷಣ ಪಡೆಯಲು ಬರುತ್ತಾರೆ.

    ಉಕ್ರೇನ್‍ನಲ್ಲಿ 20,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಇದ್ದು, ಅವರನ್ನು ರಕ್ಷಿಸಲು ಭಾರತವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಸದ್ಯಕ್ಕೆ ಉಕ್ರೇನ್‍ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯಿಂದಾಗಿ ನವದೆಹಲಿ ಮತ್ತು ಕೀವ್ ನಡುವಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಪರ್ಯಾಯ ವ್ಯವಸ್ಥೆಗಳನ್ನು ಭಾರತ ಸರ್ಕಾರ ಮಾಡುತ್ತಿದೆ. ಇದನ್ನೂ ಓದಿ:  ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

  • ಧಾರವಾಡ ಮೆಡಿಕಲ್ ಕಾಲೇಜಿನಲ್ಲಿ ಮತ್ತೆ 116 ಮಂದಿಗೆ ಕೊರೊನಾ

    ಧಾರವಾಡ ಮೆಡಿಕಲ್ ಕಾಲೇಜಿನಲ್ಲಿ ಮತ್ತೆ 116 ಮಂದಿಗೆ ಕೊರೊನಾ

    ಧಾರವಾಡ: ಧಾರವಾಡ ಎಸ್‌ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಮತ್ತೆ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಮಧ್ಯರಾತ್ರಿ ಮತ್ತೆ 116 ಜನರಲ್ಲಿ ಸೋಂಕು ದೃಢಪಟ್ಟಿದೆ. ಮೊದಲು 66 ಮಂದಿಯಲ್ಲಿ ಕಾಣಿಸಿಕೊಂಡಿತ್ತು. ಈಗ 66 ಸೇರಿ ಒಟ್ಟು 182 ಮಂದಿಗೆ ಕೊರೊನಾ ಬಂದಿದೆ.

    ನ.17 ರಂದು ಕಾಲೇಜಿನ ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವು ಪಾಲಕರು ಕೂಡ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಭಾಗಿಯಾಗಿದ್ದವರು ಕೋವಿಡ್ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಸೂಚಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ ಲಸಿಕೆ ಪಡೆದವರು ಯೂರೋಪ್‌ಗೆ ಪ್ರಯಾಣಿಸಲು 9 ತಿಂಗಳಷ್ಟೇ ಮಾನ್ಯತೆ

    ಗುರುವಾರ ಸಂಜೆಯವರೆಗೆ ಮತ್ತೆ ಎಸ್‌ಡಿಎಂ ಆವರಣದಲ್ಲಿ 690 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕಿಮ್ಸ್, ಡಿಮ್ಹಾನ್ಸ್ ಹಾಗೂ ಎಸ್‌ಡಿಎಂನ ಕೋವಿಡ್ ಪ್ರಯೋಗಾಲಯಗಳಲ್ಲಿ ಈ ಮಾದರಿಗಳನ್ನು ಪರೀಕ್ಷಿಸಲಾಗಿದೆ. 116 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದನ್ನೂ ಓದಿ: ಬೆಂಗಳೂರಿನ ಶಾಲೆಯಲ್ಲಿ ಕೊರೊನಾ ಸ್ಫೋಟ – 33 ವಿದ್ಯಾಥಿಗಳಿಗೆ ಸೋಂಕು

    ಮಧ್ಯರಾತ್ರಿಯ ನಂತರ ಈ ವರದಿಗಳು ಲಭ್ಯವಾಗಿದ್ದು, ಎಲ್ಲರೂ ಕೋವಿಡ್ ನಿರೋಧಕ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿರುವುದರಿಂದ ಯಾರಲ್ಲಿಯೂ ರೋಗದ ಗಂಭೀರ ಸ್ವರೂಪದ ಲಕ್ಷಣಗಳಿಲ್ಲ.

  • ಮೆಡಿಕಲ್‍ನಲ್ಲಿ ಗ್ರೈಪ್ ವಾಟರ್ ಬದಲು ಪಾಯಿಸನ್ ಕೊಟ್ರು

    ಮೆಡಿಕಲ್‍ನಲ್ಲಿ ಗ್ರೈಪ್ ವಾಟರ್ ಬದಲು ಪಾಯಿಸನ್ ಕೊಟ್ರು

    ತುಮಕೂರು: ಮೆಡಿಕಲ್ ಶಾಪ್‍ವೊಂದರಲ್ಲಿ ಗ್ರಾಹಕರೊಬ್ಬರಿಗೆ ಗ್ರೈಪ್ ವಾಟರ್ ಬದಲು ಪಾಯಿಸನ್ ಕೊಟ್ಟು ಕಳುಹಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಮಧುಗಿರಿ ತಾಲೂಕಿನ ಐಡಿಹಳ್ಳಿಯ ಮೆಡಿಕಲ್ ಒಂದರಲ್ಲಿ ಈ ಯಡವಟ್ಟು ನಡೆದಿದ್ದು, ಕಂತಗಾನಹಳ್ಳಿಯ ಕಲ್ಯಾಣಿ ಎನ್ನುವವವರು ಮೆಡಿಕಲ್‍ಗೆ ಬಂದು ಗ್ರೈಪ್ ವಾಟರ್ ಕೇಳಿದ್ದಾರೆ. ಈ ವೇಳೆ ಮೆಡಿಕಲ್ ಮಾಲೀಕನ ಪತ್ನಿ ಗ್ರೇಪ್ ವಾಟರ್ ಬದಲು ಸರ್ಜಿಕಲ್ ಸ್ಪಿರಿಟ್ ನೀಡಿ ಯಡವಟ್ಟು ಮಾಡಿದ್ದಾರೆ. ಇದನ್ನೂ ಓದಿ: ಕಾರ್ಮಿಕ ಇಲಾಖೆ ನೀಡಿದ್ದ ಇಮ್ಯೂನಿಟಿ ಬೂಸ್ಟರ್ ಸೇವಿಸಿ 8 ಜನ ಕಾರ್ಮಿಕರು ಅಸ್ವಸ್ಥ

    ಗ್ರೇಪ್ ವಾಟರ್ ಕೇಳಿ ಪಡೆದುಕೊಂಡು ಹೋಗಿದ್ದ ಕಲ್ಯಾಣಿಯವರು ಮನೆಗೆ ಹೋಗಿ ಬಾಟಲ್ ಓಪನ್ ಮಾಡಿ ನೋಡಿದಾಗ ಕೆಟ್ಟ ವಾಸನೆ ಬರುತಿತ್ತು. ಇದನ್ನು ಕಂಡು ಗಾಬರಿಯಾಗಿ ಪತಿ ಶಿವಕುಮಾರ್‍ ಗೆ ತೋರಿಸಿದ್ದಾರೆ. ಆಗ ಪಾಯಿಸನ್ ಅನ್ನೋದು ಧೃಢಪಟ್ಟಿದೆ. ಇದೀಗ ಮೆಡಿಕಲ್ ವಿರುದ್ಧ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತರನ್ನು ಮುಟ್ಟಿದ್ರೆ ಮನೆಗೆ ನುಗ್ಗಿ ಹೊಡಿತೀವಿ: ಮುತಾಲಿಕ್

  • ದೇಶಕ್ಕೆ 600 ವೈದ್ಯಕೀಯ ಕಾಲೇಜು, ಏಮ್ಸ್‌ನಂಥ 50 ಸಂಸ್ಥೆ ಬೇಕು: ನಿತಿನ್ ಗಡ್ಕರಿ

    ದೇಶಕ್ಕೆ 600 ವೈದ್ಯಕೀಯ ಕಾಲೇಜು, ಏಮ್ಸ್‌ನಂಥ 50 ಸಂಸ್ಥೆ ಬೇಕು: ನಿತಿನ್ ಗಡ್ಕರಿ

    ನವದೆಹಲಿ: ದೇಶಕ್ಕೆ ಇನ್ನೂ ಕನಿಷ್ಠ 600 ವೈದ್ಯಕೀಯ ಕಾಲೇಜುಗಳು ದೆಹಲಿಯ ಏಮ್ಸ್ ತರಹದ 50 ಸಂಸ್ಥೆಗಳು ಮತ್ತು 200 ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳು ಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

    ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಡ್ ನಗರದಲ್ಲಿ ಕೊರೊನಾ ವಾರಿಯರ್ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ವಲಯದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಗತ್ಯ ಇದೆ. ಸಹಕಾರಿ ಕ್ಷೇತ್ರ ಸಹ ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸಲು ಮುಂದೆ ಬರಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸೋಮವಾರ ಬಂದ್ ಇದ್ದರೂ SSLC ಪೂರಕ ಪರೀಕ್ಷೆ

    ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಚರ್ಚೆಯ ಸಮಯದಲ್ಲಿ, ನಾನು ಅವರಿಗೆ ವೆಂಟಿಲೇಟರ್‍ಗಳ ಕೊರತೆಯ ಬಗ್ಗೆ ಹೇಳಿದೆ. ದೇಶದಲ್ಲಿ ಎಷ್ಟು ವೆಂಟಿಲೇಟರ್‍ಗಳಿವೆ ಎಂದು ಅವರು ನನ್ನನ್ನು ಕೇಳಿದರು, ಅದಕ್ಕೆ ನಾನು ಸುಮಾರು 2.5 ಲಕ್ಷ ಇರಬೇಕು. ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗ ದೇಶದಲ್ಲಿ ಕೇವಲ 13,000 ವೆಂಟಿಲೇಟರ್‍ಗಳು ಇದ್ದವು ಎಂದು ಅವರು ನನಗೆ ತಿಳಿಸಿದರು ಎಂದು ಗಡ್ಕರಿ ಹೇಳಿದ್ದಾರೆ. ಇದನ್ನೂ ಓದಿ: ಖಾಸಗಿ ಶಾಲೆಗಳ ದುಬಾರಿ ಶುಲ್ಕ- ರಮೇಶ್ ಕುಮಾರ್ ಉಪಸ್ಥಿತಿಯಲ್ಲಿ ಚಿಂತನ ಮಂಥನ

    ಆ ಸಮಯದಲ್ಲಿ ಆಮ್ಲಜನಕ, ಬೆಡ್‍ಗಳು ಮತ್ತು ಇತರ ವೈದ್ಯಕೀಯ ಸೌಲಭ್ಯಗಳ ಕೊರತೆ ಇತ್ತು. ಆದರೆ ವೈದ್ಯರು, ಅರೆವೈದ್ಯರು, ನರ್ಸ್‍ಗಳು ಆ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದರು. ಅವರ ಕೆಲಸವನ್ನು ನಾನು ಪ್ರಶಂಸಿಸುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ.

  • ಸೋಂಕಿತರಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ ರೇಣುಕಾ ವಿದ್ಯಾಪೀಠ

    ಸೋಂಕಿತರಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ ರೇಣುಕಾ ವಿದ್ಯಾಪೀಠ

    ತುಮಕೂರು: ರೇಣುಕಾ ವಿದ್ಯಾಪೀಠ ಎಂಬ ವಿದ್ಯಾ ಸಂಸ್ಥೆ ವಿದ್ಯಾದಾನ ಜೊತೆ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.

    ಇಡೀ ವಿದ್ಯಾಸಂಸ್ಥೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿ ಕೋವಿಡ್ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ. 150 ಬೇಡ್‍ಗಳನ್ನು ಮಾಡಿ ಅದರಲ್ಲಿ 40 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿವರೆಗೂ 550 ಸೋಂಕಿತರು ಗುಣಮುಖರಾಗಿ ಹೋಗಿದ್ದಾರೆ. ತಜ್ಞ ವೈದ್ಯರು ಸೇರಿದಂತೆ ದಾದಿಯರು 24 ಗಂಟೆ ಇಲ್ಲಿ ಇದ್ದು ಸೋಂಕಿತರ ಆರೋಗ್ಯ ನೋಡುತ್ತಿದ್ದಾರೆ. ಸೋಂಕಿತರಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದು, ರೋಗನಿರೋಧಕ ಶಕ್ತಿ ಹೆಚ್ಚಾಗುವ ಆಹಾರವನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: ಬಿಎಸ್‍ವೈಗೆ ಆಡಳಿತ ನಡೆಸಲು ಆಗುತ್ತಿಲ್ಲ,ಅವರ ಪುತ್ರ ಆಡಳಿತ ನಡೆಸುತ್ತಿದ್ದಾರೆ: ಶಾಸಕ ಶರಣಬಸಪ್ಪ ದರ್ಶನಾಪುರ

    ಬೆಳಗ್ಗೆ ಎದ್ದ ತಕ್ಷಣ ಆಯುರ್ವೇದಿಕ್ ಕಷಾಯ, ಬಳಿಕ ಯೋಗಾಭ್ಯಾಸ. ಉಪಹಾರ, ಮಧ್ಯಾಹ್ನ ಊಟ, ಹಣ್ಣು ಹಂಪಲು, ಅರಿಶಿಣ ಮಿಶ್ರಿತ ಹಾಲು ಕೊಟ್ಟು ಸೋಂಕಿತರನ್ನು ಗುಣಮುಖರನ್ನಾಗಿ ಮಾಡಲಾಗುತ್ತಿದೆ. ಸೋಂಕಿತರ ಮಾನಸಿಕ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆಧ್ಯಾತ್ಮಿಕತೆಗೆ ಹೆಚ್ಚು ಒತ್ತುಕೊಟ್ಟು ಸಾಧು ಸಂತರಿಂದ ಪ್ರವಚನ ಮಾಡಿಸಲಾಗುತ್ತಿದೆ.

    ಸಿದ್ದಗಂಗಾ ಶ್ರೀಗಳು ಸೇರಿದಂತೆ ಹಲವು ಸ್ವಾಮಿಜಿಗಳು ಪ್ರವಚನ ಮಾಡಿ ಸೋಂಕಿತರ ಆತ್ಮಬಲ ಹೆಚ್ಚಿಸಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಬಡವರ ಸೇವೆ ಮಾಡುತ್ತಾ ಬಂದಿದೆ. ರೇಣುಕಾ ವಿದ್ಯಾಪೀಠ ಇವರ ಈ ಸೇವೆಗೆ ಶ್ಲಾಘನೆ ವ್ಯಕ್ತವಾಗಿದೆ.

  • ಆರೋಗ್ಯ ತಪಾಸಣೆಗಾಗಿ ಅಮೆರಿಕಾಗೆ ತೆರಳಿದ ತಲೈವಾ

    ಆರೋಗ್ಯ ತಪಾಸಣೆಗಾಗಿ ಅಮೆರಿಕಾಗೆ ತೆರಳಿದ ತಲೈವಾ

    ಚೆನ್ನೈ: ತಮಿಳಿನ ಖ್ಯಾತ ನಟ ರಜನಿಕಾಂತ್ ಅವರು ಆರೋಗ್ಯ ತಪಾಸಣೆಗಾಗಿ ತಮ್ಮ ಕುಟುಂಬ ಸಮೇತರಾಗಿ ಖಾಸಗಿ ವಿಮಾನದ ಮೂಲಕ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದಾರೆ.

    ರಜನಿಕಾಂತ್ ಅವರು ಕಳೆದ ವರ್ಷ ಡಿಸೆಂಬರ್‍ ನಲ್ಲಿ ಅನಾರೋಗ್ಯದಿಂದಾಗಿ ಹೈದರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಅಣ್ಣಾತ್ತೆ ಚಿತ್ರದ ಶೂಟಿಂಗ್‍ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕೊರೊನಾದಿಂದಾಗಿ ಚಿತ್ರೀಕರಣ ನಿಂತಿರುವುದರಿಂದ ಚೆನ್ನೈನ ತಮ್ಮ ನಿವಾಸದಲ್ಲೇ ಇದ್ದ ರಜನಿ ಏಕಾಏಕಿ ಅಮೆರಿಕಾಗೆ ತೆರಳಿರುವುದರಿಂದಾಗಿ ತಲೈವಾಗೆ ಮತ್ತೆ ಅನಾರೋಗ್ಯ ಕಾಡುತ್ತಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ:ರಾಜಕೀಯ ಪಕ್ಷ ಸ್ಥಾಪನೆಯ ನಿರ್ಧಾರದಿಂದ ಹಿಂದೆ ಸರಿದ ರಜನಿಕಾಂತ್

    ರಜನಿಕಾಂತ್ ಅಮೆರಿಕಾಗೆ ತೆರಳಿರುವ ಬಗ್ಗೆ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳಲ್ಲಿ ಕಳವಳ ಉಂಟುಮಾಡಿದೆ. ಈ ನಡುವೆ ರಜನಿಕಾಂತ್ ಅವರು ಆರೋಗ್ಯವಾಗಿದ್ದು ಕೆಲವು ವದಂತಿಗಳು ಹರಿದಾಡುತ್ತಿದೆ. ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಅಮೆರಿಕ ತೆರಳಿರುವ ಬಗ್ಗೆ ವರದಿಯಾಗಿದೆ. ಕೊರೊನಾದಿಂದಾಗಿ ಭಾರತದಿಂದ ವಿದೇಶ ಪ್ರಯಾಣಕ್ಕೆ ನಿರ್ಬಂಧವಿರುವುದರಿಂದಾಗಿ ಕೆಲವು ದಿನಗಳ ಹಿಂದೆ ರಜನಿಕಾಂತ್ ಅಮೆರಿಕ ತೆರಳಲು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಬಳಿಕ ಕೇಂದ್ರ ಸರ್ಕಾರ ಇವರಿಗೆ ಅಮೆರಿಕ ತೆರಳಲು ಅನುಮತಿ ನೀಡಿದೆ.

    ಕೇಂದ್ರ ಸರ್ಕಾರ ಅನುಮತಿ ನೀಡಿದ ನಂತರ ವಿಶೇಷ ವಿಮಾನದಲ್ಲಿ ರಜನಿ ಕುಟುಂಬ ಸಮೇತರಾಗಿ ಅಮೆರಿಕಗೆ ತೆರಳಿದ್ದಾರೆ. ಆರೋಗ್ಯ ತಪಾಸಣೆಯ ನಂತರ ಕೆಲವು ದಿನಗಳವರೆಗೆ ಅಮೆರಿಕಾದ ವಿಶ್ರಾಂತಿ ಪಡೆದು ನಂತರ ಭಾರತಕ್ಕೆ ಹಿಂತಿರುಗುವ ಬಗ್ಗೆ ಮೂಲಗಳಿಂದ ತೆಳಿದು ಬಂದಿದೆ. ರಜನಿ ನಟನೆಯ ಅಣ್ಣಾತ್ತೆ ಸಿನಿಮಾ ಈಗಾಗಲೇ ಚಿತ್ರೀಕರಣ ಕೊನೆ ಹಂತ ತಲುಪಿದ್ದು ಡೈರೆಕ್ಟರ್ ಶಿವ ಅವರು ಈ ವರ್ಷ ದೀಪಾವಳಿ ವೇಳೆ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ.

  • ಕೋವಿಡ್ ನಿಯಮ ಉಲ್ಲಂಘಿಸಿದ್ದ ಹತ್ತು ಅಂಗಡಿಗಳಿಗೆ ಬೀಗ ಜಡಿದ ನಗರ ಸಭೆ

    ಕೋವಿಡ್ ನಿಯಮ ಉಲ್ಲಂಘಿಸಿದ್ದ ಹತ್ತು ಅಂಗಡಿಗಳಿಗೆ ಬೀಗ ಜಡಿದ ನಗರ ಸಭೆ

    ಮಡಿಕೇರಿ: ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದನ್ನು ಕಡ್ಡಾಯಗೊಳಿಸಿದ್ದರೂ ಆ ನಿಯಮವನ್ನು ಉಲ್ಲಂಘಿಸಿದ್ದ ಹತ್ತು ಅಂಗಡಿಗಳನ್ನು ಮಡಿಕೇರಿ ನಗರಸಭೆ ಮುಚ್ಚಿಸಿದೆ. ಮಡಿಕೇರಿ ನಗರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿದ್ದು, ನಿಯಂತ್ರಿಸುವುದಕ್ಕಾಗಿ ನಗರಸಭೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

    ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಮಾಡಬೇಕಾದರೆ ವ್ಯಾಪಾರಿಗಳು ಕೋವಿಡ್ ಟೆಸ್ಟ್ ಮಾಡಿಸಿ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು ಎಂದು ಕಳೆದ ವಾರ ನಗರಸಭೆ ತಿಳಿಸಿತ್ತು. ಹೀಗಾಗಿ ಇಂದು ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಕೋವಿಡ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಹೊಂದಿರುವುದರ ಬಗ್ಗೆ ಪರಿಶೀಲಿಸಲು ಫೀಲ್ಡಿಗಿಳಿದಿದ್ದರು. ಎಲ್ಲಾ ಅಂಗಡಿ ಮುಂಗಟ್ಟಗಳಿಗೆ ದಾಳಿ ಮಾಡಿದ ನಗರಸಭೆ ಅಧಿಕಾರಿಗಳು ಕೋವಿಡ್ ರಿಪೋರ್ಟ್ ಪರಿಶೀಲಿಸಿದರು.

    ಈ ವೇಳೆ ಹತ್ತಕ್ಕೂ ಹೆಚ್ಚು ಅಂಗಡಿಗಳ ಮಾಲೀಕರು ಮತ್ತು ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿಸಿರಲಿಲ್ಲ. ಇದರಿಂದ ನಗರಸಭೆ ಆಯುಕ್ತ ರಾಮದಾಸ್ ಯಾವುದೇ ಮುಲಾಜಿಲ್ಲದೆ ಅಂಗಡಿಗಳನ್ನು ಮುಚ್ಚಿಸಿದರು. ಮೆಡಿಕಲ್ ಶಾಪ್‍ಗಳಿಗೂ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದ್ದರಿಂದ ನಗರದಲ್ಲಿ ಎರಡು ಮೆಡಿಕಲ್ ಶಾಪ್‍ಗಳನ್ನು ಮುಚ್ಚಿಸಿದರು. ಇದನ್ನೂ ಓದಿ. ಸೋಂಕಿತನ ಜೇಬಿನಿಂದ ನಗದು ಕದ್ದು ಸಿಕ್ಕಿಬಿದ್ದ ಕೋವಿಡ್ ಆಸ್ಪತ್ರೆಯ ಮಹಿಳಾ ಸಿಬ್ಬಂದಿ

    ಈ ಸಂದರ್ಭ ಆರ್ನ ಮೆಡಿಕಲ್ ಶಾಪ್‍ನ ಮಾಲೀಕರು ಮತ್ತು ಸಿಬ್ಬಂದಿ ನಗರ ಸಭೆ ಆಯುಕ್ತರ ವಿರುದ್ಧ ಗಲಾಟೆ ಮಾಡಿದರು. ನೀವೇ ನಿಯಮ ಉಲ್ಲಂಘನೆ ಮಾಡುತ್ತೀರಾ, ಈಗ ನೋಡಿದ್ರೆ ಮೆಡಿಕಲ್ ಶಾಪ್ ಮುಚ್ಚಿಸಲು ಬಂದಿದ್ದೀರಾ ಎಂದು ನಗರಸಭೆ ಆಯುಕ್ತ ರಾಮದಾಸ್ ಜೊತೆ ವಾಗ್ವಾದ ನಡೆಸಿದರು. ಇದರಿಂದ ಸಿಟ್ಟಿಗೆದ್ದ ರಾಮದಾಸ್ ಮೆಡಿಕಲ್ ಶಾಪ್ ವಿರುದ್ಧ ಪ್ರಕರಣ ದಾಖಲಿಸುವಂತೆ ನಗರಸಭೆ ಸಿಬ್ಬಂದಿಗೆ ಸೂಚನೆ ನೀಡಿದರು.

    ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಮದಾಸ್ ನಗರದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಅಂಗಡಿಗಳನ್ನು ಮುಚ್ಚಿಸಿದ್ದೇವೆ. ಲಾಕ್‍ಡೌನ್ ಮುಗಿಯುವವರೆಗೆ ಈ ಅಂಗಡಿಗಳನ್ನು ತೆರೆಯುವುದಕ್ಕೆ ಅವಕಾಶ ಕೊಡುವುದಿಲ್ಲ. ತರಕಾರಿ ವ್ಯಾಪಾರಿಗಳಿಗೂ ಕೆಲವರಿಗೆ ಸೋಂಕು ದೃಢಪಟ್ಟಿದ್ದು, ಅವರು ಇಂದಿನಿಂದ ವ್ಯಾಪಾರ ಮಾಡುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

  • ನೀಟ್ ಪರೀಕ್ಷೆಯಲ್ಲಿ ಪಾಸ್ – ವೈದ್ಯನಾಗಲು ಮುಂದಾದ ’64’ರ ಯುವಕ

    ನೀಟ್ ಪರೀಕ್ಷೆಯಲ್ಲಿ ಪಾಸ್ – ವೈದ್ಯನಾಗಲು ಮುಂದಾದ ’64’ರ ಯುವಕ

    ಭುವನೇಶ್ವರ: 40 ವರ್ಷಗಳ ಜೀವನದಲ್ಲಿ ಕಠಿಣ ಕೆಲಸ ಮತ್ತು ಮಕ್ಕಳನ್ನು ಬೆಳೆಸಿದ ನಂತರ ಒಬ್ಬ ಯಶಸ್ವಿ ವ್ಯಕ್ತಿ ಬಹುಶಃ ಮೊಮ್ಮಕ್ಕಳೊಂದಿಗೆ ಸಮಯ ಕಳೆಯಲು, ತೋಟಗಾರಿಕೆ ಮಾಡಿಕೊಂಡು, ತಮ್ಮ ಸಂಬಂಧಿಗಳೊಂದಿಗೆ ಹರಟೆ ಹೊಡೆಯುತ್ತಾ ಕಾಲ ಕಳೆಯುವುದು ಸರ್ವೇಸಾಮಾನ್ಯ. ಆದರೆ ಒಡಿಶಾದ 64 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ವೈದ್ಯರಾಗಲು ಮುಂದಾಗಿದ್ದಾರೆ.

    1956 ರಲ್ಲಿ ಜನಿಸಿದ ಜೇ ಕಿಶೋರ್ ಪ್ರಧಾನ್ ಇದೀಗ ವೈದ್ಯರಾಗಲು ನೀಟ್ ಬರೆದು ತೇರ್ಗಡೆಗೊಂಡವರು. ಒಡಿಶಾದ ಪ್ರಧಾನ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಒಂದಾದ ಬುರ್ಲಾದ ವೀರ್ ಸುರೇಂದ್ರ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ (ವಿಮ್ಸಾರ್)ನಲ್ಲಿ ನಾಲ್ಕು ವರ್ಷಗಳ ಎಂಬಿಬಿಎಸ್ ಪದವಿ ತರಗತಿಗಾಗಿ ತಯಾರಾಗಿದ್ದಾರೆ.

    ಒಡಿಶಾದ ಬಾರ್ ಗ ಜಿಲ್ಲೆಯ ಅಟಾಬಿರಾದವರಾದ ಜೇ ಕಿಶೋರ್ ಪ್ರಧಾನ್ ಎಂಬಿಬಿಎಸ್ ಕಲಿಯಲು ಬೇಕಾದ ಎಲ್ಲಾ ತಯಾರಿ ಮುಗಿಸಿದ್ದಾರೆ. ಹಿರಿಯ ನಾಗರೀಕರಾದ ಇವರಿಗೆ ಹೃದ್ರೋಗ, ಶ್ವಾಸಕೋಶದ ಕಾಯಿಲೆ ಮತ್ತು ನೆಫ್ರಾಲಜಿ ಪರೀಕ್ಷೆಯಿಂದ ರಿಯಾಯಿತಿ ಕೊಡಲಾಗಿದ್ದು, ಅಧ್ಯಯನಕ್ಕಾಗಿ ಅವಕಾಶ ಮಾಡಿ ಕೊಡಲಾಗಿದೆ.

    2016ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಪ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು. ನಂತರ ಇದೀಗ ಈ ನಿರ್ಧಾರವನ್ನು ಕಂಡು ಹಲವರು ಅಶ್ಚರ್ಯಗೊಂಡಿದ್ದಾರೆ. ಜೇ ಕಿಶೋರ್ ಪ್ರಧಾನ್ ಅವರು ಅನೇಕ ವರ್ಷಗಳಿಂದ ಕಂಡಿದ್ದ ಕನಸನ್ನು ನನಸು ಮಾಡಲು ಹೊರಟಿದ್ದು ಇದರ ಕುರಿತು ಹೇಳಿಕೆ ಕೊಟ್ಟಿದ್ದಾರೆ. 1970 ದಶಕದಲ್ಲಿ ನನ್ನ ಕನಸನ್ನು ಈಡೇರಿಸಲು ಆಗಿರಲಿಲ್ಲ. ನಂತರ ತಯಾರಿಯನ್ನು ನಿರಂತರ ಮುಂದುವರಿಸಿದೆ. ಬಿಎಸ್ಸಿ ಸೇರಿಕೊಂಡ ನಂತರ ಈ ಕನಸಿಗೆ ಇನ್ನಷ್ಟೂ ರೆಕ್ಕೆ ಪುಕ್ಕಗಳು ಸೇರಿದವು ಆದರೆ ಸಾಧಿಸಲು ಆಗಿರಲ್ಲ. ಈ ಪ್ರಜ್ಞೆ ನನ್ನನ್ನು ಕಾಡುತ್ತಲೇ ಇತ್ತು ಎಂದಿದ್ದಾರೆ.

    ಇದಲ್ಲದೆ ನಾನು ವೈದ್ಯಕೀಯ ವಿಜ್ಞಾನಕ್ಕೆ ಹೆಚ್ಚಿನ ಒಲವನ್ನು ತೋರಿದ್ದು 1982ರಲ್ಲಿ. ನನ್ನ ತಂದೆ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. 1987ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಉನ್ನತ ಚಿಕಿತ್ಸೆಗಾಗಿ ವೆಲ್ಲೂರಿಗೆ ಕರೆದೊಯ್ಯಲಾಯಿತು. ಯಶಸ್ವಿ ಚಿಕಿತ್ಸೆಯ ಪರಿಣಾಮವಾಗಿ ನನ್ನ ತಂದೆ ಜನವರಿ 2010ರ ವರೆಗೆ ಬದುಕುಳಿದರು. ಇದರಿಂದ ನನಗೆ ಇನ್ನಷ್ಟೂ ಹೆಚ್ಚಿನ ಗಮನ ವೈದ್ಯಕೀಯದತ್ತ ನೆಟ್ಟಿತು ಎಂದು ವಿವರಿಸಿದರು.

    ವೈದ್ಯಕೀಯ ಅಧ್ಯಯನದ ಹೆಚ್ಚಿನ ಆಸಕ್ತಿಯಿಂದಾಗಿ 15 ವರ್ಷಗಳ ಬ್ಯಾಕಿಂಗ್ ಸೇವೆಯ ನಂತರ ಸ್ವಯಂಪ್ರೇರಿತ ನಿವೃತ್ತಿ ಪಡೆದುಕೊಳ್ಳುವ ಹುಚ್ಚಾಟಕ್ಕೆ ಹೋಗಿದ್ದೆ, ಆದರೆ ಕೊನೆಗೆ ಕುಟುಂಬ ನಡೆಸುವ ಯೋಚನೆಯ ಪರಿಣಾಮ ಕೆಲಸ ತ್ಯಜಿಸುವ ಯೋಚನೆ ಕೈ ಬಿಟ್ಟೆ.

    ನನಗೆ ಅವಳಿ ಹೆಣ್ಣು ಮಕ್ಕಳಿದ್ದಾರೆ. ಅವರು ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅವರ ತಯಾರಿಯಲ್ಲಿ ನಾನು ಸಹಾಯ ಮಾಡುತ್ತಿದ್ದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಹೆಚ್ಚಿನ ಹಿಡಿತ ಹೊಂದಿದ್ದ ನನ್ನನ್ನು ಗಮನಿಸಿದ ನನ್ನ ಮಕ್ಕಳು ಕಲಿಕೆಗೆ ನನ್ನನ್ನು ಪ್ರೇರೇಪಿಸಿದರು ಎನ್ನುತ್ತಾರೆ ಕಿಶೋರ್ ಪ್ರಧಾನ್.

    ಅಧ್ಯಯನಕ್ಕಾಗಿದ್ದ ವಯಸ್ಸಿನ ಮಿತಿಯನ್ನು 2019ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಇದೂ ನನ್ನ ಸಂಕಲ್ಪವನ್ನು ಈಡೇರಿಸಲು ದಾರಿ ಮಾಡಿ ಕೊಟ್ಟಿತ್ತು ಮತ್ತು ಎಂಬಿಬಿಎಸ್ ಕಲಿಯುವುದನ್ನು ಸವಾಲಾಗಿ ಸ್ವೀಕರಿಸಿದೆ ಎಂದರು. ನೀಟ್‍ನಲ್ಲಿ 175 ಅಂಕಗಳಿಸುವ ಮೂಲಕ 5,94,380ನೇ ರ್ಯಾಂಕ್‍ಗಳಿಸಿ ವಿಮ್ಸಾರ್‍ನಲ್ಲಿ ಎಂಬಿಬಿಎಸ್ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.

    ನನ್ನ ಅವಳಿ ಹೆಣ್ಣು ಮಕ್ಕಳಲ್ಲಿ ಒಬ್ಬಾಕೆ ಕಳೆದ ತಿಂಗಳು ದುರದೃಷ್ಟಕರವಾಗಿ ನಿಧನ ಹೊಂದಿದ್ದರಿಂದ ಈ ಸಂಭ್ರಮವನ್ನು ಆಚರಿಸಲು ಸಾಧ್ಯವಾಗಿಲ್ಲ ಇದನ್ನು ಹೊರತು ನಾನು ಮಗಳ ನೆನಪಿಗಾಗಿ ಅಧ್ಯಯನ ಮಾಡುತ್ತೇನೆ ಎನ್ನುತ್ತಾರೆ ಕಿಶೋರ್ ಪ್ರಧಾನ್.

    ಪ್ರಧಾನ್ ಅವರು ಎಂಬಿಬಿಎಸ್ ಮುಗಿಸುವ ಹೊತ್ತಿಗೆ ಅವರಿಗೆ 69 ವರ್ಷವಾಗುತ್ತದೆ. ಅಧ್ಯಯನದ ನಂತರ ಸೇವೆ ಸೇರಲು ಸಿದ್ಧರಾಗಿದ್ದೀರ ಎಂದು ಪ್ರಶ್ನಿಸಿದಾಗ ನಾನು ಈಗಲೇ ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ 5 ವರ್ಷಗಳ ನಂತರದ ದಿನಗಳಲ್ಲಿ ಖಾಸಗಿಯಾಗಿ ಅಭ್ಯಾಸ ಮಾಡುತ್ತಲೇ ಇರುತ್ತೇನೆಂದು ಹೇಳಿದರು.

    ಕಿಶೋರ್ ಪ್ರಧಾನ್ ಪದವಿ ಮುಗಿದ ತಕ್ಷಣ ಟೆಲಿಕಾಂ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ನಂತರ ಕೆಲಕಾಲ ಸ್ಥಳೀಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅರೆಕಾಲಿಕ ಶಿಕ್ಷಕರಾಗಿ ಸೇರಿದ್ದರು. ನಂತರ 1983ರಲ್ಲಿ ಎಸ್‍ಬಿಐ ಉದ್ಯೋಗಿಯಾದರು.

    ವಿಮ್ಸಾರ್‍ನ ಡೀನ್ ಮತ್ತು ಪ್ರಾಂಶುಪಾಲರಾದ ಬ್ರಜಮೋಹನ್ ಮಿಶ್ರಾ ಮಾತನಾಡಿ, ನಾನು ಪ್ರಧಾನ್ ಅವರಿಂದ ಒಂದು ವರ್ಷ ಹಿರಿಯವನಾಗಿದ್ದು ಈ ವಯಸ್ಸಿನಲ್ಲಿ ಪ್ರಧಾನ್ ಸಾಧನೆಗೆ ಪದಗಳೇ ಸಿಗುತ್ತಿಲ್ಲ. ಸುಪ್ರೀಂ ಕೋರ್ಟ್‍ನ ಆದೇಶದಂತೆ ಅಧ್ಯಯನಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಅವರನ್ನು ವೈದ್ಯಕೀಯವಾಗಿ ಅರ್ಹರೆಂದು ಹೇಳಲಾಗಿದ್ದು ಕೆಲವು ದಾಖಲೆಗಳ ಪರಿಶೀಲನೆಗಾಗಿ ಮತ್ತು ಸಹಿ ಹಾಕಿ ಕೋರ್ಸ್‍ಗೆ ಸೇರಲು ಹೇಳಲಾಗಿದೆ ಎಂದು ಮಿಶ್ರಾ ಹೇಳಿದರು.

    ನಾನು ಅವರನ್ನು ಸಹಪಾಠಿ ಎಂದು ಪರಿಗಣಿಸುತ್ತೇನೆ. ನನಗೆ ಹೊಸ ರೀತಿಯ ಅನುಭವಾಗಿದೆ ಅವರ ಮಿದುಳುಗಳು ವೈದ್ಯಕೀಯ ಅಧ್ಯನಕ್ಕಾಗಿ ಸಿದ್ಧವಾಗಿರುವುದರಿಂದಾಗಿ ಅವರಿಗೆ ಯಾವುದೇ ಸಮಸ್ಯೆ ಕಾಡಲಾರದು ಎಂದು ಸಂತಸ ಹಂಚಿಕೊಂಡರು.

  • 10 ರೂಪಾಯಿಗೆ ಚಿಕಿತ್ಸೆ ನೀಡುವ ಯುವ ವೈದ್ಯೆ

    10 ರೂಪಾಯಿಗೆ ಚಿಕಿತ್ಸೆ ನೀಡುವ ಯುವ ವೈದ್ಯೆ

    – ಅತೀ ಕಡಿಮೆ ದರದಲ್ಲಿ ಬಡವರ ಸೇವೆ

    ಹೈದರಾಬಾದ್: ಯುವ ಭಾರತೀಯ ವೈದ್ಯೆಯೊಬ್ಬರು ಕೇವಲ 10 ರೂಪಾಯಿಗೆ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಇಂದಿನ ದಿನಗಳಲ್ಲಿ ಭಾರತದ ಖಾಸಗಿ ಆಸ್ಪತ್ರೆಗಳಲ್ಲಿ ಬಡವರು ಚಿಕಿತ್ಸೆ ಪಡೆಯುವುದು ಅಸಾಧ್ಯವಾಗಿದೆ. ಆದರೆ ಆಂಧ್ರಪ್ರದೇಶದ ಯುವ ವೈದ್ಯೆ ಡಾ. ನೂರ್ ಪರ್ವೀನಾ ಮಾನವೀಯತೆಯ ದೃಷ್ಟಿಯಿಂದ ಸೇವೆ ಸಲ್ಲಿಸುವ ಒಂದು ಅದ್ಭುತವಾದ ಕೆಲಸವನ್ನು ಮಾಡುತ್ತಿದ್ದಾರೆ.

    ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ (ಎಂಬಿಬಿಎಸ್) ಕೋರ್ಸ್ ಮುಗಿಸಿದ ಡಾ.ನೂರ್ ಪರ್ವೀನಾ, ಆರ್ಥಿಕವಾಗಿ ದುರ್ಬಲಗೊಂಡಿರುವ ಕುಟುಂಬಗಳಿಗೆ ವೈದ್ಯಕೀಯ ಸೇವೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲು ಪ್ರತಿ ರೋಗಿಗೆ ಕೇವಲ 10 ರೂ. ಚಾರ್ಜ್ ಮಾಡುವ ಮೂಲಕವಾಗಿ, ಅತೀ ಕಡಿಮೆ ದುಡ್ಡಿನಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.

    ಡಾ. ನೂರ್ ಪರ್ವೀನಾ ಆಂಧ್ರಪ್ರದೇಶದ ವಿಜಯವಾಡದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದಾರೆ. ಅರ್ಹತೆಯ ಆಧಾರದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಎಂಬಿಬಿಎಸ್ ಕೋರ್ಸ್ ಗೆ ಸೇರಿಕೊಂಡರು. ವೈದ್ಯಕೀಯ ಕೋರ್ಸ್‍ನ್ನು ಮುಗಿಸಿದರು. ಉತ್ತಮವಾದ ಅಂಕಗಳಿಸಿ ಕಾಲೇಜಿನಿಂದ ಹೊರ ಬರುವಾಗ ಪರ್ವೀನಾ ವೈದ್ಯಕೀಯ ಸೇವೆ ಅಗತ್ಯ ಇರುವವರಿಗೆ ನನ್ನಿಂದ ಆದಷ್ಟು ಸಹಾಯ ಮಾಡಬೇಕು ಎಂದು ನಿರ್ಧರಿಸಿ ಬಂದಿದ್ದರು. ಇದೀಗ ಅದರಂತೆ ರೋಗಿಗಳ ಸೇವೆಯನ್ನು ಮಾಡುತ್ತಿದ್ದಾರೆ.

    ನನ್ನ ವಿದ್ಯಾಭ್ಯಾಸ ಮುಗಿಸಿ ವಿಜಯವಾಡದಲ್ಲಿರುವ ಮನೆಗೆ ಹಿಂದಿರುಗಿದಾಗ ನನ್ನ ಪೆÇೀಷಕರಿಗೆ ನನ್ನ ಕ್ಲಿನಿಕ್ ಅನ್ನು ಪ್ರಾರಂಭಿಸುತ್ತೇನೆ ಎಂದು ತಿಳಿಸಿದೆ. ಬಡವರಿಗೆ ಕಡಿಮೆ ದುಡ್ಡಿನಲ್ಲಿ ಸೇವೆಯನ್ನು ನೀಡುತ್ತೇನೆ. ನನ್ನ ಪೋಷಕರು ತುಂಬಾ ಸಂತೋಷಪಟ್ಟರು ಮತ್ತು ನನ್ನನ್ನು ಆಶೀರ್ವದಿಸಿದರು. ದುಬಾರಿ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗದ ಜನರಿಗೆ ಸಹಾಯವಾಗಲು ಕಡಪಾ ಪ್ರದೇಶದಲ್ಲಿ ನನ್ನ ಕ್ಲಿನಿಕ್ ಅನ್ನು ತೆರೆದಿದ್ದೇನೆ ಎಂದು ಡಾ ಪರ್ವೀನಾ ಹೇಳಿದರು.

    ನಾನು ಬಡವರಿಗೆ ಸಹಾಯ ಮಾಡುವ ಸ್ಪೂರ್ತಿ ನನ್ನ ತಂದೆ- ತಾಯಿಯಿಂದ ಬಂದಿದೆ. ನನ್ನ ಪೋಷಕರು ಮೂರು ಮಕ್ಕಳನ್ನು ದತ್ತು ಪಡೆದುಕೊಂಡು ಅವರಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಈ ಮೂಲಕವಾಗಿ ನನಗೆ ಜನರ ಸೇವೆ ಮಾಡುವ ಆಲೋಚನೆ ಬಂದಿದೆ ಎಂದು ಹೇಳುತ್ತಾರೆ.

    ಹೊರರೋಗಿ ಗಳಿಗೆ 10 ರೂ., ಬೆಡ್ ಚಾರ್ಜ್ 50.ರೂ ಮಾತ್ರ ತೆಗೆದುಕೊಳ್ಳುತ್ತೇನೆ. ಪ್ರತಿದಿನ ಸುಮಾರು 40 ರೋಗಿಗಳು ನನ್ನ ಚಿಕಿತ್ಸಾಲಯಕ್ಕೆ ಭೇಟಿ ನೀಡುತ್ತಾರೆ ಎಂದು ಪರ್ವೀನಾ ಹೇಳುತ್ತಾರೆ.

    ಜಿಲ್ಲಾ ಕೇಂದ್ರ ನಗರದಲ್ಲಿ, ಸಾಮಾನ್ಯವಾಗಿ ಖಾಸಗಿ ವೈದ್ಯರು ಪ್ರತಿ ಭೇಟಿಗೆ 150 ರಿಂದ 200 ರೂ. ವರೆಗೆ ಶುಲ್ಕ ವಿಧಿಸುತ್ತಾರೆ. 10 ರೂ. ಗೆ ಚಿಕಿತ್ಸೆ ನೀಡುವ ಡಾ. ನೂರ್ ಪರ್ವೀನಾ ಬಡವರಿಗೆ ಮತ್ತು ನಿರ್ಗತಿಕರಿಗೆ ಭರವಸೆಯ ಕಿರಣವಾಗಿದ್ದಾರೆ.

     

    ಕ್ಲಿನಿಕ್ ಅನ್ನು ಪ್ರಾರಂಭಿಸುವ ಮೊದಲು ಡಾ. ಪರ್ವೀನಾ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಎರಡು ಸಾಮಾಜಿಕ ಸಂಘಟನೆಯನ್ನು ಪ್ರಾರಂಭಿಸಿದ್ದರು. ಒಂದು ಸಂಸ್ಥೆ, ಸ್ಪೂರ್ತಿದಾಯಕ ಆರೋಗ್ಯಕರ ಯಂಗ್ ಇಂಡಿಯಾ, ಮಕ್ಕಳು ಮತ್ತು ಯುವಜನರಿಗೆ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಸ್ಫೂರ್ತಿ ನೀಡಲು ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು. ತನ್ನ ಅಜ್ಜನ ನೆನಪಿಗಾಗಿ ‘ನೂರ್ ಚಾರಿಟೇಬಲ್ ಟ್ರಸ್ಟ್’ ಅನ್ನು ಸಹ ಪ್ರಾರಂಭಿಸಿದ್ದಾರೆ. ಈ ಟ್ರಸ್ಟ್‍ನ ಅಡಿಯಲ್ಲಿಯೇ ಅವರು ಕೊವೀಡ್ 19 ಸಾಂಕ್ರಾಮಿಕ ರೋಗದಿಂದ ಉಂಟಾದ ಲಾಕ್‍ಡೌನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿದ್ದರು.

    ಡಾ. ಪರ್ವೀನ್ ಅವರ ಮುಂದಿನ ಯೋಜನೆಗಳಲ್ಲಿ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದು ಮತ್ತು ಹಿಂದುಳಿದ ವಿಭಾಗಗಳ ಮೇಲೆ ವಿಶೇಷ ಗಮನಹರಿಸಿ ಬಹು-ವಿಶೇಷ ಆಸ್ಪತ್ರೆಯನ್ನು ಸ್ಥಾಪಿಸುವುದಾಗಿದೆ.

    ಡಾ.ನೂರ್ ಪರ್ವೀನಾ ಅವರ ಸಾಮಾಜಿಕ ಸೇವೆಯಯನ್ನು ಗುರುತಿಸಿ ಪ್ರಶಸ್ತಿಗಳು ದೊರಕಿವೆ. ಅನೇಕ ಸಾಮಾಜಿಕ ಸಂಸ್ಥೆಗಳು ಇವರನ್ನು ಗುರುತಿಸಲು ಪ್ರಾರಂಭಿಸಿವೆ.