Tag: Medical waste

  • ಮಂಗಳೂರಿಗರಿಗೆ ತ್ಯಾಜ್ಯ, ಮೆಡಿಕಲ್ ವೇಸ್ಟ್ ಡಂಪಿಂಗ್‌ – ಕಂಟಕವಾಯ್ತಾ ನೆರೆಯ ಕೇರಳ..?

    ಮಂಗಳೂರಿಗರಿಗೆ ತ್ಯಾಜ್ಯ, ಮೆಡಿಕಲ್ ವೇಸ್ಟ್ ಡಂಪಿಂಗ್‌ – ಕಂಟಕವಾಯ್ತಾ ನೆರೆಯ ಕೇರಳ..?

    – ಕೃತ್ಯಕ್ಕೆ ಮಂಗಳೂರು ಪಾಲಿಕೆ ಅಧಿಕಾರಿಗಳಿಂದಲೇ ಸಾಥ್

    ಮಂಗಳೂರು: ಕೇರಳದ ಕೊಳಚೆ ತ್ಯಾಜ್ಯ ಮಂಗಳೂರಿಗೆ (Mangaluru) ತಂದು ಸುರಿಯಲಾಗುತ್ತಿದ್ದ ವಿಚಾರ ಭಾರೀ ಸುದ್ದಿ ಮಾಡಿತ್ತು. ಆದ್ರೆ ಕೊಳಚೆ ತ್ಯಾಜ್ಯ ಮಾತ್ರ ಸುರಿಯುತ್ತಿರಲಿಲ್ಲ. ಬದಲಾಗಿ, ಬಯೋ ಮೆಡಿಕಲ್ ವೇಸ್ಟ್ (Medical Waste) ಸುರಿಯುತ್ತಿದ್ದರು ಎನ್ನುವ ಆತಂಕಕಾರಿ ಮಾಹಿತಿ ಬಯಲಾಗಿದೆ. ಹೀಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಪಾಲಿಕೆಯ ಸಭೆ ನಡೆಸಿ, ತಡೆಗಟ್ಟಲು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

    ಇತ್ತೀಚೆಗೆ ಕೇರಳದಿಂದ (Kerala) ಕೊಳಚೆ ತ್ಯಾಜ್ಯ ತಂದು ಮಂಗಳೂರಿನ ನದಿ, ಚರಂಡಿಗಳಿಗೆ ಸುರಿಯುತ್ತಿದ್ದ ವಿಚಾರ ಭಾರೀ ಸದ್ದು ಮಾಡಿತ್ತು. ಆದ್ರೀಗ ಕೊಳೆಚೆ ತ್ಯಾಜ್ಯ ಮಾತ್ರವಲ್ಲ, ಬಯೋ ಮೆಡಿಕಲ್ ವೇಸ್ಟ್ ಕೂಡ ಸುರಿಯುತ್ತಿದ್ದರು ಎನ್ನುವ ಆತಂಕಕಾರಿ ಮಾಹಿತಿ ಬಯಲಾಗಿದೆ. ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಮೂವರು ಪಾದಚಾರಿಗಳ ಮೇಲೆ ಹರಿದ ಕಾರು – ಓರ್ವ ಸಾವು

    ಹೌದು. ಅಕ್ರಮವಾಗಿ ಬಯೋ ಮೆಡಿಕಲ್ ವೇಸ್ಟ್ ಕೂಡ ತಂದು ಮಂಗಳೂರಿನ ಸಿಕ್ಕ ಸಿಕ್ಕ ಹಳ್ಳಕ್ಕೆ ಬೀಸಾಕಿ ಹೋಗುತ್ತಿದ್ದರು. ಇದರಿಂದ ಜಲಚರಗಳಿಗೆ ಹಾಗೂ ಜೀವ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಮಂಗಳೂರು ನಗರ ಪಾಲಿಕೆ ಸೇರಿದ ಎರಡು ಟ್ಯಾಂಕರ್‌ಗಳು ಕೃತ್ಯದಲ್ಲಿ ಭಾಗಿಯಾಗಿತ್ತು. ಪಾಲಿಕೆ ಅಧಿಕಾರಿಗಳು ಕೃತ್ಯದಲ್ಲಿ ಕೈಜೋಡಿಸಿದ್ರು ಅಂತ ಅಧಿಕಾರಿಗಳ ವಿರುದ್ಧ ಕೇಸ್ ಹಾಕಲಾಗಿದೆ.

    ಈ ಬೆನ್ನಲ್ಲೇ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಮಹಾ ಕುಂಭ ಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಬೆಳಗಾವಿಯ 7 ಮಂದಿ ದುರ್ಮರಣ

    https://youtu.be/9aRZwimkiN0?si=1pIJY_bEtIdzMSF8

    ಕೇರಳದಿಂದ ಈ ರೀತಿಯಲ್ಲಿ ಬಯೋ ಮೆಡಿಕಲ್ ವೇಸ್ಟ್ ಸುರಿಯುವ ವಿಚಾರ ಭಾರೀ ಆತಂಕಕಾರಿ.. ಇದರಿಂದ ರೋಗ ರುಜಿನ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪಾಲಿಕೆ ಈ ವಿಚಾರ ಗಂಭೀರವಾಗಿ ತೆಗೆದುಕೊಂಡು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಇದನ್ನೂ ಓದಿ: ವ್ಯಕ್ತಿಯೊಬ್ಬನಿಂದ ಕಿರುಕುಳ ಆರೋಪ – ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಆತ್ಮಹತ್ಯೆ

  • ಬೇಕಾಬಿಟ್ಟಿಯಾಗಿ ಬಿಸಾಕಿದ ಮೆಡಿಕಲ್ ವೇಸ್ಟ್ – ಸಾರ್ವಜನಿಕರ ಆಕ್ರೋಶ

    ಬೇಕಾಬಿಟ್ಟಿಯಾಗಿ ಬಿಸಾಕಿದ ಮೆಡಿಕಲ್ ವೇಸ್ಟ್ – ಸಾರ್ವಜನಿಕರ ಆಕ್ರೋಶ

    ರಾಯಚೂರು: ಬೇಕಾಬಿಟ್ಟಿಯಾಗಿ ನಗರದ ಬೀಜನಗೇರಾ ರಸ್ತೆಯಲ್ಲಿ ಮೆಡಿಕಲ್ ತ್ಯಾಜ್ಯವನ್ನು ಬಿಸಾಡುತ್ತಿರುವ ಹಿನ್ನೆಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ರಾಯಚೂರಿನ ಬೀಜನಗೇರಾ ರಸ್ತೆಯಲ್ಲಿ ಮೆಡಿಕಲ್ ವೇಸ್ಟ್ ಅನ್ನು ಆಸ್ಪತ್ರೆ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಬೀಸಾಡಿ ಹೋಗುತ್ತಿದ್ದು, ಈ ಮೂಲಕ ಬೇಜವಾಬ್ದಾರಿತನ ಮೆರೆದಿದ್ದಾರೆ. ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಿದ ಇಂಜೆಕ್ಷನ್, ಗ್ಲುಕೋಸ್ ಬಾಟಲ್, ಸಿರೆಂಜ್, ಔಷಧಿ ಸೇರಿದಂತೆ ಉಳಿದ ತ್ಯಾಜ್ಯವನ್ನ ಸರಿಯಾಗಿ ವಿಲೇವಾರಿ ಮಾಡದೆ ಬಿಸಾಡಲಾಗಿದೆ. ಇದನ್ನೂ ಓದಿ:  ವಾಮಾಚಾರ ನಡೆಸಿ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿಗಾಗಿ ಶೋಧ – ಇಬ್ಬರ ಬಂಧನ

    ಮೆಡಿಕಲ್ ತ್ಯಾಜ್ಯವನ್ನ ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ರೋಗಿಗಳಿಗೆ ಬಳಕೆ ಮಾಡಿದ ಸಿರೇಂಜ್ ಹಾಗೂ ಔಷಧಿಯನ್ನ ವೈಜ್ಞಾನಿಕವಾಗಿಯೇ ವಿಲೇವಾರಿ ಮಾಡಬೇಕು. ಆದ್ರೆ ಆಸ್ಪತ್ರೆ ಸಿಬ್ಬಂದಿ ಯಾವುದನ್ನೂ ಪರಿಗಣೆನೆಗೆ ತೆಗೆದುಕೊಳ್ಳದೆ ಬೇಕಾಬಿಟ್ಟಿಯಾಗಿ ಬಿಸಾಡಲಾಗಿದೆ. ಇದು ಯಾವ ಆಸ್ಪತ್ರೆಯ ತ್ಯಾಜ್ಯ ಅನ್ನೋದು ಸ್ಪಷ್ಟವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

    ಸ್ಥಳೀಯರು ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ರೂ ಪ್ರಯೋಜನ ಇಲ್ಲ. ತ್ಯಾಜ್ಯ ಎಸೆದವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ತ್ಯಾಜ್ಯವನ್ನ ವ್ಯವಸ್ಥಿತವಾಗಿ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಣ್ಣು ಮಾರಿ ಮನೆ ನಡೆಸಿದ 60ರ ಅಜ್ಜಿ ಮೂರೇ ವರ್ಷದಲ್ಲಿ ಹೈರಾಣಾದ ಕಥೆ

  • 4 ತಿಂಗ್ಳಲ್ಲಿ ಸಂಗ್ರಹವಾಯ್ತು 18 ಸಾವಿರ ಟನ್ ಕೊರೊನಾ ವೈದ್ಯಕೀಯ ತ್ಯಾಜ್ಯ

    4 ತಿಂಗ್ಳಲ್ಲಿ ಸಂಗ್ರಹವಾಯ್ತು 18 ಸಾವಿರ ಟನ್ ಕೊರೊನಾ ವೈದ್ಯಕೀಯ ತ್ಯಾಜ್ಯ

    – ಮಹಾರಾಷ್ಟ್ರದಲ್ಲಿ 3,587 ಟನ್, ಕರ್ನಾಟಕದಲ್ಲಿ ಎಷ್ಟು?

    ನವದೆಹಲಿ: ಜೂನ್ ನಿಂದ ಸೆಪ್ಟೆಂಬರ್ ವರೆಗೆ ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ ದೇಶದಲ್ಲಿ 18 ಸಾವಿರಕ್ಕೂ ಅಧಿಕ ಟನ್ ವೈದ್ಯಕೀಯ ತ್ಯಾಜ್ಯ ಸಂಗ್ರಹಣೆಯಾಗಿದೆ. ಇದರಲ್ಲಿ ಕೊರೊನಾ ಪೀಡಿತ ರಾಜ್ಯಗಳ ಪೈಕಿ ಪ್ರಥಮ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 3,587 ಟನ್ ತ್ಯಾಜ್ಯ ಸಂಗ್ರಹಣೆಯಾಗಿರುವ ಬಗ್ಗೆ ವರದಿಯಾಗಿದೆ.

    ಕಳೆದ ನಾಲ್ಕು ತಿಂಗಳ 18,006 ಟನ್ ಪೈಕಿ ಸೆಪ್ಟೆಂಬರ್ ನಲ್ಲಿ 5,500 ಟನ್ ಕೋವಿಡ್-19 ವೈದ್ಯಕೀಯ ತ್ಯಾಜ್ಯ ಶೇಖರಣೆಯಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ನೀಡಿದ ಅಂಕಿ-ಸಂಖ್ಯೆ ಅನುಸಾರವಾಗಿ ಮಾಹಿತಿ ಕಲೆ ಹಾಕಲಾಗಿದೆ. ಈ ತ್ಯಾಜ್ಯದಲ್ಲಿ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್, ಬ್ಲಡ್ ಬ್ಯಾಗ್, ಸೂಜಿ, ಸಿರಿಂಜ್ ಇನ್ನಿತರ ವಸ್ತುಗಳು ಸೇರಿವೆ.

    ಕಳೆದ ನಾಲ್ಕು ತಿಂಗಳಲ್ಲಿ ಅತಿ ಹೆಚ್ಚು ಕೊರೊನಾ ಪೀಡಿತ ರಾಜ್ಯಗಳಿಂದಲೇ ಕೋವಿಡ್-19 ತ್ಯಾಜ್ಯ ಸಂಗ್ರಹಣೆಯಾಗಿದೆ. ಮಹಾರಾಷ್ಟ್ರ 3,587 ಟನ್, ತಮಿಳನಾಡು 1,737 ಟನ್, ಗುಜರಾತ 1,638 ಟನ್, ಕೇರಳ 1,516 ಟನ್, ಉತ್ತರ ಪ್ರದೇಶ 1,416 ಟನ್, ದೆಹಲಿ 1,400 ಟನ್, ಕರ್ನಾಟಕ 1,380 ಟನ್ ಮತ್ತು ಪಶ್ಚಿಮ ಬಂಗಾಳದಲ್ಲಿ 1,000 ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ. ಈ ತ್ಯಾಜ್ಯವನ್ನು 198 ಘಟಕಗಳಿಂದ ವಿಲೇವಾರಿ ಮಾಡಲಾಗುತ್ತಿದೆ.

    ಸೆಪ್ಟೆಂಬರ್ ನಲ್ಲಿ ಕೊರೊನಾ ಪ್ರಕರಣಗಳ ಜೊತೆಯಲ್ಲಿಯೇ ವೈದ್ಯಕೀಯ ತ್ಯಾಜ್ಯ ಸಂಗ್ರಹಣೆಯೂ ಹೆಚ್ಚಾಗಿದೆ. ಸೆಪ್ಟೆಂಬರ್ ನಲ್ಲಿ ಗುಜರಾತಿನಲ್ಲಿ 622 ಟನ್ ಕಸ ಉತ್ಪತ್ತಿಯಾಗಿದೆ. ತಮಿಳನಾಡು 543 ಟನ್, ಮಹಾರಾಷ್ಟ್ರ 524 ಟನ್, ಉತ್ತರ ಪ್ರದೇಶ 507 ಟನ್, ಕೇರಳ 494 ಟನ್ ಮತ್ತು ದೆಹಲಿಯಲ್ಲಿ 383 ಟನ್ ತ್ಯಾಜ್ಯ ಸಂಗ್ರಹಣೆಯಾಗಿದೆ.

    ಕಳೆದ 24 ಗಂಟೆಯಲ್ಲಿ 66,732 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 71,20,539ಕ್ಕೆ ಏರಿಯಾಗಿದೆ. ಇನ್ನೂ ಶನಿವಾರ ಒಂದೇ ದಿನ 816 ಮಂದಿ ಸಾವನ್ನಪ್ಪಿದ್ದಾರೆ. 71,20,539ರ ಪೈಕಿ 61,49,536 ಮಂದಿ ಈವರೆಗೂ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯಕ್ಕೆ 8,61,853 ಸಕ್ರಿಯ ಪ್ರಕರಣಗಳಿವೆ. 24 ಗಂಟೆಯಲ್ಲಿ 816 ಮಂದಿ ಸಾವನ್ನಪ್ಪಿದ್ದು, ಈವರೆಗೂ ದೇಶದಲ್ಲಿ 01,09,150 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

  • ಅವೈಜ್ಞಾನಿಕ ಮೆಡಿಕಲ್ ತ್ಯಾಜ್ಯ ವಿಲೇವಾರಿ: ಕ್ಲಿನಿಕ್‍ಗಳ ಬಾಗಿಲು ಮುಚ್ಚಿಸಿದ ಆರೋಗ್ಯ ಇಲಾಖೆ!

    ಅವೈಜ್ಞಾನಿಕ ಮೆಡಿಕಲ್ ತ್ಯಾಜ್ಯ ವಿಲೇವಾರಿ: ಕ್ಲಿನಿಕ್‍ಗಳ ಬಾಗಿಲು ಮುಚ್ಚಿಸಿದ ಆರೋಗ್ಯ ಇಲಾಖೆ!

    ದಾವಣಗೆರೆ: ಕಾನೂನು ಬಾಹಿರವಾಗಿ ಹಾಗೂ ಅವೈಜ್ಞಾನಿಕವಾಗಿ ಮೆಡಿಕಲ್ ತ್ಯಾಜ್ಯವನ್ನು ಸಂಸ್ಕರಣೆ ಮಾಡಿದ್ದಕ್ಕೆ ಆರೋಗ್ಯ ಇಲಾಖೆ ನಗರದಲ್ಲಿ ದಾಳಿ ನಡೆಸಿ ಕೆಲವು ಕ್ಲಿನಿಕ್‍ಗಳಿಗೆ ಬೀಗ ಜಡಿದಿದೆ.

    ಖಾಸಗಿ ಕ್ಲಿನಿಕ್ ನಡೆಸುವವರು ಅವೈಜ್ಞಾನಿಕವಾಗಿ ಮೆಡಿಕಲ್ ವೇಸ್ಟ್ ಅನ್ನು ಬೇರ್ಪಡಿಸುವುದು ಅಲ್ಲದೇ ಆ ತ್ಯಾಜ್ಯಗಳನ್ನು ರಸ್ತೆಯ ಪಕ್ಕದಲ್ಲಿ ಹಾಕಿ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಆರೋಗ್ಯ ಇಲಾಖೆಗೆ ದೂರು ನೀಡಿದ್ದರು.

    ವ್ಯಾಪಕವಾಗಿ ದೂರು ದಾಖಲಾದ ಹಿನ್ನೆಲೆಯಲ್ಲಿ ನಗರದ ಪಿ.ಜೆ.ಬಡಾವಣೆಯಲ್ಲಿ ಡಿಹೆಚ್‍ಓ ತ್ರಿಪುಲಾಂಭಾ ಹಾಗೂ ನರ್ಸಿಂಗ್ ಹೋಂ ಅಸೋಸಿಯೇಷನ್ ಅಧ್ಯಕ್ಷ ನಾಗಪ್ರಕಾಶ್ ನೇತೃತ್ವದಲ್ಲಿ ಸುಮಾರು 15 ಕ್ಲಿನಿಕ್‍ಗಳ ಮೇಲೆ  ಇಂದು ದಾಳಿ ನಡೆಸಲಾಗಿತ್ತು.

    ದಾಳಿ ವೇಳೆ ಖಾಸಗಿ ಕ್ಲಿನಿಕ್ ಗಳಾದ ಗುರುಶ್ರೀ ಕ್ಲಿನಿಕ್, ಎಸ್ ಆರ್ ಎಲ್ ಡಯಾಕ್ನೋಸ್ಟಿಕ್ಸ್, ಗೋಕುಲ್ ಕ್ಲಿನಿಕ್ ಸೇರಿದಂತೆ ಹಲವು ಕ್ಲಿನಿಕ್ ಗಳಲ್ಲಿ ಅವೈಜ್ಞಾನಿಕವಾಗಿ ಮೆಡಿಕಲ್ ವೇಸ್ಟ್ ವಿಲೇವಾರಿ ಕಂಡು ಬಂದ ಹಿನ್ನೆಲೆಯಲ್ಲಿ ಕ್ಲಿನಿಕ್ ಗಳ ಪರವಾನಿಗೆ ರದ್ದುಗೊಳಿಸಿ, ಕ್ಲಿನಿಕ್ ಗಳನ್ನು ಸೀಜ್ ಮಾಡಿದ್ದಾರೆ.

    ಈ ಹಿಂದೆ ನಗರದ ಗುಜುರಿಯಲ್ಲಿ ರಾಶಿ ರಾಶಿ ಮೆಡಿಕಲ್ ವೇಸ್ಟ್ ಪತ್ತೆಯಾಗಿದ್ದರ ಕುರಿತು ಜೂನ್ 24ರಂದು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದನ್ನೂ ಓದಿ: ಗುಜುರಿಯಲ್ಲಿ ಪತ್ತೆಯಾಯ್ತು ರಾಶಿ ರಾಶಿ ಮೆಡಿಕಲ್ ತ್ಯಾಜ್ಯ!

  • ಗುಜುರಿಯಲ್ಲಿ ಪತ್ತೆಯಾಯ್ತು ರಾಶಿ ರಾಶಿ ಮೆಡಿಕಲ್ ತ್ಯಾಜ್ಯ!

    ಗುಜುರಿಯಲ್ಲಿ ಪತ್ತೆಯಾಯ್ತು ರಾಶಿ ರಾಶಿ ಮೆಡಿಕಲ್ ತ್ಯಾಜ್ಯ!

    ದಾವಣಗೆರೆ: ಆಸ್ಪತ್ರೆಯಲ್ಲಿ ಉಪಯೋಗಿಸಿ ಬಿಸಾಡಿರುವ ರಾಶಿ ರಾಶಿ ಮೆಡಿಕಲ್ ತ್ಯಾಜ್ಯ ಸ್ಥಳೀಯ ಗುಜರಿ ಅಂಗಡಿಯಲ್ಲಿ ಪತ್ತೆಯಾಗಿರುವ ಘಟನೆ ಗಾಂಧಿನಗರದ ಬಳಿ ನಡೆದಿದೆ.

    ಗಾಂಧಿನಗರದ ಸಾರ್ವಜನಿಕ ರುದ್ರಭೂಮಿಯ ಹಿಂಭಾಗ ಗುಜುರಿ ಅಂಗಡಿಯಲ್ಲಿ ಉಪಯೋಗಿಸಿದ ಸೂಜಿ-ಸಿರಂಜ್‍ಗಳ ಮೂಟೆಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಮಾಡಿದೆ.

    ಆರೋಗ್ಯ ಇಲಾಖೆಯ ಪ್ರಕಾರ ಆಸ್ಪತ್ರೆಯಲ್ಲಿ ಒಂದು ಬಾರಿ ಉಪಯೋಗಿಸಿದ ಯಾವುದೇ ವಸ್ತುಗಳನ್ನು ಮರುಬಳಕೆ ಮಾಡುವಂತಿಲ್ಲ. ಬಯೋ ಮೆಡಿಕಲ್ ವೇಸ್ಟ್ ಅನ್ನು ಆಸ್ಪತ್ರೆಯಲ್ಲಿ ಬಳಸಿದ ನಂತರ ಅವುಗಳನ್ನು ಹೊರಗೂ ಬಿಡದೇ ಆಸ್ಪತ್ರೆಯಲ್ಲಿ ಸುಟ್ಟುಹಾಕಬೇಕು, ಇಲ್ಲವೇ ಆಳವಾಗಿ ಮಣ್ಣಿನಲ್ಲಿ ಹೂತು ಹಾಕಬೇಕು.

     

    ಹೀಗಿರುವಾಗ ಕ್ವಿಂಟಲ್ ಗಟ್ಟಲೇ ಮೆಡಿಕಲ್ ತ್ಯಾಜ್ಯ ಗುಜುರಿ ಅಂಗಡಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮೆಡಿಕಲ್ ತ್ಯಾಜ್ಯಗಳನ್ನು ಪುನರ್ ಬಳಕೆ ಮಾಡುವ ಮಾಫಿಯಾ ತಲೆ ಎತ್ತುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

    ಘಟನೆ ಕುರಿತು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಾಖೆಯು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

  • ಖಾಲಿ ನಿವೇಶನಗಳಲ್ಲಿ ಮೆಡಿಕಲ್ ತ್ಯಾಜ್ಯ ಹಾಕುತ್ತಿದ್ದ ವ್ಯಕ್ತಿ ವಿರುದ್ಧ ಜನರ ಆಕ್ರೋಶ

    ಖಾಲಿ ನಿವೇಶನಗಳಲ್ಲಿ ಮೆಡಿಕಲ್ ತ್ಯಾಜ್ಯ ಹಾಕುತ್ತಿದ್ದ ವ್ಯಕ್ತಿ ವಿರುದ್ಧ ಜನರ ಆಕ್ರೋಶ

    ದಾವಣಗೆರೆ: ಖಾಲಿ ನಿವೇಶನಗಳಲ್ಲಿ ಟನ್ ಗಟ್ಟಲ್ಲೆ ಮೆಡಿಕಲ್ ವೇಸ್ಟ್ ಹಾಕಿ ಸುಡಲು ಮುಂದಾದ ಘಟನೆ ದಾವಣಗೆರೆಯ ರಾಮನಗರದಲ್ಲಿ ನಡೆದಿದೆ.

    ಪ್ರತಿನಿತ್ಯ ಅನೈಸರ್ಗಿಕವಾಗಿ ಮೆಡಿಕಲ್ ವೇಸ್ಟ್ ಸುಡುತ್ತಿದ್ದು, ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುವಂತಾಗಿತ್ತು. ಇಂದು ಸಹ ವೇಸ್ಟ್ ಮೆಡಿಸಿನ್ ಸುಡಲು ಬಂದ ವಾಹನವನ್ನು ಅಲ್ಲಿನ ನಿವಾಸಿಗಳು ತಡೆದು ತಂದವರಿಗೆ ಛೀಮಾರಿ ಹಾಕಿದ್ದಾರೆ.

    ಮೆಡಿಕಲ್ ವೇಸ್ಟ್ ಸುಡುವುದರಿಂದ ಪರಿಸರ ಮತ್ತು ನಾಗರಿಕರ ಮೇಲೆ ದುಷ್ಪರಿಣಾಮ ಬೀರುತ್ತೆ ಅಂತ ಗೊತ್ತಿದ್ದರೂ ಸಹ ಅದನ್ನು ಲೆಕ್ಕಿಸದೆ ಫಾರ್ಮಸಿ ಮಾಲೀಕರು ಜನರ ಆರೋಗ್ಯದ ಜೊತೆ ಅಟವಾಡುತ್ತಿದ್ದಾರೆ.

    ವೇಸ್ಟ್ ಮೆಡಿಸಿನ್ ಸುಡಲು ಸರ್ಕಾರದಿಂದ ವ್ಯವಸ್ಥೆ ಮಾಡಿದ್ರು ಅದನ್ನು ಫಾರ್ಮಸಿ ಮಾಲೀಕರು ಉಪಯೋಗಿಸಿಕೊಳ್ಳದೆ ಖಾಲಿ ನಿವೇಶನಗಳಿಗೆ ತಂದು ಸುರಿಯುತ್ತಾರೆ ಎಂದು ಸ್ಥಳೀಯರು ಅರೋಪ ಮಾಡುತ್ತಿದ್ದಾರೆ. ಇನ್ನು ಇಷ್ಟೆಲ್ಲ ಅವಾಂತರ ನಡಿತಾ ಇದ್ರೂ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ಆ್ಯಕ್ಟ್ ನ ಉಲ್ಲಂಘನೆ ಮಾಡುತ್ತಿದ್ರೂ ಡ್ರಗ್ ಕಂಟ್ರೋಲರ್ ಅಧಿಕಾರಿಗಳು ಮಾತ್ರ ಯಾವ ಕ್ರಮವನ್ನು ಕೈಗೊಂಡಿಲ್ಲ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.