Tag: medical treatment

  • ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್‌

    ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್‌

    – ಪ್ರತಿಯೊಂದು ಆಸ್ಪತ್ರೆಯೂ ವೈದ್ಯಕೀಯ ಸೌಲಭ್ಯಗಳ ಫಲಕ ಅಳವಡಿಸುವಂತೆ ಸೂಚನೆ

    ನವದೆಹಲಿ: ಸರ್ಕಾರಿ, ಖಾಸಗಿ ಆಸ್ಪತ್ರೆಗಳು (Government And Private Hospitals) ಮತ್ತು ನರ್ಸಿಂಗ್ ಹೋಂಗಳು ಅತ್ಯಾಚಾರ, ಆಸಿಡ್ ದಾಳಿ ಮತ್ತು ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನಿರಾಕರಿಸುವಂತಿಲ್ಲ, ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಚಿಕಿತ್ಸೆ ನಿರಾಕರಿಸುವುದು ಅಪರಾಧವಾಗಿದ್ದು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮತ್ತು ಆಡಳಿತ ಮಂಡಳಿಗೆ ದಂಡ ವಿಧಿಸಬಹುದು ಎಂದು ದೆಹಲಿ ಹೈಕೋರ್ಟ್ (Delhi High Court) ಮಹತ್ವದ ಅದೇಶ ನೀಡಿದೆ.

    16 ವರ್ಷದ ಬಾಲಕಿಯ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರ ಪೀಠ ಹಲವು ನಿರ್ದೇಶನಗಳನ್ನು ನೀಡಿದೆ. ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್‌ಗಳು, ವೈದ್ಯಕೀಯ ಕೇಂದ್ರಗಳು ಅತ್ಯಾಚಾರ ಸಂತ್ರಸ್ತರು/ಬದುಕುಳಿದವರು, ಪೋಕ್ಸೋ ಪ್ರಕರಣದಲ್ಲಿ ಬದುಕುಳಿದವರು ಮತ್ತು ಲೈಂಗಿಕ ದಾಳಿಗಳಿಂದ ಬದುಕುಳಿದವರು ಇತ್ಯಾದಿಗಳಿಗೆ ಉಚಿತ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸುವುದು ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

    STOP RAPE

    ದೆಹಲಿಯ ಪ್ರತಿಯೊಂದು ಆಸ್ಪತ್ರೆಯೂ ವೈದ್ಯಕೀಯ ಸೌಲಭ್ಯಗಳ ಫಲಕ ಅಳವಡಿಸಬೇಕು, ಮುಖ್ಯವಾಗಿ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಆಸಿಡ್ ದಾಳಿಯ ಬಲಿಪಶುಗಳು/ ಬದುಕುಳಿದವರಿಗೆ ಉಚಿತ ಹೊರರೋಗಿ ಮತ್ತು ಒಳರೋಗಿ ವೈದ್ಯಕೀಯ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸುವ ಬೋರ್ಡ್ ಅನ್ನು ಹಾಕಬೇಕು. ಅಪರಾಧಗಳಲ್ಲಿ ಬದುಕುಳಿದವರನ್ನು ತಕ್ಷಣವೇ ಪರೀಕ್ಷಿಸಬೇಕು ಮತ್ತು ಅಗತ್ಯವಿದ್ದರೆ HIV ಯಂತಹ ಲೈಂಗಿಕವಾಗಿ ಹರಡುವ ರೋಗಗಳಿಗೆ ಚಿಕಿತ್ಸೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

    ಅಂತಹ ಬಲಿಪಶು/ಬದುಕುಳಿದವರಿಗೆ ದೈಹಿಕ ಮತ್ತು ಮಾನಸಿಕ ಸಮಾಲೋಚನೆ ನೀಡಬೇಕು, ತುರ್ತು ಸಂದರ್ಭಗಳಲ್ಲಿ ಸಂತ್ರಸ್ತೆಯನ್ನು ದಾಖಲಿಸಲು ಸಂಬಂಧಪಟ್ಟ ವೈದ್ಯಕೀಯ ಸಂಸ್ಥೆಯು ಗುರುತಿನ ಪುರಾವೆಯನ್ನು ಒತ್ತಾಯಿಸಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ.

    ಮಗಳ ಮೇಲೆ ಅತ್ಯಾಚಾರವೆಸಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆರೋಪಿಯ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ನ್ಯಾಯಾಲಯ ಮತ್ತು ದೆಹಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಡಿಎಲ್‌ಎಸ್‌ಎ) ಪುನರಾವರ್ತಿತ ಹಸ್ತಕ್ಷೇಪದ ಹೊರತಾಗಿಯೂ ಬದುಕುಳಿದವರು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಕಾಯಬೇಕಾಯಿತು ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ.

  • 5 ವರ್ಷಗಳಿಂದ ಹಾಸಿಗೆ ಹಿಡಿದ ಮಗಳ ಚಿಕಿತ್ಸೆಗೆ ಹಣ ಒದಗಿಸಲಾಗದೇ ತಂದೆ ಆತ್ಮಹತ್ಯೆ

    5 ವರ್ಷಗಳಿಂದ ಹಾಸಿಗೆ ಹಿಡಿದ ಮಗಳ ಚಿಕಿತ್ಸೆಗೆ ಹಣ ಒದಗಿಸಲಾಗದೇ ತಂದೆ ಆತ್ಮಹತ್ಯೆ

    ಭೋಪಾಲ್: ರಸ್ತೆ ಅಪಘಾತಕ್ಕೀಡಾಗಿ ಕಳೆದ 5 ವರ್ಷಗಳಿಂದಲೂ ಹಾಸಿಗೆ ಹಿಡಿದಿರುವ ಮಗಳ ಚಿಕಿತ್ಸೆಗೆ (Medical Treatment) ಹಣ ಒದಗಿಸಲಾಗದೇ, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಮಧ್ಯಪ್ರದೇಶದ (Madhya Pradesh) ಸತ್ನಾದಲ್ಲಿ ನಡೆದಿದೆ.

    ಏನಿದು ಘಟನೆ?
    ಮಧ್ಯಪ್ರದೇಶದ ಸತ್ನಾದ ನಿವಾಸಿ ಪ್ರಮೋದ್ ಅವರ ಪುತ್ರಿ ಅನುಷ್ಕಾಗೆ 5 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ (Road Accident) ಬೆನ್ನುಮೂಳೆ ಮುರಿದು ಹಾಸಿಗೆ ಹಿಡಿದಿದ್ದಾರೆ. ಇದರಿಂದ ತಂದೆ ಪ್ರಮೋದ್, ಹಾಸಿಗೆ ಹಿಡಿದ ತನ್ನ ಮಗಳ ಚಿಕಿತ್ಸೆಗೆಂದು ಹಣ ಒದಗಿಸಲು ಹಾಗೂ ಕುಟುಂಬ ನಿರ್ವಹಣೆಗಾಗಿ ಇದ್ದ ಅಂಗಡಿ, ಮನೆ ಎಲ್ಲವನ್ನೂ ಮಾರಿದ್ದಾರೆ.

    ಎಲ್ಲವೂ ಖಾಲಿಯಾದ ನಂತರ ಕುಟುಂಬಕ್ಕೆ ಆಹಾರ ಪೂರೈಕೆ ಮಾಡಲು ರಕ್ತ ಮಾರಾಟವನ್ನೂ ಮಾಡಿದ್ದರು. ರಕ್ತ ಮಾರಾಟ ಮಾಡಿದ ನಂತರ ಪ್ರಮೋದ್ ಅನಾರೋಗ್ಯಕ್ಕೆ ತುತ್ತಾಗಿದ್ದರು, ಆ ನಂತರ ಹಣ ಸಂಪಾದನೆ ಮಾಡಲಾಗಲಿಲ್ಲ ಎಂದು ಹಾಸಿಗೆ ಹಿಡಿದಿರುವ ಪುತ್ರಿ ಅನುಷ್ಕಾ ಹೇಳಿದ್ದಾರೆ.

    17 ವರ್ಷದ ಅನುಷ್ಕಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು, ಬೋರ್ಡ್ ಪರೀಕ್ಷೆಗಳಲ್ಲೂ ವಿಶೇಷ ಸಾಧನೆ ಮಾಡಿದ್ದರು. ಅದಕ್ಕಾಗಿ ಅವರನ್ನ ಗೌರವಿಸಲಾಗಿತ್ತು. ಅನುಷ್ಕಾ ಹಾಸಿಗೆ ಹಿಡಿದ ನಂತರ ಕೆಲವರು ಸಹಾಯ ನೀಡಿದ್ದರು. ಆದ್ರೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗಲಿಲ್ಲ. ನನ್ನ ತಂದೆ ಎಷ್ಟು ಅಲೆದಾಡಿದರೂ ಪ್ರಯೋಜನ ಆಗಲಿಲ್ಲ. ಕೊನೆಗೆ ದಿನನಿತ್ಯದ ಅಗತ್ಯತೆಗಳನ್ನ ಪೂರೈಸಲು ನನ್ನ ತಂದೆ ರಕ್ತವನ್ನೂ ಮಾರಾಟ ಮಾಡಿದ್ರು. ಆದರೂ ಕುಟುಂಬ ನಿರ್ವಹಣೆ ಸಾಧ್ಯವಾಗದೇ ಇದ್ದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅನುಷ್ಕಾ ಕಣ್ಣೀರಿಟ್ಟಿದ್ದಾರೆ.

    ಸೋಮವಾರ ಬೆಳಗ್ಗಿನ ಜಾವ 4 ಗಂಟೆ ವೇಳೆಗೆ ಪ್ರಮೋದ್ ನಾಪತ್ತೆಯಾಗಿದ್ದರು. ಒಂದೆರಡುಗಂಟೆಗಳ ಕಾಲ ಹುಡುಕಿದರೂ ಸಿಗದಿದ್ದ ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಸನ್ನಾದ ರೈಲ್ವೆ ಹಳಿಯಲ್ಲಿ ಪ್ರಮೋದ್ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸನ್ನಾ ಉಪ ಪೊಲೀಸ್ ವರಿಷ್ಠಾಧಿಕಾರಿ ಖ್ಯಾತಿ ಮಿಶ್ರಾ ಹೇಳಿದ್ದಾರೆ.

  • ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಶಂಕಿತರು ವಶ

    ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಶಂಕಿತರು ವಶ

    ಜೈಪುರ: ರಾಜಸ್ಥಾನದ ಧೋಲ್ಪುರ್ ಜಿಲ್ಲೆಯ ಬರಿ ಎಂಬಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.

    ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿಕೊಂಡಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಮುಳುಗಡೆಯಾದ ಶ್ರೀಕೃಷ್ಣದೇವರಾಯ ಸಮಾಧಿ ಮಂಟಪ: ಮತ್ತೆ ಪ್ರವಾಹದ ಭೀತಿ 

    ಬ್ಯಾರಿ ಸರ್ಕಲ್ ಆಫೀಸ್ ಮನೀಶ್ ಶರ್ಮಾ ಅವರು ಈ ಕುರಿತು ಮಾಹಿತಿ ಕೊಟ್ಟಿದ್ದು, 14 ವರ್ಷದ ಬಾಲಕಿ ಮೇಲೆ 6 ರಿಂದ 7 ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬೈಕಿನಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬ ಅವಳನ್ನು ಹತ್ತಿರದ ಟೋಲ್‍ಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಆಕೆಯನ್ನು 6 ರಿಂದ 7 ಪುರುಷರು ಕರೆದೊಯ್ದಿದ್ದು, ಅತ್ಯಾಚಾರ ಮಾಡಿದ್ದಾರೆ. ಮೂವರು ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

    ಪ್ರಸ್ತುತ ಸಂತ್ರಸ್ತೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಾಗಿದೆ. ಘಟನೆಯ ಕುರಿತು ತನಿಖೆ ನಡೆಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

    CRIME 2

    ನಡೆದಿದ್ದೇನು?
    ಘಟನೆಯ ಕುರಿತು ವಿವರಿಸಿದ ಶರ್ಮಾ ಅವರು, ಸಂತ್ರಸ್ತ ಜುಲೈ 26 ರಂದು ಸಂಜೆ ಮಾರುಕಟ್ಟೆಗೆ ಹೋಗಿದ್ದಳು. ಅಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬ ಅವಳನ್ನು ತನ್ನ ಬೈಕ್‍ನಲ್ಲಿ ಕುಳಿತುಕೊಳ್ಳುವಂತೆ ಆಮಿಷವೊಡ್ಡಿದ್ದಾನೆ. ಅದಕ್ಕೆ ಆಕೆ ಬೈಕ್ ಮೇಲೆ ಕುಳಿತುಕೊಂಡಿದ್ದಾಳೆ. ಆದರೆ ಬೆಸರಿ ರಸ್ತೆಯಲ್ಲಿರುವ ಟೋಲ್‍ನಲ್ಲಿ ಅವಳನ್ನು ಬೀಳಿಸಿದ್ದಾನೆ. ತಕ್ಷಣ ಅಲ್ಲಿದ್ದ ಸುಮಾರು ಆರರಿಂದ ಏಳು ಜನರು ಆಕೆಯನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದನ್ನೂ ಓದಿ:  ಯುವತಿ ಫೋಟೋ ಬಳಸಿ ಯುವಕರಿಂದ 19 ಲಕ್ಷ ರೂ. ಎಗರಿಸಿದ್ದ ಆರೋಪಿ ಅರೆಸ್ಟ್

    ರಾತ್ರಿಯಿಡೀ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಮರುದಿನ ದೇವಸ್ಥಾನದ ಬಳಿ ಬಿಟ್ಟು ಹೋಗಿದ್ದಾರೆ. ಆಕೆಯ ಕುಟುಂಬದವರು ಆಕೆಯನ್ನು ಹುಡುಕಿಕೊಂಡು ಹೋಗುವಾಗ ದೇವಸ್ಥಾನದಲ್ಲಿ ಪತ್ತೆಯಾಗಿದ್ದಾಳೆ. ಘಟನೆಯ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದ್ದಾಳೆ. ಈ ಹಿನ್ನೆಲೆ ಕುಟುಂಬದವರು ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತೆಗೆ ಪೊಲೀಸರೇ ವೈದ್ಯಕೀಯ ಚಿಕಿತ್ಸೆ ಕೊಡಿಸಿದರು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]