Tag: Medical Expenses

  • ರಸ್ತೆ ಅಪಘಾತ ಸಂತ್ರಸ್ತರ ಚಿಕಿತ್ಸಾ ವೆಚ್ಚ 2.5 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

    ರಸ್ತೆ ಅಪಘಾತ ಸಂತ್ರಸ್ತರ ಚಿಕಿತ್ಸಾ ವೆಚ್ಚ 2.5 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

    ಬೆಂಗಳೂರು: ರಸ್ತೆ ಅಪಘಾತ ಸಂತ್ರಸ್ತರಿಗೆ ನೀಡುತ್ತಿದ್ದ ನಗದು ರಹಿತ ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರ್ಕಾರ (State Govt) ಇದೀಗ 2.5 ಲಕ್ಷ ರೂ.ಗೆ ಏರಿಕೆ ಮಾಡಿದೆ.

    ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಕೇಂದ್ರ ಸರ್ಕಾರ (Central Govt) 1.5 ಲಕ್ಷ ರೂ.ವರೆಗೂ ನಗದು ರಹಿತ ಚಿಕಿತ್ಸೆಯನ್ನು ನೀಡುತ್ತಿತ್ತು. ಅಪಘಾತ ಸಂಭವಿಸಿದ ಏಳು ದಿನಗಳವರೆಗೂ ಈ ಸೌಲಭ್ಯ ಇತ್ತು. ಈಗ ರಾಜ್ಯ ಸರ್ಕಾರ ಅಪಘಾತ ಆಗಿ ಬಹುಅಂಗಾಂಗಗಳ ವೈಫಲ್ಯ ಆದರೆ ಚಿಕಿತ್ಸೆಗಾಗಿ 1 ಲಕ್ಷ ರೂ. ಟಾಪ್ ಅಪ್‌ ನೀಡೋದಾಗಿ ಘೋಷಣೆ ಮಾಡಿದೆ.ಇದನ್ನೂ ಓದಿ: 4.8 ಕೋಟಿ ಪತ್ತೆ ಕೇಸ್‌ – ಸುಧಾಕರ್‌ಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್‌, FIR ರದ್ದು

    ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಪಘಾತ ಸಂತ್ರಸ್ತ ಯೋಜನೆ ಅಡಿ ಸಂತ್ರಸ್ತರಿಗೆ 2.5 ಲಕ್ಷ ರೂ.ವರೆಗೂ ಚಿಕಿತ್ಸಾ ನೆರವು ಸಿಗಲಿದೆ. ರಸ್ತೆ ಅಪಘಾತದಿಂದ ಆಗುವ ಸಾವುಗಳನ್ನ ತಡೆಗಟ್ಟಲು ಚಿಕಿತ್ಸಾ ವೆಚ್ಚದ ಅನುದಾನ ಹೆಚ್ಚಳ ಮಾಡಲಾಗಿದೆ.

    ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷಕ್ಕೆ ಸುಮಾರು 40 ಸಾವಿರ ರಸ್ತೆ ಅಪಘಾಗಳು ದಾಖಲಾಗ್ತಿವೆ. ಪ್ರತಿ ವರ್ಷ ಸುಮಾರು 11 ಸಾವಿರ ಜನರು ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿ ಗಂಟೆಗೆ 4 ರಿಂದ 5 ರಸ್ತೆ ಅಪಘಾತಗಳು ದಾಖಲಾಗ್ತಿವೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳಿಗೆ 125 ಕೋಟಿ ಅನುದಾನ

  • ಇಂದಿರಾ ಕ್ಯಾಂಟೀನ್ ಊಟ ಬೇಡ-ಜನರು ಕಟ್ಟುವ ತೆರಿಗೆ ಹಣ ಮಾತ್ರ ಬೇಕಾ..?

    ಇಂದಿರಾ ಕ್ಯಾಂಟೀನ್ ಊಟ ಬೇಡ-ಜನರು ಕಟ್ಟುವ ತೆರಿಗೆ ಹಣ ಮಾತ್ರ ಬೇಕಾ..?

    -ಕೋಟಿ ಕೋಟಿ ಮೆಡಿಕಲ್ ಬಿಲ್ ಪಡೆದ ಕಾರ್ಪೋರೇಟರ್ ಗಳು

    ಬೆಂಗಳೂರು: ಜನ ಸಾಮಾನ್ಯರು ತಿನ್ನುವ ಇಂದಿರಾ ಕ್ಯಾಂಟೀನ್ ಊಟ ಬೇಡ. ಆದರೆ ಜನರು ಕಟ್ಟುವ ತೆರಿಗೆ ಹಣ ಮಾತ್ರ ಬೇಕು. ಇವರ ಹಲ್ಲು ನೋವಿಗೂ, ಕಣ್ಣಿನ ಚಿಕಿತ್ಸೆಗೂ ಜನರ ದುಡ್ಡೇ ಬೇಕು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಅದರ ವೆಚ್ಚವನ್ನು ಬಿಬಿಎಂಪಿಯೇ ಪಾವತಿ ಮಾಡಬೇಕು.

    ಚುನಾವಣೆಗಾಗಿ ಕೋಟಿ ಕೋಟಿ ಹಣ ಖರ್ಚು ಮಾಡುವ ಜನ ಪ್ರತಿನಿಧಿಗಳು ಹಲ್ಲು ನೋವು ಬಂದರೂ ಅದರ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಕಾರ್ಪೊರೇಟರ್ ಗಳ ವೈದ್ಯಕೀಯ ವೆಚ್ಚದ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಜನರ ತೆರಿಗೆ ಹಣ ಒಳ್ಳೆಯದಕ್ಕೆ ಬಳಕೆಯಾಗಬೇಕು. ಈ ರೀತಿ ದುರ್ಬಳಕೆ ಆಗಬಾರದು ಅಂತ ಆಗ್ರಹಿಸಿದ್ದಾರೆ. ಈ ಬಗ್ಗೆ ಮೇಯರ್ ಗಂಗಾಂಬಿಕೆ ಅವರನ್ನ ಪ್ರಶ್ನೆ ಮಾಡಿದ್ರೆ, ಎಲ್ಲರೂ ಸ್ಥಿತಿವಂತರು ಅಂತ ಹೇಳೋಕಾಗಲ್ಲ. ಬಹುತೇಕ ಕಾರ್ಪೋರೇಟರ್ ಗಳು ಸ್ಥಿತಿವಂತರಿದ್ದಾರೆ. ಈ ಬಗ್ಗೆ ಕೌನ್ಸಿಲ್ ನಲ್ಲಿ ಚರ್ಚೆ ಮಾಡುತ್ತೇವೆ ಅಂತಾ ಸ್ಪಷ್ಟನೆ ನೀಡಿದ್ದಾರೆ.

    ಮೆಡಿಕಲ್ ಬಿಲ್ ಪಡೆದ ಕಾರ್ಪೋರೇಟ್ ಗಳು:
    1. ಹಾ.ನ ಭುವನೇಶ್ವರಿ, ಎಂಎಸ್ ನಗರ ವಾರ್ಡ್
    – ಹಲ್ಲು ನೋವು, ದವಡೆ ಊತ ಸಮಸ್ಯೆಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯಕೀಯ ವೆಚ್ಚಕ್ಕಾಗಿ ಸಲ್ಲಿಸಿದ ಬಿಲ್ 89,360 ರೂಪಾಯಿ. ಬಿಬಿಎಂಪಿ ಮಂಜೂರು ಮಾಡಿದ್ದು 40,350 ರೂಪಾಯಿ

    2. ಕಟ್ಟೆ ಸತ್ಯನಾರಾಯಣ, ಮಾಜಿ ಮೇಯರ್
    – ಕಣ್ಣಿನ ಸಮಸ್ಯೆಗೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಅನ್ನೋದು ನಮೂದಿಸಿಲ್ಲ. ಆದ್ರೆ ಇವರು ವೈದ್ಯಕೀಯ ವೆಚ್ಚಕ್ಕಾಗಿ ಸಲ್ಲಿಸಿದ ಬಿಲ್ 87,200 ರೂಪಾಯಿ. ಬಿಬಿಎಂಪಿ ಸಂಪೂರ್ಣ ಅಂದರೆ 87,200 ರೂಪಾಯಿ ಮಂಜೂರು ಮಾಡಿದೆ.

    3. ಎ ಮುಜಾಹಿದ್ ಪಾಷ, ಮಾಜಿ ಅಧ್ಯಕ್ಷ, ಆರೋಗ್ಯ ಸ್ಥಾಯಿ ಸಮಿತಿ
    – ಕಿಡ್ನಿ ಸಮಸ್ಯೆಗೆ ಅಂತ ಬನ್ನೇರುಘಟ್ಟ ರಸ್ತೆ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಇವರು, ವೈದ್ಯಕೀಯ ವೆಚ್ಚಕ್ಕಾಗಿ ಸಲ್ಲಿಸಿದ ಬಿಲ್ 1,17,000 ರೂಪಾಯಿ. ಇವರು ಸಲ್ಲಿಸಿದ ಸಂಪೂರ್ಣ ಬಿಲ್‍ನ್ನ ಬಿಬಿಎಂಪಿ ಮಂಜೂರು ಮಾಡಿದೆ.

    4. ಟಿ. ರಾಮಚಂದ್ರ, ಈಜಿಪುರ ವಾರ್ಡ್
    – ಅನಾರೋಗ್ಯ ಕಾರಣ ನೀಡಿ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯಕೀಯ ವೆಚ್ಚಕ್ಕಾಗಿ ಸಲ್ಲಿಸಿದ ಬಿಲ್ 2,96,594 ರೂಪಾಯಿ. ಬಿಬಿಎಂಪಿ ಮಂಜೂರು ಮಾಡಿದ್ದು 1,46,898 ರೂಪಾಯಿ.

    5. ಬಿಎನ್ ಜಯಪ್ರಕಾಶ್, ಬಸವನಪುರ ವಾರ್ಡ್
    – ಡೆಂಗ್ಯೂ ಜ್ವರದ ಸಮಸ್ಯೆಯಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಸಲ್ಲಿಸಿದ್ದು 2,30,663 ರೂಪಾಯಿ. ಬಿಬಿಎಂಪಿ ಮಂಜೂರು ಮಾಡಿದ್ದು 55,532 ರೂಪಾಯಿ.

    6. ನಂದಿನಿ ವಿಜಯ ವಿಠ್ಠಲ, ಗಿರಿನಗರ ವಾರ್ಡ್
    – ಅನಾರೋಗ್ಯ ಕಾರಣದಿಂದ ಪ್ರಶಾಂತ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ವೈದ್ಯಕೀಯ ವೆಚ್ಚಕ್ಕಾಗಿ ಸಲ್ಲಿಸಿದ ಬಿಲ್ 43,788 ರೂಪಾಯಿ. ಬಿಬಿಎಂಪಿ ಮಂಜೂರು ಮಾಡಿದ್ದು 21,894 ರೂಪಾಯಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv