Tag: medical college

  • ಮೆಡಿಕಲ್ ಕಾಲೇಜ್ ಸ್ಥಳಾಂತರಕ್ಕೆ ಆಕ್ರೋಶ – ರಾಮನಗರ ಬಂದ್‍ಗೆ ಕರೆ

    ಮೆಡಿಕಲ್ ಕಾಲೇಜ್ ಸ್ಥಳಾಂತರಕ್ಕೆ ಆಕ್ರೋಶ – ರಾಮನಗರ ಬಂದ್‍ಗೆ ಕರೆ

    ರಾಮನಗರ: ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್ (Medical College) ಸ್ಥಳಾಂತರ ವಿಚಾರವಾಗಿ ಸೆ.8 ರಂದು ರಾಮನಗರ (Ramanagar) ಬಂದ್‍ಗೆ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜ್ ಹೋರಾಟ ಸಮಿತಿ ಕರೆ ನೀಡಿದೆ. ಬಂದ್‍ಗೆ ಸಾರ್ವಜನಿಕರು ಸಹಕಾರ ನೀಡುವಂತೆ ಅಂಗಡಿ ಮುಂಗ್ಗಟ್ಟು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸಲಾಗಿದೆ.

    ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ವಿರುದ್ಧ ತವರು ಜಿಲ್ಲೆಯಲ್ಲೇ ಈ ಬಗ್ಗೆ ಆಕ್ರೋಶ ಹೆಚ್ಚಾಗಿದೆ. ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಸ್ಥಳಾಂತರ ಮಾಡಬಾರದು. ಸರ್ಕಾರ ನಿಮ್ಮದೇ ಇದೆ. ನಿಮಗೆ ಅಧಿಕಾರ ಇದೆ. ಕನಕಪುರಕ್ಕೆ ಬೇಕಿದ್ದರೆ ಮತ್ತೊಂದು ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿಕೊಳ್ಳಿ. ಆದರೆ ರಾಮನಗರಕ್ಕೆ ಮಂಜೂರಾಗಿರುವ ಕಾಲೇಜನ್ನು ಯಾವುದೇ ಕಾರಣಕ್ಕೂ ಜಿಲ್ಲಾ ಕೇಂದ್ರದಿಂದ ಸ್ಥಳಾಂತರ ಮಾಡಬಾರದು ಎಂಬುದು ಹೋರಾಟಗಾರರ ಒತ್ತಾಯವಾಗಿದೆ. ಇದನ್ನೂ ಓದಿ: ಗೃಹಲಕ್ಷ್ಮೀ ಹೇಗೆ ಮುಂದುವರೆಯುತ್ತದೆ ನೋಡೋಣ: ಹೆಚ್‍ಡಿಡಿ ವ್ಯಂಗ್ಯ

    ಈ ಹಿನ್ನೆಲೆಯಲ್ಲಿ ಇದೇ ಸೆ.8ರಂದು ರಾಮನಗರ ಬಂದ್ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಇದಕ್ಕೂ ಸರ್ಕಾರ ಸ್ಪಂದಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ. ಜನಜಾಗೃತಿಗಾಗಿ ಇಂದಿನಿಂದ ಪೋಸ್ಟರ್ ಚಳವಳಿ ಆರಂಭಿಸಲಾಗಿದೆ. ಬಂದ್‍ಗೆ ಎಲ್ಲಾ ಕನ್ನಡಪರ ಸಂಘಟನೆಗಳು, ಕಾರ್ಮಿಕ, ದಲಿತ ಮತ್ತು ಜವಳಿ ಸಂಘಟನೆಗಳು ಬೆಂಬಲ ಘೋಷಿಸಿವೆ.

    ಇದರ ನಡುವೆಯೇ ಡಿಕೆ ಬ್ರದರ್ಸ್ ನಡೆ ವಿರುದ್ಧ ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಕೃಷ್ಣೇಗೌಡ ಕಿಡಿಕಾರಿದ್ದಾರೆ. ನಿಮ್ಮ ವರ್ತನೆ ಬದಲಿಸಿಕೊಳ್ಳಬೇಕು. ನೀವು ಕನಕಪುರಕ್ಕೆ ಮಾತ್ರ ಡಿಸಿಎಂ ಅಲ್ಲ, ಇಡೀ ರಾಜ್ಯಕ್ಕೆ ಡಿಸಿಎಂ ಎಂಬುದನ್ನು ಮರೆಯಬಾರದು. ಇಲ್ಲಿ ಧಮ್ಕಿ ನಡವಳಿಕೆಗೆ ಬಗ್ಗುವುದಿಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: INDIA ಒಕ್ಕೂಟದ ರಾಷ್ಟ್ರವಿರೋಧಿ ಮಾನಸಿಕತೆ ಬಹಿರಂಗವಾಗಿದೆ – ತೇಜಸ್ವಿ ಸೂರ್ಯ ಕಿಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಮನಗರದಲ್ಲೇ ಮೆಡಿಕಲ್ ಕಾಲೇಜು ಉಳಿಯುತ್ತೆ, ವಿಪಕ್ಷಗಳು ರಾಜಕೀಯಕ್ಕೆ ಗೊಂದಲ ಮಾಡ್ತಿವೆ: ಇಕ್ಬಾಲ್ ಹುಸೇನ್

    ರಾಮನಗರದಲ್ಲೇ ಮೆಡಿಕಲ್ ಕಾಲೇಜು ಉಳಿಯುತ್ತೆ, ವಿಪಕ್ಷಗಳು ರಾಜಕೀಯಕ್ಕೆ ಗೊಂದಲ ಮಾಡ್ತಿವೆ: ಇಕ್ಬಾಲ್ ಹುಸೇನ್

    ರಾಮನಗರ: ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಶಿಫ್ಟ್‌ಗೆ ವಿರೋಧಿಸಿ ಸೆಪ್ಟೆಂಬರ್ 8ಕ್ಕೆ ರಾಮನಗರ ಬಂದ್‌ಗೆ ಕರೆ ನೀಡಿರುವ ಕುರಿತು ರಾಮನಗರ (Ramanagara) ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಪ್ರತಿಕ್ರಿಯೆ ನೀಡಿದರು.

    ನಮ್ಮ ಕಾಲೇಜು, ನಮ್ಮ ಯೂನಿವರ್ಸಿಟಿ ಇಲ್ಲೇ ಇರುತ್ತದೆ. ಅದಕ್ಕಾಗಿ ಬಂದ್ ಮಾಡುವುದರಲ್ಲಿ ಅರ್ಥ ಇಲ್ಲ. ನಾನು ವೈದ್ಯಕೀಯ ಸಚಿವ ಶರಣಪ್ರಕಾಶ್ ಅವರನ್ನು ಭೇಟಿ ಆಗಿದ್ದೇನೆ. ಡಿಕೆ ಸುರೇಶ್ (DK Suresh) ಹಾಗೂ ನಾನು ಇಬ್ಬರೂ ಅವರ ಜೊತೆ ಮಾತನಾಡಿದ್ದೇವೆ. ಮೆಡಿಕಲ್ ಕಾಲೇಜು ರಾಮನಗರದಲ್ಲೇ ಉಳಿಯುತ್ತೆ. ಸಚಿವರೇ ಬಂದು ಗುದ್ದಲಿ ಪೂಜೆ ಮಾಡುತ್ತಾರೆ. ಸುರೇಶ್ ಅವರ ನೇತೃತ್ವದಲ್ಲಿ ನಾನೇ ಆ ಕೆಲಸ ಮಾಡುತ್ತೇನೆ ಎಂದರು. ಇದನ್ನೂ ಓದಿ: ಆದಿತ್ಯ L1 ಮಿಷನ್‍ನ ಯಶಸ್ವಿ ಉಡಾವಣೆಗೆ ರಾಜ್ಯಪಾಲ ಅಭಿನಂದನೆ

    ಈ ಕಾಲೇಜಿಗೂ ಕನಕಪುರ ಕಾಲೇಜಿಗೂ ಸಂಬಂಧ ಇಲ್ಲ. ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು 20 ವರ್ಷದ ಹಿಂದೆ ಆಗಿರೋದು. ಆದರೆ ಕನಕಪುರಕ್ಕೆ ಮಂಜೂರಾಗಿದ್ದ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಶಿಪ್ಟ್ ಆಗಿತ್ತು. ಈಗ ಮತ್ತೆ ಕನಕಪುರಕ್ಕೆ ನಮ್ಮ ನಾಯಕರು ಹೊಸ ಕಾಲೇಜು ತರುತ್ತಾರೆ. ರಾಜೀವ್ ಗಾಂಧಿ ಮೆಡಿಕಲ್ ಕಾಲೇಜಿಗೂ ಅದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಇಸ್ರೋಗೆ ಜಾಗ ಕೊಟ್ಟಿದ್ದು ಕಾಂಗ್ರೆಸ್: ಬಿ.ಕೆ ಹರಿಪ್ರಸಾದ್

    ಇದರಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನವರು ರಾಜಕೀಯ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಟೇಕಫ್ ಆಗ್ತಾ ಇದೆ. ಕಾಂಗ್ರೆಸ್ ಬಗ್ಗೆ ಜನರಿಗೆ ಒಳ್ಳೆಯ ಆಸಕ್ತಿ, ವಿಶ್ವಾಸ ಇದೆ. ಇಷ್ಟೆಲ್ಲಾ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆಯಲ್ವಾ ಎನ್ನುವ ಹೊಟ್ಟೆಕಿಚ್ಚಿಗೆ ಹೀಗೆಲ್ಲಾ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: Aditya L1 ಮಿಷನ್ ಯಶಸ್ವಿ: ಇಸ್ರೋ ಅಧ್ಯಕ್ಷ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಡುಪಿ ಮಾದರಿ ಮತ್ತೊಂದು ಕೇಸ್‌; ಹಾಸ್ಟೆಲ್‌ ಹುಡ್ಗೀರ ಬೆತ್ತಲೆ ವೀಡಿಯೋ ಸೆರೆ ಹಿಡಿದು ಸೀನಿಯರ್‌ಗೆ ಕಳಿಸ್ತಿದ್ದ ವಿದ್ಯಾರ್ಥಿನಿ

    ಉಡುಪಿ ಮಾದರಿ ಮತ್ತೊಂದು ಕೇಸ್‌; ಹಾಸ್ಟೆಲ್‌ ಹುಡ್ಗೀರ ಬೆತ್ತಲೆ ವೀಡಿಯೋ ಸೆರೆ ಹಿಡಿದು ಸೀನಿಯರ್‌ಗೆ ಕಳಿಸ್ತಿದ್ದ ವಿದ್ಯಾರ್ಥಿನಿ

    ಲಕ್ನೋ: ಉಡುಪಿ ಕಾಲೇಜಿನ (Udupi College) ಲೇಡಿಸ್‌ ಟಾಯ್ಲೆಟ್‌ನಲ್ಲಿ ವೀಡಿಯೋ ಚಿತ್ರೀಕರಣ ಕೇಸ್‌ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಅದೇ ರೀತಿ ಉತ್ತರ ಪ್ರದೇಶದಲ್ಲೂ (Uttar Pradesh) ಮತ್ತೊಂದು ಕೇಸ್‌ ಬೆಳಕಿಗೆ ಬಂದಿದೆ. ತನ್ನ ಹಾಸ್ಟೆಲ್‌ ರೂಮೇಟ್ಸ್‌ಗಳ (Hostel Inmates) ಅಶ್ಲೀಲ ವೀಡಿಯೋ ಮತ್ತು ಫೋಟೋಗಳನ್ನ ಸೆರೆ ಹಿಡಿದು ತನ್ನ ಸೀನಿಯರ್‌ ಹುಡುಗನಿಗೆ ಕಳಿಸುತ್ತಿದ್ದ ವಿದ್ಯಾರ್ಥಿನಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

    ಉತ್ತರ ಪ್ರದೇಶದ ಗಾಜಿಪುರದ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿನಿ (UP College Girl) ಮಂತಾಶಾ ಕಾಝ್ಮಿ ಆರೋಪಿ ಆಗಿದ್ದಾಳೆ. ಈಕೆ ತನ್ನ ಹಾಸ್ಟೆಲ್‌ ರೂಮೇಟ್ಸ್‌ಗಳ ಅಶ್ಲೀಲ ವೀಡಿಯೋ ಸೆರೆ ಹಿಡಿದು ಸೀನಿಯರ್‌ ವಿದ್ಯಾರ್ಥಿ ಮೊಹಮ್ಮದ್‌ ಅಮೀರ್‌ ಎಂಬಾತನಿಗೆ ಕಳುಹಿಸುತ್ತಿದ್ದಳು. ಈತ ಫೋಟೋ ಬಳಸಿಕೊಂಡು ಅವರನ್ನ ಬ್ಲ್ಯಾಕ್‌ ಮೇಲ್‌ ಮಾಡ್ತಿದ್ದ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ನಾಗಾ ಸಾಧುಗಳ ಸೋಗಿನಲ್ಲಿ ಬಂದು ಸ್ಟುಡಿಯೋ ಮಾಲೀಕನ ಉಂಗುರ ಎಗರಿಸಿದ ಕಳ್ಳರು

    ಸಂತ್ರಸ್ತ ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿ ಮತ್ತು ಸ್ಥಳೀಯ ಪೊಲೀಸರಿಗೆ ದೂರು ನೀಡಿದ ನಂತರ ಆಗಸ್ಟ್‌ 7ರಂದು ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ದೂರಿನ ಮೇರೆಗೆ ಕಾಲೇಜು ಆಡಳಿತ ಮಂಡಳಿ ವಿಚಾರಣೆ ಮಾಡಿ ಆರೋಪ ದೃಢಪಡಿಸಿದೆ. ಅಲ್ಲದೇ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಳಾಗಿದ್ದು, ಆಯಾ ವರ್ಷಗಳಲ್ಲಿ ಬ್ಯಾಚುಲರ್ ಆಫ್ ಹೋಮಿಯೋಪತಿಕ್ ಮೆಡಿಸಿನ್ ಮತ್ತು ಸರ್ಜರಿ (BHMS) ವ್ಯಾಸಂಗ ಮಾಡುತ್ತಿರುವ ಮಂತಾಶಾ ಕಾಝ್ಮಿ ಹಾಗೂ ಮೊಹಮ್ಮದ್‌ ಅಮೀರ್‌ ಇಬ್ಬರನ್ನೂ 6 ತಿಂಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಕಾಲೇಜಿನ ಹಂಗಾಮಿ ಪ್ರಾಂಶುಪಾಲ ಡಾ.ಬಿ.ಎನ್ ಸಾಹ್ನಿ ತಿಳಿಸಿದ್ದಾರೆ.

    ಅಲ್ಲದೇ ಆರೋಪಿ ವಿದ್ಯಾರ್ಥಿಗಳ ಫೋನ್‌ಗಳಿಂದ ವೀಡಿಯೋ ಮತ್ತು ಫೋಟೋಗಳನ್ನು ಡಿಲೀಟ್‌ ಮಾಡಲಾಗಿದೆ. ಬೇರೆ ಯಾರೊಂದಿಗಾದರೂ ಶೇರ್‌ ಮಾಡಿಕೊಂಡಿದ್ದಾರಾ? ಅನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಪೊಲೀಸ್‌ ಠಾಣೆಗೂ ದೂರು ನೀಡಿರುವ ಬಗ್ಗೆ ಗಾಜಿಪುರದ ಪೊಲೀಸ್ ಅಧೀಕ್ಷಕ ಓಂವೀರ್ ಸಿಂಗ್ ಖಚಿತಪಡಿಸಿದ್ದಾರೆ. ಆದ್ರೆ ಪ್ರಕರಣ ದಾಖಲಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಇದನ್ನೂ ಓದಿ: ವೆಬ್ ಸಿರೀಸ್‍ನಿಂದ ಪ್ರೇರಣೆ – ದಂಪತಿ ಕೊಲೆಗೈದು ದರೋಡೆ ಮಾಡಿದ್ದ ಲಾ ಸ್ಟೂಡೆಂಟ್ ಅರೆಸ್ಟ್

    ಒಟ್ಟಿನಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದ್ರೆ ಈವರೆಗೆ ಆರೋಪಿ ವಿದ್ಯಾರ್ಥಿಗಳ ಮೋಬೈಲ್‌ನಿಂದ ಯಾವುದೇ ಫೋಟೋ ಹಾಗೂ ವೀಡಿಯೋಗಳನ್ನು ವಶಪಡಿಸಿಕೊಂಡಿಲ್ಲ ಎಂದು ಹೇಳಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೆಡಿಕಲ್ ಕಾಲೇಜು ಆರಂಭ ಮಾಡದಿದ್ರೆ ಉಪವಾಸ ಸತ್ಯಾಗ್ರಹ ಮಾಡ್ತೇನೆ: ಸುಧಾಕರ್

    ಮೆಡಿಕಲ್ ಕಾಲೇಜು ಆರಂಭ ಮಾಡದಿದ್ರೆ ಉಪವಾಸ ಸತ್ಯಾಗ್ರಹ ಮಾಡ್ತೇನೆ: ಸುಧಾಕರ್

    ಚಿಕ್ಕಬಳ್ಳಾಪುರ: ಜಿಲ್ಲೆಯ ವೈದ್ಯಕೀಯ ಕಾಲೇಜು ನಿರ್ಮಾಣ ವಿಚಾರದಲ್ಲಿ ಯಾವ ತನಿಖೆ ಬೇಕಾದರೂ ಮಾಡಿ. ಆದರೆ ಆದಷ್ಟು ಬೇಗ ಕಾಲೇಜು ಕಟ್ಟಡ ಹ್ಯಾಂಡ್ ಓವರ್ ಮಾಡಿಕೊಳ್ಳಿ. ಇಲ್ಲವಾದರೆ ನಾನು ಮೆಡಿಕಲ್ ಕಾಲೇಜು (Medical College) ಮುಂದೆಯೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಮಾಜಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ (Dr. K Sudhakar) ಹೇಳಿದ್ದಾರೆ.

    ಚಿಕ್ಕಬಳ್ಳಾಪುರ (Chikkaballapur) ನಗರದ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು. ಮಂತ್ರಿಗಳಾಗಿ ಎರಡು ತಿಂಗಳಾಗಿದೆ. ಜಿಲ್ಲಾಸ್ಪತ್ರೆಗೆ ಎಷ್ಟು ಬಾರಿ ಭೇಟಿ ಕೊಟ್ಟಿದ್ದೀರಿ. ಜಿಲ್ಲಾಸ್ಪತ್ರೆಯಲ್ಲಿ ಎಷ್ಟು ಐಸಿಯುಗಳಿವೆ ನಿಮಗೆ ಗೊತ್ತಾ. ನೀವು ಸಹ ವೈದ್ಯರಾಗಿದ್ದೀರಿ, ನಿಮಗೆ ಜವಾಬ್ದಾರಿ ಇಲ್ಲವಾ ಅಂತ ವಾಗ್ದಾಳಿ ನಡೆಸಿದರು.

    ನಾನು ಬಹಳ ಗಲಾಟೆ ಮಾಡಿ ಮೆಡಿಕಲ್ ಕಾಲೇಜು ತಂದಿದ್ದೇನೆ. ಶೀಘ್ರದಲ್ಲೇ ಕಾಲೇಜು ಆರಂಭ ಮಾಡಿ. ನಮ್ಮ ಜಿಲ್ಲೆಯಲ್ಲಿ ಆದ ಕಟ್ಟೆ ರಾಜ್ಯದಲ್ಲಿ ಎಲ್ಲೂ ಆಗಿಲ್ಲ. ಹೀಗಾಗಿ ನಿಮಗೆ ಹೊಟ್ಟೆ ಉರಿನಾ..? ನಾವ್ ಮಾಡೋಕೆ ಅಗಿಲ್ಲ ಅಂತ ಹೊಟ್ಟೆ ಉರಿನಾ..? ಒಳ್ಳೆಯ ಕೆಲಸ ಮಾಡಿದ್ರೂ ಸಹಿಸಲ್ಲ. ಕಾಲೇಜು ಪ್ರಾರಂಭ ಮಾಡದಿದ್ದರೆ ನಾನು ಮೆಡಿಕಲ್ ಕಾಲೇಜು ಮುಂದೆಯೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದರು. ಇದನ್ನೂ ಓದಿ: ಪ್ರದೀಪ್ ಈಶ್ವರ್ ಕನಸಲ್ಲೂ ನಾನು ಬರ್ತೀನಿ: ಸುಧಾಕರ್

    ಇದೇನು ಸಾಮ್ರಾಜ್ಯನಾ..? ರಾಜರ ಕಾಲ ಅಲ್ಲ. ಟಾರ್ಗೆಟ್ ಮಾಡಿದ್ದರಲ್ಲ ದ್ವೇಷದ ರಾಜಕಾರಣ ಮಾಡ್ತಿದ್ದರಲ್ಲ. ವೈಯಕ್ತಿಕವಾಗಿ ದ್ವೇಷ ಸಾಧಿಸೋದಾದರೆ ಮಾಡಿ. ಅದೇನು ಮಾಡಬೇಕೋ ಮಾಡಿ. ಕಾನೂನು ವ್ಯವಸ್ಥೆ ಇದೆ. ನಾನು ಹೆದರಿಕೊಳ್ಳೋದು ಇಲ್ಲ. ನನ್ನ ಜಿಲ್ಲೆಗೆ ಆದ ಅನ್ಯಾಯ ಸರಿಪಡಿಸಿ ಅಂತ ಆಗ್ರಹಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೀಸಲಾತಿಯಲ್ಲಿ ಮುಸ್ಲಿಮರಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ- ಬೊಮ್ಮಾಯಿ

    ಮೀಸಲಾತಿಯಲ್ಲಿ ಮುಸ್ಲಿಮರಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ- ಬೊಮ್ಮಾಯಿ

    ಚಿಕ್ಕಬಳ್ಳಾಪರ: ಮೀಸಲಾತಿಯಲ್ಲಿ (Reservation) ಮುಸ್ಲಿಮರಿಗೆ (Muslims) ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಅವರನ್ನು ಎಡಬ್ಲ್ಯುಎಸ್ (AWS) ವರ್ಗದಲ್ಲಿ ಸೇರಿಸಿದ್ದೇವೆ. ಅಲ್ಲಿ ಶೇ.10ರಷ್ಟು ಮೀಸಲಾತಿಯಿದೆ. ನಮ್ಮ ಸಂವಿಧಾನದಲ್ಲಿ ಧಾರ್ಮಿಕ ಆಧಾರದಲ್ಲಿ ಮೀಸಲಾತಿಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

    ಚಿಕ್ಕಬಳ್ಳಾಪುರದ (Chikkaballapura) ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ಮಾಡಿರುವುದು ಕಾಂಗ್ರೆಸ್‌ನವರಿಗೆ (Congress) ಸಹಿಸಲಾಗುತ್ತಿಲ್ಲ. ಹೀಗಾಗಿ ಅವರು ವಿರೋಧ ಮಾಡುತ್ತಿದ್ದಾರೆ. ನಾವು ಯಾವ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆಯೋ ಅದನ್ನು ವಿರೋಧಿಸುತ್ತೇವೆ ಎಂದು ಹೇಳಲಿ. ನಾವು ಮುಸ್ಲಿಮರಿಗೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿ ಪಕ್ಷವು ಜನರಿಗೆ ಟೊಳ್ಳು ಭರವಸೆ ನೀಡಿಲ್ಲ- ಡಾ.ಕೆ.ಸುಧಾಕರ್ 

    ನಮ್ಮ ಯೋಜನೆಗಳ ಬಗ್ಗೆ ಜನರಿಗೆ ವಿಶ್ವಾಸ ಮೂಡಿದೆ. ಇದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ಅಮಿತ್ ಶಾ (Amit Shah) ಅವರ ಸಭೆಯಲ್ಲಿ ಪ್ರಣಾಳಿಕೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ಆರೋಗ್ಯ ಸಚಿವ ಸುಧಾಕರ್ (K.Sudhakar) ಅವರು ಪ್ರಾಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದಾರೆ. ಈ ಬಾರಿ ನಮ್ಮದು ಜನತಾ ಪ್ರಣಾಳಿಕೆಯಾಗಲಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿಯವರೇ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡೋಕೆ ಒದ್ದಾಡ್ತಿದ್ದಾರೆ, ಇನ್ನೂ ನಮ್ದೆನ್ರೀ; ಹೆಚ್.ಡಿ.ರೇವಣ್ಣ

    ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು (Medical College) ಆಗಬೇಕು ಎನ್ನುವ ಅಭಿಲಾಷೆಯಿಂದ ನಮ್ಮ ಪ್ರಧಾನಿಗಳು ನಿಯಮ ಸರಳೀಕರಣಗೊಳಿಸಿದ್ದರಿಂದ, ಹಿಂದುಳಿದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತಿದೆ. ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ, ಚಿಕ್ಕಮಗಳೂರು ಮೆಡಿಕಲ್ ಕಾಲೇಜುಗಳನ್ನು ಅಭಿವೃದ್ಧಿ ಮಾಡಲಾಗಿದೆ. ರಾಮನಗರದಲ್ಲಿಯೂ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಗಾಯಕನಿಂದಲೇ ನಟಿ ಆಕಾಂಕ್ಷ ಕೊಲೆ : ತಾಯಿಯ ಗಂಭೀರ ಆರೋಪ 

    ನಂದಿಬೆಟ್ಟಕ್ಕೆ (Nandi Hills) ರೋಪ್ ವೇ ಆಗಬೇಕೆಂಬ ದಿವಂಗತ ನಟ ಶಂಕರನಾಗ್ (Shankar Nag) ಅವರು ಕಂಡ ಕನಸು ಈಗ ನನಸಾಗುತ್ತಿದೆ. ರೋಪ್ ವೇ ಮಾಡಿದರೆ ಪ್ರವಾಸೋದ್ಯಮಕ್ಕೆ ಸಾಕಷ್ಟು ಅನುಕೂಲವಾಗುತ್ತದೆ. ಈ ಭಾಗದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ನಂದಿ ಬೆಟ್ಟದ ಪಕ್ಕದ ದೇವಸ್ಥಾನ ಅಭಿವೃದ್ಧಿ ಆಗುತ್ತದೆ. ಆದ್ದರಿಂದ ಇದೊಂದು ಪ್ರವಾಸಿ ಸರ್ಕಿಟ್ ಆಗಲು ಅನುಕೂಲವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಗ್ಯಾಂಗ್‍ಸ್ಟರ್ ಅತೀಕ್‍ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಬೆಂಗಾವಲು ವಾಹನಕ್ಕೆ ಹಸು ಡಿಕ್ಕಿ

  • ಕನ್ನಡದಲ್ಲೇ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಸಿಗಲಿದೆ: ಮೋದಿ

    ಕನ್ನಡದಲ್ಲೇ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಸಿಗಲಿದೆ: ಮೋದಿ

    ಚಿಕ್ಕಬಳ್ಳಾಪುರ: ಸದ್ಯದಲ್ಲೇ ಕನ್ನಡ ಸೇರಿ ಎಲ್ಲಾ ಸ್ಥಳೀಯ ಭಾಷೆಗಳಲ್ಲೇ ಮೆಡಿಕಲ್, ಇಂಜಿನಿಯರ್ ಶಿಕ್ಷಣ ಪಡೆಯಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದರು.

    ಚಿಕ್ಕಬಳ್ಳಾಪುರದ (Chikkaballapur) ಸತ್ಯಸಾಯಿ ಗ್ರಾಮದಲ್ಲಿ ನಿರ್ಮಿಸಿರುವ ಮಧುಸೂದನಸಾಯಿ ಖಾಸಗಿ ಮೆಡಿಕಲ್ ಕಾಲೇಜು (Medical College) ಲೋಕಾರ್ಪಣೆ ಮಾಡಿದ ಅವರು, ಬಡವರನ್ನು ವೋಟ್ ಬ್ಯಾಂಕ್ ಎಂದು ಪರಿಗಣಸಿದ್ದ ದೇಶದ ಪರಿಸ್ಥಿತಿಯನ್ನು ಬಿಜೆಪಿ ಸರ್ಕಾರ ಬದಲಾಯಿಸಿದೆ. ಬಡವರ ಮಕ್ಕಳು ಕನ್ನಡದಲ್ಲಿ ವೈದ್ಯಕೀಯ ಓದುವಂತಹ ಸೌಲಭ್ಯಗಳನ್ನು ನಾವು ಕಲ್ಪಿಸಿದ್ದೇವೆ. ಕನ್ನಡ ಮಾತ್ರವಲ್ಲದೆ, ಅನೇಕ ಪ್ರಾಂತೀಯ ಭಾಷೆಗಳಲ್ಲಿ ಮಕ್ಕಳು ಇಂದು ವೈದ್ಯಕೀಯ ವಿಜ್ಞಾನ ಓದುವಂತೆ ನಾವು ಹೊಸ ವ್ಯವಸ್ಥೆಯನ್ನು ಸದ್ಯದಲ್ಲೇ ಎಲ್ಲಾ ಕಡೆಗೂ ತರಲಿದ್ದೇವೆ ಎಂದು ಹೇಳಿದರು.

    ಚಿಕ್ಕಬಳ್ಳಾಪುರ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮಸ್ಥಳವಾಗಿದೆ. ಇಂತಹ ಜನ್ಮಭೂಮಿಗೆ ಬಂದಿದ್ದು ನನ್ನ ಪುಣ್ಯ. ಸತ್ಯಸಾಯಿ ಆಶ್ರಮದಿಂದ ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ ಸೇವೆ ನಡೆಯುತ್ತಿದೆ. 2014ಕ್ಕಿಂತ ಮೊದಲು 300ಕ್ಕಿಂತ ಕಡಿಮೆ ಮೆಡಿಕಲ್ ಕಾಲೇಜುಗಳಿದ್ದವು. ಇಂದು ದೇಶದಲ್ಲಿ 650ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಕರ್ನಾಟಕದಲ್ಲೇ ಸುಮಾರು 70ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳು ಇವೆ ಎಂದರು.

    ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿ ಆಗುತ್ತಿದೆ. ಬಡವರ ಅಭಿವೃದ್ಧಿಯೇ ಬಿಜೆಪಿಯ ಗುರಿಯಾಗಿದೆ. ಬಿಜೆಪಿಯವರ ತೊಂದರೆಯನ್ನು ಬಿಜೆಪಿ ಅರಿತು ಅದಕ್ಕೆ ಪರಿಹಾರವನ್ನು ಕಂಡುಹಿಡಿದಿದೆ. ಆಯುಷ್ಮಾನ ಭಾರತ್ ಯೋಜನೆಯಿಂದ ಬಡ ರೋಗಿಗಳಿಗೆ ಅನುಕೂಲವಾಗಿದೆ. ಕರ್ನಾಟಕದ ಲಕ್ಷಾಂತರ ರೋಗಿಗಳಿಗೆ ಯೋಜನೆಯಿಂದ ಅನುಕೂಲವಾಗಿದೆ ಎಂದ ಅವರು ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: Congress Candidate List- ಯಾವ್ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್?

    ಆರೋಗ್ಯದ ಜೊತೆಗೆ ಮಹಿಳೆಯರ ಕಲ್ಯಾಣ ನಮ್ಮ ಸರ್ಕಾರದ ಗುರಿ. ಗ್ರಾಮಗಳಲ್ಲಿ ಮಹಿಳಾ ಸಂಘಗಳ ಮೂಲಕ ಮಹಿಳೆಯರ ಸಶಕ್ತಿಕರಣವಾಗುತ್ತಿದೆ ಎಂದು ಹೇಳಿದರು. ಅಲ್ಲದೆ, ಸಾಯಿಬಾಬಾ ಜೊತೆ ನನಗೆ ನಿಕಟ ಸಂಬಂಧ ಇತ್ತು ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹ – ವಯನಾಡಿನಲ್ಲಿ ಬ್ಲ್ಯಾಕ್ ಡೇ ಆಚರಣೆ

  • ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವೈದ್ಯಕೀಯ ವಿದ್ಯಾರ್ಥಿ ಕೆರೆಯಲ್ಲೇ ಮುಳುಗಿ ಸಾವು

    ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವೈದ್ಯಕೀಯ ವಿದ್ಯಾರ್ಥಿ ಕೆರೆಯಲ್ಲೇ ಮುಳುಗಿ ಸಾವು

    ಹಾವೇರಿ: ಕೆರೆಯ ಆಳ ಗೊತ್ತಿಲ್ಲದೆ ಐವರು ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವೈದ್ಯಕೀಯ ಕಾಲೇಜು (Medical College) ವಿದ್ಯಾರ್ಥಿ (Student) ಕೆರೆಯಲ್ಲೇ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ನಗರದ ಹೊರ ವಲಯದಲ್ಲಿ ನಡೆದಿದೆ.

    ಹೊಸ ವೈದ್ಯಕೀಯ ಕಾಲೇಜು ಪ್ರಾರಂಭವಾಗಿ, ಮೊದಲ ಬ್ಯಾಚ್‌ಗೆ ತರಗತಿ ಆರಂಭವಾಗಿತ್ತು. 15 ದಿನಗಳು ಕಳೆಯೋದ್ರಲ್ಲೆ ಇಂತಹ ದುರಂತ ಸಂಭವಿಸಿದೆ. ಕಾಲೇಜಿಗೆ ಪ್ರವೇಶ ಪಡೆದಿದ್ದ ಮೈಸೂರು ಮೂಲದ ವಿದ್ಯಾರ್ಥಿ ನೋಮನ್ ಪಾಷಾ ತಾನು ತಂಗಿರುವ ಹಾಸ್ಟೆಲ್ (Hostel) ಬಳಿಯ ಕೆರೆಗೆ ಈಜಲು ಹೋದಾಗ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಚಡ್ಡಿ ಹಾಕೊಂಡು ಬರೋರೂ ನನ್ನ ನೇರವಾಗಿ ಮಾತಾಡಿಸ್ಬೋದು – ಸಿದ್ದರಾಮಯ್ಯ

    ಭಾನುವಾರ ರಜಾದಿನ ಹಿನ್ನೆಲೆ ನೋಮನ್ ಪಾಷಾ ಮತ್ತು ಸ್ನೇಹಿತರು ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಚೌಡಮ್ಮನ ಕೆರೆಗೆ ಈಜಲು ಹೋಗಿದ್ದಾರೆ. ಕೆರೆಯಲ್ಲಿ ಯಾವ ಪ್ರದೇಶದಲ್ಲಿ ಎಷ್ಟು ಆಳ ಇದೆ ಎನ್ನುವುದನ್ನು ತಿಳಿದುಕೊಳ್ಳದೇ ಈಜಲು ಹಾರಿದ್ದಾರೆ. ಕೆರೆಯ ಆಳ ಹಾಗೂ ಕಲ್ಲು ಬರಿತ ಪ್ರದೇಶದಲ್ಲಿ ಜಿಗಿದ ಪರಿಣಾಮ ನೋಮನ್ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಇಂದು ಮೃತದೇಹ ಪತ್ತೆಯಾಗಿದೆ.

    ಗ್ರಾಮ ಪಂಚಾಯಿತಿ (Gram Panchayat) ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆರೆಯ ಸುತ್ತಲೂ ಸೂಚನಾ ಫಲಕ ಹಾಗೂ ಕಬ್ಬಿಣದ ತಂತಿ ಬೇಲಿಯನ್ನು ಹಾಕಿಸಿ ಸುರಕ್ಷತೆ ಕಾಪಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ ಚಂದನ್ ಶೆಟ್ಟಿ -ನಿವೇದಿತಾ

    ಕಳೆದ 6 ತಿಂಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡಿದ್ದ ನೋಮನ್ ಪಾಷಾ, ಡಾಕ್ಟರ್ ಆಗಿ ತಾಯಿ, ತಮ್ಮ ಹಾಗೂ ತಂಗಿಯನ್ನು ಸಾಕಬೇಕು ಅಂತಾ ಕನಸು ಕಂಡಿದ್ದ. ತನ್ನ ತಾಯಿ ಮಗನ ಓದಿಗಾಗಿ ಸಾಲ ಮಾಡಿ 68 ಸಾವಿರ ಹಣ ಕೊಟ್ಟಿದ್ದರು. ಆದ್ರೆ ಈಗ ಸಾಲ ಮಾಡಿದ ಹಣದ ಜೊತೆಗೆ ಮಗನೂ ಇಲ್ಲವಾಗಿದ್ದಾನೆ. ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಗುವಿಗೆ ಜನ್ಮ ನೀಡಿದ ಅತ್ಯಾಚಾರಕ್ಕೊಳಗಾಗಿದ್ದ 12ರ ಬಾಲಕಿ

    ಮಗುವಿಗೆ ಜನ್ಮ ನೀಡಿದ ಅತ್ಯಾಚಾರಕ್ಕೊಳಗಾಗಿದ್ದ 12ರ ಬಾಲಕಿ

    ಲಕ್ನೋ: ಅತ್ಯಾಚಾರಕ್ಕೊಳಗಾಗಿದ್ದ ಗಾಜಿಯಾಬಾದ್‍ನ (Ghaziabad) 12 ವರ್ಷದ ಬಾಲಕಿ ಮೆಡಿಕಲ್ ಕಾಲೇಜಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

    ಗಾಜಿಯಾಬಾದ್‍ನ ಖೋಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಬಾಲಕಿಯನ್ನು ಅಕ್ಟೋಬರ್ 1 ರಂದು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಇದೀಗ ಸಿ-ಸೆಕ್ಷನ್‍ನಲ್ಲಿ ಬಾಲಕಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಆರ್.ಕೆ.ಗುಪ್ತಾ ತಿಳಿಸಿದ್ದಾರೆ.

    ಬಾಲಕಿ 7ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯಾಗಿದ್ದು, ಅವರ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದ 19 ವರ್ಷದ ಯುವಕ ಆಕೆಗೆ ಬೆದರಿಸಿ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ತಮ್ಮ ಮಾತು ಕೇಳದೇ ಹೋದರೆ ನಿನ್ನ ತಂದೆ ತಾಯಿಯನ್ನು ಕೊಲ್ಲುತ್ತೇವೆ ಎಂದು ಬೆದರಿಸಿ 21 ವರ್ಷದ ಆರೋಪಿ ಸಹೋದರ ಕೂಡ ಅತ್ಯಾಚಾರ ವೆಸಗಿದ್ದಾನೆ ಎಂದು ಕುಟುಂಬಸ್ಥರು ಪೊಲೀಸರಿಗೆ ಹೇಳಿದ್ದಾರೆ.

    POLICE JEEP

    ಇಷ್ಟಲ್ಲದೇ ಇಬ್ಬರು ಸಹೋದರರು ಸೇರಿಕೊಂಡು ಹಣಕ್ಕಾಗಿ ಬಾಲಕಿಯನ್ನು ಇನ್ನೊಬ್ಬರಿಗೂ ಹಸ್ತಾಂತರಿಸಿದ್ದಾರೆ. ಇದರಿಂದ ಲೈಂಗಿಕ ಲಾಭವನ್ನು ಕೂಡ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಈ ವಿಚಾರ ತಿಳಿದು ಆಕೆಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.  ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಹಿಳೆಯರಿಂದ ಸೆಕ್ಯೂರಿಟಿ ಗಾರ್ಡ್ ಮೇಲೆ ದೌರ್ಜನ್ಯ

    ಬಾಲಕಿ ಗರ್ಭಿಣಿಯಾದಾಗ ಆಕೆಗೆ ಯಾವುದೇ ಗುಣಲಕ್ಷಣಗಳು ಕಾಣಿಸಲಿಲ್ಲ ಮತ್ತು ಹೆರಿಗೆ ಸಮಯದವರೆಗೂ ಸಾಮಾನ್ಯವಾಗಿಯೇ ಇದ್ದಳು. ಆದರೆ ಆಸ್ಪತ್ರೆಗೆ ಕರೆದೊಯ್ದ ನಂತರ ತನ್ನ ಕಿಡ್ನಿಯಲ್ಲಿ ಕಲ್ಲು ಇದೆ ಮತ್ತು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಳು. ಆದರೀಗ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಈ ಸಂಬಂಧ ಕುಟುಂಬಸ್ಥರು ಇಬ್ಬರು ಸಹೋದರರು ಮತ್ತು 35 ವರ್ಷದ ವ್ಯಕ್ತಿಯ ವಿರುದ್ಧ ಸೆಪ್ಟೆಂಬರ್ 5 ರಂದೇ ದೂರು ದಾಖಲಿಸಿದ್ದು, ಇದೀಗ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಖೋಡಾ ಪೊಲೀಸ್ ಠಾಣೆಯ (Khoda police station) ಇನ್ಸ್‌ಸ್ಪೆಕ್ಟರ್ ಅಲ್ತಾಫ್ ಅನ್ಸಾರಿ ಹೇಳಿದ್ದಾರೆ. ಇದನ್ನೂ ಓದಿ: ಸ್ವಚ್ಛ ನಗರ ಪಟ್ಟಿಯಲ್ಲಿ ಬೆಂಗಳೂರು ಲಾಸ್ಟ್ – ಷರತ್ತಿನೊಂದಿಗೆ ನೂತನ ಕಸದ ಟೆಂಡರ್‌ಗೆ BBMP ಸಿದ್ಧತೆ

    Live Tv
    [brid partner=56869869 player=32851 video=960834 autoplay=true]

  • ನರ್ಸಿಂಗ್ ಕಾಲೇಜ್ ಆಡಳಿತಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಅರೋಪ – ಎಫ್‍ಐಆರ್ ದಾಖಲು

    ನರ್ಸಿಂಗ್ ಕಾಲೇಜ್ ಆಡಳಿತಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಅರೋಪ – ಎಫ್‍ಐಆರ್ ದಾಖಲು

    ಕೋಲಾರ: ನಗರದ ಖಾಸಗಿ ನರ್ಸಿಂಗ್ ಕಾಲೇಜ್‍ನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿಯರಿಗೆ ವಾರ್ಷಿಕ ಶುಲ್ಕದ ಮೊತ್ತ ಕಡಿಮೆ ಮಾಡಲು ಕಾಲೇಜ್‍ನ ಆಡಳಿತಾಧಿಕಾರಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿರುವ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೋಲಾರದ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜ್‍ಗೆ ಬಹಳ ಪುರಾತನ ಇತಿಹಾಸ ಇದೆ. ಕೋಲಾರ ನಗರದಲ್ಲಿ ಸುಮಾರು ನೂರು ವರ್ಷಗಳಿಂದ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿರುವ ಆಸ್ಪತ್ರೆ ಲಕ್ಷಾಂತರ ಜನರಿಗೆ ವೈದ್ಯಕೀಯ ಸೇವೆ ನೀಡಿದೆ. ಇಂದಿಗೂ ಅದೇ ಹೆಸರಿನೊಂದಿಗೆ ಕೋಲಾರ ನಗರದಲ್ಲಿ ವೈದ್ಯಕೀಯ ಸೇವೆ ನೀಡುತ್ತಾ ಬಂದಿರುವ ಆಸ್ಪತ್ರೆಯಲ್ಲಿ ಹೆಚ್ಚಾಗಿ ಬಡ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಸ್ಪತ್ರೆ ಕೆಲಸ ಮಾಡಿಕೊಂಡು ಬಂದಿದೆ. ಅಷ್ಟೇ ಅಲ್ಲದೇ ಆಸ್ಪತ್ರೆಯಲ್ಲಿ ಒಂದು ಭಾಗವಾಗಿ ನರ್ಸಿಂಗ್ ಕಾಲೇಜ್ ಕೂಡಾ ನಡೆಸಿಕೊಂಡು ಬರಲಾಗುತ್ತಿದೆ. ಈ ನರ್ಸಿಂಗ್ ಕಾಲೇಜ್‍ನಲ್ಲಿ ಕೋಲಾರ ಜಿಲ್ಲೆಯಷ್ಟೇ ಅಲ್ಲ, ಕೇರಳ ಸೇರಿದಂತೆ ಅಕ್ಕ ಪಕ್ಕದ ರಾಜ್ಯದ ವಿದ್ಯಾರ್ಥಿಗಳು ಈ ಆಸ್ಪತ್ರೆಯಲ್ಲಿ ನರ್ಸಿಂಗ್ ತರಬೇತಿ ಪಡೆಯುತ್ತಾ ಬಂದಿದ್ದಾರೆ. ಇದನ್ನೂ ಓದಿ: ಚಾಮರಾಜಪೇಟೆ ಮೈದಾನ ಬಳಿ ಗಣೇಶ ಗಲಾಟೆ – ಗಣೇಶ ಪ್ರತಿಷ್ಠಾಪನೆಗೆ ಪಟ್ಟು, ಠಾಣೆಗೆ ಮುತ್ತಿಗೆ

    ಇಷ್ಟೇಲ್ಲ ಇತಿಹಾಸ ಹೊಂದಿರುವ ಖಾಸಗಿ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಆಸ್ಪತ್ರೆ ಹಾಗೂ ನಸಿರ್ಂಗ್ ಕಾಲೇಜಿನ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಜಾನ್ಸನ್ ಕುಂದರ್ ಮೇಲೆ ಮೇ 26 ರಂದು ಇಬ್ಬರು ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತನೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅರೋಪಿಸಲಾಗಿದೆ. ಆಗಸ್ಟ್ 30 ರಂದು ದೂರು ನೀಡಿದ ಹಿನ್ನಲೆಯಲ್ಲಿ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸದ್ಯ ಅರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

    ಇತ್ತೀಚಿಗೆ ಜಾನ್ಸನ್ ಅವರನ್ನು ಆಸ್ಪತ್ರೆ ಆಡಳಿತ ಮಂಡಳಿ ಆಡಳಿತಾಧಿಕಾರಿ ಹುದ್ದೆಯಿಂದಲೂ ವಜಾ ಮಾಡಲಾಗಿದೆ. ಹಣದ ವ್ಯವಹಾರದಲ್ಲಿ ಸಹ ಅವ್ಯವಹಾರ ಮಾಡಿದ್ದಾರೆಂಬ ಆರೋಪ ಕೇಳಿ ಬಂದ ಕಾರಣ ಅವರನ್ನು ಈ ಹುದ್ದೆಯಿಂದ ವಜಾ ಮಾಡಿ ಕೆಳಗೆ ಇಳಿಸಲಾಗಿದೆ. ಇನ್ನು ನರ್ಸಿಂಗ್ ವಿದ್ಯಾರ್ಥಿಗಳ ಶುಲ್ಕ ಕಡಿಮೆ ಮಾಡುವ ವಿಷಯವನ್ನೇ ಬಂಡವಾಳ ಮಾಡಿಕೊಂಡು ಇಬ್ಬರು ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತನೆ ಮಾಡಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ ಎಂದು ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಮೋದಿ ತಿಂಗಳಿಗೊಮ್ಮೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ – ಪ್ರಚಾರಕ್ಕೂ ಬರುತ್ತಾರೆ: ಬಿಎಸ್‍ವೈ

    ಆದರೆ ಕಾಲೇಜಿನ ಪ್ರಾಂಶುಪಾಲರು ಸೇರಿ ಕೆಲವರು ಪೊಲೀಸ್ ಠಾಣೆಗೆ ತೆರಳಿ ಈ ಆರೋಪ ಸುಳ್ಳು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಜಾನ್ಸನ್ ಪರ ಸಮುದಾಯದ ಕೆಲವು ಮುಖಂಡರು ಬ್ಯಾಟಿಂಗ್ ಮಾಡುತ್ತಿದ್ದು, ಜಾನ್ಸನ್ ಖಾಸಗಿ ಆಸ್ಪತ್ರೆಗೆ ಆಡಳಿತಾಧಿಕಾರಿಯಾಗಿ ಬಂದ ನಂತರ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅದನ್ನು ಸಹಿಸದೆ ಕೆಲವು ಹಿರಿಯರು ಆಸ್ತಿಪಾಸ್ತಿಯನ್ನು ನುಂಗಿ ಹಾಕಲು ಸಂಚು ಮಾಡಿದ್ದು, ಜಾನ್ಸನ್ ಅವರನ್ನು ಹೊರಹಾಕಲು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅದ್ಧೂರಿ ಬರ್ತ್‌ಡೇ ಸೆಲಬ್ರೇಷನ್‌ಗೆ ನೋ ಅಂದ ಅಪ್ಪ, ಅಮ್ಮ – 21ರ ಯುವಕ ಆತ್ಮಹತ್ಯೆ

    ಅದ್ಧೂರಿ ಬರ್ತ್‌ಡೇ ಸೆಲಬ್ರೇಷನ್‌ಗೆ ನೋ ಅಂದ ಅಪ್ಪ, ಅಮ್ಮ – 21ರ ಯುವಕ ಆತ್ಮಹತ್ಯೆ

    ಚೆನ್ನೈ: ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಅನುಮತಿ ಕೊಡಲಿಲ್ಲವೆಂದು 21 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ವಿರುದುನಗರದಲ್ಲಿ ನಡೆದಿದೆ.

    ಕಿರ್ಗಿಸ್ತಾನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಲೋಕೇಶ್ (21) ರಜೆಯನ್ನು ಕಳೆಯಲು ತಮಿಳುನಾಡಿಗೆ ಬಂದಿದ್ದಾನೆ. ಈ ವೇಳೆ ಪೋಷಕರು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಲು ಅವಕಾಶ ಕೊಡಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಬಾಯಿ ಮುಚ್ಚಿಕೊಂಡಿದ್ರೆ ಸರಿ, ನಿನ್ನ ಕಥೆ ಎಲ್ಲ ಹೇಳಬೇಕಾಗುತ್ತೆ: ಸುಧಾಕರ್‌ಗೆ ಸಿದ್ದರಾಮಯ್ಯ ವಾರ್ನಿಂಗ್

    ಕಿರ್ಗಿಸ್ತಾನ್‌ನಲ್ಲಿ 3ನೇ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಲೋಕೇಶ್ ರಜೆಯ ಮೇಲೆ ತಮಿಳುನಾಡಿಗೆ ಬಂದಿದ್ದನು. ಈ ವೇಳೆ ಅಪ್ಪ-ಅಮ್ಮನೊಂದಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಕೇಳಿದ್ದಾನೆ. ಅವರು ಅನುಮತಿ ನಿರಾಕರಿಸಿದ್ದರಿಂದ ನಿದ್ರೆ ಮಾತ್ರೆ ಸೇವಿಸಿದ್ದಾನೆ. ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೆಲ ಸಮಯದ ಬಳಿಕ ಮಗನನ್ನು ನೋಡಿ ಬಳಿಕ ಅವನನ್ನು ವಿರುದುನಗರದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಳಿಸಿದ್ದಾರೆ. ಹೆಚ್ಚುವರಿ ಚಿಕಿತ್ಸೆಗಾಗಿ ಮಧುರೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ ಎಂದು ಮಧುರೈ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಲಿಪ್‍ಸ್ಟಿಕ್‍ನಿಂದ ವಾಲ್ ಮೇಲೆ ಡೆತ್ ನೋಟ್ – ಗೃಹಿಣಿ ಆತ್ಮಹತ್ಯೆಗೆ ಕಿರುಕುಳವೇ ಕಾರಣವಾಯ್ತಾ? 

    ಲೋಕೇಶ್ ತಂದೆ ವಿರುದುನಗರದಲ್ಲಿ ಆಸ್ಪತ್ರೆ ಹಾಗೂ ಔಷಧಾಲಯ ಹೊಂದಿದ್ದಾರೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]