Tag: Medical College Seat

  • ಸಹಾಯಕ ಪ್ರಾಧ್ಯಾಪಕರನ್ನ ನೇಮಿಸೋಕೆ ಸುಧಾಕರ್ 50 ಲಕ್ಷ ಕೇಳಿದ್ದಾರೆ – ಹೆಚ್‌ಡಿಕೆ ಆರೋಪ

    ಸಹಾಯಕ ಪ್ರಾಧ್ಯಾಪಕರನ್ನ ನೇಮಿಸೋಕೆ ಸುಧಾಕರ್ 50 ಲಕ್ಷ ಕೇಳಿದ್ದಾರೆ – ಹೆಚ್‌ಡಿಕೆ ಆರೋಪ

    ಚಿಕ್ಕಮಗಳೂರು: ಮೆಡಿಕಲ್ ಕಾಲೇಜಿಗೆ (Medical College) ಸಹಾಯ ಪ್ರಾಧ್ಯಾಪಕರನ್ನ ನೇಮಿಸೋಕೆ ಸಚಿವ ಡಾ.ಕೆ ಸುಧಾಕರ್ 50 ಲಕ್ಷ ರೂ. ಕೇಳಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಸುಧಾಕರ್ (K Sudhakar) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೋದಿ ಬಂದ್ಮೇಲೆ ದೇಶ ಅಭಿವೃದ್ಧಿಯಾಗಿಲ್ಲ, ನಾವು ಹುಟ್ಟುವ ಮುಂಚೆಯೇ ಆಗಿದೆ: ಹೆಚ್‌ಡಿಕೆ

    ಸುಧಾಕರ್ ನಿನಗೆ ಹಳೇ ಚರಿತ್ರೆ ಗೊತ್ತಿಲ್ಲ ಕಣಪ್ಪ. ನಿನ್ನೆ ಮೊನ್ನೆ ಏನೇನು ಮಾಡಿದ್ದೀಯಾ ಅನ್ನೋದು ಜಗಜ್ಜಾಹೀರಾಗಿದೆ. ನಿಮಗೆ ಆಸ್ಪತ್ರೆಗೆ ಓರ್ವ ಡಾಕ್ಟರ್ ನೇಮಕ ಮಾಡಲು ಆಗಿಲ್ಲ. ಮೆಡಿಕಲ್ ಕಾಲೇಜ್‌ಗೆ ಸಹಾಯ ಪ್ರಾಧ್ಯಾಪಕರನ್ನ ನೇಮಿಸೋಕೆ ಏನು ಮಾಡಿದ್ರಿ? ವಿಧಾನಪರಿಷತ್‌ನಲ್ಲಿ ಪ್ರಮುಖ ಸ್ಥಾನದಲ್ಲಿರುವ ಬಿಜೆಪಿ (BJP) ನಾಯಕರೊಬ್ಬರ ಮಗಳಿಗೆ ಎಷ್ಟು ಕೇಳಿದ್ರಿ? ಅವರ ಬಳಿ 50 ಲಕ್ಷ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಆಶಾ ಕಾರ್ಯಕರ್ತರಿಗೆ ವಿದೇಶಿ ಹಣ ಹಂಚಿದ ಶಾಸಕ ಜಮೀರ್

    ಮುಂದುವರಿದು, ನನ್ನನ್ನ ಕೆಣಕಬೇಡಿ, ನಾನು ಗಾಳಿ ಉತ್ತರ ಕೊಡಲ್ಲ. ಹಾಗಂತ ಭ್ರಷ್ಟಾಚಾರದ ಬಗ್ಗೆ ನಾನು ಚರ್ಚೆ ಮಾಡುತ್ತಿಲ್ಲ, ಮಾಡಿದರೆ ಸಾಕಷ್ಟು ತರುತ್ತೇನೆ. ಕಾಂಗ್ರೆಸ್ಸಿಗೂ ನನಗೂ ವ್ಯತ್ಯಾಸ ಇದೆ. ಬೇಕು ಅಂದ್ರೆ ದಾಖಲೆ ಸಮೇತ ಕೊಡ್ತೀನಿ. ಈ ದೇಶದ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ತಾರ್ಕಿಕ ಅಂತ್ಯ ಅಸಾಧ್ಯ. ಅದಕ್ಕಾಗಿ ಮಾತನಾಡೋದನ್ನ ಬಿಟ್ಟಿದ್ದೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

    ಇದೇ ವೇಳೆ ಹಾಸನ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಾನು ಹಾಸನ ಟಿಕೆಟ್ ಗೊಂದಲದ ಬಗ್ಗೆ ದೇವೇಗೌಡರ (HD Devegowda) ಜೊತೆ ಚರ್ಚೆ ಮಾಡುವುದಿಲ್ಲ. ಸದ್ಯ ದೊಡ್ಡಗೌಡರ ಆರೋಗ್ಯ ಸರಿಯಿಲ್ಲ. ಅದರ ಬಗ್ಗೆ ಮಾತನಾಡಿ ಅವರ ಆರೋಗ್ಯ ಕೆಡಿಸಲು ಬಯಸಲ್ಲ. ಬೇರೆಯವರಿಗೆ ಅವರ ಆರೋಗ್ಯಕ್ಕಿಂತ ಅವರವರ ಭಾವನೆಗಳೇ ದೊಡ್ಡದ್ದು ಅಂದ್ರೆ ನಾನೇನು ಮಾಡೋಕಾಗಲ್ಲ. ಅವರನ್ನು ನಾನು ಹಿಡಿದುಕೊಳ್ಳಲೂ ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.