Tag: Medal

  • ಟೋಕಿಯೋ ಒಲಿಂಪಿಕ್ಸ್ ಪದಕಕ್ಕೆ ಮುತ್ತಿಕ್ಕಲು ಸಜ್ಜಾದ ಭಾರತೀಯ ಕ್ರೀಡಾಪಟುಗಳು

    ಟೋಕಿಯೋ ಒಲಿಂಪಿಕ್ಸ್ ಪದಕಕ್ಕೆ ಮುತ್ತಿಕ್ಕಲು ಸಜ್ಜಾದ ಭಾರತೀಯ ಕ್ರೀಡಾಪಟುಗಳು

    ಟೋಕಿಯೋ: 2021ರ ಟೋಕಿಯೋ ಒಲಿಂಪಿಕ್ಸ್‍ಗೆ ಕ್ಷಣಗಣನೆ ಆರಂಭವಾಗಿದೆ. ಇನ್ನೂ ಕೇವಲ ಕೆಲವೇ ಗಂಟೆಗಳು ಮಾತ್ರ ಭಾಗಿ ಉಳಿದುಕೊಂಡಿರುವಂತೆ, ಭಾರತ ಹಲವು ಕ್ರೀಡಾಪಟುಗಳು ಪದಕ ಬೇಟೆಯಾಡುವ ತವಕದಲ್ಲಿದ್ದಾರೆ.

    2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕೊರೊನಾದಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಈ ವರ್ಷ ಜುಲೈ 23ರಿಂದ ಆಗಸ್ಟ್ 8 ರವರೆಗೆ ಜಪಾನ್‍ನ ಟೋಕಿಯೋದಲ್ಲಿ ನಡೆಯುತ್ತಿದೆ.

    ಈಗಾಗಲೇ ಭಾರತದ 120 ಕ್ರೀಡಾಪಟುಗಳು ಟೋಕಿಯೋ ತಲುಪಿದ್ದಾರೆ. 120 ಕ್ರೀಡಾಪಟುಗಳ ಪೈಕಿ 5 ಮಂದಿ ಕನ್ನಡಿಗರು ಸೇರಿದ್ದಾರೆ. ಈ ಮೂಲಕ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿ ಈ ಬಾರಿ ಅತೀ ಹೆಚ್ಚಿನ ಕ್ರೀಡಾಪಟುಗಳನ್ನು ಕಳುಹಿಸಿದೆ. ಈ ಬಾರಿ 68 ಪುರುಷ ಸ್ಪರ್ಧಿಗಳು ಮತ್ತು 52 ಮಹಿಳಾ ಸ್ಪರ್ಧಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ ಈ ಬಾರಿ ವಿಶೇಷವೆಂಬಂತೆ ಯುವ ಪಡೆ ಟೋಕಿಯೋಗೆ ತೆರಳಿದೆ. 120 ಕ್ರೀಡಾಪಟುಗಳ ಪೈಕಿ 10ಕ್ಕೂ ಹೆಚ್ಚು ಕ್ರೀಡಾಪಟುಗಳು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಭಾರತ ಭವಿಷ್ಯದ ಕ್ರೀಡಾಪಟುಗಳಾಗಿ ಗುರುತಿಸಿಕೊಂಡಿದ್ದಾರೆ. ಕೊರೊನಾದಿಂದಾಗಿ ಬಹಳ ವಿಭಿನ್ನವಾಗಿ ಈ ಬಾರಿಯ ಒಲಿಂಪಿಕ್ಸ್ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯದ ಬರೆ

    ಈಗಾಗಲೇ ಭಾರತದ ಸ್ಟಾರ್ ಆಟಗಾರರನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಈ ಕ್ರೀಡಾಪಟುಗಳಿಂದ ಪದಕ ನಿರೀಕ್ಷೆಗಳನ್ನು ಕ್ರೀಡಾ ತಜ್ಞರು ವ್ಯಕ್ತಪಡಿಸಿದ್ದಾರೆ. ಈ ವರ್ಷ ಎಲ್ಲ ಕ್ರೀಡಾಪಟುಗಳಿಗೆ ಅಭ್ಯಾಸಕ್ಕಾಗಿ ಸಾಕಷ್ಟು ಸಮಯವಕಾಶ ಸಿಕ್ಕಿರುವುದರಿಂದಾಗಿ ಪದಕ ಮುಡಿಗೇರಿಸಿಕೊಳ್ಳುವ ಅವಕಾಶವಿದೆ.

    ಭಾರತ ಸ್ಟಾರ್ ಅಥ್ಲೀಟ್‍ಗಳ ಪೈಕಿ ಪಿ.ವಿ ಸಿಂಧು ಬ್ಯಾಡ್ಮಿಂಟನ್, ಮೇರಿ ಕೋಮ್ ಬಾಕ್ಸಿಂಗ್, ಅಮಿತ್ ಫಂಗಲ್ ಬಾಕ್ಸಿಂಗ್, ಸಾಕ್ಷಿ ಮಲಿಕ್ ಕುಸ್ತಿ, ವಿನೇಶ್ ಪೊಗಾಟ್ ಕುಸ್ತಿ, ಭಜರಂಗ್ ಪೊನಿಯಾ ಕುಸ್ತಿ, ಮನು ಭಾಕರ್ ಶೂಟಿಂಗ್, ದೀಪಿಕಾ ಕುಮಾರಿ ಆರ್ಚರಿ, ಮೀರಾಬಾಯಿ ಚಾನು ವೇಟ್‍ಲಿಪ್ಟಿಂಗ್‍ನಲ್ಲಿ ಸ್ಪರ್ಧಿಸುತ್ತಿದ್ದು ಇವರೆಲ್ಲರ ಮೇಲೆ ಪದಕದ ನಿರೀಕ್ಷೆ ಇದೆ. ಇವರೊಂದಿಗೆ ಇನ್ನಿತರ ಯುವ ಕ್ರೀಡಾಪಟುಗಳು ಪದಕವನ್ನು ಮುಡಿಗೇರಿಸಿಕೊಳ್ಳಲಿ ಎಂಬುದು ನಮ್ಮೆಲ್ಲರ ಆಶಯ. ಆಲ್ ದಿ ಬೇಸ್ಟ್ ಇಂಡಿಯಾ.

  • ಜೀವನದಲ್ಲೇ ಇದು ನನ್ನ ಮೊದಲ ಮೆಡಲ್ : ಲ್ಯಾಗ್ ಮಂಜು

    ಜೀವನದಲ್ಲೇ ಇದು ನನ್ನ ಮೊದಲ ಮೆಡಲ್ : ಲ್ಯಾಗ್ ಮಂಜು

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಇನ್ನೇನು 2 ವಾರ ಪೂರ್ಣಗೊಳ್ಳುತ್ತಿದೆ. ಈ ವಾರದ ಅತ್ಯುತ್ತಮ ಮತ್ತು ಕಳಪೆ ಪ್ರದರ್ಶನ ತೋರಿಸಿದ ಸ್ಪರ್ಧಿಗಳನ್ನು ಸ್ವತಃ ಮನೆಯ ಸದಸ್ಯರು ಆಯ್ಕೆ ಮಾಡಿದರು.

    ಬಿಗ್‍ಬಾಸ್, ಮನೆಯ ಸದಸ್ಯರ ಪೈಕಿ ಈ ವಾರ ಉತ್ತಮ ಪ್ರದರ್ಶನ ನೀಡಿದ ಒಬ್ಬ ಸದಸ್ಯನ ಹೆಸರನ್ನು ಮನೆಯ ಎಲ್ಲ ಸದಸ್ಯರು ಚರ್ಚಿಸಿ ಒಮ್ಮತದಿಂದ ನಿರ್ಧರಿಸಬೇಕು ಹಾಗೂ ಮನೆಯವರ ತೀರ್ಮಾನವನ್ನು ಕ್ಯಾಪ್ಟನ್ ರಾಜೀವ್ ಸೂಕ್ತ ಕಾರಣಗಳೊಂದಿಗೆ ಬಿಗ್‍ಬಾಸ್‍ಗೆ ತಿಳಿಸಬೇಕು ಎಂದು ಸೂಚಿಸಿದರು.

    ಅದರಂತೆ ಮೊದಲನೆಯದಾಗಿ ಮಾತನಾಡಿದ ಗೀತಾ, ನಾನು ಲ್ಯಾಗ್ ಮಂಜುರವರ ಹೆಸರನ್ನು ಹೇಳಲು ಇಷ್ಟಪಡುತ್ತೇನೆ. ಎಂಟರ್‍ಟೈನ್‍ಮೆಂಟ್ ವಿಷಯಕ್ಕೆ ಬಂದರೆ ನಮ್ಮೆಲ್ಲರನ್ನು ಬಹಳ ನಗಿಸುತ್ತಾರೆ ಎಂದರು. ದಿವ್ಯಾ ಉರುಡುಗ ಮಂಜುರವರು ಕ್ಯಾಪ್ಟನ್ ಸ್ಥಾನವನ್ನು ಬಹಳ ಚೆನ್ನಾಗಿ ನಿಭಾಯಿಸಿದರು ಹಾಗಾಗಿ ನಾನು ಕೂಡ ಮಂಜುರವರ ಹೆಸರನ್ನು ಸೂಚಿಸುತ್ತೇನೆ ಎಂದರೆ, ವಿಶ್ವನಾಥ್ ಸಹ ಮಂಜು ಹೆಸರನ್ನು ಸೂಚಿಸುತ್ತಾರೆ. ಎಂಟರ್ಟೈನ್ಮೆಂಟ್ ಬಿಗ್‍ಬಾಸ್ ಮನೆಯಲ್ಲಿ ನಾವೆಲ್ಲ ಒಂದು ಕುಟುಂಬದವರ ರೀತಿಯಲ್ಲಿ ಇದ್ದೇವೆ ಎಂದರೆ ಅದಕ್ಕೆ ಕಾರಣ ಮಂಜು ಎಂದು ಚಂದ್ರಕಲಾ ತಿಳಿಸುತ್ತಾರೆ. ಟಾಸ್ಕ್‍ನಲ್ಲಿಯೇ ಆಗಲಿ, ಕೆಲಸದಲ್ಲಿಯೇ ಆಗಲಿ ಒಂದು ಒಳ್ಳೆಯ ಸಪೋರ್ಟಿವ್ ರೋಲ್ ಮಂಜು ಎಂದು ಅರವಿಂದ್ ಕೂಡ ಮಂಜು ಹೆಸರನ್ನು ತೆಗೆದುಕೊಳ್ಳುತ್ತಾರೆ. ದಿವ್ಯಾ ಸುರೇಶ್ ಎಲ್ಲರೊಂದಿಗೆ ಮಾತನಾಡುವ ರೀತಿ, ಟಾಸ್ಕ್ ನನ್ನು ಹಾಗೂ ನಮ್ಮನ್ನೆಲ್ಲ ನಿಭಾಯಿಸುವ ರೀತಿ ಎಲ್ಲವೂ ಒಂದು ಮಟ್ಟಕ್ಕೆ ಮಂಜು ನಿಭಾಯಿಸುತ್ತಾರೆ ಹಾಗಾಗಿ ನಾನು ಕೂಡ ಮಂಜುರವರನ್ನು ಆಯ್ಕೆ ಮಾಡುತ್ತೇನೆ ಎಂದು ನುಡಿದರು.

    ಶುಭ ಪೂಂಜಾ, ಮಂಜು ಅರಂವಿಂದ್‍ರವರ ಹೆಸರನ್ನು ಆಯ್ಕೆ ಮಾಡಿದರೆ, ನಿಧಿ ಸುಬ್ಬಯ್ಯ, ವೈಷ್ಣವಿ ಗೌಡ, ಶಂಕರ್, ಪ್ರಶಾಂತ್ ಸಂಬರಗಿ, ರಘು, ರಾಜೀವ್ ಹೆಸರನ್ನು ಸೂಚಿಸುತ್ತಾರೆ. ಜೊತೆಗೆ ಬ್ರೋ ಗೌಡ ಹಾಗೂ ನಿರ್ಮಲ ಪ್ರಶಾಂತ್ ಸಂಬರಗಿಯವರ ಹೆಸರನ್ನು ಸೂಚಿಸುತ್ತಾರೆ.

    ಒಟ್ಟಾರೆ ಮನೆಯ ಸದಸ್ಯರ ಅಭಿಪ್ರಾಯವನ್ನೆಲ್ಲಾ ಪರಿಶೀಲಿಸಿದ ರಾಜೀವ್ ನಾನು ಕ್ಯಾಪ್ಟನ್ ಆಗಿದ್ದೇನೆ. ನಾನು ನನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದೇನೆ. ಹಾಗಾಗಿ ಮನೆಯನ್ನು ಇನ್ನಷ್ಟು ಖುಷಿಯಾಗಿಡುತ್ತಿರುವ ಮಂಜುರವರಿಗೆ ಈ ವಾರದ ಉತ್ತಮ ಆಟಗಾರರೆಂದು ಆಯ್ಕೆ ಮಾಡುತ್ತೇನೆ ಎಂದು ಹೇಳುತ್ತಾ ಶುಭಾಶಯ ತಿಳಿಸಿ ಮೆಡಲ್ ನೀಡಿದರು.

    ಬಳಿಕ ಮೆಡಲ್ ಸ್ವೀಕರಿಸಿದ ಮಂಜು ನನಗೆ ಬಹಳ ಸಂತಸವಾಗುತ್ತಿದೆ. ಇದು ನನ್ನ ಜೀವನದಲ್ಲಿ ಸಿಗುತ್ತಿರುವ ಮೊದಲ ಮೆಡಲ್. ಎಲ್ಲರಿಗೂ ಧನ್ಯವಾದ ಎಂದು ಹೇಳುತ್ತಾರೆ. ಈ ವೇಳೆ ಮನೆ ಮಧಿ ಜೋರಾಗಿ ಶಿಳ್ಳೆ ಮತ್ತು ಚಪ್ಪಾಳೆಯನ್ನು ಹೊಡೆಯುತ್ತಾರೆ ಎಂದು ಮಂಜುರವರ ಹೆಸರನ್ನು ಘೋಷಿಸುತ್ತಾರೆ.

    ಈ ವಾರ ಕಳಪೆ ಪ್ರದರ್ಶನ ತೋರಿದ ಬ್ರೋ ಗೌಡರನ್ನು ಬಿಗ್‍ಬಾಸ್ ಸೆರೆವಾಸ ಮಾಡಲು ಸೂಚಿಸಿದರು.

  • ಅಂತರಾಷ್ಟ್ರೀಯ ಮ್ಯಾರಥಾನ್ ಓಟದಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಗಡಿ ಭಾಗದ ಯುವಕರು

    ಅಂತರಾಷ್ಟ್ರೀಯ ಮ್ಯಾರಥಾನ್ ಓಟದಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಗಡಿ ಭಾಗದ ಯುವಕರು

    ಬೆಳಗಾವಿ/ಚಿಕ್ಕೋಡಿ: ಅಂತರಾಷ್ಟ್ರೀಯ ಮ್ಯಾರಥಾನ್ ಓಟದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಬ್ಬರು ಯುವಕರು ಚಿನ್ನ, ಬೆಳ್ಳಿ ಪದಕ ಪಡೆಯುವ ಮೂಲಕ ಕರ್ನಾಟಕದ ಕೀರ್ತಿಯನ್ನು ಮತಷ್ಟು ಹೆಚ್ಚಿಸಿದ್ದಾರೆ.

    ಫೆ.27ರಂದು ನೇಪಾಳದ ಪೊಖರಾದಲ್ಲಿ ಅಂತರಾಷ್ಟ್ರೀಯ ಮ್ಯಾರಾಥಾನ್ ನಡೆದಿದ್ದು, ಈ ಮ್ಯಾರಾಥಾನ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ರಾಮು ಮಾಳಿಯವರು 21 ಕಿ.ಮೀ. ಅಂತರದ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಮಲಿಕವಾಡ ಗ್ರಾಮದ ಮಹೇಶ್ ತೊಂಬರ 42 ಕಿ.ಮೀ. ಅಂತರದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

    ಗೋವಾದಲ್ಲಿ ಯುವ ಕ್ರೀಡಾ ಅಭಿವೃದ್ಧಿ ಅಸೋಶಿಯೇಶನ್ ಇಂಡಿಯಾ ಮತ್ತು ಗೋವಾ ಅಸೋಶಿಯೇಶನ್ ವತಿಯಿಂದ ಏರ್ಪಡಿಸಿದ್ದ ಮ್ಯಾರಾಥಾನ್‍ನಲ್ಲಿ ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದ ಮಹೇಶ ತೊಂಬರೆ ಹಾಗೂ ಯಕ್ಸಂಬಾ ಪಟ್ಟಣದ ರಾಮು ಮಾಳಿ ಇಬ್ಬರು ಯುವಕರು ಚಿನ್ನದ ಪದಕ ಪಡೆದಿದ್ದು, ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಾಂಪಿಯನ್‍ಶಿಪ್ ಸ್ಪರ್ಧೆಗಾಗಿ ಆಯ್ಕೆಯಾಗಿದ್ದರು. ನೇಪಾಳದಲ್ಲಿ ನಡೆದ ಮ್ಯಾರಾಥಾನ್‍ನಲ್ಲಿ ರಾಮು ಚಿನ್ನದ ಪದಕೆ ಪಡೆದುಕೊಂಡರೆ ಮಹೇಶ್ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇಬ್ಬರೂ ಮಲಿಕವಾಡ ಗ್ರಾಮಕ್ಕೆ ಆಗಮಿಸಿದಾಗ ಅವರಿಗೆ ಸತ್ಕಾರ ಮಾಡುವ ಮೂಲಕ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

  • ಭುಜಕ್ಕೆ ಹಗ್ಗಕಟ್ಟಿಕೊಂಡು ಹೊಲ ಸಮ ಮಾಡ್ತಿದ್ದಾರೆ ಕುಸ್ತಿಪಟು ಸಾಕ್ಷಿ

    ಭುಜಕ್ಕೆ ಹಗ್ಗಕಟ್ಟಿಕೊಂಡು ಹೊಲ ಸಮ ಮಾಡ್ತಿದ್ದಾರೆ ಕುಸ್ತಿಪಟು ಸಾಕ್ಷಿ

    ನವದೆಹಲಿ: ನಾನು ನನ್ನ ಪದಕದ ಬಣ್ಣವನ್ನು ಬದಲಿಸಬೇಕು ಎಂದು ಭಾರತದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಹೇಳಿದ್ದಾರೆ.

    ಸಾಕ್ಷಿ ಅವರು ಭಾರತದ ಪ್ರತಿಭಾನ್ವಿತ ಕುಸ್ತಿಪುಟು, ಅವರು ದೇಶಕ್ಕಾಗಿ ಮೂರು ಪದಕಗಳನ್ನು ಗೆದ್ದು ತಂದಿದ್ದಾರೆ. ಆದರೆ ಮೂರು ಪದಕದಲ್ಲಿ ಒಂದು ಬಾರಿ ಸಿಲ್ವರ್ ಮತ್ತು ಎರಡು ಬಾರಿ ಕಂಚಿನ ಪದಕ ಗೆದ್ದಿದ್ದೇನೆ ಎಂಬ ನೋವು ಅವರಿಗಿದೆ. ಹೀಗಾಗಿ ಮುಂದೆ ನಡೆಯುವ ಟೋಕಿಯೊ ಒಲಿಪಿಂಕ್ಸ್ ನಲ್ಲಿ ನಾನು ನನ್ನ ಪದಕದ ಬಣ್ಣವನ್ನು ಬದಲಿಸಿ ಚಿನ್ನದ ಪದಕ ಗೆಲ್ಲಬೇಕು ಎಂದು ಸಾಕ್ಷಿ ಹೇಳಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಸಾಕ್ಷಿ, 2018ರಲ್ಲಿ ನಾನು ಉತ್ತಮವಾಗಿ ಆಡಿದ್ದೆ. ಪದಕವನ್ನು ಗೆಲ್ಲಲು ನಾನು ಕಠಿಣ ತರಬೇತಿ ಪಡೆದಿದ್ದೆ. ನಾನು ಜಕಾರ್ತಾ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವಲ್ಲಿ ಹತ್ತಿರದಲ್ಲಿದ್ದೆ ಆದರೆ ಕೆಲವು ಸೆಕೆಂಡುಗಳಿಂದ ಸೋತಿದ್ದೇನೆ. ಆದರೆ ಈಗ ನಾನು ಮಾಡಿದ ತಪ್ಪು ನನಗೆ ಅರಿವಾಗಿದೆ. ಅಂದು ನನ್ನ ಫುಟ್‍ವರ್ಕ್ ತಪ್ಪಾಗಿತ್ತು. ಈಗ ನಾನು ಫುಟ್‍ವರ್ಕ್ ಮೇಲೆ ಗಮನವರಿಸಿದ್ದೇನೆ. ಮುಂದಿನ ಒಲಿಪಿಂಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.

    ನಾನು ಕೊರೊನಾ ಲಾಕ್‍ಡೌನ್ ನಡುವೆ ಮನೆಯಿಂದ ಹೊರಗೆ ಹೋಗಿಲ್ಲ. ಅಭ್ಯಾಸ ಮಾಡಲು ಜಿಮ್‍ಗೆ ಹೋಗುವುದು ಯಾಕೋ ಸುರಕ್ಷಿತವಲ್ಲ ಎನಿಸಿತು. ಹೀಗಾಗಿ ನಾನು ಮನೆಯಲ್ಲೇ ಸಾಂಪ್ರಾದಾಯಿಕ ವ್ಯಾಯಾಮ ಮಾಡುತ್ತಿದ್ದೇನೆ. ಭುಜಕ್ಕೆ ಹಗ್ಗಕಟ್ಟಿಕೊಂಡು ನಮ್ಮ ಹೊಲವನ್ನು ಸಮ ಮಾಡುವ ಕೆಲಸ ಮಾಡುತ್ತಿದ್ದೇನೆ. ಇದರಿಂದ ನನ್ನ ದೇಹ ಉರಿಗೊಳ್ಳುತ್ತಿದೆ. ಕೊರೊನಾ ಮುಗಿದ ಬಳಿಕ ಜಿಮ್‍ಗೆ ಹೋಗಿ ಮತ್ತಷ್ಟು ಅಭ್ಯಾಸ ಮಾಡುತ್ತೇನೆ ಎಂದು ಸಾಕ್ಷಿ ಮಲಿಕ್ ತಿಳಿಸಿದ್ದಾರೆ.

    ಇದೇ ವೇಳೆ ಟೋಕಿಯೊ ಒಲಿಂಪಿಕ್ಸ್ ಬಗ್ಗೆ ಮಾತನಾಡಿರುವ ಸಾಕ್ಷಿ, ಒಲಪಿಂಕ್ಸ್ ಎಂಬುದು ಒಬ್ಬ ಕ್ರೀಡಾಪಟುವಿನ ಜೀವನದಲ್ಲಿ ಬಹಳ ಮುಖ್ಯ. ಈಗ ಟೋಕಿಯೊ ಒಲಂಪಿಕ್ಸ್ ಕೊರೊನಾ ಲಾಕ್‍ಡೌನ್‍ನಿಂದ ಮುಂದಕ್ಕೆ ಹೋದ ಕಾರಣ ನಮಗೆ ಅಭ್ಯಾಸ ಮಾಡಲು ಸಾಕಷ್ಟು ಸಮಯ ಲಭಿಸಿದೆ. ಈ ಸಮಯವನ್ನು ಸದುಪಯೋಗ ಮಾಡಿಕೊಂಡು ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಸಾಕ್ಷಿ ಮಲಿಕ್ ಅವರು, 2016ರಲ್ಲಿ ನಡೆದ ಸಮ್ಮರ್ ಒಲಪಿಂಕ್ಸ್ ನಲ್ಲಿ 58 ಕೆಜಿ ಮಹಿಳಾ ವಿಭಾಗದ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಕುಸ್ತಿ ವಿಭಾಗದಲ್ಲಿ ಒಲಪಿಂಕ್ಸ್ ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆಯಾಗಿದ್ದರು. ಇದಕ್ಕೂ ಮುನ್ನ ಅವರು ಗ್ಲ್ಯಾಸ್ಗೋದಲ್ಲಿ ನಡೆದ 2014ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಮತ್ತು 2015 ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ವ್ರೆಸ್ಲಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದಿದ್ದರು.

  • ತಾಯಿಗೆ ಕ್ಯಾನ್ಸರ್, ಅಪ್ಪನಿಗೆ ಕಾಯಿಲೆ – ಛಲ ಬಿಡದೆ ಇಂಟರ್‌ನ್ಯಾಷನಲ್ ಕಿಕ್ ಬಾಕ್ಸಿಂಗ್‍ನಲ್ಲಿ ಚಿನ್ನದ ಪದಕ ಗೆದ್ದ

    ತಾಯಿಗೆ ಕ್ಯಾನ್ಸರ್, ಅಪ್ಪನಿಗೆ ಕಾಯಿಲೆ – ಛಲ ಬಿಡದೆ ಇಂಟರ್‌ನ್ಯಾಷನಲ್ ಕಿಕ್ ಬಾಕ್ಸಿಂಗ್‍ನಲ್ಲಿ ಚಿನ್ನದ ಪದಕ ಗೆದ್ದ

    – ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಹಣ ನೀಡಿಲ್ಲ
    – ಸರ್ಕಾರದ ನೆರವಿಲ್ಲದೆ ದೇಶಕ್ಕೆ ಕೀರ್ತಿ

    ಮೈಸೂರು: ತಾಯಿಗೆ ಕ್ಯಾನ್ಸರ್, ಅಪ್ಪನಿಗೆ ಕಾಯಿಲೆ ಇದ್ದರೂ ಛಲ ಬಿಡದ ಮಗ ತಾಯಿಯ ಆಸೆಯಂತೆ ಇಂಟರ್‌ನ್ಯಾಷನಲ್ ಕಿಕ್ ಬಾಕ್ಸಿಂಗ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

    ಮೈಸೂರಿನ ಟಿ.ಕೆ.ಲೇಔಟ್ ನಿವಾಸಿ ರಂಜಿತ್ ಚಿನ್ನದ ಪದಕ ಗೆದ್ದ ಯುವಕ. ವಾಕೋ ಇಂಡಿಯನ್ ಓಪನ್ ಇಂಟರ್‌ನ್ಯಾಷನಲ್ ಕಿಕ್ ಬಾಕ್ಸಿಂಗ್‍ನ 84 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಪೌರ ಕಾರ್ಮಿಕರ ಮಗನಾಗಿರುವ ರಂಜಿತ್, 5ಕ್ಕೂ ಹೆಚ್ಚು ದೇಶ ಭಾಗಿಯಾಗಿದ್ದ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಮೈಸೂರಿಗೆ ಹೆಮ್ಮೆ ತಂದಿದ್ದಾರೆ.

    ಕ್ರೀಡಾಕೂಟದಲ್ಲಿ ಭಾಗವಹಿಸಲು ಹಣ ಇಲ್ಲದೆ ರಂಜಿತ್ ಪರದಾಡಿದ್ದರು. ಈ ವೇಳೆ ಸ್ನೇಹಿತರು, ಸ್ಥಳೀಯರು ನೀಡಿದ ಧನ ಸಹಾಯದಿಂದ ದೆಹಲಿಗೆ ಹೋಗಿದ್ದರು. ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಹಣ ನೀಡಿರಲಿಲ್ಲ. ಇದೀಗ ಸರ್ಕಾರದ ನೆರವಿಲ್ಲದೆ ರಂಜಿತ್ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈಗಾಗಲೇ ಒಟ್ಟು ಮೂರು ಚಿನ್ನದ ಪದಕ ಗೆದ್ದಿರುವ ರಂಜಿತ್ ಮುಂದೆ ಒಲಂಪಿಕ್ಸ್‌ನಲ್ಲಿ ಭಾಗವಹಿಸುವ ಆಸೆ ಹೊಂದಿದ್ದಾರೆ.

  • ಕೆಸರು ಗದ್ದೆಯ ಉಸೇನ್ ಬೋಲ್ಟ್ ಇನ್ನಿಲ್ಲ – `ರಾಕೆಟ್ ಮೋಡ’ ಕಂಬಳದ ಕೋಣ ನೆನಪು ಮಾತ್ರ

    ಕೆಸರು ಗದ್ದೆಯ ಉಸೇನ್ ಬೋಲ್ಟ್ ಇನ್ನಿಲ್ಲ – `ರಾಕೆಟ್ ಮೋಡ’ ಕಂಬಳದ ಕೋಣ ನೆನಪು ಮಾತ್ರ

    ಉಡುಪಿ: ವೀರ ಜಾನಪದ ಕ್ರೀಡೆ ಕಂಬಳ ಕ್ಷೇತ್ರದಲ್ಲಿ ಪದಕಗಳ ಮೇಲೆ ಪದಕ ಬಾಚಿ ಸಾಧನೆ ಮಾಡಿದ್ದ `ರಾಕೆಟ್ ಮೋಡ’ ಹೆಸರಿನ ಕಂಬಳದ ಕೋಣ ಮೃತಪಟ್ಟಿದ್ದು, ಕರಾವಳಿಯ ಕಂಬಳಪ್ರಿಯರಿಗೆ ದುಃಖ ತಂದಿದೆ.

    ಕಂಬಳ ಕ್ಷೇತ್ರದಲ್ಲಿ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ನೂರಾರು ಬಹುಮಾನಗಳನ್ನು ಗೆದ್ದ ಹೆಗ್ಗಳಿಕೆ ರಾಕೆಟ್ ಮೋಡ ಕೋಣದ್ದಾಗಿತ್ತು. ಮೂರು ಮನೆತನದ ಪರವಾಗಿ ಓಡಿದ್ದ ಮೋಡ ಕಡೆಯದಾಗಿ ನಂದಳಿಕೆ ಶ್ರೀಕಾಂತ ಭಟ್ಟರ ಕೊಟ್ಟಿಗೆಯ ಅರಸನಾಗಿತ್ತು. ಆತನ ಸ್ಪೀಡ್ ರಾಕೆಟ್ ಗಿಂತ ತುಸು ಹೆಚ್ಚಾಗಿದ್ದು, ಜಿದ್ದಿಗೆ ಬಿದ್ದು ಜಿಗಿಯಲು ಶುರು ಮಾಡಿದರೆ ಎದುರಾಳಿ ಸೋಲು ಖಚಿತವಾಗಿತ್ತು.

    ಎಣ್ಣೆ ಹಚ್ಚಿಸಿಕೊಂಡು, ಬಿಸಿನೀರು ಸ್ನಾನ ಮಾಡಿ ನೊಗ ಕಟ್ಟಿ ಕೆಸರು ಗದ್ದೆಗೆ ಇಳಿದರೆ `ಕುಟ್ಟಿ’ ಮತ್ತು `ಮೋಡ’ನೇ ಆ ಕೂಟಕ್ಕೆ ರಾಜರು. ಕಂಬಳ ಗದ್ದೆಯಲ್ಲಿ ಇವರಿಬ್ಬರ ಜೋಡಿಯನ್ನು ಕಳೆದ 15 ವರ್ಷದಲ್ಲೇ ಸೋಲಿಸಿರಲಿಲ್ಲ. ಕಂಬಳಪ್ರಿಯರು ಈ ಕೋಣದ ಹೆಸರಿನಲ್ಲಿ ಅಳುಕಿಲ್ಲದೆ ಬಾಜಿ ಕಟ್ಟುತ್ತಿದ್ದರು. ಇಂತಹ ಕೋಣ ಸದ್ಯ ಇಹಲೋಹದ ಓಟ ಮುಗಿಸಿ ಎಲ್ಲರ ಕಣ್ಣು ತೇವ ಮಾಡಿಸಿದ್ದಾನೆ.

    ಕಂಬಳದಲ್ಲಿ ಎಂದು ಕಂಬಳ ಪ್ರಿಯರಿಗೆ ನಿರಾಸೆ ಮಾಡಿಸದ ಈತ ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್, ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ ಹಾಗೂ ನಂದಳಿಕೆ ಶ್ರೀಕಾಂತ್ ಭಟ್ ಆರೈಕೆಯಲ್ಲಿತ್ತು. ರಾಜ್ಯದ ಜನರಿಗೆ ಕಂಬಳ ಎಂಬುದು ಕೇವಲ ಕೋಣಗಳ ಓಟದ ಅಖಾಡ ಆಗಿರಬಹುದು. ಆದರೆ ಕರಾವಳಿಯ ಜನರಿಗೆ ಕಂಬಳ ಎನ್ನುವುದು ಮನುಷ್ಯ ಮತ್ತು ಕೋಣಗಳ ನಡುವೆ ಸಂಬಂಧವಿದೆ. ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ವರ್ಷಕ್ಕೆ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕಾಳಜಿ ಮಾಡಿದ್ದ ಕೋಣವನ್ನು ಕಳೆದುಕೊಂಡ ಶ್ರೀಕಾಂತ್ ಭಟ್ ಕುಟುಂಬ ಮತ್ತು ಕಂಬಳಾಭಿಮಾನಿಗಳು ಬಹಳ ನೋವಿನಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv 

  • ದುಬೈನಲ್ಲಿ ನಡೆದ ಪವರ್ ಲಿಫ್ಟಿಂಗ್ ನಲ್ಲಿ ಚಿನ್ನ ಗೆದ್ದ ಬೆಂಗ್ಳೂರು ಹುಡುಗಿ

    ದುಬೈನಲ್ಲಿ ನಡೆದ ಪವರ್ ಲಿಫ್ಟಿಂಗ್ ನಲ್ಲಿ ಚಿನ್ನ ಗೆದ್ದ ಬೆಂಗ್ಳೂರು ಹುಡುಗಿ

    ಬೆಂಗಳೂರು: ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ನಲ್ಲಿ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಡುಗಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಪತಾಕೆಯನ್ನು ಹಾರಿಸಿದ್ದಾರೆ.

    ಆನೇಕಲ್ ತಾಲೂಕಿನ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಸೋಲೂರೂ ಗ್ರಾಮದ ನಿವಾಸಿಗಳಾದ ಗುರುಮೂರ್ತಿ ಮತ್ತು ವನಜಾಕ್ಷಿ ದಂಪತಿಯ ಪುತ್ರಿ ಶಾಲಿನಿ ಚಿನ್ನ ಗೆದ್ದ ಹುಡುಗಿ. ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಶಾಲಿನಿ ಬುಧವಾರ ನಡೆದ 63 ಕೆಜಿ ವಿಭಾಗದ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ನಲ್ಲಿ ಮೊದಲ ಸ್ಥಾನಗಳಿಸಿ ಶಾಲಿನಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

    ಮಗಳು ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಪೋಷಕರ ಹರ್ಷ ಮುಗಿಲು ಮುಟ್ಟಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ತುಂಬಿಕೊಂಡಿದೆ. ಶಾಲಿನಿ ತಂದೆ ತಾಯಿ ಹಾಗೂ ಸಹೋದರ ಪರಸ್ಪರ ಸಿಹಿ ತಿನಿಸುವ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ. ಶಾಲಿನಿ ವಿಡಿಯೋ ಕಾಲ್ ಮಾಡುವ ಮೂಲಕ ಪೋಷಕರೊಂದಿಗೆ ಹರ್ಷ ಹಂಚಿಕೊಂಡು ತನ್ನ ಸಾಧನೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

    ಬಡತನದಲ್ಲಿ ಬೆಳೆದಿದ್ದ ಶಾಲಿನಿಯ ಪ್ರತಿಭೆಯನ್ನು ಗುರುತಿಸಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಈಕೆಗೆ ಉಚಿತ ಶಿಕ್ಷಣ ಮತ್ತು ತರಬೇತಿ ನೀಡುತ್ತಿತ್ತು. ಇದೇ ಸಂದರ್ಭದಲ್ಲಿ ಶಾಲಿನಿ ತಂದೆ ಮಾತನಾಡಿ, ಶಾಲಿನಿಯ ಸಾಧನೆಯಿಂದ ತನ್ನ ಜನ್ಮ ಸಾರ್ಥಕವಾಗಿದೆ ಎಂದು ಆಕೆಯ ಬೆಳವಣಿಗೆಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಪೊಲೀಸ್ ಪದಕ ವಿತರಣೆಯಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ!

    ಪೊಲೀಸ್ ಪದಕ ವಿತರಣೆಯಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ!

    – ಮೈಸೂರು ಭಾಗದತ್ತ ಹೆಚ್ಚು ಒಲವು

    ಬೆಂಗಳೂರು: ಬಜೆಟ್‍ನಲ್ಲಿ ಉತ್ತರ ಕರ್ನಾಟಕ ಕಡೆಗಣಿಸಿದ್ದ ಸರ್ಕಾರ ಈಗ ಮತ್ತೆ ಅನ್ಯಾಯ ಮಾಡಲು ಹೊರಟಿದೆ. 2017ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡುವಲ್ಲಿಯೂ ತಾರತಮ್ಯ ಮಾಡಿದೆ.

    ಮುಖ್ಯಮಂತ್ರಿ ಪದಕ ನೀಡಿಕೆಯಲ್ಲಿ ಉತ್ತರ ಕರ್ನಾಟಕವನ್ನ ಕಡೆಣಿಸಿರುವ ಸಮ್ಮಿಶ್ರ ಸರ್ಕಾರ ಬೆಂಗಳೂರು, ಮೈಸೂರು ಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಬೆರಳೆಣಿಕೆಯಷ್ಟು ಪದಕ ನೀಡಿದ್ದು, ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಹೆಚ್ಚಿನ ಪದಕ ನೀಡಲಾಗಿದೆ. ಇದನ್ನೂ ಓದಿ: ಇದು ಫೈನಲ್ ಬಜೆಟಲ್ಲ, ಸಪ್ಲಿಮೆಂಟರಿಯಲ್ಲಿ ಉ.ಕ.ಕ್ಕೆ ನ್ಯಾಯ ಒದಗಿಸೋಣ- ಸಚಿವ ಶಿವಶಂಕರ್ ರೆಡ್ಡಿ

    2017ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆಯಲ್ಲಿ ಅನ್ಯಾಯ ಮಾಡಲಾಗಿದ್ದು, 122 ಜನ ಪೊಲೀಸರಿಗೆ ನೀಡಿರುವ ಮುಖ್ಯಮಂತ್ರಿ ಪದಕದಲ್ಲಿ ಬೆಂಗಳೂರು ಪೊಲೀಸರಿಗೆ ಹೆಚ್ಚಿನ ಪದಕಗಳನ್ನು ನೀಡಲಾಗಿದೆ. 10 ಕ್ಕೂ ಹೆಚ್ಚು ಜಿಲ್ಲೆಗಳಿಗೆ ಕೇವಲ ಒಂದು ಪದಕವನ್ನು ನೀಡಲಾಗಿದೆ. ಬೆಂಗಳೂರು – 57, ಮೈಸೂರು – 12, ಶಿವಮೊಗ್ಗ – 6, ಉತ್ತರ ಕರ್ನಾಟಕದ 13 ಜಿಲ್ಲೆಗಳಿಗೆ – 20 ಆಗಿದ್ದು, ಇನ್ನು ಹಾಸನ, ಕೊಡಗು, ಮಂಡ್ಯ, ರಾಮನಗರ, ಮಂಗಳೂರು – 11 ಪದಕಗಳನ್ನು ನೀಡಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕ ಪೊಲೀಸರು ಕೆಲಸ ಮಾಡೋಲ್ವಾ..? ಮುಖ್ಯಮಂತ್ರಿ ಪದಕದಲ್ಲೂ ಲಾಬಿ ನಡೆದಿದ್ಯಾ..? ಅನ್ನೋ ಅನುಮಾನ ಗೃಹ ಇಲಾಖೆ ಮೇಲೆ ಮೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=zBoDEsic00o

  • ಏಷ್ಯನ್ ಗೇಮ್ಸ್‌ನಲ್ಲಿ  ಭಾರತದ ಸಾರ್ವಕಾಲಿಕಾ ದಾಖಲೆ!

    ಏಷ್ಯನ್ ಗೇಮ್ಸ್‌ನಲ್ಲಿ  ಭಾರತದ ಸಾರ್ವಕಾಲಿಕಾ ದಾಖಲೆ!

    ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಇತಿಹಾಸದಲ್ಲೇ ಅತಿಹೆಚ್ಚು ಪದಕಗಳನ್ನು ಗೆದ್ದಿದ್ದಾರೆ.

    ಕೊನೆಯ ದಿನವಾದ ಶನಿವಾರ ಪುರುಷರ ಹಾಕಿ ತಂಡ ಪಾಕಿಸ್ತಾನವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ಪಡೆಯಿತು. ಮಹಿಳೆಯರ ಸ್ಕ್ವಾಶ್ ತಂಡ ಬೆಳ್ಳಿ ಪದಕ ಗೆದ್ದರೆ ಬಾಕ್ಸಿಂಗ್ ನಲ್ಲಿ ಅಮಿತ್ ಪಾಂಗಲ್ ಮತ್ತು ಬ್ರಿಡ್ಜ್ ಗೇಮ್(ಇಸ್ಪೀಟ್) ನಲ್ಲಿ ಪುರುಷರ ತಂಡ ಚಿನ್ನವನ್ನು ಗೆದ್ದುಕೊಂಡಿದೆ.

    2010ರಲ್ಲಿ ಚೀನಾದಲ್ಲಿ ನಡೆದಿದ್ದ 16ನೇ ಏಷ್ಯನ್  ಗೇಮ್ಸ್‌ನಲ್ಲಿ 65 ಪದಕಗಳನ್ನು ಗೆದ್ದಿದ್ದೇ ಭಾರತದ ಇವರೆಗಿನ ದಾಖಲೆಯಾಗಿತ್ತು. ಆದರೆ ಈ ಬಾರಿ 15 ಚಿನ್ನ, 24 ಬೆಳ್ಳಿ, 30 ಕಂಚು ಜಯಿಸುವ ಮೂಲಕ ಒಟ್ಟು 69 ಪದಕಗಳನ್ನು ಸ್ಪರ್ಧಿಗಳು ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: ಚಿನ್ನ ಗೆದ್ದ 16ರ ಹರೆಯದ ಶೂಟರ್ ಹಿಂದಿದೆ ಖೇಲೋ ಇಂಡಿಯಾ! ಏನಿದು ಯೋಜನೆ?

    2014ರ ಇಂಚಾನ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 11 ಚಿನ್ನ, 10 ಬೆಳ್ಳಿ, 36 ಕಂಚು ಸೇರಿ 57 ಪದಕ ಜಯಿಸಿತ್ತು. 1982ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕೂಟದಲ್ಲೂ ಭಾರತ ಕ್ರೀಡಾಪಟುಗಳು 57 ಪದಕ ಜಯಿಸಿದ್ದರೂ, ಗೆದ್ದ ಚಿನ್ನದ ಪದಕಗಳ ಸಂಖ್ಯೆ 13 ಆಗಿತ್ತು. 2006ರ ದೋಹಾದಲ್ಲಿ ನಡೆದ ಕ್ರೀಡಾಕೂಟದಲ್ಲಿ 53 ಹಾಗೂ 1962ರ ಜರ್ಕಾತದಲ್ಲಿ 52 ಪದಕಗಳನ್ನು ಗೆದ್ದುಕೊಂಡಿತ್ತು.  ಇದನ್ನೂ ಓದಿ: ಹೆಪ್ಟಾಥ್ಲಾನ್ ಚಿನ್ನದ ಹುಡುಗಿ ಸ್ವಪ್ನಾ ತಾಯಿಯ ಆನಂದಭಾಷ್ಪ ವಿಡಿಯೋ ವೈರಲ್

    ಭಾರತದ ಅಥ್ಲೆಟ್ ಗಳು ಈ ಬಾರಿ ವಿಶೇಷ ಸಾಧನೆ ಮಾಡಿದ್ದು ಒಟ್ಟು 7 ಚಿನ್ನ, 10 ಬೆಳ್ಳಿ, 2 ಕಂಚನ್ನು ಗೆಲ್ಲುವ ಮೂಲಕ ಒಟ್ಟು 19 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಅಥ್ಲೆಟಿಕ್ಸ್ ನಲ್ಲಿ ಮೂರನೇ ಸ್ಥಾನ ಸಂಪಾದಿಸಿದ್ದಾರೆ. ಶೂಟಿಂಗ್ ನಲ್ಲಿ 2 ಚಿನ್ನ ಸೇರಿ ಒಟ್ಟು 9 ಪದಕ ಗೆದ್ದಿದ್ದರೆ, ಕುಸ್ತಿಯಲ್ಲ 2 ಚಿನ್ನ ಸೇರಿ ಒಟ್ಟು 3 ಪದಕವನ್ನು ಗೆದ್ದುಕೊಂಡಿದೆ.

    ಚಿನ್ನ ನಿರೀಕ್ಷಿಸಿದ್ದ ಕಬಡ್ಡಿ, ಹಾಕಿ, ಬಾಕ್ಸಿಂಗ್ ನಲ್ಲಿ ಕಂಚು, ಬೆಳ್ಳಿ ಪದಕ ಸಿಕ್ಕಿದ್ದರೆ, ಟೇಬಲ್ ಟೆನಿಸ್, ಸೈಲಿಂಗ್ (ಹಾಯಿದೋಣಿ) ಬ್ರಿಡ್ಜ್ (ಇಸ್ಪೀಟ್), ಈಕ್ವೇಸ್ಟ್ರಿಯನ್ (ಕುದುರೆ ಸವಾರಿ), ಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆದ್ದಿರುವುದು ವಿಶೇಷ.  ಇದನ್ನೂ ಓದಿ:ಚಿನ್ನ ಗೆದ್ದ ಸ್ವಪ್ನಾ ಸಾಧನೆಯ ಹಿಂದಿದೆ ದ್ರಾವಿಡ್ ಸಹಾಯಹಸ್ತ!

     289 ಪದಕ ಪಡೆಯುವ ಮೂಲಕ ಚೀನಾ ಮೊದಲ ಸ್ಥಾನ ಪಡೆದರೆ ಸಿರಿಯಾ ಕೊನೆಯ 37ನೇ ಸ್ಥಾನ ಪಡೆದಿದೆ. 4 ಕಂಚಿನ ಪದಕ ಗೆದ್ದಿರುವ ಪಾಕಿಸ್ತಾನ ಪಟ್ಟಿಯಲ್ಲಿ 34ನೇ ಸ್ಥಾನ ಪಡೆದಿದೆ.

     

     

  • ಏಷ್ಯನ್ ಗೇಮ್ಸ್ – ಭಾರತಕ್ಕೆ ಮೊದಲ ಪದಕ ತಂದ ಶೂಟರ್ಸ್

    ಏಷ್ಯನ್ ಗೇಮ್ಸ್ – ಭಾರತಕ್ಕೆ ಮೊದಲ ಪದಕ ತಂದ ಶೂಟರ್ಸ್

    ಜರ್ಕಾತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಖಾತೆ ತೆರೆದಿದ್ದು, ಶೂಟರ್ ಅಪೂರ್ವಿ ಚಾಂಡೇಲಾ, ರವಿ ಕುಮಾರ್ ಕಂಚಿನ ಪದಕ ಗಳಿಸಿದ್ದಾರೆ.

    ಮಿಶ್ರ ಶೂಟಿಂಗ್ ವಿಭಾಗದ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾಗವಹಿಸಿದ್ದ ಅಪೂರ್ವಿ ಚಾಂಡೇಲಾ, ರವಿ ಕುಮಾರ್ ಜೋಡಿ ಕಂಚಿನ ಪದಕ ಜಯಿಸಿದೆ. ಇಬ್ಬರ ಜೋಡಿ 429.9 ಅಂಕ ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದು ಫೈನಲ್ ತಲುಪಲು ವಿಫಲವಾದರು. ಉಳಿದಂತೆ ಸ್ಪರ್ಧೆಯಲ್ಲಿ 494 ಅಂಕ ಪಡೆದ ಚೀನಾ-ತೈಪೆ ತಂಡ ಮೊದಲ ಸ್ಥಾನ ಪಡೆಯಿತು.

    ಪಟ್ಟಿಯಲ್ಲಿ ದಕ್ಷಿಣ ಕೊರಿಯಾ ಪ್ರಥಮ ಸ್ಥಾನದಲ್ಲಿದ್ದರೆ, ಚೀನಾ ದ್ವಿತೀಯ ಸ್ಥಾನದಲ್ಲಿದ್ದು ಭಾರತ 9ನೇ ಸ್ಥಾನದಲ್ಲಿದೆ. ಉಳಿದಂತೆ ಇಂದು ಭಾರತ ಮಹಿಳಾ ಹಾಕಿ ತಂಡ ಇಂಡೋನೇಷ್ಯಾ ತಂಡವನ್ನು ಎದುರಿಸಲಿದ್ದು, ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv