Tag: mechanic

  • ಮೆಕ್ಯಾನಿಕ್ ಆಗಿದ್ದ ಜಾಲಿ ಬಾಸ್ಟಿನ್ ಸ್ಟಂಟ್ ಡೈರೆಕ್ಟರ್ ಆದ ರೋಚಕ ಕಥೆ

    ಮೆಕ್ಯಾನಿಕ್ ಆಗಿದ್ದ ಜಾಲಿ ಬಾಸ್ಟಿನ್ ಸ್ಟಂಟ್ ಡೈರೆಕ್ಟರ್ ಆದ ರೋಚಕ ಕಥೆ

    ನಿನ್ನೆಯಷ್ಟೇ ಹೃದಯಾಘಾತದಿಂದ ನಿಧನರಾಗಿರುವ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ (Jolly Bastin), ಮೂಲತಃ ಮೆಕ್ಯಾನಿಕ್ (mechanic). ಬಗೆ ಬಗೆಯ ಬೈಕ್ ಗಳನ್ನು ರಿಪೇರಿ ಮಾಡುತ್ತಿದ್ದವರು, ಸ್ಟಂಟ್  ಡೈರೆಕ್ಟರ್ ಆಗಿದ್ದು ರೋಚಕ ಕಥೆ. ರಿಪೇರಿಗೆ ಬಂದಿದ್ದ ಬೈಕ್ ಗಳಲ್ಲಿ ನಾನಾ ರೀತಿಯ ಸಾಹಸ ಪ್ರದರ್ಶನಗಳನ್ನು ಮಾಡುತ್ತಿದ್ದರು ಜಾಲಿ ಬಾಸ್ಟಿನ್. ಒಂದು ಬಾರಿ ರಸ್ತೆಯಲ್ಲಿ ಬೈಕ್ ನಲ್ಲಿ ಸಾಹಸ ಮಾಡುತ್ತಾ ಹೋಗುತ್ತಿದ್ದಾಗ ರವಿಚಂದ್ರನ್ ಕಣ್ಣಿಗೆ ಬಿದ್ದರು. ಅಲ್ಲಿಂದ ಜಾಲಿ ಬಾಸ್ಟಿನ್ ಬದುಕೇ ಬದಲಾಯಿತು.

    ಮೊದ ಮೊದಲು ರವಿಚಂದ್ರನ್ ಅವರಿಗೆ ಡ್ಯೂಪ್ ಆಗಿ ಜಾಲಿ ಬಾಸ್ಟಿನ್ ಕೆಲಸ ಮಾಡಿದರು. ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಯಾವುದೇ ಸಾಹಸ ದೃಶ್ಯಗಳು ಇರಲಿ, ಅಲ್ಲಿ ರವಿಚಂದ್ರನ್ ಬದಲಾಗಿ ಸಾಹಸ ಮಾಡುತ್ತಿದ್ದವರು ಇದೇ ಜಾಲಿ ಮಾಸ್ಟರ್. ಡ್ಯೂಪ್ ಆಗಿದ್ದವರನ್ನು ಸ್ಟಂಟ್ ಡೈರೆಕ್ಟರ್ ಮಾಡಿದ್ದು ಇದೇ ರವಿಚಂದ್ರನ್. ಹಾಗಾಗಿ ರವಿಚಂದ್ರನ್ ಅವರ ಬಹುತೇಕ ಚಿತ್ರಗಳಿಗೆ ಜಾಲಿ ಕೆಲಸ ಮಾಡಿದ್ದರು.

    ರವಿಚಂದ್ರನ್ ಮಾತ್ರವಲ್ಲ, ಅನೇಕ ಕಲಾವಿದರಿಗೆ ಜಾಲಿ ಬಾಸ್ಟಿನ್ ಡ್ಯೂಪ್ ಆಗಿದ್ದಾರೆ. ಕನ್ನಡದಲ್ಲಿ ಇವರು ಫೇಮಸ್ ಆಗುತ್ತಿದ್ದಂತೆಯೇ ಪಕ್ಕದ ಚಿತ್ರೋದ್ಯಮಕ್ಕೂ ಹಾರಿದರು. ತಮಿಳು, ತೆಲುಗು, ಮಲಯಾಳಂ ಹೀಗೆ ನಾನಾ ಭಾಷೆಗಳ ಚಿತ್ರಗಳಿಗೆ ಜಾಲಿ ಬಾಸ್ಟಿನ್ ಕೆಲಸ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು.

     

    ಕೇರಳದಲ್ಲಿ 1966ರಲ್ಲಿ ಜಾಲಿ ಬಾಸ್ಟಿನ್ ಹುಟ್ಟಿದ್ದರೂ, ಬೆಳೆದದ್ದು ಬೆಂಗಳೂರಿನಲ್ಲಿ. ಇಲ್ಲಿಯೇ ನೆಲೆಯೂರಿ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರು ದುನಿಯಾ ವಿಜಯ್ ನಿರ್ದೇಶನದ ಭೀಮ ಸಿನಿಮಾಗಾಗಿ ಕೆಲಸ ಮಾಡಿದ್ದರು.

  • ಬಡ ಮೆಕಾನಿಕಲ್ ಕುಟುಂಬಕ್ಕೆ ʼPublic TVʼ ಬೆಳಕು ಆಸರೆ

    ಬಡ ಮೆಕಾನಿಕಲ್ ಕುಟುಂಬಕ್ಕೆ ʼPublic TVʼ ಬೆಳಕು ಆಸರೆ

    ಹುಬ್ಬಳ್ಳಿ: ಬಡವರು, ಕಷ್ಟದಲ್ಲಿರುವವರಿಗೆ ಆಸರೆಯಾಗುವ ನಿಟ್ಟಿನಲ್ಲಿ ʼಪಬ್ಲಿಕ್ ಟಿವಿ‌‌ʼ (Public TV) ಬೆಳಕು (Belaku) ಕಾರ್ಯಕ್ರಮ ಸಾರ್ಥಕತೆಯತ್ತ ಸಾಗುತ್ತಿದೆ. ಧಾರವಾಡ (Dharawada) ಜಿಲ್ಲೆಯ ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಬಡ ಮೆಕಾನಿಕ್ ಮರಿಗೌಡ ಮತ್ತು ಚೆನ್ನವ್ವ ದಂಪತಿಗೆ ಬೆಳಕು ಕಾರ್ಯಕ್ರಮ ಆಸರೆಯಾಗಿದೆ.

    ಹುಟ್ಟು ಅಂಗವಿಕಲರಾಗಿರುವ ಮರಿಗೌಡ ತಮ್ಮ ಗ್ರಾಮದಲ್ಲಿ ಪಂಚರ್ ಮತ್ತು ಮೆಕಾನಿಕ್ ಶಾಪ್ ನಡೆಸುತ್ತಿದ್ದರು. ಮರಿಗೌಡ ಪತ್ನಿ ಚೆನ್ನವ್ವ ಆರಂಭದಲ್ಲಿ ಆರೋಗ್ಯವಾಗಿದ್ದರು. ಆದರೆ ವಿಧಿ ನರ್ತನದಿಂದ ಚೆನ್ನವ್ವ ಸಹ ತಮ್ಮ ಕಾಲು ಕಳೆದುಕೊಂಡಿದ್ದರು. ಇದು ಈ ಕುಟುಂಬಕ್ಕೆ ಸಿಡಿಲು ಬಡಿದಂತಾಗಿ, ಆರ್ಥಿಕ ಸಂಕಷ್ಟಕ್ಕೀಡು ಮಾಡಿತ್ತು. ಇದನ್ನೂ ಓದಿ: ರಾಜ್ಯದ ನಾಲ್ಕು ದಿಕ್ಕುಗಳಿಂದ ಭಾಜಪ ರಥಯಾತ್ರೆಗೆ ತಯಾರಿ: ಬೊಮ್ಮಾಯಿ

    ಈ ಕುಟುಂಬ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಬಂದು ತಮ್ಮ ಸಂಕಷ್ಟ ಹೇಳಿಕೊಂಡು, ತಮ್ಮ ಮೆಕಾನಿಕ್ ಶಾಪ್‌ಗೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ನೀಡುವಂತೆ ಕೇಳಿಕೊಂಡಿದ್ದರು. ಇವರ ಸಮಸ್ಯೆಗೆ ಸ್ಪಂದಿಸಿರುವ ಪಬ್ಲಿಕ್ ಟಿವಿ ಮರಿಗೌಡರ ಕುಟುಂಬಕ್ಕೆ ಸಾವಿರಾರು ರೂಪಾಯಿ ಮೌಲ್ಯ ಅತ್ಯಾಧುನಿಕ ಮೆಕಾನಿಕ್ ಸಾಮಗ್ರಿಗಳನ್ನು ನೀಡಿದೆ.

    ಪಬ್ಲಿಕ್ ಟಿವಿ ಕಾರ್ಯಕ್ರಮದಿಂದ ಪ್ರೇರಣೆಗೊಂಡ ಕಾರ್ಮಿಕ ಇಲಾಖೆ ಸ್ವಪ್ರೇರಣೆಯಿಂದ ಮರಿಗೌಡ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ವಲಯಕ್ಕೆ ಸಿಗುವ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿದೆ. ಇನ್ನೂ ಪಬ್ಲಿಕ್ ಟಿವಿ ಸಹಾಯದಿಂದ ಸಂತಸಗೊಂಡಿರುವ ಮರಿಗೌಡ ದಂಪತಿ ಪಬ್ಲಿಕ್ ಟಿವಿಗೆ ಮತ್ತು ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಹಂಪಿ ಉತ್ಸವ 2023ರ ಲೋಗೋ, ಪೋಸ್ಟರ್ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಲೆಕ್ಟ್ರಿಕ್ ರಿಕ್ಷಾ ಚಾರ್ಜಿಂಗ್ ವೇಳೆ ವಿದ್ಯುತ್ ಶಾಕ್ – ವ್ಯಕ್ತಿ ಸಾವು

    ಎಲೆಕ್ಟ್ರಿಕ್ ರಿಕ್ಷಾ ಚಾರ್ಜಿಂಗ್ ವೇಳೆ ವಿದ್ಯುತ್ ಶಾಕ್ – ವ್ಯಕ್ತಿ ಸಾವು

    ನವದೆಹಲಿ: ಎಲೆಕ್ಟ್ರಿಕ್ ರಿಕ್ಷಾವನ್ನು ಚಾರ್ಜ್ ಮಾಡುವ ವೇಳೆ 34 ವರ್ಷದ ಮೆಕ್ಯಾನಿಕ್ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿರುವ ಘಟನೆ ದೆಹಲಿಯ ನಿಹಾಲ್ ವಿಹಾರ್‌ನಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ವಿಕಾಸ್ ಪುರಿಯ ಇಂದಿರಾ ಕ್ಯಾಂಪ್ ನಿವಾಸಿ ಧರ್ಮೇಂದರ್ ಎಂದು ಗುರುತಿಸಲಾಗಿದ್ದು, ಇವರು ಗ್ಯಾರೇಜ್‍ನಲ್ಲಿ ಇ-ರಿಕ್ಷಾವನ್ನು ಚಾರ್ಜಿಂಗ್ ಮಾಡುವ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಕೈದಿಗಳಿಂದ ಮೊಬೈಲ್ ಬಳಕೆ – ಟೈಲ್ಸ್, ಗೋಡೆ ಕೊರೆದು ಬಚ್ಚಿಟ್ಟಿದ್ದ 19 ಫೋನ್ ವಶಕ್ಕೆ

    crime

    ಧರಾಮೇಂದರ್ ಅವರು ಇ-ರಿಕ್ಷಾವನ್ನು ಚಾರ್ಜ್ ಮಾಡುವ ವೇಳೆ ವಿದ್ಯುತ್ ಶಾಕ್ ತಗುಲಿದೆ. ನಂತರ ತಕ್ಷಣ ಅವರನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 20 ಲಕ್ಷ ರೂ. ಸಾಲ ತೀರಿಸ್ಲಿಲ್ಲ ಅಂತ ಉದ್ಯಮಿಯನ್ನು ಕಿಡ್ನ್ಯಾಪ್ ಮಾಡಿ ಹೊಡೆದ್ರು

    ಇದೀಗ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಗ್ಯಾರೇಜ್ ಆವರಣವನ್ನು ಸೀಲ್ ಮಾಡಿದ್ದಾರೆ. ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವ್ಯಕ್ತಿ ಮೃತದೇಹವನ್ನು ಅವರ ತಂದೆಗೆ ಹಸ್ತಾಂತರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಅಂತಿಮ ವರದಿಗಾಗಿ ಸದ್ಯ ಕಾಯಲಾಗುತ್ತಿದೆ. ಈ ನಡುವೆ ಪೊಲೀಸರು ಎಫ್‍ಐಆರ್ ಪ್ರತಿಯನ್ನು ಮೃತರ ಸಂಬಂಧಿಕರಿಗೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಖಾಕಿ ಸಿನಿಮಾದ ರೀತಿಯಲ್ಲಿ ಫಿಂಗರ್ ಪ್ರಿಂಟ್ ಮೂಲಕ ಮೆಕ್ಯಾನಿಕ್ ಅರೆಸ್ಟ್

    ಖಾಕಿ ಸಿನಿಮಾದ ರೀತಿಯಲ್ಲಿ ಫಿಂಗರ್ ಪ್ರಿಂಟ್ ಮೂಲಕ ಮೆಕ್ಯಾನಿಕ್ ಅರೆಸ್ಟ್

    ಬೆಂಗಳೂರು: ಓದಿದ್ದು 7ನೇ ತರಗತಿ ಆದರೆ ಮನೆ ದೋಚುವುದರಲ್ಲಿ ನಂಬರ್ 1 ಕಳ್ಳನಾಗಿದ್ದ ಗ್ಯಾರೇಜ್ ಮೆಕ್ಯಾನಿಕ್‍ನೊಬ್ಬನನ್ನು ಆರ್ ಟಿ ನಗರ ಪೊಲೀಸರು ಬಂಧಿಸಿದ್ದಾರೆ.

    ಮುರುಳಿ ಬಂಧಿತ ಆರೋಪಿ. ಆರೋಪಿಯು ವರ್ಷಕ್ಕೆ ಒಂದೇ ಕಳ್ಳತನ, ಮಾಡುತ್ತಿದ್ದನು. ಉಳಿದ ಸಮಯ ಗ್ಯಾರೇಜ್‍ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ವರ್ಷಕ್ಕೆ ಒಂದರಂತೆ 13 ವರ್ಷದಲ್ಲಿ ಈತ 13 ಕಳ್ಳತನಗಳನ್ನು ಮಾಡಿದ್ದಾನೆ. 2009ರಲ್ಲಿ ಕಳ್ಳತನ ಶುರು ಮಾಡಿದ್ದವನು ಕೊನೆಗೆ 2022ರಲ್ಲಿ ಸಿಕ್ಕಿಬಿದ್ದಿದ್ದಾನೆ. ಅವನು ತುಂಬಾ ಅಚ್ಚುಕಟ್ಟಾಗಿ ಯೋಜನೆ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದನು. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್‌

    ಪ್ರತಿನಿತ್ಯ ಯಾರೂ ಶಾಲೆಗೆ ಮಕ್ಕಳನ್ನು ಬಿಡಲು ಹೋಗುತ್ತಾರೆ ಅವರ ಮನೆಗಳನ್ನೇ ಈತ ಗುರಿಯಾಗಿಸಿಕೊಳ್ಳುತ್ತಿದ್ದನು. ಶಾಲೆಗೆ ಹೋಗುವಾಗ ಮೊದಲು ಅವರನ್ನು ಹಿಂಬಾಲಿಸುತ್ತಿದ್ದನು. ಪೋಷಕರು ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದಕ್ಕೆ ಎಷ್ಟು ಸಮಯ ಹಿಡಿಯುತ್ತೆ ನೋಡಿಕೊಂಡು ಉಪಾಯ ಮಾಡುತ್ತಿದ್ದನು. 1 ಮನೆ ಕಳ್ಳತನ ಮಾಡಲು ಸುಮಾರು 1 ತಿಂಗಳು ಉಪಾಯ ಮಾಡುತ್ತಿದ್ದನು. ಇದನ್ನೂ ಓದಿ:  ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ

    ನಂತರ ಆ ಮನೆಯ ಡೋರ್ ಕೀ ಮಾದರಿಯ ನಾಲ್ಕೈದು ನಕಲಿ ಕೀ ತಯಾರು ಮಾಡಿಸುತ್ತಿದ್ದನು. ನಂತರ ಪೊಷಕರು ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದರ ಒಳಗೆ ಮನೆ ದೋಚುತ್ತಿದ್ದನು. ಮುರುಳಿ ಒಂದು ಬಾರಿ ಕಳ್ಳತನ ಮಾಡಿದರೆ ಮತ್ತೆ ವರ್ಷವಿಡಿ ಕಳ್ಳತನದ ಸಹವಾಸಕ್ಕೆ ಹೋಗುತ್ತಿರಲಿಲ್ಲ.

    ಇಂತಹ ಚಾಲಾಕಿ ಕಳ್ಳನಿಂದ 3 ಠಾಣೆಯ ಪೊಲೀಸರು ಒಂದೂವರೆ ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಖಾಕಿ ಸಿನಿಮಾದ ರೀತಿಯಲ್ಲಿ ಫಿಂಗರ್ ಪ್ರಿಂಟ್ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ 2009ರಲ್ಲಿ ಒಂದು ಮನೆ ಕಳ್ಳತನದ ಕೇಸ್ ಆಗಿತ್ತು. ಈ ವೇಳೆ ಪೊಲೀಸರು ವಿಚಾರಣೆಗಾಗಿ ಆ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕಳ್ಳನ ಫಿಂಗರ್ ಪ್ರಿಂಟ್ ಶೇಖರಿಸಿದ್ದರು. ಜನವರಿ ತಿಂಗಳಿನ ಕೊನೆಯ ವಾರದ ಹಿಂದೆ ಆರ್ ಟಿ ನಗರ ಪೊಲೀಸರಿಗೆ ಸಿಕ್ಕಿ ಬಿದ್ದಾಗ ಈತನ ಫಿಂಗರ್ ಪ್ರಿಂಟ್ ಕಳ್ಳತನ ಕೇಸ್‍ನಲ್ಲಿ ಮ್ಯಾಚ್ ಆಗಿದೆ.

    ಆರೋಪಿಯನ್ನು ಪೊಲೀಸರು ಹೆಬ್ಬಾಳ ಕೇಸ್ ಬಗ್ಗೆ ವಿಚಾರಣೆ ಮಾಡುವಾಗ ಒಟ್ಟು 13 ಕಳ್ಳತನಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆರ್ ಟಿ ನಗರ, ಡಿಜೆಹಳ್ಳಿ, ಅಮೃತಹಳ್ಳಿ, ಹೆಬ್ಬಾಳ, ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಸದ್ಯ ಎಲ್ಲಾ ಪ್ರಕರಣಗಳಿಂದ ಒಟ್ಟು ಒಂದೂವರೆ ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಸದ್ಯ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಅವನನ್ನು ಪಡೆದಿದ್ದು, ಮತ್ತಷ್ಟು ವಿಚಾರಣೆಗೆ ತಯಾರಾಗಿದ್ದಾರೆ.

  • 13ರ ಬಾಲಕಿಯನ್ನು 10 ದಿನಗಳಿಂದ 6 ಬಾರಿ ರೇಪ್‍ಗೈದ ಮೆಕ್ಯಾನಿಕ್

    13ರ ಬಾಲಕಿಯನ್ನು 10 ದಿನಗಳಿಂದ 6 ಬಾರಿ ರೇಪ್‍ಗೈದ ಮೆಕ್ಯಾನಿಕ್

    – ಬಾಲಕಿಯನ್ನು ಮನೆಗೆ ಕರೆತಂದು ವಿಕೃತಿ ಮೆರೆದ
    – ಅತ್ಯಾಚಾರದ ಬಗ್ಗೆ ಬಾಯಿ ಬಿಡದಂತೆ ಬೆದರಿಕೆ

    ಹೈದರಾಬಾದ್: ಕಾಮುಕನೋರ್ವ 13 ವರ್ಷದ ಬಾಲಕಿಯನ್ನು ಕಳೆದ 10 ದಿನಗಳಿಂದ 6 ಬಾರಿ ಅತ್ಯಾಚಾರ ಮಾಡಿ ವಿಕೃತಿ ಮೆರೆದ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

    ಆರೋಪಿಯನ್ನು ಎಂ.ಎಸ್ ಮಕ್ತಾ(35) ಎಂದು ಗುರುತಿಸಲಾಗಿದೆ. ಪಂಜಗುಟ್ಟದ ನಿವಾಸಿಯಾದ ಮೆಕ್ತಾ ಮೆಕ್ಯಾನಿಕ್ ಆಗಿದ್ದು, ತನ್ನ ಪಕ್ಕದ ಮನೆಯ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಆರೋಪಿಗೆ ಈಗಾಗಲೇ ಮದುವೆ ಆಗಿದ್ದು, ಪತ್ನಿ ಮನೆಯಲ್ಲಿ ಇಲ್ಲದ ವೇಳೆ ಬಾಲಕಿಯನ್ನು ಮನೆಗೆ ಕರೆಸಿಕೊಳ್ಳುತ್ತಿದ್ದನು. ಬಳಿಕ ಆಕೆಯ ಮೇಲೆ ಅತ್ಯಾಚಾರವೆಸೆಗಿ ವಿಕೃತಿ ಮೆರೆಯುತ್ತಿದ್ದನು. ಹೀಗೆ ಕಳೆದ 10 ದಿನಗಳಿಂದ ಆರೋಪಿ 6 ಬಾರಿ ಬಾಲಕಿಯನ್ನು ಅತ್ಯಾಚಾರಗೈದಿದ್ದಾನೆ.

    ಅಲ್ಲದೇ ಈ ಬಗ್ಗೆ ತಂದೆ-ತಾಯಿಗೆ ಹೇಳಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬಾಲಕಿಯನ್ನು ಹೆದರಿಸಿದ್ದನು. ಕಾಮುಕನ ವಿಕೃತಿಗೆ ಬೆದರಿದ ಬಾಲಕಿ ಯಾರ ಬಳಿಯೂ ತನ್ನ ಮೇಲೆ ನಡೆಯುತ್ತಿದ್ದ ಅತ್ಯಾಚಾರದ ಬಗ್ಗೆ ಬಾಯಿಬಿಟ್ಟಿರಲಿಲ್ಲ. ಇದನ್ನೇ ದುರುಪಯೋಗ ಮಾಡಿಕೊಂಡ ಕಾಮುಕ 10 ದಿನಗಳಲ್ಲಿ 6 ಬಾರಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮಂಗಳವಾರ ಕೂಡ ಆರೋಪಿ ಬಾಲಕಿಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದನು. ಆದರೆ ಸಂಜೆ ಕೆಲಸ ಮುಗಿಸಿಕೊಂಡು ತಂದೆ, ತಾಯಿ ಮನೆಗೆ ಬಂದಾಗ ಮಗಳು ಮಂಕಾಗಿ ಕೂತಿರುವುದನ್ನು ಗಮನಿಸಿ, ಏನಾಯಿತು ಎಂದು ವಿಚಾರಿಸಿದ್ದಾರೆ.

    ಈ ವೇಳೆ ಬಾಲಕಿ ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ಈ ಬಗ್ಗೆ ತಿಳಿದ ತಕ್ಷಣ ಪೋಷಕರು ಆರೋಪಿ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಗಳವಾರ ರಾತ್ರಿಯೇ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

  • ಓದಿದ್ದು 3ನೇ ಕ್ಲಾಸ್, ಮೆಕ್ಯಾನಿಕ್ ಕೆಲ್ಸ- ಆದ್ರೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಖ್ಯಾತಿ ತಂದ್ರು ಹಾಸನದ ಅಕ್ಮಲ್ ಪಾಶಾ

    ಓದಿದ್ದು 3ನೇ ಕ್ಲಾಸ್, ಮೆಕ್ಯಾನಿಕ್ ಕೆಲ್ಸ- ಆದ್ರೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಖ್ಯಾತಿ ತಂದ್ರು ಹಾಸನದ ಅಕ್ಮಲ್ ಪಾಶಾ

    ಹಾಸನ: ಇವರು ಓದಿದ್ದು 3ನೇ ಕ್ಲಾಸ್, ಮಾಡ್ತಿರೋದು ಮೆಕ್ಯಾನಿಕ್ ಕೆಲ್ಸ. ಆದ್ರೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನ ಹಾರಿಸುತ್ತಿದ್ದಾರೆ. ಅದೂ ತಮ್ಮ ಹುರಿಗೊಳಿಸಿದ ದೇಹದ ಮೂಲಕ. ಹಾಸನದ ಅಕ್ಮಲ್ ಪಾಶಾ ನಮ್ಮ ಇಂದಿನ ಪಬ್ಲಿಕ್ ಹೀರೋ.

    ಹಾಸನದ ಹುಣಸಿನಕೆರೆ ಬಡಾವಣೆ ನಿವಾಸಿಯಾಗಿರೋ ಪಾಶಾ ಅವರು ಬಾಡಿಬಿಲ್ಡರ್ ಆಗಿದ್ದಾರೆ. ಮೂರನೇ ಕ್ಲಾಸ್‍ವರೆಗೆ ಓದಿರೋ ಇವರು, ಬಡತನದಿಂದಾಗಿ ಅರ್ಧಕ್ಕೇ ವಿದ್ಯಾಭ್ಯಾಸವನ್ನ ಮೊಟಕುಗೊಳಿಸಿ ಹಾಸನದ ನಗರದ ಆಜಾದ್ ರಸ್ತೆಯ ವರ್ಕ್‍ಶಾಪ್ ನಲ್ಲಿ ಕೆಲಸಕ್ಕೆ ಸೇರಿಕೊಂಡವರು.

    ಆದ್ರೆ ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಅಂದಾಗ ಹೊಳೆದಿದ್ದೇ ಈ ದೇಹ ಹುರಿಗಟ್ಟಿಸೋ ದಾರಿ. ಕಳೆದ 10 ವರ್ಷಗಳಿಂದ ಜಿಮ್ ನಲ್ಲಿ ವರ್ಕೌಟ್ ಮಾಡ್ತಿರೋ ಅಕ್ಮಲ್ ಹಲವು ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಈಗ ದೇಶದ ಪ್ರಮುಖ ಬಾಡಿ ಬಿಲ್ಡರ್‍ಗಳಲ್ಲಿ ಒಬ್ಬರಾಗಿದ್ದಾರೆ.

    ಸತತ 15 ವರ್ಷಗಳಿಂದ ಮೆಕ್ಯಾನಿಕ್ ಆಗಿರೋ ಅಕ್ಮಲ್ ಕೆಲವೊಮ್ಮೆ ಅಗತ್ಯ ಊಟ ಸಿಗದಿದ್ದಾಗ ಸೊಪ್ಪು ತರಕಾರಿಯಲ್ಲೇ ಬಾಡಿ ಮೆಂಟೇನ್ ಮಾಡ್ತಿದ್ದಾರೆ. ಮಿಸ್ಟರ್ ಹಾಸನದಿಂದ ಆರಂಭವಾದ ಅಕ್ಮಲ್ ಬಾಡಿಬಿಲ್ಡಿಂಗ್ ಕಾಂಪಿಟೇಷನ್ 10 ಬಾರಿ ಮಿಸ್ಟರ್ ಕರ್ನಾಟಕ, ಮಿಸ್ಟರ್ ಇಂಡಿಯಾ, ಮಿಸ್ಟರ್ ಏಷ್ಯಾದವರೆಗೆ ಸಾಗಿದೆ. ಜೂನ್ ತಿಂಗಳಿನಲ್ಲಿ ಫಿಲಿಪ್ಪೈನ್ಸ್‍ನಲ್ಲಿ ನಡೆಯಲಿರೋ ಮಿಸ್ಟರ್ ವರ್ಲ್ಡ್  ಸ್ಪರ್ಧೆಗೆ ಈಗ ದೇಹವನ್ನ ಹುರಿಗಟ್ಟಿಸುತ್ತಿದ್ದಾರೆ.

    https://www.youtube.com/watch?v=FgMb246_5GU

  • ಸ್ವಂತ ಖರ್ಚಲ್ಲಿ ಬೋರ್ ಕೊರೆಸಿ ಜಾನುವಾರುಗಳ ನೀರಿನ ದಾಹ ತಣಿಸ್ತಿರೋ ಯಾದಗಿರಿಯ ಮೆಕ್ಯಾನಿಕ್

    ಸ್ವಂತ ಖರ್ಚಲ್ಲಿ ಬೋರ್ ಕೊರೆಸಿ ಜಾನುವಾರುಗಳ ನೀರಿನ ದಾಹ ತಣಿಸ್ತಿರೋ ಯಾದಗಿರಿಯ ಮೆಕ್ಯಾನಿಕ್

    ಯಾದಗಿರಿ: ಯರಗೋಳ ಗ್ರಾಮದ ಗೋವುಗಳು ಭೀಕರ ಬರಗಾಲದಲ್ಲಿ ಕುಡಿಯುವ ನೀರಿಗಾಗಿ ಕಷ್ಟಪಡುತ್ತಿವೆ. ವೃತ್ತಿಯಲ್ಲಿ ಮೋಟರ್ ಸೈಕಲ್ ಮೆಕ್ಯಾನಿಕ್, ಪ್ರವೃತ್ತಿಯಲ್ಲಿ ರೈತರಾಗಿರೋ ಗ್ರಾಮದ ನಿವಾಸಿ ಅಬ್ದುಲ್ ಗಫೂರಸಾಬ್ ತಮ್ಮ ಸ್ವಂತ ಖರ್ಚಿನಲ್ಲಿ ಬೋರ್‍ವೆಲ್ ಕೊರೆಸಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

    ಗಫೂರಸಾಬ್ ಅವರು ಯಾದಗಿರಿ ನಗರದಲ್ಲಿ ವಾಸವಿದ್ದು, ದ್ವಿಚಕ್ರ ವಾಹನಗಳ ರಿಪೇರಿ ಮಾಡುವ ಅಂಗಡಿ ಇಟ್ಟುಕೊಂಡಿದ್ದಾರೆ. ತಮ್ಮ ಸ್ವಗ್ರಾಮ ಯರಗೋಳದಲ್ಲಿ 3 ಎಕರೆ ಜಮೀನಿನಲ್ಲಿ ಕೃಷಿ ಕಾಯಕ ಕೂಡಾ ಮಾಡುತ್ತಾರೆ. ಆದ್ರೆ ಒಂದೇ ಒಂದು ಜಾನುವಾರು ಸಾಕದಿದ್ದರೂ ಈ ಬಾರಿಯ ಭೀಕರ ಬರದ ಬೇಗುದಿಯಿಂದ ಜಾನುವಾರುಗಳು ನೀರಿಲ್ಲದೆ ಪರಿತಪಿಸುವುದನ್ನು ಅರಿತು, ತಮ್ಮ ಜಮೀನಿನಲ್ಲಿ ಸುಮಾರು 50 ಸಾವಿರ ರೂಪಾಯಿ ಖರ್ಚುಮಾಡಿ ಬೋರ್ ಕೊರೆಸಿದ್ದಾರೆ. ಜಾನುವಾರುಗಳಿಗೆ ನೀರು ಕುಡಿಯಲು ಅನೂಲವಾಗುವಂತೆ 22 ಬೈ 15 ಅಡಿ ಅಳತೆಯ ಕೊಳ ನಿರ್ಮಿಸಿದ್ದಾರೆ. ಈಗ ನೀರಿನ ಕೊಳ ನೋಡಿಕೊಳ್ಳಲು ವ್ಯಕ್ತಿಯೊಬ್ಬರನ್ನು ನೇಮಿಸಿದ್ದಾರೆ. ಎರಡು ದಿನಕ್ಕೊಮ್ಮೆ ಯಾದಗಿರಿಯಿಂದ ಯರಗೋಳಕ್ಕೆ ಹೋಗಿ ನೀರಿನ ನಿಗಾ ವಹಿಸುತ್ತಾರೆ.

    ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿ ನೀರಿಲ್ಲದೆ ಜಾನುವಾರುಗಳು ಕಸಾಯಿಖಾನೆಗೆ ಹೋಗುತ್ತಿರುವ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಕಷ್ಟಪಡುತ್ತಿದೆ. ಈ ಸ್ಥಿತಿಯಲ್ಲಿ ಸಾಮನ್ಯ ರೈತ ಗಫೂರ್‍ಸಾಬ್ ಜಾನುವಾರುಗಳಿಗೆ ನೀರುಣಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.