Tag: meat

  • ಹಲಾಲ್ ಕಟ್, ಜಟ್ಕಾ ಕಟ್ ಎಂದರೇನು?

    ಹಲಾಲ್ ಕಟ್, ಜಟ್ಕಾ ಕಟ್ ಎಂದರೇನು?

    ಬೆಂಗಳೂರು: ಕರಾವಳಿಯಲ್ಲಿ ಹಿಜಬ್‌ನಿಂದ ಆರಂಭಗೊಂಡ ವಿವಾದ ಈಗ ಎಲ್ಲೆಲ್ಲೋ ಹೋಗುತ್ತಿದೆ. ದೇವಸ್ಥಾನಗಳಲ್ಲಿ ಹಿಂದೂಯೇತರರಿಗೆ ನಿರ್ಬಂಧ ಅಭಿಯಾನ ಹೊಸ ರೂಪ ಪಡೆದುಕೊಂಡಿದೆ. ಯುಗಾದಿ ಹೊಸತೊಡಕು ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ, ಹಿಂದೂಗಳ ಬಳಿಯೇ ಮಾಂಸ ಖರೀದಿ ಮಾಡುವಂತೆ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಅಭಿಯಾನವೇ ನಡೆದಿದೆ.

    ಇದಿಗ ಹಲಾಲ್ ತ್ಯಜಿಸಿ, ಜಟ್ಕಾ ಬಾಡು ಖರೀದಿಸಿ ಎಂದು ಹಿಂದೂ ಸಮುದಾಯದವರು ಕರೆ ನೀಡುತ್ತಿದ್ದಾರೆ. ಇದಕ್ಕೆ ಬಿಜೆಪಿಯೂ ಬಹಿರಂಗ ಬೆಂಬಲ ನೀಡಿದೆ. ಹಲಾಲ್ ಅನ್ನು ಆರ್ಥಿಕ ಜಿಹಾದ್ ಎಂದು ಸಿಟಿ ರವಿ ಆರೋಪಿಸಿದ್ದಾರೆ. ಹಲಾಲ್ ಮಾಂಸವನ್ನು ಉಪಯೋಗಿಸಬಾರದು ಅಂದರೆ ತಪ್ಪೇನು? ಮುಸಲ್ಮಾನರು ಹಿಂದೂಗಳ ಬಳಿ ಮಾಂಸ ಖರೀದಿ ಮಾಡಲ್ಲ. ಹಿಂದೂಗಳೇಕೆ ಮುಸ್ಲಿಮರ ಬಳಿ ಮಾಂಸ ಖರೀದಿ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಯಾವ ಅಂಶ ಪ್ರಚೋದನೆ ಕೊಡ್ತಿದೆ ನೀವೇ ಹೇಳಿ ಎಂದು ಸಿಟಿ ರವಿ ಕೇಳಿದ್ದಾರೆ. ಇದನ್ನೂ ಓದಿ: ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಕಲ್ಲಡ್ಕ ಭಟ್‌ಗೆ ಆಹ್ವಾನ – ಎಸ್‌ಎಫ್‌ಐ ವಿರೋಧ

    ಹಲಾಲ್ ಮಾಂಸದ ವಿಚಾರ ವಿವಾದ ಆಗಿರೋದು ಹೋಟೆಲ್ ಮಾಲೀಕರಿಗೆ ಹೊಸ ಪೀಕಲಾಟ ತಂದಿಟ್ಟಿದೆ. ಬೆಂಗಳೂರಿನ ಜಿಎಫ್‌ಸಿ ಬಿರಿಯಾನಿ ಮಳಿಗೆಯ ಬೋರ್ಡ್‌ನಲ್ಲಿ ಉಲ್ಲೇಖಿಸಿದ್ದ ಹಲಾಲ್ ಎಂಬ ಪದ ಮುಚ್ಚಲಾಗಿದೆ. ಹಲಾಲ್ ಬಹಿಷ್ಕಾರ ಅಭಿಯಾನಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. ಆಯ್ತು ಹಲಾಲ್ ತ್ಯಜಿಸುತ್ತೇವೆ. ಆರ್‌ಎಸ್‌ಎಸ್‌ನವರು ಪ್ರತಿ ಹಳ್ಳಿಯಲ್ಲೂ ಮಾಂಸದಂಗಡಿ ತೆರೆಯಲಿ. ಫಿಫ್ಟಿ ಪರ್ಸೆಂಟ್ ಡಿಸ್ಕೌಂಟ್ ನೀಡಲಿ ಎಂಬ ಟ್ವೀಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

     

    ಇದೀಗ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ಎಂದರೇನು ಎಂಬ ಪ್ರಶ್ನೆ ಎದ್ದಿದೆ. ಹಲಾಲ್ ಕಟ್ ಹಾಗೂ ಜಟ್ಕಾ ಕಟ್‌ಗೆ ಇರುವ ವ್ಯತ್ಯಾಸ ಇಲ್ಲಿದೆ.

    ಹಲಾಲ್ ಕಟ್:
    ಹಲಾಲ್ ಎಂಬುದು ಅರೇಬಿಕ್ ಪದ. ಇದರ ಅರ್ಥ ಅನುಮತಿ ಇದೆ ಎಂಬುದು. ಹಲಾಲ್ ಕಟ್ ಪ್ರಕಾರ ಪ್ರಾಣಿಯ ಗಂಟಲು ಸೀಳಿ ರಕ್ತ ಬರಿದಾಗಿಸಿ ಕೊಲ್ಲಲಾಗುತ್ತದೆ. ಪ್ರಾಣಿ ಮೊದಲೇ ಸತ್ತಿದ್ದರೆ ಅಥವಾ ಅನಾರೋಗ್ಯವಿದ್ದರೆ ಇದನ್ನು ಪರಿಗಣಿಸಲಾಗುವುದಿಲ್ಲ.

    ಹಲಾಲ್ ಕಟ್ ಮಾಡುವವರು ಇಸ್ಲಾಂ ಧರ್ಮಕ್ಕೆ ಸೇರಿದವರಾಗಬೇಕು. ಪ್ರಾಣಿಯನ್ನು ಕೊಲ್ಲುವಾಗ ಮುಸಲ್ಮಾನರ ಪವಿತ್ರ ಸ್ಥಳ ಮೆಕ್ಕಾದ ದಿಕ್ಕಿಗೆ ಮುಖ ಮಾಡಿ ಪ್ರಾರ್ಥನೆ ಮಾಡಬೇಕು. ಮಾಂಸ ತಿನ್ನುವವರೂ ಪ್ರಾಣಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಬೇಕು.

    ಹಲಾಲ್ ಕಟ್ ಮಾಡುವವರು ಜಮಿಯತ್ ಉಲಾಮ ಐ ಹಿಂದ್ ಹಲಾಲ್ ಟ್ರಸ್ಟ್ ವತಿಯಿಂದ ಹಣ ಪಾವತಿಸಿ ಪ್ರಮಾಣ ಪತ್ರ ಪಡೆದಿರಬೇಕು. ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಎನ್ನುವ ಕಿಡಿಗೇಡಿಗಳನ್ನು ಮಟ್ಟ ಹಾಕಿ: ಹೆಚ್‌ಡಿಕೆ ಆಗ್ರಹ

    ಜಟ್ಕಾ ಕಟ್:
    ಜಟ್ಕಾ ಕಟ್ ಎಂದರೆ ಬಲಿ ಅಥವಾ ದೈವ ಬಲಿ ಎಂದರ್ಥ. ಈ ರೀತಿಯ ಪ್ರಾಣಿ ಬಲಿ ಬಗ್ಗೆ ಸನಾತನ ಹಿಂದೂ ಪದ್ಧತಿಯಲ್ಲಿ ಉಲ್ಲೇಖವಿದೆ. ಜಟ್ಕಾ ಕಟ್ ಪ್ರಕಾರ ಒಂದೇ ಏಟಿಗೆ ಪ್ರಾಣಿಯ ರುಂಡ ಹಾಗೂ ಮುಂಡವನ್ನು ಬೇರ್ಪಡಿಸಲಾಗುತ್ತದೆ. ಈ ರೀತಿಯಲ್ಲಿ ಪ್ರಾಣಿಯ ಜೀವ ಒಂದೇ ಬಾರಿಗೆ ಹೋಗುತ್ತದೆ.

    ಇವೇ ಹಲಾಲ್ ಕಟ್ ಹಾಗೂ ಜಟ್ಕಾ ಕಟ್‌ಗೂ ಇರುವ ವ್ಯತ್ಯಾಸ. ಮಾಂಸದ ಖರೀದಿಯಲ್ಲೂ ಧರ್ಮದ ವೈವಿಧ್ಯತೆ ಇರುವ ಕಾರಣಕ್ಕೆ ಇದೀಗ ಮತ್ತೆ ಹಿಂದೂ-ಮುಸ್ಲಿಂ ವಿವಾದ ಭುಗಿಲೇಳುತ್ತಿದೆ.

  • ಹಲಾಲ್ ಮಾಂಸ ಎಂದರೇನು? ಹಲಾಲ್ ಕಟ್ ಏನು?

    ಹಿಜಬ್ ಗಲಾಟೆಯ ಬಳಿಕ ಮುಸ್ಲಿಂ ವರ್ತಕರಿಗೆ ಹಿಂದೂಗಳ ಜಾತ್ರೆಯಲ್ಲಿ ಬಹಿಷ್ಕಾರ ಹಾಕಲಾಯಿತು. ಬಹಿಷ್ಕಾರದ ಮುಂದುವರಿದ ಭಾಗವಾಗಿ ಈಗ ಹಲಾಲ್ ಮಾಂಸಗಳನ್ನು ಬಹಿಷ್ಕರಿಸುವಂತೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ.

    ಯುಗಾದಿ ಮರು ದಿವಸ ಕರ್ನಾಟಕದ ಕೆಲ ಭಾಗಗಳಲ್ಲಿ ಆಚರಿಸುವ ಹೊಸತೊಡಕು ವೇಳೆ ಮಾಂಸ ತಿನ್ನಲಾಗುತ್ತದೆ. ಈ ವೇಳೆ ಹಲಾಲ್ ಮಾಂಸವನ್ನು ಸೇವಿಸದಂತೆ ಕರೆ ನೀಡಿದೆ. ಮುಸ್ಲಿಮ್ ದೇವರಿಗೆ ಅರ್ಪಣೆ ಮಾಡಿದ ಬಳಿಕ ಹಿಂದೂ ದೇವರಿಗೆ ಅರ್ಪಣೆ ಮಾಡುವುದು ಸರಿಯಲ್ಲ ಎಂದು ಹಿಂಜಾವೇ ಹೇಳಿದೆ. ಹೀಗಾಗಿ ಇಲ್ಲಿ ಹಲಾಲ್ ಮಾಂಸದ ಬಗ್ಗೆ ಕಿರು ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: ಯುಗಾದಿ ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ ಕರೆ

    ಹಲವು ಮಾಂಸದಂಗಡಿಗಳು ಹಾಗೂ ಮುಸ್ಲಿಂ ಅಂಗಡಿಗಳ ಬ್ಯಾನರ್‍ಗಳಲ್ಲಿ ಹಲಾಲ್ ಪದ ಇರುತ್ತದೆ. ಮಾಂಸಗಳ ಗುಣಮಟ್ಟ ತೋರಿಸಲು ಹಲವು ಕಂಪನಿಗಳು ಹಲಾಲ್ ಕಟ್ ಪದವನ್ನು ಉಪಯೋಗಿಸುತ್ತವೆ. ಆದರೆ ಚೀನಾ ದೇಶದಲ್ಲಿ ಹಲಾಲ್ ಮಾಂಸವನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಹಲಾಲ್ ಮಾಂಸ, ಹಲಾಲ್ ಕಟ್ ಅಂದರೇನು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಇದನ್ನೂ ಓದಿ: ಎಚ್‍ಡಿಡಿ ಪತ್ನಿಗೆ ಐಟಿ ನೋಟಿಸ್

    ಹಲಾಲ್ ಮಾಂಸ ಯಾವುದು?
    ಇಸ್ಲಾಮ್ ಧರ್ಮಬದ್ಧವಾಗಿರುವ ಆಹಾರ ಕ್ರಮವೇ ಹಲಾಲ್. ಇಸ್ಲಾಮ್ ಧರ್ಮದಲ್ಲಿ ಪರಿಶುದ್ಧ ಆಹಾರವೆಲ್ಲವೂ ಹಲಾಲ್ ಎಂದು ಪರಿಗಣಿಸಲಾಗಿದೆ. ಪರಿಶುದ್ಧತೆ ಇಲ್ಲದ ಆಹಾರವು ಇಸ್ಲಾಮ್‍ನಲ್ಲಿ ನಿಷಿದ್ಧ. ಮಾಂಸದ ವಿಚಾರಕ್ಕೆ ಬಂದರೆ ಹಂದಿ, ಮನುಷ್ಯ, ಹುಲಿ, ಸಿಂಹ ಇತ್ಯಾದಿ ಮಾಂಸಗಳು ನಿಷಿದ್ಧವಾಗಿವೆ. ಕಾನೂನುಬದ್ಧವೆನಿಸಿದ ಕುರಿ, ಕೋಳಿ, ಒಂಟೆ, ದನ, ಮೀನು ಇತ್ಯಾದಿ ಪ್ರಾಣಿಗಳ ಮಾಂಸವು ಹಲಾಲ್ ಎನಿಸುತ್ತವೆ. ವಧಿಸುವ ಮೊದಲೇ ಸತ್ತಿದ್ದ ಪ್ರಾಣಿಗಳು ಹಾಗೂ ವಧಿಸುವ ವೇಳೆ ರೋಗ, ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಗಳನ್ನು ಮುಸ್ಲಿಮರು ತಿನ್ನುವಂತಿಲ್ಲ.

    ಹಲಾಲ್ ಕಟ್ ಎಂದರೇನು?
    ತಿನ್ನುವ ಪ್ರಾಣಿಗಳನ್ನ ಕೊಲ್ಲುವುದಕ್ಕೂ ಇಸ್ಲಾಮ್‍ನಲ್ಲಿ ನಿರ್ದಿಷ್ಟ ಕ್ರಮ ಮತ್ತು ನಿಯಮಗಳಿವೆ. ಒಂದೊಂದು ಪ್ರಾಣಿಯ ವಧೆಗೂ ಪ್ರತ್ಯೇಕ ನಿಯಮವಿರುತ್ತದೆ. ಒಂದು ಸಾಮಾನ್ಯ ನಿಯಮವೆಂದರೆ ವಧಿಸಲ್ಪಟ್ಟ ಪ್ರಾಣಿಯ ದೇಹದಿಂದ ರಕ್ತವೆಲ್ಲವೂ ಹೊರಬರಬೇಕು. ಸೌದಿಯಲ್ಲಿರುವ ಮೆಕ್ಕಾ ಮಸೀದಿಯತ್ತ ಮುಖ ಮಾಡಿ ಪ್ರಾಣಿಯನ್ನು ವಧಿಸಲಾಗುತ್ತದೆ.

    ವಧಿಸುವ ವ್ಯಕ್ತಿಯು ಅಲ್ಲಾಹುವಿನ ನಾಮೋಚ್ಛಾರ ಮಾಡುತ್ತಾ ವಧಿಸಬೇಕು. ತಲೆಯನ್ನು ಒಡೆಯದೇ ಗಂಟಲು ಸೀಳಿ ಸಾಯಿಸಬೇಕು ಎಂಬಿತ್ಯಾದಿ ನಿಯಮಗಳು ಕುರಾನ್‍ನಲ್ಲಿ ತಿಳಿಸಲಾಗಿದೆ. ಕೋಳಿ ಅಥವಾ ಕುರಿಯನ್ನು ಕಡಿಯುವ ಮುಂಚೆ ಮುಸ್ಲಿಂ ಧರ್ಮದಲ್ಲಿ ಕುರಾನಿನ ಕೆಲ ಸಾಲುಗಳನ್ನು ಉಚ್ಚರಿಸಿ ಕೊಲ್ಲಲಾಗುತ್ತದೆ.

    ಹಿಂದೂ ಸಂಪ್ರದಾಯದಲ್ಲಿ ಪ್ರಾಣಿಗಳನ್ನು ನೇರವಾಗಿಯೇ ವಧಿಸುತ್ತಾರೆ. ಆದರೆ ಮುಸ್ಲಿಂ ಧರ್ಮದಲ್ಲಿ ಕೆಲ ರೀತಿ ರಿವಾಜುಗಳಿವೆ. ಮುಸ್ಲಿಂ ಧರ್ಮಗಳಲ್ಲಿ ಏಡಿಯನ್ನು ಹೆಚ್ಚಾಗಿ ತಿನ್ನಲು ಬಯಸುವುದಿಲ್ಲ. ಏಕೆಂದರೆ ತಲೆ ಇಲ್ಲದ ಪ್ರಾಣಿಗಳನ್ನು ತಿನ್ನುವುದು ಅವರಲ್ಲಿ ಮಹಾ ಪಾಪ ಎಂಬುವ ವಾಡಿಕೆಯಿದೆ. ಮುಸ್ಲಿಂ ಮಾಂಸದಂಗಡಿಗಳಲ್ಲಿ ಪ್ರಾಣಿಯನ್ನು ವಧಿಸುವ ಮೊದಲು ಅದರ ಬಾಯಿಗೆ ನೀರು ಹಾಕುತ್ತಾರೆ. ನಂತರ ಆ ಪ್ರಾಣಿಯ ಕತ್ತನ್ನು ಕತ್ತರಿಸುತ್ತಾರೆ. ಒಂದೊಂದು ಪ್ರಾಣಿಯನ್ನು ಸಾಯಿಸುವ ಕ್ರಮದಲ್ಲಿ ವ್ಯತ್ಯಾಸವಿರುತ್ತದೆ. ಆಯಾ ಪ್ರಾಣಿಗೆ ಅನುಗುಣವಾಗಿ ಈ ನಿಯಮವನ್ನು ಮಾಡಲಾಗಿದೆ.

  • ನನ್ನ ಕ್ಷೇತ್ರದಲ್ಲಿ ಮಾಂಸ ತಿನ್ನಂಗಿಲ್ಲ ಎಂದು ಹೇಳಿ ಪೇಚಿಗೆ ಸಿಲಿಕಿದ ಬಿಜೆಪಿ MLA

    ನನ್ನ ಕ್ಷೇತ್ರದಲ್ಲಿ ಮಾಂಸ ತಿನ್ನಂಗಿಲ್ಲ ಎಂದು ಹೇಳಿ ಪೇಚಿಗೆ ಸಿಲಿಕಿದ ಬಿಜೆಪಿ MLA

    ಲಕ್ನೋ: ನನ್ನ ಕ್ಷೇತ್ರದಲ್ಲಿ ಮಾಂಸ ತಿನ್ನಂಗಿಲ್ಲ ಎಂದ ಲೋನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಂದ ಕಿಶೋರ್ ವಿವಾದಾತ್ಮಕ ಹೇಳಿಕೆ ನಂತರ ತಮ್ಮ ಹೇಳಿಕೆಯನ್ನು ಬದಲಿಸಿ  ಸ್ಪಷ್ಟನೆ ನೀಡಿದ್ದಾರೆ.

    ತಮ್ಮ ಕ್ಷೇತ್ರದಲ್ಲಿ ಮಾಂಸದ ಅಂಗಡಿಗಳು ವ್ಯಾಪಾರ ನಡೆಸಿದರೆ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಲೋನಿಯಲ್ಲಿ ಒಂದೇ ಒಂದು ಮಾಂಸದ ಅಂಗಡಿ ಕಂಡು ಬಂದರೂ ನಾನು ಅಧಿಕಾರಿಗಳಿಗೆ ಹೇಳಲು ಬಯಸುತ್ತೇನೆ. ಲೋನಿಯಲ್ಲಿ ರಾಮರಾಜ್ಯವಿದೆ. ರಾಮರಾಜ್ಯದಲ್ಲಿ ಮಾಂಸದ ಅಂಗಡಿಗಳಿಗೆ ಅನುಮತಿ ನೀಡಬೇಕೇ? ಎಂದು ಅವರು ಕಾರ್ಯಕ್ರಮವೊಂದರಲ್ಲಿ ನೆರೆದಿದ್ದವರಿಗೆ ಕೇಳಿದರು. ಜನರು ಹಾಲು ಮತ್ತು ತುಪ್ಪವನ್ನು ಸೇವಿಸಬೇಕು ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ಗೆ ಹೀನಾಯ ಸೋಲು – ಬಿಜೆಪಿಗಿಂತಲೂ, ಕಾಂಗ್ರೆಸ್‍ಗೆ ಡೇಂಜರ್ ಆ ಪಕ್ಷ!

    ಮಾಂಸದ ಅಂಗಡಿಗಳಿಗೆ ಅನುಮತಿ ಇಲ್ಲ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಗುರಿಗಾಗುತ್ತಿದಂತೆ, ಶಾಸಕ ನಂದ ಕಿಶೋರ್ ತಮ್ಮ ಹೇಳಿಕೆಯಿಂದ ಯೂ ಟರ್ನ್ ಹೊಡೆದಿದ್ದಾರೆ. ಸಂಪೂರ್ಣ ನಿಷೇಧದ ಅರ್ಥದಲ್ಲಿ ನಾನು ಹೇಳಿಲ್ಲ, ಬದಲಿಗೆ ಯಾವುದೇ ಅಕ್ರಮ ಅಥವಾ ಪರವಾನಗಿ ರಹಿತ ಅಂಗಡಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರೈತರ ಬೇಡಿಕೆ ಈಡೇರಿಸದಿದ್ದರೆ ಆಗುತ್ತೆ ಹಿಂಸಾಚಾರ: ಮೇಘಾಲಯ ರಾಜ್ಯಪಾಲ ಎಚ್ಚರಿಕೆ

    ಮಾಂಸ ತಿನ್ನುವುದನ್ನು ನಿಷೇಧಿಸುವುದಿಲ್ಲ. ಪರವಾನಗಿ ಇಲ್ಲದೆ ಯಾವುದೇ ಅಂಗಡಿಯನ್ನು ಅನುಮತಿಸಲಾಗುವುದಿಲ್ಲ. ಮಾಂಸವನ್ನು ತಿನ್ನಲು ಬಯಸುವವರು ದೆಹಲಿಗೆ ಹೋಗಬಹುದು ಖಾಸಗಿವಾಹಿನಿಯೊಂದಕ್ಕೆ ಹೇಳಿದ್ದಾರೆ.

  • ಸಿಂಹಕ್ಕೂ ಅಂಜದೇ ಮಾಂಸ ತಿನ್ನಿಸಿದ ರಾಕಿ ಬಾಯ್ – ವೀಡಿಯೋ ವೈರಲ್

    ಸಿಂಹಕ್ಕೂ ಅಂಜದೇ ಮಾಂಸ ತಿನ್ನಿಸಿದ ರಾಕಿ ಬಾಯ್ – ವೀಡಿಯೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಸ್ಕ್ರೀನ್ ಮೇಲೆ ಹೇಗೆ ಹೀರೋನೋ ಅದೇ ರೀತಿ ರಿಯಲ್ ಲೈಫ್‍ನಲ್ಲಿಯೂ ಹೀರೋ ಎಂದೇ ಹೇಳಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಯಶ್ ಸೋಶಿಯಲ್ ಮೀಡಿಯಾದಲಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ನೋಡಿ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.

    ಹೌದು, ಯಶ್ ಹಾಗೂ ರಾಧಿಕ ಪಂಡಿತ್ ದುಬೈ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಸುಂದರವಾದ ತಾಣಗಳಿಗೆ ಭೇಟಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಈ ಮಧ್ಯೆ ಯಶ್ ಸಿಂಹಕ್ಕೆ ಕಡ್ಡಿಯಲ್ಲಿರುವ ಮಾಂಸವನ್ನು ತಿನ್ನಿಸುತ್ತಿರುವ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದುಬೈ ಕಾಫಿಯಲ್ಲಿ ಯಶ್ ಭಾವಚಿತ್ರ

    yash

    ಈ ವೀಡಿಯೋದಲ್ಲಿ ಯಶ್ ಕೊಂಚವು ಭಯವಿಲ್ಲದೇ ಕಡ್ಡಿಯಲ್ಲಿ ಸಿಕ್ಕಿಸಿದ್ದ ಮಾಂಸವನ್ನು ಸಿಂಹಕ್ಕೆ ತಿನ್ನಿಸುತ್ತಿದ್ದರೆ, ಸಿಂಹ ತನ್ನ ಚೂಪಾದ ಹಲ್ಲುಗಳ ಮೂಲಕ ಯಶ್ ತಿನ್ನಿಸುತ್ತಿರುವ ಮಾಂಸವನ್ನು ಕಚ್ಚಿ, ಕಚ್ಚಿ ತಿನ್ನುತ್ತಿರುವುದನ್ನು ಕಾಣಬಹುದಾಗಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿ ಅಭಿಮಾನಿಗಳು ಅಚ್ಚರಿಗೊಳ್ಳುವುದರ ಜೊತೆಗೆ ಯಶ್ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    A post shared by Yash (@thenameisyash)

    ಒಟ್ಟಾರೆ ಈ ವೀಡಿಯೋ ನೋಡುತ್ತಿದ್ದರೆ, ಯಶ್ ಕೇವಲ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ. ರಿಯಲ್ ಲೈಫ್‍ನಲ್ಲಿ ಕೂಡ ಪವರ್ ಫುಲ್ ಹೀರೋ ಎಂದರೆ ತಪ್ಪಾಗಲಾರದು.  ಇದನ್ನೂ ಓದಿ: ಯಶ್, ರಾಧಿಕಾ ದುಬೈ ಟ್ರಿಪ್

    ಇತ್ತೀಚೆಗಷ್ಟೇ ಯಶ್ ದಂಪತಿ ದುಬೈ ಮಾಲ್‍ವೊಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ವಿಶೇಷ ಖಾದ್ಯಗಳು ಹಾಗೂ ಕಾಫಿ ಸವಿದರು. ಜೊತೆಗೆ ಕಾಫಿ ತುಂಬಿದ್ದ ಕಪ್‍ನಲ್ಲಿ ಯಶ್ ಅವರ ಭಾವಚಿತ್ರ ಇರುವುದನ್ನು ನೋಡಿ ಸಿಕ್ಕಾಪಟ್ಟೆ ಸಂತೋಷ ಪಟ್ಟರು. ಈ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    https://www.youtube.com/watch?v=6pfR0FKaaVQ

  • ಎಮ್ಮೆ ಮಾಂಸ ಮಾರಾಟ- ಆರು ಜನ ಆರೋಪಿಗಳ ಬಂಧನ

    ಎಮ್ಮೆ ಮಾಂಸ ಮಾರಾಟ- ಆರು ಜನ ಆರೋಪಿಗಳ ಬಂಧನ

    -20 ಸಾವಿರ ಮೌಲ್ಯದ ಸ್ವತ್ತುಗಳು ವಶ

    ಕಾರವಾರ : ಮಾಂಸಕ್ಕಾಗಿ ಅಕ್ರಮವಾಗಿ ಎಮ್ಮೆಯನ್ನು ಕಡಿದ 6 ಆರೋಪಿಗಳನ್ನು 90 ಕೆಜಿ ಮಾಂಸ ಸಮೇತ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಇಟಗುಳಿ ಗ್ರಾಮದ ಕಲ್ಕೊಪ್ಪ ಮಜಿರೆಯಲ್ಲಿ ನಡೆದಿದೆ.

    ಕಲ್ಕೊಪ್ಪ ಮಜಿರೆಯ ನಜೀರ್ ಅಹಮದ್ ಅಬ್ದುಲ್ ವಾಹಿದ್ ಸಾಬ್, ಅಬ್ದುಲ್ ಮಜಿದ್ ಅಬ್ದುಲ್ ಜಲೀಲ್ ಸಾಬ್, ರಿಯಾಜ್ ಅಹ್ಮದ್ ನಜೀರ್ ಮಹಮ್ಮದ್ ಸಾಬ್ , ಹಭೀಬ ರೆಹಮಾನ್ ಮಹಮ್ಮದ್ ಸಾಬ್, ಅನ್ಸಾರ್ ನಜೀರ್ ಮಹಮ್ಮದ್ ಸಾಬ್ ಹಾಗೂ ಅಬ್ದುಲ್ ಶುಕೂರ್ ಇಸ್ಮಾಯಿಲ್ ಸಾಬ್ ಬಂಧಿತ ಆರೋಪಿಗಳು. ಇವರಲ್ಲಿ ನಜೀರ್ ಅಹಮದ್ ಅಬ್ದುಲ್ ವಾಹಿದ್ ಸಾಬ್ ಎಂಬುವವರ ಮನೆಯ ಹಿಂಬದಿಯ ಕೊಠಡಿಯಲ್ಲಿ ಮಾಂಸವನ್ನು ಕಡಿದು ಮಾರಾಟದ ತಯಾರಿ ನಡೆಸಿದ್ದರು. ಇದನ್ನೂ ಓದಿ: ಪೋಷಕರೇ ಎಚ್ಚರ: ಆಟವಾಡುವಾಗ ಆಯತಪ್ಪಿ 11ನೇ ಮಹಡಿಯಿಂದ ಬಿದ್ದು ಬಾಲಕ ಸಾವು

    ಇಂದು ಕಚಿತ ಮಾಹಿತಿ ಮೇಲೆ ದಾಳಿ ಮಾಡಿ ಬಂಧಿಸಿದ ಪೊಲೀಸರು ಆರೋಪಿತ ರಿಂದ ಒಟ್ಟು 90 ಕೆಜಿ 64 ಗ್ರಾಂ ಎಮ್ಮೆಯ ಮಾಂಸವನ್ನು, ನೆಲಕ್ಕೆ ಹಾಸಿದ ತಾಡಪತ್ರೆ, ಕಟ್ಟಿಗೆಯ ಕೊಡ್ಡ, ಚೂರಿ 1, ಡ್ರ್ಯಾಗರ್ 1, ತೂಕಮಾಡುವ ತೂಕದ ಯಂತ್ರ-1, ಪ್ಲಾಸ್ಟಿಕ್ ಬುಟ್ಟಿ 1 ಇತ್ಯಾದಿ ಸೇರಿದಂತೆ ಸುಮಾರು 20,410 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶಿವಾಜಿನಗರದಲ್ಲಿ ಮಾಂಸ ಖರೀದಿಗೆ ಮುಗಿಬಿದ್ದ ಜನ

    ಶಿವಾಜಿನಗರದಲ್ಲಿ ಮಾಂಸ ಖರೀದಿಗೆ ಮುಗಿಬಿದ್ದ ಜನ

    ಬೆಂಗಳೂರು: ನಗರದಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ ಕೂಡ ಕ್ಯಾರೆ ಇಲ್ಲದೆ ಶಿವಾಜಿನಗರದ ಫಿಶ್ ಮಾರ್ಕೆಟ್ ನಲ್ಲಿ ಜನ ಮೈ ಮರೆತು ಮಾಂಸ ಖರೀದಿಯಲ್ಲಿ ತೊಡಗಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ಸಾರ್ವಜನಿಕರು ಕೊರೊನಾ ನಿಯಮವನ್ನು ಮರೆತಂತಿದೆ.

    ವೀಕೆಂಡ್ ಕರ್ಫ್ಯೂ ಹಾಗೂ ಭಾನುವಾರ ಇರುವುದರಿಂದ ಜನ ಮಾಂಸ ಖರೀದಿಗೆ ಮುಗಿಬಿದ್ದಿದ್ದಾರೆ. ಮಾಂಸದಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿರುವ ಜನ ಸಾಮಾಜಿಕ ಅಂತರವಿಲ್ಲದೆ, ನೂರಾರು ಜನ ಮಾಂಸ ಖರೀದಿ ಭರಾಟೆಯಲ್ಲಿ ಕೊರೊನಾ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ಇದನ್ನೂ ಓದಿ: 16 ಜಿಲ್ಲೆಗಳಲ್ಲಿ ಸಂಜೆ 5ರವರೆಗೆ ಅನ್‍ಲಾಕ್- ನಿಯಮಗಳೇನು?

    ಸಾರ್ವಜನಿಕರು ಸರಿಯಾಗಿ ಮಾಸ್ಕ್ ಗಳನ್ನು ಧರಿಸದೇ ಒಬ್ಬರಿಗೊಬ್ಬರು ಅಂಟಿಕೊಂಡು, ಗ್ರಾಹಕರು ವ್ಯಾಪಾರ ಮಾಡುತ್ತಿದ್ದಾರೆ. ಜನರ ಗುಂಪು ನಿಯಂತ್ರಿಸಲು, ಪೊಲೀಸರು, ಮಾರ್ಷಲ್ ಗಳು ಕೂಡ ಸ್ಥಳದಲ್ಲಿ ಇಲ್ಲ. ಸೋಂಕು ಇಳಿಕೆಯಾಗುತ್ತಿರುವ ಹೊತ್ತಲ್ಲೇ, ಜನ ಮತ್ತೆ ನಿರ್ಲಕ್ಷ್ಯ ತೋರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜನರ ಬೇಜವಾಬ್ದಾರಿ ಹೀಗೆ ಮುಂದುವರೆದರೆ ಮುಂದಿನ ದಿನಗಳು ಆಪಾಯಕ್ಕೆ ದಾರಿಮಾಡಿಕೊಟ್ಟಂತಾಗಲಿದೆ.

  • ಸಾರ್ವಜನಿಕ ಶೌಚಾಲಯದಲ್ಲಿ ಮೊಟ್ಟೆ, ಮಾಂಸ ಮಾರಾಟ

    ಸಾರ್ವಜನಿಕ ಶೌಚಾಲಯದಲ್ಲಿ ಮೊಟ್ಟೆ, ಮಾಂಸ ಮಾರಾಟ

    ಇಂದೋರ್: ಮೊಟ್ಟೆ ಮತ್ತು ಮಾಂಸವನ್ನು ಮಾರಲು ಸಾರ್ವಜನಿಕ ಶೌಚಾಲಯವನ್ನು ಬಳಸುತ್ತಿರುವ ಘಟನೆ ಇಂದೋರ್‍ನ ಮಧ್ಯ ಪ್ರದೇಶದಲ್ಲಿ ನಡೆದಿದೆ. ಸುಲಭ್ ಶೌಚಾಲಯದಲ್ಲಿನ ನಡೆಸಲಾಗುತ್ತಿದ್ದ ಈ ಅಕ್ರಮ ವ್ಯಾಪಾರ ಇಂದೋರ್ ಮುನ್ಸಿಪಲ್ ಕಾರ್ಪೋರೇಷನ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ನಾಗರಿಕ ಸೌಲಭ್ಯ ಮತ್ತು ಅವ್ಯವಸ್ಥೆ ವಿಚಾರವಾಗಿ ಕ್ರಮ ಕೈಗೊಂಡಿದ್ದು, ಸುಲಭ್ ಇಂಟರ್ ನ್ಯಾಷನಲ್ ಎಂಬ ಎನ್‍ಜಿಒ ವಿರುದ್ಧ ದಂಡ ವಿಧಿಸಿದೆ.

    ಈ ಕುರಿತಂತೆ ಮಾತನಾಡಿದ ಈಎಂಸಿಯ ಹೆಚ್ಚುವರಿ ಆಯುಕ್ತ ಅಭಯ್ ರಾಜಂಗಾಂವ್ಕರ್, ಪರಿಶೀಲನೆ ನಡೆಸುತ್ತಿದ್ದ ವೇಳೆ ಸಾರ್ವಜನಿಕ ಶೌಚಾಲಯವನ್ನು ಮೊಟ್ಟೆ ಮತ್ತು ಮಾಂಸ ಮಾರಾಟಕ್ಕೆ ದುರ್ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಹಾಗಾಗಿ ಆರೋಪಿಗೆ ಸ್ಥಳದಲ್ಲಿಯೇ 1,000 ರೂ. ದಂಡ ವಿಧಿಸಲಾಗಿದೆ. ಜೊತೆಗೆ ಎನ್‍ಜಿಒ ಸುಲಭ್ ಇಂಟರ್ ನ್ಯಾಷನಲ್‍ಗೆ ನೋಟಿಸ್ ಕಳುಹಿಸುವ ಮೂಲಕ 20,000 ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದರು.

    2017 ಅಂದರೆ ಕಳೆದ ನಾಲ್ಕು ವರ್ಷದಿಂದ ಸತತವಾಗಿ ಇಂದೋರ್ ದೇಶದಲ್ಲಿಯೇ ಸ್ವಚ್ಛನಗರ ಎಂದು ಕೇಂದ್ರ ಸರ್ಕಾರದ ಸ್ವಚ್ಛ ಸುರಕ್ಷನ್ ಸಮೀಕ್ಷೆ ಅಡಿ ತಿಳಿಸಲಾಗಿದೆ.

  • ಮೀನು ಸಾಗಾಟದ ಟೆಂಪೋದಲ್ಲಿ 12 ಟನ್ ಗೋಮಾಂಸ ಸಾಗಣೆ

    ಮೀನು ಸಾಗಾಟದ ಟೆಂಪೋದಲ್ಲಿ 12 ಟನ್ ಗೋಮಾಂಸ ಸಾಗಣೆ

    – ಭಜರಂಗದಳದ ಕಾರ್ಯಾಚರಣೆಯಿಂದ ಬಹಿರಂಗ

    ಮಂಗಳೂರು: ಮೀನು ಸಾಗಾಟದ ಟೆಂಪೋದಲ್ಲಿ ಬರೋಬ್ಬರಿ 12 ಟನ್ ಗೋಮಾಂಸ ಸಾಗಣೆ ಮಾಡುತ್ತಿದ್ದ ವೇಳೆ ಭಜರಂಗ ದಳದ ಕಾರ್ಯಕರ್ತರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿದ್ದಾರೆ.

    ಮಂಗಳೂರಿನಲ್ಲಿ ಘಟನೆ ನಡೆದಿದ್ದು, ಭಾರೀ ಪ್ರಮಾಣದಲ್ಲಿ ಗೋಮಾಂಸವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಮಂಗಳೂರಿನ ಭಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ನಗರದ ಹೊರವಲಯದ ಅಡ್ಯಾರ್ ನಿಂದ ಮೀನು ಸಾಗಟದ ಟೆಂಪೋವನ್ನು ಭಜರಂಗದಳದ ಕಾರ್ಯಕರ್ತರು ಬೆನ್ನಟ್ಟಿಕೊಂಡು ಬಂದಿದ್ದರು. ಇದೇ ವೇಳೆ ಕಂಕನಾಡಿ ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ನಗರದ ಪಡೀಲ್ ನಲ್ಲಿ ಟೆಂಪೋವನ್ನು ತಡೆದಿದ್ದಾರೆ.

    ಬಳಿಕ ತಪಾಸಣೆ ನಡೆಸಿದಾಗ ಮೀನು ಸಾಗಾಟದ ಟೆಂಪೋದಲ್ಲಿ ಬರೋಬ್ಬರಿ 12 ಟನ್ ಗೋಮಾಂಸ ಪತ್ತೆಯಾಗಿದ್ದು, ಪೊಲೀಸರು ಗೋಮಾಂಸವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯಿಂದ ಮಂಗಳೂರಿಗೆ ಈ ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರೋದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.

    ಕಳೆದ ಒಂದು ವಾರದ ಹಿಂದೆ ಇದೇ ರೀತಿ ಹಾಲು ಸಾಗಾಟದ ಟೆಂಪೋದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದಾಗ ಭಜರಂಗದಳದ ಕಾರ್ಯಕರ್ತರು ಅಡ್ಡ ಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿತ್ತು.

  • ಚಿಕ್ಕಮಗಳೂರಿನಲ್ಲಿ ಮಾಂಸ, ಮೀನಿನಂಗಡಿ ತೆರೆದಿದ್ದರೂ ಕೊಳ್ಳೋರಿಲ್ಲ

    ಚಿಕ್ಕಮಗಳೂರಿನಲ್ಲಿ ಮಾಂಸ, ಮೀನಿನಂಗಡಿ ತೆರೆದಿದ್ದರೂ ಕೊಳ್ಳೋರಿಲ್ಲ

    – ಲಾಕ್‍ಡೌನ್ ಹಿನ್ನೆಲೆ ಮನೆಯಿಂದ ಹೊರ ಬಾರದ ಜನ

    ಚಿಕ್ಕಮಗಳೂರು: ಕೊರೊನಾ ಆತಂಕದಿಂದಾಗಿ ಸರ್ಕಾರ ನಾಲ್ಕನೇ ಹಂತದ ಲಾಕ್‍ಡೌನ್ ವಿಸ್ತರಿಸಿದೆ. ಆದರೆ ಕೆಲ ಸಡಿಲಿಕೆಯನ್ನು ನೀಡಿದ್ದು, ಅಗತ್ಯ ವಸ್ತುಗಳ ಖರೀದೆಗೆ ಅವಕಾಶ ಕಲ್ಪಿಸಿದೆ. ಅಲ್ಲದೆ ಇಡೀ ವಾರ ಓಡಾಡಲು ಅವಕಾಶ ನೀಡಲಾಗಿದೆ. ಭಾನುವಾರ ಮಾತ್ರ ಕಟ್ಟುನಿಟ್ಟಿನ ಲಾಕ್‍ಡೌನ್ ವಿಧಿಸಲು ನಿರ್ಧರಿಸಲಾಗಿದೆ. ಅದರಂತೆ ಚಿಕ್ಕಮಗಳೂರಿನಲ್ಲಿ ಮಳಿಗೆಗಳು ತೆರೆದಿವೆ ಆದರೆ ಭಾನುವಾರ ಲಾಕ್‍ಡೌನ್ ಇರುವುದರಿಂದ ಜನ ಮನೆಯಿಂದ ಹೊರ ಬರುತ್ತಿಲ್ಲ.

    ತರಕಾರಿ, ಹಣ್ಣು, ಚಿಕನ್-ಮಟನ್, ಮೀನು ಸೇರಿದಂತೆ ಅಗತ್ಯ ಹಾಗೂ ದಿನಬಳಕೆ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದೆ. ಸರ್ಕಾರ ಅನುಮತಿ ನೀಡಿದ್ದರೂ ಲಾಕ್‍ಡೌನ್ ಹಿನ್ನೆಲೆ ಜನ ಹೊರಗಡೆ ಬರುತ್ತಿಲ್ಲ. ಹೀಗಾಗಿ ಅಂಗಡಿ ಮುಂಗಟ್ಟುಗಳು ಬಿಕೋ ಎನ್ನುತ್ತಿವೆ. ಇದರಿಂದಾಗಿ ವರ್ತಕರಿಗೆ ನಷ್ಟದ ಆತಂಕ ಎದುರಾಗಿದೆ.

    ಲಾಕ್‍ಡೌನ್ ಹಿನ್ನೆಲೆ ಜನ ಮನೆಯಿಂದ ಹೊರ ಬರುತ್ತಿರುವುದು ತೀರಾ ವಿರಳವಾಗಿದ್ದು, ಸಾವಿರರು ರೂ. ಮೌಲ್ಯದ ಚಿಕನ್, ಮಟನ್, ಮೀನು ತಂದು ವ್ಯಾಪಾರ ಮಾಡುತ್ತಿರುವ ವರ್ತಕರಿಗೆ ನಷ್ಟ ಉಂಟಾಗಿದೆ. ಮಧ್ಯಾಹ್ನ 2 ಗಂಟೆ ವೇಳೆಗೆ ವ್ಯಾಪಾರ ಮುಗಿಸಿ ಮನೆಗೆ ಹೋಗುತ್ತಿದ್ದೆವು. ಆದರೆ ಇಂದು ಬೆಳಗ್ಗೆಯಿಂದ ಶೇ20ರಷ್ಟು ಸಹ ವ್ಯಾಪಾರವಾಗಿಲ್ಲ ಎಂದು ಚಿಂತಾಕ್ರಾಂತರಾಗಿದ್ದಾರೆ. ಚಿಕ್ಕಮಗಳೂರು ಮೀನು ಮಾರುಕಟ್ಟೆಯಲ್ಲಂತೂ ಜನರೇ ಇಲ್ಲದಂತಾಗಿದೆ.

  • ಹಸಿ ಮಾಂಸದ ತಟ್ಟೆಯಿಂದ ಬಿತ್ತು ಕೋಳಿ – ವಿಡಿಯೋ ವೈರಲ್

    ಹಸಿ ಮಾಂಸದ ತಟ್ಟೆಯಿಂದ ಬಿತ್ತು ಕೋಳಿ – ವಿಡಿಯೋ ವೈರಲ್

    ಬೆಂಗಳೂರು: ಹಸಿ ಮಾಂಸ ಇರುವ ಪ್ಲೇಟಿನಿಂದ ಕೋಳಿ ಎಂದು ಹೇಳಲಾಗುತ್ತಿರುವ ಪ್ರಾಣಿ ತೆವಳುತ್ತಾ ನೆಲಕ್ಕೆ ಬೀಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ಆಗಿರುವ ವಿಡಿಯೋ ಸತ್ಯವೋ ಸುಳ್ಳೋ ಎನ್ನುವುದರ ಬಗ್ಗೆ ಈಗ ಪ್ರಶ್ನೆ ಎದ್ದಿದೆ. ಕೆಲವರು ಇದು ನಿಜವಾಗಿ ನಡೆದಿದೆ ಎಂದು ಹೇಳಿದರೆ ಮತ್ತೆ ಕೆಲವರು ಎಡಿಟೆಡ್ ವಿಡಿಯೋ ಎಂದು ಹೇಳುತ್ತಿದ್ದಾರೆ.

    ಕೆಲವೊಂದು ಫ್ಯಾಕ್ಟ್ ಚೆಕ್ ವೆಬ್‍ಸೈಟ್ ಗಳು ಇದು ಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡಿದೆ ಎಂದು ಹೇಳಿದ್ದರೆ ಕೆಲ ಇಂಗ್ಲೀಷ್ ತಾಣಗಳು ಹಾಂಕಾಂಗ್ ನಲ್ಲಿ ಮೊದಲು ವಿಡಿಯೋ ಅಪ್ಲೋಡ್ ಆಗಿದೆ ಎಂದು ಹೇಳಿವೆ.

    https://twitter.com/lizardtoess/status/1154973048937832448

    ಪ್ರಾಣಿ ಶಾಸ್ತ್ರಜ್ಞರು ಇದು ಕೋಳಿಯೂ ಅಲ್ಲ ಕಪ್ಪೆಯೂ ಅಲ್ಲ. ಮೀನು ಆಗಿರುವ ಸಾಧ್ಯತೆಯಿದೆ. ತೆವಳುತ್ತಾ ಹಾರಬೇಕಾದರೆ ಮೀನು ಮಾತ್ರ ಆಗಿರಬೇಕು. ಚರ್ಮ ತೆಗೆದ ಮೀನು ಈ ರೀತಿ ಹಾರಿರಬಹುದು ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಇದು ನೈಜವೋ? ಎಡಿಟೆಡ್ ವಿಡಿಯೋ ಎನ್ನುವುದರ ಬಗ್ಗೆ ಗೊಂದಲವಿದೆ. ಈ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಮೆಂಟ್ ಮಾಡಿ ತಿಳಿಸಿ.