ಲಕ್ನೋ: ದುಷ್ಕರ್ಮಿಗಳು ದೇವಸ್ಥಾನದ ಕಾಂಪೌಂಡ್‍ನಲ್ಲಿ ಮಾಸದ ತುಂಡುಗಳನ್ನು ಎಸೆದಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು 3 ಮಾಸದ ಅಂಗಡಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ರಸೂಲಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದೊಳಗೆ ಮಾಸದ ತುಂಡುಗಳು ಬಿದ್ದಿದ್ದವು. ಇದರಿಂದಾಗಿ ಆಕ್ರೋಶಗೊಂಡ ಜನರು ಅಲ್ಲಿಯೇ ಸಮೀಪವಿರುವ 3 ಮಾಂಸದ ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಅಷ್ಟೇ ಅಲ್ಲದೇ ಗುಂಪಿನ ಸದಸ್ಯರು ಘಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಜೊತೆಗೆ ತಾಲ್ಗ್ರಾಮ್-ಇಂದ್ರಗಢ್ ರಸ್ತೆಯನ್ನು ತಡೆದರು. ಈ ಹಿನ್ನೆಲೆಯಲ್ಲಿ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಇದನ್ನೂ ಓದಿ:ಬೆಂಗಳೂರಲ್ಲಿ ಉಚಿತ ಬೈಕ್ ಅಂಬುಲೆನ್ಸ್ – 5 ತಿಂಗಳಿನಿಂದ ವ್ಯಕ್ತಿಯಿಂದ ಫ್ರೀ ಸರ್ವೀಸ್
ನವದೆಹಲಿ: ದಿನಬಳಕೆಯ ವಸ್ತುಗಳ ಮೇಲೆ ಜೆಎಸ್‍ಟಿ ಶೇ.5ರಷ್ಟು ಹೆಚ್ಚಳ ಸೋಮವಾರದಿಂದ ಜಾರಿಗೆ ಬರಲಿದೆ. ಹೀಗಾಗಿ ಜನಸಾಮಾನ್ಯರಿಗೆ ನಾಳೆಯಿಂದ ದುನಿಯಾ ದುಬಾರಿ ಆಗಲಿದೆ.
ಪ್ಯಾಕ್ ಮಾಡಿದ ಮೀನು, ಮಾಂಸ, ಮೊಸರು, ಜೇನು, ಬೆಲ್ಲ, ತರಕಾರಿ, ಗೋಧಿ ಸೇರಿ ಹಲವು ದಿನಸಿ ಪದಾರ್ಥಗಳ ಬೆಲೆ ಏರಿಕೆ ಆಗಲಿದೆ. ಹೋಟೆಲ್ ರೂಂಗಳ ಬಾಡಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆಯೂ ಹೆಚ್ಚಾಗಲಿದೆ. ಜುಲೈ 18 ರಿಂದಲೇ ಜಿಎಸ್‍ಟಿ ಅನ್ವಯವಾಗಲಿದೆ. ಪ್ಯಾಕ್ ಮಾಡಿ ಲೇಬಲ್ ಮಾಡಿದ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಸೇರಿದಂತೆ ಹಲವಾರು ಉತ್ಪನ್ನಗಳಿಗೆ ತೆರಿಗೆ ವಿನಾಯಿತಿಯನ್ನು ಕೊನೆಗೊಳಿಸಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯಿಂದ ಅಧಿಸೂಚನೆ ಹೊರಡಿಸಿದೆ.
ನಿತ್ಯದ ಬಾಡಿಗೆ 1,000ರೂ.ಗಿಂತ ಕಡಿಮೆ ಇರುವ ಹೋಟೆಲ್ ಕೊಠಡಿಗಳಿಗೆ ಇದ್ದ ವಿನಾಯಿತಿ ರದ್ದಾಗಿ, ಇನ್ನೂ ಶೇ.12ರಷ್ಟು ತೆರಿಗೆ ಬೀಳಲಿದೆ. ದಿನಕ್ಕೆ 5000 ರೂ.1ಗಿ0ತ ಹೆಚ್ಚಿನ ಬಾಡಿಗೆ ವಿಧಿಸುವ ಸಾರ್ವಜನಿಕ ಧಾರ್ಮಿಕ ಕೆಂದ್ರಗಳು, ಮಾಸಿಕ 2500ರೂ.ಗಿಂತ ಹೆಚ್ಚಿನ ಬಾಡಿಗೆ ಇರುವ ವಾಣಿಜ್ಯ ಮಳಿಗೆಗಳಿಗೂ ಜಿಎಸ್‍ಟಿ ಜಾರಿಯಾಗಲಿದೆ.
ಚರ್ಮದ ಸಿದ್ಧ ಉತ್ಪನ್ನಗಳು, ಟೈಲರಿಂಗ್, ಜವಳಿ ಸೇವೆಗಳು, ಅಂಚೆ ಇಲಾಖೆ ಬುಕ್‌ಪೋಸ್ಟ್ 10 ಗ್ರಾಂಗಿಂತ ಕಡಿಮೆ ಇರುವ ಲಕೋಟಿ, ಚೆಕ್‍ಬುಕ್‍ಗಳ ಬೆಲೆ ಕೂಡ ಏರಿಕೆಯಾಗಲಿದೆ. ನಿತ್ಯ 5,000ರೂ.ಗಿಂತ ಹೆಚ್ಚಿನ ಶುಲ್ಕವಿರುವ ಐಸಿಯು ಹೊರತುಪಡಿಸಿದ ಆಸ್ಪತ್ರೆ ಕೊಠಡಿಗಳ ಬಿಲ್‍ಗೆ ಶೇ.5ರಷ್ಟು ಜಿಎಸ್‍ಟಿ ಜಾರಿಯಾಗುವ ಕಾರಣ ಇದು ಕೂಡ ದುಬಾರಿಯಾಗಲಿದೆ. ಅಂಚೆ ಇಲಾಖೆಯ ಕೆಲವು ಸೇವೆಗಳು ಸಹ ದುಬಾರಿಯಾಗಲಿದೆ. ಇದನ್ನೂ ಓದಿ: ಚಾಕು ಹಾಕಿದವರಿಗೆ ಪರಿಹಾರ ಕೊಡೋಕೆ ಹೋಗ್ತೀವಾ: ಯತ್ನಾಳ್ ಪ್ರಶ್ನೆ
ಪ್ಯಾಕ್ ಮಾಡಿದ ಬ್ರ್ಯಾಡೆಂಡ್ ಭೂ ಪಟ, ಚಾರ್ಟ್, ಅಟ್ಲಾಸ್, ಸೋಲಾರ್ ವಾಟರ್ ಹೀಟರ್, ಮುದ್ರಣ, ಬರಹ/ಚಿತ್ರಕಲೆಯ ಇಂಕ್, ಎಲ್‍ಇಡಿ ಬಲ್ಬ್, ಎಲ್‍ಇಡಿ ಲ್ಯಾಂಪ್ ಬೆಲೆ ಕೂಡ ಹೆಚ್ಚಾಗಲಿದೆ. ಇನ್ನೂ ಬ್ಲಡ್ ಬ್ಯಾಂಕ್‍ಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿ ರದ್ದುಗೊಳಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಒಂದು ಧರ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲದ ಭಾರತದಲ್ಲಿ ನಾನು ಬದುಕಲು ಬಯಸುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.
ಈ ಕುರಿತು ಟಿವಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ನಾನು ಕಾಳಿ ದೇವಿ ಆರಾಧಕಿ, ಹಿಂದೂ ಧರ್ಮ ಪಾಲಿಸುವಾಕೆ, ನನ್ನ ಅಭಿಪ್ರಾಯಗಳು ನನ್ನ ಸ್ವ-ಧರ್ಮದ ಮೇಲೆಯೇ ಅವಲಂಬಿತವಾಗಿದ್ದವು. ಇದರಲ್ಲಿ ಅಪರಾಧ ಎಸಗುವ ಯಾವುದೇ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹುವಾ ವಿರುದ್ಧ ಕೇಸ್ – ನಾನು ಕಾಳಿ ಆರಾಧಕಿಯಾಗಿದ್ದು ಹೆದರಲ್ಲ ಎಂದ ಸಂಸದೆ
Bring it on BJP!
Am a Kali worshipper. I am not afraid of anything. Not your ignoramuses. Not your goons. Not your police. And most certainly not your trolls.
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಪೈಗಂಬರ್‌ರನ್ನು ಅವಹೇಳನ ಮಾಡಿದರು. ಆದರೆ ನಾನು ಕಾಳಿದೇವಿಯನ್ನು ಕೊಂಡಾಡುತ್ತೇನೆ. ಹೀಗಿದ್ದೂ ಒಂದು ಧರ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲದ ಭಾರತದಲ್ಲಿ ಬದುಕಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ ತಂಡದ ಒಂದು ಎಡವಟ್ಟಿನಿಂದಾಗಿ ರ್‍ಯಾಂಕಿಂಗ್‌ನಲ್ಲಿ ಜಿಗಿತ ಕಂಡ ಪಾಕ್
ಬಿಜೆಪಿ ತನ್ನ ಪರಿಕಲ್ಪನೆಯನ್ನು ಮತ್ತೊಬ್ಬರ ಮೇಲೆ ಹೇರಲು ಬಯಸುತ್ತಿದೆ. ಸಾಧ್ಯವಿದ್ದರೆ ಬಿಜೆಪಿ ನನ್ನ ತಪ್ಪುಗಳನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ.
The comments made by @MahuaMoitra at the #IndiaTodayConclaveEast2022 and her views expressed on Goddess Kali have been made in her personal capacity and are NOT ENDORSED BY THE PARTY in ANY MANNER OR FORM.
All India Trinamool Congress strongly condemns such comments.
— All India Trinamool Congress (@AITCofficial) July 5, 2022
ಈಚೆಗೆ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮೆಹುವಾ ಅವರು, ನನಗೆ ಕಾಳಿ ಮಾತೆಯು ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆಯಾಗಿದ್ದಾಳೆ. ನಿಮ್ಮ ದೇವತೆ ಬಗ್ಗೆ ಊಹಿಸಿಕೊಳ್ಳುವ ಸ್ವಾತಂತ್ರ‍್ಯ ನಿಮಗಿದೆ ಎಂದು ಹೇಳಿ ವಿವಾದಕ್ಕೀಡಾಗಿದ್ದರು. ಸಾಮಾಜಿಕ ಜಾಲತಾಣದಲ್ಲೂ ಭಾರೀ ಟೀಕೆಗಳು ವ್ಯಕ್ತವಾಗಿತ್ತು.
ವಿವಾದ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಟಿಎಂಸಿ, ಮಹುವಾ ಮೊಯಿತ್ರಾ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಮಹುವಾ ಹೇಳಿಕೆ ವೈಯಕ್ತಿಕ ಎಂದು ಹೇಳಿ ವಿವಾದಿಂದ ದೂರ ಉಳಿಯಿತು. ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಮಹುವಾ ಅವರನ್ನು ಬಂಧಿಸಬೇಕೆಂಬ ಬೇಡಿಕೆಯನ್ನಿರಿಸಿದೆ.
ಈ ಕುರಿತು ಬುಧವಾರ ಮತ್ತೆ ಟ್ವೀಟ್ ಮಾಡಿದ ಮಹುವಾ, ನಾನು ಕಾಳಿ ಆರಾಧಕಿಯಾಗಿದ್ದು ಯಾವುದಕ್ಕೂ ಹೆದರುವುದಿಲ್ಲ. ನಿಮ್ಮ ಮೂಢತೆ, ಗೂಂಡಾಯಿಸಂ ಅಥವಾ ಟ್ರೋಲ್‌ಗಳಿಗೆ ಬಗ್ಗುವುದಿಲ್ಲ ಎಂದಿದ್ದಾರೆ.
Live Tv
[brid partner=56869869 player=32851 video=960834 autoplay=true]
ಶಿವಮೊಗ್ಗ: ದತ್ತಪೀಠ ವಿವಾದಕ್ಕೆ ಕಾಂಗ್ರೆಸ್ ಕುಮ್ಮಕ್ಕೆ ಕಾರಣವಾಗಿದ್ದು, ಕೆಲ ಕಿಡಿಗೇಡಿಗಳಿಗೆ ಕಾಂಗ್ರೆಸ್‍ನವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ಆದೇಶಕ್ಕೆ ನಾವು ಬೆಲೆ ಕೊಡುತ್ತೇವೆ. ದತ್ತಪೀಠದಲ್ಲಿ ಗೋರಿ ನಿರ್ಮಾಣ ಮಾಡಿ, ಅದಕ್ಕೆ ಬಾಬಾ ಬುಡನ್‍ಗಿರಿ ಎಂದು ಹೆಸರು ಹೇಳಿದರೆ ಆಗುತ್ತೇ? ದತ್ತಪೀಠ ಎಂಬ ಹೆಸರಿದ್ದು, ನ್ಯಾಯಾಲಯದ ಆದೇಶದಂತೆ ಅದು ದತ್ತಪೀಠವೇ ಆಗಿದೆ. ಹೀಗಿರುವಾಗ ಕೆಲವು ಕಿಡಿಗೇಡಿಗಳು ಅಲ್ಲಿ ನಮಾಜ್ ಮಾಡಿ, ಮಾಂಸಾಹಾರ ಸೇವಿಸಿದ್ದಾರೆ ಅಂದರೆ ಅವರಿಗೆ ಇನ್ನೆಷ್ಟು ಸೊಕ್ಕು ಇರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದತ್ತಪೀಠ ವಿವಾದಿತ ಸ್ಥಳದಲ್ಲಿ ನಮಾಜ್?
ಏನಿದು ಘಟನೆ?
ಈ ಹಿಂದೆ ಚಿಕ್ಕಮಗಳೂರಿನಲ್ಲಿ ಕಿಡಿಗೇಡಿಗಳು ದತ್ತಪೀಠದ ವಿವಾದಿತ ಸ್ಥಳದಲ್ಲಿ ಮಾಂಸದೂಟ ಮಾಡಿ, ಗೋರಿ ಪೂಜೆ ಬಳಿಕ ದತ್ತಪೀಠದ ಆವರಣದಲ್ಲಿ ನಮಾಜ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವಿವಾದ ಸೃಷ್ಟಿಯಾಗಿತ್ತು. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ನಿಂತು ನಮಾಜ್- ವ್ಯಕ್ತಿಯ ಬಂಧನ
ಚಿಕ್ಕಮಗಳೂರು: ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲಿ ಆವರಣದಲ್ಲಿ ಮಾಂಸಹಾರ ಸೇವನೆ ಮಾಡಿದ್ದು, ಹಿಂದೂ ಸಂಘಟನೆಗಳು ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿವೆ.
ದತ್ತಪೀಠದ ಉಮೇದುವಾರಿಕೆಗಾಗಿ ಎರಡು ಸಮುದಾಯಗಳು ದಶಕಗಳಿಂದ ಹೋರಾಟ ಮಾಡುತ್ತಿವೆ. ಹಾಗಾಗಿ ನ್ಯಾಯಾಲಯ ಕೂಡ ದತ್ತಪೀಠದ ಆವರಣದೊಳಗೆ ಕೆಲವೊಂದು ಆಚರಣೆಗೆ ನಿಬರ್ಂಧ ಹೇರಿದೆ. ಆದರೆ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ, ವಿವಾದಿತ ಜಾಗದಲ್ಲಿ ಪೂಜೆ ಮಾಡಿ ಮಾಂಸ ಸೇವನೆ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಇದನ್ನೂ ಓದಿ: ವಿವಾಹಿತೆಯ ಅನುಮಾನಾಸ್ಪದ ಸಾವು
ದತ್ತಪೀಠದಲ್ಲಿನ ಗೋರಿಗಳಿಗೆ ಪೂಜೆ ಮಾಡಲು ಹೇಗೆ ಅವಕಾಶ ಸಿಕ್ಕಿತು ಎಂದು ಬಜರಂಗದಳ ಕಾರ್ಯಕರ್ತರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹಿಂದೂಗಳ ಧಾರ್ಮಿಕ ಸಭೆ-ಸಮಾರಂಭದಲ್ಲಿ ಹೋಮ-ಹವನ ನಡೆಯುವ ಜಾಗದಲ್ಲಿ ಬಿರಿಯಾನಿ ಬೇಯಿಸಿ ತಿಂದಿರುವುದು ಇದೀಗ ಮತ್ತೊಂದು ವಿವಾದದ ಕಿಡಿಹೊತ್ತಿಸಿದೆ.
ಸರ್ಕಾರವೇ ನಿರ್ಮಿಸಿರುವ ಶೆಡ್: ನಿನ್ನೆ ದತ್ತಪೀಠದ ಗುಹೆಯ ಪಕ್ಕದಲ್ಲಿನ ತಾತ್ಕಾಲಿಕ ಶೆಡ್‍ನಲ್ಲಿ ಮುಸ್ಲಿಮರು ಮಾಂಸ ಬೇಯಿಸಿಕೊಂಡು ಸೇವನೆ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಕಾರರ ಪಿತ್ತ ನೆತ್ತಿಗೇರಿತ್ತು. ದತ್ತ ಜಯಂತಿ, ದತ್ತಮಾಲಾ ಅಭಿಯಾನದ ವೇಳೆ ಇಲ್ಲಿ ಹೋಮ-ಹವನ ನಡೆಸಲು ಸರ್ಕಾರವೇ ತಾತ್ಕಾಲಿಕವಾಗಿ ನಿರ್ಮಿಸಿರುವ ಶೆಡ್ ಇದು. ಈ ಶೆಡ್‍ನಲ್ಲಿ ಅನುಸೂಯ ಜಯಂತಿ, ದತ್ತಜಯಂತಿಯಂತೆ ಲೋಕ ಕಲ್ಯಾಣಾರ್ಥ ವಿವಿಧ ಹೋಮ-ಹವನ ಹಾಗೂ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುವುದು. ಆದರೆ ಅಂತಹ ಧಾರ್ಮಿಕ ಜಾಗದಲ್ಲೂ ಮಾಂಸ ಬೇಯಿಸಿದ್ದಾರೆ ಎಂದು ಹಿಂದೂ ಸಂಘಟಕರು ಮುಸ್ಲಿಮರ ವಿರುದ್ಧವೂ ಕಿಡಿಕಾರಿದ್ದಾರೆ.
ದತ್ತಪೀಠದಲ್ಲೇ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ ಬಜರಂಗದಳ ಕಾರ್ಯಕರ್ತರು ಮುಜರಾಯಿ ಇಲಾಖೆ ಮಾಂಸಹಾರಕ್ಕೆ ಅವಕಾಶ ನೀಡಿದ್ದಾರೆ ಎಂದು ಹರಿಹಾಯ್ದರು. ಹೋಮದ ಜಾಗದಲ್ಲಿ ಮಾಂಸ ಬೇಯಿಸಿ ಅಪವಿತ್ರಗೊಳಿಸಿದ್ದಾರೆ. ದತ್ತಜಯಂತಿಯಲ್ಲಿ ಹೋಮದ ಹೊಗೆ, ಬೇರೆ ಸಮಯದಲ್ಲಿ ಮಾಂಸದ ಹೊಗೆ ಎಂದು ಬಜರಂಗದಳ ಮುಖಂಡರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ತಮ್ಮನನ್ನೇ ಚಾಕುವಿನಿಂದ ಇರಿದು ಕೊಂದ ಅಣ್ಣ
ಅಲ್ಲಿ ಪೂಜೆ ಮಾಡಲ್ಲ, ಮತ್ತೆಲ್ಲಿ: ದತ್ತಜಯಂತಿಯಲ್ಲಿ ನಾವು ಲೋಕಕಲ್ಯಾಣಾರ್ಥ ಹೋಮ-ಹವನ ನಡೆಸುವ ಜಾಗವನ್ನು ಮುಸ್ಲಿಮರು ಅಪವಿತ್ರಗೊಳಿಸಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಅಲ್ಲಿ ಹೋಮ-ಹವನ, ಪೂಜೆ ಮಾಡುವುದಿಲ್ಲ. ಈ ಹಿಂದೆ ಗುಹೆ ಸಮೀಪದ ತುಳಸಿಕಟ್ಟೆ ಬಳಿ ಹೋಮ ನಡೆಯುತ್ತಿತ್ತು. ಇನ್ನು ಮುಂದೆ ಅದೇ ತುಳಸಿಕಟ್ಟೆ ಬಳಿ ಹೋಮ-ಹವನ ಮಾಡುತ್ತೇವೆ. ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ನಮಗೆ ಯಾವುದೇ ಪ್ರಶ್ನೆ ಮಾಡುವಂತಿಲ್ಲ. ತುಳಸಿಕಟ್ಟೆ ಬಳಿ ಹೋಮ ಮಾಡಲು ಸರ್ಕಾರ ವಿರೋಧ ತೋರಿದರೆ ನಾವು ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಿವಾದಿತ ಗೋರಿಗಳಿಗೆ ಪೂಜೆ: ದತ್ತಪೀಠದ ಗುಹೆಯೊಳಗಿನ ಗೋರಿಗಳಿಗೆ ಮುಜಾವರ್ ಮಾತ್ರ ಪೂಜೆ ಮಾಡಬೇಕು. ಬೇರೆ ಯಾರಿಗೂ ಪೂಜೆಗೆ ಅವಕಾಶವಿಲ್ಲ. ಆದರೆ ದರ್ಶನಕ್ಕೆ ಗುಹೆಯೊಳಗೆ ಹೋಗಿದ್ದ ಮುಸ್ಲಿಂ ಭಕ್ತರೇ ಪೂಜೆ ಮಾಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದು ಕೋರ್ಟ್ ಆದೇಶವನ್ನು ಉಲ್ಲಂಘಿಸಿದಂತೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿರುವ ಹಿಂದೂ ಸಂಘಟನೆಗಳ ಮುಖಂಡರು ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.
200 ಮೀಟರ್ ಸುತ್ತಳತೆಯಲ್ಲಿ ಮಾಂಸ ನಿಷೇಧ: 2010ರಲ್ಲಿ ಸುಪ್ರೀಂಕೋರ್ಟ್ ಕೂಡ 1999ರ ಪೂಜಾ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗಲು ಸೂಚಿಸಿದೆ. ಸರ್ಕಾರ, ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ಮುಜಾವರ್ ಮಾತ್ರ ದತ್ತಗುಹೆ-ಗೋರಿಗಳಿಗೆ ಪೂಜೆ ಸಲ್ಲಿಸಲು ಅವಕಾಶವಿದೆ. ಬೇರೆಯವರಿಗೆ ಪೂಜೆ-ಪುನಸ್ಕಾರಕ್ಕೆ ಅವಕಾಶವಿಲ್ಲ. ದತ್ತಜಯಂತಿ-ದತ್ತಮಾಲಾಧಾರಣೆ ಸಮಯದಲ್ಲಿ ಸ್ವಾಮೀಜಿಗಳಿಂದ ದತ್ತಪಾದುಕೆ ಪೂಜೆಗೆ ಅವಕಾಶಕ್ಕೆ ನೀಡುವಂತೆ ಒತ್ತಾಯಿಸಿರುವ ಹಲವು ನಿದರ್ಶನಗಳಿವೆ. ಜೊತೆಗೆ ದತ್ತಪೀಠದ 200 ಮೀಟರ್ ಸುತ್ತಳತೆಯಲ್ಲಿ ಮುಜರಾಯಿ ಇಲಾಖೆಯ ನಿಯಮ-ನಿರ್ದೇಶನದಂತೆ ಯಾವುದೇ ರೀತಿಯ ಮಾಂಸಾಹಾರ ಮಾಡುವುದಕ್ಕೆ ಸಂಪೂರ್ಣ ನಿಷೇಧವಿದೆ. ಮಾಂಸಹಾರ ನಿಷೇಧ ಜಾರಿಯಲ್ಲಿದ್ದರೂ ಕೂಡ ಬಿರಿಯಾನಿ ಮಾಡಿ ತಿಂದಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲಾಡಳಿತದಿಂದ ತಾತ್ಕಾಲಿಕ ಶೆಡ್ ಕ್ಲೀನ್: ಹೋಮ-ಹವನದ ಜಾಗದಲ್ಲಿ ಬಿರಿಯಾನಿ ತಿಂದ ವಿಷಯ ಹಾಗೂ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಗೊಂಡ ಜಿಲ್ಲಾಡಳಿತ ಮುಸ್ಲಿಮರು ಬಿರಿಯಾನಿ ತಿಂದಿದ್ದ ಹೋಮದ ಜಾಗವನ್ನು ಕ್ಲೀನ್ ಮಾಡಿದೆ. ತಾತ್ಕಾಲಿಕ ಶೆಡ್ ಹಾಗೂ ಅದರ ಸುತ್ತಲೂ ಬ್ಲೀಚಿಂಗ್ ಪೌಡರ್ ಹಾಕಿ ಕ್ಲೀನ್ ಮಾಡಿದ್ದು, ಈಗ ಅಲ್ಲಿಗೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಈ ಪ್ರಕರಣವನ್ನು ಖಂಡಿಸಿರುವ ವಿ.ಎಚ್.ಪಿ ಹಾಗೂ ಬಜರಂಗದಳ ಕಾರ್ಯಕರ್ತರು ದತ್ತಪೀಠದಲ್ಲಿ ಪ್ರತಿಭಟನೆ ನಡೆಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸುಂದರ ಪ್ರಕೃತಿ ಹಾಳು, ಪೀಠದಲ್ಲಿ ಕೆಟ್ಟ ವಾಸನೆ: ಇದೆಲ್ಲದರ ಮಧ್ಯೆ ಸಮುದ್ರಮಟ್ಟದಿಂದ ಸುಮಾರು 2,500 ಅಡಿಗೂ ಎತ್ತರದಲ್ಲಿರುವ ಸುಂದರ ಹಾಗೂ ಸ್ವಚ್ಛ ವಾತಾವರಣದಲ್ಲಿ ಬೀರುತ್ತಿರುವ ವಾಸನೆಯನ್ನ ತಡೆಯಲಾಗದಂತಾಗಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಅಡುಗೆ ಮಾಡುತ್ತಿರುವುದು, ಬಹಿರ್ದೆಸೆಗೆ ಹೋಗುತ್ತಿರುವುದು, ತಿಂದ ಪ್ಲೇಟ್‍ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಇಲ್ಲಿನ ಸೌಂದರ್ಯ ಹಾಗೂ ಸ್ವಚ್ಛತೆಯನ್ನ ಹಾಳು ಮಾಡುತ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ ಊಹಿಸಲಾಗದಷ್ಟು. ತಣ್ಣನೆಯ ಗಾಳಿ ಬೀಸುವ ದತ್ತಪೀಠದ ಆವರಣದಲ್ಲೇ ಪ್ರವಾಸಿಗರು ಮೂಗು ಮುಚ್ಚಿಕೊಂಡು ಹೋಗುವಷ್ಟು ಹಾಳುಮಾಡಿದ್ದಾರೆ. ಕೂಡಲೇ ಜಿಲ್ಲಾಡಳಿತ ದತ್ತಪೀಠದ ಪರಿಸರ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ದತ್ತಪೀಠದ ಸೌಂದರ್ಯ ಹಾಳುಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಪ್ರವಾಸಿಗರೇ ಅಸಮಾಧಾನ ಹೊರಹಾಕಿದ್ದಾರೆ.
ಶ್ರೀರಾಮನವಮಿಯಂದು ಪ್ರಾಣಿ, ವಧೆ ಮತ್ತು ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಕಸಾಯಿಖಾನೆಯಲ್ಲೂ ಪಾಣಿವಧೆ, ಮಾರಾಟಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಈ ನಿಯಮಗಳ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಜಂಟಿ ನಿರ್ದೇಶಕ ಪಶುಪಾಲನಾ ವಿಭಾಗದಿಂದ ಆದೇಶ ಹೊರಡಿಸಲಾಗಿದೆ.
ಮೈಸೂರು: ಧರ್ಮದ ಮುಖವಾಡದಲ್ಲಿ ಅಧರ್ಮ ಕುಣಿದು ಕುಪ್ಪಳಿಸುತ್ತಿದೆ. ಜನ ಸಮುದಾಯದ ವಿವೇಕ ಕಡಿಮೆಯಾಗುತ್ತಿದೆ. ಪ್ರಾಣಿ ವಧೆ ಮಾಡಿ ತಿನ್ನುವುದರಲ್ಲಿ ಮಾನವೀಯತೆ ಎಲ್ಲಿಂದ ಬಂತು ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಹಲಾಲ್ ವಿವಾದದ ಕುರಿತು ಪ್ರಶ್ನಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಾಹಿತಿ, ಕಾನೂನು ಹಾಗೂ ಸುವ್ಯವಸ್ಥೆ ಇದೆ ಎಂದಾದರೆ ಸರ್ಕಾರ ಇಂತಹ ವಿಚಾರವಾಗಿ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ದೇಶದ ಮೊದಲ ಹಸಿರು ಸಂಚಾರಿ ಪಥ ಕಾಮಗಾರಿ: ಜಗದೀಶ್ ಶೆಟ್ಟರ್
ಸರ್ಕಾರ ಜನ ಸಮುದಾಯವನ್ನು ಒಡೆದು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ವಿರೋಧ ಪಕ್ಷಗಳು ಇದನ್ನೆಲ್ಲಾ ನೋಡಿಕೊಂಡು ಮಂಕಾಗಿ ಕೂತಿದೆ. ಮಾಂಸವನ್ನು ಹಾಗೆ ಕತ್ತರಿಸಬೇಕು ಹೀಗೆ ಕತ್ತರಿಸಬೇಕು ಎಂದು ಹೇಳಲು ಅವರು ಯಾರು ಎಂದು ಮಾಂಸ ತಿನ್ನುವವರೇ ಪ್ರಶ್ನಿಸಿದ್ದಾರೆ. ಮಾಂಸವನ್ನು ಕತ್ತರಿಸುವ ರೀತಿಯಲ್ಲೂ ಮಾನವೀಯತೆ ಇದೆ ಎನ್ನುತ್ತಾರೆ. ಪ್ರಾಣಿ ವಧೆ ಮಾಡಿ ತಿನ್ನುವುದರಲ್ಲಿ ಮಾನವೀಯತೆ ಎಲ್ಲಿಂದ ಬರುತ್ತೆ? ಎಂದು ದೇಮ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಚ್ಚೇ ದಿನ್ ಕೊಡ್ತೀವಿ ಎಂದ ಕೇಂದ್ರ ನರಕ ದಿನ ತೋರಿಸುತ್ತಿದೆ: ಡಿಕೆಶಿ
ದಾವಣಗೆರೆ: ಯುಗಾದಿ ಹಬ್ಬದ ಹೊಸ ತೊಡಕಿನ ಹಿನ್ನೆಲೆಯಲ್ಲಿ ಮಾಂಸ ಮಾರಾಟ ಸ್ಥಳಗಳು ಗಿಜಿಗುಡುತ್ತವೆ. ಆದರೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಮಾತ್ರ ಮಟನ್, ಚಿಕನ್ ಮಾರುಕಟ್ಟೆಗಳು ಸಂಪೂರ್ಣ ಖಾಲಿ ಖಾಲಿಯಾಗಿವೆ.
ಬೆಳಗ್ಗೆ 8 ಗಂಟೆಯಾದರೂ ಜನರು ಮಟನ್, ಚಿಕನ್ ಖರೀದಿಗೆ ಆಗಮಿಸಿಲ್ಲ. ನಿನ್ನೆ ಚಂದ್ರ ದರ್ಶನವಾಗಿದ್ದರೆ ಇಂದು ನಾನ್ ವೆಜ್ ಮಾಡುತ್ತಿದ್ದರು. ಆದರೆ ಚಂದ್ರ ದರ್ಶನವಾಗದ ಹಿನ್ನೆಲೆ ಇಂದು ಕೂಡ ಸಿಹಿ ಮಾಡಿ ಇಂದು ಚಂದ್ರ ದರ್ಶನವಾದರೆ ನಾಳೆ ನಾನ್ ವೆಜ್ ಮಾಡುತ್ತಾರೆ.
ಈ ಬಗ್ಗೆ ಇಲ್ಲಿನ ಮಟನ್ ವ್ಯಾಪಾರಸ್ಥರು ಮಾತನಾಡಿ, ಜಟ್ಕಾ ಕಟ್, ಹಲಾಲ್ ವಿವಾದ ಇಲ್ಲಿ ಇಲ್ಲ. ಮುಂದೆ ಹೇಗೆ ಬರುತ್ತೋ ನೋಡಿಕೊಂಡು ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಇಲ್ಲಿಯವರೆಗೂ ಯಾವುದೇ ಆ ರೀತಿಯ ವಿವಾದ ಇಲ್ಲಿಗೆ ಬಂದಿಲ್ಲ. ಎಲ್ಲರೂ ಕೂಡ ಸೌಹಾರ್ದಯುತವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದೇವೆ ಎಂದರು. ಇದನ್ನೂ ಓದಿ: ಹಲಾಲ್ ಕಟ್, ಜಟ್ಕಾಕಟ್ ಫೈಟ್ ನಡುವೆಯೇ ಹೊಸ ತೊಡಕಿಗೆ ಮಾಂಸ ಖರೀದಿ ಜೋರು
ಚಿಕನ್ ಸ್ಟಾಲ್‍ಗಳು ಕೂಡ ಸಂಪೂರ್ಣ ಖಾಲಿ ಖಾಲಿಯಾಗಿವೆ. ಕೆಲ ಚಿಕನ್ ಅಂಗಡಿಗಳನ್ನು ಮುಚ್ಚಿದ್ದಾರೆ. ಪ್ರತಿವರ್ಷ ಕಾಲಿಡಲು ಕೂಡ ಜಾಗ ಇರುತ್ತಿರಲಿಲ್ಲ. ಆದರೆ ಈ ಬಾರಿ ಖಾಲಿ ಖಾಲಿಯಾಗಿದೆ. ನಾಳೆ ಏನಾದರೂ ವ್ಯಾಪಾರ ವಹಿವಾಟು ಆಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: 13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಬೆಂಗಳೂರು: ಯುಗಾದಿ ಹಬ್ಬದ ಹೊಸ ತೊಡಕಿನ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮಾಂಸ ಮಾರಾಟ ಜೋರಾಗಿದೆ. ಮಾಂಸದ ಮಳಿಗೆಗಳಲ್ಲಿ ಜನರ ದಂಡೇ ನೆರೆದಿದೆ. ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿವಾದದ ಮಧ್ಯೆಯೇ ಈ ಬಾರಿ ಮಾಂಸ ಮಾರಾಟ ಭರ್ಜರಿಯಾಗಿ ಸಾಗಿದೆ.
ಬೆಂಗಳೂರು, ಮೈಸೂರು, ತುಮಕೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಧ್ಯರಾತ್ರಿಯಿಂದಲೇ ಮಾಂಸ ಮಾರಾಟ ಅಂಗಡಿಗಳಲ್ಲಿ ಸಿದ್ಧತೆ ನಡೆದಿತ್ತು. ಬೆಳಗ್ಗೆ ಮಾಂಸದಂಗಡಿಗಳತ್ತ ಜನರ ದಂಡು ಬರಲಾರಂಭಿಸಿತು. ಸರತಿ ಸಾಲಿನಲ್ಲಿ ನಿಂತು ಮಾಂಸ ಖರೀದಿಗೆ ಮುಗಿಬಿದ್ದಿರುವ ದೃಶ್ಯ ಸಾಮಾನ್ಯವಾಗಿತ್ತು. ಇದನ್ನೂ ಓದಿ: ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ: ಗುಜರಾತ್ ಸಿಎಂ ಸಮರ್ಥನೆ
ಬೆಂಗಳೂರಿನ ಯಶವಂತ ಮಾರುಕಟ್ಟೆ, ಮೈಸೂರಿನ ಪಾಪಣ್ಣ ಮಟನ್ ಸ್ಟಾಲ್, ಕೆ.ಜಿ.ಕೊಪ್ಪಲಿನಲ್ಲಿ ಗುಡ್ಡೆ ಮಾಂಸ ಖರೀದಿ, ತುಮಕೂರಿನ ಹಿಂದೂ ಮೀಟ್ ಮಾರ್ಟ್ ಸೇರಿದಂತೆ ವಿವಿಧ ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳಲ್ಲಿ ಮಾಂಸ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಕೆಲ ಮಳಿಗೆಗಳಲ್ಲಿ ಹಲಾಲ್ ಕಟ್, ಜಟ್ಕಾ ಕಟ್ ಎಂಬ ಬೋರ್ಡ್‍ಗಳನ್ನೂ ಹಾಕಿದ್ದು, ಜಟ್ಕಾಕಟ್‍ಗೆ ಬೇಡಿಕೆ ಹೆಚ್ಚಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ನಿರಾಶೆಗೊಂಡಿದ್ದ ವ್ಯಾಪಾರಿಗಳ ಮೊಗದಲ್ಲೂ ಹರುಷ ತುಂಬಿದೆ. ಬರುವ ಗ್ರಾಹಕರಿಗೆ ಸಂತಸದಿಂದಲೇ ಮಾಂಸ ನೀಡಿ ಗಲ್ಲಾ ಪೆಟ್ಟಿಗೆ ತುಂಬಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಹನುಮ ಹುಟ್ಟಿದ ದಿನ ಗೊತ್ತಾ, ಸುಮ್ನೆ ತಿನ್ಲಾ- ಮಾಂಸಾಹಾರ ಭೋಜನ ಸವಿದ ಸಿದ್ದು
ದಾವಣಗೆರೆಯಲ್ಲಿ ವ್ಯಾಪಾರಿಗಳಿಗೆ ನಿರಾಶೆ
ಯುಗಾದಿ ಹಬ್ಬದಂದು ಚಂದ್ರದರ್ಶನವಾಗದ ಹಿನ್ನಲೆಯಲ್ಲಿ ದಾವಣೆಗೆರೆ ಜಿಲ್ಲೆಯ ಜನರು ಚಿಕನ್, ಮಟನ್ ಖರೀದಿಗೆ ನಿರುತ್ಸಾಹ ತೋರಿದ್ದಾರೆ. ಪ್ರತಿ ವರ್ಷ ಹೊಸ ತೊಡಕಿನ ಸಂದರ್ಭದಲ್ಲಿ ಕಾಲಿಡಲು ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿರುತ್ತಿತ್ತು. ಆದರೆ, ಇಂದು ಭಾನುವಾರವಾದರೂ ಮಾರುಕಟ್ಟೆ ಖಾಲಿ-ಖಾಲಿ ಹೊಡೆಯುತ್ತಿದೆ. ಇದರಿಂದ ಅಲಾಲ್ ಕಟ್, ಜಟ್ಕಾ ಕಟ್ ವಿವಾದ ಇಲ್ಲದಂತಾಗಿದೆ. ಚಂದ್ರದರ್ಶನವಾಗಿದ್ದರೆ ವ್ಯಾಪಾರ ಜಾತ್ರೆಯಂತಿರುತ್ತಿತ್ತು. ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಮಾಂಸ ಖರೀದಿಗೆ ಜನ ಹಿಂದೇಟು ಹಾಕಿದ್ದಾರೆ. ಮುಂದೆ ಎಲ್ಲರೂ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದೇ ರೀತಿ ನಾವು ವ್ಯಾಪಾರ ಮಾಡುತ್ತೇವೆ. ಎಲ್ಲರೂ ಸಾಮರಸ್ಯದಿಂದ ಹಳೇ ಪದ್ದತಿಯಲ್ಲೇ ವ್ಯಾಪಾರ ವಹಿವಾಟು ನಡೆಸುತ್ತೇವೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಸ್ಥರು.
ಬೆಂಗಳೂರು: ರೈತರ ಬದುಕಿನ ಮೇಲೆ ಗದಾಪ್ರಹಾರ ನಡೆಯುತ್ತಿದೆ. ಸಮಾಜದಲ್ಲಿ ಅಶಾಂತಿ ಮೂಡಿಸಲು, ರಾಜಕೀಯದ ಗುರಿ ಇಟ್ಟುಕೊಂಡು ಒಂದು ಧರ್ಮದ ಮೇಲೆ ಪ್ರಯೋಗ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸದಾಶಿವನಗರದ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಕಳೆದ ಕೆಲ ವರ್ಷಗಳಿಂದ ನಾವು ಕೋವಿಡ್‍ನಿಂದ ನರಳಿದ್ದೇವೆ. ಹೊಸ ವರ್ಷಕ್ಕೆ ಕಾಲಿಟ್ಟಿದ್ದು, ಎಲ್ಲರ ಬದುಕು ಆರೋಗ್ಯಕರವಾಗಿ ಉತ್ತಮವಾಗಲಿ. ವ್ಯಾಪಾರ-ವಹಿವಾಟು, ಶಿಕ್ಷಣ, ಉದ್ಯೋಗ, ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಕಳೆದುಕೊಂಡವರೆಲ್ಲರಿಗೂ ಈ ವರ್ಷ ಭಾಗ್ಯ ಮರುಕಳಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಇದನ್ನೂ ಓದಿ: ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ಮಗುವಿನ ನೆರವಿಗೆ ಬಂದ ರೈಲ್ವೆ ಅಧಿಕಾರಿಗಳು
ಕಳೆದ ಒಂದು ವಾರದಿಂದ ರೈತರ ಬದುಕಿನ ಮೇಲೆ ಗದಾಪ್ರಹಾರ ನಡೆಯುತ್ತಿದೆ. ಸಮಾಜದಲ್ಲಿ ಅಶಾಂತಿ ಮೂಡಿಸಲು, ರಾಜಕೀಯದ ಗುರಿ ಇಟ್ಟುಕೊಂಡು ಒಂದು ಧರ್ಮದ ಮೇಲೆ ಪ್ರಯೋಗ ನಡೆಸಲಾಗುತ್ತಿದೆ. ನಿನ್ನೆ ಪಶುಸಂಗೋಪನಾ ಇಲಾಖೆಯಿಂದ ಆದೇಶ ಹೊರಡಿಸಿ, ಪೊಲೀಸ್ ಹಾಗೂ ಇತರ ಅಧಿಕಾರಿಗಳು ಸೇರಿ ಕೋಳಿ, ಕುರಿ ವ್ಯಾಪಾರ ನಡೆಸುತ್ತಿರುವವರ ಮೇಲೆ ನಿಯಂತ್ರಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರು ಹಾಗೂ ಇತರ ಎಲ್ಲಾ ಕಡೆಗಳಲ್ಲಿ ಇನ್ನು ಮುಂದೆ ಮಾಂಸದ ವ್ಯಾಪಾರ ಮಾಡುವವರು ಪ್ರಾಣಿ ವಧೆ ಮಾಡುವ ಮುನ್ನ ಸ್ಟನ್ನಿಂಗ್ (ಪ್ರಜ್ಞೆ ತಪ್ಪಿಸುವ) ಮಾಡಬೇಕು. ಇನ್ನು ಮುಂದೆ ಎಲ್ಲ ವ್ಯಾಪಾರಿಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ವ್ಯವಸ್ಥೆ ಇದ್ದರಷ್ಟೇ ಇನ್ನು ಮುಂದೆ ಪರವಾನಗಿ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇಡೀ ರಾಜ್ಯದ ರೈತರು ಕೋಳಿ, ಕುರಿ, ಮೇಕೆಗಳನ್ನು ಸಾಕುತ್ತಾರೆ. ಅದು ಅನೇಕರ ಉಪ ಕಸುಬಾಗಿದೆ. ಮಾಂಸದ ವ್ಯಾಪಾರ ಮಾಡುವವರಿಗೆ ರೈತರು ತಾವು ಸಾಕಿದ ಕೋಳಿ, ಕುರಿಗಳನ್ನು ಮಾರಾಟ ಮಾಡುತ್ತಾರೆ. ಕೆಲವರು ಹಲಾಲ್ ಮಾಡುತ್ತಾರೆ. ಮತ್ತೆ ಕೆಲವರು ಹಲಾಲ್ ಮಾಡುವುದಿಲ್ಲ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದರು. ಇದನ್ನೂ ಓದಿ: RSS, ಬಿಜೆಪಿಯವರಿಗೆ ಯಾರೂ ಹೆದರಬೇಡಿ, ಕಾಂಗ್ರೆಸ್ ನಿಮ್ಮೊಂದಿಗಿದೆ: ಡಿಕೆಶಿ
ಈ ದೇಶದಲ್ಲಿ ಯಾರು ಹೇಗೆ ಬದುಕಬೇಕು, ಯಾರು ಏನನ್ನು ತಿನ್ನಬೇಕು ಎಂಬುದು ಸಾವಿರಾರು ವರ್ಷಗಳಿಂದ ಪರಂಪರೆಯಾಗಿ ನಡೆದುಕೊಂಡು ಬಂದಿದೆ. ಅವರೆಲ್ಲ ಅನಾದಿ ಕಾಲದಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆ ವಸ್ತುಗಳ ವಿನಿಮಯ ವ್ಯಾಪಾರ ಪದ್ಧತಿ ಕೂಡ ಇತ್ತು ಎಂದು ತಿಳಿಸಿದರು.
ರಾಜ್ಯದ ವಿವಿಧ ಕಡೆಗಳಿಂದ ರೈತರು ಕರೆ ಮಾಡಿ, ಸರ್ಕಾರದ ಈ ಆದೇಶದಿಂದ ನಮ್ಮ ಕುರಿ, ಕೋಳಿಗಳನ್ನು ಕೊಳ್ಳುವವರಿಲ್ಲದಂತಾಗಿದೆ. ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಒಂದು ಪಕ್ಷದ ಅಧ್ಯಕ್ಷನಾಗಿ ನೀವು ಯಾಕೆ ಸುಮ್ಮನೆ ಕೂತಿದ್ದೀರಿ ಅಂತ ಕೇಳುತ್ತಿದ್ದಾರೆ ಎಂದು ಹೇಳಿದರು.
ಹಳ್ಳಿಗಳಲ್ಲಿ ಪಶು ಸಂಗೋಪನೆ ಮಾಡಿ ಎಂದು ಉತ್ತೇಜನ ನೀಡಿದವರು ಯಾರು? ಆಂಧ್ರ ಪ್ರದೇಶದ ಗಡಿ ಪ್ರದೇಶದಲ್ಲಿ ಹೆಚ್ಚಾಗಿ ಇದನ್ನೇ ಅವಲಂಬಿಸಿದ್ದಾರೆ. ಈ ಕೋಳಿ, ಕುರಿಗಳು ಸರಿಯಾದ ಸಮಯಕ್ಕೆ ಮಾರಾಟವಾಗದಿದ್ದರೆ, ಅವುಗಳಿಗೆ ನಿತ್ಯ ಹಾಕುವ ಮೇವು, ಸಾಕಣೆ ಮಾಡುವವನಿಗೆ ಹೊರೆಯಾಗುತ್ತದೆ ಎಂದು ನುಡಿದರು.
ಬಟ್ಟೆ ಹೊಲಿಯುವವನು ಬಟ್ಟೆ ಹೊಲಿಯುತ್ತಾನೆ, ಮೊಟ್ಟೆ ಮಾರುವವನು ಮೊಟ್ಟೆ ಮಾರುತ್ತಾನೆ. ಹೀಗೆ ಒಬ್ಬೊಬ್ಬರು ಒಂದೊಂದು ವ್ಯಾಪಾರ ಮಾಡುತ್ತಿದ್ದಾರೆ. ಒಬ್ಬರು ತಮ್ಮ ವ್ಯಾಪಾರ ಬಿಟ್ಟು ಬೇರೆಯದನ್ನು ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಮ್ಮ ರೈತರು, ವರ್ತಕರು, ಅವರು ಯಾವುದೇ ಸಮುದಾಯದವರಿರಲಿ, ತಮ್ಮ ಬದುಕನ್ನು ಯಾವ ರೀತಿ ನಡೆಸಿಕೊಂಡು ಹೋಗುತ್ತಿದ್ದಾರೋ ಅದರಂತೆ ಸಾಗಲು ಸರ್ಕಾರ ಅವಕಾಶ ನೀಡಬೇಕು. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಇದನ್ನು ಹಾಳು ಮಾಡುವುದು ಬೇಡ. ಈ ಹೊಸ ತೊಡುಕು ಆಚರಣೆಯನ್ನು ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಮಾತನಾಡಿದರು.
ಹಲಾಲ್ ಕಟ್‍ಗೆ ಅವಕಾಶ ನೀಡಬಾರದು ಎಂದು ಕೆಲವು ಸಂಘಟನೆಗಳು ಆಗ್ರಹಿಸುತ್ತಿವೆ ಎಂಬ ಪ್ರಶ್ನೆಗೆ, ‘ಕೋಳಿ ಮತ್ತು ಕುರಿಗಳಿಗೆ ಪ್ರಜ್ಞೆ ತಪ್ಪಿಸಬೇಕಂತೆ. ಹೇಗೆ ತಪ್ಪಿಸಬೇಕು? ತಲೆಗೆ ಹೊಡೆದರೆ ಅವು ಸಾಯುವುದಿಲ್ಲವೇ? ಅದು ಹಿಂಸೆ ಅಲ್ಲವೇ? ಮಾಂಸ ವ್ಯಾಪಾರದಲ್ಲೂ ಅನೇಕ ಉಪ ವ್ಯಾಪಾರಗಳಿವೆ. ಇವು ಸಾಮಾಜಿಕವಾಗಿ ಬೆಸೆದುಕೊಂಡಿರುವ ವ್ಯಾಪಾರಗಳು. ನಾನು ಈ ವಿಚಾರದಲ್ಲಿ ಧ್ವನಿ ಎತ್ತದಿದ್ದರೆ ನನ್ನ ಸ್ಥಾನ ಹಾಗೂ ಜವಾಬ್ದಾರಿಗೆ ದ್ರೋಹ ಬಗೆದಂತಾಗುತ್ತದೆ. ಮುಖ್ಯಮಂತ್ರಿಗಳು ಸಂಜೆ ಒಳಗಾಗಿ ಉತ್ತರ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದರು.