Tag: meat

  • ಕತಾರ್‌ ಏರ್‌ವೇಸ್‌ ವಿಮಾನದಲ್ಲಿ ಸಸ್ಯಾಹಾರಿಗೆ ಮಾಂಸಾಹಾರ ನೀಡಿ ಯಡವಟ್ಟು – ಉಸಿರುಗಟ್ಟಿ ಪ್ರಯಾಣಿಕ ಸಾವು

    ಕತಾರ್‌ ಏರ್‌ವೇಸ್‌ ವಿಮಾನದಲ್ಲಿ ಸಸ್ಯಾಹಾರಿಗೆ ಮಾಂಸಾಹಾರ ನೀಡಿ ಯಡವಟ್ಟು – ಉಸಿರುಗಟ್ಟಿ ಪ್ರಯಾಣಿಕ ಸಾವು

    ಕೊಲೊಂಬೊ: ಕತಾರ್ ಏರ್‌ವೇಸ್ (Qatar Airways) ವಿಮಾನದಲ್ಲಿ 85 ವರ್ಷದ ಸಸ್ಯಾಹಾರಿ ಪ್ರಯಾಣಿಕನೊಬ್ಬ ಮಾಂಸಾಹಾರಿ ಊಟ ಸೇವಿಸಿ ನಂತರ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

    ದಕ್ಷಿಣ ಕ್ಯಾಲಿಫೋರ್ನಿಯಾದ ನಿವೃತ್ತ ಹೃದ್ರೋಗ ತಜ್ಞ ಡಾ. ಅಶೋಕ ಜಯವೀರ ಮೃತಪಟ್ಟ ಪ್ರಯಾಣಿಕ. ಲಾಸ್‌ ಏಂಜಲೀಸ್‌ನಿಂದ ಕೊಲಂಬೊಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಇವರು ಸಸ್ಯಹಾರಿ ಊಟವನ್ನು ಆರ್ಡರ್‌ ಮಾಡಿದ್ದರು. ಆದರೆ, ಅದ್ಯಾವುದೂ ಲಭ್ಯವಿಲ್ಲ ಎಂದು ವಿಮಾನ ಸಿಬ್ಬಂದಿ ತಿಳಿಸಿದರು. ಬಳಿಕ ಮಾಂಸಾಹಾರ ಊಟವನ್ನೇ ತಂದುಕೊಟ್ಟರು. ಅದನ್ನೇ ತಿನ್ನುವಂತೆ ಇತರೆ ಪ್ರಯಾಣಿಕರು ಸಲಹೆ ನೀಡಿದರು. ಇದನ್ನೂ ಓದಿ: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಘರ್ಷಣೆ; 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಸಾವು

    ಕೊನೆಗೆ ಮಾಂಸಾಹಾರ ಸೇವಿಸುವಾಗ ಪ್ರಯಾಣಿಕನಿಗೆ ಉಸಿರುಗಟ್ಟುವಂತಾಗಿದೆ. ಕೊನೆಗೆ ಪ್ರಜ್ಞೆ ಕಳೆದುಕೊಂಡರು. ಅವರನ್ನು ಎಚ್ಚರಿಸಲು ಪ್ರಯತ್ನಿಸಲಾಯಿತು. ಆದರೆ, ಪ್ರಯಾಣಿಕನ ಸ್ಥಿತಿ ಹದಗೆಟ್ಟಿತ್ತು. ವಿಮಾನವು ಅಂತಿಮವಾಗಿ ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಲ್ಲಿ ಇಳಿಯಿತು. ಅಲ್ಲಿ ಪ್ರಯಾಣಿಕನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಾಗಲೇ ವ್ಯಕ್ತಿ ಮೃತಪಟ್ಟಿದ್ದ. ಅವರು ಆಸ್ಪಿರೇಷನ್ ನ್ಯುಮೋನಿಯಾದಿಂದ ಕೊನೆಯುಸಿರೆಳೆದಿದ್ದಾರೆ.

    ಮೃತ ಪ್ರಯಾಣಿಕನ ಪುತ್ರ ಕತಾರ್‌ ಏರ್‌ವೇಸ್‌ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಊಟ ಮತ್ತು ವೈದ್ಯಕೀಯ ಸೇವೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿದ್ದಾರೆ. ವಿಮಾನಯಾನ ಸಂಸ್ಥೆಯು ಮೊದಲೇ ಆರ್ಡರ್ ಮಾಡಿದ ಸಸ್ಯಾಹಾರಿ ಊಟವನ್ನು ಒದಗಿಸಲು ವಿಫಲವಾಗಿದೆ. ಜಯವೀರ ಅವರ ವೈದ್ಯಕೀಯ ತುರ್ತುಸ್ಥಿತಿಗೆ ಸೂಕ್ತವಾಗಿ ಸ್ಪಂದಿಸಲಿಲ್ಲ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ. ಪರಿಹಾರಕ್ಕೂ ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ: ರಷ್ಯಾ ಮಿಲಿಟರಿ ಸೇರಿದ್ದ ಭಾರತ ಮೂಲದ ಸೈನಿಕ ಉಕ್ರೇನ್ ಸೇನೆ ಮುಂದೆ ಶರಣು

  • ಕೃಷ್ಣದೇವರಾಯನ ಸಮಾಧಿ ಮೇಲೆ ಮಾಂಸ ಮಾರಾಟ: ಯತ್ನಾಳ್‌ ಆಕ್ರೋಶ

    ಕೃಷ್ಣದೇವರಾಯನ ಸಮಾಧಿ ಮೇಲೆ ಮಾಂಸ ಮಾರಾಟ: ಯತ್ನಾಳ್‌ ಆಕ್ರೋಶ

    ಬೆಂಗಳೂರು: ವಿಜಯನಗರದ (Vijayanagara) ಪ್ರಖ್ಯಾತ ರಾಜ ಕೃಷ್ಣದೇವರಾಯ (krishnadevaraya) ಸಮಾಧಿ ಮೇಲೆ ಮಾಂಸ ಮಾರಾಟ ಮಾಡಿದ್ದಕ್ಕೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, ಇದು ಕನ್ನಡಿಗರಿಗಷ್ಟೇ ಅಲ್ಲ ರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ಬರೆದು ಸಿಟ್ಟು ಹೊರಹಾಕಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ಆಡಳಿತಗಾರರಾಗಿದ್ದ ವಿಜಯನಗರದ ಶ್ರೀ ಕೃಷ್ಣದೇವರಾಯರ ಸಮಾಧಿಯ ದುಸ್ಥಿತಿ ಇದು. ಈ ಜಾಗವನ್ನು ಅಕ್ಷರಶಃ ಮಾಂಸದ ಮಾರುಕಟ್ಟೆಯಾಗಿ ಕೆಲ ಸ್ಥಳೀಯರು ಪರಿವರ್ತಿಸಿರುವುದು ಕನ್ನಡ ನಾಡಿನ ಹೆಮ್ಮೆಯ ಅರಸರಾದ ಅಸಾಮಾನ್ಯ ಆಡಳಿತಗಾರ, ಅಪ್ರತಿಮ ದಂಡನಾಯಕ ಶ್ರೀ ಕೃಷ್ಣದೇವರಾಯರಿಗೆ ಮಾಡಿದ ಅವಮಾನ.

    ಹಿಂದೂ ದೇವಾಲಯಗಳನ್ನು ಕೆಡವಿ, ದೇಶದ ಸಂಪತ್ತನ್ನು ದೋಚಿ, ಸಾವಿರಾರು ಹಿಂದೂಗಳನ್ನು ಅಮಾನವೀಯಗಿ ಕೊಂದ ಔರಂಗಜೇಬನ ಸಮಾಧಿಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ [ASI] ತೆರಿಗೆದಾರರ ಹಣದಿಂದ ಸಂರಕ್ಷಣೆ ಮಾಡುತ್ತಿದೆ; ಆದರೆ, ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಪರಾಕ್ರಮಿ; ಕಲೆ,ಸಾಹಿತ್ಯ ರಂಗಗಳ ಪೋಷಕ ಶ್ರೀ ಕೃಷ್ಣದೇವರಾಯರ ಸಮಾಧಿಗೆ ಏಕೆ ಈ ರೀತಿಯಾದ ದಿವ್ಯ ನಿರ್ಲಕ್ಷ್ಯ ?

    ಇದು ಕನ್ನಡಿಗರಿಗಷ್ಟೇ ಅಲ್ಲ ರಾಷ್ಟ್ರಕ್ಕೆ ಮಾಡಿದ ಅವಮಾನ, ಮಾಂಸವನ್ನು ಮಾರುತ್ತ ಸ್ಥಳದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿರುವ ಇಂತವರನ್ನು ಜಿಲ್ಲಾಡಳಿತ ಕೂಡಲೇ ಜಾಗ ಖಾಲಿ ಮಾಡಲು ಸೂಚಿಸಬೇಕು ಹಾಗೂ ಇಲ್ಲಿ ನೈರ್ಮಲ್ಯ ಮತ್ತು ಸಮಾಧಿಯ ಪಾವಿತ್ರ್ಯತೆಯನ್ನು ಕಾಪಾಡುವ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಲಿ.

  • ಹಿಂದೂಗಳು ಹಲಾಲ್ ಮಾಂಸ ಸೇವನೆ ಬಿಡಿ, ಝಟ್ಕಾಗೆ ಆದ್ಯತೆ ನೀಡಿ: ಕೇಂದ್ರ ಸಚಿವ

    ಹಿಂದೂಗಳು ಹಲಾಲ್ ಮಾಂಸ ಸೇವನೆ ಬಿಡಿ, ಝಟ್ಕಾಗೆ ಆದ್ಯತೆ ನೀಡಿ: ಕೇಂದ್ರ ಸಚಿವ

    ಪಾಟ್ನಾ: ಹಿಂದೂಗಳು ಹಲಾಲ್ ಮಾಂಸವನ್ನು (Halal Meat) ತಿನ್ನುವುದನ್ನು ಬಿಟ್ಟುಬಿಡಬೇಕು ಮತ್ತು ಒಂದೇ ಏಟಿಗೆ ಕೊಲ್ಲಲ್ಪಡುವ ಪ್ರಾಣಿಗಳ ಮಾಂಸವಾದ ‘ಝಟ್ಕಾ’ವನ್ನು (Jhatka) ಮಾತ್ರ ಸೇವಿಸಬೇಕು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ (Giriraj Singh) ಭಾನುವಾರ ಹೇಳಿದ್ದಾರೆ.

    ಬಿಜೆಪಿಯ ಹಿರಿಯ ನಾಯಕರಾದ ಸಿಂಗ್ ತಮ್ಮ ಬೇಗುಸರಾಯ್ ಸಂಸದೀಯ ಕ್ಷೇತ್ರದಲ್ಲಿ ಜನರಲ್ಲಿ ಈ ಮನವಿ ಮಾಡಿದ್ದಾರೆ. ತಮ್ಮ ಹಿಂದೂ ಬೆಂಬಲಿಗರು ಹಲಾಲ್ ಮಾಂಸವನ್ನು ತಿನ್ನುವ ಮೂಲಕ ತಮ್ಮ ಧರ್ಮವನ್ನು ಹಾಳು ಮಾಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ತೆಗೆದುಕೊಳ್ಳುವಂತೆ ಮಾಡಿದ್ದಾರೆ.

    ಹಲಾಲ್ ಮಾಂಸವನ್ನು ಮಾತ್ರ ಸೇವಿಸುವ ಮುಸ್ಲಿಮರನ್ನು ನಾನು ಮೆಚ್ಚುತ್ತೇನೆ. ಈಗ ಹಿಂದೂಗಳು ಕೂಡಾ ತಮ್ಮದೇ ಆದ ಧಾರ್ಮಿಕ ಸಂಪ್ರದಾಯಗಳಿಗೆ ಇದೇ ರೀತಿಯ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಅವರು ಕರೆ ನೀಡಿದರು. ಇದನ್ನೂ ಓದಿ: ನಮ್ಮ ಮಠಾಧಿಪತಿಗಳ ಕೈಗೆ ಆಯುಧ ಕೊಡ್ಬೇಕು: ದಿಂಗಾಲೇಶ್ವರ ಸ್ವಾಮೀಜಿ

    ಹಿಂದೂಗಳು ಪ್ರಾಣಿ ವಧೆ ಮಾಡುವ ವಿಧಾನವೆಂದರೆ ಝಟ್ಕಾ. ಹಿಂದೂಗಳು ಪ್ರಾಣಿ ಬಲಿ ಮಾಡಿದಾಗಲೆಲ್ಲಾ ಅವರು ಒಂದೇ ಹೊಡೆತದಲ್ಲಿ ಮಾಡುತ್ತಾರೆ. ಹೀಗಾಗಿ ಅವರು ಹಲಾಲ್ ಮಾಂಸವನ್ನು ತಿನ್ನುವ ಮೂಲಕ ತಮ್ಮನ್ನು ತಾವು ಭ್ರಷ್ಟಗೊಳಿಸಬಾರದು. ಅವರು ಯಾವಾಗಲೂ ಜಟ್ಕಾಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

    ಕೆಲವು ವಾರಗಳ ಹಿಂದೆ ಸಿಂಗ್ ಅವರು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಸ್ಫೂರ್ತಿ ಪಡೆದು ಹಲಾಲ್ ಎಂದು ಲೇಬಲ್ ಮಾಡಿದ ಆಹಾರ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ಇಂದು ಜಿಲ್ಲಾ ಕೋರ್ಟ್‌ಗೆ ವರದಿ ಸಲ್ಲಿಕೆ

  • ಇಲ್ಲಿ ಯಾವ್ದೇ ಮೀನು ತಗೊಂಡ್ರೂ KG 99 ರೂ. ಮಾತ್ರ – ಚಿಕ್ಕಬಳ್ಳಾಪುರದಲ್ಲಿ ಮೀನು ಪ್ರಿಯರಿಗೆ ಬಂಪರ್‌

    ಇಲ್ಲಿ ಯಾವ್ದೇ ಮೀನು ತಗೊಂಡ್ರೂ KG 99 ರೂ. ಮಾತ್ರ – ಚಿಕ್ಕಬಳ್ಳಾಪುರದಲ್ಲಿ ಮೀನು ಪ್ರಿಯರಿಗೆ ಬಂಪರ್‌

    ಚಿಕ್ಕಬಳ್ಳಾಪುರ: ನಿನ್ನೆಯಷ್ಟೇ ಎಲ್ಲೆಡೆ ಗೌರಿ-ಗಣೇಶ ಹಬ್ಬವನ್ನು (Ganesha festival) ಸಂಭ್ರಮದಿಂದ ಆಚರಿಸಲಾಗಿದೆ. ಕೆಲವೆಡೆ ಮಂಗಳವಾರ (ಇಂದು) ಹಬ್ಬ ಆಚರಿಸಿದ್ರೆ, ಇನ್ನೂ ಕೆಲವೆಡೆ ಸೋಮವಾರವೇ ಹಬ್ಬ ಆಚರಿಸಿ ಮುಕ್ತಾಯಗೊಳಿಸಿದ್ದಾರೆ. ಗೌರಿ-ಗಣೇಶನ ಹಬ್ಬ ಮುಗಿದಿದ್ದೇ ತಡ ಇಂದು ಮಾಂಸಹಾರ (Meat) ಪ್ರಿಯರ ಕಣ್ಣು ಚಿಕನ್, ಮಟನ್, ಮೀನು ಆಹಾರ ಪದಾರ್ಥಗಳತ್ತ ಬಿದ್ದಿದೆ.

    ಚಿಕ್ಕಬಳ್ಳಾಪುರದಲ್ಲಿ (Chikkaballapura) ಮೀನು ಮಾರಾಟಗಾರನೊರ್ವ ಯಾವುದೇ ಮೀನು ತಗೊಂಡ್ರೂ 99 ರೂ. ಮಾತ್ರ ಅಂತ ಆಫರ್ ಕೊಟ್ಟಿದ್ದು ಮೀನು (Fish) ಖರೀದಿಗಾಗಿ ಜನ ಮುಗಿಬೀಳುತ್ತಿದ್ದಾರೆ. ಈ ಆಫರ್‌ ಇರುವುದು ಮಂಗಳವಾರ (ಇಂದು) ಮಾತ್ರ. ಇದನ್ನೂ ಓದಿ: ಹಿಂದೆ ಏನಾಯ್ತು ಅನ್ನೋದು ಮುಖ್ಯವಲ್ಲ, ಇಂದು ಏನಾಯ್ತು ಎಂಬುದು ಮುಖ್ಯ: ದಿನೇಶ್ ಗುಂಡೂರಾವ್

    ಹೌದು. ಶ್ರಾವಣ ಮಾಸ ಅದ್ರಲ್ಲೂ ಈ ಬಾರಿ ಆಧಿಕ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಮಾಂಸಹಾರ ಸೇವನೆಗೆ ಬ್ರೇಕ್ ಬಿದ್ದಿತ್ತು. ಈಗ ಗೌರಿ-ಗಣೇಶ ಹಬ್ಬ ಮುಗಿದಿದ್ದೇ ತಡ ನಾನ್‌ವೆಜ್‌ ಪ್ರಿಯರು ಮಾಂಸ ಪದಾರ್ಥಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಭೂಮಿ ಕಕ್ಷೆ ತೊರೆದ ಆದಿತ್ಯ ಎಲ್‌1 ನೌಕೆ – 110 ದಿನಗಳ ಸೂರ್ಯ ಯಾತ್ರೆ ಆರಂಭ

    ಚಿಕ್ಕಬಳ್ಳಾಪುರದ ಗುಡಿಬಂಡೆ ಅಮಾನಿ ಬೈರಸಾಗರ ಕೆರೆಯಲ್ಲಿ ಮೀನು ಸಾಕಾಣಿಕೆ ಗುತ್ತಿಗೆ ಪಡೆದಿರೋ ಬಿಲಾಲ್ ಕಡಿಮೆ ದರಕ್ಕೆ ಮೀನು ಮಾರಾಟ ಮಾಡುತ್ತಿದ್ದಾರೆ. ಪ್ರತಿ ದಿನ ಯಾವುದೇ ಮೀನಿಗೂ ಕೆಜಿಗೆ 150 ರೂ. ಮಾರಾಟ ಮಾಡ್ತಿದ್ದ ಬಿಲಾಲ್ ಇಂದು 99 ರೂ.ಗೆ ಆಫರ್‌ ಮಾಡಿದ್ದಾರೆ. ಬೈರಸಾಗರ ಕೆರೆಯ ಮೀನು ಅಂದ್ರೆ ಜನರಿಗೂ ಬಹಳ ಫೇವರೆಟ್ ಆಗಿರುವುದರಿಂದ ಮುಗಿಬಿದ್ದು ಖರೀದಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಂಸ ತರದ್ದಕ್ಕೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

    ಮಾಂಸ ತರದ್ದಕ್ಕೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

    ಲಕ್ನೋ: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಪತ್ನಿ ಬರ್ಬರ ಕೊಲೆ (Husband Murdered Wife) ಯಲ್ಲಿ ಅಂತ್ಯವಾದ ಘಟನೆ ಉತ್ತಪ್ರದೇಶದ ಆಲಿಘರ್ ಜಿಲ್ಲೆಯಲ್ಲಿ ನಡೆದಿದೆ.

    ಮೃತ ದುರ್ದೈವಿ ಪತ್ನಿಯನ್ನು ಗುಡ್ಡೋ(30) ಎಂದು ಗುರುತಿಸಲಾಗಿದೆ. ಈಕೆಯನ್ನು ಪತಿ ಸಾಗಿರ್ ಕೊಲೆಗೈದಿದ್ದಾನೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

    ಇಂದು (ಸೋಮವಾರ) ಮಾಂಸ (Meat) ತರದಿದ್ದಕ್ಕೆ ಪತಿ ಹಾಗೂ ಪತ್ನಿ ನಡುವೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಸಿಟ್ಟಿನಿಂದ ಸಾಗಿರ್, ಅಲ್ಲೇ ಇದ್ದ ಚಾಕು ತೆಗೆದುಕೊಂಡು ಮಕ್ಕಳ ಮುಂದೆಯೇ ಪತ್ನಿಯ ಕತ್ತು ಸೀಳಿದ್ದಾನೆ. ಇದನ್ನೂ ಓದಿ: ಗಂಡು ಮಗುವಾಗಿಲ್ಲವೆಂದು ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ

    ಇತ್ತ ಅಮ್ಮನನ್ನು ಕೊಲೆ ಮಾಡಿದ್ದರಿಂದ ಭಯಗೊಂಡ ಮಕ್ಕಳು ಜೋರಾಗಿ ಕಿರುಚಾಡಿವೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ಓಡಿಬಂದಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

    ಅಲ್ಲದೆ ಆರೋಪಿ ಸಾಗಿರ್ ನ ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಮೂವರು ಮಕ್ಕಳಲ್ಲಿ ಓರ್ವ ಮಗಳು, ಪೊಲೀಸರಿಗೆ ನಡೆದ ಘಟನೆಯನ್ನು ಎಳೆಎಳೆಯಾಗಿ ವಿವರಿಸಿದ್ದಾಳೆ.

    ಈ ಸಂಬಂಧ ಎಸ್‍ಪಿ ಕುಲ್ದೀಪ್ ಮಾತನಾಡಿ, ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೆ ಆತ ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದರು.

  • ಹೂವಿನ ಹಾರದಲ್ಲಿ ಮಾಂಸ ಬಚ್ಚಿಟ್ಟು ದೇವರಿಗೆ ಸಮರ್ಪಣೆ ಮಾಡಿದ ಕಿಡಿಗೇಡಿಗಳು

    ಹೂವಿನ ಹಾರದಲ್ಲಿ ಮಾಂಸ ಬಚ್ಚಿಟ್ಟು ದೇವರಿಗೆ ಸಮರ್ಪಣೆ ಮಾಡಿದ ಕಿಡಿಗೇಡಿಗಳು

    ಚಿಕ್ಕಬಳ್ಳಾಪುರ: ದೇವಾಲಯಕ್ಕೆ ಬಂದ ಅಪರಿಚಿತ ಕಿಡಿಗೇಡಿಗಳು ಹೂವಿನ ಹಾರದಲ್ಲಿ (Flower garland) ಮಾಂಸದ ತುಂಡುಗಳನ್ನು (Meat) ಬಚ್ಚಿಟ್ಟು, ದೇವರಿಗೆ ಸಮರ್ಪಿಸಲು ನೀಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮಧುರೆಯ ಇತಿಹಾಸ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನದಲ್ಲಿ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

    ಘಟನೆ ಕುರಿತು ಮಾಹಿತಿ ನೀಡಿರುವ ದೇವಾಲಯದ ಧರ್ಮದರ್ಶಿ ಪ್ರಕಾಶ್, ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದೆ. ಅಪರಿಚಿತ ಇಬ್ಬರು ಯುವಕರು ದೇವರ ದರ್ಶನಕ್ಕೆಂದು ಬಂದಿದ್ದು, ಪ್ಲಾಸ್ಟಿಕ್ ಕವರ್ ಅನ್ನು ದೇವಾಲಯದೊಳಕ್ಕೆ (Temple) ಕೊಂಡೊಯ್ಯಲು ಯತ್ನಿಸಿದ್ದಾರೆ. ದೇವಾಲಯದಲ್ಲಿ ಪೇಪರ್ ಹಾಗೂ ಪ್ಲಾಸ್ಟಿಕ್ ಒಳಗೊಂಡ ಹಾರಗಳನ್ನು ನಿಷೇಧಿಸಿರುವುದರಿಂದ ಅವನ್ನು ತೆಗೆದುಕೊಂಡು ಹೋಗದಂತೆ ಯುವಕರನ್ನು ತಡೆಯಲಾಗಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಅಕ್ರಮ ಆಸ್ತಿ ಆರೋಪ- IAS ಅಧಿಕಾರಿ ಆಸ್ತಿಯ Exclusive ಡೀಟೆಲ್ಸ್ ಇಲ್ಲಿದೆ

    ಬಳಿಕ ಕಿಡಿಗೇಡಿಗಳು ದೇವರಿಗೆ ಹೂವಿನ ಹಾರ ಹಾಕಿ ಎಂದು ಪ್ಲಾಸ್ಟಿಕ್ ಕವರ್‌ನಲ್ಲಿದ್ದ ಹಾರಗಳನ್ನು ದೇವಸ್ಥಾನದ ಸಿಬ್ಬಂದಿಗೆ ನೀಡಿದ್ದಾರೆ. ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕವರ್ ಪಡೆದ ಸಿಬ್ಬಂದಿ ದೇವರಿಗೆ ಹಾರ ಹಾಕಲೆಂದು ಗರ್ಭಗುಡಿಯೊಳಗೆ ತೆರಳುವಾಗ ಮಾಂಸದ ತುಂಡು ಹಾರದಿಂದ ಜಾರಿ ಕೆಳಗೆ ಬಿದ್ದಿದೆ. ತಕ್ಷಣ ಸಿಬ್ಬಂದಿ ಹೂವಿನ ಹಾರದ ಸಮೇತ ಕವರ್ ಅನ್ನು ಹೊರಗೆ ಎಸೆದಿದ್ದಾರೆ.

    ಕಿಡಿಗೇಡಿಗಳು ದೇವರಿಗೆ ಅಪಚಾರ ಮಾಡಲು ಈ ರೀತಿ ಕೃತ್ಯ ನಡೆಸಿದ್ದು, ಇದರ ಹಿಂದಿನ ಉದ್ದೇಶ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯುವಕರು ದೇವಾಲಯಕ್ಕೆ ಬಂದು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ದೇವಾಲಯದ ಸಿಬ್ಬಂದಿ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿಕೊಂಡು ಯುವಕರನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಇದನ್ನೂ ಓದಿ: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿಯಿಂದ ಹೆಂಡ್ತಿ, ಮಕ್ಕಳ ಕೊಲೆ?

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದತ್ತಪೀಠ ಹೋಮ ಮಾಡೋ ಜಾಗದಲ್ಲಿ ಮತ್ತೆ ಮಾಂಸದ ಅಡುಗೆ – ಹಿಂದೂಪರ ಸಂಘಟನೆ ಆಕ್ರೋಶ

    ದತ್ತಪೀಠ ಹೋಮ ಮಾಡೋ ಜಾಗದಲ್ಲಿ ಮತ್ತೆ ಮಾಂಸದ ಅಡುಗೆ – ಹಿಂದೂಪರ ಸಂಘಟನೆ ಆಕ್ರೋಶ

    ಚಿಕ್ಕಮಗಳೂರು: ತಾಲೂಕಿನಲ್ಲಿ ಹಿಂದೂ – ಮುಸ್ಲಿಮರ (Hindu Muslims) ಧಾರ್ಮಿಕ ಭಾವೈಕ್ಯದ ಕೇಂದ್ರವಾಗಿರುವ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ (Shri Guru Dattatreya Swamy Dattapita) ಪ್ರವಾಸಿಗರು ಮತ್ತೆ ಮಾಂಸ (Meat) ಬೇಯಿಸಿರುವ ವೀಡಿಯೋ ವೈರಲ್ ಆಗಿದ್ದು, ಹಿಂದೂಪರ ಸಂಘಟನೆ (Hindu Organizations) ಕಾರ್ಯಕರ್ತರು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಕಳೆದ ನಾಲ್ಕೈದು ತಿಂಗಳ ಹಿಂದೆಯೂ ದತ್ತಪೀಠದಲ್ಲಿ (Dattapita) ಬಿರಿಯಾನಿ (Biriyani) ತಯಾರಿಸಿ ಸೇವಿಸಿದ್ದರು. ಆಗಲೂ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಆಗ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿತ್ತು. ಇದೀಗ ದತ್ತಪೀಠಕ್ಕೆ ಬರುವ ಪ್ರವಾಸಿಗರು ದತ್ತ ಮಾಲಾಧಾರಣೆ ಹಾಗೂ ದತ್ತ ಜಯಂತಿಯ ವೇಳೆ ಹಿಂದೂ ಸಂಘಟನೆಗಳು ಹೋಮ-ಹವನ ನಡೆಸಲು ಸರ್ಕಾರವೇ ನಿರ್ಮಿಸಿರುವ ತಾತ್ಕಾಲಿಕ ಶೆಡ್ ನಲ್ಲಿ ಪುನಃ ಮಾಂಸವನ್ನ ಬೇಯಿಸಿದ್ದಾರೆ. ಇದೇ ಕೊನೆಯಾಗಬೇಕು. ಇನ್ಮುಂದೆ ಇಂತಹ ಘಟನೆ ನಡೆಯದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವೇ ಸೂಕ್ತ ತಕ್ಕ ಪಾಠ ಕಲಿಸುತ್ತೇವೆ ಎಂದು ಯುವ ಬ್ರಿಗೇಡ್ (Yuva Brigade) ಸಂಚಾಲಕ ಪ್ರವೀಣ್ ಖಾಂಡ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ 3ನೇ ಸಾಕಾನೆ ಶಿಬಿರ ಲೋಕಾರ್ಪಣೆ – ಹಾರಂಗಿ ವಿಶೇಷತೆ ಏನು?

    ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಹಿಂದೂ ಬ್ರಿಗೇಡ್ ಕಾರ್ಯಕರ್ತರು, ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಂಡಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಲೇ ಪ್ರವಾಸಿಗರು ಪುಣ್ಯಕ್ಷೇತ್ರದಲ್ಲಿ ಎಲ್ಲೆಂದರಲ್ಲಿ ಮಾಂಸ ಕಡಿದು, ಬೇಯಿಸುತ್ತಿದ್ದಾರೆ. ದತ್ತಪೀಠ ಪ್ರವಾಸಿಗರ ತಾಣವಲ್ಲ. ಪ್ರವಾಸಿ ತಾಣಗಳು ಬೇಕು ಅಂದ್ರೆ ಗಿರಿಶ್ರೇಣಿಯಲ್ಲಿ ಬೇರೆ ಸ್ಥಳಗಳಿವೆ. ಎರಡು ಕೋಮುಗಳು ಕೂಡ ದತ್ತಪೀಠವನ್ನ ಧಾರ್ಮಿಕ ಕ್ಷೇತ್ರ ಎಂದು ನಂಬಿವೆ. ಹೋಮ-ಹವನಕ್ಕೆ ಸರ್ಕಾರವೇ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿದೆ. ಅಲ್ಲಿ ಈ ರೀತಿ ಮಾಂಸ ಬೇಯಿಸಿದರೆ ಅದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಿದೆ. ಎಲ್ಲಿಂದಲೋ ಬರುವ ಪ್ರವಾಸಿಗರು ಯಾವುದ್ಯಾವುದೋ ಮಾಂಸವನ್ನ ತಂದು ಅಡಿಗೆ ಮಾಡಿ ಬಿಸಾಡಿ ಹೋಗುತ್ತಾರೆ. ಆದರೆ ಅಲ್ಲೇ ಇರುವ ಪೊಲೀಸರು ಏನ್ ಮಾಡುತ್ತಾರೋ ಗೊತ್ತಿಲ್ಲ ಎಂದು ಪೊಲಿಸರ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹೊಸ ಸಮವಸ್ತ್ರ ಪರಿಚಯಿಸಿದ ಭಾರತೀಯ ವಾಯುಪಡೆ

    ಮುಸ್ಲಿಮರು (Muslims) ನಮಾಜ್ ಮಾಡುವ 200 ಮೀಟರ್ ದೂರದಲ್ಲಿ ಬಹುಸಂಖ್ಯಾತ ಹಿಂದೂಗಳು ತಿನ್ನುವ ಪದಾರ್ಥವನ್ನ ತಿನ್ನುವುದಕ್ಕೆ ಬಿಡುತ್ತಾರಾ ಹಿಂದೂ ಬ್ರಿಗೇಡ್ ಪ್ರಶ್ನಿಸಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಡಳಿತ ಅಲ್ಲಿ ಬ್ಯಾರಿಕೇಡ್ ಹಾಕಿ, ಶೆಡ್‌ಗೆ ಬಂದೋಬಸ್ತ್ ಮಾಡಿದೆ. ಆದರೆ ಇದು ಕಣ್ಣೋರೆಸುವ ತಂತ್ರ. ಇನ್ಮುಂದೆ ಹೀಗಾದರೆ ಉತ್ತರ ಕೊಡೋದಕ್ಕೆ ನಾವು ಸಿದ್ಧ ಎಂದು ಎಚ್ಚರಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮಧ್ಯಾಹ್ನ ಮಾಂಸಾಹಾರ ತಿಂದು ಸಂಜೆ ದೇವಸ್ಥಾನಕ್ಕೆ ಹೋಗಬಾರದಾ : ಸಿದ್ದರಾಮಯ್ಯ ಪ್ರಶ್ನೆ

    ಮಧ್ಯಾಹ್ನ ಮಾಂಸಾಹಾರ ತಿಂದು ಸಂಜೆ ದೇವಸ್ಥಾನಕ್ಕೆ ಹೋಗಬಾರದಾ : ಸಿದ್ದರಾಮಯ್ಯ ಪ್ರಶ್ನೆ

    ಚಿಕ್ಕಬಳ್ಳಾಪುರ: ಇಂದು ಮಾಂಸಹಾರ ತಿಂದು ನಾಳೆ ದೇವಾಲಯಕ್ಕೆ ಹೋಗಬಹುದಾ? ಮಧ್ಯಾಹ್ನ ಮಂಸಾಹಾರ ತಿಂದು ಸಂಜೆ ಹೋಗಬಾರದಾ? ನಾನು ಯಾರಿಗೂ ಭಯಪಡಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

    ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಪ್ರಯುಕ್ತ ಶೋಷಿತ ಸಮುದಾಯಗಳ ಅಭಿವೃದ್ಧಿ ಟ್ರಸ್ಟ್ ವತಿಯಿಂದ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.

    ಈ ಸಂದರ್ಭದಲ್ಲಿ ಮಾಂಸಾಹಾರ ಸೇವಿಸಿ ಕೊಡಗಿನ ದೇವಸ್ಥಾನಕ್ಕೆ ಭೇಟಿ ನೀಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಊಟ ಮಾಡಿದ್ದು ಸುದರ್ಶನ್ ಗೆಸ್ಟ್ ಹೌಸ್‌ನಲ್ಲಿ. ಸಾಯಂಕಾಲ ಹೋಗುವಾಗ ದೇವಾಲಯಕ್ಕೆ ಹೋಗಿದ್ದೇನೆ. ದೇವರು ಇಂತಹದ್ದೆ ತಿನ್ನು ಅಂತ ಹೇಳಿದ್ದಾರಾ? ಬಿಜೆಪಿಯವರಿಗೆ ಮೊಸರಲ್ಲಿ ಕಲ್ಲು ಹುಡುಕಿ ಬೆಂಕಿ ಹಾಕುವುದೇ ಕೆಲಸ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮಧ್ಯಾಹ್ನ ನಾಟಿ ಕೋಳಿ ಊಟ ಮಾಡಿ ಸಂಜೆ ದೇವಸ್ಥಾನಕ್ಕೆ ಭೇಟಿ ಕೊಟ್ರಾ ಸಿದ್ದರಾಮಯ್ಯ?

    ಸಂಪತ್ ಪಕ್ಕಾ ಆರ್ ಎಸ್ ಎಸ್ ಕಾರ್ಯಕರ್ತ. ಅವನ ಕೈಯಲ್ಲಿ ಬಲವಂತವಾಗಿ ಕಾಂಗ್ರೆಸ್ ಕಾರ್ಯಕರ್ತ ಅಂತ ಹೇಳಿಸಿದ್ದಾರೆ. ಜಿ ವಿಜಯಾ ಅವನು ಯಾರು? ಗೊತ್ತಿಲ್ಲ ಅಂತಾನೆ. ನೋಡೇ ಇಲ್ಲ ಅಂತಾನೆ. ನಾನು ಪ್ರವಾಹ ಪರಿಸ್ಥಿತಿ ಹಾನಿ ನೋಡಲು ಹೋಗಿದ್ದು. ಇದಕ್ಕೆ ತಡೆ ಒಡ್ಡಿದ್ದು ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಹಿಂದೂ ಕಾರ್ಯಕರ್ತರು. ಇದು ಸರ್ಕಾರಿ ಪ್ರಾಯೋಜಿತ ತಡೆ ಎಂದು ವಾಗ್ದಾಳಿ ನಡೆಸಿದರು.

    ಟಿಪ್ಪುವನ್ನು ಈಗ ಬಿಜೆಪಿಯವರು ಬಹಳ ವಿರೋಧ ಮಾಡುತ್ತಿದ್ದಾರೆ. ಹಿಂದೆ ಯಡಿಯೂರಪ್ಪ ಏನ್ ಮಾಡಿದ್ರು ಮಾತಾಡಿದ್ರು ಗೊತ್ತಾ? ಜಗದೀಶ್ ಶೆಟ್ಟರ್ ಏನ್ ಹೇಳಿದ್ದಾರೆ ಗೊತ್ತಾ? ಆಗ ಬಿಜೆಪಿ ಯವರಿಗೆ ಟಿಪ್ಪು ಒಳ್ಳೆಯವನು ಆಗಿದ್ನಾ? ಟಿಪ್ಪು ಪೇಟಾ ಹಾಕ್ಕೊಂಡು ಕತ್ತಿ ಹಿಡ್ಕೊಂಡು ಪೋಸ್ ಕೊಡಲಿಲ್ವಾ? ಆಗ ಶೋಭ ಕರಂದ್ಲಾಜೆ ಜೊತೆಯಲ್ಲಿ ಇದ್ರಲ್ಲ ಎಂದು ಹೇಳಿ ಕಮಲ ನಾಯಕರನ್ನು ಟೀಕಿಸಿದರು.

    Live Tv
    [brid partner=56869869 player=32851 video=960834 autoplay=true]

  • ದೇವಸ್ಥಾನದ ಬಳಿ ಅನುಮಾನಾಸ್ಪದ ಮಾಂಸ ಪತ್ತೆ – ವ್ಯಕ್ತಿ ಅರೆಸ್ಟ್

    ದೇವಸ್ಥಾನದ ಬಳಿ ಅನುಮಾನಾಸ್ಪದ ಮಾಂಸ ಪತ್ತೆ – ವ್ಯಕ್ತಿ ಅರೆಸ್ಟ್

    ಗಾಂಧೀನಗರ: ನಗರದ ಇಸಾನ್‍ಪುರ ಪ್ರದೇಶದಲ್ಲಿರುವ ದೇವಸ್ಥಾನದ ರಸ್ತೆ ಬಳಿ ಪ್ರಾಣಿಗಳ ಮಾಂಸ ಪತ್ತೆಯಾದ ಹಿನ್ನೆಲೆ ಅಹಮದಾಬಾದ್ ಪೊಲೀಸರು 25 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

    ಪ್ರಾಣಿಗಳ ಮಾಂಸ ಪತ್ತೆಯಾದ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಸ್ಥಳೀಯ ನಿವಾಸಿಗಳು ಪ್ರಾಣಿಗಳನ್ನು ಕೊಂದವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು ಹಾಗೂ ಹಿಂದೂ ಸಂಘಟನೆಗಳು ಕೂಡ ಈ ಪ್ರದೇಶದಲ್ಲಿ ಬಂದ್‍ಗೆ ಕರೆ ನೀಡಿದ್ದವು. ಇದನ್ನೂ ಓದಿ: ನನ್ನ ಪತ್ನಿ ಜೊತೆ ಮಾತನಾಡಬೇಡ ಅಂದಿದ್ದಕ್ಕೆ ಕ್ರಿಕೆಟ್ ಬ್ಯಾಟ್, ವಿಕೇಟ್‍ನಿಂದ ಹೊಡೆದು ಕೊಲೆಗೈದ್ರು

    ಹೀಗಾಗಿ ಈ ಘಟನೆ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ನಂತರ ಈ ಪ್ರದೇಶದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನನು ಪರಿಶೀಲಿಸಿ, ಅದರ ಆಧಾರದ ಮೇಲೆ ಅಹಮದಾಬಾದ್ ಕ್ರೈಂ ಬ್ರಾಂಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಫೈಜಾನ್ ಶೇಖ್ ಎಂಬಾತನನ್ನು ಬಂಧಿಸಿದ್ದಾರೆ.

    ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯ ವಿಭಾಗದ (ಎಫ್‍ಎಸ್‍ಎಲ್) ವರದಿಗಾಗಿ ಮಾಂಸದ ಮಾದರಿಯನ್ನು ಕಳುಹಿಸಿದ್ದಾರೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಇದನ್ನೂ ಓದಿ: ವಿಶ್ವದ ದೊಡ್ಡಣ್ಣನಿಗೆ ಸೆಡ್ಡು ಹೊಡೆದ ಚೀನಾ: ಅಮೆರಿಕದ ಹೌಸ್ ಆಫ್ ಸ್ಪೀಕರ್‌ಗೆ ನಿರ್ಬಂಧ

    ಈ ಕುರಿತಂತೆ ವಿಚಾರಣೆ ವೇಳೆ ಆರೋಪಿ ರಸ್ತೆಯಲ್ಲಿ ಬಿದ್ದಿದ್ದ ಮಾಂಸವನ್ನು ನಾನು ಬೇರೆಡೆಗೆ ಸಾಗಿಸುತ್ತಿದ್ದೆ. ಆದರೆ ಈ ವೇಳೆ ಜನರು ಹಲ್ಲೆ ನಡೆಸಲು ಮುಂದಾದಾಗ ಹೆದರಿಕೊಂಡು ಕೆಳಗೆ ಬಿದ್ದಿದ್ದ ಮಾಂಸದ ತುಂಡುಗಳನ್ನು ಎತ್ತುವುದನ್ನು ನಿಲ್ಲಿಸಿ ಸ್ಥಳದಿಂದ ಪರಾರಿಯಾದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಸದ್ಯ ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 100% ಮಿಲ್ಟ್ರಿ ಹೋಟೆಲ್ ತರ ‘ತಲೆ ಮಾಂಸದ ಸಾರು’ ಮಾಡುವ ವಿಧಾನ

    100% ಮಿಲ್ಟ್ರಿ ಹೋಟೆಲ್ ತರ ‘ತಲೆ ಮಾಂಸದ ಸಾರು’ ಮಾಡುವ ವಿಧಾನ

    ಒಂದೇ ಶೈಲಿಯ ನಾನ್‍ವೆಜ್ ಮಸಾಲೆ ತಿದ್ದು ಬೋರ್ ಆಗಿದ್ರೆ, ಇಂದು ನಾವು ಹೇಳಿಕೊಡುವ ರೆಸಿಪಿ ಟ್ರೈ ಮಾಡಿ. ಏಕೆಂದರೆ ಈ ರೆಸಿಪಿ ಸಿಂಪಲ್ ಆಗಿದ್ದು, ಮಿಲ್ಟ್ರಿ ಹೋಟೆಲ್ ಶೈಲಿಯಲ್ಲಿಯೇ ನ್ಯಾಚುರಲ್ ಆಗಿ ಇರುತ್ತೆ.

    ಬೇಕಾಗಿರುವ ಪದಾರ್ಥಗಳು:
    * ಮೇಕೆ ತಲೆ – 1 ಕೆಜಿ
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    * ಲವಂಗ – 2-3
    * ಮೊಸರು – 1 ಕಪ್
    * ಜೀರಿಗೆ ಪುಡಿ – 1ವರೆ ಟೀಸ್ಪೂನ್


    * ಮೆಣಸಿನ ಪುಡಿ – 1 ಟೀಸ್ಪೂನ್
    * ಅರಿಶಿನ ಪುಡಿ – 2ವರೆ ಟೀಸ್ಪೂನ್
    * ತುಪ್ಪ – 2 ಟೀಸ್ಪೂನ್
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಗರಂ ಮಸಾಲಾ – 1 ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೇಕೆ ಮಾಂಸದ ತಲೆಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ.
    * ಸಣ್ಣ ಬಟ್ಟಲಿನಲ್ಲಿ, ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಮೆಣಸಿನ ಪುಡಿ, ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ಮೇಕೆ ಮಾಂಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕನಿಷ್ಠ 30 ನಿಮಿಷಗಳ ಕಾಲ ಬಿಡಿ.
    * ನಂತರ ಇಂದು ಬಾಣಲೆಗೆ ತುಪ್ಪವನ್ನು ಹಾಕಿ ಅದು ಕರಗಿದ ನಂತರ, ಈರುಳ್ಳಿ ಸೇರಿಸಿ ಗೋಲ್ಡನ್ ಬಣ್ಣ ಬರುವವರೆಗೂ ಫ್ರೈ ಮಾಡಿ.
    * ಅದಕ್ಕೆ ಮಸಾಲೆಯುಕ್ತ ಮೇಕೆ ಮಾಂಸದ ತಲೆಯನ್ನು ಸೇರಿಸಿ ನೀರು ಹಾಕಿ. 35 ನಿಮಿಷಗಳ ಕಾಲ ಕುಕ್ ಮಾಡಿ.
    * ಗರಂ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಚೆನ್ನಾಗಿ ಕುದಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

    – ನಿಮ್ಮ ನೆಚ್ಚಿನ ‘ತಲೆ ಮಾಂಸದ ಸಾರು’ ಬಡಿಸಲು ಸಿದ್ಧವಾಗಿದ್ದು, ಮುದ್ದೆ, ಅನ್ನ, ರೊಟ್ಟಿ ಜೊತೆ ಬಡಿಸಿ.

     

    Live Tv
    [brid partner=56869869 player=32851 video=960834 autoplay=true]