Tag: meal

  • ಟ್ರೈನ್‌ನಲ್ಲೂ ಸವಿಯಬಹುದು ಹಬ್ಬದೂಟ – ನವರಾತ್ರಿ ಹಿನ್ನೆಲೆ ರೈಲ್ವೆಯಿಂದ ಸ್ಪೆಷಲ್ ಮೆನು

    ಟ್ರೈನ್‌ನಲ್ಲೂ ಸವಿಯಬಹುದು ಹಬ್ಬದೂಟ – ನವರಾತ್ರಿ ಹಿನ್ನೆಲೆ ರೈಲ್ವೆಯಿಂದ ಸ್ಪೆಷಲ್ ಮೆನು

    ನವದೆಹಲಿ: ಇಂದಿನಿಂದ ನವರಾತ್ರಿ (Navratri) ಹಬ್ಬ ಪ್ರಾರಂಭವಾಗಿದೆ. ದೇಶದ್ಯಾಂತ ಅದ್ದೂರಿಯಾಗಿ, ಸಂಭ್ರಮದಿಂದ ದಸರಾ (Dasara) ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಭಾರತೀಯ ರೈಲ್ವೆ (Indian Railway) ಕೂಡಾ ಈ ಅವಧಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವಿಶೇಷ ಊಟ (Meal) ನೀಡಲು ನಿರ್ಧರಿಸಿದೆ.

    ನವರಾತ್ರಿ ಹಿನ್ನೆಲೆ 9 ದಿನಗಳ ಕಾಲ ಭಾರತೀಯ ರೈಲ್ವೆಯಲ್ಲಿ ವಿಶೇಷ ಊಟದ ಮೆನು ಇರಲಿದ್ದು, ರೈಲಿನಲ್ಲೂ ಹಬ್ಬದ ಊಟ ಸವಿಯಬಹುದು ಎಂದು ಭಾರತೀಯ ರೈಲ್ವೆ ಟ್ವೀಟ್ ಮಾಡಿದೆ. ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ಮಾತ್ರ ಈ ಸ್ಪೆಷಲ್ ಮೆನು ಇರಲಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಫುಡ್ ಆನ್ ಟ್ರ‍್ಯಾಕ್ ಅಪ್ಲಿಕೇಶನ್, irctc.co.in ಅಥವಾ 1323 ಗೆ ಕರೆ ಮಾಡಿ ವಿಶೇಷ ಮೆನುವನ್ನು ಆರ್ಡರ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಈ ಪ್ರಕಟಣೆಯಲ್ಲಿ ರೈಲ್ವೆ ಇಲಾಖೆ ವಿಶೇಷ ಥಾಲಿಯ ಫೋಟೋವನ್ನೂ ಲಗತ್ತಿಸಿದೆ. ಇದನ್ನೂ ಓದಿ: ಹೊಸ ರಾಜಕೀಯ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಅಜಾದ್

    Live Tv
    [brid partner=56869869 player=32851 video=960834 autoplay=true]

  • ಮಗಳ ನಿಶ್ಚಿತಾರ್ಥದ ಊಟಕ್ಕೆ ಮನೆಯಲ್ಲಿ ಸಾಕಿದ್ದ ಹಸುವೇ ಬಲಿ

    ಮಗಳ ನಿಶ್ಚಿತಾರ್ಥದ ಊಟಕ್ಕೆ ಮನೆಯಲ್ಲಿ ಸಾಕಿದ್ದ ಹಸುವೇ ಬಲಿ

    ಚಿಕ್ಕಮಗಳೂರು: ಮಗಳ ನಿಶ್ಚಿತಾರ್ಥಕ್ಕೆ(Daughter’s Engagement) ಆಗಮಿಸುವ ಹುಡುಗನ ಕಡೆಯವರು, ಸ್ನೇಹಿತರು ಹಾಗೂ ಸಂಬಂಧಿಕರ ಊಟಕ್ಕೆ ಮನೆಯಲ್ಲಿ ಸಾಕಿದ್ದ ಹಸುವನ್ನೇ(Cow) ಕಡಿದ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಈಚಿಕೆರೆ ಗ್ರಾಮದಲ್ಲಿ ನಡೆದಿದೆ.

    ಈಚಿಕೆರೆಯ ರೋಷನ್ ಮನೆಯ ಹಿಂಭಾಗದ ಶೆಡ್‌ನಲ್ಲಿ ಹಸುವನ್ನು ಕಡಿಯುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಎನ್.ಆರ್.ಪುರ ಪಿಎಸ್ಐ ದಿಲೀಪ್‌ ಹಾಗೂ ಸಿಬ್ಬಂದಿ ಶಂಕರ್, ಆನಂದ್ ಹಾಗೂ ರಾಜೇಶ್ ದಾಳಿ ಮಾಡಿದ್ದರು. ಇದನ್ನೂ ಓದಿ: ನೈತಿಕ ಪೊಲೀಸ್‍ಗಿರಿಗೆ ಯುವತಿ ಬಲಿ: ತಲೆ ಕೂದಲು ಕತ್ತರಿಸಿ, ಹಿಜಬ್ ಸುಟ್ಟು ಇರಾನಿ ಮಹಿಳೆಯರ ಆಕ್ರೋಶ

    ಸ್ಥಳದಲ್ಲಿ ಐವರು ದನದ ಮಾಂಸವನ್ನು ಕಡಿಯುತ್ತಿರುವುದು ಕಂಡು ಬಂದಿತ್ತು. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು ಚಾಲ್ಸ್ ಹಾಗೂ ಜಿಜೋ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನು ಕರೆದೊಯ್ದು ವಿಚಾರಣೆ ನಡೆಸಿದಾಗ ರೋಷನ್ ಮಗಳ ನಿಶ್ಚಿತಾರ್ಥದ ಮಾಂಸ ಊಟಕ್ಕೆ ಹಸುವನ್ನು ಕಡಿಯುತ್ತಿದ್ದೆವು ಒಪ್ಪಿಕೊಂಡಿದ್ದಾರೆ.

    ಬಂಧಿತ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ(Judicial Custody) ಒಳಪಡಿಸಲಾಗಿದ್ದು, ತಲೆಮರೆಸಿಕೊಂಡಿರುವ ಮೂವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆ ಮನೆಯಲ್ಲಿ ವಿಷಪೂರಿತ ಆಹಾರ ಸೇವಿಸಿ 17 ಮಂದಿ ಅಸ್ವಸ್ಥ

    ಮದುವೆ ಮನೆಯಲ್ಲಿ ವಿಷಪೂರಿತ ಆಹಾರ ಸೇವಿಸಿ 17 ಮಂದಿ ಅಸ್ವಸ್ಥ

    ತೆಲಂಗಾಣ: ವಿವಾಹ ಸಮಾರಂಭವೊಂದರಲ್ಲಿ ವಿಷಪೂರಿತ ಆಹಾರ ಸೇವಿಸಿ 17 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ನಡೆದಿದೆ.

    ಸದ್ಯ ಅಸ್ವಸ್ಥರು ಮಂಡಪೇಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯೆ ಪ್ರಿಯಾಂಕಾ ತಿಳಿಸಿದ್ದಾರೆ.  ಇದನ್ನೂ ಓದಿ: 100 ಲೋನ್ ಆ್ಯಪ್‍ಗಳಿಂದ 500 ಕೋಟಿ ರೂ. ವ್ಯವಹಾರ – ಗ್ರಾಹಕರ ಮಾಹಿತಿ ಚೀನಾಗೆ ರವಾನಿಸಿದ ಗ್ಯಾಂಗ್ ಅರೆಸ್ಟ್

    ಇದೀಗ ಮದುವೆ ಸಮಾರಂಭದಲ್ಲಿ ಫುಡ್ ಪಾಯ್ಸನ್‍ಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಇದನ್ನೂ ಓದಿ: ಭಾರತದೊಂದಿಗಿನ ಶಾಶ್ವತ ಶಾಂತಿಗೆ ಯುದ್ಧವೊಂದೇ ಆಯ್ಕೆಯಾಗಿಲ್ಲ: ಪಾಕ್ ಪ್ರಧಾನಿ

    Live Tv
    [brid partner=56869869 player=32851 video=960834 autoplay=true]

  • ಫ್ರೈಡ್‍ ರೈಸ್‍ನಲ್ಲಿ ಜಿರಳೆ ಪತ್ತೆ- ಈರುಳ್ಳಿ ಎಂದ ಸಿಬ್ಬಂದಿ

    ಫ್ರೈಡ್‍ ರೈಸ್‍ನಲ್ಲಿ ಜಿರಳೆ ಪತ್ತೆ- ಈರುಳ್ಳಿ ಎಂದ ಸಿಬ್ಬಂದಿ

    ಚಂಡೀಗಢ: ಮಾಲ್‍ವೊಂದರ ಫುಡ್ ಕೋರ್ಟ್‍ನಲ್ಲಿ ಗ್ರಾಹಕರೊಬ್ಬರು ತೆಗೆದುಕೊಂಡಿದ್ದ ಊಟದಲ್ಲಿ ಜಿರಳೆ ಸಿಕ್ಕ ಘಟನೆ ಚಂಡೀಗಢದಲ್ಲಿ ನಡೆದಿದೆ.

    ಮೌಲಿ ಕಾಂಪ್ಲೆಕ್ಸ್‌ನ ನಿವಾಸಿ ಅನಿಲ್ ಕುಮಾರ್ ತಮ್ಮ ಪತ್ನಿ ಹಾಗೂ ಸಹೋದರಿಯೊಂದಿಗೆ ಊಟ ಮಾಡಲು ಬಂದಿದ್ದರು. ಅಲ್ಲಿಯ ಅಂಗಡಿಯೊಂದರಲ್ಲಿ ಫ್ರೈಡ್ ರೈಸ್ ಅನ್ನು ಆರ್ಡರ್ ಮಾಡಿದ್ದಾರೆ. ಇದಾದ ಬಳಿಕ ಫ್ರೈಡ್ ರೈಸ್ ತಿನ್ನುವಾಗ ಜಿರಳೆ ಇರುವುದನ್ನು ನೋಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ರಚನೆ ಜಾರಿಗೆ ತರೋದು ಸರ್ಕಾರಕ್ಕೆ ಬಿಟ್ಟಿದ್ದು: ಟಿ.ಎಸ್. ನಾಗಾಭರಣ

    ಇದರಿಂದ ಭಯಭೀತರಾದ ಅವರು ರೆಸ್ಟೋರೆಂಟ್ ಸಿಬ್ಬಂದಿಗೆ ತೋರಿಸಿದ್ದಾರೆ. ಇದನ್ನು ನೋಡಿದ ಆ ಸಿಬ್ಬಂದಿ ಅದು ಈರುಳ್ಳಿ ಎಂದು ಅವರ ಬಳಿಯೇ ವಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಪೊಲೀಸರಿಗೆ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ರೆಸ್ಟೋರೆಂಟ್ ಮತ್ತು ಮಾಲ್ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನಿಲ್‌ ಕುಮಾರ್‌ ಪೊಲೀಸರಿಗೆ ದೂರು ನೀಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಲಂಕಾ ಅಧ್ಯಕ್ಷರ ನಿವಾಸದಲ್ಲಿ ದೊರೆತ ಹಣ ನ್ಯಾಯಾಲಯಕ್ಕೆ ಸಲ್ಲಿಕೆ

    Live Tv
    [brid partner=56869869 player=32851 video=960834 autoplay=true]

  • ಊಟದ ಬಿಲ್ ಕೇಳಿದ್ದಕ್ಕೆ ಬಾಟಲ್‍ನಿಂದ ತಲೆಗೆ ಹೊಡೆದ್ರು – ಅಧಿಕಾರದ ಮದದಿಂದ ಡಾಬಾ ಧ್ವಂಸ

    ಊಟದ ಬಿಲ್ ಕೇಳಿದ್ದಕ್ಕೆ ಬಾಟಲ್‍ನಿಂದ ತಲೆಗೆ ಹೊಡೆದ್ರು – ಅಧಿಕಾರದ ಮದದಿಂದ ಡಾಬಾ ಧ್ವಂಸ

    ಗದಗ: ಊಟದ ಬಿಲ್ ಕೇಳಿದಕ್ಕೆ ಕುಡಿದ ಮತ್ತಿನಲ್ಲಿ 6 ಜನ ಪುಂಡರು ಡಾಬಾ ಪೀಠೋಪಕರಣ ಧ್ವಂಸ ಮಾಡಿರುವ ಘಟನೆ ಜಿಲ್ಲೆ ಗಜೇಂದ್ರಗಡ ತಾಲೂಕಿನ ಬೆವಿನಕಟ್ಟಿ ಬಳಿ ನಡೆದಿದೆ.

    ಶ್ರೀಶೈಲ ಕಳ್ಳಿಮಠ ಎಂಬವರಿಗೆ ಸೇರಿದ ಲಕ್ಕಿ ಡಾಬಾ ಪೀಸ್, ಪೀಸ್ ಆಗಿದೆ. ಮುಶಿಗೇರಿ ಗ್ರಾಮದ ಅರವಿಂದ್ ಅಂಗಡಿ ಹಾಗೂ ಸ್ನೇಹಿತರು ಸೇರಿ ದಾಂಧಲೆ ಮಾಡಿದ್ದಾರೆ. ಅರವಿಂದ್ ಅಂಗಡಿ ಬಾಗಲಕೋಟೆ ನವನಗರ ಠಾಣೆ ಪ್ರೋಫೆಷನಲ್ ಪಿಎಸ್ ಆಗಿ ಕೆಲಸ ಮಾಡುತ್ತಿದ್ದು, ಇವರ ಜೊತೆ ಆರ್ಮಿ ಯುವಕರು ಸಹ ಇದ್ದರು. ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ಹೋಟೆಲ್‌ಗೆ ಹೋಗಿದ್ದು ಯಾಕೆ?

    ರಜೆಗೆಂದು ಊರಿಗೆ ಬಂದಿದ್ದ ಅರವಿಂದ್ ಅಂಗಡಿ ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಆರ್ಮಿ ಯುವಕ ಹಾಗೂ ಇತರೆ 6 ಜನ ಸ್ನೇಹಿತರೊಂದಿಗೆ ಊಟಕ್ಕಾಗಿ ಡಾಬಾಗೆ ಬಂದಿದ್ದರು. ಈ ವೇಳೆ ಕಂಠ ಪೂರ್ತಿ ಕುಡಿದು, ಹೊಟ್ಟೆ ಬಿರಿಯುವಂತೆ ಊಟ ಮಾಡಿದ್ದಾರೆ. ನಂತರ ಊಟದ ಬಿಲ್ ಕೇಳಿದಕ್ಕೆ ನಾವು ಯಾರು ಅಂತ ತಿಳಿದಿದೆಯಾ? ನಮ್ಮನ್ನೇ ಬಿಲ್ ಕೇಳ್ತಿಯಾ ಅಂತ ಅಧಿಕಾರದ ಮದ ಹಾಗೂ ಕುಡಿದ ಅಮಲಿನಲ್ಲಿ ಖ್ಯಾತೆ ತೆಗೆದಿದ್ದಾರೆ.

    ನೂರಾರು ರೂಪಾಯಿ ಕಡಿಮೆ ಕೊಡಿ. ಆದರೆ ಬಿಲ್ ಕೊಡಿ ಅಂದಿದಕ್ಕೆ ಬಾಟಲ್‍ನಿಂದ ಮಾಲೀಕ ಶ್ರೀಶೈಲನ ತಲೆಗೆ ಹೊಡೆದಿದ್ದಾರೆ. ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ರಕ್ತಸ್ರಾವವಾಗುತ್ತಿ ಮಾಲೀಕನನ್ನು ಅಲ್ಲಿಯೇ ಇದ್ದ ಕೆಲಸಗಾರರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ದುಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್‌ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

    ಡಾಬಾದಲ್ಲಿರುವ ಫ್ರಿಜ್, ಕೌಂಟರ್, ಕಬಾಡ್, ಕುರ್ಚಿ, ಅಡುಗೆ ಸಾಮಗ್ರಿಗಳು ಸೇರಿದಂತೆ ಅನೇಕ ಪೀಠೋಪಕರಣಗಳನ್ನು ಒಡೆದುಹಾಕಿ ವಿಕೃತಿ ಮೆರೆದಿದ್ದಾರೆ. ಇವರ ಅಟ್ಟಹಾಸಕ್ಕೆ ಅಂಗಡಿ ಮಾಲೀಕರು ಹಾಗೂ ಕಾರ್ಮಿಕರು ನಲುಗಿಹೋಗಿದ್ದಾರೆ. ಈ ಎಲ್ಲಾ ವೀಡಿಯೋ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ನಂತರ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Live Tv
    [brid partner=56869869 player=32851 video=960834 autoplay=true]

  • ಊಟ ಕೇಳಿದ್ದಕ್ಕೆ 4 ವರ್ಷದ ಮಗುವಿನ ಕೈ ಸುಟ್ಟ ಮಲತಾಯಿ

    ಊಟ ಕೇಳಿದ್ದಕ್ಕೆ 4 ವರ್ಷದ ಮಗುವಿನ ಕೈ ಸುಟ್ಟ ಮಲತಾಯಿ

    ಕಲಬುರಗಿ: ಊಟ ಕೇಳಿದ 4 ವರ್ಷದ ಮುಗ್ಧ ಮಗುವಿನ ಕೈಯನ್ನು ಕೆಂಡದ ಕಿಡಿಯಿಂದ ಮಲತಾಯಿ ಮನಬಂದಂತೆ ಸುಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ತಾಂಡಾ ಗ್ರಾಮದಲ್ಲಿ ನಡೆದಿದೆ.

    ತಾಲೂಕಿನ ನಾಲವಾರ ತಾಂಡಾದ ತಿಪ್ಪಣ್ಣ ಎಂಬುವರು ಪತ್ನಿ ಮರಣ ನಂತರ ಪುತ್ರಿ ಸೋನಾಲಿಕಾಗೆ ಅಮ್ಮನ ಪ್ರೀತಿ ಸಿಗಬೇಕೆಂದು ಮರೆಮ್ಮಳನ್ನು 2ನೇ ಮದುವೆ ಆಗಿದ್ದರು. ಆದರೆ, ಕೆಲಸದ ನಿಮಿತ್ತ ತಿಪ್ಪಣ್ಣ ಪೂನಾಗೆ ಹೋಗಿದ್ದು, ಇತ್ತ ಸೋನಾಲಿಕಾಗೆ ಮರೆಮ್ಮ ಮನಬಂದಂತೆ ಹಿಂಸಿಸುತ್ತಿದ್ದಾಳೆ. ಇದನ್ನೂ ಓದಿ: ಧರ್ಮ ದಂಗಲ್‌ಗೆ ತೆರೆ ಎಳೆಯಲು ಮುಂದಾದ ಬಿಜೆಪಿ – ರಾಜ್ಯ ಘಟಕಗಳಿಗೆ ಹೈಕಮಾಂಡ್‌ ವಾರ್ನಿಂಗ್‌

    ನಾಲ್ಕು ವರ್ಷ ಸೋನಲಿಕ ಮಲತಾಯಿಗೆ ಊಟ ಕೇಳಿದರೆ ಹೊಡೆಯುವುದು, ಬಡಿಯುವುದು, ಮಂಚಕ್ಕೆ ಕಟ್ಟಿ ಹಾಕುವುದು, ಮೈ ಕೈ ಸುಡುವುದು ಮಾಡಿದ್ದಾಳೆ. ದಿನನಿತ್ಯ ಹೀಗೆ ಕಿರುಕುಳ ನೀಡುತ್ತಿದ್ದನ್ನು ನೋಡುತ್ತಿದ್ದ ಜನ ಕಳೆದ 3-4 ದಿನಗಳಿಂದ ಆಟವಾಡಲು ಮಗು ಹೊರಗೆ ಬರದೇ ಇರುವುದರಿಂದ ಸಂಶಯಗೊಂಡು ಮನೆಗೆ ಹೋಗಿದ್ದಾರೆ. ಇದನ್ನೂ ಓದಿ: ಭಾರತ ಮತಾಂಧರನ್ನು ಪ್ರಶಂಸಿಸುವುದಿಲ್ಲ: ಪಾಕ್ ಪ್ರಧಾನಿಗೆ ಭಾರತ ಸರ್ಕಾರ ತೀವ್ರ ತರಾಟೆ

    ಈ ವೇಳೆ ಮಂಚಕ್ಕೆ ಮಗುವನ್ನು ಕಟ್ಟಿ ಹಾಕಿರುವುದನ್ನು ಗಮನಿಸಿ ನಂತರ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಮಗುವನ್ನು ಎತ್ತಿಕೊಂಡು ಹೊರಗೆ ಬಂದಾಗ ಮಗುವಿನ ಎರಡು ಕೈಗಳನ್ನು ಕೆಂಡದ ಕಿಡಿಯಿಂದ ಸುಟ್ಟಿರುವುದು ಬೆಳಕಿಗೆ ಬಂದಿದೆ. ನಂತರ ಮಲತಾಯಿಯನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು ಇದೀಗ ಈ ಸಂಬಂಧ ವಾಡಿ ಠಾಣೆಗೆ ಮರೆಮ್ಮ ವಿರುದ್ಧ ದೂರು ಕೊಟ್ಟಿದ್ದಾರೆ.

  • ಕರಿಯಲ್ಲಿ ಖಾರ ಹೆಚ್ಚಾಗಿದ್ದಕ್ಕೆ ಪತ್ನಿಯ ತಲೆ ಬೋಳಿಸಿದ

    ಕರಿಯಲ್ಲಿ ಖಾರ ಹೆಚ್ಚಾಗಿದ್ದಕ್ಕೆ ಪತ್ನಿಯ ತಲೆ ಬೋಳಿಸಿದ

    ಗಾಂಧಿನಗರ: ಕರಿಯಲ್ಲಿ ಉಪ್ಪು, ಖಾರ ಹೆಚ್ಚಾಗಿದೆ ಎಂದು ಗುಜರಾತ್‍ನಲ್ಲಿ ವ್ಯಕ್ತಿಯೊಬ್ಬ ಪತ್ನಿಯ ತಲೆ ಬೋಳಿಸಿದ ವಿಚಿತ್ರ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಉಪ್ಪು ಹೆಚ್ಚಾಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಗುಜರಾತ್‍ನಲ್ಲಿ ವ್ಯಕ್ತಿಯೊಬ್ಬ ತನ್ನ 28 ವರ್ಷದ ಪತ್ನಿಯ ತಲೆ ಬೋಳಿಸಿ, ಹಲ್ಲೆ ಮಾಡಿದ್ದಾನೆ. ಈ ಹಿನ್ನೆಲೆ ಕೋಪಗೊಂಡ ಪತ್ನಿ, ಪತಿ ವಿರುದ್ಧ ವತ್ವಾ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ಇದನ್ನೂ ಓದಿ: ತನ್ನ ಪುಟ್ಟ ಮಗುವಿನೊಂದಿಗೆ ಪತ್ನಿಗಾಗಿ ಅಲೆದಾಡುತ್ತಿರುವ ಪತಿ 

    ನಡೆದಿದ್ದೇನು?
    ಪತ್ನಿ ರಿಜ್ವಾನಾ ಪತಿ ವಿರುದ್ಧ ದೂರು ಕೊಟ್ಟಿದ್ದು, 8 ವರ್ಷಗಳ ಹಿಂದೆ ನಾನು ಮತ್ತು ನನ್ನ ಪತಿ ಇಮ್ರಾನ್ ಮದುವೆಯಾಗಿದ್ದೇವೆ. ಅವನು ಕೂಲಿ ಕೆಲಸ ಮಾಡುತ್ತಿದ್ದಾನೆ. ಮೇ 8 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಮ್ರಾನ್ ಊಟಕ್ಕೆ ಮನೆಗೆ ಬಂದಿದ್ದ. ನಾನು ಅವನಿಗೆ ಚಪಾತಿ ಮತ್ತು ಕರಿ ಕೊಟ್ಟೆ. ಅವನು ಊಟವನ್ನು ಇಷ್ಟಪಡಲಿಲ್ಲ. ಆಹಾರಕ್ಕೆ ಹೆಚ್ಚು ಉಪ್ಪು, ಖಾರ ಸೇರಿಸಿದ್ದಕ್ಕಾಗಿ ನನ್ನನ್ನು ನಿಂದಿಸಲು ಪ್ರಾರಂಭಿಸಿದನು. ಬೇರೆ ಏನಾದ್ರೂ ಮಾಡ್ತೀನಿ ಅಂತ ಹೇಳಿದರೂ ಆತ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಲೇ ಇದ್ದ.

    ರೇಜರ್ ತೆಗೆದುಕೊಂಡ
    ಈ ಕ್ಷುಲ್ಲಕ ಕಾರಣಕ್ಕೆ ಇಮ್ರಾನ್ ಒಂದು ಕೋಲು ತೆಗೆದುಕೊಂಡು ನನಗೆ ಹೊಡೆಯಲು ಪ್ರಾರಂಭಿಸಿದನು. ಆದರೆ ನಾನು ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದೆ. ಅವನು ಸುತ್ತಲೂ ನೋಡಿ ರೇಜರ್ ತೆಗೆದುಕೊಂಡ. ಇದು ಏಕೆ ಎಂದು ನಾನು ಅರ್ಥಮಾಡಿಕೊಳ್ಳುವ ಮೊದಲೇ ಅವನು ನನ್ನನ್ನು ಬಲವಂತವಾಗಿ ಹಿಡಿದುಕೊಂಡು ನನ್ನ ಕೂದಲನ್ನು ಬೋಳಿಸಲು ಪ್ರಾರಂಭಿಸಿದನು. ಇದನ್ನೂ ಓದಿ:  ಕ್ಷುಲ್ಲಕ ಕಾರಣಕ್ಕೆ ಜಗಳ ಅರಣ್ಯ ರಕ್ಷಕನ ಕೈ ತುಂಡು

    ಭಯಗೊಂಡಿದ್ದೆ
    ನನ್ನ ಸಂಪೂರ್ಣ ತಲೆ ಬೋಳಿಸಿದ ನಂತರವೇ ಇಮ್ರಾನ್ ನನ್ನನ್ನು ಬಿಟ್ಟ ಎಂದು ನೊಂದುಕೊಂಡು ಹೇಳಿದಳು. ನಾನು ಕಿರುಚಾಡಿದ್ದಾರಿಂದ ನೆರೆಹೊರೆಯವರು ಓಡಿ ಬಂದರು. ಅವರೇ ನನ್ನನ್ನು ಬಿಡಿಸಿ ಪೊಲೀಸರ ಬಳಿಗೆ ಹೋಗುವಂತೆ ಸೂಚಿಸಿದರು. ಆದರೆ ನಾನು ಆ ಸಮಯದಲ್ಲಿ ತುಂಬಾ ಭಯಗೊಂಡಿದ್ದೆ, ಆಘಾತಕ್ಕೊಳಗಾಗಿದ್ದೆ. ಪರಿಣಾಮ ಘಟನೆ ನಡೆದ ಮೂರು ದಿನಗಳ ಬಳಿಕ ದೂರು ಕೊಡುತ್ತಿದ್ದೇನೆ ಎಂದು ದೂರಿನಲ್ಲಿ ವಿವರಿಸಿದ್ದಾಳೆ.

    ಪ್ರಸ್ತುತ ಪೊಲೀಸರು ಇಮ್ರಾನ್ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕುತ್ತಿದ್ದಾರೆ.

  • ಮದುವೆಗೆ ಆಗಮಿಸಿದ ಅತಿಥಿಗಳಿಗೆ ಊಟದ ಬಿಲ್ ಕೇಳಿದ ವಧು

    ಮದುವೆಗೆ ಆಗಮಿಸಿದ ಅತಿಥಿಗಳಿಗೆ ಊಟದ ಬಿಲ್ ಕೇಳಿದ ವಧು

    ದುವೆಯ ಆರತಕ್ಷತೆಯ ವೆಚ್ಚವನ್ನು ಭರಿಸಲು ಆಗದೇ ವಧು ತನ್ನ ಅತಿಥಿಗಳಿಗೆ ಅಂದಾಜು 7,370ರೂ. (ಅಮೇರಿಕನ್ ಡಾಲರ್ 99)ಗಳನ್ನು ಪಾವತಿಸುವಂತೆ ಕೇಳಿದ್ದಾರೆ.

    ಈ ವಿಚಿತ್ರ ಘಟನೆ ಕುರಿತಂತೆ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾನು ಕೆಲ ದಿನಗಳ ಹಿಂದೆ ಮದುವೆಯೊಂದಕ್ಕೆ ಹೋಗಿದ್ದೆ. ಈ ವೇಳೆ ಆರತಕ್ಷತೆಗೆ ಆಗಮಿಸಿದ ಅತಿಥಿಗಳಿಗೆಲ್ಲಾ ವಧು 7,300 ರೂಪಾಯಿಯನ್ನು ಪಾವತಿಸಿ ಊಟ ಮಾಡುವಂತೆ ಹೇಳಿದಳು. ಕಾರಣ ವಧು ಮತ್ತು ವರ ಮದುವೆಗೆ ಹಣ ಖರ್ಚು ಮಾಡಲು ಶಕ್ತರಾಗಿರಲಿಲ್ಲ.

    ಆಹ್ವಾನ ಪತ್ರಿಕೆಯಲ್ಲಿ ವಧು, ತನಗೆ ಊಟದ ವೆಚ್ಚ ಭರಿಸುವ ಸಾಮರ್ಥ್ಯ ಇಲ್ಲ. ಹಾಗಾಗಿ ಮದುವೆಗೆ ಆಗಮಿಸುವ ಅತಿಥಿಗಳು ತಮ್ಮ ಊಟದ ಬಿಲ್ ಪಾವತಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು, ಮದುವೆಗೆ ಆಗಮಿಸುವ ಅತಿಥಿಗಳಿಗೆ 7,300 ರೂಪಾಯಿ ಕೇಳಿದ್ದರು. ಇದನ್ನೂ ಓದಿ: ಕೇರಳದಲ್ಲಿ 13 ನೊರೊವೈರಸ್ ಪ್ರಕರಣ ಪತ್ತೆ – ನೀರಿನಿಂದ ಹರಡುವ ಹೊಸ ಕಾಯಿಲೆ

    ಮದುವೆ ಸಮಾರಂಭ ಮನೆಯಿಂದ ದೂರದಲ್ಲಿದ್ದು, 4 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಯಿತು. ಹೆಚ್ಚು ಸಮಯದ ಜೊತೆಗೆ ಪೆಟ್ರೋಲ್ ಹಾಗೂ ಹಣ ಕೂಡ ವ್ಯಯ ಮಾಡಲಾಯಿತು. ಅಲ್ಲದೇ ಮದುವೆಯಲ್ಲಿ ಊಟ ಮಾಡಲು ನಮ್ಮ ಹಣವನ್ನೇ ಪಾವತಿಸಬೇಕಾಯಿತು. ಮದುವೆ ದಿನ ವೇದಿಕೆ ಮುಂಭಾಗ ಬಾಕ್ಸ್ ಇಟ್ಟು ಡಬ್ಬದ ಮೇಲೆ ಅತಿಥಿಗಳಿಗೆ ಹಣ ಹಾಕುವಂತೆ ಮನವಿ ಮಾಡಲಾಗಿತ್ತು. ಜೋಡಿಯ ಹನಿಮೂನ್ ಮತ್ತು ಒಳ್ಳೆಯ ಭವಿಷ್ಯ ಹಾಗೂ ಹೊಸ ಮನೆಗಾಗಿ ಹಣ ನೀಡಬೇಕೆಂದು ಡಬ್ಬದ ಮೇಲೆ ಬರೆಯಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್‍ಗೆ ಹೊಸ ಟ್ವಿಸ್ಟ್ – ಸೀಜೇ ಮಾಡಿಲ್ಲವೆಂದು ಕೋರ್ಟಿಗೆ ಸಿಸಿಬಿ ರಿಪೋರ್ಟ್

    ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದು, ಹಲವಾರು ಮಂದಿ ಕಾಮೆಂಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ತಾವು ಅಂತಹ ಮದುವೆಗೆ ಹೋಗುವುದಿಲ್ಲ ಎಂದರೆ ಮತ್ತೆ ಕೆಲವರು ಅದ್ದೂರಿಯಾಗಿ ಮದುವೆಯಾಗಲು ಸಾಧ್ಯವಾಗದಿದ್ದರೆ ಸರಳವಾಗಿ ವಿವಾಹವಾಗಬಹುದಾಗಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ಮಕ್ಕಳಿಗೆ ಬಿಸಿಯೂಟ ನೀಡಲು ಗುಡ್ಡಗಾಡಲ್ಲಿ ನಡೆಯುವ ಶಿಕ್ಷಕ

    ಮಕ್ಕಳಿಗೆ ಬಿಸಿಯೂಟ ನೀಡಲು ಗುಡ್ಡಗಾಡಲ್ಲಿ ನಡೆಯುವ ಶಿಕ್ಷಕ

    ಛತ್ತೀಸ್‍ಗಢ: ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಪ್ಪಬಾರದೆಂದು ನಿತ್ಯ ಗುಡ್ಡಗಾಡು ರಸ್ತೆಯಲ್ಲಿ 8 ಕಿಮೀ ನಡೆಯುವ ಶಿಕ್ಷಕರು ಬಿಸಿಯೂಟವನ್ನು ಹೊತ್ತು ತರುತ್ತಿರುವ ಘಟನೆ ಛತ್ತೀಸಗಢದ ಬಲರಾಮ್‍ಪುರ್ ಜಿಲ್ಲೆಯಲ್ಲಿ ಕಂಡು ಬಂದಿದೆ.

    ನಮ್ಮ ಶಿಕ್ಷಕರಾದ ಸುಶೀಲ್ ಯಾದವ್ ಮತ್ತು ಪಂಕಜ್ ಸಾರ್ವಜನಿಕ ಪಡಿತರ ಅಂಗಡಿಯಿಂದ ದಿನಸಿ ಹೊತ್ತು ಪ್ರತಿದಿನ 8 ಕಿಮೀ ಬೆಟ್ಟಗುಡ್ಡದ ಹಾದಿಯಲ್ಲಿ ನಡೆದು ಹೋಗುತ್ತಿದ್ದಾರೆ. ಅವರ ಬದ್ಧತೆ ಮತ್ತು ಕರ್ತವ್ಯನಿಷ್ಠೆಯ ಬಗ್ಗೆ ನಮಗೆ ಗೌರವವಿದೆ ಎಂದು ಬಲರಾಮ್‍ಪುರ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿ ಬಿ.ಎಕ್ಕಾ ಹೇಳಿದ್ದಾರೆ. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

    ಖಂಡಿಯಾ ದಾಮರ್ ಗ್ರಾಮ ಪಂಚಾಯಿತಿ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ನಡೆದೇ ಬರುವ ಶಿಕ್ಷಕರ ಬದ್ಧತೆಗೆ ಕೈಮುಗಿಯಬೇಕು ಎನ್ನಿಸುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದನ್ನೂ ಓದಿ: ಕಟೀಲ್‍ಗೆ ಸೀರೆ ಉಡಿಸಿದ್ರೆ ಆತ ಹೆಂಗಸು ಅಲ್ಲ, ಗಂಡಸು ಅಲ್ಲ: ಬೇಳೂರು ಗೋಪಾಲಕೃಷ್ಣ

    ಈ ರಸ್ತೆಯಲ್ಲಿ ಸಾಗಿಬರುವುದು ತುಂಬಾ ಕಷ್ಟವಾಗಿದೆ. ಮಳೆ ಬಿದ್ದರಂತೂ ಈ ರಸ್ತೆಯಲ್ಲಿ ನಡೆಯಲು ಸಾಧ್ಯವಾಗುವುದಿಲ್ಲ. ಕಾಡುಪ್ರಾಣಿಗಳ ಹಾವಳಿಯೂ ಇದೆ. ಆದರೂ ಮಕ್ಕಳು ಪ್ರತಿದಿನ ಮಧ್ಯಾಹ್ನದ ಊಟ ತಪ್ಪಿಸಿಕೊಳ್ಳಬಾರದು ಎಂದು ನಾವಿಷ್ಟು ಕಷ್ಟ ಪಡುತ್ತಿದ್ದೇವೆ. ಮ್ಕಳಿಗೆ ಬಿಸಿಯೂಟ ತಪ್ಪಬಾರದು ಎನ್ನುವ ಕಾಳಜಿಯಿಂದ ಗುಡ್ಡ ಮೇಲಿರುವ ಶಾಲೆಗೆ ರಸ್ತೆ ಸಂಪರ್ಕವನ್ನು ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇನೆ. ಈಗಲೂ ಮಾಡುತ್ತಿದ್ದೇನೆ ಎಂದು ಶಿಕ್ಷಕ ಸುಶೀಲ್ ಯಾದವ್ ಹೇಳಿದ್ದಾರೆ.

  • ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

    ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

    ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಕಾಯ್ದಿರಿಸಲಾಗಿದ್ದು, ಅಲ್ಲಿಯವರೆಗೂ ಆರ್ಯನ್ ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿಯೇ ಉಳಿಯಬೇಕಾಗುತ್ತದೆ.

    ಕೋವಿಡ್-19 ಪರೀಕ್ಷೆಯಲ್ಲಿ ಆರ್ಯನ್‍ಗೆ ನೆಗಟಿವ್ ವರದಿ ಬಂದ ನಂತರ, ಗುರುವಾರ ಅವರನ್ನು ಬ್ಯಾರಕ್‍ಗೆ ವರ್ಗಾಯಿಸಲಾಯಿತು. ಇದೀಗ ಆರ್ಯನ್‍ಗೆ ಖೈದಿ ಸಂಖ್ಯೆ ಎನ್956 ಎಂದು ನಿಗದಿಪಡಿಸಲಾಗಿದೆ. ಆರ್ಯನ್‍ಗೆ ಜೈಲಿನಲ್ಲಿರಲು ಗೊಂದಲ, ಉದ್ವಿಗ್ನತೆ ಹಾಗೂ ಅನ್ ಕಂಫರ್ಟ್‍ಟೇಬಲ್ ಆಗುತ್ತಿದ್ದು, ಜೈಲಿನ ಆಹಾರ ಕೂಡ ಇಷ್ಟವಾಗುತ್ತಿಲ್ಲ. ಹೀಗಾಗಿ ಮಗನಿಗೆ ಕ್ಯಾಂಟೀನ್‍ನಲ್ಲಿ ಊಟದ ವ್ಯವಸ್ಥೆಗೊಳಿಸಲು ಆರ್ಥರ್ ರೋಡ್ ಜೈಲು ಅಧಿಕಾರಿಗಳಿಗೆ ಶಾರೂಖ್ ಖಾನ್ 4,500ರೂ. ಮನಿ ಆರ್ಡರ್ ಕಳುಹಿಸಿದ್ದಾರೆ. ಇದನ್ನೂ ಓದಿ: ಮಗನ ಆರೋಗ್ಯ ವಿಚಾರಿಸುತ್ತಾ ರಾತ್ರಿಯಿಡೀ ನಿದ್ದೆಗೆಟ್ಟ ಶಾರೂಖ್ ದಂಪತಿ!

    ಜೈಲು ಅಧಿಕಾರಿಗಳು ಆರ್ಯನ್ ಖಾನ್ ಬಗ್ಗೆ ತೀವ್ರ ನಿಗಾ ವಹಿಸಿದ್ದು, ಎಲ್ಲಾ ಡ್ರಗ್ ಪ್ರಕರಣ ಆರೋಪಿಗಳಿಗೆ ಭದ್ರತೆ ಒದಗಿಸುವ ಸಲುವಾಗಿ ಇತರ ಖೈದಿಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ. ಇದನ್ನೂ ಓದಿ: ಆರ್ಯನ್ ಖಾನ್ ಮೂರು ವರ್ಷದಿಂದ ಡ್ರಗ್ ಸೇವಿಸುತ್ತಿದ್ದಾರೆ – ಎನ್‍ಸಿಬಿ

    ಮುಂಬೈ ಸಮುದ್ರದಲ್ಲಿ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸಿದ ಆರೋಪದಲ್ಲಿ ಎನ್‍ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಮತ್ತು ಇತರೆ ಆರೋಪಿಗಳು ಜಾಮೀನು ಕೋರಿ ಮುಂಬೈ ಸೆಷನ್ಸ್ ಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆ ಈ ಅರ್ಜಿ ವಿಚಾರಣೆ ನಡೆದಿದ್ದು, ನ್ಯಾ.ವಿವಿ ಪಾಟೀಲ್ ಸುದೀರ್ಘ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಕಾಯ್ದಿರಿಸಿದ್ದಾರೆ.