Tag: MD Sameer

  • AI ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್

    AI ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್

    – 2ನೇ ದಿನವೂ ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಹಾಜರು

    ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂದು ಎಐ ವಿಡಿಯೋ ಮೂಲಕ ಸಂಚಲನ ಸೃಷ್ಟಿಸಿದ್ದ ಯೂಟ್ಯೂಬರ್ ಸಮೀರ್ (Youtuber Sameer MD) ಸೋಮವಾರ (ಆ.25) ಮತ್ತೆ ಬೆಳ್ತಂಗಡಿ ಠಾಣೆಗೆ (Belthangady Police Station) ವಿಚಾರಣೆಗೆ ಹಾಜರಾಗಿದ್ದಾನೆ.

    ಬೆಳ್ತಂಗಡಿ ಠಾಣೆಯಲ್ಲಿ ಸಮೀರ್ ವಿಚಾರಣೆ ಆರಂಭವಾಗಿದ್ದು, ಪಿಎಸ್‌ಐ ಸುಬ್ಬಾಪುರ್ ಮಠ್ ಉಪಸ್ಥಿತಿಯಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್‌ ನಾಗೇಶ್ ಕದ್ರಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.ಇದನ್ನೂ ಓದಿ: ಕೇಜ್ರಿವಾಲ್ ಪ್ರಕರಣ ಉಲ್ಲೇಖಿಸಿ ವಿಪಕ್ಷಗಳಿಗೆ ತಿರುಗೇಟು – ಪಿಎಂ, ಸಿಎಂ ವಜಾ ಮಸೂದೆ ಸಮರ್ಥಿಸಿಕೊಂಡ ಅಮಿತ್ ಶಾ

    ಕಾಲ್ಪನಿಕ ವಿಡಿಯೋ ಮೂಲಕ ದೊಂಬಿ ಸೃಷ್ಟಿಯಲು ಯತ್ನಿಸಿದ್ದಾನೆ ಎಂದು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ಧರ್ಮಸ್ಥಳ ಪೊಲೀಸರು ಎರಡೆರಡು ನೊಟೀಸ್ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ (ಆ.24) ಬೆಳ್ತಂಗಡಿ ಠಾಣೆಯಲ್ಲಿ ನಾಲ್ವರು ವಕೀಲರ ಜೊತೆ ಸಮೀರ್ ಹಾಜರಾಗಿದ್ದ. ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಅಧಿಕಾರಿಗಳು 4:30 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

    ದೂತನ ಬಂಡವಾಳ ಬಯಲು
    ಇಲ್ಲ ಸಲ್ಲದ ಸುಳ್ಳು ಕತೆಗಳನ್ನು ಸೃಷ್ಟಿಸಿ ಎಲ್ಲರನ್ನೂ ಮರಳು ಮಾಡಿದ್ದವನೇ ಯೂಟ್ಯೂಬರ್ ಸಮೀರ್ ಎಂ.ಡಿ. ಯಾವುದೋ ಕೋಣೇಲಿ ಕೂತ್ಕೊಂಡು ಎಐ ವಿಡಿಯೋಗಳ ಮೂಲಕ ಜನರಿಗೆ ಮಂಕುಬೂದಿ ಎರಚಿ ಲೈಕ್ಸ್, ವೀವ್ಸ್ ಪಡೆದಿದ್ದ ದೂತನ ಬಂಡವಾಳ ಬಯಲಾಗಿದೆ. ತಾನು ಹೇಳಿದ್ದೇ ಸತ್ಯ ಅಂತ ನಂಬಿಸಿ, ಶಿವತಾಂಡವ ಶುರುವಾಗುತ್ತೆ. ನೋಡಿ ಸತ್ಯ ಹೇಗೆ ಹೊರಬರುತ್ತದೆ? ಎಲ್ಲದಕ್ಕೂ ಸಾಕ್ಷ್ಯ ಇದೆ ಅಂತಾ ಪುಂಖಾನುಪುಂಖವಾಗಿ ಸುಳ್ಳಿನ ಅರಮನೆಯನ್ನೇ ಕಟ್ಟಿದ್ದ. ದೂರುದಾರನಿಗೆ ಭೀಮ ಎಂದು ಹೆಸರಿಟ್ಟಿದ್ದೇ ಸುಳ್ಳುಕೋರ ಸಮೀರ್. ಅನನ್ಯಾ ಭಟ್ ಎನ್ನುವ ನಕಲಿ ಯುವತಿಯನ್ನು ಸೃಷ್ಟಿಸಿ ಧರ್ಮಸ್ಥಳ ಕ್ಷೇತ್ರಕ್ಕೆ, ಭಕ್ತರ ಭಾವನೆಗೆ ಚ್ಯುತಿ ಬರುವಂತೆ ಮಾಡಿದ್ದೇ ಈತ. ಬೀದಿಗೆ ಬನ್ನಿ ಹೋರಾಟ ಮಾಡಿ ಅಂತಾನೂ ಕರೆ ಕೊಟ್ಟಿದ್ದ. ಈತನ ವಿಡಿಯೋಗೆ ಫಂಡಿಂಗ್ ಬರುತ್ತಿದೆ ಅನ್ನೋ ಆರೋಪವೂ ಇದೆ.ಇದನ್ನೂ ಓದಿ: ಕನ್ನಡ ತಾಯಿ ಭುವನೇಶ್ವರಿಯನ್ನು ಒಪ್ಪದ ಬಾನು ಮುಷ್ತಾಕ್ ನಾಡದೇವತೆಯನ್ನು ಒಪ್ಪುತ್ತಾರಾ: ಪ್ರತಾಪ್ ಸಿಂಹ ಪ್ರಶ್ನೆ

  • ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್ – ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಚಿಂತನೆ

    ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್ – ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಚಿಂತನೆ

    – `ದೂತ’ ಯೂಟ್ಯೂಬ್ ಬ್ಯಾನ್‌ಗೆ ಆಗ್ರಹ

    ಮಂಗಳೂರು: ಶ್ರೀಕ್ಷೇತ್ರದ ಧರ್ಮಸ್ಥಳದಲ್ಲಿ (Dharmasthala) ಶಿವ ತಾಂಡವ ಶುರುವಾಗಿದೆ. ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದವರ ಕಂತೆ ಕಂತೆ ಸುಳ್ಳುಗಳು ಒಂದೊಂದೇ ಹೊರಬರುತ್ತಿದೆ. ಅಪಪ್ರಚಾರ ಮಾಡಿದವರು ಒಬ್ಬೊಬ್ಬರೇ ಕಂಬಿ ಹಿಂದೆ ಸೇರುತ್ತಿದ್ದಾರೆ. ಧರ್ಮಸ್ಥಳದ ಬಗ್ಗೆ ಎಪಿಸೋಡ್‌ಗಳ ಮೇಲೆ ಎಪಿಸೋಡ್ ಮಾಡಿಕೊಂಡು ನಾನೇ ಸತ್ಯವಂತ ಅಂತಿದ್ದ ಸಮೀರ್‌ಗೆ (Sameer MD) ಭಾನುವಾರ ಧರ್ಮಸ್ಥಳದ ಪೊಲೀಸರು ಡ್ರಿಲ್ ಮಾಡಿದ್ದು, ಇಂದು ವಿಚಾರಣೆಗೆ ಕರೆದಿದ್ದಾರೆ. ಇತ್ತ ಈ ದೂತನ ವಿರುದ್ಧ ಐಟಿಗೆ (IT) ದೂರು ನೀಡಲು ಹಿಂದೂ ಪರ ಹೋರಾಟಗಾರರು ಸಜ್ಜಾಗಿದ್ದಾರೆ.

    ಧರ್ಮಸ್ಥಳದ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದವರ ಕಂತೆ ಕಂತೆ ಸುಳ್ಳುಗಳು ಒಂದೊಂದೇ ಹೊರಬರುತ್ತಿದೆ. ಈ ಕಟ್ಟು ಕತೆಗಳಲ್ಲಿ ದೂತ ಸಮೀರ್‌ನ ಪಾತ್ರ ಬಹಳ ದೊಡ್ಡದು. ಸಮೀರ್ ಮಾಡಿದ ವಿಡಿಯೋ, ಅವನ ಐಎ ತಂತ್ರಜ್ಞಾನದ ಬಳಕೆಯಿಂದ ಜನ ಅರೇ ಹೀಗೆಲ್ಲಾ ಆಗಿದ್ಯಾ ಅನ್ನೋ ಮಟ್ಟಕ್ಕೆ ನಂಬಿಸೋ ಯತ್ನ ಆಗಿತ್ತು. ಇವನ ಮಾತುಗಾರಿಕೆ, ತಾನೇ ಕದ್ದು ನೋಡಿದ್ದೇನೆ ಅನ್ನೋ ರೀತಿಯ ವಿವರಣೆಗೆ ಜನ ಮಾರುಹೋಗಿದ್ರು. ಈಗ ಈತನ ಧಾರ್ಮಿಕ ಅಂಧತ್ವ ನಮ್ಮ ಧರ್ಮವನ್ನ ಹೊಡೆಯೋ ನೀಚತನ ಹೊರಬರುತ್ತಿದೆ. ಇದನ್ನೂ ಓದಿ: ಕಾಂತಾರ ಮಾತು ನಿಜ, . ಕೋರ್ಟ್ ಮೆಟ್ಟಿಲ ಮೇಲೆ ಅಣ್ಣಪ್ಪ ತೀರ್ಮಾನ: ಸೂಲಿಬೆಲೆ

    ಸಮೀರ್ ವಿರುದ್ಧ ಈಗಾಗಲೇ ಜುಲೈನಲ್ಲೇ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದ ಹಿಂದೂ ಪರ ಹೋರಾಟಗಾರ ತೇಜಸ್‌ಗೌಡ, ಇಂದು ಹಿಂದೂ ಮುಖಂಡರೊಂದಿಗೆ ಆದಾಯ ಇಲಾಖೆಗೆ ದೂರು ನೀಡಲು ಮುಂದಾಗುತ್ತಿದ್ದಾರೆ. ಹೌದು, ಸಮೀರ್ ಸೇರಿದಂತೆ ಧರ್ಮಸ್ಥಳದ ಹಿಂದೆ ಪಿತೂರಿ ಮಾಡಿದವರಿಗೆ ಬೇರೆ ಬೇರೆ ಕಡೆಯಿಂದ ಹಣ ಬಂದಿದೆ. ಇವನ ವೀಡಿಯೋಗೆ ಯಾರು ಫಂಡ್ ಮಾಡುತ್ತಾರೆ, ಇದರ ಹಿಂದೆ ದೊಡ್ಡ ದೊಡ್ಡವರು ಎಡಪಂಥೀಯರು, ನಿಷೇಧಿತ ಸಂಘಟನೆಗಳು ಇದೆ. ಸಮೀರ್‌ನ ಆರ್ಥಿಕ ವಹಿವಾಟನ್ನು ತನಿಖೆ ಮಾಡಬೇಕು ಅಂತಾ ಐಟಿಗೆ ದೂರು ನೀಡೋದಾಗಿ ತೇಜಸ್ ಗೌಡ ಹೇಳಿದ್ದಾರೆ. ಇದನ್ನೂ ಓದಿ: ಬಿಹಾರದ ‘ವೋಟ್ ಅಧಿಕಾರ ಯಾತ್ರೆ’ ದೇಶದ ಪಾಲಿನ ಗೇಮ್ ಚೇಂಜರ್: ಡಿ.ಕೆ.ಶಿವಕುಮಾರ್

    ಸಮೀರ್ ವಿರುದ್ಧ ರಾಷ್ಟ್ರೀಯ ತನಿಖಾ ತಂಡಗಳಿಂದ ತನಿಖೆಯಾಗಬೇಕು. ಆಗ ಇದರ ಮೂಲ ಯಾರು? ಇದಕ್ಕೆ ಕಾರಣಕರ್ತರು ಯಾರೆಲ್ಲ ಇದ್ದಾರೆ ಅನ್ನೋದು ಬಹಿರಂಗವಾಗಲಿದೆ. ಹಾಗೆಯೇ ಸರ್ಕಾರ ಕೂಡ ಈ ಸುಳ್ಳುಸುದ್ದಿ ಹರಿಡಿಸಿದವರ ಯೂಟ್ಯೂಬ್ ಚಾನಲ್ ಬ್ಯಾನ್ ಮಾಡಬೇಕು ಅಂತಾ ತೇಜಸ್ ಗೌಡ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ಆಟೋ EMI ಕಟ್ಟಲು ಸ್ನೇಹಿತೆಯನ್ನು ಕೊಂದು ಮಾಂಗಲ್ಯ ಸರ ಕದ್ದ ಖತರ್‌ನಾಕ್ ಚಾಲಕ

  • ಇನ್ನೊಂದು ವಾರದಲ್ಲಿ ಮನೆ ಖಾಲಿ ಮಾಡೋದಾಗಿ ಹೇಳಿದ್ದಾರಂತೆ ಸಮೀರ್‌

    ಇನ್ನೊಂದು ವಾರದಲ್ಲಿ ಮನೆ ಖಾಲಿ ಮಾಡೋದಾಗಿ ಹೇಳಿದ್ದಾರಂತೆ ಸಮೀರ್‌

    – ಮೊದಲು ಬಳಸುತ್ತಿದ್ದ ಸಿಮ್‌ ಕಾರ್ಡನ್ನ ಸೋದರ ಸಂಬಂಧಿಗೆ ಕೊಟಿದ್ರಾ ʻಧೂತʼ?

    ಬೆಂಗಳೂರು: ಧರ್ಮಸ್ಥಳದ (Dharmasthala) ಬಗ್ಗೆ ಅಪಪ್ರಚಾರ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ಎಂ.ಡಿ ಸಮೀರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ ಹತ್ತು ಹಲವು ವಿಚಾರಗಳು ತನಿಖೆಯಿಂದ ಬಯಲಾಗಿದೆ.

    ಈ ನಡುವೆ ಯೂಟ್ಯೂಬರ್ ಎಂ.ಡಿ ಸಮೀರ್ (Sameer MD) ಮುಂದಿನ ಒಂದು ವಾರದ ಒಳಗಾಗಿ ವಾಸ ವಿರುವ ಮನೆ ಖಾಲಿ ಮಾಡಲು ಮಾಲೀಕರ ಅನುಮತಿ ಅನ್ನೋದು ಕಂಡುಬಂದಿದೆ. ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪದಲ್ಲಿ ಮೊದಲು ವಾಸವಿದ್ದ ಆರೋಪಿ ಸಮೀರ್ 4 ವರ್ಷದಿಂದ ಬನ್ನೇರುಘಟ್ಟ ಠಾಣಾ (Bannerghatta Police Station) ವ್ಯಾಪ್ತಿಯ ಮನೆಯಲ್ಲಿ ವಾಸವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೋಗಲು ಭಯವಿದೆ – ಪೊಲೀಸರ ಮುಂದೆ ಹಲವು ಬೇಡಿಕೆ ಇಟ್ಟ ಸಮೀರ್‌

    ಆರೋಪಿ ಸಮೀರ್ ಆರಂಭದಲ್ಲಿ ತಾನು ಬಳಸುತ್ತಿದ್ದ ಫೋನ್ ನಂಬರ್ ಸಿಮ್‌ ಕಾರ್ಡನ್ನ ಅವರ ಕಸಿನ್ ಸಿಸ್ಟರ್‌ಗೆ ಕೊಟ್ಡಿದ್ದಾನೆ. ಧರ್ಮಸ್ಥಳ ಪೊಲೀಸರು ಬೆನ್ನು ಬಿದ್ದಿದ್ದಾರೆಂಬ ವಿಚಾರ ತಿಳಿದ ಆರೋಪಿ ಸಮೀರ್ ತಾನು ಬಳಸುತ್ತಿದ್ದ ನಂಬರ್ ಕಸಿನ್‌ ಸಿಸ್ಟರ್‌ಗೆ ಕೊಟ್ಟು ತಲೆಮರಿಸಿಕೊಂಡು ಧರ್ಮಸ್ಥಳ ಪೊಲೀಸರ ಕೈಗೆ ಸಿಗದೆ ಓಡಾಡುತ್ತಿದ್ದ ಅನ್ನೋದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

    ಸಮೀರ್ ಕಸಿನ್ ಬೆಂಗಳೂರಿನಲ್ಲಿದ್ದ ಲೊಕೆಷನ್‌ ಬೆಂಗಳೂರಿನಲ್ಲಿ ತೋರಿಸುತ್ತಿದ್ದರಿಂದ ಧರ್ಮಸ್ಥಳ ಪೊಲೀಸರು ನಿನ್ನೆ ಸಮೀರ್ ನನ್ನ ಹುಡುಕಿಕೊಂಡು ಬೆಂಗಳೂರಿಗೆ ಬಂದು ಮನೆ ಸರ್ಚ್ ಮಾಡಿ ಬರಿಗೈಯಲ್ಲಿ ಹೋಗಿದ್ದರು. ಇದನ್ನೂ ಓದಿ: ಸಮೀರ್‌ಗೆ ತಪ್ಪದ ಸಂಕಷ್ಟ – ಕಡೂರು ಠಾಣೆಯಲ್ಲಿ ಮತ್ತೊಂದು ದೂರು!

  • ಸಮೀರ್‌ಗೆ ತಪ್ಪದ ಸಂಕಷ್ಟ – ಕಡೂರು ಠಾಣೆಯಲ್ಲಿ ಮತ್ತೊಂದು ದೂರು!

    ಸಮೀರ್‌ಗೆ ತಪ್ಪದ ಸಂಕಷ್ಟ – ಕಡೂರು ಠಾಣೆಯಲ್ಲಿ ಮತ್ತೊಂದು ದೂರು!

    ಚಿಕ್ಕಮಗಳೂರು: ಯೂಟ್ಯೂಬರ್ ಎಂ.ಡಿ ಸಮೀರ್ (MD Sameer) ವಿರುದ್ಧ ವಿಶ್ವ ಹಿಂದೂ ಪರಿಷತ್ (VHP) ಸದಸ್ಯ ಮಂಜು ಜೈನ್ ಅವರು ಚಿಕ್ಕಮಗಳೂರಿನ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಯ ನೀಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ. ಧರ್ಮಸ್ಥಳದ (Dharmasthala) ಬಗ್ಗೆ ಅಪಪ್ರಚಾರ ಮಾಡಿ ನಮ್ಮ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಹೇಶ್‌ ಶೆಟ್ಟಿ ತಿಮರೋಡಿ ಜೈಲಿಗೆ – 14 ದಿನ ನ್ಯಾಯಾಂಗ ಬಂಧನ

    ಕಡೂರು ಪೊಲೀಸರು ಮಂಜು ಜೈನ್‌ರಿಂದ ದೂರು ಪಡೆದು ಉನ್ನತ ಅಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮಕ್ಕೆ ಕಡೂರು ಪೊಲೀಸರು ಮುಂದಾಗಲಿದ್ದಾರೆ. ಇದನ್ನೂ ಓದಿ: ಯೂಟ್ಯೂಬರ್‌ ಸಮೀರ್‌ಗೆ ಜಾಮೀನು ಮಂಜೂರು

    ಇನ್ನು ಜಿಲ್ಲೆಯ ಕಳಸ ಪಟ್ಟಣದಲ್ಲೂ ಜೈನ್ ಸಮುದಾಯ (Jain Community) ಬೃಹತ್ ಪ್ರತಿಭಟನೆ ನಡೆಸಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

    ಚಿಕ್ಕಮಗಳೂರು ನಗರದಲ್ಲೂ ಕೂಡ 2000ಕ್ಕೂ ಹೆಚ್ಚು ಜನ ಧರ್ಮಸ್ಥಳದ ಬಗ್ಗೆ ಪ್ರತಿಭಟನೆ ನಡೆಸಿ ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ ಮಾಡಿ ಧರ್ಮಸ್ಥಳವನ್ನ ಅವಹೇಳನ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೋಗಲು ಭಯವಿದೆ – ಪೊಲೀಸರ ಮುಂದೆ ಹಲವು ಬೇಡಿಕೆ ಇಟ್ಟ ಸಮೀರ್‌