Tag: McDonald’s

  • ಬೆಲೆ ಏರಿಕೆ: ಬರ್ಗರ್‌ಗೆ ಟೊಮೆಟೊ ಬಳಸಲ್ಲ ಎಂದ ಮೆಕ್‌ಡೊನಾಲ್ಡ್ಸ್‌

    ಬೆಲೆ ಏರಿಕೆ: ಬರ್ಗರ್‌ಗೆ ಟೊಮೆಟೊ ಬಳಸಲ್ಲ ಎಂದ ಮೆಕ್‌ಡೊನಾಲ್ಡ್ಸ್‌

    ನವದೆಹಲಿ: ದೇಶಾದ್ಯಂತ ಟೊಮೆಟೊ (Tomato) ಬೆಲೆಯಲ್ಲಿ ಏರಿಕೆಯಾಗಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಕೇವಲ ಗ್ರಾಹಕರು, ಸಣ್ಣ-ಪುಟ್ಟ ಹೋಟೆಲ್‌ಗಳಿಗಷ್ಟೇ ಅಲ್ಲ ಆಹಾರ ಉತ್ಪನ್ನಗಳನ್ನು ತಯಾರಿಸುವ ದೊಡ್ಡ ದೊಡ್ಡ ಕಂಪನಿಗಳಿಗೂ ಇದರ ಬಿಸಿ ತಟ್ಟಿದೆ.

    ಹೌದು,  ಬರ್ಗರ್‌ (Burger) ಆಹಾರ ಉತ್ಪನ್ನ ತಯಾರಿಸುವ ಕಂಪನಿ ಮೆಕ್‌ಡೊನಾಲ್ಡ್ಸ್ (McDonald’s) ಅಚ್ಚರಿಯ ಘೋಷಣೆಯೊಂದನ್ನು ಮಾಡಿದೆ. ಬರ್ಗರ್‌ ಸೇರಿದಂತೆ ಇತರೆ ಆಹಾರ ಉತ್ಪನ್ನಗಳಿಗೆ ಟೊಮೆಟೊ ಬಳಸಲಾಗುತ್ತಿಲ್ಲ ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ 250 ರೂ. ತಲುಪಿದ ಟೊಮೆಟೋ ದರ- ಗ್ರಾಹಕರು ಕಂಗಾಲು

    ಮೆಕ್‌ಡೊನಾಲ್ಡ್ಸ್ ದೆಹಲಿಯಲ್ಲಿರುವ ರೆಸ್ಟೋರೆಂಟ್‌ಗಳ ಹೊರಗೆ, ತನ್ನ ಆಹಾರ ಉತ್ಪನ್ನಗಳಲ್ಲಿ ಟೊಮೆಟೊ ಬಳಕೆ ಮಾಡುತ್ತಿಲ್ಲ ಎಂಬ ಸೂಚನಾಫಲಕ ಹಾಕಿಕೊಂಡಿದೆ. ಈ ದೃಶ್ಯದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಸೆಬಿ ನೋಂದಾಯಿತ ಹೂಡಿಕೆ ಸಲಹೆಗಾರ ಆದಿತ್ಯ ಶಾ ಅವರು ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಉತ್ತಮ ಪದಾರ್ಥಗಳೊಂದಿಗೆ ಅತ್ಯುತ್ತಮ ಆಹಾರವನ್ನು ನಿಮಗೆ ನೀಡಲು ನಾವು ಬದ್ಧರಾಗಿದ್ದೇವೆ. ನಮ್ಮ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿಮಗೆ ಗುಣಮಟ್ಟದ ಟೊಮೆಟೊ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಹಾರ ಉತ್ಪನ್ನಗಳಲ್ಲಿ ಟೊಮೆಟೊ ಬಳಸುತ್ತಿಲ್ಲ ಎಂದು ಗ್ರಾಹಕರಿಗೆ ಮೆಕ್‌ಡೊನಾಲ್ಡ್ಸ್‌ ತಿಳಿಸಿದೆ. ಇದನ್ನೂ ಓದಿ: ಟೊಮೆಟೊ ಆಯ್ತು.. ಈಗ ಶುಂಠಿ, ಹಸಿರು ಮೆಣಸಿನಕಾಯಿ ಬೆಲೆಯಲ್ಲೂ ಏರಿಕೆ

    ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಟೊಮೆಟೊ ಬೆಲೆ ತುಟ್ಟಿಯಾಗಿದೆ. ಉತ್ತರಾಖಂಡದಲ್ಲಿ ಕೆಜಿ ಟೊಮೆಟೊಗೆ ಬರೋಬ್ಬರಿ 250 ರೂ. ದರವಿದೆ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಟೊಮೆಟೊ ಬೆಲೆ 100 ರೂ. ಗಡಿ ದಾಟಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಲಾಲ್ ಮುಕ್ತ ದೀಪಾವಳಿ ಅಭಿಯಾನ – ಮೆಕ್ಡೊನಾಲ್ಡ್, ಕೆಎಫ್‌ಸಿ, ಪಿಜ್ಜಾ ಹಟ್‌ಗೆ ಬಾಯ್ಕಾಟ್

    ಹಲಾಲ್ ಮುಕ್ತ ದೀಪಾವಳಿ ಅಭಿಯಾನ – ಮೆಕ್ಡೊನಾಲ್ಡ್, ಕೆಎಫ್‌ಸಿ, ಪಿಜ್ಜಾ ಹಟ್‌ಗೆ ಬಾಯ್ಕಾಟ್

    ಹುಬ್ಬಳಿ: ಹಿಂದೂಪರ ಸಂಘಟನೆಗಳು ಹಲಾಲ್ (Halal) ಮುಕ್ತ ದೀಪಾವಳಿಗೆ ಕರೆ ನೀಡಿರುವ ಬೆನ್ನಲ್ಲೇ ಈಗ ಹುಬ್ಬಳ್ಳಿಯಲ್ಲಿ (Hubballi) ಬಾಯ್ಕಾಟ್ (Boycott) ಮೆಕ್ಡೊನಾಲ್ಡ್ (McDonald’s), ಕೆಎಫ್‌ಸಿ (KFC), ಪಿಜ್ಜಾ ಹಟ್ (Pizza Hut) ಅಭಿಯಾನ ಕೂಡಾ ಆರಂಭಗೊಂಡಿದೆ.

    ಮೆಕ್ಡೊನಾಲ್ಡ್, ಕೆಎಫ್‌ಸಿ, ಪಿಜ್ಜಾ ಹಟ್ ಕಂಪನಿಗಳು ತಮ್ಮ ಉತ್ಪನ್ನಗಳು ಶೇ.100 ರಷ್ಟು ಹಲಾಲ್ ಅಂತ ಘೋಷಣೆ ಮಾಡಿದ್ದವು. ಇದರಿಂದಾಗಿ ಕೆಂಡಾಮಂಡಲವಾಗಿರುವ ಹಿಂದೂ ಜನಜಾಗೃತಿ ಸಮಿತಿ ಈ ಕಂಪನಿಯ ಉತ್ಪನ್ನಗಳನ್ನು ಬಾಯ್ಕಾಟ್ ಮಾಡುವ ಅಭಿಯಾನಕ್ಕೆ ಚಾಲನೆ ನೀಡಿವೆ. ಇದನ್ನೂ ಓದಿ: ಕಿತ್ತೂರು ಉತ್ಸವ ಆಮಂತ್ರಣ ಪತ್ರಿಕೆಯಲ್ಲಿ ರಾಯಣ್ಣನ ಭಾವಚಿತ್ರ ಮಾಯ- ಅಭಿಮಾನಿಗಳು ಗರಂ

    ಈ ಬಗ್ಗೆ ಹುಬ್ಬಳ್ಳಿಯ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು, ಹಲಾಲ್ ಹಠಾವ್ ದೇಶ ಬಚಾವೋ ಎಂದು ಘೋಷಣೆ ಕೂಗಿದ್ದಾರೆ. ಹಲಾಲ್ ವಸ್ತುಗಳ ಬಹಿಷ್ಕಾರ ಹಾಕಿ ಎಂದು ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮೊಟ್ಟ ಮೊದಲ ಬಾರಿಗೆ ಫೋನ್‌ಕಾಲ್ ಮೂಲಕ ವಿಚಾರಣೆ ನಡೆಸಿದ ಸುಪ್ರೀಂ

    Live Tv
    [brid partner=56869869 player=32851 video=960834 autoplay=true]

  • ಬಾತ್‌ರೂಮ್‌ ಗೋಡೆಯಲ್ಲಿ ಸಿಕ್ತು 60 ವರ್ಷದ ಮೆಕ್‍ಡೊನಾಲ್ಡ್ಸ್ ಊಟ!

    ಬಾತ್‌ರೂಮ್‌ ಗೋಡೆಯಲ್ಲಿ ಸಿಕ್ತು 60 ವರ್ಷದ ಮೆಕ್‍ಡೊನಾಲ್ಡ್ಸ್ ಊಟ!

    ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್‌ನ ಇಲಿನಾಯ್ಸ್‌ನಲ್ಲಿರುವ ವ್ಯಕ್ತಿಯೊಬ್ಬನ ಮನೆಯ ಬಾತ್‌ರೂಮ್‌ ಗೋಡೆಯಲ್ಲಿ 60 ವರ್ಷದ ಹಿಂದೆ ಮಾಡಿದ್ದ ಮೆಕ್‍ಡೊನಾಲ್ಡ್ಸ್ ಊಟ ಸಿಕ್ಕಿದೆ. ಈ ಕುರಿತು ಆತ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.

    ಇಲಿನಾಯ್ಸ್‌ನಲ್ಲಿರುವ ವ್ಯಕ್ತಿಯೊಬ್ಬರ ಮನೆಯನ್ನು ನವೀಕರಣ ಮಾಡುವ ವೇಳೆ ಬಾತ್‌ರೂಮ್‌ ಗೋಡೆಯಲ್ಲಿ 60 ವರ್ಷ ಮೆಕ್‍ಡೊನಾಲ್ಡ್ಸ್ ಊಟ ಸಿಕ್ಕಿದೆ. ಇದನ್ನು ನೋಡಿ ಅಚ್ಚರಿಗೊಂಡ ಆ ವ್ಯಕ್ತಿ ರೆಡ್ಡಿಟ್‍ನಲ್ಲಿ ಅದರ ಬಗ್ಗೆ ಪೋಸ್ಟ್ ಮಾಡಿದ್ದಾನೆ. ಅಲ್ಲಿ ಅವರು ಫಾಸ್ಟ್ ಫುಡ್‍ನ ವಾಸನೆಯು ತನಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 118 ವರ್ಷದ ಸನ್ಯಾಸಿನಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

    ಏನಿದು? 
    ರಾಬ್ ಎಂದು ಗುರುತಿಸಲಾದ ವ್ಯಕ್ತಿಯ ಮನೆಯನ್ನು ನವೀಕರಣಗೊಳ್ಳಿಸಲಾಗುತ್ತಿತ್ತು. ಈ ವೇಳೆ ಬಾತ್‌ರೂಮ್‌ ಗೋಡೆಯಲ್ಲಿ ಹಳೆಯ ಚಿಂದಿ ಪೇಪರ್ ಮತ್ತು ಬಟ್ಟೆಯಲ್ಲಿ ಸುತ್ತಿದ್ದ ಫ್ರೆಂಚ್ ಫ್ರೈಗಳ ಪ್ಯಾಕೆಟ್ ಕಂಡುಬಂದಿದೆ. ಇದನ್ನು ಪರಿಶೀಲಿಸಿ ನೋಡಿದಾಗ ಇದು 60 ವರ್ಷದ ಹಳೆ ಊಟ ಎಂಬುದು ತಿಳಿದುಬಂದಿದೆ.

    3,286 Mcdonalds Stock Photos, Pictures & Royalty-Free Images - iStock

    ಈ ಕುರಿತು ರಾಬ್ ಅವರು ಐದು ದಿನಗಳ ಹಿಂದೆ ಪೋಸ್ಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಈ ಪೋಸ್ಟ್‌ಗೆ ನೆಟ್ಟಿಗರು ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದು, ಪ್ರಶ್ನೆಗಳ ಸುರಿಮಳೆಯನ್ನು ಕೇಳಿದ್ದಾರೆ. ಈ ಕಾಮೆಂಟ್‍ಗಳಿಗೆ ರಾಬ್ ಕೂಡ ಉತ್ತರಿಸುತ್ತಿದ್ದಾರೆ. ಇದನ್ನೂ ಓದಿ: ರೇವಣ್ಣನಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ: ಅಶ್ವತ್ಥ್ ನಾರಾಯಣ್

    ಈ ವೇಳೆ ರಾಬ್, ಕ್ರಿಸ್ಟಲ್ ಲೇಕ್‍ನಲ್ಲಿರುವ ಮೂಲ ಮೆಕ್‍ಡೊನಾಲ್ಡ್ಸ್ ಸ್ಥಳವೊಂದರಲ್ಲಿ ನಮ್ಮ ಕುಟುಂಬ ವಾಸಿಸುತ್ತಿದೆ. ಕುತೂಹಲಕಾರಿಯಾದ ವಿಷಯವೆಂದರೆ 1959ರಲ್ಲಿ ಔಟ್ಲೆಟ್ ಮೊದಲ ಬಾರಿಗೆ ಓಪನ್ ಮಾಡಲಾಯಿತು. ಅದೇ ವರ್ಷ ನಮ್ಮ ಮನೆಯನ್ನು ನಿರ್ಮಿಸಲಾಯಿತು ಎಂದು ಬರೆದುಕೊಂಡಿದ್ದಾರೆ.

  • ಐಸ್‍ಕ್ರೀಮ್ ಇಷ್ಟನಾ? ಹಾಗಿದ್ರೆ ಮೆಕ್‌ಡೋನಾಲ್ಡ್‌ ಕೊತ್ತಂಬರಿ ಸೊಪ್ಪಿನ ಫ್ಲೇವರ್‌ ಸವಿದು ನೋಡಿ

    ಐಸ್‍ಕ್ರೀಮ್ ಇಷ್ಟನಾ? ಹಾಗಿದ್ರೆ ಮೆಕ್‌ಡೋನಾಲ್ಡ್‌ ಕೊತ್ತಂಬರಿ ಸೊಪ್ಪಿನ ಫ್ಲೇವರ್‌ ಸವಿದು ನೋಡಿ

    ವಾಷಿಂಗ್ಟನ್: ಹೊಸ ಮತ್ತು ವಿಭಿನ್ನವಾದ ಟೇಸ್ಟ್ ಇರುವ ಆಹಾರವನ್ನು ಸೇವಿಸುವುದು ಎಂದರೆ ಆಹಾರ ಪ್ರಿಯರಿಗೆ ಸಖತ್ ಇಷ್ಟ. ಊಟ, ತಿಂಡಿಯಷ್ಟೇ ಪ್ರಾಮುಖ್ಯತೆಯನ್ನು ಕೂಲ್ ಆಗಿರುವ ಐಸ್‍ಕ್ರೀಮ್‍ಗೆ ನೀಡುತ್ತೇವೆ. ಐಸ್‍ಕ್ರೀಮ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ, ನಾಲಿಗೆ ಚಪ್ಪರಿಸಿ ತಿನ್ನುವ ಐಸ್‍ಕ್ರೀಮ್ ಪ್ರಿಯರಿಗೆಂದೆ ಮೆಕ್‌ಡೋನಾಲ್ಡ್‌ ಇದೀಗ ಕೊತ್ತಂಬರಿ ಸೊಪ್ಪಿನ ಐಸ್‍ಕ್ರೀಮ್‍ನ್ನು ಮಾರುಕಟ್ಟೆಗೆ ಪರಿಚಯಿಸಿದೆ.

    ಜಗತ್ತಿನ ವಿವಿಧ ದೇಶಗಳಲ್ಲಿ ಹಲವು ಬ್ಯಾಂಚ್‌ ಹೊಂದಿರುವ ಮೆಕ್‌ಡೋನಾಲ್ಡ್‌ ಇದೀಗ ಹೊಸ ಆಹಾರವನ್ನು ಪರಿಚಿಯಿಸಿದೆ. ಕೊತ್ತಂಬರಿ ಸೊಪ್ಪಿನ ಐಸ್‍ಕ್ರೀಮ್‍ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿದೆ. ಬಹುತೇಕ ಆಹಾರ ಪ್ರಿಯರು ಕೊತ್ತಂಬರಿ ಐಸ್‍ಕ್ರೀಮ್‍ನ್ನು ನೋಡಿ ಮೂಗು ಮುರಿದಿದ್ದಾರೆ. ಕೆಲವರು ಒಮ್ಮೆಯಾದರೂ ಟೇಸ್ಟ್ ನೋಡಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ಚೀನಾದ ಮೆಕ್‌ಡೋನಾಲ್ಡ್‌ ಕಂಪನಿ ಈ ಕೊತ್ತಂಬರಿ ಐಸ್ ಕ್ರೀಮ್ ಫೆ. 21ರಂದು ಪರಿಚಯಿಸಿದೆ.  ಈ ಹೊಸ ಆಹಾರ ಜಗತ್ತಿನೆಲ್ಲೆಡೆ ವೈರಲ್ ಆಗಿದೆ.  ಮೆಕ್‌ಡೋನಾಲ್ಡ್‌ ಅಮೆರಿಕದ ಆಹಾರ ತಯಾರಿಕಾ ಕಂಪನಿಯಾಗಿದೆ. ಪಿಜ್ಜಾ, ಬರ್ಗರ್‌ನಂತಹ ಹಲವು ಬಗೆಯ ಆಹಾರಗಳನ್ನು ತಯಾರಿಸುವ ಕಂಪನಿಯಾಗಿದೆ. ಜಗತ್ತಿನ ಹಲವು ದೇಶಗಳಲ್ಲಿ ತನ್ನ ಬ್ರಾಂಚ್‍ನ್ನು ಸ್ಥಾಪಿಸಿ ಆಹಾರ ಪ್ರಿಯರ ಗಮನ ಸೆಳೆದಿದೆ. ಇದನ್ನೂ ಓದಿ: ಹರ್ಷ ಮನೆಗೆ ಬಿಜೆಪಿ ನಾಯಕರ ಭೇಟಿ, ಸಾಂತ್ವನ

  • ಕೆಚೆಪ್‍ಗಾಗಿ ಮೆಕ್ಡೊನಾಲ್ಡ್ಸ್ ಮ್ಯಾನೇಜರ್ ಮೇಲೆ ಮಹಿಳೆ ಹಲ್ಲೆ..!

    ಕೆಚೆಪ್‍ಗಾಗಿ ಮೆಕ್ಡೊನಾಲ್ಡ್ಸ್ ಮ್ಯಾನೇಜರ್ ಮೇಲೆ ಮಹಿಳೆ ಹಲ್ಲೆ..!

    ಸ್ಯಾಕ್ರಮೆಂಟೊ: ಮೆಕ್ಡೊನಾಲ್ಡ್ಸ್ ನಲ್ಲಿ ತೆಗೆದುಕೊಂಡಿದ್ದ ತಿಂಡಿಗೆ ಕೆಚೆಪ್ ಕಡಿಮೆಯಾಯ್ತು ಎಂದು ಮಹಿಳೆಯೊಬ್ಬಳು ಮೆಕ್ಡೊನಾಲ್ಡ್ಸ್ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿರುವ ಘಟನೆ ಬುಧವಾರದಂದು ಕ್ಯಾಲಿರ್ಫೋನಿಯದಲ್ಲಿ ನಡೆದಿದೆ.

    ಕ್ಯಾಲಿರ್ಫೋನಿಯದ ಮೈರಾ (24) ಹಲ್ಲೆ ನಡೆಸಿದ ಮಹಿಳೆ. ಬುಧವಾರದಂದು ಸೇಂಟ್ ಆನಾ ಪ್ರದೇಶದ ಮೆಕ್ಡೊನಾಲ್ಡ್ಸ್ ಗೆ ಮೈರಾ ಬಂದಿದ್ದಳು. ಅಲ್ಲಿ ತಿಂಡಿ ತಿನ್ನುವಾಗ ಆಕೆ ಆರ್ಡರ್ ಮಾಡಿದ್ದ ತಿಂಡಿಗೆ ಕೆಚೆಪ್ ಸಾಲಲಿಲ್ಲ. ಈ ವೇಳೆ ನೇರವಾಗಿ ಕೆಚೆಪ್ ತರಲು ಮೈರಾ ಮೆಕ್ಡೊನಾಲ್ಡ್ಸ್ ನ ಸಿಬ್ಬಂದಿ ಇರುವಲ್ಲಿ ತೆರೆಳಿದ್ದಾಳೆ. ಆಗ ಮೆಕ್ಡೊನಾಲ್ಡ್ಸ್ ಸಿಬ್ಬಂದಿ ಗ್ರಾಹಕರಿಗೆ ಇಲ್ಲಿ ಪ್ರವೇಶವಿಲ್ಲ, ನೀವು ಹೀಗೆ ಏಕಾಏಕಿ ಒಳಗೆ ಬರಬಾರದು ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಮೈರಾ ಮೆಕ್ಡೊನಾಲ್ಡ್ಸ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದಾಳೆ.

    ಮಹಿಳೆ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೆಕ್ಡೊನಾಲ್ಡ್ಸ್ ಮ್ಯಾನೇಜರ್ ಮೈರಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಮಹಿಳೆಯನ್ನು ಕ್ಯಾಲಿರ್ಫೋನಿಯಾ ಪೊಲೀಸರು ಬಂಧಿಸಿದ್ದಾರೆ.

    ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹಸಿವಾಯ್ತೆಂದು McDonald’s ಬಳಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ ಪೈಲೆಟ್!

    ಹಸಿವಾಯ್ತೆಂದು McDonald’s ಬಳಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ ಪೈಲೆಟ್!

    ಸಿಡ್ನಿ: ಕಾರಿನಲ್ಲೋ ಬೈಕ್‍ನಲ್ಲೋ ಹೋಗುವಾಗ ಅಂಗಡಿಯ ಮುಂದೆ ಗಾಡಿ ನಿಲ್ಲಿಸಿ ತಿಂಡಿ ತೆಗೆದುಕೊಳ್ಳೋದು ಕಾಮನ್. ಆದ್ರೆ ಹೆಲಿಕಾಪ್ಟರ್‍ನಲ್ಲಿ ಹೋಗ್ಬೇಕಾದ್ರೆ ಹಸಿವಾದ್ರೆ ಏನು ಮಾಡೋದು? ಪೈಲೆಟ್‍ವೊಬ್ಬರು ಹಸಿವಾಯಿತೆಂಬ ಕಾರಣಕ್ಕೆ ಮ್ಯಾಕ್ ಡೊನಾಲ್ಡ್ಸ್ ರೆಸ್ಟೊಂರೆಂಟ್ ಆವರಣದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿ ತಿನಿಸನ್ನು ಪಾರ್ಸೆಲ್ ತೆಗೆದುಕೊಂಡು ಮತ್ತೆ ಟೇಕ್ ಆಫ್ ಮಾಡಿದ ಘಟನೆ ಶನಿವಾರ ಸಂಜೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ನೈನ್ ನ್ಯೂಸ್ ಆಸ್ಟ್ರೇಲಿಯಾ ವರದಿಯ ಪ್ರಕಾರ ಸಿಡ್ನಿಯ ಮ್ಯಾಕ್ ಡೊನಾಲ್ಡ್ಸ್ ರೆಸ್ಟೊರೆಂಟಿನ ಬಳಿಯ ನಿವಾಸಿಗಳು ಹುಲ್ಲುಹಾಸಿನ ಮೇಲೆ ಹೆಲಿಕಾಪ್ಟರ್ ಲ್ಯಾಂಡ್ ಆಗೋದನ್ನ ನೋಡಿ ದಂಗಾಗಿದ್ದಾರೆ. ಇದನ್ನ ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಮಾಡಿ ಸುದ್ದಿ ವಾಹಿನಿಯೊಂದಕ್ಕೆ ಕಳಿಸಿದ್ದಾರೆ. ಪೈಲೆಟ್ ತಿಂಡಿಯ ಪ್ಯಾಕೆಟ್‍ನೊಂದಿಗೆ ಹೊರಬಂದು ಮತ್ತೆ ಹೆಲಿಕಾಪ್ಟರ್ ಏರಿ ಟೇಕ್ ಆಫ್ ಆಗೋದನ್ನ ವಿಡಿಯೋದಲ್ಲಿ ನೋಡಬಹುದು. ಇದೇ ವೇಳೆ “ನಾನು ಇದೇನೋ ತುರ್ತು ಭೂಸ್ಪರ್ಶವಿರಬಹುದು ಎಂದುಕೊಂಡಿದ್ದೆ” ಅಂತ ವ್ಯಕ್ತಿಯೊಬ್ಬರು ಹೇಳೋದನ್ನ ಕೇಳಬಹುದು.

    ಆಸ್ಟ್ರೇಲಿಯಾದ ನಾಗರೀಕ ವಿಮಾನಯಾನ ಸಂಸ್ಥೆಯ ವಕ್ತಾರರು ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಒಂದು ವೇಳೆ ಪೈಲೆಟ್‍ಗೆ ನಿರ್ದಿಷ್ಟ ಭೂಮಿಯ ಮಾಲೀಕನ ಸಮ್ಮತಿ ಇದ್ದರೆ ಹೆಲಿಕಾಪ್ಟರ್ ಲ್ಯಾಂಡ್ ಮಾಡೋದು ತಾಂತ್ರಿಕವಾಗಿ ಕಾನೂನು ಬಾಹಿರವಲ್ಲ ಎಂದಿದ್ದಾರೆ.

    ಅಧಿಕಾರಿಗಳು ಪೈಲೆಟ್ ಯಾರೆಂಬುದನ್ನು ದೃಢಪಡಿಸಿಲ್ಲ. ಆದ್ರೆ ಆಸ್ಟ್ರೇಲಿಯಾದ ಪ್ರಸಿದ್ಧ ರೇಡಿಯೋ ಚಾನೆಲ್‍ನಲ್ಲಿ ತಾನು ಪೈಲೆಟ್ ಎಂದು ಮಾತನಾಡಿದ ವ್ಯಕ್ತಿ ನನಗೆ ಮ್ಯಾಕ್ ಡೊನಾಲ್ಡ್ಸ್ ಆವರಣದಲ್ಲಿ ಲ್ಯಾಂಡ್ ಮಾಡಲು ಅನುಮತಿ ಇದೆ. ಆಗಾಗ ನಾವು ಈ ರೀತಿ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

    ಪೈಲೆಟ್ ಹೆಲಿಕಾಪ್ಟರನ್ನು ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಮಾಡುವಾಗಿನ ಸುರಕ್ಷತೆಯ ಬಗ್ಗೆ ಹಾಗೂ ಈ ವಿಡಿಯೋ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

    https://www.youtube.com/watch?v=iYMqdEZcf8o