Tag: MCD

  • ಆಪ್‌ಗೆ ಹಿನ್ನಡೆ, ಎಂಸಿಡಿಗೆ ಸದಸ್ಯರ ನಾಮನಿರ್ದೇಶನದ ಅಧಿಕಾರ ಎಲ್‌ಜಿಗಿದೆ – ಸುಪ್ರೀಂ

    ಆಪ್‌ಗೆ ಹಿನ್ನಡೆ, ಎಂಸಿಡಿಗೆ ಸದಸ್ಯರ ನಾಮನಿರ್ದೇಶನದ ಅಧಿಕಾರ ಎಲ್‌ಜಿಗಿದೆ – ಸುಪ್ರೀಂ

    ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ (Supreme Court) ದೆಹಲಿಯ ಆಪ್‌ ಸರ್ಕಾರಕ್ಕೆ (AAP govt) ಹಿನ್ನಡೆಯಾಗಿದೆ. ಲೆಫ್ಟಿನೆಂಟ್ ಗವರ್ನರ್ (Delhi Lieutenant Governor) ಅವರು ಸರ್ಕಾರದ ಒಪ್ಪಿಗೆಯಿಲ್ಲದೇ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗೆ (MCD) ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

    ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯಿಂದ ಅಧಿಕಾರ ಬಂದಿದೆ. ಆದ್ದರಿಂದ ಲೆಫ್ಟಿನೆಂಟ್ ಗವರ್ನರ್ ದೆಹಲಿ ಸರ್ಕಾರದ ಸಲಹೆಯನ್ನು ಅನುಸರಿಸುವ ಅಗತ್ಯವಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ಇದನ್ನೂ ಓದಿ: 1 ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆ – ಈಗ ಇನ್ಸ್‌ಪೆಕ್ಟರ್‌ ನೇಣಿಗೆ ಶರಣು

    court order law

    ಲೆಫ್ಟಿನೆಂಟ್ ಗವರ್ನರ್ ಅವರು 10 ಸದಸ್ಯರನ್ನು ಎಮ್‌ಸಿಡಿಗೆ ನಾಮನಿರ್ದೇಶನ ಮಾಡಿದ ಅಧಿಸೂಚನೆಗಳನ್ನು ರದ್ದುಗೊಳಿಸುವಂತೆ ಕೋರಿ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠ ತನ್ನ ತೀರ್ಪನ್ನು ಪ್ರಕಟಿಸಿತು.

    ದೆಹಲಿ ಲೆಫ್ಟಿನೆಂಟ್ ಗವರ್ನರ್‌ನಲ್ಲಿ ಅಧಿಕಾರ ಲಾಟರಿ ಎಂದು ಸೂಚಿಸುವುದು ತಪ್ಪಾಗಿದೆ. ಇದು ಸಂಸತ್ತು ಮಾಡಿದ ಕಾನೂನು, ಇದು ಲೆಫ್ಟಿನೆಂಟ್ ಗವರ್ನರ್ ಅವರು ಚಲಾಯಿಸುವ ವಿವೇಚನೆಯನ್ನು ಪೂರೈಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಮೃತ ಪಿಎಸ್‌ಐ ಪರಶುರಾಮ್ ಪತ್ನಿಗೆ ಸರ್ಕಾರದಿಂದ ಉದ್ಯೋಗ: ಪರಮೇಶ್ವರ್

    ಆರ್ಟಿಕಲ್ 239 ರ ವಿನಾಯಿತಿಯ ಅಡಿಯಲ್ಲಿ ಬರುತ್ತದೆ. 1993 ರ ಎಂಸಿಡಿ ಕಾಯ್ದೆ ಲೆಫ್ಟಿನೆಂಟ್ ಗವರ್ನರ್‌ಗೆ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಮೊದಲು ನೀಡಿತು ಎಂದು ನ್ಯಾಯಾಲಯ ಹೇಳಿದೆ.

     

  • ಪಾಲಿಕೆಗೆ ಆಯ್ಕೆಯಾದ ಆಪ್ ಕೌನ್ಸಿಲರ್‌ಗಳನ್ನು ಖರೀದಿಸಲು BJP ಯತ್ನ – ಆಪ್ ಆರೋಪ

    ಪಾಲಿಕೆಗೆ ಆಯ್ಕೆಯಾದ ಆಪ್ ಕೌನ್ಸಿಲರ್‌ಗಳನ್ನು ಖರೀದಿಸಲು BJP ಯತ್ನ – ಆಪ್ ಆರೋಪ

    ನವದೆಹಲಿ: ದೆಹಲಿಯ ಮಹಾನಗರ ಪಾಲಿಕೆಗೆ (MCD) ಆಯ್ಕೆಯಾದ ಕೌನ್ಸಿಲರ್‌ಗಳನ್ನು ಬಿಜೆಪಿ ಪಕ್ಷವು ಖರೀದಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ಬಿಜೆಪಿ (BJP) ತನ್ನ ಕೊಳಕು ರಾಜಕಾರಣವನ್ನು ಪ್ರದರ್ಶಿಸಿದೆ ಎಂದು ಆಮ್ ಆದ್ಮಿ ಪಕ್ಷ (AAP) ಆರೋಪಿಸಿದೆ.

    ಈ ಸಂಬಂಧ ಎಎಪಿ ನೂತನ ಕೌನ್ಸಿಲರ್‌ಗಳಾದ ಡಾ.ರೋನಾಕ್ಷಿ ಶರ್ಮಾ, ಅರುಣ್ ನವಾರಿಯಾ, ಜ್ಯೋತಿ ರಾಣಿ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ (Sanjay Singh) ಅವರಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಆಪ್ ಕೌನ್ಸಿಲರ್‌ಗಳನ್ನು ಖರೀದಿಸಲು ಬಿಜೆಪಿ (BJP) 100 ಕೋಟಿ ರೂ. ಬಜೆಟ್ ಅನ್ನು ಪ್ರಸ್ತಾಪಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಂಡೀಗಢ ಬಿಜೆಪಿ, ಕಾಂಗ್ರೆಸ್‍ಗೆ ಮುಖಭಂಗ – ನಗರಪಾಲಿಕೆ ಚುನಾವಣೆಯಲ್ಲಿ ಎಎಪಿ ಮೇಲುಗೈ

    ಭಾರತೀಯ ಜನತಾ ಪಕ್ಷವು ಕರ್ನಾಟಕ, ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಗೋವಾ ಹಾಗೂ ಗುಜರಾತ್ ನಂತೆಯೇ ಚುನಾಯಿತ ಪ್ರತಿನಿಧಿಗಳನ್ನು ಖರೀದಿಸಿರುವ ಸೂತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ. ಹಣ ಹಾಗೂ ಬೆದರಿಕೆಯ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಹಾಗೂ ಜನಾದೇಶವನ್ನು ಅವಮಾನಿಸಲು ಪ್ರಯತ್ನಿಸುತ್ತಿದೆ. ಅಂತಹವರನ್ನು ಬಂಧಿಸಿ ಜೈಲಿಗಟ್ಟುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಳೆಬಿಲ್ಲು ಬಣ್ಣದ ಶರ್ಟ್ ಧರಿಸಿ ಬಂಧನವಾಗಿದ್ದ ಅಮೆರಿಕದ ಪತ್ರಕರ್ತ ಕತಾರ್‌ನಲ್ಲಿ ನಿಧನ

    ಬಿಜೆಪಿ ನಮಗಿಂತಲೂ 30 ಸ್ಥಾನಗಳನ್ನು ಕಡಿಮೆ ಪಡೆದಿದ್ದರೂ ನಾಚಿಕೆಯಿಲ್ಲದೇ ಮೇಯರ್ ಸ್ಥಾನವೂ ನಮ್ಮದೇ ಎಂದು ಹೇಳುತ್ತದೆ. ಅಧಿಕಾರಕ್ಕೆ ಬರಲೇಬೇಕು ಎಂಬ ಉದ್ದೇಶದಿಂದ 100 ಕೋಟಿ ರೂ. ಬಜೆಟ್ ಅನ್ನು ಪ್ರಸ್ತಾಪಿಸಿದ್ದಾರೆ. 10 ಕೌನ್ಸಿಲರ್‌ಗಳಿಗೆ ತಲಾ 10 ಕೋಟಿಯಂತೆ 100 ಕೋಟಿ ಹಣ ವ್ಯಯಿಸಲು ಮುಂದಾಗಿದೆ ಎಂದು ದೂರಿದ್ದಾರೆ.

    ಎಎಪಿ ಕೌನ್ಸಿಲರ್‌ಗಳು ಅರವಿಂದ್ ಕೇಜ್ರಿವಾಲ್ (Arvind Kejriwal) ಅವರೊಂದಿಗೆ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಇದ್ದಾರೆ. ನಮ್ಮ ಕೌನ್ಸಿಲರ್‌ಗಳು ಅವರ ಎಲ್ಲಾ ತಂತ್ರಗಳನ್ನು ಬಹಿರಂಗಪಡಿಸುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಪ್‌ ಗೆದ್ದರೂ ದೆಹಲಿ ಮೇಯರ್‌ ಹುದ್ದೆ ಬಿಜೆಪಿಗೆ ಸಿಗುತ್ತಾ?

    ಇತ್ತೀಚೆಗೆ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್‌ನ 250 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 134 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ 15 ವರ್ಷಗಳ ಬಿಜೆಪಿ ಆಡಳಿತವನ್ನ ಕೊನೆಗೊಳಿಸಿತು. ಬಿಜೆಪಿ 104 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನು ಗೆದ್ದು ಮಕಾಡೆ ಮಲಗಿತು.

    Live Tv
    [brid partner=56869869 player=32851 video=960834 autoplay=true]

  • ದೆಹಲಿ ಸಿಎಂ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು – ಮನೀಶ್ ಸಿಸೋಡಿಯಾ ಆರೋಪ

    ದೆಹಲಿ ಸಿಎಂ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು – ಮನೀಶ್ ಸಿಸೋಡಿಯಾ ಆರೋಪ

    ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆ (Gujarat Assembly Election) ಹಾಗೂ ದೆಹಲಿಯ ಮಹಾನಗರಪಾಲಿಕೆ (MCD) ಚುನಾವಣಾ ಸೋಲಿನ ಭೀತಿಯಿಂದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಗಂಭೀರ ಆರೋಪ ಮಾಡಿದ್ದಾರೆ.

    ಕೇಜ್ರಿವಾಲ್ ಹತ್ಯೆಗೆ ಸಂಚು ರೂಪಿಸಿದ್ದು, ದೆಹಲಿ ಸಂಸದ ಮನೋಜ್ ತಿವಾರಿ (Manoj Tiwari) ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮನೋಜ್ ತಿವಾರಿ ಕೇಜ್ರಿವಾಲ್ ಭದ್ರತೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಮರು ದಿವಸ ಸಿಸೋಡಿಯಾ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ತಿಹಾರ್ ಜೈಲಿನ ಬಳಿಯೇ ಕೈ ನಾಯಕಿಯ ಕಾರು ಕಳ್ಳತನ – ವೀಡಿಯೋ ಪೋಸ್ಟ್ ಮಾಡಿ ಪಂಖೂರಿ ಪಾಠಕ್ ಕಿಡಿ

    ಅರವಿಂದ್ ಕೇಜ್ರಿವಾಲ್ ಅವರನ್ನ ಹತ್ಯೆ ಮಾಡಲು ಬಿಜೆಪಿ ಸಂಚು ರೂಪಿಸಿದೆ. ಸಂಸದ ಮನೋಜ್ ತಿವಾರಿ ಬಹಿರಂಗವಾಗಿಯೇ ತಮ್ಮ ಗುಂಡಾಗಳಿಗೆ ದಾಳಿ ಮಾಡುವಂತೆ ಹೇಳುತ್ತಿದ್ದಾರೆ. ಇದಕ್ಕೆ ಸಂಪೂರ್ಣ ಯೋಜನೆ ರೂಪಿಸಿದ್ದಾರೆ. ಆದರೆ ಎಎಪಿ ಇಂತಹ ನೀಚ ರಾಜಕಾರಣಕ್ಕೆ ಹೆದರೋದಿಲ್ಲ. ಗೂಂಡಾಗಿರಿ ಮಾಡುವ ಜನರಿಗೆ ಅವರದ್ದೇ ರೀತಿಯಲ್ಲಿ ತಕ್ಕ ಉತ್ತರ ಕೊಡುತ್ತದೆ ಎಂದು ಸಿಸೋಡಿಯಾ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಿಳಾ ನಾಯಕಿ ವಿರುದ್ಧ ಅಶ್ಲೀಲ ಟೀಕೆ ಆಡಿಯೋ ವೈರಲ್‌ – ಬಿಜೆಪಿ ನಾಯಕ ಸಸ್ಪೆಂಡ್

    ಅರವಿಂದ್ ಕೇಜ್ರಿವಾಲ್ ಅವರ ಭದ್ರತೆಯ ಬಗ್ಗೆ ನಾನು ಕಳಕಳಿ ವ್ಯಕ್ತಪಡಿಸುತ್ತೇನೆ. ಏಕೆಂದರೆ ನಿರಂತರ ಭ್ರಷ್ಟಾಚಾರ, ಎಂಸಿಡಿ ಚುನಾವಣೆಯಲ್ಲಿ ಟಿಕೆಟ್ ಮಾರಾಟ, ಅತ್ಯಾಚಾರಿಗಳೊಂದಿಗೆ ಸ್ನೇಹ ಹಾಗೂ ಜೈಲಿನಲ್ಲಿ ಮಸಾಜ್ ಇಂತಹ ಹಲವು ಘಟನೆಗಳಿಂದ ಎಎಪಿ ಸ್ವಯಂ ಸೇವಕರು ಕೋಪಗೊಂಡಿದ್ದಾರೆ. ಅಲ್ಲದೇ ಕೆಲವು ಶಾಸಕರಿಗೂ ಥಳಿಸಿದ್ದಾರೆ. ದೆಹಲಿಯ ಮುಖ್ಯಮಂತ್ರಿಗಳಿಗೆ ಹೀಗೆ ಆಗಬಾರದು ಎಂದು ಹಿಂದಿಯಲ್ಲಿ ಮನೋಜ್ ತಿವಾರಿ ಟ್ವೀಟ್ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ದೆಹಲಿಯ ಬೀದಿ-ಬೀದಿಗಳನ್ನು ಸ್ವಚ್ಛಗೊಳಿಸ್ತೀವಿ – ಕೇಜ್ರಿವಾಲ್ ಭರವಸೆ

    ದೆಹಲಿಯ ಬೀದಿ-ಬೀದಿಗಳನ್ನು ಸ್ವಚ್ಛಗೊಳಿಸ್ತೀವಿ – ಕೇಜ್ರಿವಾಲ್ ಭರವಸೆ

    ನವದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಮುಂಬರುವ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ (MCD) ಚುನಾವಣೆಗೆ (Elelction) ಪಕ್ಷದ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆಗೊಳಿಸಿದರು. ಪ್ರಣಾಳಿಕೆಯಲ್ಲಿ 10 ಭರವಸೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿದರು.

    ರಾಷ್ಟ್ರರಾಜಧಾನಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ದೆಹಲಿಯಲ್ಲಿ ನಾವು 10 ಭರವಸೆಗಳನ್ನು ಈಡೇರಿಸಲು ಕೆಲಸ ಮಾಡುತ್ತೇವೆ. ದೆಹಲಿಯ ಬೀದಿ-ಬೀದಿಗಳನ್ನು ಸ್ವಚ್ಛಗೊಳಿಸುತ್ತೇವೆ. ಕಸದ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ಉದ್ಯಾನಗಳ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡ್ತೇವೆ. ಇದರೊಂದಿಗೆ ಎಂಸಿಡಿಯನ್ನು ಭ್ರಷ್ಟಾಚಾರ ಮುಕ್ತಗೊಳಿಸಿ, ವಾಹನ-ಪಾರ್ಕಿಂಗ್ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ಎಂಸಿಡಿ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುವ ಕ್ರಮ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಹವಾಲಾ ದಂಧೆ – ಕಾರಿನಲ್ಲಿ 2 ಕೋಟಿ ರೂ. ಪತ್ತೆ, 8 ಮಂದಿ ಅರೆಸ್ಟ್

    ಇದಕ್ಕೂ ಮುನ್ನ ಎಎಪಿ (AAP) ಶಾಸಕರು ಹಾಗೂ ಉಪಮುಖ್ಯಮಂತ್ರಿಗಳೂ ಆಗಿರುವ ಮನೀಶ್ ಸಿಸೋಡಿಯಾ (Manish Sisodia) ಹಾಗೂ ರಾಜ್ಯ ಎಎಪಿ ಘಟಕದ ಸಂಚಾಲಕ ಗೋಪಾಲ್ ರೈ ಮೊದಲಾದವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಇದನ್ನೂ ಓದಿ: ಮಾಡೆಲ್ ಆಗಲು ಪೊಲೀಸ್ ಉದ್ಯೋಗ ಬಿಡಲ್ಲ ಎಂದ ವಿಶ್ವಸುಂದರಿ ಡಯಾನಾ

    ಎಂಸಿಡಿ 250 ಸ್ಥಾನಗಳಿಗೆ ನಡೆಯುವ ಚುನಾವಣಾ (Election) ತಯಾರಿಗಳ ಕುರಿತು ಚರ್ಚಿಸಲಾಯಿತು. ಜೊತೆಗೆ ಚುನಾವಣಾ ತಯಾರಿಯ ಭಾಗವಾಗಿ ಜನ ಸಂವಾದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಮಸ್ಯೆಗಳನ್ನು ಆಲಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು. ನವೆಂಬರ್ 20ರ ಒಳಗೆ, ದೆಹಲಿಯ 13,682 ಬೂತ್‌ಗಳಲ್ಲಿ ಸಾರ್ವಜನಿಕ ಸಂವಾದವನ್ನು ನಡೆಸಲು ಪಕ್ಷವು ಯೋಜಿಸಿದ್ದು, ಪ್ರತಿದಿನಕ್ಕೆ 500 ಸಾರ್ವಜನಿಕ ಸಭೆಗಳನ್ನು ನಡೆಸಲು ಪಕ್ಷ ತೀರ್ಮಾನ ತೆಗೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರತಿ ಮಗುವಿಗೆ ಶಿಕ್ಷಣ, ಯುವಕರಿಗೆ ಉದ್ಯೋಗ ಕೊಡದೇ ಬಲಿಷ್ಠ ಭಾರತದ ನಿರ್ಮಾಣವಾಗದು: ಕೇಜ್ರಿವಾಲ್

    ಪ್ರತಿ ಮಗುವಿಗೆ ಶಿಕ್ಷಣ, ಯುವಕರಿಗೆ ಉದ್ಯೋಗ ಕೊಡದೇ ಬಲಿಷ್ಠ ಭಾರತದ ನಿರ್ಮಾಣವಾಗದು: ಕೇಜ್ರಿವಾಲ್

    ನವದೆಹಲಿ: 75ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ಜನರಿಗೆ ರಾಜ್ಯಸರ್ಕಾರ 25 ಲಕ್ಷ ರಾಷ್ಟ್ರೀಯ ಧ್ವಜಗಳನ್ನು ನೀಡಲು ನಿರ್ಧರಿಸಿದೆ. ಶಾಲೆ – ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲದೇ ಪ್ರತಿಯೊಬ್ಬರಿಗೂ ರಾಷ್ಟ್ರೀಯ ಧ್ವಜ ತಲುಪಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

    Add New

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಗ್ರಾಮಕ್ಕೆ ರಸ್ತೆ ಸಂಪರ್ಕ ಮತ್ತು ಪ್ರತಿ ಮನೆಗೆ ವಿದ್ಯುತ್ ಮತ್ತು ನೀರು ಸರಬರಾಜು ಮಾಡುವುದು ಸಹ ಮುಖ್ಯವಾಗಿದೆ. ಇದಲ್ಲದೆ ಪ್ರತಿಯೊಬ್ಬ ನಿರುದ್ಯೋಗಿ ಯುವಕರಿಗೆ ನಾವು ಗೌರವಯುತ ಉದ್ಯೋಗಾವಕಾಶ ಒದಗಿಸಬೇಕು. ಮಹಿಳೆಯರು ಅಭಿವೃದ್ಧಿ ಹೊಂದಲು ನಾವು ಈ ಸಮಾಜವನ್ನು ಸುರಕ್ಷಿತಗೊಳಿಸಬೇಕಾಗಿದೆ. ನಾವು ಇದನ್ನು ಸಾಧಿಸದ ಹೊರತು, ನಾವು ಬಲಿಷ್ಠ ರಾಷ್ಟ್ರಕ್ಕಾಗಿ ಭರವಸೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ಇದನ್ನೂ ಓದಿ: ಸಿದ್ದರಾಮೋತ್ಸವ ನಂತರ ಮುನಿಸು ಮರೆತು ಒಂದಾದ ಸಿದ್ದು, ಡಿಕೆ – ಜಂಟಿ ರೋಡ್ ಶೋ

    ಆಗಸ್ಟ್ 14 ರಂದು ನಗರದ ನೂರಕ್ಕೂ ಅಧಿಕ ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಅಂದು ಸಂಜೆ 5 ಗಂಟೆಗೆ ಧ್ವಜ ಹಿಡಿದು ರಾಷ್ಟ್ರಗೀತೆ ಹಾಡಲು ಮತ್ತು ಭಾರತವನ್ನು `ವಿಶ್ವದ ಅತ್ಯುತ್ತಮ ದೇಶ’ ಮಾಡುವುದಾಗಿ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಜನರಿಗೆ ಮನವಿ ಮಾಡಿದ್ದಾರೆ.

    75ನೇ ವರ್ಷದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ನಗರದ ಎಲ್ಲ ಬಡಾವಣೆಗಳು, ಮೊಹಲ್ಲಾಗಳು ಸೇರಿದಂತೆ ಸ್ಲಂಗಳಲ್ಲೂ ರಾಷ್ಟ್ರಧ್ವಜವನ್ನು ವಿತರಿಸಲಾಗುವುದು. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೂ ತ್ರಿರಂಗ ನೀಡಲಾಗುವುದು ಇದರಿಂದ ಪ್ರತಿಯೊಬ್ಬರ ಕೈಗೂ ರಾಷ್ಟ್ರಧ್ವಜ ಸಿಗಲಿದ್ದು, ಅದರೊಂದಿಗೆ ರಾಷ್ಟ್ರಗೀತೆಯನ್ನು ಹೇಳುವ ಮೂಲಕ ವಿಶೇಷವಾಗಿ ಹಬ್ಬವನ್ನು ಆಚರಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಸ್ವಾಮೀಜಿ ಆತ್ಮಹತ್ಯೆ – ಬಿಜೆಪಿ ಶಾಸಕ ವಿರುದ್ಧ ಆರೋಪ

    ಅಜಾದಿ ಕಾ ಅಮೃತ್ ಮಹೋತ್ಸವ ಹಿನ್ನಲೆ ಕೇಂದ್ರ ಸರ್ಕಾರ `ಹರ್ ಘರ್ ತಿರಂಗಾ’ ಅಭಿಯಾನ ಹಮ್ಮಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ದೆಹಲಿ ಸರ್ಕಾರ ಪ್ರತಿಯೊಬ್ಬರ ಕೈಗೂ ರಾಷ್ಟ್ರಧ್ವಜ ನೀಡುವ ಸಂಕಲ್ಪ ಮಾಡಿದೆ. 25 ಲಕ್ಷ ಬಾವುಟಗಳಿಗಾಗಿ ಸಮಾಜ ಕಲ್ಯಾಣ ಇಲಾಖೆಯೂ ಹಲವು ಸ್ವ-ಸಹಾಯ ಗುಂಪುಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು ಆಗಸ್ಟ್ 14ರ ಮುನ್ನ ಜನರ ಕೈ ತಲುಪಿಸಲು ಯೋಜನೆ ರೂಪಿಸಿದೆ ಎಂದು ಅವರು ಹೇಳಿದರು.

    ಆದಾಗ್ಯೂ ಪ್ರತಿ ಮಗುವಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಪ್ರತಿ ನಾಗರಿಕರಿಗೆ ವಿಶ್ವ ದರ್ಜೆಯ ಆರೋಗ್ಯ ಸೇವೆ ಸಿಗದ ಹೊರತು ಭಾರತವು ಉನ್ನತ ಸ್ಥಾನವನ್ನು ತಲುಪಲು ಸಾಧ್ಯವಿಲ್ಲ. ಪ್ರತಿ ಮಗುವಿಗೆ ಅತ್ಯುತ್ತಮ ಶಿಕ್ಷಣವಿಲ್ಲದೆ, ನಮ್ಮ ದೇಶವು ವಿಶ್ವ ನಾಯಕನಾಗಲು ಸಾಧ್ಯವಿಲ್ಲ. ಪ್ರತಿ ಪಟ್ಟಣ ಮತ್ತು ಹಳ್ಳಿಗಳಲ್ಲಿ ಅತ್ಯುತ್ತಮ ಆರೋಗ್ಯ ಸೇವೆಯಿಲ್ಲದೆ, ಭಾರತವು ವಿಶ್ವದ ನಂಬರ್ ಒನ್ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೆಹಲಿ ಪಾಲಿಕೆ ಚುನಾವಣೆ ನಡೆಸಿ ಬಿಜೆಪಿ ಗೆದ್ದರೆ ಎಎಪಿ ರಾಜಕೀಯ ತೊರೆಯಲಿದೆ: ಕೇಜ್ರಿವಾಲ್‌ ಸವಾಲು

    ದೆಹಲಿ ಪಾಲಿಕೆ ಚುನಾವಣೆ ನಡೆಸಿ ಬಿಜೆಪಿ ಗೆದ್ದರೆ ಎಎಪಿ ರಾಜಕೀಯ ತೊರೆಯಲಿದೆ: ಕೇಜ್ರಿವಾಲ್‌ ಸವಾಲು

    ನವದೆಹಲಿ: ಸಕಾಲಕ್ಕೆ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯನ್ನು ನಡೆಸದ ವಿಚಾರವಾಗಿ ಬಿಜೆಪಿ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆಯನ್ನು ಸಕಾಲಕ್ಕೆ ನಡೆಸಿ ಬಿಜೆಪಿ ಗೆಲುವು ಸಾಧಿಸಿದರೆ ಆಮ್‌ ಆದ್ಮಿ ಪಕ್ಷ ರಾಜಕೀಯವನ್ನು ತ್ಯಜಿಸುತ್ತದೆ ಎಂದು ಸವಾಲು ಹಾಕಿದ್ದಾರೆ.

    ದೆಹಲಿಯ ಮೂರು ಮಹಾನಗರ ಪಾಲಿಕೆ (ಪೂರ್ವ, ಉತ್ತರ, ದಕ್ಷಿಣ) ವಿಲೀನಗೊಳಿಸಲು ಏಕೀಕರಣ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದನ್ನೂ ಓದಿ: ದಿದಿ ನಾಡಿನಲ್ಲೇ ಹಿಂಸಾಚಾರ – ಹೆದರಿ ಮನೆ ತೊರೆಯುತ್ತಿರುವ ಜನರು

    ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಗೆ ಸಣ್ಣ ಚುನಾವಣೆಯಲ್ಲಿ ಅತಿ ಚಿಕ್ಕದಾದ ಪಕ್ಷದ ಬಗ್ಗೆ ಭಯವಾಗುತ್ತಿದೆ. ಪಾಲಿಕೆ ಚುನಾವಣೆಯನ್ನು ಸಕಾಲಕ್ಕೆ ನಡೆಸುವ ಧೈರ್ಯ ಬಿಜೆಪಿಗೆ ಇದೆಯೇ ಎಂದು ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.

    ದೆಹಲಿ ಮಹಾನಗರ ಪಾಲಿಕೆ ಚುನಾವಣೆಯನ್ನು ಬಿಜೆಪಿ ಮುಂದೂಡಿರುವುದು, ಬ್ರಿಟಿಷರನ್ನು ದೇಶದಿಂದ ಓಡಿಸಿ ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಲು ತ್ಯಾಗ-ಬಲಿದಾನ ಮಾಡಿದ ಹುತಾತ್ಮರಿಗೆ ಮಾಡಿದ ಅವಮಾನ. ಇಂದು ಸೋಲಿನ ಭಯದಿಂದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡುತ್ತಿದ್ದಾರೆ. ಅವರು ರಾಜ್ಯಗಳು ಮತ್ತು ದೇಶದ ಚುನಾವಣೆಗಳನ್ನು ಮುಂದೂಡುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಯುಎಇಯಿಂದ ಜಮ್ಮು- ಕಾಶ್ಮೀರದಲ್ಲಿ 70 ಸಾವಿರ ಕೋಟಿ ಹೂಡಿಕೆ; 7 ಲಕ್ಷ ಉದ್ಯೋಗ ಸೃಷ್ಟಿಯ ಗುರಿ