Tag: MC Sudhakar

  • ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಪುನರ್‌ ವಿಮರ್ಶೆ ನಡೆಸಬೇಕು – ಎಂ.ಸಿ.ಸುಧಾಕರ್

    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಪುನರ್‌ ವಿಮರ್ಶೆ ನಡೆಸಬೇಕು – ಎಂ.ಸಿ.ಸುಧಾಕರ್

    – ಸೂಕ್ತ ಶಿಕ್ಷಣ ನೀಡುವ ಅಧ್ಯಾಪಕರ ಕೊರತೆ ಬಗ್ಗೆ ಚಿಂತಿಸಿಲ್ಲ ಎಂದ ಸಚಿವ

    ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (National Education Policy) ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಹೇಳಿಮಾಡಿಸಿದಂತಿದ್ದು, ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಸರಿಯಾದುದ್ದಲ್ಲ, ಶಿಕ್ಷಣಕ್ಕಿಂತ ಸಮಸ್ಯೆಗಳಿಗೆ ಹೆಚ್ಚು ದಾರಿ ಮಾಡಿಕೊಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ (Dr. M.C.Sudhakar) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಬಹುಶಿಸ್ತೀಯ, ಬಹು ಆಯ್ಕೆಯ, ಮುಕ್ತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಈ ಶಿಕ್ಷಣ ನೀತಿ ಒಂದೇ ಸೂರಿನಡಿ ಎಲ್ಲಾ ವಿಭಾಗಗಳನ್ನು ಹೊಂದಿರುವ ಖಾಸಗಿ ವಿಶ್ವವಿದ್ಯಾಲಯ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಿಯಾಗಿರಬಹುದು. ಆದರೆ ಕೃಷಿ, ಕಾನೂನು, ಇಂಜಿನಿಯರಿಂಗ್, ವೈದ್ಯಕೀಯ ಎಂದೂ ಹಂಚಿಹೋಗಿರುವ ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ಅಸಾಧ್ಯವಾಗಿದೆ ಎಂದರು.ಇದನ್ನೂ ಓದಿ: ಕೇಂದ್ರ ಗೃಹ ಸಚಿವನಾಗಿ ಜಮ್ಮು-ಕಾಶ್ಮೀರ ಭೇಟಿ ಸಮಯದಲ್ಲಿ ಭಯವಾಗುತ್ತಿತ್ತು: ಸುಶೀಲ್ ಕುಮಾರ್ ಶಿಂಧೆ

    ಕಲಾ ವಿಭಾಗದಲ್ಲಿ ಓದುವ ವಿದ್ಯಾರ್ಥಿ ವಿಜ್ಞಾನ ಓದಲು ಬಯಸಿದರೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅವಕಾಶ ನೀಡಲಾಗಿದೆ. ಆದರೆ ಸೂಕ್ತ ಶಿಕ್ಷಣ ನೀಡುವ ಅಧ್ಯಾಪಕರ ಕೊರತೆಯ ಬಗ್ಗೆ ಚಿಂತನೆ ನಡೆಸಿಲ್ಲ. ಕರ್ನಾಟಕದ ಅನೇಕ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಕೊರತೆಯಿದೆ. 14 ಸಾವಿರ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದರೂ ಕೊರತೆ ಮಾತ್ರ ನೀಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿದ್ದು, ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಕ್ರೆಡಿಟ್ ಸ್ಕೋರ್ ಮತ್ತು ಮುಕ್ತ ಆಯ್ಕೆಗಳನ್ನು ಒಳಗೊಂಡಂತೆ ಸೂಕ್ತ ಮಾರ್ಪಾಡುಗಳನ್ನು ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ರಾಜ್ಯ ಶಿಕ್ಷಣ ನೀತಿಗಾಗಿ ಆಯೋಗ ರಚಿಸಿ ಮಧ್ಯಂತರ ವರದಿ ಆಧಾರ ರಾಜ್ಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಲಾಗಿದೆ. ಅತಿಶೀಘ್ರದಲ್ಲಿ ಅಂತಿಮ ವರದಿಯನ್ನು ಕೂಡ ಸ್ವೀಕರಿಸಲಾಗುವುದು ಎಂದು ಭರವಸೆ ನೀಡಿದರು.

    ಸರ್ಕಾರಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಅನೇಕ ಸಮಸ್ಯೆ ಎದುರಿಸುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮತ್ತಷ್ಟು ಸಮಸ್ಯೆಗೆ ಒಳಗಾಗಿತ್ತು. ಆ ಆತಂಕವನ್ನು ರಾಜ್ಯ ಸರ್ಕಾರ ದೂರಗೊಳಿಸಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ, ಬೆಳಸಬೇಕಾಗಿದೆ. ಭವಿಷ್ಯದಲ್ಲಿ ಶಿಕ್ಷಣ ಕ್ಷೇತ್ರದ ದೃಷ್ಟಿಯಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಬೇಕು. ಶಿಕ್ಷಣ ಕ್ಷೇತ್ರ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಕೂಡದು ಎಂದು ಎಚ್ಚರಿಕೆ ಗಂಟೆಯನ್ನು ಬಾರಿಸಿದ್ದಾರೆ.ಇದನ್ನೂಓದಿ: ಸಂಗೀತ ನಿರ್ದೇಶಕ ಗುರುಕಿರಣ್, ಸಮಾಜ ಸೇವಕ ರಾಜಣ್ಣಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್

    ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದರೂ ಅನೇಕ ಕೊರತೆಗಳನ್ನು ಎದುರಿಸುತ್ತಿದೆ. ಇನ್ನೂ ಹಿಂದುಳಿದ ರಾಜ್ಯಗಳ ಪರಿಸ್ಥಿತಿ ಏನಾಗಿರಬಹುದು? ಈ ವ್ಯವಸ್ಥೆಯಲ್ಲಿ ರಾಷ್ಟ್ರದೂದ್ದಕ್ಕೂ ಒಂದೇ ಶಿಕ್ಷಣ ವ್ಯವಸ್ಥೆ ಜಾರಿ ಹೇಗೆ ಸಾಧ್ಯ? ಪರ್ಯಾಯ ವ್ಯವಸ್ಥೆಗಳನ್ನು ರೂಪಿಸದೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಕ್ರಮ ಸರಿಯಾದುದಲ್ಲ. ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪುನರ್ ವಿಮರ್ಶಿಸುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

  • ಸಂಗೀತ ನಿರ್ದೇಶಕ ಗುರುಕಿರಣ್, ಸಮಾಜ ಸೇವಕ ರಾಜಣ್ಣಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್

    ಸಂಗೀತ ನಿರ್ದೇಶಕ ಗುರುಕಿರಣ್, ಸಮಾಜ ಸೇವಕ ರಾಜಣ್ಣಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್

    ಬೆಂಗಳೂರು: ತನ್ನ 59ನೇ ಘಟಿಕೋತ್ಸವದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಮತ್ತು ಸಮಾಜಸೇವಕ ಕೆ.ಎಸ್ ರಾಜಣ್ಣನವರಿಗೆ ಬೆಂಗಳೂರು ವಿಶ್ವವಿದ್ಯಾಲಯವು (Bengaluru University) ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

    59ನೇ ವಾರ್ಷಿಕ ಘಟಿಕೋತ್ಸವದಲ್ಲಿ 31,382 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದು, 26,210 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. 21,853 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದುಕೊಂಡಿದ್ದು, 5,861 ವಿದ್ಯಾರ್ಥಿಗಳು ಪ್ರಥಮ ದರ್ಜೆ, 1,289 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಡೆದುಕೊಂಡು ತೇರ್ಗಡೆ ಹೊಂದಿದ್ದಾರೆ. ಒಟ್ಟು 308 ಚಿನ್ನದ ಪದಕಗಳನ್ನು (Gold Medal) ವಿದ್ಯಾರ್ಥಿಗಳು ಮುಡಿಗೇರಿಸಿಕೊಂಡಿದ್ದು, 79 ನಗದು ಬಹುಮಾನವನ್ನು ಸ್ವೀಕರಿಸಿದ್ದಾರೆ. 140 ವಿದ್ಯಾರ್ಥಿಗಳು ಪಿಹೆಚ್‌ಡಿ ಪದವಿ ಸ್ವೀಕರಿಸಿದರು.

    59ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಎಸ್.ಅನ್ನಪೂರ್ಣ 9 ಚಿನ್ನದ ಪದಕ ಮತ್ತು ಸ್ನಾತಕ ಪದವಿ ವಿಭಾಗದಲ್ಲಿ ಅನುರಾಧ 9 ಚಿನ್ನದ ಪದಕ ಸ್ವೀಕರಿಸಿ ಅತಿ ಹೆಚ್ಚು ಚಿನ್ನದ ಪದಕ ಪಡೆದ ಪಟ್ಟಿಗೆ ಸೇರಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ ಅನುದಾನವನ್ನು ಕೇಂದ್ರ ತಕ್ಷಣವೇ ಬಿಡುಗಡೆಗೊಳಿಸಲಿ : ಎಚ್.ಕೆ ಪಾಟೀಲ್

    ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಗಣ್ಯರಿಗೂ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಲಾಯಿತು. ಗೌರವ ಡಾಕ್ಟರೇಟ್ ಸ್ವೀಕರಿಸುವ ಸಂದರ್ಭದಲ್ಲಿ ಗುರುಕಿರಣ್ ಕುಟುಂಸ್ಥರು ಸೇರಿದಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ಪ್ರಿಯಾಂಕಾ ಉಪೇಂದ್ರ ಉಪಸ್ಥಿತರಿದ್ದರು. ಇದನ್ನೂ ಓದಿ: Devara Trailer: ರಕ್ತದಿಂದ ಸಮುದ್ರವೇ ಕೆಂಪಾದ ಕಥೆ ಹೇಳೋಕೆ ಬರುತ್ತಿದ್ದಾರೆ ಜ್ಯೂ.ಎನ್‌ಟಿಆರ್‌, ಜಾನ್ವಿ ಕಪೂರ್‌

    ಇನ್ನೂ ಬೆಂಗಳೂರು ವಿಶ್ವವಿದ್ಯಾಲಯ 59ನೇ ಘಟಿಕೋತ್ಸವಕ್ಕೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಗೈರಾದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರು ಮತ್ತು ಸಹ ಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ ಉಪಾಧ್ಯಕ್ಷರಾದ ಪ್ರೊ.ದೀಪಕ್ ಕುಮಾರ್ ಶ್ರೀವಾಸ್ತವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವದ ಭಾಷಣ ಮಾಡಿದರು.

    ಕುಲಪತಿ ಡಾ.ಎಸ್.ಎಂ ಜಯಕರ, ಕುಲಸಚಿವ ಕೆ.ಎ.ಎಸ್ ಶೇಕ್ ಲತೀಫ್, ಪರೀಕ್ಷಾಂಗ ಕುಲಸಚಿವ ಸಿ.ಶ್ರೀನಿವಾಸ್ ಸೇರಿದಂತೆ ಸಿಂಡಿಕೇಟ್ ಸದಸ್ಯರು, ಡೀನರ್ ಉಪಸ್ಥಿತರಿದ್ದರು.  ಇದನ್ನೂ ಓದಿ: ಅಭಿವೃದ್ಧಿ ವಿಷಯದಲ್ಲಿ ಸಂಘರ್ಷ ಬೇಡ – ಸಚಿವ ಎಂ.ಬಿ ಪಾಟೀಲ್‌ಗೆ ಕೇಂದ್ರ ಸಚಿವ ಹೆಚ್‌ಡಿಕೆ HD ಕುಮಾರಸ್ವಾಮಿ ಭರವಸೆ 

  • ಸುಧಾಕರ್‌ Vs ಮುನಿಯಪ್ಪ – ರಾಜಕೀಯ ಸಂಘರ್ಷಕ್ಕೆ ಇದೆ 25 ವರ್ಷಗಳ ಇತಿಹಾಸ

    ಸುಧಾಕರ್‌ Vs ಮುನಿಯಪ್ಪ – ರಾಜಕೀಯ ಸಂಘರ್ಷಕ್ಕೆ ಇದೆ 25 ವರ್ಷಗಳ ಇತಿಹಾಸ

    ಬೆಂಗಳೂರು/ಕೋಲಾರ: ಸಚಿವರಾದ ಎಂಸಿ ಸುಧಾಕರ್ (MC Sudhakar) ಮತ್ತು ಸಚಿವ ಮುನಿಯಪ್ಪ (Muniyappa) ನಡುವಿನ ರಾಜಕೀಯ ಸಂಘರ್ಷಕ್ಕೆ 25 ವರ್ಷಗಳ ಇತಿಹಾಸವಿದೆ.

    1999ರಲ್ಲಿ ಸುಧಾಕರ್ ತಂದೆ ಚೌಡರೆಡ್ಡಿಗೆ ಮುನಿಯಪ್ಪ ಚಿಂತಾಮಣಿ (Chintamani) ಕ್ಷೇತ್ರದ ಟಿಕೆಟ್‌ ತಪ್ಪಿಸಿದ್ದರು. ಮುನಿಯಪ್ಪ ವಿರೋಧದ ನಡುವೆಯೂ ಪಕ್ಷೇತರರಾಗಿ ಸ್ಪರ್ಧಿಸಿ ಚೌಡರೆಡ್ಡಿ ಗೆದ್ದಿದ್ದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಚೌಡರೆಡ್ಡಿಯನ್ನು ಕೊನೆಗೆ ಮುನಿಯಪ್ಪ ಪಕ್ಷದಿಂದಲೇ ಉಚ್ಛಾಟನೆ ಮಾಡಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಬಂಡಾಯ – ಮುನಿಯಪ್ಪ ಕೋಲಾರ ಎಂಟ್ರಿಗೆ ಶಾಸಕರ ವಿರೋಧ ಯಾಕೆ?

     

    ಸಾಕಷ್ಟು ಮಾತುಕತೆಯ ಬಳಿಕ ರಾಜಿಯಾಗಿ ಎಂಸಿ ಸುಧಾಕರ್ ಕಾಂಗ್ರೆಸ್‌ (Congress) ಸೇರ್ಪಡೆಯಾಗಿದ್ದರು. ನಂತರ ಚಿಂತಾಮಣಿಯಿಂದ 2004 ಹಾಗೂ 2008 ಸತತ 2 ಬಾರಿ ಕಾಂಗ್ರೆಸ್ ಶಾಸಕರಾಗಿ ಸುಧಾಕರ್ ಆಯ್ಕೆಯಾದರು.

    ಈ ಎರಡೂ ಅವಧಿಯಲ್ಲೂ ಮುನಿಯಪ್ಪ ಹಾಗೂ ಸುಧಾಕರ್ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಕಡೆಗೆ ದೊಡ್ಡಜಗಳ ನಡೆದು ಕಾಂಗ್ರೆಸ್ ಪಕ್ಷವನ್ನೇ ಸುಧಾಕರ್ ತೊರೆದಿದ್ದರು.  ಇದನ್ನೂ ಓದಿ: ಮುನಿಯಪ್ಪ ಅಳಿಯನಿಗೆ ಕೋಲಾರ ಟಿಕೆಟ್ ಕೊಟ್ಟರೆ ರಾಜೀನಾಮೆ – ‘ಕೈ’ ಎಂಎಲ್‌ಸಿ, ಶಾಸಕರಿಂದ ಬೆದರಿಕೆ

     

    2013, 2018ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದರು. 2023ರಲ್ಲಿ ಕಾಂಗ್ರೆಸ್‌ಗೆ ಸುಧಾಕರ್‌ ಸೇರ್ಪಡೆಯಾದರು. ಸೇರ್ಪಡೆಯಾಗುವ ಸಮಯದಲ್ಲಿ ಕೋಲಾರ ರಾಜಕಾರಣಕ್ಕೆ ಮುನಿಯಪ್ಪ ಪ್ರವೇಶಿಸಬಾರದು ಎಂದು ಷರತ್ತು ವಿಧಿಸಿದ್ದರು. ಈ ಷರತ್ತಿಗೆ ಕೋಲಾರದ ಹಲವು ಕಾಂಗ್ರೆಸ್‌ ನಾಯಕರು ಧ್ವನಿಗೂಡಿಸಿದ್ದರು. ಈ ಕಾರಣಕ್ಕೆ ಮುನಿಯಪ್ಪ ಅವರಿಗೆ ಹೈಕಮಾಂಡ್‌ ದೇವನಹಳ್ಳಿ ಕ್ಷೇತ್ರದ ಟಿಕೆಟ್‌ ನೀಡಿತ್ತು.

  • ರಾಜ್ಯದ ಎಲ್ಲಾ ವಿವಿಗಳಲ್ಲಿ ಏಕರೂಪದ ಅಂಕ ಮತ್ತು ಗ್ರೇಡಿಂಗ್ ವ್ಯವಸ್ಥೆ ಜಾರಿ: ಸುಧಾಕರ್

    ರಾಜ್ಯದ ಎಲ್ಲಾ ವಿವಿಗಳಲ್ಲಿ ಏಕರೂಪದ ಅಂಕ ಮತ್ತು ಗ್ರೇಡಿಂಗ್ ವ್ಯವಸ್ಥೆ ಜಾರಿ: ಸುಧಾಕರ್

    ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಅಂಕ ವ್ಯವಸ್ಥೆ, ಗ್ರೇಡ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಅಂತ ಉನ್ನತ ಶಿಕ್ಷಣ ಸಚಿವ ಸುಧಾಕರ್ (MC Sudhakar) ತಿಳಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ (Congress) ಮಂಜುನಾಥ್ ಭಂಡಾರಿ ಪ್ರಶ್ನೆ ಕೇಳಿದರು. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ (Karnataka Universities) ಅಂಕಗಳು ನೀಡುವ ವ್ಯವಸ್ಥೆ ಒಂದೊಂದು ವಿವಿಗೆ ಒಂದೊಂದು ವ್ಯವಸ್ಥೆ ಇದೆ. ವಿವಿಗಳಲ್ಲಿ ಮೌಲ್ಯಮಾಪನ ವ್ಯವಸ್ಥೆ ಭಿನ್ನವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗ್ತಿದೆ. ಹೀಗಾಗಿ ಏಕರೂಪದ ಮೌಲ್ಯಮಾಪನ ವ್ಯವಸ್ಥೆ ಜಾರಿ ಮಾಡಬೇಕು. ಫೇಕ್ ಡಾಕ್ಟರೇಟ್ ಕೊಡುವ ವಿವಿಗಳು ಜಾಸ್ತಿ ಆಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಪದವಿ ಪಡೆದ ಮೇಲೆ ಪದವಿಯನ್ನ ರಿಜಿಸ್ಟರ್ ಮಾಡಿಸುವ ವ್ಯವಸ್ಥೆ ಜಾರಿ ಮಾಡಬೇಕು. ನಮ್ಮ ಸರ್ಕಾರಿ ವಿವಿಗಳಲ್ಲಿ ಅಂಕಗಳು ನೀಡುವ ವ್ಯವಸ್ಥೆ ಬದಲಾಗಿ ಗ್ರೇಡ್ ವ್ಯವಸ್ಥೆ ವಿವಿಗಳಲ್ಲಿ‌ ಜಾರಿ ಮಾಡಬೇಕು‌ ಅಂತ ಒತ್ತಾಯಿಸಿದರು.

    ಇದಕ್ಕೆ ಸಚಿವ ಸುಧಾಕರ್ ಉತ್ತರ ನೀಡಿ,‌ ರಾಜ್ಯದಲ್ಲಿ 30 ಖಾಸಗಿ ವಿವಿಗಳು ಇವೆ. ಖಾಸಗಿ ವಿವಿಗಳಲ್ಲಿ ಗ್ರೇಡಿಂಗ್ ಸಿಸ್ಟಮ್, ಅಂಕ ವ್ಯವಸ್ಥೆ ಬೇರೆ ಬೇರೆ ಇದೆ. ನಮ್ಮ ಸರ್ಕಾರ ವಿವಿಗಳ ವ್ಯವಸ್ಥೆ ಬೇರೆ ‌ಇದೆ. ಇದರಿಂದ ಸಮಸ್ಯೆ ಆಗ್ತಿದೆ. ಇತ್ತೀಚೆಗೆ ಒಬ್ಬ ವಿದ್ಯಾರ್ಥಿ ಸಹ ಅಂಕ ಕಡಿಮೆ ಬಂತು ಅಂತ ಆತ್ಮಹತ್ಯೆ ಮಾಡಿಕೊಂಡ. ಇದರಿಂದಾಗಿ‌ ಅಂಕ ಮಾದರಿ ಅಧ್ಯಯನಕ್ಕೆ ಒಂದು ಸಮಿತಿ ಮಾಡಿದ್ವಿ. ಸಮಿತಿ ಎಲ್ಲಾ ವಿವಿಗಳಲ್ಲಿ ಅಂಕ ಮಾದರಿ, ಗ್ರೇಡ್ ಮಾದರಿ ಏಕರೂಪವಾಗಿ ಮಾಡಬೇಕು ಅಂತ ವರದಿ ಕೊಟ್ಟಿದೆ. ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಇದನ್ನು ಇಟ್ಟು ನಿರ್ಧಾರ ಮಾಡ್ತೀವಿ. ಖಾಸಗಿ, ಸರ್ಕಾರ ವಿವಿಗಳಿಗೆ ಏಕರೂಪದ ಅಂಕ, ಗ್ರೇಡ್ ವ್ಯವಸ್ಥೆ ಜಾರಿ ಮಾಡ್ತೀವಿ ಎಂದರು. ಇದನ್ನೂ ಓದಿ: ಧೈರ್ಯವಾಗಿ ಪ್ರಶ್ನಿಸಿ ಅಂದಿದ್ದು ತಪ್ಪಿಲ್ಲ- ಕುವೆಂಪು ಬರಹ ಬದಲಿಕೆಗೆ ಪ್ರಿಯಾಂಕ್ ಖರ್ಗೆ ಸಮರ್ಥನೆ

    ಡಾಕ್ಟರೇಟ್ ಪದವಿಗಳ ಬಗ್ಗೆ ಸ್ವಲ್ಪ ಗೊಂದಲ‌ ಇದೆ. ಸುಪ್ರೀಂ ಕೋರ್ಟ್ ಆದೇಶದ ಮೇಲೆ ನಾವು ಇದನ್ನ ಜಾರಿ ಮಾಡ್ತೀವಿ. ಖಾಸಗಿ ವಿವಿಗಳು ಡಾಕ್ಟರೇಟ್ ಕೊಡುವ ವ್ಯವಸ್ಥೆ ಮಾಡುತ್ತಿವೆ. ಹೀಗಾಗಿ ಎಲ್ಲಾ ವಿವಿಗಳಲ್ಲಿ ಏಕರೂಪದ ಡಾಕ್ಟರೇಟ್ ವ್ಯವಸ್ಥೆ ತರುವ ನಿಟ್ಟಿನಲ್ಲಿ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ: ಸರ್ಕಾರದ ಮುಟ್ಟಾಳತನ: ಜೋಶಿ ಆಕ್ರೋಶ

    ಪದವಿ ವಿದ್ಯಾರ್ಥಿಗಳು ಪದವಿ ಪಡೆದ ಮೇಲೆ ರಿಜಿಸ್ಟರ್ ಮಾಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಎಂಜಿನಿಯರಿಂಗ್ ಸೇರಿ ಹಲವು ಪದವಿಗಳ ರಿಜಿಸ್ಟರ್ ಮಾಡೋ ವ್ಯವಸ್ಥೆ ಇದೆ. ಈ ವಿಚಾರವಾಗಿ ಏಕರೂಪದ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ತೀವಿ ಅಂತ ಭರವಸೆ ನೀಡಿದರು. ಇದನ್ನೂ ಓದಿ: ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಬಿಸಿಯೂಟ- ಖಾದರ್ ಘೋಷಣೆ

  • ಮುಂದಿನ ವರ್ಷದಿಂದಲೇ ರಾಜ್ಯ ಶಿಕ್ಷಣ ನೀತಿ ಜಾರಿ: ಸಚಿವ ಎಂ.ಸಿ ಸುಧಾಕರ್

    ಮುಂದಿನ ವರ್ಷದಿಂದಲೇ ರಾಜ್ಯ ಶಿಕ್ಷಣ ನೀತಿ ಜಾರಿ: ಸಚಿವ ಎಂ.ಸಿ ಸುಧಾಕರ್

    ಹಾಸನ: ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ರದ್ದು ಮಾಡುವುದಾಗಿ ಕಳೆದ ಬಜೆಟ್‌ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದರು. ಅದರಂತೆ ಮುಂದಿನ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ರದ್ದುಗೊಳಿಸಿ, ರಾಜ್ಯ ಶಿಕ್ಷಣ ನೀತಿಯನ್ನು (State Education Policy) ಜಾರಿಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್‌ (MC Sudhakar) ಹೇಳಿದ್ದಾರೆ.

    ಅರಸೀಕೆರೆ ನಗರದಲ್ಲಿ ನೂತನ ಎಂಜಿನಿಯರಿಂಗ್‌ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಮಾತ್ರ 2021 ರಲ್ಲಿ ಎನ್‌ಇಪಿ ಜಾರಿಗೊಳಿಸಿತ್ತು. ಯಾವುದೇ ಪೂರ್ವ ತಯಾರಿ ಇಲ್ಲದೇ, ಜಾರಿ ಮಾಡಿರುವುದರಿಂದ ಅದರಲ್ಲಿ ಸಾಕಷ್ಟು ನ್ಯೂನತೆ ಕಂಡುಬಂದಿದೆ. ಆದ್ದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ; ಸರ್ಕಾರದ ವಿರುದ್ಧ ಹೆಚ್.ಡಿ ರೇವಣ್ಣ ಕಿಡಿ

    ರಾಜ್ಯದ ಹಲವು ಕಡೆಗಳಲ್ಲಿ NEP ಜಾರಿಯಾದ ನಂತರ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಅನೇಕ ಕಡೆಗಳಲ್ಲಿ ಮೂಲ ಸೌಕರ್ಯವಿಲ್ಲದ ಕಾರಣ ರಾಜ್ಯದಲ್ಲಿ ಎನ್‌ಇಪಿ ಜಾರಿಗೆ ಪೂರಕ ವಾತಾವರಣವಿಲ್ಲ. ಎನ್‌ಇಪಿ ವಿಷಯಗಳೇ ಬೇರೆ, ರಾಜ್ಯದಲ್ಲಿ ಚಾಲ್ತಿಯಲ್ಲಿರುವ ವಿಷಯಗಳೇ ಬೇರೆ ಇರುವುದರಿಂದಲೇ ಮಕ್ಕಳಿಗೆ ತೊಂದರೆಯಾಗಿದೆ. ಅದರಲ್ಲೂ ಗ್ರಾಮೀಣ ಮಕ್ಕಳಿಗೆ ಅನೇಕ ರೀತಿಯ ಸಮಸ್ಯೆಯುಂಟಾಗಿದೆ. ಆದ್ದರಿಂದ ಎಲ್ಲ ವರ್ಗ, ಜಾತಿಗಳನ್ನು ಒಳಗೊಂಡ ಶಿಕ್ಷಣ ನೀತಿಯನ್ನ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಅರಸೀಕೆರೆ ಎಂಜಿನಿಯರಿಂಗ್‌ ಕಾಲೇಜು ಕಾಮಗಾರಿ 4 ವರ್ಷಗಳಾದರೂ ಮುಗಿದಿಲ್ಲ. ಸ್ಥಳೀಯ ಶಾಸಕರು ನನ್ನ ಗಮನಕ್ಕೆ ತಂದ ನಂತರ ಕಾಮಗಾರಿ ಶೀಘ್ರ ಮುಗಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

    ಇನ್ನೂ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ವಿಳಂಬವಾಗುತ್ತಿರುವ ಸಂಬಂಧ ಮಾತನಾಡಿ, ವಿದ್ಯಾರ್ಥಿ ವೇತನ ಮೊದಲಿನಂತೆಯೇ ಪಾವತಿಯಾಗುತ್ತಿದೆ. ಕೇಂದ್ರ ಸರ್ಕಾರ ಡಿಬಿಟಿ ಪದ್ಧತಿ ಮಾಡಿದೆ. 60% ಕೇಂದ್ರ, 40% ರಾಜ್ಯದ್ದು ಎಂದು ಮಾಡಿರುವುದರಿಂದ ಕೆಲ ಕಾಲೇಜುಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಎಸ್ಸಿ-ಎಸ್ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ ತೊಂದರೆ ಕೊಡಬಾರದು ಎಂದು ತಾಕೀತು ಮಾಡಿದ್ದಾರೆ. ಇದನ್ನೂ ಓದಿ: ನಾನು ಬದುಕಿರುವವರೆಗೂ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಲು ಬಿಡಲ್ಲ – HD ರೇವಣ್ಣ ಗುಡುಗು

    ಅಲ್ಲದೇ, ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳ ಎರಡೂವರೆ ಲಕ್ಷ ಹುದ್ದೆಗಳನ್ನು ತುಂಬಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರಲ್ಲದೇ, ರಾಜ್ಯದಲ್ಲಿ ಹಲವು ವಿವಿ ಇದ್ದರೂ, ಕೊನೇ ದಿನಗಳಲ್ಲಿ ತಲಾ 2 ಕೋಟಿ ರೂ. ಅನುದಾನ ನೀಡಿ 7 ವಿವಿಗಳ ಆರಂಭಕ್ಕೆ ಹಿಂದಿನ ಬಿಜೆಪಿ ಸರ್ಕಾರ ಅನುಮೋದನೆ ನೀಡಿತ್ತು. ಈ ಬಗ್ಗೆ ಕೂಲಂಕಷ ಅಧ್ಯಯನ ಮಾಡಿದ್ದೇವೆ. ಆದರೆ ಹೊಸ ವಿವಿಗಳನ್ನು ರದ್ದು ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಮ್ಮದೆಲ್ಲಾ ಬಯಲಿಗೆ ಎಳೆಯುತ್ತೇನೆ ಜಸ್ಟ್ ವೇಟ್: ಎಂ.ಸಿ.ಸುಧಾಕರ್‌ಗೆ ಸಚಿವ ಸುಧಾಕರ್ ವಾರ್ನಿಂಗ್

    ನಿಮ್ಮದೆಲ್ಲಾ ಬಯಲಿಗೆ ಎಳೆಯುತ್ತೇನೆ ಜಸ್ಟ್ ವೇಟ್: ಎಂ.ಸಿ.ಸುಧಾಕರ್‌ಗೆ ಸಚಿವ ಸುಧಾಕರ್ ವಾರ್ನಿಂಗ್

    ಚಿಕ್ಕಬಳ್ಳಾಪುರ: ನಿಮ್ಮದೆಲ್ಲಾ ಬಯಲಿಗೆ ಎಳೆಯುತ್ತೇನೆ ಜಸ್ಟ್ ವೇಟ್ ಎಂದು ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‍ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಖಡಕ್ ಎಚ್ಚರಿಕೆ ನೀಡಿದರು.

    ಶುಕ್ರವಾರ ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಚಿಕ್ಕಬಳ್ಳಾಪುರ ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆದ ಪ್ರತಿಭಟನೆ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರವನ್ನ ಬಳ್ಳಾರಿಗೆ ಹೋಲಿಸಲಾಗಿತ್ತು. ಈ ವೇಳೆ ಬಳ್ಳಾರಿಯ ರಿಪಬ್ಲಿಕ್‍ನಂತೆ ಚಿಕ್ಕಬಳ್ಳಾಪುರ ಕ್ಷೇತ್ರವೂ ಸಹ ಕುಸಿದು ಬೀಳಲಿದೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಬಗ್ಗೆ ರಿಪಬ್ಲಿಕನ್ ಅನ್ನೋ ಪದ ಬಳಸಿ ಸಚಿವ ಸುಧಾಕರ್ ವಿರುದ್ಧ ಮಾಜಿ ಶಾಸಕ ಸುಧಾಕರ್ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ವಿಮಾನದಲ್ಲಿದ್ದ ಪ್ರಯಾಣಿಕರ ಜೀವ ಉಳಿಸಿದ ತೆಲಂಗಾಣ ರಾಜ್ಯಪಾಲ 

    ಎಂ.ಸಿ.ಸುಧಾಕರ್ ವಾಗ್ದಾಳಿಗೆ ಕಿಡಿಕಾರಿರುವ ಸಚಿವ ಸುಧಾಕರ್ ಅವರು, ಚಿಂತಾಮಣಿಯಲ್ಲಿ ಮೂರು ತಲೆಮಾರಿನ ರಿಪಬ್ಲಿಕ್ ಯಾರು ಮಾಡಿದ್ದಾರೆ? 10 ವರ್ಷದಿಂದ ನಿಮ್ಮನ್ನ ಜನ ಮನೆಯಲ್ಲಿ ಕೂರಿಸಿದ್ದಾರೆ. ಈಗಲಾದ್ರೂ ಸ್ವಲ್ಪ ಬುದ್ಧಿ ಕಲಿತುಕೊಳ್ಳಿ. ಇದೇ ಅಹಂಕಾರ ಮುಂದುವರಿದ್ರೆ ಒಳ್ಳೆಯದಲ್ಲ. ಇಷ್ಟು ದಿನ ನಾನು ಎಲ್ಲಾದ್ರೂ ಹೋಗಲಿ ಅಂತ ಸುಮ್ಮನೆ ಬಿಟ್ಟಿದ್ದೆ ಎಂದು ಆಕ್ರೋಶ ಹೊರಹಾಕಿದರು.

    ಎಲ್ಲ ಕೇಸುಗಳಲ್ಲಿ ಸಿಕ್ಕಿ ಹಾಕಿಕೊಂಡು ಇಷ್ಟು ವರ್ಷ ಸುಮ್ಮನೆ ಇದ್ರು. ದೇವಸ್ಥಾನ ಬಿಟ್ಟಿಲ್ಲ, ಸರ್ಕಾರಿ ಆಸ್ತಿ ಬಿಟ್ಟಿಲ್ಲ. ಸರ್ಕಾರಿ ಆಸ್ತಿಗಳಲ್ಲಿ ಸೈಟ್ ಮಾಡಿ ಮಾರಾಟ ಮಾಡಿದ್ದೀರಿ. ನಿಮ್ಮ ಹತ್ರ ನಾನು ನೀತಿ ಪಾಠ ಕೇಳಬೇಕಾ? ಯಾವ ಮುಖ ಇಟ್ಕೊಂಡು ನನ್ನ ಬಗ್ಗೆ ಮಾತಾಡ್ತೀರಾ? ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ:  ಒಳ್ಳೆಯದಾಗಬೇಕೆಂದ್ರೆ ಜನ 2023ರಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಬಯಸುತ್ತಿದ್ದಾರೆ: ಜಮೀರ್ 

    ನಾನು ಆಗಲೀ, ನನ್ನ ಕುಟುಂಬ ಆಗಲೀ ಸರ್ಕಾರಿ ಆಸ್ತಿಯನ್ನ 1 ಇಂಚು ಮಾಡಿಕೊಂಡಿಲ್ಲ. ಮಾಡಿಕೊಂಡಿದ್ರೆ ತೋರಿಸಿ ಅಂತ ಸವಾಲು ಹಾಕಿದ್ರು. ಹೀಗಾಗಿ ನಿಮ್ಮದೆಲ್ಲಾ ಬಯಲಿಗೆ ಎಳೆಯುತ್ತೇನೆ ಕಾಯುತ್ತ ಇರಿ ಎಂದು ವಾರ್ನಿಂಗ್ ಕೊಟ್ಟರು.

    Live Tv
    [brid partner=56869869 player=32851 video=960834 autoplay=true]

  • ಕೋವಿಡ್ ಆಸ್ಪತ್ರೆಗೆ 50 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಲಕರಣೆ ನೀಡಿದ ಡಾ.ಎಂ.ಸಿ.ಸುಧಾಕರ್

    ಕೋವಿಡ್ ಆಸ್ಪತ್ರೆಗೆ 50 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಲಕರಣೆ ನೀಡಿದ ಡಾ.ಎಂ.ಸಿ.ಸುಧಾಕರ್

    – ಐವತ್ತು ಆಕ್ಸಿಜನ್ ಬೆಡ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಕೋವಿಡ್ ಕೇರ್ ಸೆಂಟರ್‍ಗೆ ಮಾಜಿ ಶಾಸಕ ಡಾ ಎಂ.ಸಿ ಸುಧಾಕರ್ 50 ಲಕ್ಷ ಮೌಲ್ಯದ ವೈದ್ಯಕೀಯ ಸಲಕರಣೆಗಳ ನೆರವು ಕೊಡಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

    ಕೊರೊನಾ ಸಂಕಷ್ಟದಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಸಿಗದೇ ಅದೆಷ್ಟೋ ಜನ ಸೋಂಕಿತರು ತಮ್ಮ ಜೀವವನ್ನು ಕಳೆದುಕೊಂಡಿದ್ದು, ಇನ್ನೂ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಮನಗಂಡ ಮಾಜಿ ಶಾಸಕ ಡಾ. ಎಂ.ಸಿ ಸುಧಾಕರ್ ತಮ್ಮ ವಿದ್ಯಾಗಣಪತಿ ಸೇವಾ ಟ್ರಸ್ಟ್ ಮೂಲಕ ಕೋವಿಡ್ ಸೆಂಟರ್‍ಗೆ ಸುಮಾರು ಐವತ್ತು ಲಕ್ಷ ರೂಪಾಯಿ ಬೆಲೆ ಬಾಳುವ ಸಲಕರಣೆಗಳನ್ನ ಒದಗಿಸಿದ್ದಾರೆ.

    ಐವತ್ತು ಹಾಸಿಗೆ ದಿಂಬು, ಐವತ್ತು ಜಂಬೋ ಆಕ್ಸಿಜನ್ ಸಿಲಿಂಡರ್, ಐವತ್ತು ಮಂಚ, ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಸೇರಿದಂತೆ ಆಸ್ಪತ್ರೆಗೆ ಸಿಲಿಂಡರ್ ಪೈಪ್ ಲೈನ್ ಸಮೇತ ನಿರ್ಮಿಸಿ ಕೊಡುವುದಾಗಿ ತಿಳಿಸಿದ್ದು, ತಮ್ಮ ಸಾಮಾಜಿಕ ಕಳಕಳಿ ತೋರಿದ್ದಾರೆ. ಈ ಆಸ್ಪತ್ರೆಯಲ್ಲಿ ಇದ್ದಿದ್ದು ಐವತ್ತು ಆಕ್ಸಿಜನ್ ಬೆಡ್‍ಗಳು, ಇಲ್ಲಿನ ಕೋವಿಡ್ ಸೋಂಕಿತರಿಗೆ ಬೆಡ್ ಸಿಗದೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಹೋಗುವಷ್ಟರಲ್ಲಿ ತಮ್ಮ ಪ್ರಾಣ ಕಳೆದುಕೊಂಡ ಉದಾಹರಣೆಗಳು ಇವೆ. ಆದ್ದರಿಂದ ಕೊರೊನಾ ಸಂಕಷ್ಟದ ಸಮಯದಲ್ಲಿ ಧನಿಕರೆಲ್ಲ ಮುಂದೆ ಬಂದು ಈ ರೀತಿ ಸಹಾಯ ಮಾಡಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನ ಹೆಚ್ಚಿಸಿದರೆ ಕೊರೊನಾ ವಿರುದ್ಧ ಹೋರಾಡಲು ಸಹಕಾರಿಯಾಗಲಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಮಾಜಿ ಶಾಸಕರಾದ ಡಾ ಎಂ.ಸಿ ಸುಧಾಕರ್, ಕೊರೊನಾ ಎಂಬ ಮಹಾಮಾರಿ ಇಂದು ನಮ್ಮನ್ನು ಬೆಂಬಿಡದೆ ಕಾಡುತ್ತಿದ್ದು, ಮಾನವನ ಜೀವಕ್ಕೆ ಬೆಲೆ ಇಲ್ಲದಂತಾಗಿ, ಸಾಮಾಜಿಕ, ಆರ್ಥಿಕ ವ್ಯವಸ್ಥೆ ತೀರ ದುಸ್ತರವಾದ ಪರಿಸ್ಥಿತಿಗೆ ತಲುಪಿದೆ. ನಮ್ಮ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿಯೂ ಸಹ ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಹಾಸಿಗೆಗಳ ಹಾಗು ವೈದ್ಯಕೀಯ ಸಲಕರಣೆಗಳ ಅತಿಯಾದ ಅಭಾವ ತಲೆದೋರಿದೆ. ಈ ಕೊರತೆಯನ್ನು ಮನಗಂಡು ನಮ್ಮ ತಂದೆಯವರಾದ ಮಾಜಿ ಗೃಹ ಸಚಿವ ಎಂ.ಎ.ಚೌಡರೆಡ್ಡಿಯವರೊಂದಿಗೆ ಚರ್ಚಿಸಿ, ಶ್ರೀ ವಿದ್ಯಾ ಗಣಪತಿ ದೇವಸ್ಥಾನ ಟ್ರಸ್ಟ್ ಚಿಂತಾಮಣಿರವರ ಸಹಕಾರದೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಈಗಿರುವ 50 ಹಾಸಿಗೆಗಳ ಜೊತೆಗೆ ಸುಮಾರು 50 ಲಕ್ಷ ರೂಗಳ ವೆಚ್ಚದಲ್ಲಿ ಆಕ್ಸಿಜನ್ ಸಹಿತ ಎಲ್ಲಾ ಆಧುನಿಕ ವ್ಯವಸ್ಥೆಯಿಂದ ಕೂಡಿದ 50 ಹಾಸಿಗೆಗಳ ನೂತನ ಕೊವಿಡ್ ವಿಭಾಗವನ್ನು ತೆರೆದಿದ್ದೇವೆ. ಪ್ರತಿ ಹಾಸಿಗೆಗೆ ಒಂದರಂತೆ 50 ಹೊಸ ಆಕ್ಸಿಜನ್ ಸಿಲಿಂಡರ್‍ಗಳನ್ನು ನೀಡಿ, ಅವು ಎಷ್ಟು ಬಾರಿ ಖಾಲಿಯಾದರು ಪುನಃ ಭರ್ತಿಮಾಡಿಸುವ ವ್ಯವಸ್ಥೆಯನ್ನು ಸ್ವತಃ ನಾವೇ ಮಾಡಿರುತ್ತೇವೆ. ಆಸ್ಪತ್ರೆಗೆ ಅವಶ್ಯಕವಿರುವ ಪಿ.ಪಿ.ಇ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್, ಆಕ್ಸಿ ಮೀಟರ್ ಗಳು, ಕೈಗವಸುಗಳು ಇನ್ನಿತರ ವೈದ್ಯಕೀಯ ಸಲಕರಣೆಗಳನ್ನು ಕೊಟ್ಟಿದ್ದೇವೆ ಎಂದು ಹೇಳಿದರು.

    ಇದಲ್ಲದೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯನ್ನು “ಸಂಪೂರ್ಣ ಸೆಂಟ್ರಲೈಸ್ಡ್ ಆಕ್ಸಿಜನ್ ಸಿಸ್ಟಮ್” ಇರುವ ಆಸ್ಪತ್ರೆಯಾಗಿ ಮಾರ್ಪಡಿಸಲು ತೀರ್ಮಾನಿಸಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಸದರಿ ಕಂಪನಿಯೊಂದಿಗೆ ಚರ್ಚಿಸಿದ್ದು, ಆದಷ್ಟು ಬೇಗನೆ ಕಾರ್ಯರೂಪಕ್ಕೆ ತರುತ್ತೇವೆ. ಚಿಂತಾಮಣಿ ನಗರಾಡಳಿತ ಹಾಗು ಸರ್ಕಾರಿ ವೈದ್ಯಾಧಿಕಾರಿಗಳು ಇಚ್ಛಿಸಿದಲ್ಲಿ ಬೇಡಿಕೆಯ ಅನುಗುಣವಾಗಿ “ತಾಯಿ ಮಗು ಆಸ್ಪತ್ರೆಯನ್ನು” ಕೂಡ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಬೇಕಾದ ಎಲ್ಲಾ ಅನುಕೂಲಗಳನ್ನು ಮಾಡಲು ಯಾವುದೇ ಕ್ಷಣದಲ್ಲಿ ಸಿದ್ಧವಿದ್ದೇವೆ.

    ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿರುವ ಮೂರು ವೆಂಟಿಲೇಟರ್‍ಗಳು ಕಾರ್ಯನಿರ್ವಹಿಸದೆ. ಜಿಲ್ಲಾಡಳಿತ ಹಾಗು ಜಿಲ್ಲಾ ವೈದ್ಯಾಧಿಕಾರಿಗಳು ಸದರಿ ವೆಂಟಿಲೇಟರ್‍ಗಳನ್ನು ಆಪರೇಟ್ ಮಾಡುವ ವೈದ್ಯರು ಹಾಗೂ ತಂತ್ರಜ್ಞರನ್ನು ನೀಡಿದಲ್ಲಿ, ವೆಂಟಿಲೇಟರ್‍ಗಳು ಕಾರ್ಯನಿರ್ವಹಿಸುವಂತೆ ಮಾಡುವ ಪೂರಕ ಸಲಕರಣೆಗಳನ್ನು ಅಳವಡಿಸಿ ಸಾರ್ವಜನಿಕರ ಅನುಕೂಲಕ್ಕೆ ನೀಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಈ ಕೊರೊನಾ ಕಾಯಿಲೆಯನ್ನು ಅಂತ್ಯಗೊಳಿಸಲು ನಾವೆಲ್ಲಾ ಪಕ್ಷಾತೀತವಾಗಿ ಒಗ್ಗೂಡಿ ಹೋರಾಡುವ ಅವಶ್ಯಕತೆ ಇದ್ದು, ಜನರ ಜೀವ ಉಳಿಸುವ ಮಹತ್ಕಾರ್ಯದಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಿ ತಮ್ಮ ಕೈಲಾದ ಸಹಾಯವನ್ನು ಮಾಡಿ ಮನುಕುಲದ ಹಿತ ಕಾಪಾಡೋಣ ಎಂದಿದ್ದಾರೆ.

    ಕೊನೆಯದಾಗಿ ಸಾರ್ವಜನಿಕರಿಗೆ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ ನಾವು ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದ್ದು, ಎಲ್ಲರೂ ಅತ್ಯಂತ ಜಾಗರೂಕರಾಗಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸ್ಯಾನಿಟೈಸರ್ ಉಪಯೋಗಿಸಿ. ಸ್ವಚ್ಛತೆಯನ್ನು ಕಾಪಾಡಿ. ಮನೆ ಬಿಟ್ಟು ಹೊರಹೋಗದೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.