Tag: MBA

  • PGCET: 2ನೇ ಸುತ್ತಿನ ಆಪ್ಷನ್ ಎಂಟ್ರಿ ಆರಂಭ – ಕೆಇಎ

    PGCET: 2ನೇ ಸುತ್ತಿನ ಆಪ್ಷನ್ ಎಂಟ್ರಿ ಆರಂಭ – ಕೆಇಎ

    ಬೆಂಗಳೂರು: ಎಂಬಿಎ, ಎಂಸಿಎ, ಎಂಟೆಕ್, ಎಂಇ, ಎಂ.ಆರ್ಕ್ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಇಂದಿನಿಂದ (ಅ.16) ಆರಂಭವಾಗಿದೆ. ಅಭ್ಯರ್ಥಿಗಳಿಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅ.23ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

    ಅಂದು ಆಪ್ಷನ್ಸ್ ದಾಖಲಿಸುವುದು ಬೆಳಿಗ್ಗೆ 10ಗಂಟೆಗೆ ಕೊನೆಯಾಗಲಿದೆ. ಅದೇ ದಿನ ಸಂಜೆ 6ಗಂಟೆಗೆ ತಾತ್ಕಾಲಿಕ ಫಲಿತಾಂಶ ಪ್ರಕಟವಾಗಲಿದೆ. ಅ.24ರಂದು ಬೆಳಿಗ್ಗೆ 10ಗಂಟೆಗೆ ಅಂತಿಮ ಫಲಿತಾಂಶ ಪ್ರಕಟವಾಗಲಿದೆ. ಸೀಟು ಹಂಚಿಕೆಯಾದವರು ಅ.25ರಿಂದ ಅ.29ರೊಳಗೆ ಶುಲ್ಕ ಕಟ್ಟಿ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಅ.30ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಬೀದರ್ ವೈದ್ಯಕೀಯ ಕಾಲೇಜಿಗೆ ಹೆಚ್ಚುವರಿ 50 ಸೀಟು
    ಬೀದರ್ ವೈದ್ಯಕೀಯ ಕಾಲೇಜಿಗೆ 50 ಸೀಟು ಹೆಚ್ಚುವರಿಯಾಗಿ ಮಂಜೂರು ಮಾಡಿರುವ ಕಾರಣ ಯುಜಿ ನೀಟ್ 3ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅ.17ರಂದು ಮಧ್ಯಾಹ್ನ 12.30ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.

    ಪ್ರಸಕ್ತ ಸಾಲಿನಲ್ಲಿ ಈಗಾಗಲೇ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವವರು ಕೂಡ ಬೀದರ್ ಸೇರಿದಂತೆ ಇತರ ನಾಲ್ಕು ಕಾಲೇಜುಗಳಿಗೆ ಆಪ್ಷನ್ಸ್ ದಾಖಲಿಸಬಹುದು ಎಂದು ಅವರು ತಿಳಿಸಿದ್ದಾರೆ.

  • ಎಂಬಿಎ, ಎಂಸಿಎ ಪ್ರವೇಶಕ್ಕೆ ಭಾನುವಾರ ಪರೀಕ್ಷೆ- ಸಿದ್ಧತೆ ಪೂರ್ಣ: ಕೆಇಎ

    ಎಂಬಿಎ, ಎಂಸಿಎ ಪ್ರವೇಶಕ್ಕೆ ಭಾನುವಾರ ಪರೀಕ್ಷೆ- ಸಿದ್ಧತೆ ಪೂರ್ಣ: ಕೆಇಎ

    ಬೆಂಗಳೂರು: ಎಂಬಿಎ (MBA) ಮತ್ತು ಎಂಸಿಎ (MCA) ಕೋರ್ಸ್‌ಗಳ ಪ್ರವೇಶಕ್ಕೆ ಭಾನುವಾರ (ಜೂನ್ 22) ರಾಜ್ಯದ 11 ಜಿಲ್ಲೆಗಳಲ್ಲಿ ಲಿಖಿತ ಪರೀಕ್ಷೆ (PGCET) ನಡೆಯಲಿದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬಿಗಿ ಕ್ರಮಗಳನ್ನು ಕೈಗೊಂಡಿದೆ.

    ಬೆಂಗಳೂರು, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ನಗರಗಳ ಒಟ್ಟು 68 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಹಣ ಪಡೆದಿದ್ದು ನಿಜ, ಅದು ಟ್ಯಾಕ್ಸ್, ಅಭಿವೃದ್ಧಿ ಹಣ: ಲಂಚ ಆರೋಪಕ್ಕೆ ಕಮಲನಗರ ಪಿಡಿಓ ಸ್ಪಷ್ಟನೆ

    ಬೆಳಗ್ಗೆ ಎಂಸಿಎ ಹಾಗೂ ಮಧ್ಯಾಹ್ನ ಎಂಬಿಎ ಪ್ರವೇಶಕ್ಕೆ ಪರೀಕ್ಷೆ ನಡೆಯಲಿದೆ. ಎಂಸಿಎ ಪ್ರವೇಶಕ್ಕೆ 18,738 ಹಾಗೂ ಎಂಬಿಎ ಪ್ರವೇಶಕ್ಕೆ 33,282 ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಹೆಲ್ಪ್‌ಲೈನ್‌ ಹೆಸರಲ್ಲಿ ವಂಚನೆ ಆರೋಪ – ಬೆಂಗಳೂರಿನ ಸಂಧ್ಯಾ ಪವಿತ್ರ ವಿರುದ್ಧ ಎಫ್‌ಐಆರ್

    ವಸ್ತ್ರ ಸಂಹಿತೆ ನಾಳಿನ ಪರೀಕ್ಷೆಗೂ ಅನ್ವಯ ಆಗಲಿದ್ದು, ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ಯಾಮೆರಾ ಕಣ್ಗಾವಲು ಕೂಡ ಇರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಂಕರ್‌ನಿಂದಲೇ ಸಂಭಾವ್ಯ ಉತ್ತರಾಧಿಕಾರಿಗಳ ಹೆಸರನ್ನು ಸೂಚಿಸಿದ ಖಮೇನಿ

  • MBA, MCA ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಮೇ 19ರವರೆಗೆ ದಿನಾಂಕ ವಿಸ್ತರಣೆ – ಕೆಇಎ

    MBA, MCA ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಮೇ 19ರವರೆಗೆ ದಿನಾಂಕ ವಿಸ್ತರಣೆ – ಕೆಇಎ

    ಬೆಂಗಳೂರು: ಎಂಬಿಎ, ಎಂಸಿಎ ಕೋರ್ಸ್‌ಗಳ ಪ್ರವೇಶಕ್ಕೆ ಜೂನ್ 22ರಂದು ಪಿಜಿಸಿಇಟಿ ನಡೆಯಲಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಮೇ 19ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

    ಈ ದಿನಾಂಕ ವಿಸ್ತರಣೆ ಕೇವಲ ಎಂಬಿಎ, ಎಂಸಿಎ ಕೋರ್ಸ್‌ಗೆ ಮಾತ್ರ ಅನ್ವಯವಾಗುತ್ತದೆ. ಎಂ.ಟೆಕ್, ಎಂಇ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮುಗಿದಿದೆ. ಮೇ 31ರಂದು ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

  • Karnataka PGCET 2023: ಸೆಪ್ಟೆಂಬರ್ 23 & 24ರಂದು ಪಿಜಿ ಸಿಇಟಿ ಪರೀಕ್ಷೆ- ಕೆಇಎ

    Karnataka PGCET 2023: ಸೆಪ್ಟೆಂಬರ್ 23 & 24ರಂದು ಪಿಜಿ ಸಿಇಟಿ ಪರೀಕ್ಷೆ- ಕೆಇಎ

    ಬೆಂಗಳೂರು: ಎಂಬಿಎ, ಎಂಸಿಎ, ಎಂ.ಇ, ಎಂ.ಟೆಕ್‌, ಎಂ.ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಕ್ಕೆ ಸೆಪ್ಟೆಂಬರ್ 23 ಮತ್ತು 24ರಂದು ಪಿಜಿ ಸಿಇಟಿ ಪರೀಕ್ಷೆ (PGCET Exam) ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯ ನಿರ್ವಾಹಕ ನಿರ್ದೇಶಕರಾದ ಎಸ್.ರಮ್ಯಾ (S Ramya) ಅವರಿಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸೆ.23ರ ಶನಿವಾರ ಮಧ್ಯಾಹ್ನ 2.30ರಿಂದ 4.30ರ ವರೆಗೆ ಎಂ.ಇ, ಎಂ.ಟೆಕ್ ಮತ್ತು ಎಂ.ಆರ್ಕ್ ಕೋರ್ಸ್‌ಗಳಿಗೆ, ಸೆ.24ರ ಭಾನುವಾರ ಬೆಳಿಗ್ಗೆ 10.30 ರಿಂದ 12.30ರ ವರೆಗೆ ಎಂಸಿಎ ಕೋರ್ಸ್‌ಗೆ (MCA Course) ಮತ್ತು ಅಂದು ಮಧ್ಯಾಹ್ನ 2.30ರಿಂದ 4.30ರ ವರೆಗೆ MBA ಕೋರ್ಸ್‌ಗೆ ಗರಿಷ್ಠ 100 ಅಂಕಗಳಿಗೆ ಪರೀಕ್ಷೆಗಳು ನಡೆಯಲಿವೆ ಎಂದಿದ್ದಾರೆ.

    ಸಾಂದರ್ಭಿಕ ಚಿತ್ರ

    ಈ ಮೊದಲು ಸೆಪ್ಟೆಂಬರ್ 9 ಮತ್ತು 10ರಂದು ಈ ಪರೀಕ್ಷೆಯನ್ನ ನಡೆಸಲು ನಿರ್ಧರಿಸಲಾಗಿತ್ತು. ಆದರೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಪದವಿ ಕೋರ್ಸುಗಳ ಅಂತಿಮ ಸೆಮಿಸ್ಟರ್‌ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಬೆಂಕಿ ಪ್ರಕರಣ; ಗಂಭೀರ ಸ್ಥಿತಿಯಲ್ಲಿದ್ದ ಚೀಫ್‌ ಎಂಜಿನಿಯರ್‌ ಶಿವಕುಮಾರ್‌ ನಿಧನ

    ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ವೆಬ್‌ಸೈಟ್‌ http://kea.kar.nic.in ನೋಡಬಹುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 7,000 ರಾಖಿ ಕಟ್ಟಿಸಿಕೊಂಡು ವಿಶ್ವ ದಾಖಲೆ ಬರೆದ ಜನಪ್ರಿಯ ಆನ್‌ಲೈನ್ ಬೋಧಕ ಖಾನ್ ಸರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಾಣಹಾನಿಯ ವಿಷಯದಲ್ಲಿ ರಾಜಕೀಯ ಮಾಡುವ ಇಚ್ಛೆಯಿಲ್ಲ: ಡಿಕೆಶಿ

    ಪ್ರಾಣಹಾನಿಯ ವಿಷಯದಲ್ಲಿ ರಾಜಕೀಯ ಮಾಡುವ ಇಚ್ಛೆಯಿಲ್ಲ: ಡಿಕೆಶಿ

    ಬೆಂಗಳೂರು: ಸೂಕ್ತ ಕೆಲಸ ಸಿಗದೆ ವಿದ್ಯಾರ್ಥಿನಿಯೊಬ್ಬಳು ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿಷಾದ ವ್ಯಕ್ತಪಡಿಸಿ, ಪ್ರಾಣಹಾನಿಯ ವಿಷಯದಲ್ಲಿ ನನಗೆ ರಾಜಕೀಯ ಮಾಡುವ ಇಚ್ಛೆಯಿಲ್ಲ ಎಂದು ಹೇಳಿದ್ದಾರೆ.

    ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಉಡುಪಿಯ 23 ವರ್ಷದ ಸಹನಾ ಆತ್ಮಹತ್ಯೆಯ ವಿಷಯ ತಿಳಿದು ದುಃಖವಾಗಿದೆ. ಎಂಬಿಎ ಪದವಿ ಪಡೆದರೂ ಸಹ ಸೂಕ್ತ ಕೆಲಸ ದೊರೆಯದೆ ಆಕೆ ಸಾವಿಗೆ ಶರಣಾಗಿದ್ದಾಳೆ. ನಿರುದ್ಯೋಗದಿಂದ ಪ್ರಾಣಕಳೆದುಕೊಂಡಿರುವ ಪ್ರಕರಣ ರಾಜ್ಯದಲ್ಲಿ ಇದೇ ಮೊದಲಲ್ಲ. ಪ್ರಾಣಹಾನಿಯ ವಿಷಯದಲ್ಲಿ ನನಗೆ ರಾಜಕೀಯ ಮಾಡುವ ಇಚ್ಛೆಯಿಲ್ಲ ಎಂದು ಬರೆದುಕೊಂಡಿದ್ದಾರೆ.

    ಇದೆಲ್ಲವು ಆಗುತ್ತಿರುವುದು ಯಾಕೆ? ನಮ್ಮ ಯುವಸಮೂಹ ಯಾಕೆ ಹತಾಶೆಯನ್ನು ಎದುರಿಸಬೇಕಿದೆ? ನೋಬೆಲ್ ಪುರಸ್ಕೃತರನ್ನು ಒಳಗೊಂಡಂತೆ ಜಗತ್ತಿನ ಹಲವು ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಭಾರತೀಯರು. ಉದ್ಯೋಗವನ್ನು ಸೃಷ್ಟಿ ಮಾಡಲು ನಾವು ಅವರ ಪರಿಣತಿಯನ್ನು ಉಪಯೋಗಿಸಿಕೊಳ್ಳಬಹುದಲ್ಲವೆ ಎಂದು ಪ್ರಶ್ನಿಸಿದ್ದಾರೆ.

    ಭಾರತವು ಇದೀಗ 100 ನವೋದ್ಯಮಗಳನ್ನು ಹೊಂದಿದೆ. ಕರ್ನಾಟಕವು ಭಾರತದಾದ್ಯಂತ ಜನರಿಗೆ ಉದ್ಯೋಗ ಸೃಷ್ಟಿಸುತ್ತಿದೆ. ಆದರೂ ಯಾಕೆ ಅತಿಹೆಚ್ಚಿನ ನಿರುದ್ಯೋಗ ಪ್ರಮಾಣ ಹಾಗೂ ಆತ್ಮಹತ್ಯೆ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ? ಮಾಧ್ಯಮಗಳು ಈ ಕುರಿತು ಯಾಕೆ ಚರ್ಚಿಸುತ್ತಿಲ್ಲ ಎಂದು ಡಿಕೆಶಿ ಮರು ಪ್ರಶ್ನೆ ಹಾಕಿದ್ದಾರೆ. ಇದನ್ನೂ ಓದಿ: ಉಮ್ರಾನ್ ಮಲಿಕ್ ಪಾಕಿಸ್ತಾನದಲ್ಲಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದರು: ಕಮ್ರಾನ್ ಅಕ್ಮಲ್

    ಏನಿದು ಪ್ರಕರಣ..?
    ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಮೂಲದ ಸಹನಾ (23) ವಿದ್ಯಾರ್ಹತೆಗೆ ಸೂಕ್ತ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಒಂದೂವರೆ ವರ್ಷದ ಹಿಂದೆ ಎಂಬಿಎ ಪದವಿ ಮುಗಿಸಿದ್ದಳು. ಆಕೆಗೆ ಸೂಕ್ತ ಕೆಲಸ ಸಿಕ್ಕಿರಲಿಲ್ಲ. ಏಪ್ರಿಲ್ 30 ರಂದು ಶಿರ್ವ ಸಮೀಪದ ಕಟ್ಟಿಂಗೇರಿ ಗ್ರಾಮದ ಸಹೋದರಿ ಸೌಮ್ಯ ಅವರ ಮನೆಗೆ ಬಂದಿದ್ದ ಸಹನಾ ಅಲ್ಲೇ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.

    ಮೇ 1ರ ಬೆಳಗ್ಗೆ ಸಹನಾ ವಿಪರೀತ ವಾಂತಿ ಮಾಡಿದ್ದು, ಹೀಗಾಗಿ ಆಕೆಯನ್ನು ಉಡುಪಿ ನಗರದ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಂತರ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ಆಕೆಯ ಸ್ಥಿತಿ ಚಿಂತಾಜನಕ ಹಂತಕ್ಕೆ ತಲುಪಿದ್ದರಿಂದ ಮೇ 7ರಂದು ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಹನಾ ಅವರನ್ನು ಸ್ಥಳಾಂತರಿಸಲಾಯಿತು. ಮೇ 9 ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.

  • ಉದ್ಯೋಗ ಸಿಗದಿದ್ದರಿಂದ ಮನನೊಂದು ಎಂಬಿಎ ಪದವೀಧರೆ ಆತ್ಮಹತ್ಯೆ

    ಉದ್ಯೋಗ ಸಿಗದಿದ್ದರಿಂದ ಮನನೊಂದು ಎಂಬಿಎ ಪದವೀಧರೆ ಆತ್ಮಹತ್ಯೆ

    ಉಡುಪಿ: ಎಂಬಿಎ ಪದವಿ ಪಡೆದಿದ್ದರೂ ವಿದ್ಯಾರ್ಹತೆಗೆ ಸೂಕ್ತ ಉದ್ಯೋಗ ಸಿಗದ ಹಿನ್ನೆಲೆ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿಯ ಕಾಪು ತಾಲೂಕಿನಲ್ಲಿ ನಡೆದಿದೆ.

    ದ.ಕ ಜಿಲ್ಲೆ ಉಪ್ಪಿನಂಗಡಿ ಮೂಲದ ಸಹನಾ (23) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಒಂದೂವರೆ ವರ್ಷದ ಹಿಂದೆ ಎಂಬಿಎ ಪದವಿ ಮುಗಿಸಿದ್ದಳು. ಆಕೆಗೆ ಸೂಕ್ತ ಕೆಲಸ ಸಿಕ್ಕಿರಲಿಲ್ಲ. ಏಪ್ರಿಲ್ 30 ರಂದು ಶಿರ್ವ ಸಮೀಪದ ಕಟ್ಟಿಂಗೇರಿ ಗ್ರಾಮದ ಸಹೋದರಿ ಸೌಮ್ಯ ಅವರ ಮನೆಗೆ ಬಂದಿದ್ದ ಸಹನಾ ಅಲ್ಲೇ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಬಸ್ ಪಲ್ಟಿ

    ಮೇ 1ರ ಬೆಳಗ್ಗೆ ಸಹನಾ ವಿಪರೀತ ವಾಂತಿ ಮಾಡಿದ್ದು, ಹೀಗಾಗಿ ಆಕೆಯನ್ನು ಉಡುಪಿ ನಗರದ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಂತರ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕ ಹಂತಕ್ಕೆ ತಲುಪಿದ್ದರಿಂದ ಮೇ 7 ರಂದು ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಹನಾ ಅವರನ್ನು ಸ್ಥಳಾಂತರಿಸಲಾಯಿತು. ಮೇ 9 ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಹಿಳೆ ಕತ್ತು ಹಿಸುಕಿ ಸಮಾಧಿ ಮಾಡಲು ಹೋಗಿ ತಾನೇ ಸತ್ತ

    ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕಾಂಗ್ರೆಸ್ ಇಂದು ಸಂಜೆ ಉಡುಪಿಯಲ್ಲಿ ಪ್ರತಿಭಟನೆ ನಡೆಸಲಿದೆ. ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ರಾಜ್ಯ, ಕೇಂದ್ರ ಸರಕಾರ ಯುವಕರಿಗೆ ಉದ್ಯೋಗ ಸೃಷ್ಟಿಸದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದೆ.

  • ಉಡುಪಿ ಸೀರೆಗೆ ಮಾಡರ್ನ್ ಟಚ್- ಮಗ್ಗ ಖರೀದಿಸಿ ಸೀರೆ ನೆಯ್ಗೆ ಕಲಿತ ಎಂಬಿಎ ಪದವೀಧರೆ

    ಉಡುಪಿ ಸೀರೆಗೆ ಮಾಡರ್ನ್ ಟಚ್- ಮಗ್ಗ ಖರೀದಿಸಿ ಸೀರೆ ನೆಯ್ಗೆ ಕಲಿತ ಎಂಬಿಎ ಪದವೀಧರೆ

    ಉಡುಪಿ: ಎರಡು ವರ್ಷ ಎಂಬಿಎ ಪದವಿ ಮಾಡಿ ಮುಂಬೈ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿ ಉಡುಪಿಗೆ ವಾಪಸ್ಸಾಗಿ ನೆಯ್ಗೆ ಮಾಡಿ ಸೀರೆ ತಯಾರಿಸುತ್ತಿದ್ದಾರೆ. ನಿಮಗೆ ಆಶ್ಚರ್ಯ ಆದರೂ ನಿಜ. ಸ್ವಂತದ್ದೇನಾದರೂ ಸಾಧನೆ ಮಾಡಬೇಕು. ಹುಟ್ಟಿದ ಊರಿಗೇನಾದ್ರು ಕೊಡುಗೆ ಕೊಡಬೇಕೆಂಬ ಹಂಬಲ ಮಹಾಲಸ ಕಿಣಿಯ ಈ ನಿರ್ಧಾರಕ್ಕೆ ಕಾರಣ.

    ಬಣ್ಣ ಬಣ್ಣದ ಸೀರೆ, ಎಲ್ಲಾ ವಯಸ್ಸಿನವರನ್ನು ಸೆಳೆಯುವ ವಿನೂತನ ಪ್ಯಾಟರ್ನ್ ಗಳು, ಮಗ್ಗದ್ದಾ ಅಂತ ಮೂಗು ಮುರಿಯುವವರೂ ಇಷ್ಟಪಡುವ ಸೀರೆಗಳು. ಉಡುಪಿಯ ಮಣಿಪಾಲ ಮಹಾಲಸಾ ಕಿಣಿ ಎಂಬಿಎ ಪದವಿ ಮುಗಿಸಿರುವಾಕೆ. ಕಲಿದದ್ದು ಎಂಬಿಎ ಆದರೂ ಸೆಳೆದದ್ದು ಮಗ್ಗದ ಸೀರೆ. ಅದರಲ್ಲೂ ಉಡುಪಿ ಕೈಮಗ್ಗದ ಸೀರೆ.

    ಎಂಬಿಎ ಪದವಿ ಬಳಿಕ ಉಡುಪಿ ಕೈಮಗ್ಗ ಸೀರೆಯತ್ತ ಆಸಕ್ತಿ ತಳೆದ ಈಕೆ, ಮಗ್ಗ ಖರೀದಿಸಲು ಮನಸ್ಸು ಮಾಡಿದ್ದಾರೆ. ನೇಕಾರ ಸಂಘ, ಮನೆಯಲ್ಲೇ ನೇಯುವ ಕುಟುಂಬಗಳನ್ನು ಸಂಪರ್ಕ ಮಾಡಿ ಮಗ್ಗ ಖರೀದಿ ಮಾಡಿದ್ದಾರೆ. ನಾಲ್ಕೈದು ತಿಂಗಳು ತರಬೇತಿ ಪಡೆದು ಮನೆಯಲ್ಲೇ ನೇಯಲು ಕಲಿತಿದ್ದಾರೆ. ಹಳೆಯ ಮಾದರಿ ಸೀರೆಗಳಿಗೆ ಮಾಡರ್ನ್ ಟಚ್ ಕೊಡುತ್ತಿದ್ದಾರೆ. ಮಗ್ಗದ ಮನೆಗಳಿಗೆ ತೆರಳಿ ಹೊಸ ಹೊಸ ವಿನ್ಯಾಸ ರೂಪಿಸಿ ತಯಾರಾದ ಸೀರೆಯನ್ನು ಆನ್‍ಲೈನ್ ಮೂಲಕ ಮಾರಲು ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ.

    ಮಹಾಲಸಾ ಕಿಣಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮುಂಬೈ ಕಂಪನಿಯಲ್ಲಿದ್ದೆ. ಒಂದು ವರ್ಷ ನಮ್ಮ ಹೋಟೆಲ್ ನಲ್ಲಿ ಕೆಲಸ ಕೂಡ ಮಾಡಿದ್ದೆ. ನನ್ನದೇ ಸ್ವಂತ ಏನಾದರು ಮಾಡಬೇಕೆಂದು ಕಾಡುತ್ತಲೇ ಇತ್ತು. ನಮ್ಮ ಊರಿಗೂ ಅದರಿಂದ ಉಪಯೋಗ ಆಗಬೇಕು ಎಂಬ ಹಂಬಲ ಇತ್ತು. ಆನ್ ಲೈನ್ ಮೂಲಕ ಬೇರೆ ಬೇರೆ ರಾಜ್ಯಗಳ ಸೀರೆಗಳನ್ನು ಮಾರಾಟ ಮಾಡುತ್ತೇನೆ. ನನಗೆ ಸ್ಪಲ್ಪ ಲಾಭ ಇದೆ. ಸಾವಿರದಷ್ಟು ಜನ ಉಡುಪಿ ಸೀರೆ ನೇಯುತ್ತಿದ್ದರು. ಆ ಸಂಖ್ಯೆ ನೂರಕ್ಕೆ ಬಂದಿದೆ. ಬೇಡಿಕೆ ಮತ್ತು ವರಮಾನ ಹೆಚ್ಚಾದರೆ ನೇಕಾರರಿಗೆ ಶಕ್ತಿ ಬಂದಂತಾಗುತ್ತದೆ ಎಂದು ಹೇಳಿದರು.

    ಮಹಾಲಸಾ ಕಿಣಿ ಮಲ್ಸಿ ಹೆಸರಿನ ಸಂಸ್ಥೆ ಮೂಲಕ ಆನ್ ಲೈನ್ ಸೇಲ್ ನಡೆಸುತ್ತಾರೆ. ಕೊರೊನಾ ಸಮಯದಲ್ಲಿ ಪೂರ್ಣವಾಗಿ ಉಡುಪಿ ಕೈಮಗ್ಗ ಸೀರೆಯ ನೆಯ್ಗೆ, ಉಡುಪಿ ಕೈಮಗ್ಗ ಸೀರೆಯ ಕುರಿತು ಜಾಗೃತಿ, ಅಳಿವಿನಂಚಿನಲ್ಲಿರುವ ನೇಕಾರ ಕುಟುಂಬಗಳಿಗೆ ಉತ್ತೇಜನ ಕೊಡುವಲ್ಲಿ ಶ್ರಮಪಟ್ಟಿದ್ದಾರೆ. ಉಡುಪಿ ಪ್ರಾಥಮಿಕ ನೇಕಾರರ ಸಂಘ, ಶಿವಳ್ಳಿ ಪ್ರಾಥಮಿಕ ನೇಕಾರರ ಸಂಘ, ಕಿನ್ನಿಗೋಳಿ ನೇಕಾರರ ಸಂಘದ ಸದಸ್ಯರ ಬಳಿ ಸೀರೆ ನೆಯ್ಗೆ ಮಾಡಿಸುತ್ತಿದ್ದಾರೆ. ಸೀರೆಯೊಂದಕ್ಕೆ 850 ರಿಂದ 2,000ರೂ. ಮೌಲ್ಯಕ್ಕೆ ಆನ್ ಲೈನ್ ಮೂಲಕ ಮಾರ್ಕೆಟ್ ಕ್ರಿಯೇಟ್ ಮಾಡಿದ್ದಾರೆ. ಆಫೀಸ್, ಕಾಲೇಜುಗಳಲ್ಲಿ ಉಡುಪಿ ಸೀರೆ ಸೇಲ್ ಆಗ್ತಾಯಿದೆ. ನೇಕಾರ ಸಮುದಾಯಕ್ಕೆ ಮಹಾಲಸ ಹೊಸ ಶಕ್ತಿ ತಂದುಕೊಟ್ಟಿದ್ದಾರೆ.

    ನೇಕಾರ ಮಹಿಳೆ ಗೀತಾ ಮಾತನಾಡಿ, ಮಹಾಲಸಾ ಆರಂಭದಲ್ಲಿ ನೇಯುವ ಕೆಲಸ ಕಲಿತುಕೊಂಡರು. ಆಮೇಲೆ ಒಂದು ಮಗ್ಗವನ್ನು ಖರೀದಿ ಮಾಡಿದ್ದಾರೆ. ನಾವು ಹಲವಾರು ವರ್ಷ ಒಂದೇ ತರದ ಸೀರೆ ನೇಯುತ್ತಿದ್ದೆವು. ಈಗ ಹೊಸ ಹೊಸ ಡಿಸೈನ್. ಈಗಿನ ಯುವತಿಯರಿಗೆ ಇಷ್ಟವಾಗುವ ಡಿಸೈನ್ ನೇಯಲು ಶುರು ಮಾಡಿದ್ದೇವೆ. ಸಂಪಾದನೆಯೂ ಚೆನ್ನಾಗಿದೆ. ಆದ್ರೆ ಸರಕಾರ ಪ್ರೋತ್ಸಾಹಿಸಬೇಕಿದೆ. ಪೆನ್ಶನ್ ಜಾರಿಯಾಗಬೇಕು. ವಯಸ್ಸಾಯ್ತು ಇನ್ನು ನೆಯ್ಗೆ ಮಾಡಿ ಜೀವನ ಕಳೆಯೋದು ಕಷ್ಟ ಎಂದರು.

    ಅಸ್ಸಾಂ, ತ್ರಿಪುರ, ಪಂಜಾಬ್- ಮಧ್ಯಪ್ರದೇಶ, ತಮಿಳ್ನಾಡು ರಾಜ್ಯಗಳ ಮಗ್ಗದ ಸೀರೆಗಳನ್ನೂ ಮಹಾಲಸ ತರಿಸಿಕೊಳ್ಳುತ್ತಿದ್ದಾರೆ. ಸಂಸ್ಕೃತಿಯ ವಿನಿಮಯ ಜೊತೆ ಅಲ್ಲಿನ ನೇಕಾರ ಸಮುದಾಯಕ್ಕೆ ಸಹಾಯ ಮಾಡುತ್ತಿದ್ದಾರೆ. ಎಂಬಿಎಯಲ್ಲಿ ಕಲಿತ ಮಾರ್ಕೆಟಿಂಗ್ ಥಿಯರಿ ಪ್ರ್ಯಾಕ್ಟಿಕಲ್ ಆಗಿ ಬಳಕೆಯಾಗುತ್ತಿದೆ.

  • ರ‌್ಯಾಂಪ್‌ ವಾಕ್ ಪ್ರಾಕ್ಟೀಸ್ ಮಾಡ್ತಿದ್ದಾಗ ಎಂಬಿಎ ವಿದ್ಯಾರ್ಥಿನಿ ಸಾವು

    ರ‌್ಯಾಂಪ್‌ ವಾಕ್ ಪ್ರಾಕ್ಟೀಸ್ ಮಾಡ್ತಿದ್ದಾಗ ಎಂಬಿಎ ವಿದ್ಯಾರ್ಥಿನಿ ಸಾವು

    ಬೆಂಗಳೂರು: ಕಾಲೇಜ್ ಫ್ರೆಶರ್ಸ್ ಡೇಗೆ ರ‌್ಯಾಂಪ್‌ ವಾಕ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಎಂಬಿಎ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ.

    21 ವರ್ಷದ ಶಾಲಿನಿ ಸಾವನ್ನಪ್ಪಿರುವ ವಿದ್ಯಾರ್ಥಿನಿ. ಪೀಣ್ಯದ ಏಮ್ಸ್ ಇನ್ಸ್ ಟಿಟ್ಯೂಟ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.

    ಸೋಮವಾರ ಕಾಲೇಜ್ ಫ್ರೆಶರ್ಸ್ ಡೇ ಇತ್ತು. ಈ ಹಿನ್ನೆಲೆಯಲ್ಲಿ ಶಾಲಿನಿ ಸೇರಿದಂತೆ ಕೆಲ ವಿದ್ಯಾರ್ಥಿಗಳು ರ‌್ಯಾಂಪ್‌ ವಾಕ್ ಪ್ರಾಕ್ಟೀಸ್ ಮಾಡುತ್ತಿದ್ದರು. ಈ ವೇಳೆ ಶಾಲಿನಿ ಸ್ಟೇಜ್ ಮೇಲೆಯೇ ಕುಸಿದು ಬಿದ್ದಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಚಿಕಿತ್ಸೆ ಫಲಿಸದೆ ಶಾಲಿನಿ ಮೃತಪಟ್ಟಿದ್ದಾಳೆ.

    ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

  • ಮದ್ವೆಯಾಗೋದಾಗಿ ನಂಬಿಸಿ ಗರ್ಭಿಣಿ ಮಾಡಿ ಎಂಬಿಎ ಪದವೀಧರ ವಂಚನೆ

    ಮದ್ವೆಯಾಗೋದಾಗಿ ನಂಬಿಸಿ ಗರ್ಭಿಣಿ ಮಾಡಿ ಎಂಬಿಎ ಪದವೀಧರ ವಂಚನೆ

    ಕಲಬುರಗಿ: ಪ್ರೀತಿ ಮಾಯೆ ಹುಷಾರು ಕಣ್ಣೀರು ಮಾರೋ ಬಜಾರು ಎಂಬ ಹಾಡು ಕಲಬುರಗಿಯ ಯುವತಿಗೆ ಸೂಟ್ ಆಗುತ್ತೆ. ಯಾಕೆಂದರೆ ಪ್ರೀತಿ ಮಾಡುವುದಾಗಿ ನಾಟಕವಾಡಿದ ಪಕ್ಕದ ಮನೆ ಹುಡುಗ ಆಕೆಯ ಜೊತೆ ಸರಸ ಸಲ್ಲಾಪ ಆಡಿ ಇದೀಗ ಕೈ ಕೊಟ್ಟಿದ್ದಾನೆ.

    ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ನಿವಾಸಿ ಯುವತಿಯನ್ನು ಮನೆ ಪಕ್ಕದ ವಿಶಾಲ್ ಚೌವ್ಹಾಣ್ ಎಂಬ ಯುವಕ 10 ವರ್ಷಗಳಿಂದ ಪ್ರೀತಿಸಿ ಪಟಾಯಿಸಿದ್ದಾನೆ. ನಂತರ ಆಕೆಯನ್ನು ದೈಹಿಕವಾಗಿ ಸಹ ಹಲವು ಬಾರಿ ಉಪಯೋಗಿಸಿಕೊಂಡು ಇದೀಗ ಬೇರೆ ಯುವತಿಯ ಜೊತೆ ಮದುವೆಗೆ ಮುಂದಾಗಿದ್ದಾನೆ. ಈ ಬಗ್ಗೆ ಯುವತಿ ವಿಶಾಲ್ ಪೊಷಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ನೊಂದ ಯುವತಿ ನಯವಂಚಕ ವಿಶಾಲ್ ವಿರುದ್ಧ ವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಕೂಡಲೇ ಪೊಲೀಸರು ಅಲ್ಲಿಯೇ ಇರುವ ಬಸವೇಶ್ವರ ವೃತದಲ್ಲಿ ಇಬ್ಬರನ್ನೂ ಮದುವೆ ಮಾಡಿಸಿ ಮನೆಗೆ ಕಳುಹಿಸಿದ್ದಾರೆ. ಆದರೆ ಮದುವೆಯಾದ ಎರಡೇ ದಿನಕ್ಕೆ ವಿಶಾಲ್ ಆಕೆಗೆ ಕೈ ಕೊಟ್ಟು ಪರಾರಿಯಾಗಿದ್ದಾನೆ ಎಂದು ನೊಂದ ಯುವತಿ ದೂರಿದ್ದಾರೆ.

    ಈ ಹಿಂದೆ ಯುವತಿ ಮತ್ತು ವಿಶಾಲ್ ಇಬ್ಬರೂ ಎಂಬಿಎ ಪದವಿಧರರಾಗಿದ್ದು, ಪುಣೆಯಲ್ಲಿ ಕೆಲಸ ಮಾಡಲು ಹೋದಾಗ ದೈಹಿಕ ಸಂಪರ್ಕ ಬೆಳೆಸಿದ ಕಾಮುಕ ವಿಶಾಲ್, ಎರಡು ಬಾರಿ ಯುವತಿಯನ್ನು ಗರ್ಭಣಿ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಪುಣೆಯ ವೈದ್ಯ ಡಾ.ರಮೇಶ್ ಯುವತಿಗೆ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾನೆ. ಇಷ್ಟೆಲ್ಲ ಆದರೂ ಸಹಿಸಿಕೊಂಡ ಯುವತಿಗೆ ಈ ನಯವಂಚಕ ವಿಶಾಲ್ ಇದೀಗ ಕೈ ಕೊಟ್ಟಿದ್ದಾನೆ.

    ಈ ಬಗ್ಗೆ ವಾಡಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ನಾವು ಮದುವೆ ಮಾಡಿದ್ದೇವೆ. ನಮ್ಮ ಕೆಲಸ ಮುಗಿಯಿತು ಎಂದು ಹೇಳಿ ಯುವತಿಗೆ ಹಾರಿಕೆಯ ಉತ್ತರ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ನ್ಯಾಯ ಕೊಡಿ ಇಲ್ಲ ವಿಷ ಕೊಡಿ ಎಂದು ಯುವತಿ ಈಶಾನ್ಯ ವಲಯ ಐಜಿಪಿ ಮುರುಘನ್ ಮೋರೆ ಹೋಗಿದ್ದಾರೆ.

    ಹೀಗೆ ಯುವತಿಯರ ಜೊತೆ ಪ್ರೀತಿಸಿ ಲವ್ ಸೆಕ್ಸ್ ಮಾಡಿ ದೋಖಾ ಮಾಡುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ಯುವತಿಯರು ಪ್ರೀತಿಯ ಮಾಯದ ಬಲೆಗೆ ಬಿಳುವ ಮುನ್ನ ಹುಷಾರಾಗಿರಬೇಕಾಗಿದೆ.

  • ಮಂಡ್ಯ ವಿದ್ಯಾರ್ಥಿನಿ ಪತ್ರಕ್ಕೆ ಸ್ಪಂದಿಸಿದ ಮೋದಿ

    ಮಂಡ್ಯ ವಿದ್ಯಾರ್ಥಿನಿ ಪತ್ರಕ್ಕೆ ಸ್ಪಂದಿಸಿದ ಮೋದಿ

    ಮಂಡ್ಯ: ಎಂಬಿಎ ಪದವಿಯಲ್ಲಿ ಕಾಲೇಜಿಗೆ ಅತೀ ಹೆಚ್ಚು ಅಂಕ ಪಡೆದು ಶುಲ್ಕ ಕಟ್ಟಲು ಸಂಕಟ ಪಡುತ್ತಿದ್ದ ಮುಸ್ಲಿಂ ಯುವತಿಯೊಬ್ಬರ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ್ದು, ಇದೀಗ ವಿದ್ಯಾರ್ಥಿನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

    ಮಂಡ್ಯ ನಗರದ ನಿವಾಸಿಯಾದ ಅಬ್ದುಲ್ ಇಲಿಯಾಸ್ ಎಂಬುವರ ಮಗಳು ಸಾರಾ, ನಗರದ ಪಿಇಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಎಗೆ ದಾಖಲಾತಿ ಪಡೆದಿದ್ದರು. ಆದ್ರೆ, ಕಾಲೇಜಿನ ಶುಲ್ಕ ಕಟ್ಟಲು ಹಣವಿಲ್ಲದ ಕಾರಣ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಲೋನ್‍ಗೆ ಮನವಿ ಸಲ್ಲಿಸಿದ್ರು. ಬ್ಯಾಂಕ್ ನಿಯಮದ ಪ್ರಕಾರ ನಿಮಗೆ ಲೋನ್ ನೀಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದರು.

    ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ 11ರ ಪಾಕ್ ಬಾಲಕಿಯಿಂದ ಮೋದಿಗೆ ಶುಭಾಶಯ!

    ಇದರಿಂದ ಖಾಸಗಿ ಸಾಲ ಮಾಡಿ ಅರ್ಧದಷ್ಟು ಶುಲ್ಕ ಕಟ್ಟಿದ್ದ ವಿದ್ಯಾರ್ಥಿನಿ, ತಮಗೆ ಬ್ಯಾಂಕ್‍ನಿಂದ ಲೋನ್ ಪಡೆಯಲು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ರು. ವಿದ್ಯಾರ್ಥಿನಿ ಪತ್ರ ಬರೆದ ಕೇವಲ ಹತ್ತೇ ದಿನದಲ್ಲಿ ಪ್ರಧಾನಿ ಕಚೇರಿಯಿಂದ ಕರ್ನಾಟಕ ಚೀಫ್ ಸೆಕ್ರೆಟರಿ ಅವರಿಗೆ, ವಿದ್ಯಾರ್ಥಿನಿ ಸಾರಾ ಅವರಿಗೆ ಸಹಾಯ ಮಾಡುವಂತೆ ಪತ್ರ ಬಂದಿತ್ತು. ಆ ಪತ್ರವನ್ನು ತೆಗೆದುಕೊಂಡು ಮತ್ತೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಸಾರಾ ಲೋನ್‍ಗೆ ಮನವಿ ಸಲ್ಲಿಸಿದ್ರು. ಆದರೂ ಬ್ಯಾಂಕ್ ಲೋನ್ ಕೊಡಲು ನಿರಾಕರಿಸಿದೆ. ಆದರೆ ಪ್ರಧಾನಿ ಪತ್ರವನ್ನ ಗಮನಿಸಿದ ವಿಜಯಾ ಬ್ಯಾಂಕ್ ಸಾರಾಗೆ ಲೋನ್ ನೀಡಿ ಸಹಾಯ ಮಾಡಿದೆ.

    ಇದೀಗ ಕಾಲೇಜಿನ ಸಂಪೂರ್ಣ ಶುಲ್ಕ ಪಾವತಿಸಿರುವ ವಿದ್ಯಾರ್ಥಿನಿ ಸಾರಾ ಮತ್ತು ಆಕೆಯ ತಂದೆ ಅಬ್ದುಲ್ ಇಲಿಯಾಜ್, ನಮ್ಮಂತ ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಪ್ರಧಾನಿ ಮೋದಿ ನಿಜವಾದ ಜನನಾಯಕ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

    https://www.youtube.com/watch?v=98MEkBF6hmo