Tag: mb ptil

  • ಬಿಜೆಪಿ ಬಸ್‍ನಲ್ಲಿ ಗಾಳಿನೇ ಇಲ್ಲ, ಅದಿಕೆ ಆಗಾಗ ಮೋದಿ ಕರೆಸ್ತಿದ್ದಾರೆ: ಎಂ.ಬಿ ಪಾಟೀಲ್

    ಬಿಜೆಪಿ ಬಸ್‍ನಲ್ಲಿ ಗಾಳಿನೇ ಇಲ್ಲ, ಅದಿಕೆ ಆಗಾಗ ಮೋದಿ ಕರೆಸ್ತಿದ್ದಾರೆ: ಎಂ.ಬಿ ಪಾಟೀಲ್

    ಕಲಬುರಗಿ: ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ (Congress) ಕೈಗೊಂಡಿರುವ ಪ್ರಜಾಧ್ವನಿ ಬಸ್ ಪಂಚರ್ ಆಗಿದೆ ಎಂದು ಮಾಜಿ ಸಿಎಂ ಬಿಎಸ್‍ವೈ (BS Yediyurappa) ಹೇಳಿಕೆ ನೀಡಿದ ಬೆನ್ನಲ್ಲೇ ಭಾನುವಾರ ಕಲಬುರಗಿಯಲ್ಲಿ ಮಾಜಿ ಸಚಿವ ಎಂಬಿ ಪಾಟೀಲ್ (MB Patil) ತಿರುಗೇಟು ನೀಡಿದ್ದಾರೆ.

    ನಮ್ಮ ಬಸ್ ಎಂದಿಗೂ ಪಂಕ್ಚರ್ ಆಗುವುದಿಲ್ಲ. ಬಿಜೆಪಿಯವರು ಯಡಿಯೂರಪ್ಪ ಅವರನ್ನ ಪಂಕ್ಚರ್ ಮಾಡಿದ್ದಾರೆ. ಬಿಜೆಪಿ ಬಸ್‍ಗೆ ಟೈರಲ್ಲಿ ಗಾಳಿನೇ ಇಲ್ಲ, ಅದಕ್ಕಾಗಿ ಪದೇ ಪದೇ ಮೋದಿಯವರನ್ನ ಕರೆಸುತ್ತಿದ್ದಾರೆ. ರಾಜ್ಯದಲ್ಲಿ ಮೋದಿ/ಶಾ ಅವರ ಮೋಡಿ ನಡೆಯುವುದಿಲ್ಲ. ಈ ಬಾರಿ ನಡೆಯಲ್ಲ ಎಂದು ಹೇಳಿದರು.

    ಇದಲ್ಲದೇ 7 ರಿಂದ 8 ಬಿಜೆಪಿ ಹಾಲಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ ಎಂ.ಬಿ ಪಾಟೀಲ್, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಶಾಸಕಾಂಗ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಸಿಎಂ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ನಮ್ಮಲ್ಲಿ ಬೇಧ-ಭಾವ ಇಲ್ಲ. ಬಹಳಷ್ಟು ಜನ ಸಮರ್ಥರಿದ್ದಾರೆ ಎಂದು ಅವರು ಹೇಳಿದರು. ಇದನ್ನೂ ಓದಿ: ಜನಾರ್ದನ ಪೂಜಾರಿ ಪ್ರಭಾವ ಬಳಸಿ ಟಿಕೆಟ್‍ಗಾಗಿ ಭಾರೀ ಕಸರತ್ತು

    ಪ್ರಜಾಧ್ವನಿ ಯಾತ್ರೆ (Prajadwani Yatre) ಗಾಗಿ ಎರಡು ತಂಡಗಳನ್ನಾಗಿ ರಚನೆ ಮಾಡಲಾಗಿದೆ. ಯಾತ್ರೆಗೆ ರಾಜ್ಯದ ವಿವಿಧೆಡೆ ಜನ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯ ಕುರಿತು ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಆಡಳಿತ ಹೇಗಿದೆ ಅನ್ನೋದು ಜನರಿಗೆ ಗೋತ್ತಾಗಿದೆ. ಪ್ರಜಾಧ್ವನಿ ಬಸ್ ಯಾತ್ರೆ ಯಶಸ್ವಿಯಾಗಿ ಸಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಈ ಹಿಂದೆ ದೇಶದಲ್ಲಿ ಝಿರೋ ಟ್ಯಾಕ್ಸ್ ಇತ್ತು. ಇಂದು ಎಲ್ಲದಕ್ಕೂ ಟ್ಯಾಕ್ಸ್ ವಿಧಿಸಲಾಗಿದೆ. ರಾಜ್ಯದಲ್ಲಿ/ಕೇಂದ್ರದಲ್ಲಿ ಬಿಜೆಪಿ ಸರ್ಕಾರ (BJP Government) ಏನೂ ಕೆಲಸ ಮಾಡುತ್ತಿಲ್ಲ. ದೇಶದಲ್ಲಿ 2 ಸಾವಿರ ಅಣೆಕಟ್ಟುಗಳಿವೆ, ಎಲ್ಲವೂ ಕಾಂಗ್ರೆಸ್ ಅವಧಿಯಲ್ಲಿ ಆಗಿವೆ. ಕೇಂದ್ರ ಸರ್ಕಾರ ಪ್ರತಿಷ್ಠಿತ ಎಲ್‍ಐಸಿ ಮಾರಿಕೊಳ್ಳುವಂತಹ ಕೆಲಸ ಮಾಡುತ್ತಿದೆ. ಅದಾನಿ/ಅಂಬಾನಿಗೆ ಸಾಲ ನೀಡುವಂತಹ ಕೆಲಸ ಮಾಡುತ್ತಿದ್ದಾರೆ. ಯಾರ ಹಣ ಯಾರಿಗೆ ಸಾಲ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಸಂಪೂರ್ಣ 40% ನಲ್ಲಿ ಮುಳುಗಿ ಹೋಗಿದೆ ಎಂದು ಕಿಡಿಕಾರಿದರು.

  • ಸ್ವಾತಂತ್ರ್ಯ ಕೊಡಿಸಿದ್ದು ಕಾಂಗ್ರೆಸ್: ಎಂ.ಬಿ ಪಾಟೀಲ್

    ಸ್ವಾತಂತ್ರ್ಯ ಕೊಡಿಸಿದ್ದು ಕಾಂಗ್ರೆಸ್: ಎಂ.ಬಿ ಪಾಟೀಲ್

    ಬಳ್ಳಾರಿ: ಸ್ವಾತಂತ್ರ್ಯ ಕೊಡಿಸಿದ್ದು ಕಾಂಗ್ರೆಸ್. ಬಿಜೆಪಿಯವರಾರು ಸ್ವಾತಂತ್ರ್ಯ ಹೋರಾಟ ಮಾಡಿಲ್ಲ. ಬಿಜೆಪಿಯಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕಾದ ಅವಶ್ಯಕತೆ ಇಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ವಾಗ್ದಾಳಿ ನಡೆಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014 ರಿಂದ ದೇಶ ಸಾಕಷ್ಟು ಹಿನ್ನೆಡೆ ಅನುಭವಿಸಿದೆ. ಬದುಕೋಕು ಬಿಡಲ್ಲ ಸಾಯೋಕು ಬಿಡಲ್ಲ ಸತ್ತ ಮೇಲೂ ಬಿಡೋದಿಲ್ಲ ಅಷ್ಟೊಂದು ಜಿಎಸ್‍ಟಿ ಹಾಕ್ತಾರೆ. ಹಿಂದುತ್ವ ಅಜೆಂಡಾ ಭಾವನೆ ಕೆರಳಿಸುತ್ತಾ ಚುನಾವಣೆ ಮಾಡ್ತಾರೆ. 40% ಭ್ರಷ್ಟಾಚಾರ ಮಾಡಿರೋ ಸರ್ಕಾರ ಕಾಂಟ್ರಾಕ್ಟರ್ ಗಳೇ ಈ ಬಗ್ಗೆ ದೂರನ್ನು ನೀಡಿದ್ದಾರೆ. ಐಟಿ, ಸಿಬಿಐ, ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಚುನಾವಣೆ ಹತ್ತಿರ ಬರುತ್ತಿದ್ದಂತೆ 40% ದಿಂದ 80% ಕ್ಕೆ ಹೋದರೂ ಅಚ್ಚರಿಯಿಲ್ಲ. ಹಿಜಬ್, ಹಲಾಲ್, ಪಠ್ಯ ಪುಸ್ತಕ ಗೊಂದಲ. ಇದೇ ಈ ಸರ್ಕಾರದ ಸಾಧನೆ. ಲಿಂಗಾಯತ ಮಠವಲ್ಲ ಎಲ್ಲಾ ಸಮುದಾಯದ ಮಠಕ್ಕೆ ಹೋಗಿದ್ದೇನೆ. ಚರ್ಚ್ ಮಸೀದಿಗೂ ಹೋಗಿದ್ದೇನೆ. ಲಿಂಗಾಯತ ಪ್ರಚಾರ ಸಮಿತಿ ಅಧ್ಯಕ್ಷನಲ್ಲ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆಂದು 2018ರಲ್ಲಿ ಲಿಂಗಾಯತರು ಬಿಜೆಪಿಗೆ ಮತ ಹಾಕಿದ್ರು. ಈಗ ಪರಿಸ್ಥಿತಿ ಹಾಗಿಲ್ಲ ಈಗ ಲಿಂಗಾಯತರು ಕಾಂಗ್ರೆಸ್ ಬೆಂಬಲಿಸ್ತಾರೆ ಎಂದರು. ಇದನ್ನೂ ಓದಿ: ಹಿಂದೂ ಧರ್ಮ ಒಡೆಯುವುದು, ಮತಾಂತರ ಮಾಡುವುದೇ ಒಡನಾಡಿಯ ಉದ್ದೇಶ: ಮಠದ ಸದಸ್ಯ ಕಿಡಿ

    ಕಾಂಗ್ರೆಸ್ ನಲ್ಲಿ ಯಾವುದೇ ಅಂತರಿಕ ಗೊಂದಲವಿಲ್ಲ. ಹೈಕಮಾಂಡ್ ನಿರ್ಣವೇ ಅಂತಿಮ. ಪ್ರತ್ಯೇಕ ಲಿಂಗಾಯತ ಹೋರಾಟ ಸಮಿತಿ ವಿಚಾರದ ಕುರಿತು ಮಾತನಾಡಿ, ಆ ಕಡೆಯವರು ಎಲ್ಲರೂ ಕುಳಿತುಕೊಂಡು ತೀರ್ಮಾನ ಮಾಡಲಿ ಅದಕ್ಕೆ ಬದ್ಧ. ಆನಂದ್ ಸಿಂಗ್ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ. ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಅಪರೇಷನ್ ಕಮಲದ ಮೂಲಕ ಬಿಜೆಪಿ ಹೋದವರನ್ನು ಈ ಬಾರಿ ಸೋಲಿಸ್ತೇವೆ ಎಂದು ಹೇಳಿದರು.

    ಇದೇ ವೇಳೆ ಮುರುಘಾ ಶ್ರೀ ಪೋಕ್ಸೋ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾವು ನ್ಯಾಯದ ಪರವಾಗಿ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಶ್ರೀಗಳ ಮೇಲೆ ಈ ರೀತಿಯ ಆರೋಪ ಕೇಳಿಬಂದಾಗ ಎಲ್ಲರೂ ಆಶ್ಚರ್ಯರಾಗಿದ್ದರು. ಇದು ತುಂಬಾ ಸೂಕ್ಷ್ಮ ವಿಚಾರ, ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿ ಇದೆ. ಶ್ರೀಗಳು ರೀತಿಯ ಕೃತ್ಯ ಮಾಡಿದ್ದಾರೆ ಎಂದು ಸಾಬೀತಾದ್ರೆ ಶ್ರೀಗಳಿಗೆ ಶಿಕ್ಷೆ ಆಗಲಿ. ಇಲ್ಲಾ ಇದೊಂದು ಕುತಂತ್ರ ಎಂದಾದರೆ, ಕುತಂತ್ರಿಗಳಿಗೆ ಶಿಕ್ಷೆ ಆಗಲಿ. ಕಾಂಗ್ರೆಸ್ ಯಾವಾಗಲೂ ನ್ಯಾಯದ ಪರವಾಗಿ ಇರಲಿದೆ ಎಂದರು.

    Live Tv
    [brid partner=56869869 player=32851 video=960834 autoplay=true]