ವಿಜಯಪುರ: ಕಲಬುರಗಿ ಬಿಜೆಪಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ದಿವ್ಯಾ ಹಾಗರಗಿ ಮೇಲೆ ವಿಜಯಪುರದಲ್ಲಿ ಎಫ್ ಐಆರ್ ದಾಖಲಾಗಿದೆ.
ಪ್ರಚೋದನಾಕಾರಿ ಭಾಷಣ, ಕೊಲೆ ಬೆದರಿಕೆ, ಜೀವ ಭಯ ಹಾಕಿದ್ದ ಹಿನ್ನೆಲೆಯಲ್ಲಿ ದಿವ್ಯಾ ವಿರುದ್ಧ ಗೋಲಗುಮ್ಮಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಿವ್ಯಾ ಭಾಷಣದಲ್ಲಿ ಹೇಳಿದ್ದು ಏನು?
ಮಾರ್ಚ್ 25 ರಂದು ವಿಜಯಪುರದಲ್ಲಿ ನಡೆದ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಅವರು, ನೀವು ಇಲ್ಲಿ ಬಂದಿದ್ದೇ ಆದರೆ ಬರೀ ಒಂದು ರೌಂಡ್ ಹಾಕಿ ತೋರಿಸಿ. ನೀವು ನಮ್ಮ ಧರ್ಮಕ್ಕೆ ನೀವು ಕೈ ಹಾಕಿದ್ದು ಸರಿಯಲ್ಲ. ಅದಕ್ಕೆ ಪುರುಷರು ಯಾರು ಬೇಡ. ನಾವು ಮಹಿಳೆಯರು ಸಾಕು. ಒಂದು ಒನಕೆ ಅಥವಾ ಖಡ್ಗ ಕೊಟ್ರೆ ಸಾಕು ನಿಮ್ಮಂಥ ಎಷ್ಟೇ ಧರ್ಮ ವಿರೋಧಿಗಳು ಬಂದರೂ ಅವರನ್ನು ಪೀಸ್ ಪೀಸ್ ಮಾಡುತ್ತೇವೆ ಎಂದು ಎಂ.ಬಿ ಪಾಟೀಲರಿಗೆ ಎಚ್ಚರಿಕೆ ನೀಡಿದ್ದರು. ದಿವ್ಯಾ ಹೇಳಿಕೆಯನ್ನು ಖಂಡಿಸಿ ಇದೀಗ ದಲಿತ ಪರ ಹೋರಾಟಗಾರ ಶ್ರೀನಾಥ ಪೂಜಾರಿ ಗೋಲಗುಂಬಜ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಈ ಕೂಡಲೇ ದಿವ್ಯಾರನ್ನು ಬಂಧಿಸಿ ಕ್ರಮಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ.
ವಿಜಯಪುರ: ಧಮ್ ಇದ್ರೆ ವೀರಶೈವ ಸಮಾವೇಶಕ್ಕೆ ಬಂದು ಹೋಗಿ ಅಂತ ದಿವ್ಯಾ ಹಾದರಗಿ ಎಂಬವರು ಸಚಿವ ಎಂ.ಬಿ ಪಾಟೀಲರಿಗೆ ಸವಾಲೆಸೆದಿದ್ದಾರೆ.
ವಿಜಯಪುರದಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಅವರು, ನೀವು ಇಲ್ಲಿ ಬಂದಿದ್ದೇ ಆದರೆ ಬರೀ ಒಂದು ರೌಂಡ್ ಹಾಕಿ ತೋರಿಸಿ. ನೀವು ನಮ್ಮ ಧರ್ಮಕ್ಕೆ ನೀವು ಕೈ ಹಾಕಿದ್ದು ಸರಿಯಲ್ಲ. ಅದಕ್ಕೆ ಪುರುಷರು ಯಾರು ಬೇಡ. ನಾವು ಮಹಿಳೆಯರು ಸಾಕು. ಒಂದು ಒನಕೆ ಅಥವಾ ಖಡ್ಗ ಕೊಟ್ರೆ ಸಾಕು ನಿಮ್ಮಂಥ ಎಷ್ಟೇ ಧರ್ಮ ವಿರೋಧಿಗಳು ಬಂದರೂ ಅವರನ್ನು ಪಿಸ್ ಪಿಸ್ ಮಾಡುತ್ತೇವೆ ಎಂದು ಎಂ.ಬಿ ಪಾಟೀಲರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆಯನ್ನು 2013ರಲ್ಲಿ ತಿರಸ್ಕರಿಸಿತ್ತು ಯುಪಿಎ
ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಶಿಫಾರಸ್ಸು ಪತ್ರವನ್ನು ರಾಜ್ಯ ಸರ್ಕಾರ, ಕೇಂದ್ರಕ್ಕೆ ಕಳುಹಿಸಿದೆ. ಆದ್ರೆ ಆ ವಿಚಾರದಲ್ಲಿ ಹಾಲಲ್ಲಿ ಉಪ್ಪು ಹಾಕುವ ಕೆಲಸವನ್ನು ಮಾಡಬೇಡಿ ಎಂದು ಪರೋಕ್ಷವಾಗಿ ಯಡಿಯೂರಪ್ಪ, ಅನಂತಕುಮಾರ್ ಹಾಗೂ ಸದಾನಂದಗೌಡ ಅವ್ರಿಗೆ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಪುರಾವೆಗಳನ್ನು, ಸಾಕ್ಷ್ಯಗಳನ್ನು ನೀಡಿ ಕೇಂದ್ರಕ್ಕೆ ಕಳುಹಿಸಿದ್ದೇವೆ. ಕೇಂದ್ರ ಸರ್ಕಾರ ಕೂಡ ನಮ್ಮ ಮನವಿಗೆ ಸ್ಪಂದಿಸುತ್ತದೆಯೆಂಬ ಅಚಲ ವಿಶ್ವಾಸವಿದೆ. ಆದ್ರೆ ಅದ್ರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಅನಂತಕುಮಾರ್, ಸದಾನಂದಗೌಡ ಅವರು ನಮಗೆ ಸಹಾಯ ಮಾಡಬೇಕೆಂದು ಅವರು ಮನವಿ ಮಾಡಿದ್ರು. ಇದನ್ನೂ ಓದಿ: ಸಿಎಂ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ: ರಂಭಾಪುರಿ ಶ್ರೀ
ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೂ ಚುನಾವಣೆಗೂ ಸಂಬಂಧವಿಲ್ಲ. ಚುನಾವಣೆಗಾಗಿ ನಾವು ಮಾಡೋದಿದ್ರೆ ನಾವು ಯಾವಾಗಲೋ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸುತ್ತಿದ್ದೆವು. ರಾಜ್ಯದಲ್ಲಿ ಅದಕ್ಕೆ ಮಾನ್ಯತೆ ಕೊಟ್ಟು ಬಳಿಕ ನಾವು ಕೇಂದ್ರಕ್ಕೆ ಶಿಫಾರಸ್ಸು ಕಳಿಸಿದ್ದೇವೆ. ಆರಂಭದಲ್ಲಿ ಬಹಳ ಜನ ಎಂಬಿ ಪಾಟೀಲರು ಚುನಾವಣೆಗಾಗಿ ಪ್ರತ್ಯೇಕತೆ ಕೂಗು ಎತ್ತಿದ್ದಾರೆಂದು ಮಾತನಾಡಿದ್ರು. ಆದ್ರೆ ಅದಕ್ಕೆ ನಾವು ಬದ್ಧತೆಯಿಂದ ರಾಜ್ಯದಲ್ಲಿ ಮಾನ್ಯತೆ ನೀಡಿ ಕೇಂದ್ರಕ್ಕೆ ಶಿಫಾರಸ್ಸು ಕಳಿಸಿದ್ದೆವೆ. ಇದ್ರಲ್ಲಿ ರಾಜಕೀಯ ಮಾಡುವುದು ಬೇಡ. ನಾವು ಯಡಿಯೂರಪ್ಪ, ಅನಂತಕುಮಾರ್, ಸದಾನಂದಗೌಡ ಅವರಿಗೆ ತಲೆ ಬಾಗಿಸುತ್ತೆವೆ.ವಿನಂಮ್ರತೆಯಿಂದ ಮುನ್ನಡೆಯಬೇಕಿದೆ ಅಂದ್ರು. ಇದನ್ನೂ ಓದಿ: ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ – ಕೇಂದ್ರಕ್ಕೆ ಶೀಘ್ರವೇ ಸಿದ್ದು ಸರ್ಕಾರದಿಂದ ಶಿಫಾರಸ್ಸು
ರಂಭಾಪುರಿ ಶ್ರೀಗಳೂ ನಮ್ಮ ಗುರುಗಳು. ಅವರು ನಮ್ಮ ಬಸವ ತತ್ವಕ್ಕೆ ಒಪ್ಪಿಕೊಳ್ಳುವುದಿಲ್ಲ. ಅವ್ರಿಗೆ ಅವರದ್ದೇ ಆದ ತಾತ್ವಿಕ ಅಭಿಪ್ರಾಯ ಇದೆ. ಹೀಗಾಗಿ ಶೀಘ್ರದಲ್ಲೇ ರಂಭಾಪುರಿ ಶ್ರೀಗಳನ್ನು ಭೇಟಿ ಮಾಡಿ ಅವರ ಮನವೊಲಿಸುತ್ತೆವೆ ಅಂತ ತಿಳಿಸಿದ್ರು. ಇದನ್ನೂ ಓದಿ: ಲಿಂಗಾಯತ, ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನ ಸಿಕ್ಕಿದ್ರೆ ಯಾವ ಸೌಲಭ್ಯ ಸಿಗುತ್ತೆ?
ಈಗ ಜಾಗತಿಕ ಧರ್ಮ ಆಗಲು ಕಾಲ ಪಕ್ವವಾಗಿದೆ. ಜಯದ ಜೊತೆಗೆ ನಾವು ವಿನಂಮ್ರವಾಗಿ ಎಲ್ಲರನ್ನು ಕೂಡಿಸಿಕೊಂಡು ಬಸವ ಧರ್ಮಗಾಗಿ ಒಟ್ಟಾಗಲಿದ್ದೆವೆ. ನಮಗೆ ಬೈದವ್ರನ್ನು ಸೇರಿಸಿಕೊಂಡು ಒಟ್ಟಾಗಿ ಹೋಗುತ್ತೇವೆ. ಈಶ್ವರ ಖಂಡ್ರೆ, ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ಹೀಗೆ ಎಲ್ಲರನ್ನು ಸೇರಿಸಿಕೊಂಡು ಧರ್ಮ ಸ್ಥಾಪನೆಗೆ ಮುನ್ನಡೆಯಲಿದ್ದೇವೆ ಎಂದರು.
A historic moment. Victory for Basava Revolution after 900 Years. Victory for equality, progressive society and a casteless society. Victory for the those who profess gender equality.
ಬೆಂಗಳೂರು: ರಾಜ್ಯದ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೊನೆಗೂ ಸಿದ್ದರಾಮುಯ್ಯ ನೇತೃತ್ವದ ರಾಜ್ಯಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಭೆ ನಡೆದಿದ್ದು, ಈ ವೇಳೆ ಸಮಿತಿಯ ಸದಸ್ಯರ ಅಭಿಪ್ರಾಯದಂತೆ ಲಿಂಗಾಯಿತ ಮತ್ತು ವೀರಶೈವರಾಗಿದ್ದು ಬಸವ ತತ್ವವವನ್ನು ಅನುಸರಿಸುತ್ತಿರುವ ಮಂದಿಗೆ ಪ್ರತ್ಯೇಕ ಧರ್ಮದ ಕುರಿತು ಕೇಂದ್ರ ಸರ್ಕಾರಕ್ಕೆ ಶೀಘ್ರವೇ ಶಿಫಾರಸ್ಸು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್, ಇಂದು ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಮಿತಿ ನೀಡಿದ್ದ ವರದಿ ಬಗ್ಗೆ ಚರ್ಚೆ ಆಗಿದೆ. ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ನ್ಯಾ. ನಾಗಮೋಹನ ದಾಸ್ ಸಮಿತಿ ವರದಿಯನ್ವಯ ಪ್ರತ್ಯೇಕ ವೀರಶೈವ ಲಿಂಗಾಯಿತ ಸ್ವತಂತ್ರ ಧರ್ಮದ ಮಾನ್ಯತೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಅಂದ್ರು.
ಇದೀಗ ಸರ್ಕಾರ ಎಲೆಕ್ಷನ್ ಹೊತ್ತಲ್ಲಿ ಲಿಂಗಾಯತರು- ವೀರಶೈವರನ್ನು ಓಲೈಸಲು ಯತ್ನ ಮಾಡುತ್ತಿದ್ದೆಯಾ ಎಂಬ ಪ್ರಶ್ನೆ ಎದ್ದಿದೆ. ಶತಶತಮಾನಗಳಿಂದ ಹಿಂದೂ ಧರ್ಮದ ಭಾಗವಾಗಿದ್ದ ವೀರಶೈವ-ಲಿಂಗಾಯತರನ್ನು ಇದೀಗ ಸರ್ಕಾರ `ಅಲ್ಪಸಂಖ್ಯಾತರು’ ಎಂದು ಪರಿಗಣಿಸಲು ಮುಂದಾಗಿರುವುದು ಬಹುಸಂಖ್ಯಾತ ಹಿಂದೂ ಧರ್ಮೀಯರ ಆಕ್ರೋಶಕ್ಕೆ ತುತ್ತಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.
ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿಯ ಹಿರೇಮಠದ ಶಿವಪ್ರಕಾಶ ಸ್ವಾಮೀಜಿ ಒಬ್ಬ ತಲೆಕೆಟ್ಟವ. ಇದೊಂದು ಹತಾಶೆಯ ಮಾತು. ಇನ್ನೊಮ್ಮೆ ಈ ತರಹ ಹೇಳಿಕೆ ನೀಡಿದ್ರೆ ಉಗ್ರವಾದ ಕ್ರಮ ಕೈಕೊಳ್ತೇನೆ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಮಹತ್ವಾಕಾಂಕ್ಷಿ ಮುಳವಾಡ ಏತ ನೀರಾವರಿ ಹಂತ 3 ಲಿಫ್ಟ್‍ಗೆ ಮುಳವಾಡದಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, ಸ್ವಾಮೀಜಿ ಹೇಳಿಕೆಗೆ ತಿರುಗೇಟು ನೀಡಿದ್ರು. ಸ್ವಾಮಿಜಿ ಚಿಲ್ಲರೆ ಕೆಲಸ ಬಿಡಬೇಕು. ಇಲ್ಲದಿದ್ದರೆ ಎಂ.ಬಿ. ಪಾಟೀಲ್ ಯಾರು ಅಂತಾ ತೋರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ರು.
ಇತ್ತೀಚೆಗೆ ಕಾರ್ಯಕ್ರವೊಂದರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಕೇಳುವವರು ಮನೆಯಲ್ಲಿ ದೇವರ ಜಗಲಿ ತಗೆಯಲಿ. ಹೆಣ್ಣು ಮಕ್ಕಳು ಕೊರಳಲ್ಲಿನ ತಾಳಿ ತೆಗೆಯಲಿ ಎಂದು ಶಿವಪ್ರಕಾಶ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದೇ ವೇಳೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಚೋದನಕಾರಿ ಶಬ್ದ ಪ್ರಯೋಗ ಕೆಳಮಟ್ಟದ ಭಾಷೆ. ಜನಪ್ರತಿನಿಧಿಗಳಾದವರು ಸಮಾಜಕ್ಕೆ ಮಾದರಿ ಆಗಿರಬೇಕು ಎಂದು ಹೆಗಡೆಗೆ ಸಲಹೆ ನೀಡಿದರು. ಅಲ್ಲದೆ ಕೀಳು ಮಟ್ಟದ ಮಾತನ್ನಾಡುವ ಇಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಮಹದಾಯಿ ನೀರಾವರಿ ಯೋಜನೆಯ ಬಗ್ಗೆ ಯಡಿಯೂರಪ್ಪಗೆ ಕನಿಷ್ಟ ಪರಿಜ್ಞಾನ ಇಲ್ಲ. ಮಹದಾಯಿ ನೀರು ಹರಿಸಲು ಕನಿಷ್ಟ ಎರಡು ವರ್ಷ ಬೇಕು. ಡ್ಯಾಂ ಆಗಿಲ್ಲ, ನೀರು ಪಡೆಯಲು ಡ್ಯಾಂ ಇಲ್ಲದೆ ನೀರು ಹರಿಸಲು ಆಗಲ್ಲ. ಸುಮ್ಮನೆ ಈಗಲೇ ನೀರು ಹರಿಸುತ್ತೇವೆ ಎಂದು ಯಡ್ಡಿಯೂರಪ್ಪ ಬಾಯಿಗೆ ಬಂದದ್ದು ಮಾತನಾಡುತ್ತಿದ್ದಾರೆಂದು ಹರಿಹಾಯ್ದರು.
ಸರ್ಕಾರದಲ್ಲಿ ನಮ್ಮ ಶಾಸಕರು ಇಲ್ಲದ ಕಡೆ ಸಿಎಂ ಹೋಗುತ್ತಿದ್ದಾರೆ. ಪರಮೇಶ್ವರ್ ಅವರು ಶಾಸಕರು ಇದ್ದ ಕಡೆ ಪ್ರವಾಸ ಮಾಡುತ್ತಿದ್ದಾರೆ. ಅದಕ್ಕೆ ಸಿಎಂ ಹಾಗೂ ಪರಮೇಶ್ವರ ಬೇರೆ ಬೇರೆ ಪ್ರವಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ನಾವು ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ನಮ್ಮಲ್ಲಿ ಬಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ರು.
ವಿಜಯಪುರ: ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಸುಮ್ ಸುಮ್ನೆ ಸಮಸ್ಯೆಗಳನ್ನು ಸೃಷ್ಟಿ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಾಪ್ ಸಿಂಹ ಅವರ ನಡವಳಿಕೆ ಬಿಜೆಪಿಗೆ ಹೊಡೆತ ಕೊಡಲಿದೆ ಅಂತ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರ ಮಾತಿನಲ್ಲಿ ಹಿಡಿತ ಇಲ್ಲ. ಕಿತ್ತೂರಾಣಿ ಚೆನ್ನಮ್ಮ, ಒನಕೆ ಓಬವ್ವರಂತಹ ಸ್ವತಂತ್ರ ಹೋರಾಟಗಾರರ ಬಗ್ಗೆ ಮಾತನಾಡಿದ್ದರು. ಪ್ರತಾಪ್ ಸಿಂಹನೇ ಗಲಭೆಗಳನ್ನು ಎಬ್ಬಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ಸಂಸದರ ಉದ್ದೇಶ ಸರಿಯಿಲ್ಲ ಅಂತ ಹೇಳಿದ್ರು.
ಗುಜರಾತ್‍ನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ. ಮೋದಿ ಜಾಥಾನೂ ನೋಡಿದ್ದೀರಿ. ಇತ್ತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ನಮ್ಮ ಹಾರ್ದಿಕ್ ಪಟೇಲ್ ಜಾಥಾವನ್ನು ಕೂಡ ನೋಡಿದ್ದೀರಿ. ಪ್ಲಸ್ 4%ರಷ್ಟು ಅಥವಾ ಮೈನಸ್ 4%ರಷ್ಟು ಆದರೆ ಒಂದು ಸರಕಾರ ಬದಲಾಗುತ್ತೆ. ಯಾವೊಂದು ಮಾಧ್ಯಮ ಇದನ್ನ ಹೇಳುತ್ತಿಲ್ಲ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಪಟೇಲರು, ಉದ್ಯಮಿಗಳು ಎಲ್ಲರು ಒಂದು ಕಡೆ ಇದ್ದಾಗ ಅದು ಹೇಗೆ ಮೋದಿ ಗೆಲ್ಲುತ್ತಾರೆ ಎಂದು ಪ್ರಶ್ನಿಸಿದರು.
4 ವರ್ಷದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನನ್ನಂತೆ ಸಿದ್ಧರಾಮಯ್ಯ ಕೆಲಸ ಮಾಡಿದ್ದಾರೆಂದು ಮಾಜಿ ಪ್ರಧಾನಿ ದೇವೇಗೌಡರೇ ಹೊಗಳಿದ್ದಾರೆ. ಆದ್ರೆ ಕುಮಾರಸ್ವಾಮಿ ಇದನ್ನ ಸರಕಾರಕ್ಕೆ ದೇವೇಗೌಡರು ಟಾಂಗ್ ಕೊಟ್ಟಿದ್ದಾರೆ ಎಂದಿದ್ದಾರೆ. ದೇವೇಗೌಡರ ಹೇಳಿಕೆ ಸಿದ್ಧರಾಮಯ್ಯಗೆ ಟಾಂಗ್ ನೀಡಿದ್ದರೆ, ಅದು ಅವರಿಗೂ ಅನ್ವಯಿಸುತ್ತೆ ಎಂದು ಎಚ್‍ಡಿಕೆಗೆ ಪಾಟೀಲ್ ಟಾಂಗ್ ನೀಡಿದರು.