Tag: Mayuri Khyatri

  • ಮಾರ್ಚ್ 15ರ ನಂತ್ರ ಜೀವನವೇ ಬದಲಾಯ್ತು: ನಟಿ ಮಯೂರಿ

    ಮಾರ್ಚ್ 15ರ ನಂತ್ರ ಜೀವನವೇ ಬದಲಾಯ್ತು: ನಟಿ ಮಯೂರಿ

    ಬೆಂಗಳೂರು: ನಟಿ ಮಯೂರಿ ಕ್ಯಾತರಿ ಮಗುವಿನ ಫೋಟೋಗಳನ್ನು ಹಂಚಿಕೊಂಡು, ಆತನ ಹೆಸರನ್ನ ರಿವೀಲ್ ಗೊಳಿಸಿದ್ದಾರೆ. ಮಗನಿಗೆ ಆರವ್ ಎಂದು ಹೆಸರಿಟ್ಟಿದ್ದು, ಬಣ್ಣ ಬಣ್ಣದ ಬಟ್ಟೆ ತೊಡಿಸಿ ಫೋಟೋಶೂಟ್ ಮಾಡಿಸಿದ್ದಾರೆ.

    ಮಗ ಆರವ್ 15 ದಿನವನಿದ್ದಾಗ ಮಾಡಿಸಿದ ಫೋಟೋಶೂಟ್ ಇದಾಗಿದೆ. ಈತ ಬಂದ ಮೇಲೆ ನಮ್ಮ ಜೀವನವೇ ಸಂಪೂರ್ಣ ಬದಲಾಗಿದೆ. ಮಗ ಆರವ್ ಜೊತೆ ಮಯೂರಿ ಮತ್ತು ಅರುಣ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    2020 ಜೂನ್ 12 ರಂದು ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆಗೆ ಮಯೂರಿ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದರು. ನಂತರ ತಾಯಿ ಆಗುತ್ತಿರುವ ವಿಚಾರ, ಸಿಮಂತ ಫೋಟೋಗಳು ಹಾಗೂ ಬೇಬಿ ಬಂಪ್ ಫೋಟೋಗಳನ್ನು ಮಯೂರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮಗ ಹುಟ್ಟಿದ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

    ನನಗೆ ಗಂಡು ಮಗುವಾಗಿದೆ. ಮದುವೆ ನಂತರ ಮತ್ತೊಂದು ಬ್ಯೂಟಿಫುಲ್ ಜರ್ನಿ ಶುರು ಮಾಡುತ್ತಿದ್ದೇನೆ. ಈ ಸುಂದರ ಭಾವನೆಯನ್ನು ವ್ಯಕ್ತಪಡಿಸಲು ಪದಗಳೆ ಸಿಗುತ್ತಿಲ್ಲ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ನಮ್ಮ ಮಗುವಿನ ಮೇಲೆ ಇರಲಿ ಎಂದು ಬರೆದುಕೊಂಡು ಮಗನ ಕೈ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದರು.

  • ಮಯೂರಿ ಅಭಿನಯದ ಆದ್ಯಂತ ರೋಚಕ ಟೀಸರ್ ಸದ್ಯದಲ್ಲೇ ರಿಲೀಸ್

    ಮಯೂರಿ ಅಭಿನಯದ ಆದ್ಯಂತ ರೋಚಕ ಟೀಸರ್ ಸದ್ಯದಲ್ಲೇ ರಿಲೀಸ್

    ವ ನಟ ದಿಲೀಪ್, ಮಯೂರಿ ಖ್ಯಾತ್ರಿ ನಟನೆಯ ಆದ್ಯಂತ ಚಿತ್ರ ಬಿಡುಗಡೆಯ ಬಾಗಿಲಿಗೆ ಬಂದು ನಿಂತಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕ ಮೆಚ್ಚುಗೆ ಪಡೆದುಕೊಂಡಿದ್ದ ಆದ್ಯಂತ ಚಿತ್ರ ಒಂದು ಮಿಲಿಯನ್ ವೀಕ್ಷಣೆ ಪಡೆದುಕೊಂಡು ಭರವಸೆ ಮೂಡಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬಿಡುಗಡೆ ಹೊಸ್ತಿಲಲ್ಲಿರೋ ಚಿತ್ರತಂಡ ಕುತೂಹಲಕಾರಿ ಟೀಸರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಇದೇ ತಿಂಗಳು ಟೀಸರ್ ಪ್ರೇಕ್ಷಕರ ಮುಂದೆ ಬರಲಿದೆ.

    ಪುನೀತ್ ಶರ್ಮಾ ಚಿತ್ರದ ಸೂತ್ರದಾರ. ಹಲವು ಸಿನಿಮಾಗಳಲ್ಲಿ ದುಡಿದ ಅನುಭವವನ್ನು ತಮ್ಮ ಮೊದಲ ಚಿತ್ರದ ಮೂಲಕ ಹೊರತರಲು ಸಿದ್ಧವಾಗಿರೋ ಪುನೀತ್ ಶರ್ಮಾ ಕಥೆ ಬರೆದು ತಾವೇ ನಿರ್ದೇಶನ ಮಾಡಿದ್ದಾರೆ. ಆದ್ಯಂತ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವಾಗಿದ್ದು, ಹಲವು ಟ್ವಿಸ್ಟ್ ಟರ್ನ್ ಗಳು ಚಿತ್ರದಲ್ಲಿದ್ದು ಸಿನಿರಸಿಕರಿಗೆ ಫುಲ್ ಮನೋರಂಜನೆ ನೀಡೋದರ ಜೊತೆ ರೋಚಕ ಅನುಭವ ನೀಡೋದು ಪಕ್ಕಾ ಅಂತಿದೆ ಚಿತ್ರತಂಡ. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

    ಲೇಖನಾ ಕ್ರಿಯೇಷನ್ಸ್ ಹಾಗೂ ಆರ್.ಆರ್ ಮೂವೀಸ್ ಬ್ಯಾನರ್ ನಡಿ ರಮೇಶ್ ಬಾಬು ಆದ್ಯಂತ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬೆಂಗಳೂರು, ಸಕಲೇಶಪುರ ಮತ್ತು ಕಳಸಾ ಸುತ್ತಾಮುತ್ತ ಸುಂದರ ಲೊಕೇಷನ್ ಗಳಲ್ಲಿ ಚಿತ್ರವನ್ನು ಸೆರೆಹಿಡಿಯಲಾಗಿದ್ದು, ನವೀನ್ ಕುಮಾರ್ ಚೆಲ್ಲಾ ಸಿನಿಮಾಟೋಗ್ರಫಿ, ಕಿಲ್ಲಿಂಗ್ ವೀರಪ್ಪನ್ ಖ್ಯಾತಿಯ ಸಂಗೀತ ನಿರ್ದೇಶಕ ಸ್ಯಾಂಡಿ ಅಡ್ಹಂಕೀ ಮ್ಯೂಸಿಕ್ ಮ್ಯಾಜಿಕ್ ಆದ್ಯಂತ ಚಿತ್ರಕ್ಕಿದೆ. ರಮೇಶ್ ಭಟ್, ಶ್ರೀನಿವಾಸ್, ವಸಿಷ್ಠ, ಪ್ರಶಾಂತ್ ನಟನಾ, ನಿಖಿಲ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಸಾಕಷ್ಟು ಕುತೂಹಲ ಕ್ರಿಯೇಟ್ ಮಾಡಿರೋ ಈ ಚಿತ್ರದ ಟೀಸರ್ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.