Tag: mayor election

  • ಪಕ್ಷೇತರ ಅಭ್ಯರ್ಥಿಗೆ ಉಪಮೇಯರ್ ಸ್ಥಾನ- ಶೆಟ್ಟರ್ ಘೋಷಣೆ

    ಪಕ್ಷೇತರ ಅಭ್ಯರ್ಥಿಗೆ ಉಪಮೇಯರ್ ಸ್ಥಾನ- ಶೆಟ್ಟರ್ ಘೋಷಣೆ

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಬಿಜೆಪಿಗೆ ಒಲಿಯುತ್ತಿದ್ದು, ಉಪಮೇಯರ್ ಸ್ಥಾನವನ್ನು ಪಕ್ಷೇತರ ಅಭ್ಯರ್ಥಿಗೆ ನೀಡುವುದಾಗಿ ಮಾಜಿ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.

    ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 39 ಸ್ಥಾನಗಳನ್ನು ಗಳಿಸಿ ಮೇಯರ್ ಸ್ಥಾನದ ಗದ್ದುಗೆ ಎರುವಲ್ಲಿ ಯಶ್ವಸಿಯಾಗುತ್ತು. ಆದರೆ ಉಪಮೇಯರ್ ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗುತ್ತಿದೆ. ಬಿಜೆಪಿಯಿಂದ ಗೆಲುವು ಸಾಧಿಸಿದ ಸದಸ್ಯರ ಪೈಕಿ ಯಾರೂ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯರು ಇಲ್ಲದ ಪರಿಣಾಮ ಪಕ್ಷೇತರ ಅಭ್ಯರ್ಥಿಯನ್ನು ಉಪಮೇಯರ್ ಮಾಡುವುದಾಗಿ ಜಗದೀಶ್ ಶೆಟ್ಟರ್ ಘೋಷಿಸಿದ್ದಾರೆ.

    ಚುನಾವಣೆ ವೇಳೆ ಬಿಜೆಪಿ ಟಿಕೆಟ್ ಆಕ್ಷಾಂಕಿಯಾಗಿದ್ದರು. ಆದರೆ ಪಕ್ಷದ ಟಿಕೆಟ್ ಸಿಗದ ಪರಿಣಾಮ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದ 69ನೇ ವಾರ್ಡ್ ನ ದುರ್ಗಮ್ಮ ಬಿಜವಾಡ್ ಗೆ ಒಲಿದ ಅದೃಷ್ಟ ಒಲಿದಿದೆ. ಬಿಜೆಪಿ ನಾಯಕರ ಜೊತೆಗಿನ ಮಾತುಕತೆ ಸಕ್ಸಸ್ ಆಗಿದೆ. ಇದನ್ನೂ ಓದಿ: ಭೂಪೇಂದ್ರ ಪಟೇಲ್ ಯಾರು? ಹಿನ್ನೆಲೆ ಏನು?

    ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪರಿಣಾಮ ದುರ್ಗಮ್ಮ ಬಿಜವಾಡರ ಪತಿ ಶಶಿಕಾಂತರನ್ನ ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿ ಹೊರಡಿಸಿದ್ದ ಆದೇಶವನ್ನು ಸಹ ಹಿಂಪಡೆಯುವುದಾಗಿ ಘೋಷಿಸಲಾಗಿದೆ. ಪರಿಣಾಮ ದುರ್ಗಮ್ಮ ಬಿಜವಾಡರ ಪತಿ ಶಶಿಕಾಂತ ಬಿಜವಾಡ ಮರಳಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇನ್ನೆರಡೂ ದಿನದಲ್ಲಿ ಪಕ್ಷೇತರ ಅಭ್ಯರ್ಥಿ ದುರ್ಗಮ್ಮ ಬಿಜವಾಡ್ ಸಹ ಬಿಜೆಪಿ ಸೇರ್ಪಡೆಯಾಗಲಿದ್ದು, ಇವರನ್ನು ಬಿಜೆಪಿ ನಾಯಕರು ಪಕ್ಷದ ಪರವಾಗಿ ಉಪಮೇಯರ್ ಮಾಡಲಿದ್ದಾರೆ.

    ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಜಗದೀಶ್ ಶೆಟ್ಟರ್, ಟಿಕೆಟ್ ಹಂಚಿಕೆಯಲ್ಲಿ ಕೆಲ ಗೊಂದಲ ಉಂಟಾಗಿತ್ತು. ಈಗ ಪಕ್ಷೇತರರು ಸಹ ನಮ್ಮ ಪರವಾಗಿದ್ದಾರೆ. 69ನೇ ವಾರ್ಡ್ ನ ಶಶಿ ಬಿಜವಾಡ ಅವರ ಪತ್ನಿಯನ್ನು ನಾವು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬೆಳಗಾವಿ ಪಾಲಿಕೆಯಲ್ಲೂ ಬಿಜೆಪಿ ಅಧಿಕಾರ ವಹಿಸಿಕೊಳ್ಳಲಿದೆ. ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಬೆಂಬಲಕ್ಕಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲಿಯೂ ಮೇಯರ್, ಉಪ ಮೇಯರ್ ನಾವೇ ಆಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಕಲಬುರಗಿ ಮೇಯರ್ ಚುನಾವಣೆ- ಮುಂದಿನ ವಾರ ಅಧಿಸೂಚನೆ

    ಕಲಬುರಗಿ ಮೇಯರ್ ಚುನಾವಣೆ- ಮುಂದಿನ ವಾರ ಅಧಿಸೂಚನೆ

    ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿದ್ದು, ಮುಂದಿನ ವಾರ ಮೇಯರ್ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ.

    ಒಟ್ಟು 55 ಸ್ಥಾನಗಳ ಬಲದ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ಉಂಟಾಗಿದ್ದು, ಮೇಯರ್ ಯಾರು ಎಂಬುದು ಕಗ್ಗಾಂಟಾಗಿದೆ. ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ಮೇಯರ್ ಸ್ಥಾನಕ್ಕಾಗಿ ಪೈಪೋಟಿ ನಡೆಸಿ, ಸಮಾನಂತರ ಹೋರಾಟ ನಡೆಸಿವೆ. ಈ ಚುನಾವಣೆಯಲ್ಲಿ 27 ಸ್ಥಾನಗಳನ್ನು ಗಳಿಸಿ ಅತಿ ದೊಡ್ಡ ಪಕ್ಷವಾಗಿ ಮಹಾನಗರ ಪಾಲಿಕೆಯಲ್ಲಿ ಹೊರಹೊಮ್ಮಿದ ಕಾಂಗ್ರೆಸ್ ತನ್ನ ಪಕ್ಷದ ಅತಿರಥ ನಾಯಕರಿಂದ ಜೆಡಿಎಸ್ ಬೆಂಬಲಕ್ಕೆ ಪ್ರಯತ್ನಿಸುತ್ತಿದೆ. ಇದನ್ನೂ ಓದಿ: ಸಿಎಂ, ಖರ್ಗೆ ಮೈತ್ರಿಗಾಗಿ ಕೇಳಿದ್ದಾರೆ, ಗೆದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನಿಸುತ್ತೇವೆ: ಎಚ್‍ಡಿಡಿ

    ಇತ್ತ ಯಾವುದೇ ಸ್ಥಳೀಯ ಚುನಾವಣೆಗಳಿರಲಿ ತಂತ್ರಗಾರಿಕೆಯಿಂದ ಅಧಿಕಾರ ಗಿಟ್ಟಿಸಿಕೊಳ್ಳುವ ಬಿಜೆಪಿ, ಕಲಬುರಗಿ ಮೇಯರ್ ಸ್ಥಾನ ಬಿಟ್ಟುಕೊಡಲು ಸಿದ್ಧವಿಲ್ಲ. ಶತಾಯಗತಾಯ ಈ ಸ್ಥಾನ ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸುತ್ತಿದೆ.

    ಈಗಾಗಲೇ ತಮ್ಮ ಪಕ್ಷದಿಂದ ಆಯ್ಕೆಯಾದ ಸದಸ್ಯರು ಯಾರಿಗೆ ಬೆಂಬಲ ಕೊಡಬೇಕೆಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಯಾವ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕೇಂಬುದನ್ನು ನಿರ್ಧರಿಸಲು ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಅಧಿಕಾರ ನೀಡಲಾಗಿದೆ.

    ಜೆಡಿಎಸ್ ನ ನಾಲ್ವರು ಸದಸ್ಯರು, ಸ್ಥಳೀಯ ಜೆಡಿಎಸ್ ಮುಖಂಡರು ರೆಸಾರ್ಟ್ ನಲ್ಲಿ ಉಳಿದಿದ್ದು, ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲದೆ ನಾಲ್ವರು ಸದಸ್ಯರು ಇಂದು ಬಿಡದಿ ಬಳಿಯ ಕುಮಾರಸ್ವಾಮಿಯವರ ನಿವಾಸದಲ್ಲಿ ಗಣೇಶ ಹಬ್ಬದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಉಸ್ತಾದ ನಾಸೀರ ಹುಸೇನ್, ಈಗಾಗಲೇ ನಮ್ಮ ನಿರ್ಧಾರ ಪ್ರಕಟಿಸಿ ಆಗಿದೆ. ಯಾರು ನಮ್ಮ ಬೇಡಿಕೆಗೆ ಒಪ್ಪುತ್ತಾರೋ ಅವರನ್ನೊಳಗೊಂಡ ಪಕ್ಷ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಲಿದೆ. ನಮ್ಮ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿಯವರು ಈ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ. ಅವರ ನಿರ್ಧಾರದ ನಂತರವೇ ಸದಸ್ಯರೊಂದಿಗೆ ಕಲಬುರಗಿಗೆ ಪ್ರಯಾಣ ಬೆಳೆಸುವುದಾಗಿ ನುಡಿದರು.

  • ಸಿಎಂ, ಖರ್ಗೆ ಮೈತ್ರಿಗಾಗಿ ಕೇಳಿದ್ದಾರೆ, ಗೆದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನಿಸುತ್ತೇವೆ: ಎಚ್‍ಡಿಡಿ

    ಸಿಎಂ, ಖರ್ಗೆ ಮೈತ್ರಿಗಾಗಿ ಕೇಳಿದ್ದಾರೆ, ಗೆದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನಿಸುತ್ತೇವೆ: ಎಚ್‍ಡಿಡಿ

    – ಕಲಬುರಗಿ ಮೇಯರ್ ಚುನಾವಣೆ ವಿಚಾರ ಬಗ್ಗೆ ಎಚ್‍ಡಿಕೆ ತೀರ್ಮಾನಿಸುತ್ತಾರೆ

    ಹಾಸನ: ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.

    ಜಿಲ್ಲೆಯ ಉಡುವಾರೆ ಗ್ರಾಮದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ಕಲಬುರಗಿ ಪಾಲಿಕೆ ಮೇಯರ್ ಚುನಾವಣೆ ವಿಚಾರದಲ್ಲಿ ಕುಮಾರಸ್ವಾಮಿ ಅವರು ಸನ್ನಿವೇಶ ನೋಡಿಕೊಂಡು ತೀರ್ಮಾನ ಮಾಡುತ್ತಾರೆ. ಇನ್ನೂ ಎಲೆಕ್ಷನ್ ನೋಟಿಫಿಕೇಷನ್ ಆಗಿಲ್ಲ. ಕಾಂಗ್ರೆಸ್ ಗೆ ಅಧಿಕಾರ ನೀಡುವಂತೆ ಖರ್ಗೆಯವರು ಮಾತಾಡಿದ್ದು ನಿಜ. ಸಿಎಂ ಬೊಮ್ಮಾಯಿಯವರೂ ಕುಮಾರಸ್ವಾಮಿಯವರ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ಅಲ್ಲಿಯ ಮುಖಂಡರು, ಗೆದ್ದಿರುವ ಸದಸ್ಯರು ತೀರ್ಮಾನ ಮಾಡುತ್ತಾರೆ ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

    ಜೆಡಿಎಸ್ ಜೊತೆಗೆ ಒಟ್ಟಿಗೆ ಹೋಗೋಣ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಹೇಳುತ್ತಾರೆ ಅದು ಬೇರೆ ವಿಚಾರ. ಖರ್ಗೆಯವರು ನಮಗೆ ಹೇಳಿಲ್ವೇ? ನಾವು ಗೆದ್ದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನಿಸಬೇಕು. ಇಬ್ಬರು ಮುಸ್ಲಿಮರು ಗೆದ್ದಿದ್ದಾರೆ. ಒಂದು ಶೆಡ್ಯೂಲ್ ಕಾಸ್ಟ್, ಒಬ್ಬರು ರೆಡ್ಡಿ ಸಮುದಾಯದವರು ಗೆದ್ದಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಮ್ಮ ಮನಸ್ಸೋ ಇಚ್ಛೆ ತೀರ್ಮಾನ ಮಾಡೋದು ಸರಿಯಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.

  • ಇತಿಹಾಸದಲ್ಲೇ ಮೊದಲು -ಮೈಸೂರು ಪಾಲಿಕೆಯಲ್ಲಿ ಬಿಜೆಪಿಗೆ ಮೇಯರ್ ಪಟ್ಟ

    ಇತಿಹಾಸದಲ್ಲೇ ಮೊದಲು -ಮೈಸೂರು ಪಾಲಿಕೆಯಲ್ಲಿ ಬಿಜೆಪಿಗೆ ಮೇಯರ್ ಪಟ್ಟ

    ಮೈಸೂರು: ಮೈಸೂರು ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಮೇಯರ್ ಪಟ್ಟ ದೊರೆತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಳಜಗಳದಲ್ಲಿ ಬಿಜೆಪಿಗೆ ಲಾಭವಾಗಿದ್ದು, ಇದೀಗ ಬಿಜೆಪಿಯ ಸುನಂದ್ರಾ ಪಾಲನೇತ್ರಾ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

    ಸುನಂದಾ ಅವರು ಯಡಿಯೂರಪ್ಪ ಅವರ ಸಂಬಂಧಿಯಾಗಿದ್ದಾರೆ. ಕಳೆದ ಬಾರಿ ಸುನಂದಾ ಪಾಲನೇತ್ರಾಗೆ ಮೇಯರ್ ಗಾದಿ ನೀಡುವುದಾಗಿ ಬಿಎಸ್‍ವೈ ಭರವಸೆ ನೀಡಿದ್ದರು. ಅಂತೆಯೇ ಇದೀಗ ಸುನಂದಾ ಅವರು ಇಂದು ಮೇಯರ್ ಸ್ಥಾನವನ್ನು ಅಲಂಕರಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಎಚ್ಚರಿಕೆಯನ್ನೇ ಧಿಕ್ಕರಿಸಿ ಬಿಜೆಪಿಯಿಂದ ಮಂಡ್ಯದಲ್ಲಿ ಬೃಹತ್ ರ‍್ಯಾಲಿ!

    ಮೇಯರ್ ಚುನಾವಣೆಗೆ ಮೂರು ಪಕ್ಷಗಳಿಂದಲೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಮೇಯರ್ ಅಭ್ಯರ್ಥಿ ಸುನಂದಾ ಪಾಲನೇತ್ರ, ಜೆಡಿಎಸ್ ಮೇಯರ್ ಅಭ್ಯರ್ಥಿ ಅಶ್ವಿನಿ ಅನಂತ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಎಂ. ಶಾಂತಕುಮಾರಿ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಕೊಡದೆ ಕಾಂಗ್ರೆಸ್ ಬಹಿಷ್ಕಾರ ಹಾಕಿದೆ. ಈ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮೈಸೂರು ಪಾಲಿಕೆಯಲ್ಲಿ ಮುರಿದುಬಿದ್ದಿದೆ.

    ಹೀಗಾಗಿ ಬಿಜೆಪಿಗೆ ಕೊನೆಗೂ ಅದೃಷ್ಟ ಒಲಿದಿದೆ. ಮೈಸೂರು ಪಾಲಿಕೆಯ 23ನೇ ಅವಧಿಗೆ 35ನೇ ಮೇಯರ್ ಆಗಿ ಸುನಂದಾ ಪಾಲನೇತ್ರ ಆಯ್ಕೆಯಾಗಿದ್ದಾರೆ. ಸದ್ಯ ಬಿಜೆಪಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು, ಜೆಡಿಎಸ್ ಸದಸ್ಯರಿಂದ ಬಿಜೆಪಿ ನೂತನ ಮೇಯರ್ ಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

  • ಮತ್ತೆ ಮೈಸೂರು ಮೇಯರ್ ಎಲೆಕ್ಷನ್ ಫಿಕ್ಸ್- ಅವತ್ತು ಯಾಮಾರಿದ್ದ ಸಿದ್ದು, ಈ ಬಾರಿ ಪ್ರತಿಷ್ಠೆ ಉಳಿಸಿಕೊಳ್ತಾರಾ?

    ಮತ್ತೆ ಮೈಸೂರು ಮೇಯರ್ ಎಲೆಕ್ಷನ್ ಫಿಕ್ಸ್- ಅವತ್ತು ಯಾಮಾರಿದ್ದ ಸಿದ್ದು, ಈ ಬಾರಿ ಪ್ರತಿಷ್ಠೆ ಉಳಿಸಿಕೊಳ್ತಾರಾ?

    ಮೈಸೂರು: ಮಹಾನಗರಪಾಲಿಕೆ ಮೇಯರ್ ರುಕ್ಮಿಣಿ ಮಾದೇಗೌಡರ ಪಾಲಿಕೆ ಸದಸ್ಯತ್ವವನ್ನು ಹೈಕೋರ್ಟ್ ರದ್ದು ಮಾಡಿದ ಹಿನ್ನೆಲೆಯಲ್ಲಿ ಈಗ ಮತ್ತೆ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಚರ್ಚೆ ಮುನ್ನೆಲೆಗೆ ಬಂದಿದೆ.

    ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದ ಮೂರು ತಿಂಗಳ ಹಿಂದೆ ಮೈಸೂರು ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡ ಮಹಾನಗರ ಪಾಲಿಕೆಯ ಚುನಾವಣೆ ವೇಳೆ ಸೂಕ್ತ ಆದಾಯ ಪ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಅವರ ಪಾಲಿಕೆ ಸದಸ್ಯತ್ವ ರದ್ದು ಮಾಡಿದ್ದು, ಈಗ ಮೇಯರ್ ಸ್ಥಾನ ಕಳೆದುಕೊಳ್ಳುವಂತಾಗಿದೆ.

    ಹೈಕೋರ್ಟ್ ಆದೇಶ ಪ್ರಶ್ನಿಸಿ ರುಕ್ಮಿಣಿ ಮಾದೇಗೌಡ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕುವ ಸಾಧ್ಯತೆ ಇದ್ದರೂ, ಸುಪ್ರೀಂ ಕೋರ್ಟ್ ನಿಂದ ಹೈ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಸಿಗುವವರೆಗೂ ಮೇಯರ್ ಸ್ಥಾನ ಉಳಿಯುವ ಸಾಧ್ಯತೆ ಕಡಮೆ ಇದೆ. ಹೀಗಾಗಿ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ವಿಚಾರ ಗರಿಗೆದರಿದೆ.

    ಈ ಚುನಾವಣೆ ಕಳೆದ ಬಾರಿ ಇಡೀ ರಾಜ್ಯದ ಗಮನ ಸೆಳೆದಿತ್ತು. ಜೆಡಿಎಸ್ ಜೊತೆ ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ಅಕ್ಷರಶಃ ಒಡೆದ ಮನೆಯಾಗಿತ್ತು. ಕಾಂಗ್ರೆಸ್ ಗೆ ಮೇಯರ್ ಸ್ಥಾನ ಬೇಕೆಂದು ಪಟ್ಟು ಹಿಡಿದಿದ್ದ ಸಿದ್ದರಾಮಯ್ಯನವರಿಗೆ ಕೊನೆ ಕ್ಷಣದಲ್ಲಿ ನಡೆದ ಟ್ವಿಸ್ಟ್‍ನಲ್ಲಿ ಜೆಡಿಎಸ್ ಗೆ ಮೇಯರ್ ಸ್ಥಾನ ಸಿಕ್ಕ ಕಾರಣ ತೀವ್ರ ಅಸಮಾಧಾನಕ್ಕೆ ಒಳಗಾಗಿದ್ದರು. ಇದೀಗ ಮೂರೆ ತಿಂಗಳಲ್ಲಿ ಸದಸ್ಯತ್ವ ಕಳೆದುಕೊಂಡಿರುವ ರುಕ್ಮಿಣಿ ಮಾದೇಗೌಡಗೆ ಮೇಯರ್ ಸ್ಥಾನ ಕಳೆದುಕೊಳ್ಳುವ ಆತಂಕವಿದೆ.

    ರುಕ್ಮಿಣಿ ಮಾದೇಗೌಡ ಮೇಯರ್ ಸ್ಥಾನದಿಂದ ಕೆಳಗೆ ಇಳಿದ ಕೂಡಲೇ ಮತ್ತೆ ಚುನಾವಣೆ ನಡೆಸಬೇಕು. ಆಗ ಯಾರ ಜೊತೆ ಯಾರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುದು ಮುಖ್ಯ. ಕಾಂಗ್ರೆಸ್ ಈ ಬಾರಿ ಮೇಯರ್ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟು ಕೊಡುವ ಸಾಧ್ಯತೆ ಬಹಳ ಕಡಮೆ. ಹೀಗಾಗಿ ಜೆಡಿಎಸ್, ಬಿಜೆಪಿ ಜೊತೆ ಸಖ್ಯ ಬೆಳೆಸುತ್ತಾ ಎಂಬ ಚರ್ಚೆ ಶುರುವಾಗಿದೆ.

  • ಗೆಲ್ತಿವಿ ಅಂತಾ ನಾಮಪತ್ರ ಸಲ್ಲಿಸಿರಲಿಲ್ಲ, ಸುಮ್ನೆ ಸಲ್ಲಿಸಿದ್ವಿ, ನೋಡಿದ್ರೆ ಗೆದ್ದೆ ಬಿಟ್ವಿ – ಸಾರಾ ಮಹೇಶ್

    ಗೆಲ್ತಿವಿ ಅಂತಾ ನಾಮಪತ್ರ ಸಲ್ಲಿಸಿರಲಿಲ್ಲ, ಸುಮ್ನೆ ಸಲ್ಲಿಸಿದ್ವಿ, ನೋಡಿದ್ರೆ ಗೆದ್ದೆ ಬಿಟ್ವಿ – ಸಾರಾ ಮಹೇಶ್

    ಮೈಸೂರು: ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಜೆಡಿಎಸ್ ಗೆ ಸಿಕ್ಕಿದ್ದು ಬಯಸದೇ ಬಂದ ಭಾಗ್ಯ ಎಂದು ಖುದ್ದು ಮಾಜಿ ಸಚಿವ ಸಾರಾ ಮಹೇಶ್ ಒಪ್ಪಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಾ ಮಹೇಶ್, ಸುಮ್ನೆ ನಾಮಪತ್ರ ಸಲ್ಲಿಸಿ. ನೀವೇನೂ ಗೆಲ್ಲೋಕೆ ಆಗಲ್ಲ ಅಂತಾ ನಮ್ಮ ಮೇಯರ್ ಅಭ್ಯರ್ಥಿಗೆ ಹೇಳಿದ್ದೆವು. ನೋಡಿದ್ರೆ ಕಾಂಗ್ರೆಸ್‌ನವರು ಕ್ಷಣಾರ್ಧದಲ್ಲಿ ನಮ್ಮ ಅಭ್ಯರ್ಥಿ ಬೆಂಬಲಿಸಿ ಬಿಟ್ಟರು ಎಂದು ಪ್ರತಿಕ್ರಿಯಿಸಿದರು.

    ನಮಗೆ ಮೇಯರ್ ಸ್ಥಾನ ಸಿಗುತ್ತೆ ಅಂತಾ ನಾವು ಮಧ್ಯಾಹ್ನ 12 ಗಂಟೆಯವರೆಗೂ ಅಂದುಕೊಂಡಿರಲಿಲ್ಲ. ಬಿಜೆಪಿಗೆ ಮೇಯರ್ ಸ್ಥಾನ ಸಿಗಬಹುದು ಎಂದು ಊಹಿಸಿದ್ದೆವು. ನಮಗೆ 22 ಮತ ಬರಬಹುದು ಅಂದುಕೊಂಡಿದ್ದೆವು. ಅದರಲ್ಲೂ ಇಬ್ಬರು ನಮ್ಮ ಶಾಸಕರು ಗೈರಾದ ಮೇಲೆ ಆ ಮತ ಇನ್ನೂ ಕಡಿಮೆ ಆಗಲಿದೆ ಅಂದುಕೊಂಡಿದ್ದೆವು. ಆದರೆ ಕಾಂಗ್ರೆಸ್‌ನವರು ದಿಢೀರ್‌ ನಮ್ಮ ಬೆಂಬಲಿಸಿ ಬಿಟ್ಟರು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿರಬಹುದು ಎಂದು ಅಭಿಪ್ರಾಯಪಟ್ಟರು.

  • ಸಿಎಂ ತವರು ಕ್ಷೇತ್ರದಲ್ಲಿ ಬಹುಮತವಿದ್ದರೂ ಕಗ್ಗಂಟಾದ ಪಾಲಿಕೆ ಮೇಯರ್ ಚುನಾವಣೆ!

    ಸಿಎಂ ತವರು ಕ್ಷೇತ್ರದಲ್ಲಿ ಬಹುಮತವಿದ್ದರೂ ಕಗ್ಗಂಟಾದ ಪಾಲಿಕೆ ಮೇಯರ್ ಚುನಾವಣೆ!

    ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಕ್ಷೇತ್ರದಲ್ಲಿಗ ಮೇಯರ್ ಚುನಾವಣೆ ಕಗ್ಗಂಟಾಗಿ ಪರಿಣಮಿಸಿದೆ. ಅದರಲ್ಲೂ ಬಿಜೆಪಿಯ ಹಿರಿಯ ನಾಯಕ ಮತ್ತು ಸಚಿವ ಈಶ್ವರಪ್ಪನವರ ನಗರ ಕ್ಷೇತ್ರದಲ್ಲಿಯೇ ಬಹುಮತವಿರುವ ಬಿಜೆಪಿಗೆ ಮೇಯರ್ ಚುನಾವಣೆ ಕಗ್ಗಂಟಾಗಿದೆ.

    ಬಿಜೆಪಿಯ ಇಬ್ಬರು ಮಹಿಳೆಯರು ಮೇಯರ್ ಸ್ಥಾನಕ್ಕಾಗಿ ಕಾನೂನು ಹೋರಾಟಕ್ಕೆ ಇಳಿದಿದ್ದು, ಇದೀಗ ಬಿಜೆಪಿಗೆ ಮತ್ತು ನಾಯಕರಿಗೆ ಮುಖಭಂಗ ಆದಂತಾಗಿದೆ. ಒಬ್ಬ ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರ ಎಸಿ ನ್ಯಾಯಾಲಯ ರದ್ದುಗೊಳಿಸಿದ್ದರೂ ಕೂಡ ಅದಕ್ಕೆ ಹೈಕೋರ್ಟಿನಲ್ಲಿ ತಡೆ ತರಲಾಗಿದ್ದು, ಇದೀಗ ನಾಳಿನ ಮೇಯರ್- ಉಪ ಮೇಯರ್ ಚುನಾವಣೆ ತಿಕ್ಕಾಟಕ್ಕೆ ಕಾರಣವಾಗಿದೆ.

    ಶಿವಮೊಗ್ಗ ಮಹಾನಗರ ಪಾಲಿಕೆಗೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಾಳೆ ನಡೆಯಲಿದ್ದು, ಹಿಂದುಳಿದ ವರ್ಗ ಬಿ ಮಹಿಳೆಗೆ ಮೇಯರ್ ಸ್ಥಾನ ಹಾಗೂ ಸಾಮಾನ್ಯ ಮಹಿಳೆಗೆ ಉಪಮೇಯರ್ ಸ್ಥಾನ ಮೀಸಲಾಗಿದೆ. ಆಡಳಿತ ಪಕ್ಷದ ಸುವರ್ಣ ಶಂಕರ್ ಮತ್ತು ಅನಿತಾ ರವಿಶಂಕರ್ ಅವರು ಸಂಭವನೀಯ ಅಭ್ಯರ್ಥಿಗಳಾಗಿದ್ದರು. ಇವರಿಬ್ಬರು ಬಿಜೆಪಿ ಪಕ್ಷದವರಾಗಿದ್ದರೂ ಸಹ ಇಲ್ಲಿ ಈಶ್ವರಪ್ಪ ಬಣ ಮತ್ತು ಯಡಿಯೂರಪ್ಪ ಅವರ ಬಣ ಎಂದು ಗುರುತಿಸಲಾಗಿದೆ.

    ಸದಸ್ಯೆ ಅನಿತಾ ರವಿಶಂಕರ್ ಅವರು ಬಿಎಸ್‍ವೈ ಬಣವಾಗಿ ಗುರುತಿಸಿಕೊಂಡಿದ್ದು, ಮತ್ತೊಬ್ಬ ಸದಸ್ಯೆ ಸುವರ್ಣ ಶಂಕರ್ ಈಶ್ವರಪ್ಪನವರ ಬಣ ಎಂದು ಗುರುತಿಸಲಾಗಿದೆ. ಈಗಾಗಿ ಇವರಿಬ್ಬರು ಮೇಯರ್ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ. ಇದು ಇದೀಗ ತಿಕ್ಕಾಟಕ್ಕೆ ಕಾರಣವಾಗಿದೆ. ಜಾತಿ ಪ್ರಮಾಣ ಪತ್ರದ ವಿಚಾರವಾಗಿ ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಇಲ್ಲಿನ ಶಿಸ್ತಿನ ಪಕ್ಷದ ನಾಯಕರಿಗೆ ಮುಖಭಂಗ ಅನುಭವಿಸುವಂತಾಗಿದೆ.

    ಮೇಯರ್ ಸ್ಥಾನದ ಆಕಾಂಕ್ಷಿ ಸುವರ್ಣ ಶಂಕರ್ ಅವರ ಜಾತಿ ಪ್ರಮಾಣ ಪತ್ರವನ್ನು ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ರದ್ದುಗೊಳಿಸಿದ್ದಾರೆ. ಇದು ಸುವರ್ಣ ಶಂಕರ್ ಆಸೆಗೆ ತಣ್ಣೀರು ಎರಚಿದಂತಾಗಿದ್ದು, ಈ ಎಸಿ ಅವರ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಸುವರ್ಣ ಶಂಕರ್ ಈ ಆದೇಶಕ್ಕೆ ತಡೆ ತಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಜಾತಿ ಪ್ರಮಾಣ ಪತ್ರ ಬೇಕು ಈ ಪ್ರಮಾಣ ಪತ್ರ ಪಡೆಯಲು ಅಭ್ಯರ್ಥಿಯು ಆದಾಯ, ವೃತ್ತಿ ಮತ್ತು ಮಾರಾಟ ತೆರಿಗೆದಾರರು ಆಗಿರಬಾರದು. ಭೂ ಹಿಡುವಳಿ 8 ಹೆಕ್ಟೇರ್ ಮೀರಿರಬಾರದು ಎಂಬ ತಾಂತ್ರಿಕ ದೋಷ ಇಟ್ಟುಕೊಂಡು ಇಬ್ಬರ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು ಎಂದು ಈಗಾಗಲೇ ದೂರು ಸಲ್ಲಿಕೆಯಾಗಿತ್ತು.

    ಬಿಜೆಪಿ ನಾಯಕರ ಈ ಕಚ್ಚಾಟದ ಲಾಭ ಪಡೆಯಲು ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿರುವ ಯಮುನಾ ರಂಗೇಗೌಡರನ್ನು ಕಣಕ್ಕಿಳಿಸಿದೆ. ಒಂದು ವೇಳೆ ಬಿಜೆಪಿಯ ಇಬ್ಬರೂ ಮಹಿಳೆಯರ ನಾಮಪತ್ರ ತಿರಸ್ಕೃತವಾದರೆ ಪರಿಸ್ಥಿತಿ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ನಿಂದ ಮೇಯರ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಯಮುನಾ ರಂಗೇಗೌಡ ಈಗ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ. ಪ್ರಾದೇಶಿಕ ಆಯುಕ್ತರಿಗೆ ಈ ಬಗ್ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಅವಶ್ಯ ಬಿದ್ದರೆ ನ್ಯಾಯಾದಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬಿಜೆಪಿಯಿಂದ ಪ್ರಬಲ ಆಕಾಂಕ್ಷಿಯಾಗಿರುವ ಅನಿತಾ ರವಿಶಂಕರ್ ಬಿಸಿಎಂ ಬಿ ಮೀಸಲು ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಆದರೆ ಅವರ ಕುಟುಂಬ ಕೂಡ ಆದಾಯ, ವೃತ್ತಿ ತೆರಿಗೆ ಪಾವತಿದಾರರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಅವರ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು ಎಂದು ಕಾಂಗ್ರೆಸ್ ನವರು ಉಪ ವಿಭಾಗಾಧಿಕಾರಿಗೆ ಮನವಿ ಮಾಡಿದ್ದಾರೆ. ಆದರೆ ಅನಿತಾ ರವಿಶಂಕರ್ ಅವರು ಈಗಾಗಲೇ ಆ ಮೀಸಲಾತಿ ಅಡಿಯಲ್ಲಿ ಚುನಾಯಿತರಾಗಿದ್ದಾರೆ. ಹೀಗಾಗಿ ಅವರ ಪ್ರಮಾಣ ಪತ್ರವನ್ನು ರದ್ದುಗೊಳಿಸುವ ಅಧಿಕಾರ ಉಪವಿಭಾಗಾಧಿಕಾರಿಗೆ ಬರುವುದಿಲ್ಲ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾಗುತ್ತದೆ ಎಂದು ಉಪವಿಭಾಗಾಧಿಕಾರಿ ಪ್ರಕಾಶ್ ತೀರ್ಪು ನೀಡಿದ್ದಾರೆ. ಒಂದು ವೇಳೆ ಈ ಕುರಿತು ಯಾರಾದರು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ, ಅನಿತಾ ರವಿಶಂಕರ್ ಅವರ ಸದಸ್ಯತ್ವಕ್ಕೆ ಧಕ್ಕೆ ಬರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

    ಇದರ ಜೊತೆಗೆ ದಾಖಲಾತಿ ಪರಿಶೀಲಿಸಿ ಸುವರ್ಣ ಶಂಕರ್ ಅವರ ಪ್ರಮಾಣ ಪತ್ರ ರದ್ದುಗೊಳಿಸಲಾಗಿದೆ. ಸುವರ್ಣ ಶಂಕರ್ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಚುನಾವಣೆ ಸಂದರ್ಭ ಅವರಿಗೆ ಜಾತಿ ಪ್ರಮಾಣ ಪತ್ರದ ಅಗತ್ಯವಿರಲಿಲ್ಲ. ಮೇಯರ್ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ತಹಶೀಲ್ದಾರ್ ಅವರಿಂದ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಆದರೆ ಸುವರ್ಣ ಶಂಕರ್ ಕುಟುಂಬ ಆದಾಯ ತೆರಿಗೆ ನಿಯಮದ ಅಡಿಗೆ ಬರುವುದರಿಂದ ಅವರ ಪ್ರಮಾಣ ಪತ್ರವನ್ನು ಉಪವಿಭಾಗಾಧಿಕಾರಿ ರದ್ದುಗೊಳಿಸಿದ್ದಾರೆ.

    ಒಟ್ಟಿನಲ್ಲಿ ಬಿಜೆಪಿ ಒಳಗಿನ ಆಂತರಿಕ ಕಿತ್ತಾಟದಿಂದಾಗಿ ಯಾರಿಗೂ ಗೊತ್ತೇ ಇರದ ಈ ಇಬ್ಬರು ಬಿಜೆಪಿ ಸದಸ್ಯರ ಮೀಸಲಾತಿ ವಿಚಾರ ಈಗ ಬಹಿರಂಗವಾದಂತಾಗಿದೆ. ವಿರೋಧ ಪಕ್ಷ ಕಾಂಗ್ರೆಸ್‍ಗೆ ಜಿಲ್ಲೆಯಲ್ಲಿ ಹೋರಾಟಕ್ಕೆ ಒಂದು ಅಸ್ತ್ರವನ್ನು ಬಿಜೆಪಿಯವರೇ ನೀಡಿದಂತಾಗಿದೆ. ರಾಜಕೀಯ ದಿಗ್ಗಜ ನಾಯಕರ ಕ್ಷೇತ್ರದಲ್ಲಿಯೇ ಇದೀಗ ಮೇಯರ್ ಸ್ಥಾನಕ್ಕೆ ಕಚ್ಚಾಟ ನಡೆಯುತ್ತಿರುವುದು ಅವಮಾನಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    ಪಾಲಿಕೆಯ ಸದಸ್ಯರ ಬಲ: ಶಿವಮೊಗ್ಗ ಮಹಾನಗರ ಪಾಲಿಕೆಯ 35 ಸದಸ್ಯ ಬಲದಲ್ಲಿ ಬಿಜೆಪಿ 20, ಕಾಂಗ್ರೆಸ್ 7, ಜೆ.ಡಿ.ಎಸ್ 2, ಪಕ್ಷೇತರರು 6 ಸದಸ್ಯರಿದ್ದಾರೆ. ಇದರಲ್ಲಿ ಪಕ್ಷೇತರರಲ್ಲಿ 4 ಜನ ಬಿಜೆಪಿಗೆ ಸೇರ್ಪಡೆಯಾಗಿದ್ದು, ಬಿಜೆಪಿ ಪರವಾಗಿದ್ದಾರೆ. ಮತ್ತಿಬ್ಬರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದು, ಮತ್ತೊಬ್ಬರು ಪಕ್ಷೇತರರಾಗಿಯೇ ಉಳಿದುಕೊಂಡಿದ್ದಾರೆ. ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಕೂಡ ಮೇಯರ್ ಆಯ್ಕೆ ಕಗ್ಗಂಟಾದಂತಾಗಿದೆ.

  • ಮೇಯರ್ ಸ್ಥಾನದ ಆಕಾಂಕ್ಷಿಗಳ ಜೊತೆ ಸಾರಾ ಮಹೇಶ್ ಸಭೆ

    ಮೇಯರ್ ಸ್ಥಾನದ ಆಕಾಂಕ್ಷಿಗಳ ಜೊತೆ ಸಾರಾ ಮಹೇಶ್ ಸಭೆ

    ಮೈಸೂರು: ಜನವರಿ 18ಕ್ಕೆ ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಇಂದು ಮೈಸೂರಿನ ಅತಿಥಿ ಗೃಹದಲ್ಲಿ ಸಭೆ ನಡೆಸಿದರು.

    ಜೆಡಿಎಸ್‍ನಲ್ಲಿ ನಾಲ್ವರು ಮೇಯರ್ ಆಕಾಂಕ್ಷಿಗಳಿದ್ದಾರೆ. ಮೇಯರ್ ಸ್ಥಾನದ ಆಕಾಂಕ್ಷಿಗಳು ಹಾಗೂ ಜೆಡಿಎಸ್‍ನ ಕಾರ್ಪೋರೇಟರ್‌ಗಳ ಜೊತೆ ಈ ಸಭೆ ನಡೆಸಿದರು. ಸಭೆಯಲ್ಲಿ ಪ್ರೊ.ರಂಗಪ್ಪ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ, ಮಾಜಿ ಮೇಯರ್ ರವಿಕುಮಾರ್, ಅಜೀಜ್ ಅಬ್ದುಲ್ಲಾ ಸೇರಿ ಹಲವರು ಭಾಗಿಯಾಗಿದ್ದರು.

    ಸಭೆಯಲ್ಲಿ 18 ಜನ ಜೆಡಿಎಸ್‍ನ ಪಾಲಿಕೆ ಸದಸ್ಯರು ಭಾಗಿಯಾಗಿದ್ದು, ಎಲ್ಲಾ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಮೇಯರ್ ಸ್ಥಾನದ ಆಕಾಂಕ್ಷಿಗಳಾದ ನಮ್ರತಾ ರಮೇಶ್, ನಿರ್ಮಲಾ ಹರೀಶ್, ತಸ್ಲೀಮ್ ಹಾಗೂ ರೇಷ್ಮಾಭಾನು ತಮಗೆ ಯಾಕೆ ಸ್ಥಾನ ನೀಡಬೇಕೆಂದು ಪ್ರತ್ಯೇಕವಾಗಿ ವಿವರಣೆ ನೀಡಿದ್ದಾರೆ.

  • ಹುಣಸೂರು ಬೈ ಎಲೆಕ್ಷನ್ ಆಯ್ತು, ಈಗ ಮೇಯರ್ ಆಯ್ಕೆಗೂ ತಟಸ್ಥ ಎಂದ್ರು ಜಿಟಿಡಿ

    ಹುಣಸೂರು ಬೈ ಎಲೆಕ್ಷನ್ ಆಯ್ತು, ಈಗ ಮೇಯರ್ ಆಯ್ಕೆಗೂ ತಟಸ್ಥ ಎಂದ್ರು ಜಿಟಿಡಿ

    ಮೈಸೂರು: ಜೆಡಿಎಸ್ ವರಿಷ್ಠರ ಜೊತೆ ಮುನಿಸಿಕೊಂಡಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಹುಣಸೂರು ಉಪಚುನಾವಣೆಯಲ್ಲಿ ತಟಸ್ಥ ನಿಲುವು ತೆಳೆದಿದ್ದರು. ಈಗ ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲೂ ಅದೇ ಮನಸ್ಥಿತಿ ಮುಂದುವರಿಸಿದ್ದಾರೆ.

    ಮೈಸೂರು ಮಹಾನಗರ ಪಾಲಿಕೆ ಮೇಯರ್ – ಉಪಮೇಯರ್ ಸ್ಥಾನಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಸದ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿದ್ದು, ಒಪ್ಪಂದದ ಪ್ರಕಾರ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಮೇಯರ್ ಸ್ಥಾನ ಸಿಗುತ್ತಿದೆ. ಹೀಗಾಗಿ, ಜೆಡಿಎಸ್‍ನಲ್ಲಿ ಬಿರುಸಿನ ರಾಜಕೀಯ ಶುರುವಾಗಿದೆ. ಆದರೆ ಆರಂಭದಲ್ಲೆ ನನಗೂ ಇದಕ್ಕೂ ಸಂಬಂಧ ಇಲ್ಲ. ಪಕ್ಷ ಹೇಳಿದವರಿಗೆ ನಾನು ನನ್ನ ಮತ ಹಾಕಿ ಬರುತ್ತೇನೆ ಅಷ್ಟೇ ಎಂದು ಜಿಟಿಡಿ ಹೇಳಿದ್ದು, ಈ ಹೇಳಿಕೆ ಜಿಟಿಡಿ, ಬೆಂಬಲಿಗ ಪಾಲಿಕೆ ಸದಸ್ಯರಲ್ಲಿ ಆತಂಕ ಸೃಷ್ಟಿಸಿದೆ.

    ಮೈಸೂರಿನಲ್ಲಿ ಸಾರಾ ಮಹೇಶ್ ಅವರು ಏನು ಹೇಳುತ್ತಾರೋ, ಕುಮಾರಸ್ವಾಮಿ ಅವರು ಅದನ್ನೇ ಮಾಡಿಕೊಂಡು ಬರುತ್ತಿದ್ದಾರೆ. ನಾನು ಉಸ್ತುವಾರಿ ಸಚಿವನಾಗಿರಲಿ, ಮತದಾರನಾಗಿರಲಿ, ಯಾವತ್ತೂ ಅವರು ನನ್ನನ್ನು ಮೇಯರ್ ಚುನಾವಣೆಯಲ್ಲಿ ಪರಿಗಣಿಸಿಲ್ಲ. ಹಾಗಾಗಿ ಈಗಲೂ ಅವರೇ ಚುನಾವಣೆ ಮಾಡಲಿ. ಪಕ್ಷ, ಹೈಕಮಾಂಡ್ ಯಾರನ್ನು ಅಭ್ಯರ್ಥಿ ಮಾಡುತ್ತೋ. ಅವರಿಗೆ ವೋಟ್ ಹಾಕೋದಷ್ಟೇ ನನ್ನ ಕೆಲಸ ಎಂದಿದ್ದಾರೆ.

    ಮೇಯರ್ ಚುನಾವಣೆ ನನ್ನ ಕ್ಷೇತ್ರದ ವ್ಯಾಪ್ತಿಗೂ ಬರುತ್ತೆ ಹೀಗಾಗಿ ನಾನು ಕೂಡ ಸದಸ್ಯನಾಗಿ ಇದ್ದೇನೆ ಅಷ್ಟೇ. ಇದನ್ನು ಮೀರಿ ಅಭ್ಯರ್ಥಿ ಆಯ್ಕೆ ರಾಜಕೀಯ ನನಗೆ ಸಂಬಂಧ ಪಟ್ಟಿಲ್ಲ ಎಂದು ಮೈಸೂರಿನಲ್ಲಿ ಜಿಟಿಡಿ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಮೇಯರ್ ಚುನಾವಣೆಯಲ್ಲಿ ಜಿಟಿಡಿ ಅವರು ತಟಸ್ಥ ನಿಲುವು ಎಂಬುವುದು ಸ್ಪಷ್ಟವಾಗಿದೆ.

  • ದೆಹಲಿಯಲ್ಲಿ ಲುಂಗಿ ಉಡಲು ಬಾರದವರಿಂದ ಮೇಯರ್ ಪಟ್ಟ ಕನ್ನಡಿಗರಿಗೆ ಕೈ ತಪ್ಪಿತು : ಭೀಮಾಶಂಕರ್ ಪಾಟೀಲ್

    ದೆಹಲಿಯಲ್ಲಿ ಲುಂಗಿ ಉಡಲು ಬಾರದವರಿಂದ ಮೇಯರ್ ಪಟ್ಟ ಕನ್ನಡಿಗರಿಗೆ ಕೈ ತಪ್ಪಿತು : ಭೀಮಾಶಂಕರ್ ಪಾಟೀಲ್

    ಬೆಂಗಳೂರು: ಲುಂಗಿ ಉಡಲು ಬಾರದ ಕೆಲವರು ಮಾಡಿದ ನಾಡ ವಿರೋಧಿ ಸಂಚಿಗೆ ಕನ್ನಡಿಗರಿಗೆ ಬಿಬಿಎಂಪಿ ಮೇಯರ್ ಪಟ್ಟ ಒಲಿಯದೇ ಹೋಯಿತು ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಕಿಡಿಕಾರಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಈ ಬಾರಿ ಕನ್ನಡಿಗರನ್ನೇ ಆಯ್ಕೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಟ್ಟಿ ನಿಲುವು ತಾಳಿದ್ದರು. ಆದರೆ ದೆಹಲಿಯಲ್ಲಿ ಕುಳಿತು ಲುಂಗಿ ಉಡಲು ಬಾರದ ಕೆಲವರು ಮಾಡಿದ ನಾಡ ವಿರೋಧಿ ಸಂಚಿಗೆ ಕನ್ನಡಿಗರಿಗೆ ಈ ಪಟ್ಟ ಒಲಿಯದೇ ಹೋಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದಿದ್ದರೂ ಅಧಿಕಾರದಿಂದ ವಂಚಿತಗೊಂಡಿದ್ದ ಬಿಜೆಪಿ ಈ ಬಾರಿ ಬಿಬಿಎಂಪಿ ಮೇಯರ್ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

    ಒಟ್ಟು 129 ಮತಗಳನ್ನು ಪಡೆಯುವ ಮೂಲಕ ಜೋಗುಪಾಳ್ಯ ವಾರ್ಡಿನ ಬಿಜೆಪಿ ಸದಸ್ಯ ಗೌತಮ್ ಕುಮಾರ್ ಜೈನ್ ಮೇಯರ್ ಆಗಿ ಆಯ್ಕೆ ಆಗಿದ್ದರೆ, ಬೊಮ್ಮನಹಳ್ಳಿ ವಾರ್ಡಿನ ರಾಮ್ ಮೋಹನ್ ರಾಜು ಉಪ ಮೇಯರ್ ಆಗಿ ಆಯ್ಕೆ ಆಗಿದ್ದಾರೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದರೂ ಕೊನೆ ಕ್ಷಣದಲ್ಲಿ ಪಕ್ಷೇತರ ಪಾಲಿಕೆ ಸದಸ್ಯರ ಜೊತೆಗಿನ ಮಾತುಕತೆ ಯಶಸ್ವಿಯಾಗದ ಪರಿಣಾಮ ಮೇಯರ್ ಹುದ್ದೆ ಕೈ ತಪ್ಪಿತ್ತು. ಆದರೆ ಈ ಬಾರಿ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ ಪರಿಣಾಮ ಬಿಜೆಪಿ ಬಿಬಿಎಂಪಿಯಲ್ಲಿ ಅಧಿಕಾರವನ್ನು ಹಿಡಿದಿದೆ.

    ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ 257 ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದರೂ 249 ಮಂದಿ ಹಾಜರಾಗಿದ್ದರು. 8 ಮಂದಿ ಗೈರಾಗಿರುವ ಕಾರಣ ಬಹುಮತಕ್ಕೆ 125 ಸದಸ್ಯರ ಬೆಂಬಲ ಬೇಕಿತ್ತು. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಪದ್ಮನಾಭ ರೆಡ್ಡಿ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದರು.