Tag: mayor election

  • ಬೆಳಗಾವಿ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೆ ದಿನ ನಿಗದಿ – ಮಾ.15ಕ್ಕೆ ಎಲೆಕ್ಷನ್

    ಬೆಳಗಾವಿ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೆ ದಿನ ನಿಗದಿ – ಮಾ.15ಕ್ಕೆ ಎಲೆಕ್ಷನ್

    ಬೆಳಗಾವಿ: ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ (Belagavi) ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮಾ. 15ರಂದು ಚುನಾವಣೆ ನಡೆಯಲಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ಮಾ. 15ರಂದು ಬೆಳಗ್ಗೆ 9 ಗಂಟೆಯಿಂದ 11 ಗಂಟೆಯ ವೇಳೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಮೇಯರ್ ಸ್ಥಾನಕ್ಕೆ ಸಾಮಾನ್ಯ ಪುರುಷ ಹಾಗೂ ಉಪಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾತಿ ಇರುತ್ತದೆ. ಇದನ್ನೂ ಓದಿ: ಕೆಇಎ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೊಸ ರೂಲ್ಸ್ – ಇನ್ಮುಂದೆ ಒಂದು ಪ್ರಶ್ನೆಗೆ 5 ಆಯ್ಕೆ

    ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ಮಧ್ಯೆ ರಾಜಕೀಯ ಕುಸ್ತಿಗೆ ಮೇಯರ್, ಉಪಮೇಯರ್ ಚುನಾವಣೆ ಸಾಕ್ಷಿಯಗಲಿದೆ ಎನ್ನುವ ಲೆಕ್ಕಾಚಾರಗಳು ಬೆಳಗಾವಿಯಲ್ಲಿ ಕೇಳಿಬರುತ್ತಿದೆ. ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿ ಶಾಸಕ ಅಭಯ್ ಪಾಟೀಲ್ ಪ್ರತಿಷ್ಠೆಯ ಕಣವಾಗಿ ಈ ಚುನಾವಣೆ ಮಾರ್ಪಟ್ಟಿದೆ.

    ಇಬ್ಬರು ಸದಸ್ಯರ ಸದಸ್ಯತ್ವ ರದ್ದಾದರೂ ಸಹ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಆದರೆ ವಿಜಯಪುರ ಮಾದರಿಯಲ್ಲಿ ಕಾಂಗ್ರೆಸ್ ಸಂಖ್ಯಾಬಲ ಹೆಚ್ಚಿಸಿಕೊಂಡರೆ ಅಚ್ಚರಿ ಫಲಿತಾಂಶ ಖಚಿತ ಎನ್ನುತ್ತಿದ್ದಾರೆ. ಇಬ್ಬರು ಸದಸ್ಯರ ಸದಸ್ಯತ್ವ ರದ್ದಾಗಿರುವುದರಿಂದ ಪಾಲಿಕೆಯ ಒಟ್ಟು ಸಂಖ್ಯಾ ಬಲ 56ಕ್ಕೆ ಕುಸಿದಿದೆ. ಇದನ್ನೂ ಓದಿ: ಕೊನೆಗೂ ಎಚ್ಚೆತ್ತ ಜಿಲ್ಲಾಡಳಿತ – ವಿಸಿ ನಾಲೆಗೆ ತಡೆಗೋಡೆ ನಿರ್ಮಾಣ

    ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಶಾಸಕರು, ಸಂಸದರು, ಪರಿಷತ್ ಸದಸ್ಯರು ಮತದಾನ ಮಾಡುವ ಹಕ್ಕು ಹೊಂದಿರುತ್ತಾರೆ. ನಾಗರಾಜ್ ಯಾದವ್ ಜಿಲ್ಲೆಯ ಕೆಡಿಪಿ ಸಭೆಯಲ್ಲಿ ನಿರಂತರವಾಗಿ ಪಾಲ್ಗೊಳುತ್ತಿದ್ದಾರೆ. ಕಂಡಕ್ಟರ್ ಮೇಲೆ ನಡೆದ ಹಲ್ಲೆ ಪ್ರಕರಣ ಸಂದರ್ಭ ಉಮಾಶ್ರೀ ಸಹ ಬೆಳಗಾವಿಯಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಪಕ್ಷೇತರ ಎಂಎಲ್‌ಸಿ ಲಖನ್ ಜಾರಕಿಹೊಳಿ ಬೆಳಗಾವಿಯನ್ನು ಪ್ರತಿನಿಧಿಸುತ್ತಾರೆ.

    ಮೇಯರ್ ಚುನಾವಣೆಯ ಮತದಾರರ ಪಟ್ಟಿ ಮೇಲೆ ಕಾಂಗ್ರೆಸ್ ಭವಿಷ್ಯ ನಿಂತಿದೆ. ಸಂಖ್ಯಾಬಲ ಹೆಚ್ಚಿಸಿಕೊಂಡರೆ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬಹುದೆಂಬ ಲೆಕ್ಕಚಾರಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಇದನ್ನೂ ಓದಿ: ಪಾಕ್‌ನ ಬಲೂಚಿಸ್ತಾನದಲ್ಲಿ IED ಸ್ಫೋಟ – 5 ಮಂದಿ ಸಾವು

  • ಬಳ್ಳಾರಿಯಲ್ಲಿ ಮಾ.28ರಂದು ನಡೆಯಬೇಕಿದ್ದ ಮೇಯರ್ ಚುನಾವಣೆ ಮುಂದೂಡಿಕೆ

    ಬಳ್ಳಾರಿಯಲ್ಲಿ ಮಾ.28ರಂದು ನಡೆಯಬೇಕಿದ್ದ ಮೇಯರ್ ಚುನಾವಣೆ ಮುಂದೂಡಿಕೆ

    ಬಳ್ಳಾರಿ: ಮಾ.28ರಂದು ನಡೆಯಬೇಕಿದ್ದ ಬಳ್ಳಾರಿ (Ballari) ಮೇಯರ್ ಚುನಾವಣೆ (Mayor Election) ಮುಂದೂಡಿ ಕಲಬುರಗಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ಚುನಾವಣೆ ನೀತಿ ಸಂಹಿತೆ ಜಾರಿ (Code Of Election Conduct) ಹಾಗೂ ಎಲ್ಲಾ ಅಧಿಕಾರಿಗಳು ಚುನಾವಣೆ ಕೆಲಸದಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆ ಮೇಯರ್ ಚುನಾವಣೆ ಮುಂದಕ್ಕೆ ಹಾಕಿ ಆದೇಶ ಹೊರಡಿಸಲಾಗಿದೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಮೇಯರ್ ಚುನಾವಣೆ ದಿನಾಂಕ ನಿಗದಿ ಮಾಡೋದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಸಿಎಂ ಸ್ಥಾನಕ್ಕಾಗಿ ಮಹಾಬಲೇಶ್ವರ, ಕಾಲಭೈರವನ ಮೊರೆಹೋದ ಡಿಕೆಶಿ

    ಬಳ್ಳಾರಿ ಪಾಲಿಕೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದು, ಪ್ರಸ್ತುತ ಮೆಯರ್ ಶ್ವೇತಾ ಅವಧಿ ಮಗಿದ ಹಿನ್ನೆಲೆ ಮೇಯರ್ ಚುನಾವಣೆ ನಿಗದಿಯಾಗಿತ್ತು. ಗುರುವಾರ ನಡೆಯಬೇಕಿದ್ದ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ಜನ ಆಕಾಂಕ್ಷಿಗಳು ಭರ್ಜರಿ ಗಿಫ್ಟ್ ಪಾಲಿಟಿಕ್ಸ್ ಆರಂಭ ಮಾಡಿದ್ದರು. ಪಾಲಿಕೆ ಸದಸ್ಯರಿಗೆ ಸೀರೆ, ಪಂಚೆ, ಬೆಳ್ಳಿ, ಬಂಗಾರದ ಉಡುಗೊರೆ ನೀಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ಸುಧಾಕರ್‌ Vs ಮುನಿಯಪ್ಪ – ರಾಜಕೀಯ ಸಂಘರ್ಷಕ್ಕೆ ಇದೆ 25 ವರ್ಷಗಳ ಇತಿಹಾಸ

  • ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

    ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

    ಮಾಲೆ: ಭಾರತ ವಿರೋಧಿ ನಿಲುವು ತೆಳೆದು, ಚೀನಾ ಪರ ವಾಲಿರುವ ಮಾಲ್ಡೀವ್ಸ್ (Maldives) ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ಅವರ ಪಕ್ಷಕ್ಕೆ ಮೇಯರ್‌ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದ್ದು, ಭಾರತದ ಪರ ನಿಲುವು ಹೊಂದಿರುವ ಪಕ್ಷ ಜಯಗಳಿಸಿದೆ.

    ಮಾಲೆಯ ಮೇಯರ್‌ ಚುನಾವಣೆಯಲ್ಲಿ ಸದ್ಯ ವಿರೋಧ ಪಕ್ಷವಾಗಿರುವ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಭರ್ಜರಿ ಜಯ ಸಾಧಿಸಿದೆ.

    https://twitter.com/MayorAdamAzim/status/1746609631437500766

     

    ಈ ಮೊದಲು ಮೊಹಮ್ಮದ್ ಮುಯಿಝು ಅವರು ಮೇಯರ್‌ ಆಗಿ ಆಯ್ಕೆಯಾಗಿದ್ದರು. ಅಧ್ಯಕ್ಷರಾಗಿ ನೇಮಕವಾದ ಬಳಿಕ ಮೇಯರ್‌ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಉಪ ಚುನಾವಣೆ ನಡೆದಿತ್ತು.

    ಎಂಡಿಪಿ ಅಭ್ಯರ್ಥಿ ಅಜೀಂ 5,303 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಮುಯಿಝು ಅವರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (PNP) ಪಕ್ಷದ ಐಶಾತ್ ಅಜಿಮಾ ಶಕೂರ್ ಅವರು 3,301 ಮತಗಳನ್ನು ಪಡೆದಿದ್ದಾರೆ. ಭಾರತದ ವಿರೋಧಿ ನಿಲುವು ತಳೆದಿದ್ದಕ್ಕೆ ಪಿಎನ್‌ಪಿ ಅಭ್ಯರ್ಥಿಗೆ ಸೋಲಾಗಿದೆ ಎಂದೇ ವಿಶ್ಲೇಷಿಸಲಾಗುತ್ತದೆ.  ಇದನ್ನೂ ಓದಿ: #BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್‌ ಫ್ಲೈಟ್‌ ಬುಕ್ಕಿಂಗ್‌ ರದ್ದು

    ಚೀನಾ ಪ್ರವಾಸ ಮುಗಿಸಿ ಬಂದಿರುವ ಮೊಹಮ್ಮದ್ ಮುಯಿಝು ಅವರು ಮಾಲ್ಡೀವ್ಸ್‌ನಿಂದ ಭಾರತೀಯ ಸೈನಿಕರನ್ನು (Indian Army) ವಾಪಸ್‌ ಕರೆಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಸರ್ಕಾರಕ್ಕೆ ಸೂಚಿಸಿದ್ದಾರೆ. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್‌ ಶಾಕ್‌

    ಮಾರ್ಚ್‌ 15 ರ ಮುಂಚೆಗೆ ಭಾರತೀಯ ಸೇನೆಯನ್ನು ದ್ವೀಪ ರಾಷ್ಟ್ರದಿಂದ (ಮಾಲ್ಡೀವ್ಸ್‌) ಹಿಂತೆಗೆದುಕೊಳ್ಳಬೇಕು ಎಂದು ಮಾಲ್ಡೀವ್ಸ್‌ ಅಧ್ಯಕ್ಷರು ಹೇಳಿದ್ದಾರೆ. ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ಮತ್ತು ಮಾಲೆಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ನಡುವಿನ ಸಭೆಯ ನಂತರ ಈ ಹೇಳಿಕೆ ಬಂದಿದೆ.

     

  • ವಿಜಯಪುರ ಪಾಲಿಕೆ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ – ಚುನಾವಣೆ ಬಹಿಷ್ಕರಿಸಿದ ಯತ್ನಾಳ್‌, ಬಿಜೆಪಿ ಸದಸ್ಯರು

    ವಿಜಯಪುರ ಪಾಲಿಕೆ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ – ಚುನಾವಣೆ ಬಹಿಷ್ಕರಿಸಿದ ಯತ್ನಾಳ್‌, ಬಿಜೆಪಿ ಸದಸ್ಯರು

    ವಿಜಯಪುರ: ಮಹಾನಗರ ಪಾಲಿಕೆ ಮೇಯರ್‌ ಹುದ್ದೆ ಮತ್ತೆ ಕಾಂಗ್ರೆಸ್ (Congress) ಪಾಲಾಗಿದೆ. 21ನೇ ಅವಧಿಯ ಮೇಯರ್‌ ಆಗಿ ಕಾಂಗ್ರೆಸ್‌ನ ಮೆಹಜಬೀನ್ ಹೊರ್ತಿ ಆಯ್ಕೆಯಾಗಿದ್ದಾರೆ.

    ಸಾಮಾನ್ಯ ವರ್ಗಕ್ಕೆ (General Category) ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಒಟ್ಟು 22 ಮತಗಳನ್ನು ಪಡೆದು ಮೇಯರ್ ಆಗಿ ಮಹೆಜಬೀನ್ ಹೊರ್ತಿ ಆಯ್ಕೆಯಾದರು.

    10 ಕಾಂಗ್ರೆಸ್ ಸದಸ್ಯರು, ಐವರು ಪಕ್ಷೇತರರು, ಇಬ್ಬರು ಎಐಎಂಐಎಂ, ಓರ್ವ ಜೆಡಿಎಸ್ ಸದಸ್ಯರ ಬೆಂಬಲ ಹಾಗೂ ಶಾಸಕರಾದ ಎಂಬಿ ಪಾಟೀಲ್, ವಿಠ್ಠಲ್ ಕಟಕದೊಂಡ, ಪರಿಷತ್ ಸದಸ್ಯರಾದ ಸುನಿಲಗೌಡ ಪಾಟೀಲ್, ಪ್ರಕಾಶ್ ರಾಠೋಡ್ ಮತಗಳ ಬೆಂಬಲದೊಂದಿಗೆ ಗೆಲವು ಸಾಧಿಸಿದ್ದಾರೆ.  ಇದನ್ನೂ ಓದಿ: ಗೋವಾದಲ್ಲಿ ಹೆತ್ತ ಮಗುವನ್ನೇ ಹತ್ಯೆಗೈದ ಬೆಂಗ್ಳೂರಿನ CEO – ಸೂಟ್‌ಕೇಸ್‌ನಲ್ಲಿ ಶವವಿಟ್ಕೊಂಡು ಹೋಗುವಾಗ ಅರೆಸ್ಟ್

    ಬಿಜೆಪಿಯ (BJP) 17 ಸದಸ್ಯರ ಪೈಕಿ ಓರ್ವ ಬಿಜೆಪಿ ಸದಸ್ಯ ನಿಧನರಾಗಿದ್ದು, ಬಿಜೆಪಿ ಬಲ ಕುಸಿದಿತ್ತು. 16 ಸದಸ್ಯರ ಜೊತೆಗೆ ನಗರ ಶಾಸಕ ಯತ್ನಾಳ್ ಹಾಗೂ ಸಂಸದ ರಮೇಶ ಜಿಗಜಿಣಗಿ ಮತ ಸೇರಿ ಒಟ್ಟು 18 ಮತಗಳು ಮಾತ್ರ ಬಿಜೆಪಿ ಕೈಯ್ಯಲ್ಲಿತ್ತು. ಓರ್ವ ಸದಸ್ಯ ನಿಧನರಾದ ಹಿನ್ನೆಲೆಯಲ್ಲಿ ಚುನಾವಣೆ ನಡೆಸಬಾರದು ಎಂದು ಬಿಜೆಪಿ ಮನವಿ ಮಾಡಿತ್ತು. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ – ಬೆಂಗ್ಳೂರು, ಮಂಡ್ಯ ಸೇರಿ ರಾಜ್ಯದ 30 ಕಡೆ ದಾಳಿ

    ಉಪಮೇಯರ್ ಸ್ಥಾನ ಎಸ್‌ಟಿ ಸಮಾಜಕ್ಕೆ ಮೀಸಲಾಗಿದ್ದ ಕಾರಣ ಯಾರು ಪ್ರತಿಸ್ಪರ್ಧಿ ಇರಲಿಲ್ಲ. ಹೀಗಾಗಿ ಉಪ‌ ಮೇಯರ್ ಆಗಿ ಕಾಂಗ್ರೆಸ್ಸಿನ ದಿನೇಶ್ ಹಳ್ಳಿ ಅವಿರೋಧವಾಗಿ ಆಯ್ಕೆಯಾದರು.

    ಚುನಾವಣಾ ಪ್ರಕ್ರಿಯೆಯನ್ನು ಬಹಿಷ್ಕರಿಸಿ ಬಿಜೆಪಿಯ 16 ಸದಸ್ಯರು ಹಾಗೂ ನಗರ ಶಾಸಕ ಯತ್ನಾಳ್‌ ಹೊರ ನಡೆದ ಪ್ರಸಂಗ ನಡೆಯಿತು. ಇದು ಅಕ್ರಮದ ಚುನಾವಣೆಯಾಗಿದ್ದು ಸರ್ಕಾರದ ಅಣತಿಯಂತೆ ಚುನಾವಣಾಧಿಕಾರಿಗಳು ನಡೆದುಕೊಂಡಿದ್ದಾರೆ. ಈ ಚುನಾವಣೆಯ ಬಗ್ಗೆ ನಾವು ಕೋರ್ಟ್‌ ಮೊರೆ ಹೋಗುತ್ತೇವೆ ಎಂದು ಯತ್ನಾಳ್ ಕಿಡಿಕಾರಿದರು.

    ಸಚಿವ ಎಂಬಿ ಪಾಟೀಲ್‌ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಬಿಜೆಪಿ ಮೊದಲೇ ಸೋಲು ಒಪ್ಪಿಕೊಂಡಿತ್ತು. ಎಲ್ಲರ ಸಹಾಯದಿಂದ ಕಾಂಗ್ರೆಸ್ ಚುಕ್ಕಾಣಿ ಹಿಡಿದಿದೆ. ನಗರದ ಅಭಿವೃದ್ಧಿಗಾಗಿ ನಾವು ಶ್ರಮಿಸುತ್ತೇವೆ ಎಂದು ಹೇಳಿದರು. ಗೆಲವು ಸಾಧಿಸಿದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆಯ ಆವರಣದಲ್ಲೇ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.‌ ಕಾಂಗ್ರೆಸ್‌ ಸದಸ್ಯರು ರಾಜಹಂಸ ಬಸ್‌ ಮೂಲಕ ಚುನಾವಣೆಗೆ ಆಗಮಿಸಿದ್ದು ವಿಶೇಷವಾಗಿತ್ತು.

     

  • ಬೆಳಗಾವಿ ಮೇಯರ್ ಚುನಾವಣೆ- ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಬಿಜೆಪಿ ರಣತಂತ್ರ

    ಬೆಳಗಾವಿ ಮೇಯರ್ ಚುನಾವಣೆ- ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಬಿಜೆಪಿ ರಣತಂತ್ರ

    ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ (Belagavi City Corporation) ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಬಿಜೆಪಿ ರಣತಂತ್ರ ರೂಪಿಸಿದ್ದು, ಮರಾಠಾ ಸಮುದಾಯದ ಶೋಭಾ ಸೋಮನಾಚೆ ಮೇಯರ್, ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.

    ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕನ್ನಡ ಭಾಷಿಕ ಸದಸ್ಯರಿಗೆ ಮೇಯರ್ ಸ್ಥಾನ ನೀಡಲು ಕನ್ನಡಪರ ಸಂಘಟನೆಗಳ ಆಗ್ರಹಿಸಿದ್ರೆ ಮತ್ತೊಂದೆಡೆ ಮೇಯರ್ ಸ್ಥಾನಕ್ಕಾಗಿ ಲಿಂಗಾಯತ ಮರಾಠಾ ಸಮುದಾಯ ಮಧ್ಯೆ ಪೈಪೋಟಿ ನಡೆಯುತ್ತಿದೆ. ಸದ್ಯ ಸಭಾನಾಯಕ ಸ್ಥಾನ ಕನ್ನಡ ಭಾಷಿಕ ಸದಸ್ಯ, ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಮರಾಠಾ ಸಮುದಾಯ ಹಾಗೂ ಮರಾಠಿ ಭಾಷಿಕ ಸದಸ್ಯೆಗೆ ಮೇಯರ್, ಉಪಮೇಯರ್ ಸ್ಥಾನ ಬಹುತೇಕ ಖಚಿತವಾದಂತಿದೆ. ಮರಾಠಾ ಸಮುದಾಯದ ಶೋಭಾ ಸೋಮನಾಚೆ ಮೇಯರ್, ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆ ಸಾಧ್ಯತೆ ಇದೆ.

    ಮೇಯರ್, ಉಪಮೇಯರ್ ಆಯ್ಕೆಗೂ ಮುನ್ನವೇ ಸಭಾನಾಯಕನ ಆಯ್ಕೆ ಮಾಡಲಾಗಿದ್ದು ಮಹಾನಗರ ಪಾಲಿಕೆಯ 36ನೇ ವಾರ್ಡ್ ಸದಸ್ಯ ರಾಜಶೇಖರ ಡೋಣಿ ಸಭಾನಾಯಕರನ್ನಾಗಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲಿಕೆಯ ಸಭಾನಾಯಕನ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಸ್ವಕ್ಷೇತ್ರದ ಗ್ರಾಮಸ್ಥರಿಂದ ಸಚಿವರಿಗೆ ತರಾಟೆ – ಕಕ್ಕಾಬಿಕ್ಕಿಯಾದ ಹಾಲಪ್ಪ ಆಚಾರ್‌

    ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದ್ದು ಬೆಳಗಾವಿಯ ಸಂಕಮ್ ಹೋಟೆಲ್‍ನಲ್ಲಿ ನಡೆದ ಸಭೆಯಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆಯ ಕಸರತ್ತು ನಡೆಸಲಾಗಿದೆ. ಇದನ್ನೂ ಓದಿ: ನಾವು ಅಡುಗೆ ಮಾಡುತ್ತಿದ್ದೇವೆ, ಅವರು ಬಡಿಸೋಕೆ ಬರುತ್ತಿದ್ದಾರೆ: ಸಿದ್ದರಾಮಯ್ಯ

    ಮುಂಚೆ ಭಾಷಾ ಆಧಾರಿತ ಚುನಾವಣೆ ನಡೆದು ಎಂಇಎಸ್ ಗೆಲುವು ಸಾಧಿಸುತ್ತ ಬಂದಿತ್ತು. ಇದೇ ಮೊದಲ ಬಾರಿ ಪಕ್ಷದ ಚಿಹ್ನೆ ಮೇಲೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು.58 ಸದಸ್ಯರ ಪೈಕಿ 35 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ.2021ರ ಸೆ.3ರಂದು ಚುನಾವಣೆ ನಡೆದು ಸೆ.6ಕ್ಕೆ ಫಲಿತಾಂಶ ಬಂದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯದ ಎರಡನೇ ಅತಿದೊಡ್ಡ ಪಾಲಿಕೆ ಬಿಜೆಪಿ ತೆಕ್ಕೆಗೆ

    ರಾಜ್ಯದ ಎರಡನೇ ಅತಿದೊಡ್ಡ ಪಾಲಿಕೆ ಬಿಜೆಪಿ ತೆಕ್ಕೆಗೆ

    ಧಾರವಾಡ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ-ಧಾರವಾಡ ಬಿಜೆಪಿ ತೆಕ್ಕೆಗೆ ಜಾರಿದೆ. ಮೂರೂವರೆ ವರ್ಷಗಳ ಬಳಿಕ ಮೇಯರ್ ಉಪಮೇಯರ್ ಸ್ಥಾನ ಭರ್ತಿಯಾಗಿವೆ.

    ಮೇಯರ್ ಆಗಿ ಈರೇಶ ಅಂಚಟಗೇರಿ ಆಯ್ಕೆಯಾದರೆ, ಉಪಮೇಯರ್ ಆಗಿ ಉಮಾ ಮುಕುಂದ ಆಯ್ಕೆ ಆಗಿದ್ದಾರೆ. ಕೈ ಎತ್ತುವ ಮೂಲಕ 50 ಮತಗಳನ್ನು ಪಡೆದ ಮೇಯರ್, ಉಪಮೇಯರ್ ಆಯ್ಕೆ ಮಾಡಲಾಯಿತು. ವೋಟಿಂಗ್‍ನಲ್ಲಿ ಪಾಲಿಕೆಯ ಸದಸ್ಯರು, ಜೋಶಿ, ಶೆಟ್ಟರ್ ಸೇರಿದಂತೆ ಪಾಲಿಕೆಯ ವ್ಯಾಪ್ತಿಯ ಜನಪ್ರತಿನಿಧಿಗಳು ಭಾಗಿಯಾಗಿದ್ದರು. ಮಹಾನಗರ ಪಾಲಿಕೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಬಣ್ಣ ಎರಚಿ ಸಂಭ್ರಮಿಸಿದರು.

    82 ಸಂಖ್ಯಾಬಲವುಳ್ಳ ಪಾಲಿಕೆಯಲ್ಲಿ ಬಹುಮತಕ್ಕೆ 42 ಬೇಕಿತ್ತು. ಚುನಾವಣೆಯಲ್ಲಿ ಕ್ರಮವಾಗಿ ಬಿಜೆಪಿ 39, ಕಾಂಗ್ರೆಸ್ 33 ಜೆಡಿಎಸ್ 01 ಎಐಎಂಐಎಂ 3 ಪಕ್ಷೇತರರು 6 ಸ್ಥಾನ ಗಳಿಸಿದ್ದರು. ಇದನ್ನೂ ಓದಿ: ಸಂಜೆ 7 ರಿಂದ ಬೆಳಗ್ಗೆ 6 ರವರೆಗೆ ಮಹಿಳೆ ಉದ್ಯೋಗಿಗಳನ್ನು ದುಡಿಸುವಂತಿಲ್ಲ: ಯೋಗಿ ಆದೇಶ

    5 ಶಾಸಕರು, 1 ಎಂಪಿ, 1 ವಿಧಾನ ಪರಿಷತ್ ಸದಸ್ಯರಿಗೆ ಮತದಾನದ ಅವಕಾಶ ಹಿನ್ನೆಲೆಯಲ್ಲಿ ಬಿಜೆಪಿ ಸಂಖ್ಯಾ ಬಲ 45ರ ಜೊತೆಗೆ ಇಬ್ಬರು ಪಕ್ಷೇತರರು ಸೇರ್ಪಡೆಯಾಗಿದ್ದು, ಸಂಖ್ಯಾ ಬಲ 47 ಇತ್ತು. ಮೇಯರ್ ಆಯ್ಕೆಗೆ ಶುಕ್ರವಾರ ಪ್ರಹ್ಲಾದ್‌ ಜೋಷಿ ನೇತೃತ್ವದಲ್ಲಿ ಸಭೆ ಕೂಡ ನಡೆದಿತ್ತು.

  • ನಾಳೆ ನಡೆಯಬೇಕಿದ್ದ ಕಲಬುರಗಿ ಮೇಯರ್ ಎಲೆಕ್ಷನ್ ಮುಂದೂಡಿಕೆ

    ನಾಳೆ ನಡೆಯಬೇಕಿದ್ದ ಕಲಬುರಗಿ ಮೇಯರ್ ಎಲೆಕ್ಷನ್ ಮುಂದೂಡಿಕೆ

    ಕಲಬುರಗಿ: ನಾಳೆ ನಡೆಯಬೇಕಿದ್ದ ಕಲಬುರಗಿ ಪಾಲಿಕೆ ಮೇಯರ್ ಚುನಾವಣೆಯನ್ನು ಹೈಕೋರ್ಟ್ ಪೀಠ ಮುಂದೂಡಿದೆ.

    ಮೇಯರ್ ಚುನಾವಣೆ ಮೀಸಲಾತಿ ಮತ್ತು ಐವರು ಎಂಎಲ್‍ಸಿಗಳ ಹೆಸರು ಸೇರ್ಪಡೆ ವಿರೋಧಿಸಿದ್ದ ಕಾಂಗ್ರೆಸ್, ಮೇಯರ್ ಚುನಾವಣೆಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‍ನ ಕಲಬುರಗಿ ಪೀಠ, ಈ ಹಿಂದಿನ ಮತ ಪಟ್ಟಿ ಅನುಸಾರವೇ ಮೇಯರ್ ಚುನಾವಣೆ ನಡೆಸಲು ಆದೇಶ ನೀಡಿದೆ. ಇದನ್ನೂ ಓದಿ: ಥಿಯೇಟರ್ ಹೌಸ್‍ಫುಲ್‍ಗೆ ಅನುಮತಿ – N95 ಮಾಸ್ಕ್ ಕಡ್ಡಾಯ, ಇಲ್ಲದಿದ್ದರೆ ನೋ ಎಂಟ್ರಿ

    ಒಮ್ಮೆ ಮತದಾರರ ಪಟ್ಟಿಯನ್ನ ಸಿದ್ಧಪಡಿಸಿದ ಮೇಲೆ ಬದಲಾವಣೆ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹಳೆಯ ಮತಪಟ್ಟಿ ಅನುಸಾರ ಮುಂದಿನ ಒಂದು ತಿಂಗಳ ಒಳಗೆ ಚುನಾವಣೆ ನಡೆಸುವಂತೆ ಆದೇಶ ನೀಡಿದೆ. ಈ ಬೆಳವಣಿಗೆ ಬಿಜೆಪಿಗೆ ಹಿನ್ನಡೆ ಆದಂತಾಗಿದೆ. ಹೈಕೋರ್ಟ್ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸಿದೆ. ಸಂಭ್ರಮಾಚರಣೆ ಮಾಡಿದೆ.

  • ಆಪ್‌ಗೆ ಶಾಕ್‌ – ಚಂಡೀಗಢದಲ್ಲಿ 12 ಸ್ಥಾನ ಗೆದ್ದ ಬಿಜೆಪಿಗೆ ಮೇಯರ್‌ ಪಟ್ಟ

    ಆಪ್‌ಗೆ ಶಾಕ್‌ – ಚಂಡೀಗಢದಲ್ಲಿ 12 ಸ್ಥಾನ ಗೆದ್ದ ಬಿಜೆಪಿಗೆ ಮೇಯರ್‌ ಪಟ್ಟ

    – ಮೇಯರ್‌ ಚುನಾವಣೆಯಲ್ಲಿ ಭಾರೀ ಹೈಡ್ರಾಮಾ
    – ತಲಾ 14 ಮತಗಳನ್ನು ಪಡೆದಿದ್ದ ಬಿಜೆಪಿ, ಆಪ್‌ ಅಭ್ಯರ್ಥಿಗಳು

    ಚಂಡೀಗಢ: ಪಾಲಿಕೆಯ ಒಟ್ಟು 35 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಚಂಡೀಗಢ ಮೇಯರ್‌ ಚುನಾವಣೆಯ ವೇಳೆ ಮ್ಯಾಜಿಕ್‌ ಮಾಡಿದ್ದು ಮತ್ತೆ ಅಧಿಕಾರದ ಗದ್ದುಗೆ ಏರಿದೆ.

    ಇಂದು ನಡೆದ ಮೇಯರ್‌ ಚುನಾವಣೆಯಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಆಪ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ತಲಾ 14 ಮತಗಳನ್ನು ಪಡೆದಿದ್ದರು. ಆದರೆ ಕೊನೆಯಲ್ಲಿ ಆಪ್‌ ಪರ ಚಲಾವಣೆಯಾದ ಮತ ಅಸಿಂಧು ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಬಿಜೆಪಿಯ ಕೌನ್ಸಿಲರ್ ಸರಬ್ಜಿತ್ ಕೌರ್ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಮೇಯರ್‌ ಅಲ್ಲದೇ ಬಿಜೆಪಿಯ ದಲೀಪ್‌ ಶರ್ಮಾ ಸೀನಿಯರ್‌ ಡೆಪ್ಯೂಟಿ ಮೇಯರ್‌, ಅನೂಪ್‌ ಗುಪ್ತಾ ಡೆಪ್ಯೂಟಿ ಮೇಯರ್‌ ಆಗಿ ಆಯ್ಕೆ ಆಗಿದ್ದಾರೆ.

    ಪಾಲಿಕೆಯ 35 ವಾರ್ಡ್‌ಗಳಿಗೆ ಗಳಿಗೆ ನಡೆದ ಚುನಾವಣೆ ಫಲಿತಾಂಶ ಡಿಸೆಂಬರ್ 27 ರಂದು ಪ್ರಕಟವಾಗಿತ್ತು. ಅದರಲ್ಲಿ ಆಮ್ ಆದ್ಮಿ ಪಕ್ಷ 14 ಮತ್ತು ಬಿಜೆಪಿ 12 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಎಂಟು ಮತ್ತು ಶಿರೋಮಣಿ ಅಕಾಲಿ ದಳ ಒಂದು ಸ್ಥಾನ ಪಡೆದಿತ್ತು. ಫಲಿತಾಂಶದ ಬಳಿಕ ಕಾಂಗ್ರೆಸ್ ಕೌನ್ಸಿಲರ್ ಹರ್ಪೀತ್ ಕೌರ್ ಬಬ್ಲಾ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

    35 ಕಾನ್ಸಿಲರ್ ಗಳಲ್ಲದೆ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಪದನಿಮಿತ್ತ ಸದಸ್ಯರಾಗಿರುವ ಚಂಡೀಗಢದ ಬಿಜೆಪಿ ಸಂಸದೆ ಕಿರಣ್‌ ಖೇರ್‌ ಮತದಾನದ ಹಕ್ಕನ್ನು ಹೊಂದಿದ್ದರು.

    ಇಂದು ಏನಾಯ್ತು?
    ಇಂದು ನಡೆದ ಮೇಯರ್‌ ಚುನಾವಣೆಯ ಒಟ್ಟು 36 ಮತಗಳಲ್ಲಿ 28 ಮತ ಮಾತ್ರ ಚಲಾವಣೆಯಾಗಿತ್ತು. ಏಳು ಕಾಂಗ್ರೆಸ್ ಕೌನ್ಸಿಲರ್ ಗಳು ಮತ್ತು ಶಿರೋಮಣಿ ಅಕಾಲಿದಳದ ಏಕೈಕ ಕೌನ್ಸಿಲರ್ ಗೈರಾಗಿದ್ದರು. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಶಿವರಾಜ್‌ ಕುಮಾರ್‌

    ಬಿಜೆಪಿ ಮೇಯರ್‌ ಅಭ್ಯರ್ಥಿ ಪರವಾಗಿ ಸಂಸದೆ ಕಿರಣ್‌ ಖೇರ್‌ ಮತದಾನ ಮಾಡಿದ್ದರಿಂದ 14 ಮತಗಳು ಬಿದ್ದಿತ್ತು. ಒಂದು ವೋಟ್‌ ಅಂಸಿಂಧುಗೊಂಡಿದ್ದರಿಂದ ಆಪ್‌ ಅಭ್ಯರ್ಥಿ ಕತ್ಯಾಲ್ 13 ಮತಗಳನ್ನು ಮಾತ್ರ ಪಡೆದರು. ಫಲಿತಾಂಶ ಪ್ರಕಟವಾದ ನಂತರ ಎಎಪಿ ಸದಸ್ಯರು ಗದ್ದಲ ನಡೆಸಿದ್ದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಇದನ್ನೂ ಓದಿ: ಪ್ರೋಮೋ ಶೇರ್ ಮಾಡಿ ಸಚಿನ್ ತಂಡವನ್ನು ಕ್ಷಮೆಯಾಚಿಸಿದ ಬಿಗ್ ಬಿ

    ಪಂಜಾಬ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಅಕಾಲಿ ದಳ ಮೇಯರ್‌ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬಹುದು ಎಂಬ ಪ್ರಶ್ನೆ ಎದ್ದಿತ್ತು. ಆದರೆ ಎರಡೂ ಪಕ್ಷಗಳು ಯಾರ ಪರವಾಗಿಯೂ ಬೆಂಬಲ ನೀಡದೇ ಚುನಾವಣೆಯಿಂದ ಹಿಂದೆ ಸರಿದಿತ್ತು. ಒಂದು ವೇಳೆ ಬಿಜೆಪಿ ಅಥವಾ ಆಪ್‌ಗೆ ಬೆಂಬಲ ನೀಡಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಟೀಕೆ ಎದುರಾಗಬಹುದು ಎಂಬ ಕಾರಣಕ್ಕೆ ಚುನಾವಣೆಯಿಂದಲೇ ದೂರ ಉಳಿದಿದ್ದವು.

  • ಕಲಬುರಗಿ ಪಾಲಿಕೆ ಮೇಯರ್ ಫೈಟ್- ಬಿಜೆಪಿ ಸೇರಿದ ಪಕ್ಷೇತರ ಸದಸ್ಯ

    ಕಲಬುರಗಿ ಪಾಲಿಕೆ ಮೇಯರ್ ಫೈಟ್- ಬಿಜೆಪಿ ಸೇರಿದ ಪಕ್ಷೇತರ ಸದಸ್ಯ

    – 24ಕ್ಕೆ ಏರಿದ ಬಿಜೆಪಿ ಸ್ಥಾನಗಳ ಬಲ

    ಕಲಬುರಗಿ: ಇತ್ತೀಚೆಗೆ ನಡೆದ ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ನಗರದ ವಾರ್ಡ್ ನಂ.36 ರಿಂದ ಸ್ಪರ್ಧಿಸಿ, ಗೆದ್ದ ಬಿಜೆಪಿ ಬಂಡಾಯ ಅಭ್ಯರ್ಥಿ ಶಂಭುಲಿಂಗ ಬಳಬಟ್ಟಿ ಅವರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದಾರೆ.

    ಬೆಂಗಳೂರಿನಲ್ಲಿಂದು ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವುರ, ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ರದ್ದೇವಾಡಿ ನೇತೃತ್ವದಲ್ಲಿ ಬಿಜೆಪಿ ಸೇರಿದರು.

    ಒಟ್ಟು 55 ಸದಸ್ಯ ಬಲದ ಕಲಬುರಗಿ ಮಹಾನಗರಪಾಲಿಕೆಯಲ್ಲಿ ಬಿಜೆಪಿ 23 ಸ್ಥಾನಗಳನ್ನು ಹೊಂದಿದ್ದು, ಈಗ ಬಳಟ್ಟಿ ಅವರ ಸೇರ್ಪಡೆಯಿಂದಾಗಿ ಈ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಮೇಯರ್ ಚುನಾವಣೆಯಲ್ಲಿ ಗೆಲ್ಲಬೇಕಾದರೆ 32 ಮ್ಯಾಜಿಕ್ ನಂಬರ್ ಆಗಿದ್ದು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದತೆ ಬಿಜೆಪಿ ಬಲ 30ಕ್ಕೆ ಏರಿದೆ. ಇದನ್ನೂ ಓದಿ: ಕಾರ್ಯಕರ್ತರನ್ನು ಮನೆ ಬಾಗಿಲಿಗೆ ಬರಮಾಡಿಕೊಳ್ಳಲಿದ್ದಾರೆ ಹೆಚ್‍ಡಿಕೆ

    ಇತ್ತ ಕಾಂಗ್ರೆಸ್ 27 ಸದಸ್ಯರು ಹೊಂದಿದ್ದು, ಶಾಸಕ, ಓರ್ವ ರಾಜ್ಯಸಭಾ ಸದಸ್ಯ ಸೇರಿದರೆ 29 ಆಗಲಿದೆ. 4 ಸ್ಥಾನ ಪಡೆದು ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್ ಒಲವಿನ ಮೇಲೆ ಯಾರು ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಎಂಬುದು ತಿಳಿಯಲಿದೆ.

    ಸೆಪ್ಟೆಂಬರ್ 20ರಂದು ವಿಧಾನಸಭೆಯಲ್ಲಿ ಮೇಯರ್ ಚುನಾವಣೆಯ ಬಗ್ಗೆ ನಿರ್ಣಯ ಮಂಡನೆಯಾಗಿ ಪಾಸ್ ಆಗಿದ್ದು, ಇಲ್ಲಿಯವರೆಗೂ ಮೇಯರ್ ಚುನಾವಣೆ ನಡೆಸಲು ಸರ್ಕಾರ ದಿನಾಂಕ ನಿಗದಿ ಮಾಡಿಲ್ಲ. ಹೀಗಾಗಿ ತೆರೆಮರೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಮೇಯರ್ ಚುನಾವಣೆ ದಿನಾಂಕ ಘೋಷಣೆ ಬಳಿಕ ಯಾರಿಗೆ ಬೆಂಬಲ ನೀಡಬೇಕು ಎನ್ನುವುದರ ಬಗ್ಗೆ ಜೆಡಿಎಸ್ ನಿರ್ಧಾರ ಮಾಡಲಿದೆ.

    ಆಯುಕ್ತರ ಸ್ಪಷ್ಟನೆ:
    ಕಲಬುರಗಿ ಸೇರಿದಂತೆ ರಾಜ್ಯದ ಮೂರು ಮಹಾನಗರಪಾಲಿಕೆಗಳಿಗೆ ಚುನಾವಣೆ ನಡೆದು ಎರಡು ವಾರಗಳು ಗತಿಸಿದರೂ ಮೇಯರ್ ಚುನಾವಣೆಯ ಅಧಿಸೂಚನೆ ಹೊರಡಿಸಲಾಗಿಲ್ಲ. ಈ ಬಗ್ಗೆ ಕಲಬುರಗಿ ಪಾಲಿಕೆಯ ಆಯುಕ್ತ ಸ್ನೇಹಲ್ ಲೋಖಂಡೆ ಅವರೊಂದಿಗೆ ಮಾತನಾಡಿದಾಗ ಚುನಾವಣೆ ಅಧಿಸೂಚನೆ ಹೊರಡಿಸಿರಬಹದು. ಆದರೆ ಅದು ನಮ್ಮ ಕೈ ಸೇರಿಲ್ಲ, ಕೈ ಸೇರಿದ ಕೂಡಲೇ ದಿನಾಂಕ ಪ್ರಕಟಿಸುವುದಾಗಿ ಸ್ಪಷ್ಟಪಡಿಸಿದರು. ಒಟ್ಟಿನಲ್ಲಿ ಪಾಲಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ತೀವ್ರ ಪೈಪೋಟಿ ನಡೆಸಿವೆ.

  • ಸೋಮವಾರ ತೆರೆಬೀಳುತ್ತಾ ಕಲಬುರಗಿ ಮಹಾನಗರ ಪಾಲಿಕೆ ಮೈತ್ರಿ ಸರ್ಕಸ್?

    ಸೋಮವಾರ ತೆರೆಬೀಳುತ್ತಾ ಕಲಬುರಗಿ ಮಹಾನಗರ ಪಾಲಿಕೆ ಮೈತ್ರಿ ಸರ್ಕಸ್?

    ಕಲಬುರಗಿ: ತೀವ್ರ ಕೂತುಹಲ ಕೆರಳಿಸಿರುವ ಕಲಬುರಗಿ ಮಹಾನಗರ ಪಾಲಿಕೆ ಪಟ್ಟಕ್ಕೆ ಇದೀಗ ಕೈ-ಬಿಜೆಪಿ ನಾಯಕರು ಕಣ್ಣಿಟ್ಟಿದ್ದು, ಕಿಂಗ್ ಮೇಕರ್ ಜೆಡಿಎಸ್ ಇಂದು ಮೈತ್ರಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ ಎರಡು ರಾಷ್ಟ್ರೀಯ ಪಕ್ಷಗಳ ಚಿತ್ತ ಇದೀಗ ಜೆಡಿಎಸ್ ನತ್ತ ಮುಖ ಮಾಡಿವೆ.

    ಕಾಂಗ್ರೆಸ್ ಭದ್ರಕೋಟೆ ಕಲಬುರಗಿಯ ಮಹಾನಗರ ಪಾಲಿಕೆ ಚುಜಾವಣೆ ಫಲಿತಾಂಶ ಅತಂತ್ರ ಆಗುತ್ತಿದ್ದಂತೆ, ಮೇಯರ್ ಪಟ್ಟ ಪಡೆಯಲು ಕೇಸರಿ ಹಾಗೂ ಕೈ ನಾಯಕರಿಬ್ಬರೂ ಜೆಡಿಎಸ್ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ. ಹೀಗಾಗಿ ಕಳೆದ ಒಂದು ವಾರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಮನವೊಲಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಿವೆ. ಆದರೆ ಎರಡು ಪಕ್ಷಗಳ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಿರುವ ಜೆಡಿಎಸ್ ಮಾತ್ರ ಇಲ್ಲಿಯವರೆಗೆ ಮೈತ್ರಿ ಬಗ್ಗೆ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಎಲ್ಲ ಶಾಸಕರ ಅಭಿಪ್ರಾಯ ಪಡೆದು ಕಲಬುರಗಿಯಲ್ಲಿ ಯಾವ ಪಕ್ಷದ ಜೊತೆ ಮೈತ್ರಿ ಎಂಬುದು ಫೈನಲ್ ಮಾಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‍ನಲ್ಲಿ ಶುರುವಾಯ್ತಾ ಜಾತಿ ರಾಜಕಾರಣದ ಮತ್ತೊಂದು ಸಮರ..?

    ಇತ್ತ ಜೆಡಿಎಸ್ ನಮ್ಮ ಪಕ್ಷಕ್ಕೆ ಬೆಂಬಲ ಕೊಡುತ್ತೆ ಜಾತ್ಯಾತೀತತೆ ಎತ್ತಿ ಹಿಡಿಯುತ್ತೆ ಅಂತಾ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರೆ, ಜೆಡಿಎಸ್ ಕಾಂಗ್ರೆಸ್ ಜೊತೆ ಅಲ್ಲ ನಮ್ಮ ಜೊತೆನೇ ಮೈತ್ರಿ ಫಿಕ್ಸ್ ಎಂದು ಬಿಜೆಪಿ ಕಲಬುರಗಿ ದಕ್ಷಿಣ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.