Tag: Mayawathi

  • ಲೋಕಸಭೆ ಟಿಕೆಟ್ ನೀಡಲು 5 ಕೋಟಿ ರೂ. ಕೇಳಿದ್ರು ಮಾಯಾವತಿ- ಮಾಜಿ ಎಂಎಲ್‍ಸಿ ಆರೋಪ

    ಲೋಕಸಭೆ ಟಿಕೆಟ್ ನೀಡಲು 5 ಕೋಟಿ ರೂ. ಕೇಳಿದ್ರು ಮಾಯಾವತಿ- ಮಾಜಿ ಎಂಎಲ್‍ಸಿ ಆರೋಪ

    ಲಕ್ನೋ: ಅಲಿಗಢ್ ಕ್ಷೇತ್ರದಿಂದ ನನಗೆ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಲು ಬಹುಜನ್ ಸಮಾಜ್ ಪಕ್ಷ (ಬಿಎಸ್‍ಪಿ) ಅಧ್ಯಕ್ಷೆ ಮಾಯಾವತಿ 5 ಕೋಟಿ ರೂ. ಕೇಳಿದ್ರು ಎಂದು ಮಾಜಿ ಎಂಎಲ್‍ಸಿ ಮುಕುಲ್ ಉಪಾಧ್ಯಾಯ ಆರೋಪಿಸಿದ್ದಾರೆ.

    ಬಿಎಸ್‍ಪಿ ಇಂದ ಹೊರಬಂದ ನಂತರ ಮುಕುಲ್ ಉಪಾಧ್ಯಾಯ, ಮಾಯಾವತಿ ಅವರು ಲೋಕಸಭೆ ಚುನಾವಣೆ ಟಿಕೆಟ್ ನೀಡಲು ನನ್ನ ಬಳಿ ನಾಲ್ಕು ಬಾರಿ 5 ಕೋಟಿ ರೂ. ಕೇಳಿದ್ರು. ಇದಕ್ಕೆ ನಿರಾಕರಿಸಿದ್ದಕ್ಕೆ ಅಲಿಗಢ್ ಕ್ಷೇತ್ರದಿಂದ ಸ್ಪರ್ಧಿಸಲು ನನ್ನ ಸಹೋದರ ರಾಮ್‍ವೀರ್ ಉಪಧ್ಯಯನ ಪತ್ನಿ ಸೀಮಾರಿಗೆ ಟಿಕೆಟ್ ನೀಡಿದ್ದಾರೆ. ರಾಜಕಾರಣಕ್ಕಾಗಿ ಸಹೋದರನೇ ನನ್ನ ವಿರುದ್ಧ ನಿಂತಿದ್ದಾನೆ ಎಂದು ಬಿಎಸ್‍ಪಿ ನಾಯಕರ ವಿರುದ್ಧ ಮುಕುಲ್ ಉಪಾಧ್ಯಾಯ ಕಿಡಿಕಾರಿದ್ದಾರೆ.

    ಅಷ್ಟೇ ಅಲ್ಲದೆ ಬಿಎಸ್‍ಪಿಯ ಸಂಯೋಜಕರು ಕೆಲವು ದಿನಗಳ ಹಿಂದೆಯಷ್ಟೆ ತನ್ನ ಬಳಿ ಅಲಿಗಢ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ನಿಧಿಗೆಂದು 5 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂದು ಹೇಳಿದ್ದಾರೆ.

    ಮುಕುಲ್ ಅವರ ಈ ಆರೋಪವನ್ನು ಬಿಎಸ್‍ಪಿ ತಳ್ಳಿಹಾಕಿದೆ. ಬಿಜೆಪಿಯನ್ನು ಮೆಚ್ಚಿಸಲು ಮುಕುಲ್ ಪ್ರಯತ್ನಿಸುತ್ತಿದ್ದರು ಅದಕ್ಕಾಗಿ ಪಕ್ಷದಿಂದ ಉಚ್ಛಾಟಿಸಿದ್ದೇವೆ. ಮುಕುಲ್ ಪಕ್ಷದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೆಲಸವಿಲ್ಲದೆ ಅರ್ಥವಿಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ಆಗ್ರಾ- ಅಲಿಗಢ್ ವಿಭಾಗದ ಬಿಎಸ್‍ಪಿ ಪಕ್ಷದ ವಲಯ ಸಂಯೋಜಕ ಮುಖ್ಯಸ್ಥರಾದ ಸುನೀಲ್ ಚಿತ್ತೋರ್ ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಒತ್ತಡಕ್ಕೆ ಮಣಿದು ರಾಜೀನಾಮೆ ಕೊಟ್ರಾ ಮಹೇಶ್?

    ಒತ್ತಡಕ್ಕೆ ಮಣಿದು ರಾಜೀನಾಮೆ ಕೊಟ್ರಾ ಮಹೇಶ್?

    ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸ್ಥಾನಕ್ಕೆ ಎನ್ ಮಹೇಶ್ ಅವರು ಈಗಾಗಲೇ ರಾಜೀನಾಮೆ ನೀಡಿದ್ದು, ಇವರ ಹಠಾತ್ ರಾಜೀನಾಮೆಯ ಅಸಲಿ ಕಾರಣ ಇದೀಗ ಪಬ್ಲಿಕ್ ಟಿವಿಗೆ ದೊರೆತಿದೆ.

    ಮಹೇಶ್ ರಾಜೀನಾಮೆಗೆ ಕಳೆದೊಂದು ವಾರದಿಂದ ತೆರೆಮರೆಯಲ್ಲಿ ಕಸರತ್ತುಗಳು ನಡೆದಿದ್ದವು. ಈ ಮೂಲಕ ಮಾಯಾವತಿ ಅವರು ಲೋಕಸಭಾ ಚುನಾವಣಾ ಸಂದರ್ಭದ ಲಾಭ ಪಡೆಯಲು ಸಂಚು ರೂಪಿಸಿದ್ದಾರಂತೆ. ಎಲ್ಲಾ ರಾಜ್ಯಗಳಲ್ಲೂ ಬಿಎಸ್‍ಪಿ ಅಭ್ಯರ್ಥಿಗಳನ್ನು ಲೋಕಸಭಾ ಕಣಕ್ಕಿಳಿಸಲು ತಯಾರಿ ನಡೆಸಲಾಗಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಕೊಳ್ಳೇಗಾಲ ಶಾಸಕ ಮಹೇಶ್ ಅವರಿಂದ ರಾಜೀನಾಮೆ ಕೊಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಮಹೇಶ್ ರಾಜೀನಾಮೆ ಬೆನ್ನಲ್ಲೇ ಕೋಡಿ ಶ್ರೀ ಭವಿಷ್ಯ

    ಬಿಎಸ್‍ಪಿ ನಾಯಕಿ ಮಾಯಾವತಿ ಅವರು ಮಹೇಶ್ ಗೆ ರಾಜೀನಾಮೆ ಕೊಟ್ಟು ಹೊರಬನ್ನಿ ಎಂದು ವಾರದ ಹಿಂದೆಯೇ ಸೂಚಿಸಿದ್ದರಂತೆ. ಆದ್ರೆ ಮಹೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಹಿಂದೇಟು ಹಾಕಿದ್ದರು. ಮಹೇಶ್ ಅವರ ಈ ನಡೆ ಕಂಡಿದ್ದ ಮಾಯಾವತಿ, ನೇರವಾಗಿ ಸಿಎಂ ಕುಮಾರಸ್ವಾಮಿ ಜೊತೆ ಮಾತನಾಡಿದ್ದರು. ಮಹೇಶ್‍ರಿಂದ ರಾಜೀನಾಮೆ ಪಡೆಯಿರಿ ಇಲ್ಲವೆ ಸಂಪುಟದಿಂದ ಕೈಬಿಡಿ ಎಂದಿದ್ದರು. ಇದನ್ನೂ ಓದಿ: ಸಚಿವ ಮಹೇಶ್ ರಾಜೀನಾಮೆ – ಎಲ್ಲವನ್ನೂ ಬಹಿರಂಗವಾಗಿ ಹೇಳೋಕಾಗಲ್ಲ: ಸಿಎಂ ಎಚ್‍ಡಿಕೆ

    ಮಾಯಾವತಿ ಜೊತೆಗಿನ ಮಾತುಕತೆಯನ್ನು ವಾರದ ಹಿಂದೆಯೇ ಸಿಎಂ ಅವರು ಮಹೇಶ್‍ಗೆ ತಿಳಿಸಿದ್ದರು. ಹೀಗಾಗಿ ಸಿಎಂ ಎಚ್‍ಡಿಕೆ ಹಾಗೂ ಮಾಯಾವತಿ ಒತ್ತಡಕ್ಕೆ ಸಿಲುಕಿ ಮಹೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಸಚಿವ ಎನ್.ಮಹೇಶ್ ರಾಜೀನಾಮೆ ನೀಡಲು ಕಾರಣ ಏನು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ಬಂಗಲೆ ಖಾಲಿ ಮಾಡಲು ಸಾಧ್ಯವಿಲ್ಲ, ಇದು ಸ್ಮಾರಕ: ಮಾಯಾವತಿ

    ಸರ್ಕಾರಿ ಬಂಗಲೆ ಖಾಲಿ ಮಾಡಲು ಸಾಧ್ಯವಿಲ್ಲ, ಇದು ಸ್ಮಾರಕ: ಮಾಯಾವತಿ

    ಲಕ್ನೋ: ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವ ಸುಪ್ರೀಂ ಕೋರ್ಟ್ ಆದೇಶವನ್ನು ಮಾಜಿ ಮುಖ್ಯಮಂತ್ರಿ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ತಳ್ಳಿಹಾಕಿದ್ದಾರೆ.

    ನಗರದ 5 ಎಕರೆ ವ್ಯಾಪ್ತಿಯಲ್ಲಿ, 10 ಬೆಡ್ ರೂಮ್ ಗಳನ್ನು ಒಳಗೊಂಡ ಬಂಗಲೆಯಾಗಿದ್ದು, ರಾಜಸ್ಥಾನದ ಮರಳುಗಲ್ಲು ಮತ್ತು ಗುಲಾಬಿ ಅಮೃತಶಿಲೆಯನ್ನು ಬಳಸಿ ಕಟ್ಟಲಾಗಿದೆ. ಇದು ಸ್ಮಾರಕವಾಗಿದ್ದು ಈ ವಿಚಾರದಲ್ಲಿ ಹೋರಾಟ ಮಾಡುತ್ತೇನೆ ಎಂದು ಮಾಯಾವತಿ ಹೇಳಿದ್ದಾರೆ.

    ಬಂಗಲೆಯ ಹೊರಗೆ ಶ್ರೀ ಕಾನ್ಶಿ ರಾಮ್ಜಿ ಯಾದ್ಗಾರ್ ವಿಶ್ರಾಂ ಸ್ಥಳ ಎಂಬ ಹೊಸ ಬೋರ್ಡ್ ಅನ್ನು ಹಾಕಲಾಗಿದೆ. ಬಿ ಎಸ್ ಪಿ ಸಂಸ್ಥಾಪಕರು ಮಾಯಾವತಿಯ ಗುರುಗಳು ಕಾನ್ಶಿ ರಾಮ್. ಹೊಸ ಬೋರ್ಡ್ ಹಾಕಿದ ಮರುದಿನವೇ ಮಾಯಾವತಿ ಸಹಾಯಕ ಸತೀಶ್ ಚಂದ್ರ ಮಿಶ್ರ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಬಂಗಲೆಗೆ ಸಂಬಂಧಪಟ್ಟ ದಾಖಲೆಯನ್ನು ತೋರಿಸಿದ್ದಾರೆ.

    2011 ಜನವರಿ 13, ರಂದು ಬಂಗಲೆಯನ್ನು ಕಾನ್ಶಿ ರಾಮ್ ಸ್ಮಾರಕ ಎಂದು ಘೋಷಿಸಲಾಗಿದೆ. ಜೀವನ ಪರ್ಯಂತ ಮಾಯಾವತಿಯವರು ಈ ಬಂಗಲೆಯಲ್ಲಿ ಇರಬಹುದು. ಬಂಗಲೆಯ ಎರಡು ರೂಮ್ ಗಳನ್ನು ಉಪಯೋಗಿಸತ್ತಾರೆ ಹಾಗೂ ಬಂಗಲೆಯ ಉಸ್ತುವಾರಿಯಾಗಿರುತ್ತಾರೆ ಎಂದು ಸರ್ಕಾರ ಹೊರಡಿಸಿದ್ದ ಆದೇಶದ ಪ್ರತಿಯನ್ನು ಯೋಗಿಯವರಿಗೆ ತೋರಿಸಿದ್ದಾರೆ.

    ಮಾಯಾವತಿಯವರು ಬಂಗಲೆಯಲ್ಲಿ ಎರಡು ಸಣ್ಣ ರೂಮ್ ಗಳನ್ನು ಮಾತ್ರ ಬಳಸುತ್ತಿದ್ದಾರೆ. ಉಳಿದ ರೂಮ್ ಗಳಲ್ಲಿ ಕಾನ್ಶಿ ರಾಮ್ ಲೈಬ್ರರಿ ಮತ್ತು ಭಿತ್ತಿ ಚಿತ್ರಗಳು ಇವೆ. ಹಾಗಾಗಿ ಬಂಗಲೆಯನ್ನು ಸಂಪೂರ್ಣ ಸ್ಮಾರಕವನ್ನಾಗಿ ಮಾಡವಂತೆ ಸರ್ಕಾರ ಪುನಃ ಆದೇಶವನ್ನು ಹೊರಡಿಸಿದೆ ಎಂದು ಭೇಟಿಯ ಬಳಿಕ ಮಿಶ್ರ ಅವರು ತಿಳಿಸಿದ್ದಾರೆ.

    ಬಂಗಲೆಯನ್ನು ಖಾಲಿ ಮಾಡಿದರು ಎಂದೆಂದಿಗೂ ಈ ಬಂಗಲೆ ಸ್ಮಾರಕವಾಗಿಯೇ ಇರಬೇಕು ಎಂದು ಮಾಯಾವತಿಯವರು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ ಎಂದು ಬಿ ಎಸ್ ಪಿ ತಿಳಿಸಿದೆ.

    4 ಮಾಜಿ ಮುಖ್ಯಮಂತ್ರಿಗಳಿಗೆ ಯುಪಿ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸರ್ಕಾರಿ ಬಂಗಲೆಯನ್ನು 15 ದಿನದೊಳಗಾಗಿ ಖಾಲಿ ಮಾಡುವಂತೆ ನೋಟೀಸ್ ಕೊಟ್ಟಿತ್ತು. ಕುಟುಂಬ ಮತ್ತು ಭದ್ರತೆಯ ಕಾರಣದಿಂದ ಸದ್ಯಕ್ಕೆ ಖಾಲಿ ಮಾಡಲು ಆಗುವುದಿಲ್ಲ 2 ವರ್ಷ ಕಾಲಾವಕಾಶವನ್ನು ಅಖಿಲೇಶ್ ಯಾದವ್ ಕೇಳಿದ್ದಾರೆ ಎನ್ನಲಾಗಿದೆ.