Tag: Mayanti Langer

  • AsiaCup 2023: ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಬ್ಯೂಟಿಫುಲ್‌ ನಿರೂಪಕಿಯರು ಇವರೇ

    AsiaCup 2023: ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಬ್ಯೂಟಿಫುಲ್‌ ನಿರೂಪಕಿಯರು ಇವರೇ

    ಮುಂಬೈ: ಇದೇ ಆಗಸ್ಟ್‌ 30 ರಿಂದ ಆರಂಭವಾಗಲಿರುವ ಏಕದಿನ ಏಷ್ಯಾಕಪ್‌ (AsiaCup) ಟೂರ್ನಿಗೆ ನಿನ್ನೆಯಷ್ಟೇ ಭಾರತ ಬಲಿಷ್ಠ ತಂಡವನ್ನ ಪ್ರಕಟಿಸಿದೆ. ಸೆಪ್ಟೆಂಬರ್‌ 17ರಂದು ಫೈನಲ್‌ ಪಂದ್ಯ ನಡೆಯಲಿದೆ. ಆದರೆ ಈ ಟೂರ್ನಿಗೆ ಮತ್ತಷ್ಟು ರಂಗು ಕೊಡಲು ನಿರೂಪಕರು ಸಜ್ಜಾಗಿದ್ದು, ಕಾರ್ಯಕ್ರಮ ನಿರೂಪಣೆಗೆ ಸುಂದರ ನಿರೂಪಕಿಯರನ್ನೂ ಆಯ್ಕೆ ಮಾಡಿದೆ. ಅವರ ಪಟ್ಟಿ ಹೀಗಿದೆ.

    ಭಾರತದ ಪ್ರಸಿದ್ಧ ಟಿವಿ ನಿರೂಪಕಿ ಮಾಯಂತಿ ಲ್ಯಾಂಗರ್ (Mayanti Langer) ಏಷ್ಯಾಕಪ್‌ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಟಾರ್​ ಸ್ಪೋರ್ಟ್ಸ್​​​ನಲ್ಲಿ 2023ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಅಭಿಮಾನಿಗಳನ್ನು ತಮ್ಮ ಅಂದ-ಚಂದದ ಮಾತಿನ ಮೂಲಕ ರಂಜಿಸಲಿದ್ದಾರೆ. ಕರ್ನಾಟಕದ ರೋಜರ್ ಬಿನ್ನಿ ಅವರ ಮಗ, ಮಾಜಿ ಕ್ರಿಕೆಟಿಗನೂ ಆಗಿರುವ ಸ್ಟುವರ್ಟ್​ ಬಿನ್ನಿ ಅವರ ಪತ್ನಿ. ಮಾಯಂತಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದು, ಇನ್​ಸ್ಟಾಗ್ರಾಂನಲ್ಲಿ (Instagram) 7.5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಅನ್ನು ಹೊಂದಿದ್ದಾರೆ. ಇದನ್ನೂ ಓದಿ: Asia Cup 2023: ಭಾರತ ತಂಡ ಪ್ರಕಟ – ಕೆ.ಎಲ್‌.ರಾಹುಲ್‌, ಅಯ್ಯರ್‌ ವಾಪಸ್‌

    ಪಾಕಿಸ್ತಾನಿ ಟಿವಿ ನಿರೂಪಕಿ ಜೈನಾಬ್ ಅಬ್ಬಾಸ್ ಕೂಡ ಸ್ಟಾರ್ ಸ್ಫೋಟ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೈನಾಬ್ ಐಸಿಸಿ, ಪಿಸಿಬಿ, ಸ್ಕೈ ಸ್ಪೋರ್ಟ್ಸ್, ಸೋನಿ, ಸ್ಟಾರ್ ಸ್ಪೋರ್ಟ್ಸ್ ಸೇರಿದಂತೆ ಹಲವು ಕಡೆ ನಿರೂಪಕಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಜೈನಾಬ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದು, ಇನ್ಸ್ಟಾಗ್ರಾಮ್‌ನಲ್ಲಿ 8.5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ. ಈ ಬಾರಿ ಏಷ್ಯಾಕಪ್‌ ಮೂಲಕ ಅಭಿಮಾನಿಗಳನ್ನು ಮತ್ತಷ್ಟು ರಂಜಿಸಲಿದ್ದಾರೆ.

    ಭಾರತದ ನಟಿಯೂ ಆಗಿರುವ ಜೈತಿ ಖೇರಾ (Jaiti Khera) ಕೋಟಾ ಫ್ಯಾಕ್ಟರಿ ಸೀಸನ್ 2 ಮತ್ತು ದೆಹಲಿ ಕ್ರೈಮ್ ಸೀಸನ್-1ರಲ್ಲಿ ಕಾಣಿಸಿಕೊಂಡಿದ್ದಾರೆ. ಜೈತಿ ಐಪಿಎಲ್‌ನಲ್ಲಿ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ಆಗಾಗ್ಗೆ ತಮ್ಮ ಅಭಿಮಾನಿಗಳಿಗಾಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡು ರಂಜಿಸುತ್ತಾರೆ. ಇದನ್ನೂ ಓದಿ: ಬ್ಯಾಕಪ್‌ ಪಟ್ಟಿ ಸೇರಿದ ಟೀಂ ಇಂಡಿಯಾ ಸ್ಟಾರ್‌ – ವಿಶ್ವಕಪ್‌ ಆಡುವ ಸಂಜು ಸ್ಯಾಮ್ಸನ್‌ ಕನಸು ಭಗ್ನ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಟುವರ್ಟ್ ಬಿನ್ನಿ, ಮಾಯಂತಿ ಲ್ಯಾಂಗರ್ ದಂಪತಿಗೆ ಗಂಡು ಮಗು ಜನನ

    ಸ್ಟುವರ್ಟ್ ಬಿನ್ನಿ, ಮಾಯಂತಿ ಲ್ಯಾಂಗರ್ ದಂಪತಿಗೆ ಗಂಡು ಮಗು ಜನನ

    ಬೆಂಗಳೂರು: ಖ್ಯಾತ ನಿರೂಪಕಿ, ಸ್ಟುವರ್ಟ್ ಬಿನ್ನಿ ಪತ್ನಿ ಮಾಯಂತಿ ಲ್ಯಾಂಗರ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    2020ರ ಐಪಿಎಲ್ ಟೂರ್ನಿಯ ನಿರೂಪಕರ ಪಟ್ಟಿಯನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಬಿಡುಗಡೆ ಮಾಡಿದ್ದು, ಆದರೆ ಪಟ್ಟಿಯಲ್ಲಿ ನಿರೂಪಕಿ ಮಾಯಂತಿ ಲ್ಯಾಂಗರ್ ಅವರ ಹೆಸರು ಕೈಬಿಡಲಾಗಿತ್ತು. ಪಟ್ಟಿ ಬಿಡುಗಡೆಯಾಗುತ್ತಿದಂತೆ ತಮ್ಮ ನೆಚ್ಚಿನ ನಿರೂಪಣೆಯನ್ನು ಕೈಬಿಟ್ಟಿದ್ದು ಏಕೆ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡಿತ್ತು. ಸದ್ಯ ಈ ಪ್ರಶ್ನೆಗಳಿಗೆ ಮಾಯಂತಿ ಲ್ಯಾಂಗರ್ ಉತ್ತರಿಸಿದ್ದು, ಗಂಡು ಮಗುವಿಗೆ ತಾಯಿಯಾಗಿರುವ ವಿಚಾರವನ್ನು ತಿಳಿಸಿದ್ದಾರೆ.

    ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಮಾಯಂತಿ ಲ್ಯಾಂಗರ್, ಕಳೆದ 5 ವರ್ಷಗಳಿಂದ ಸ್ಟಾರ್ ಸ್ಪೋರ್ಟ್ಸ್ ನಲ್ಲಿರುವ ನನ್ನ ಕುಟುಂಬ ಅವರ ಉನ್ನತ ಈವೆಂಟ್‍ಗಳನ್ನು ಎದುರಿಸುವ ಅದ್ಭುತ ಅವಕಾಶವನ್ನು ನನಗೆ ನೀಡಿದೆ. ನನಗೆ ಅಗತ್ಯವಿರುವ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸಿದೆ. ನಾನು ಗರ್ಭಿಣಿಯಾಗಿದ್ದ ಸಂದರ್ಭದಲ್ಲೂ 5 ತಿಂಗಳವರೆಗೆ ಕಾರ್ಯಕ್ರಮ ಹೋಸ್ಟ್ ಮಾಡಲು ಹಲವು ಹೊಂದಾಣಿಕೆಗಳನ್ನು ಮಾಡಿದೆ. 2020ರ ಐಪಿಎಲ್ ಟೂರ್ನಿ ನಿಗದಿಯಂತೆ ಮುಂದುವರಿಯುತ್ತಿದ್ದು, ಈಗಾಗಲೇ ಸಾಕಷ್ಟು ಜನರು ಅಲ್ಲಿ ತಲುಪಿದ್ದಾರೆ. 6 ವಾರಗಳ ಹಿಂದೆ ಗಂಡು ಮಗುವನ್ನು ನಾನು ಮತ್ತು ಸ್ಟುವರ್ಟ್ ಪಡೆದಿದ್ದು, ಜೀವನ ಉತ್ತಮವಾಗಿ ಬದಲಾಗಿದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಇತರೇ ನಿರೂಪಕರಿಗೆ ಶುಭಕೋರಿರುವ ಮಾಯಂತಿ, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲೇ ಟೂರ್ನಿಯನ್ನು ನೋಡಲು ಇಷ್ಟಪಡುತ್ತೇನೆ ಎಂದಿದ್ದಾರೆ.

    ನಾಳೆಯಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಸುರೇನ್ ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್, ಧೀರಜ್ ಜುನೇಜಾ, ಜತಿನ್ ಸಪ್ರು, ಸುಹೇಲ್ ಚಂದೋಕ್, ಸಂಜನಾ ಗಣೇಶನ್, ಅನಂತ್ ತ್ಯಾಗಿ ಸೇರಿದಂತೆ 9 ಮಂದಿ ನಿರೂಪಕರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಕನ್ನಡದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಂಗಳೂರಿನ ವೀಣಾ ಡಿಸೋಜಾ ನಿರೂಪಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

    ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಮುಂಬರುವ ಐಪಿಎಲ್‍ಗಾಗಿ ಆಸ್ಟ್ರೇಲಿಯಾದ ಜನಪ್ರಿಯ ಟಿವಿ ನಿರೂಪಕ ನೆರೋಲಿ ಮೆಡೋಸ್ ಅವರನ್ನು ಕರೆತಂದಿದೆ. ಉಳಿದ ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್ ಮತ್ತು ಧೀರಜ್ ಜುನೇಜಾ ಐಪಿಎಲ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದು, ಸುರೇನ್ ಸುಂದರಂ ಇದಕ್ಕೂ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಿರೂಪಕರಾಗಿದ್ದರು. ಅವರು ಕಳೆದ ವರ್ಷದಿಂದ ಸ್ಟಾರ್ ನೆಟ್‍ವರ್ಕ್‍ನೊಂದಿಗೆ ಕೆಲಸ ಮಾಡುತ್ತಿದ್ದಾರೆ.

    ಕಿರಾ ನಾರಾಯಣನ್ ಭಾರತೀಯ ಚಲನಚಿತ್ರ ಮತ್ತು ರಂಗಭೂಮಿ ನಟಿಯಾಗಿದ್ದು, ಕ್ರೀಡಾ ನಿರೂಪಕಿಯಾಗಿಯೂ ಹೆಸರುವಾಸಿಯಾಗಿದ್ದಾರೆ. ತಾನ್ಯಾ ಪುರೋಹಿತ್ ಕೂಡ ನಟಿಯಾಗಿದ್ದು, ಹಲವಾರು ಸಿನಿಮಾದಲ್ಲಿ ಮತ್ತು ಟಿವಿ ಚಾನೆಲ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಾನ್ಯಾ ಅನುಷ್ಕಾ ಶರ್ಮಾ ಅಭಿನಯದ ಎನ್‍ಎಚ್-10 ಚಿತ್ರದಲ್ಲಿ ನಟಿಸಿದ್ದಾರೆ. ಮಾಯಂತಿ ಲ್ಯಾಂಗರ್ ಅವರ ಅನುಪಸ್ಥಿತಿಯಲ್ಲಿ, ಈ ಬಾರಿಯ ಐಪಿಎಲ್‍ನಲ್ಲಿ ಹೊಸ ನಿರೂಪಕರ ತಂಡ ಕೆಲಸ ಮಾಡಲಿದೆ.

  • ಮಾಯಂತಿ ಲ್ಯಾಂಗರ್ ಔಟ್ – ಐಪಿಎಲ್ ಹೊಸ ನಿರೂಪಕರ ಲಿಸ್ಟ್ ಬಿಡುಗಡೆ

    ಮಾಯಂತಿ ಲ್ಯಾಂಗರ್ ಔಟ್ – ಐಪಿಎಲ್ ಹೊಸ ನಿರೂಪಕರ ಲಿಸ್ಟ್ ಬಿಡುಗಡೆ

    ನವದೆಹಲಿ: ಐಪಿಎಲ್‍ನಲ್ಲಿ ನಿರೂಪಣೆ ಮಾಡುವ ಆ್ಯಂಕರ್ಸ್ ಗಳ ಪಟ್ಟಿಯನ್ನು ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಟಾರ್ ನಿರೂಪಕಿ, ಸ್ಟುವರ್ಟ್ ಬಿನ್ನಿ ಪತ್ನಿ ಮಾಯಂತಿ ಲ್ಯಾಂಗರ್ ಅವರ ಹೆಸರನ್ನು ಕೈಬಿಡಲಾಗಿದೆ.

    ನಾಳೆಯಿಂದ ಐಪಿಎಲ್ ಹಬ್ಬ ಶುರುವಾಗಲಿದೆ. 6 ತಿಂಗಳು ತಡವಾಗಿ ಐಪಿಎಲ್ ಆರಂಭವಾಗುತ್ತಿದೆ. ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‍ಗಾಗಿ ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ. ಇದಕ್ಕೆ ತಕ್ಕ ಸಿದ್ಧತೆಗಳನ್ನು ಬಿಸಿಸಿಐ ಕೂಡ ಮಾಡಿಕೊಳ್ಳುತ್ತಿದೆ. ಪಾಕಿಸ್ತಾನ ಹೊರತು ಪಡಿಸಿ ಪ್ರಪಂಚದ 120 ದೇಶದಲ್ಲಿ ಐಪಿಎಲ್ ಪ್ರಸಾರವಾಗಲಿದೆ.

    ಐಪಿಎಲ್-2020 ಮೊದಲ ಪಂದ್ಯ ನಾಳೆ ಆರಂಭವಾಗಲಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಸಿರುವ ಸ್ಟಾರ್ ಸ್ಪೋರ್ಟ್ಸ್ ರಂಗುರಂಗಾಗಿ ಮಾತನಾಡುವ ನಿರೂಪಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಈ ಹಿಂದೆ ಐಪಿಎಲ್‍ನಲ್ಲಿ ನಿರೂಪಣೆ ಮಾಡುತ್ತಿದ್ದ ಸ್ಟಾರ್ ನಿರೂಪಕಿ ಮಾಯಂತಿ ಲ್ಯಾಂಗರ್ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅವರನ್ನು ಕೈಬಿಡಲು ಕಾರಣವೇನು ಎಂಬುದನ್ನು ಸ್ಟಾರ್ ಸ್ಪೋರ್ಟ್ಸ್ ತಿಳಿಸಿಲ್ಲ. ಇದರ ಬಗ್ಗೆ ಮಾಯಂತಿ ಲ್ಯಾಂಗರ್ ಕೂಡ ಇಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ.

    ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದ ನಿರೂಪಕರ ಪಟ್ಟಿ
    ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್, ಧೀರಜ್ ಜುನೇಜಾ, ಜತಿನ್ ಸಪ್ರು, ಸುಹೇಲ್ ಚಂದೋಕ್, ಸಂಜನಾ ಗಣೇಶನ್, ಅನಂತ್ ತ್ಯಾಗಿ ಸೇರಿದಂತೆ 9 ಮಂದಿ ನಿರೂಪಕರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಕನ್ನಡದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಂಗಳೂರಿನ ವೀಣಾ ಡಿಸೋಜಾ ನಿರೂಪಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ ಮಾಯಂತಿ ಲ್ಯಾಂಗರ್ ಕಾಣದಿರುವುದು ಕೆಲ ಅಭಿಮಾನಿಗಳಿಗೆ ನಿರಾಸೆಯಾಗಿದೆ.

    ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಮುಂಬರುವ ಐಪಿಎಲ್‍ಗಾಗಿ ಆಸ್ಟ್ರೇಲಿಯಾದ ಜನಪ್ರಿಯ ಟಿವಿ ನಿರೂಪಕ ನೆರೋಲಿ ಮೆಡೋಸ್ ಅವರನ್ನು ಕರೆತಂದಿದೆ. ಉಳಿದ ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್ ಮತ್ತು ಧೀರಜ್ ಜುನೇಜಾ ಐಪಿಎಲ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದು, ಸುರೇನ್ ಸುಂದರಂ ಇದಕ್ಕೂ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಿರೂಪಕರಾಗಿದ್ದರು. ಅವರು ಕಳೆದ ವರ್ಷದಿಂದ ಸ್ಟಾರ್ ನೆಟ್‍ವರ್ಕ್‍ನೊಂದಿಗೆ ಕೆಲಸ ಮಾಡುತ್ತಿದ್ದಾರೆ.

    ಕಿರಾ ನಾರಾಯಣನ್ ಭಾರತೀಯ ಚಲನಚಿತ್ರ ಮತ್ತು ರಂಗಭೂಮಿ ನಟಿಯಾಗಿದ್ದು, ಕ್ರೀಡಾ ನಿರೂಪಕಿಯಾಗಿಯೂ ಹೆಸರುವಾಸಿಯಾಗಿದ್ದಾರೆ. ತಾನ್ಯಾ ಪುರೋಹಿತ್ ಕೂಡ ನಟಿಯಾಗಿದ್ದು, ಹಲವಾರು ಸಿನಿಮಾದಲ್ಲಿ ಮತ್ತು ಟಿವಿ ಚಾನೆಲ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಾನ್ಯಾ ಅನುಷ್ಕಾ ಶರ್ಮಾ ಅಭಿನಯದ ಎನ್‍ಎಚ್-10 ಚಿತ್ರದಲ್ಲಿ ನಟಿಸಿದ್ದಾರೆ. ಮಾಯಂತಿ ಲ್ಯಾಂಗರ್ ಅವರ ಅನುಪಸ್ಥಿತಿಯಲ್ಲಿ, ಈ ಬಾರಿಯ ಐಪಿಎಲ್‍ನಲ್ಲಿ ಹೊಸ ನಿರೂಪಕರ ತಂಡ ಕೆಲಸ ಮಾಡಲಿದೆ.

  • ಪತಿಯನ್ನ ಟ್ರೋಲ್ ಮಾಡಿದವರಿಗೆ ಸ್ಟುವರ್ಟ್ ಪತ್ನಿ ತಿರುಗೇಟು

    ಪತಿಯನ್ನ ಟ್ರೋಲ್ ಮಾಡಿದವರಿಗೆ ಸ್ಟುವರ್ಟ್ ಪತ್ನಿ ತಿರುಗೇಟು

    ಮೊಹಾಲಿ: ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಪತಿ ಸ್ಟುವರ್ಟ್ ಬಿನ್ನಿ ಅವರನ್ನು ಟ್ರೋಲ್ ಮಾಡಿದವರಿಗೆ ಪತ್ನಿ ಮಯಾಂತಿ ತಿರುಗೇಟು ನೀಡಿದ್ದಾರೆ.

    ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟ್ ನಡೆಸಿದ ಸ್ಟುವರ್ಟ್ ಬಿನ್ನಿ 2019ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡಿದರು. ಪಂದ್ಯದಲ್ಲಿ ಸ್ಫೋಟಕ 33 ರನ್ ಗಳಿಸಿದರೂ ಕೂಡ ರಾಜಸ್ಥಾನ ತಂಡಕ್ಕೆ ಗೆಲುವು ತಂದುಕೊಡಲು ವಿಫಲರಾದರು. ಪರಿಣಾಮ ಬಿನ್ನಿಯನ್ನು ಕೆಲ ಮಂದಿ ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡಿ ಕಾಲೆಳೆದಿದ್ದರು. ಈ ಟ್ರೋಲ್ ಗಳಿಗೆ ಪ್ರತಿಕ್ರಿಯೆ ನೀಡಿರುವ ಸ್ಟುವರ್ಟ್ ಬಿನ್ನಿ ಅವರ ಪತ್ನಿ ತಿರುಗೇಟು ನೀಡಿದ್ದಾರೆ.

    11 ಎಸೆತಗಳನ್ನು ಎದುರಿಸಿದ ಬಿನ್ನಿ 2 ಬೌಂಡರಿ, 3 ಸಿಕ್ಸರ್ ನೆರವಿನಿಂದ 33 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ ತಂಡ 20 ಓವರಿನಲ್ಲಿ 190 ರನ್ ಗಳಿಸಿ 12 ರನ್ ಗಳ ಅಂತರದಲ್ಲಿ ಸೋಲು ಕಂಡಿತ್ತು.

    ಬಿನ್ನಿ ಪಂದ್ಯದಲ್ಲಿ ತೋರಿದ ಪ್ರದರ್ಶನದ ಬಳಿಕ ಮಯಾಂತಿ ತಮ್ಮ ಡಿಪಿ ಫೋಟೋವನ್ನು ಪತಿಯೊಂದಿಗೆ ಹಾಕಿಕೊಂಡಿರುತ್ತಾರೆ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿ ಕಾಲೆಳೆದಿದ್ದರು. ಈ ಟ್ವೀಟ್ ಪ್ರತಿಕ್ರಿಯೆ ನೀಡಿರುವ ಮಯಾಂತಿ, ನಿಮ್ಮ ಬಳಿ ನನ್ನ ನಂಬರ್ ಇಲ್ಲದ ಕಾರಣ ನಾನು ಯಾವ ಡಿಪಿ ಹಾಕಿದ್ದೇನೆ ಎನ್ನುವುದು ನಿಮಗೆ ತಿಳಿಯುವುದಿಲ್ಲ. ಆದರೂ ಈ ವಿಚಾರವನ್ನು ಕೆದಕಿದ್ದಕ್ಕೆ ಧನ್ಯವಾದ. ಸೂಪರ್ ಪಿಕ್ ಎಂದು ಬರೆದು ತಿರುಗೇಟು ನೀಡಿದ್ದಾರೆ.

    ಕ್ರಿಕೆಟಿನಲ್ಲಿ ತಮ್ಮ ಹಾಟ್ ಮತ್ತು ಬೋಲ್ಡ್ ಹೋಸ್ಟ್ ಆಗಿ ಹೆಸರು ಮಾಡಿರುವ ಮಯಾಂತಿ ಅವರನ್ನು ಪತಿ ಸ್ಟುವರ್ಟ್ ಬಿನ್ನಿ ಅವರೊಂದಿಗೆ ಕೆಲ ಮಂದಿ ಟ್ರೋಲ್ ಮಾಡುವುದು ಎಲ್ಲರಿಗೂ ತಿಳಿದ ಸಂಗತಿ. ಈ ಹಿಂದೆಯೂ ತಮ್ಮನ್ನು ಡಿನ್ನರ್‍ಗೆ ಆಹ್ವಾನ ನೀಡಿದ್ದ ವ್ಯಕ್ತಿಗೆ ತಿರುಗೇಟು ನೀಡಿದ್ದ ಮಯಾಂತಿ ತಮ್ಮ ಈ ನಡೆಯಿಂದಲೇ ಮತ್ತಷ್ಟು ಹೆಸರು ಪಡೆದಿದ್ದರು.

  • ನನ್ನ ಜೊತೆ ಡಿನ್ನರಿಗೆ ಬನ್ನಿ – ವೈರಲ್ ಆಯ್ತು ಸ್ಟುವರ್ಟ್ ಬಿನ್ನಿ ಪತ್ನಿಯ ಪ್ರತಿಕ್ರಿಯೆ

    ನನ್ನ ಜೊತೆ ಡಿನ್ನರಿಗೆ ಬನ್ನಿ – ವೈರಲ್ ಆಯ್ತು ಸ್ಟುವರ್ಟ್ ಬಿನ್ನಿ ಪತ್ನಿಯ ಪ್ರತಿಕ್ರಿಯೆ

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಡಿನ್ನರಿಗೆ ಕರೆದಿದ್ದ ವ್ಯಕ್ತಿಯೊಬ್ಬನಿಗೆ ಭಾರತ ತಂಡದ ಅಲ್‍ರೌಂಡರ್ ಸ್ಟುವರ್ಟ್ ಬಿನ್ನಿ ಪತ್ನಿ ಮಯಾಂತಿ ಲ್ಯಾಂಗರ್ ನೀಡಿದ ಪ್ರತಿಕ್ರಿಯೆ ಈಗ ವೈರಲ್ ಆಗಿದೆ.

    ಬಿನ್ನಿ ಪತ್ನಿ ಮಯಾಂತಿ ಐಪಿಎಲ್ ನ ಸ್ಪೋಟ್ಸ್ ಆಂಕರ್ ಆಗಿದ್ದು, ಫಯ್ಯದ್ ಎಂಬ ವ್ಯಕ್ತಿಯೊಬ್ಬ ಟ್ವಿಟ್ಟರಿನಲ್ಲಿ ಮಯಾಂತಿಗೆ “ನನಗೆ ನಿಮ್ಮನ್ನು ಡಿನ್ನರಿಗೆ ಕರೆದುಕೊಂಡು ಹೋಗಲು ಇಷ್ಟಪಡುತ್ತೇನೆ. ನಿಮ್ಮ ಸೌಂದರ್ಯವನ್ನು ವರ್ಣಿಸಲು ನನ್ನ ಹತ್ತಿರ ಯಾವುದೇ ಪದಗಳಿಲ್ಲ” ಎಂದು ಟ್ವೀಟ್ ಮಾಡಿದ್ದಾನೆ.

    ನಿಮ್ಮನ್ನು ನೋಡುತ್ತಿದ್ದರೆ ನನಗೆ ಐಪಿಎಲ್ ನೋಡಲು ಇಷ್ಟವಾಗುವುದಿಲ್ಲ. ನಿಮ್ಮ ಕ್ಲಾಸ್ ಹಾಗೂ ನಿಮ್ಮ ಪರ್ಸನಾಲಿಟಿ ಕಾಂಬಿನೇಷನ್ ಅದ್ಭುತವಾಗಿದೆ. ನಿಮ್ಮನ್ನು ಡಿನ್ನರಿಗೆ ಕರೆದುಕೊಂಡು ಹೋಗಲು ಇಷ್ಟಪಡುತ್ತೇನೆ ಎಂದು ಟ್ವೀಟ್ ಮಾಡಿ ಆಹ್ವಾನಿಸಿದ್ದಾನೆ.

    ಅಭಿಮಾನಿಯ ಟ್ವೀಟ್‍ಗೆ ಮಯಾಂತಿ ಪ್ರತಿಕ್ರಿಯಿಸಿ, “ಧನ್ಯವಾದ! ನಾನು ಹಾಗೂ ನನ್ನ ಪತಿ ನಿಮ್ಮ ಜೊತೆ ಡಿನ್ನರಿಗೆ ಬರುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ. ಮಯಾಂತಿಯ ಈ ಟ್ವೀಟ್‍ಗೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇದನ್ನು ತಮಾಷೆ ರೀತಿಯಲ್ಲಿ ತೆಗೆದುಕೊಂಡಿದ್ದಾರೆ.

    ಮಯಾಂತಿ ಐಪಿಎಲ್‍ನ ಪ್ರಮುಖ ಆಂಕರ್ ಆಗಿದ್ದು, ಕಳೆದ ಎಲ್ಲಾ ಸೀಸನಿಂದಲೂ ಪಂದ್ಯದಲ್ಲಿ ಆಂಕರ್ ಮಾಡುತ್ತಿದ್ದಾರೆ.