Tag: Mayamruga

  • ದಾಂಪತ್ಯ ಜೀವನ, ಮಗನ ಆರೋಗ್ಯದ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ಟ ಅವಿನಾಶ್‌ ದಂಪತಿ

    ದಾಂಪತ್ಯ ಜೀವನ, ಮಗನ ಆರೋಗ್ಯದ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ಟ ಅವಿನಾಶ್‌ ದಂಪತಿ

    ಕಿರುತೆರೆ ಜನಪ್ರಿಯ Weekend With Ramesh-5 ಕಾರ್ಯಕ್ರಮಕ್ಕೆ ಖ್ಯಾತ ನಟ ಅವಿನಾಶ್ (Actor Avinash) ಅತಿಥಿಯಾಗಿ ಸಾಧಕರ ಸೀಟ್ ಅಲಂಕರಿಸಿದ್ದಾರೆ. ಈ ವಾರ ಅವಿನಾಶ್ ಅವರ ಬಾಲ್ಯ, ಕೆರಿಯರ್, ನಟಿ ಮಾಳವಿಕಾ ಜೊತೆಗಿನ ಮದುವೆ, ಪುತ್ರ ಗಾಲವ್ ಬಗ್ಗೆ ಅವಿನಾಶ್ ಮನಬಿಚ್ಚಿ ಮಾತನಾಡಿದ್ದಾರೆ.

    ಸ್ಯಾಂಡಲ್‌ವುಡ್‌ನ ಸ್ಟಾರ್ ಜೋಡಿಗಳಲ್ಲಿ ಒಂದಾಗಿರುವ ಅವಿನಾಶ್- ಮಾಳವಿಕಾ (Actress Malavika) ಅವರದ್ದು ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದ್ದು, ಮೊದಲು ಭೇಟಿಯಾಗಿದ್ದು, ಮದುವೆ ಪ್ರಸ್ತಾಪ ಬಂದಿದ್ದು ಯಾರಿಂದ ಎಂಬ ಮಾಹಿತಿಯನ್ನ ನಟ ರಮೇಶ್ ಅರವಿಂದ್ (Ramesh Aravind) ಜೊತೆ ಅವಿನಾಶ್ ದಂಪತಿ ಹಂಚಿಕೊಂಡಿದ್ದಾರೆ. ಹಾಗೆಯೇ ದೇವರ ಮಗು ಗಾಲವ್ ಬಗ್ಗೆ ಭಾವುಕರಾಗಿದ್ದಾರೆ. ಇದನ್ನೂ ಓದಿ:‘ಅಗ್ನಿಸಾಕ್ಷಿ’ ಸೀರಿಯಲ್‌ ನಟ ಸಂಪತ್‌ ಜಯರಾಮ್‌ ಆತ್ಮಹತ್ಯೆ

    ಕಿರುತೆರೆಯ ‘ಮಾಯಾಮೃಗ’ (Mayamruga) ಧಾರಾವಾಹಿಯಲ್ಲಿ ನಾವಿಬ್ಬರು ಒಟ್ಟಿಗೆ ಅಭಿನಯಿಸಿದ್ವಿ. ಸ್ನೇಹಿತರಾಗಿದ್ವಿ. ನಮ್ಮಿಬ್ಬರ ಮಧ್ಯೆ ವಯಸ್ಸಿನ ಅಂತರವಿತ್ತು. ಆದರೆ, ಇಬ್ಬರೂ ಯೋಚನೆ ಮಾಡುವ ರೀತಿ ಒಂದೇ ಇತ್ತು. ಒಟ್ಟಿಗೆ ಇರಬಹುದೇನೋ ಅಂತ ನನಗೆ ಅನಿಸಿತ್ತು. ಆದರೆ, ಕೇಳುವ ಧೈರ್ಯ ನನಗೆ ಇರಲಿಲ್ಲ ಎಂದರು ಅವಿನಾಶ್. ಮಾಳವಿಕಾ ಹಾಗೂ ಅವಿನಾಶ್ ಮಧ್ಯೆ ವಯಸ್ಸಿನ ಅಂತರ ಎಷ್ಟಿದೆ ಅಂದ್ರೆ. ಮಾಳವಿಕಾ 9 ವರ್ಷ ವಯಸ್ಸಿನಲ್ಲಿದ್ದಾಗ ಅವಿನಾಶ್ ಆಗಲೇ ಲೆಕ್ಚರರ್ ಆಗಿದ್ದರು. ಇವರಿಬ್ಬರು ಭೇಟಿಯಾಗಿದ್ದು ‘ಮಾಯಾಮೃಗ’ ಧಾರಾವಾಹಿಯ ಸೆಟ್‌ನಲ್ಲಿ.

    ಮಾಯಾಮೃಗ ಶುರು ಆದ್ಮೇಲೆ ಇಬ್ಬರೂ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಒಂದು ದಿನ ಅವಿನಾಶ್ ಮನೆಗೆ ಮಾಳವಿಕಾ ಮನೆಗೆ ಬಂದಿದ್ದರು. ನನ್ನ ಮನಸ್ಸಿನಲ್ಲಿ ಬಂತು.. ನಮ್ಮ ಹುಡುಗಿನ ಮದುವೆ ಆಗ್ತೀಯಾ ಅಂತಾ ಮಾಳವಿಕಾ ತಾಯಿ ನೇರವಾಗಿ ಕೇಳಿದಾಗ ಅವಿನಾಶ್ ಶಾಕ್ ಆಗ್ಬಿಟ್ಟರು. ಮನೆಗೆ ಹೋಗಿ ಅಣ್ಣಂದಿರ ಜೊತೆ ಮಾತನಾಡಬೇಕು ಎಂದರು. ಹಾಂಗ್ ಕಾಂಗ್‌ನಿಂದ ಅಣ್ಣನನ್ನ ಕರೆಯಿಸಿ ಮಾಳವಿಕಾಳನ್ನ ನೋಡಿದರು. ನಾವು ಎಂಗೇಜ್‌ಮೆಂಟ್ ಮಾಡಲಿಲ್ಲ. ಫೆಬ್ರವರಿ 26ರಂದು ಮದುವೆ ಮಾಡಿಬಿಟ್ವಿ ಎಂದು ಮಾಳವಿಕಾ ತಾಯಿ ಸಾವಿತ್ರಿ ಮಾತನಾಡಿದರು.

    ನಮ್ಮ ಮಗ ಗಾಲವ್. ದೈವ ಸಂಕಲ್ಪ ಇತ್ತು. ಅದಕ್ಕೆ ಗಾಲವ್ (Gaalav) ಹುಟ್ಟಿದ. ಗಾಲವ್ ಎಲ್ಲರಂತೆ ಅಲ್ಲ. ಅದು ಗೊತ್ತಾಗೋಕೆ ಒಂದಷ್ಟು ವರ್ಷ ಆಯ್ತು. 14 ವರ್ಷಗಳಲ್ಲಿ ಇದೇ ಮೊದಲ ಬಾರಿ ಗಾಲವ್ ಯಾವುದಾದರೂ ಸೆಟ್‌ಗೆ ಬಂದಿರೋದು. ಗಾಲವ್ ಹುಟ್ಟಿದಾಗ ಎಲ್ಲಾ ಮಕ್ಕಳ ತರಹ ಇರಲಿಲ್ಲ. ಒಬ್ಬೊಬ್ಬರು ಒಂದೊಂಥರ ಅವನ ಬಗ್ಗೆ ಮಾತನಾಡಿದರು. ಒಬ್ಬರು ಯಾವುದೋ ಯೋಗಿ ತರಹ ಇದ್ದಾನೆ ಅಂದರು. ಇನ್ನೊಬ್ಬರು ನಾರ್ಮಲ್ ಅಲ್ಲವೇ ಅಲ್ಲ ಎಂದರು. ಸುಮಾರು 50 ದಿನ ಐಸಿಯುನಲ್ಲಿದ್ದ. ನಂತರ ವಾಪಸ್ ಮನೆಗೆ ಬಂದ. ನಂತರ ಯಾವ ಅಪ್ಪ-ಅಮ್ಮನೂ ಮಾಡಿಸದೇ ಇರುವ ಒಂದು ಟೆಸ್ಟ್ ಮಾಡಿಸಿದ್ವಿ. ಯಾವ ಕಾರಣಕ್ಕೆ ಮಗು ಹೀಗೆ ಹುಟ್ಟತ್ತೆ ಅಂತ ತಿಳಿಯೋಕೆ. ಜೆನೆಟಿಕ್ ಟೆಸ್ಟ್ ಮಾಡಿದಾಗ ಗೊತ್ತಾಯಿತು Wolf Hirschhorn Syndrome ಇದೆ ಅಂತ. ಅದು ಯಾರಿಗೂ ಗೊತ್ತೇ ಇಲ್ಲ. ಯಾವ ನ್ಯೂರಾಲಜಿಸ್ಟ್ ಕೂಡ ನಮಗೆ ಹೇಳಲಿಲ್ಲ. ಈ ಸಿಂಡ್ರೋಮ್‌ನಲ್ಲಿ ಬುದ್ಧಿ ಮಾಂದ್ಯತೆ ಇದೆ. ಮಾತು ಬರೋದಿಲ್ಲ. ನಡಿಗೆ ಸ್ವಲ್ಪ ಮಟ್ಟಿಗೆ ಬರಬಹುದು. ಆಯಸ್ಸಿನ ಬಗ್ಗೆ ನಿಶ್ಚಿಯ ಇಲ್ಲ. ಜೆನೆಟಿಕ್ ಟೆಸ್ಟ್ ಬಳಿಕ ನಿಮ್ಮ ಕಾರಣಕ್ಕೂ ಮಗ ಹೀಗಿಲ್ಲ. ಅವಿನಾಶ್ ಕಾರಣಕ್ಕೂ ಮಗ ಹೀಗಿಲ್ಲ. ಯು ಆರ್ ಜಸ್ಟ್ ಅನ್‌ಲಕ್ಕಿ ಎಂದರು ಡಾಕ್ಟರ್. ಜಗತ್ತಿನಲ್ಲಿ 2000 ಮಕ್ಕಳು ಹೀಗಿದ್ದಾರೆ ಎಂದು ಡಾಕ್ಟರ್ ತಿಳಿಸಿದ್ದರು ಎಂದು ನಟಿ ಮಾಳವಿಕಾ ಮಾತನಾಡಿದ್ದಾರೆ.

    ಗಾಲವ್‌ನ ನೋಡಿಕೊಳ್ಳೋದು ಕಾಳಿ ಎಂಬುವರು. ಅವರ ಬಗ್ಗೆ ಮಾತನಾಡಿದ ಮಾಳವಿಕಾ, ಕಾಳಿ ನಮ್ಮನೆ ಯಶೋದಾ. ನಾನು ಹೆತ್ತವಳು ಅಷ್ಟೇ. ಹುಟ್ಟಿದಾಗಿನಿಂದ ಗಾಲವ್‌ನ ನೋಡಿಕೊಂಡಿರುವುದು ಕಾಳಿ ಅವರು. ಇನ್ನೂ ಮಗನ ಬಗ್ಗೆ ಮಾತನಾಡಿದ ಅವಿನಾಶ್, ದೇವರು ನಮ್ಮ ಜೊತೆ ಇದ್ದಾನೆ. ಒಂದು ದಿನ ಇವನು ದೇವರ ಜೊತೆ ಹೋಗ್ತಾನೆ ಎಂದು ಮಾತನಾಡಿದ್ದಾರೆ.

  • 25 ವರ್ಷಗಳ ಬಳಿಕ ಮತ್ತೆ ‘ಮಾಯಾಮೃಗ’: ಸೀರಿಯಲ್ಗೂ ಸೀಕ್ವೆಲ್‌ ಭಾಗ್ಯ

    25 ವರ್ಷಗಳ ಬಳಿಕ ಮತ್ತೆ ‘ಮಾಯಾಮೃಗ’: ಸೀರಿಯಲ್ಗೂ ಸೀಕ್ವೆಲ್‌ ಭಾಗ್ಯ

    ಟಿ.ಎನ್.ಸೀತಾರಾಮ್ ನಿರ್ದೇಶನದ ಈ ಧಾರಾವಾಹಿಯ ಮುಂದುವರೆದ ಭಾಗ “ಮತ್ತೆ ಮಾಯಾಮೃಗ” (Mayamruga)ಎಂಬ ಹೆಸರಿನಿಂದ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕುರಿತು ಧಾರಾವಾಹಿ ತಂಡ ಕೆಲವು ವಿಷಯಗಳನ್ನು ಹಂಚಿಕೊಂಡಿತ್ತು. ಸಿನಿಮಾಗಳಿಗೆ ಸೀಕ್ವೆಲ್‌ ಬರುವುದು   ಸಾಮಾನ್ಯ. ಹಿರಿತೆರೆಗೆ ಹೋಲಿಸಿದರೆ ಕಿರುತೆರೆಯಲ್ಲಿ ಸೀಕ್ವೆಲ್‌ ಬರುವುದು ಬಹಳ ಕಡಿಮೆ. ಆದರೆ, ಈ ರೀತಿಯ ಪ್ರಯತ್ನವನ್ನು ಮಾಡಲು ಸೀತಾರಾಮ್ ಅವರು ಮುಂದಾಗಿದ್ದಾರೆ. ಬರೋಬ್ಬರಿ 25 ವರ್ಷಗಳ ಬಳಿಕ ‘ಮಾಯಾಮೃಗ’ ಧಾರಾವಾಹಿಯ ಸೀಕ್ವೆಲ್‌ ಬರುತ್ತಿದೆ.  ಇಷ್ಟೊಂದು ವರ್ಷಗಳ ಬಳಿಕ ಈ ಧಾರಾವಾಹಿಯ ಮುಂದುವರೆದ ಭಾಗ ತರುವುದು ಅಷ್ಟು ಸುಲಭವಲ್ಲ.  ಸಾಕಷ್ಟು ಚಾಲೆಂಜ್​ಗಳು ಇರುತ್ತದೆ ಎಂಬುದು ಸೀತಾರಾಮ್ (TN Seetharam) ಅವರ ಅಭಿಪ್ರಾಯ.

    ಆಗಿಲೂ, ಈಗಲೂ  ಧಾರಾವಾಹಿ ನೋಡುವವರ ಮನಸ್ಥಿತಿ ಬದಲಾಗಿದೆ.  ಸಿರಿಕನ್ನಡದ (Siri Kannada) ಸಂಜಯ್ ಶಿಂಧೆ ಅವರು ಈ ಪ್ರಪೋಸಲ್​ ತಂದಾಗ ನನಗೆ ಭಯ ಆಯ್ತು. ‘ಮಾಯಾಮೃಗ’ಕ್ಕೆ ಸೀಕ್ವೆಲ್‌ ಹೇಗೆ ಎಂಬ ಚಿಂತೆ ಕಾಡಿತು. ನಮ್ಮ ಧಾರಾವಾಹಿಯಲ್ಲಿ ನಟಿಸಿದ್ದ ಅನೇಕರು ಈಗ ಬೇರೆ ಬೇರೆ ಕಡೆ ಇದ್ದಾರೆ. ಕೆಲವರು ಈ ಜಗತ್ತಿನಲ್ಲೇ ಇಲ್ಲ’ ಎಂದು ‘ಮಾಯಮೃಗ’ದ ಸೀಕ್ವೆಲ್‌ ಇರುವ ಚಾಲೆಂಜ್​ಗಳ ಬಗ್ಗೆ ಸೀತಾರಾಮ್ ವಿವರಿಸಿದರು. ‘ಆ ಕಾಲದಲ್ಲೇ ಆಗಿದ್ದರೆ ಅವರದ್ದೇ ಎರಡನೇ ಕಥೆ ಮಾಡಬಹುದಿತ್ತು. ಈಗ ಅವರ ಮುಂದಿನ ಜನರೇಷನ್ ಕಥೆ ಹೇಳಬೇಕು. ಈಗ ಅತೀ ವೇಗದಲ್ಲಿ ಜಗತ್ತು ಸಾಗುತ್ತಿದೆ. ಸಂಬಂಧಗಳ ಮೌಲ್ಯ ಕಡಿಮೆ ಆಗಿದೆ. ಹಣದ ವಿಚಾರದಲ್ಲೂ ನಾವು ಬದಲಾಗಿದ್ದೇವೆ. ಬ್ಯಾಂಕ್​ಗೆ ಹೋಗುವ ಕೆಲಸವೇ ಇಲ್ಲ. ಮೊಬೈಲ್​ನಲ್ಲೇ ಎಲ್ಲಾ’ ಹೀಗೆ ಸಾಕಷ್ಟು ಬದಲಾಗಿದೆ ಎಂದು  ಹೇಳುವ ಮೂಲಕ ಸೀತಾರಾಮ್ ಅವರು “ಮತ್ತೆ ಮಾಯಾಮೃಗ” ದ ಕಥೆ ಹೊಸ ಜಗತ್ತಿಗೆ ತಕ್ಕ ಹಾಗೆ ಇರುತ್ತದೆ ಎಂಬುದನ್ನು ತಿಳಿಸಿದರು. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್

    ಹಿಂದಿನ ಬಾರಿ ಶಾಸ್ತ್ರಿಗಳ ಕಥೆ ಹೇಳಿದ್ದೆವು. ಈಗ ನಾವು ಹಳೆಯ ತಂಡವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಶಾಸ್ತ್ರಿಗಳು ಇವತ್ತಿನ ವೇಗದ ಜಗತ್ತಿಗೆ ಹೇಗೆ ಹೊಂದಿಕೊಂಡಿದ್ದಾರೆ, ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಕಥೆ ಸಾಗಲಿದೆ. ‘ಮಾಯಾಮೃಗ’ ಧಾರಾವಾಹಿಯಲ್ಲಿ ಅವಿನಾಶ್, ಮಾಳವಿಕ, ರಾಜೇಶ್ ನಟರಂಗ, ವೀಣಾ ಸುಂದರ್ ಮೊದಲಾದವರು ನಟಿಸಿದ್ದರು. ಅವರು ಈ ಧಾರಾವಾಹಿಯಲ್ಲೂ ಅಭಿನಯಿಸಲಿದ್ದಾರೆ.  ಇದರ ಜತೆಗೆ ಯುವಪೀಳಿಗೆ  ಕಥೆ ಹೇಳಲು ಸಾಕಷ್ಟು ಹೊಸ ಪಾತ್ರಗಳು ಸೇರ್ಪಡೆ ಆಗಿದೆ. ‘ಮತ್ತೆ ಮಾಯಾಮೃಗ’ ಧಾರಾವಾಹಿಯ ಚಿತ್ರೀಕರಣ ಆರಂಭವಾಗಿದೆ. ‘ಸಿರಿ ಕನ್ನಡ’ ವಾಹಿನಿಯಲ್ಲಿ ಅಕ್ಟೋಬರ್ ಮೂರನೇ ವಾರದಿಂದ ಪ್ರಸಾರವಾಗಲಿದೆ ಎಂದರು ಟಿ.ಎನ್.ಸೀತಾರಾಮ್.

    ಮೊದಲು ಮನೆಗೆ ಒಂದು ಟಿವಿ ಇರುತ್ತಿತ್ತು. ಈಗ ರೂಮಿಗೊಂದು ಟಿವಿ ಇರುತ್ತದೆ. ಅಜ್ಜ- ಅಜ್ಜಿ, ಅಪ್ಪ-ಅಮ್ಮ ಹಾಗೂ ಮಕ್ಕಳು ಬೇರೆಬೇರೆ ಕಾರ್ಯಕ್ರಮ ನೋಡುತ್ತಿರುತ್ತಾರೆ. ಅವರನೆಲ್ಲಾ ನಮ್ಮ ಧಾರಾವಾಹಿ ನೋಡುವ ಹಾಗೆ ಮಾಡುವ ಸವಾಲು ನಮಗಿದೆ ಎಂದರು ಪಿ. ಶೇಷಾದ್ರಿ (P. Sheshadri). ನಾಗೇಂದ್ರ ಶಾ (Nagendra Shah) ಸಹ ಧಾರಾವಾಹಿಯ ಕುರಿತು ಮಾತನಾಡಿದ್ದರು.”ಮತ್ತೆ ಮಾಯಾಮೃಗ” ವನ್ನು ಪ್ರಸಾರ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದರು  ಸಿರಿಕನ್ನಡ ವಾಹಿನಿಯ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ.  ಧಾರಾವಾಹಿಯಲ್ಲಿ ನಟಿಸುತ್ತಿರುವ ಲಕ್ಷ್ಮೀ ಚಂದ್ರಶೇಖರ್, ಶಶಿಕುಮಾರ್, ವಿಕ್ರಮ್ ಸೂರಿ, ಸಿರಿ ಕನ್ನಡ ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ ಹಾಗೂ “ಮತ್ತೆ ಮಾಯಾಮೃಗ” ದಲ್ಲಿ ಅಭಿನಯಿಸುತ್ತಿರುವ ಯುವ ಕಲಾವಿದರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]