Tag: Mayabazar

  • ಮಾಯಾಬಜಾರ್ ಹಾಡಿಗೆ ಅಮೆರಿಕ ಡ್ಯಾನ್ಸರ್ಸ್ ಹೆಜ್ಜೆ – ಮೆಚ್ಚಿ ಟ್ವೀಟ್ ಮಾಡಿದ ಅಪ್ಪು

    ಮಾಯಾಬಜಾರ್ ಹಾಡಿಗೆ ಅಮೆರಿಕ ಡ್ಯಾನ್ಸರ್ಸ್ ಹೆಜ್ಜೆ – ಮೆಚ್ಚಿ ಟ್ವೀಟ್ ಮಾಡಿದ ಅಪ್ಪು

    ಬೆಂಗಳೂರು: ಮಾಯಾಬಜಾರ್ ಚಿತ್ರದ ಹಾಡಿಗೆ ಅಮೆರಿಕಾದ ಡ್ಯಾನ್ಸರ್ಸ್ ನೃತ್ಯ ಮಾಡಿದ್ದು, ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪುನಿತ್ ರಾಜ್‍ಕುಮಾರ್ ಅವರು ನಿರ್ಮಾಣ ಮಾಡಿರುವ ಮಾಯಾಬಜಾರ್ ಚಿತ್ರ ಕಳೆದ ಶುಕ್ರವಾರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗ ಈ ಚಿತ್ರದ ಟೈಟಲ್ ಸಾಂಗ್‍ಗೆ ಅಮೆರಿಕಾದ ಡ್ಯಾನ್ಸರ್ ನೃತ್ಯ ಮಾಡಿದ್ದು, ಈ ವಿಡಿಯೋವನ್ನು ಅಪ್ಪು ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಪವರ್ ಸ್ಟಾರ್, ಮಾಯಾಬಜಾರ್ ಟೈಟಲ್ ಸಾಂಗ್ ಅನ್ನು ಅಮೆರಿಕಾದ ಮಿನ್ನಿಯಾಪೊಲೀಸ್ ಸಾಥ್ ಕೊರಿಯೋಗ್ರಫಿ ಶಾಲೆಯವರು ನೃತ್ಯ ಮಾಡಿದ್ದಾರೆ. ನನಗೆ ಬಹಳ ಇಷ್ಟವಾಯಿತು. ನಾವು ಮಾಯಾಬಜಾರ್ ಚಿತ್ರವನ್ನು ಇದೇ ಮಾರ್ಚ್ 6 ರಂದು ಅಮೆರಿಕಾದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.

    ಪುನಿತ್ ಅವರು ನಿರ್ಮಾಣ ಎರಡನೇ ಸಿನಿಮಾ ಇದಾಗಿದ್ದು, ಈ ಸಿನಿಮಾವನ್ನು ರಾಧಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ವಸಿಷ್ಠ ಸಿಂಹ, ರಾಜ್ ಬಿ ಶೆಟ್ಟಿ, ಅಚ್ಚುತ್ ರಾವ್, ಪ್ರಕಾಶ್ ರಾಜ್ ಮತ್ತು ಚೈತ್ರರಾವ್ ಅವರು ಮಾಯಾಬಜಾರ್‍ನಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

    ಮನುಷ್ಯ ಬದುಕಲು ಹಣ ಬೇಕು, ಹಣವನ್ನು ಗಳಿಸಲು ಮನುಷ್ಯ ಏನ್ ಬೇಕಾದರೂ ಮಾಡುತ್ತಾನೆ. ಈ ಹಣದ ಸುತ್ತ ತಿರುಗುವ ಕಥೆಯೇ ಮಾಯಾಬಜಾರ್, ಇದರಲ್ಲಿ ಎಸಿಪಿ ಪಾತ್ರದಲ್ಲಿ ಪ್ರಕಾಶ್ ರಾಜ್ ಬಹಳ ಚೆನ್ನಾಗಿ ನಟಿಸಿದ್ದಾರೆ. ಪ್ರಾಮಾಣಿಕ ಪೊಲೀಸ್ ಪಾತ್ರಕ್ಕೆ ಅಚ್ಚುತ್ ರಾವ್ ಜೀವ ತುಂಬಿದ್ದಾರೆ. ರಾಜ್ ಬಿ ಶೆಟ್ಟಿ ಕಳ್ಳನ ಪಾತ್ರ ಮಾಡಿದ್ದಾರೆ. ಇವರ ಮಧ್ಯೆ ಯುವ ಪ್ರೇಮಿಗಳಾಗಿ ವಸಿಷ್ಠ ಸಿಂಹ ಮತ್ತು ಚೈತ್ರರಾವ್ ಮೋಡಿ ಮಾಡಿದ್ದಾರೆ.

    ಈ ಚಿತ್ರದಲ್ಲಿ ಪುನಿತ್ ರಾಜ್ ಕುಮಾರ್ ಅವರು ಕೂಡ ಒಂದು ಹಾಡಿಗೆ ಹೆಜ್ಜೆ ಹಾಕಿದ್ದು, ಸಖತ್ ಸ್ಟೆಪ್ ಹಾಕಿದ್ದಾರೆ. ಬಿಡಿಗಡೆಯಾದ ಎರಡನೇ ದಿನದಲ್ಲಿ ಈ ಚಿತ್ರ ಪೈರಸಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಧ್ಯ ಪುನಿತ್ ಅವರು ಸಂತೋಷ್ ಆನಂದರಾಮ್ ನಿರ್ದೇಶನದ ಯುವರತ್ನ ಸಿನಿಮಾ ಮಾಡುತ್ತಿದ್ದಾರೆ.

  • ಮಾಯಾಬಜಾರ್​ನಲ್ಲಿ ಕುಣಿಯಲು ರೆಡಿಯಾದ ಯುವರತ್ನ!

    ಮಾಯಾಬಜಾರ್​ನಲ್ಲಿ ಕುಣಿಯಲು ರೆಡಿಯಾದ ಯುವರತ್ನ!

    ಬೆಂಗಳೂರು: ಸಂತೋಷ್ ಆನಂದ್‍ರಾಮ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕಾಂಬಿನೇಷನ್ನಿನ ಎರಡನೇ ಚಿತ್ರ ಯುವರತ್ನ. ರಾಜಕುಮಾರದಂಥಾ ಸೂಪರ್ ಹಿಟ್ ಸಿನಿಮಾ ಕೊಟ್ಟಿರೋ ಈ ಜೋಡಿಯ ಈ ಎರಡನೇ ಸಿನಿಮಾ ಬಗ್ಗೆ ಸಹಜವಾಗಿಯೇ ಭಾರೀ ನಿರೀಕ್ಷೆಗಳು ಮೂಡಿಕೊಂಡಿವೆ. ಇದೀಗ ಯುವರತ್ನ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರೋ ಪುನೀತ್ ರಾಜ್ ಕುಮಾರ್ ಇದರ ನಡುವೆಯೇ ಬೇರೆ ಸಿನಿಮಾಗಳಿಗೆ ಸಪೋರ್ಟು ಮಾಡೋದು ಸೇರಿದಂತೆ ನಾನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಜೊತೆ ಜೊತೆಗೇ ಮಾಯಾಬಜಾರ್ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ಅದರಲ್ಲೊಂದು ಅತಿಥಿ ಪಾತ್ರವನ್ನು ನಿರ್ವಹಿಸಲೂ ತಯಾರಾಗಿದ್ದಾರೆ.

    ಪಿಆರ್ ಕೆ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರೋ ಎರಡನೇ ಚಿತ್ರ ಮಾಯಾಬಜಾರ್. ಈ ಚಿತ್ರದ ಪ್ರತಿಯೊಂದು ವಿಚಾರದಲ್ಲಿಯೂ ಗಮನ ಹರಿಸಿಯೇ ಪುನೀತ್ ನಿರ್ಮಾಣ ಕಾರ್ಯ ನಡೆಸುತ್ತಿದ್ದಾರೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡುತ್ತಿರೋ ಈ ಚಿತ್ರದಲ್ಲಿ ಬೃಹತ್ ತಾರಾಗಣವೇ ಇದೆ. ರಾಜ್ ಬಿ ಶೆಟ್ಟಿ, ವಸಿಷ್ಟ ಸಿಂಹ, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ಇದರಲ್ಲಿ ನಟಿಸಿದ್ದಾರೆ. ಈಗಾಗಲೇ ಹೊರಬಿದ್ದಿರೋ ಒಂದಷ್ಟು ವಿವರಗಳಿಂದಾಗಿ ಪಾಸಿಟಿವ್ ಟಾಕ್ ಕ್ರಿಯೇಟ್ ಮಾಡಿರೋ ಈ ಚಿತ್ರದ ಹಾಡೊಂದರಲ್ಲಿ ಪುನೀತ್ ನಟಿಸಲಿದ್ದಾರಂತೆ.

    ಸಮಯ ಸಿಕ್ಕರೂ, ಸಮಯದ ಅಭಾವವಿದ್ದರೂ ಸದಾ ಬೇರೆಯವರ ಚಿತ್ರಗಳಿಗೆ ತಮ್ಮದೇ ರೀತಿಯಲ್ಲಿ ಸಾಥ್ ಕೊಡುವವರು ಪುನೀತ್. ಹಾಗಿದ್ದ ಮೇಲೆ ತಾವೇ ನಿರ್ಮಾಣ ಮಾಡುತ್ತಿರೋ ಈ ಚಿತ್ರದಲ್ಲಿ ಪುನೀತ್ ಅತಿಥಿ ಪಾತ್ರದಲ್ಲಿ ನಟಿಸುತ್ತಿರೋದು ಅಚ್ಚರಿಯ ವಿಚಾರವೇನಲ್ಲ. ಆದರೆ ಈ ಹಾಡನ್ನು ಎಲ್ಲರೂ ಬೆರಗಾಗುವಂತೆ ರೂಪಿಸುವ ಸಲುವಾಗಿ ಚಿತ್ರತಂಡ ಶ್ರಮ ವಹಿಸುತ್ತಿದೆ. ಈ ವಿಶೇಷವಾದ ಹಾಡಿಗೆ ನೃತ್ಯ ನಿದೇಶನ ಮಾಡೋ ಜವಾಬ್ದಾರಿಯನ್ನು ಎ ಹರ್ಷ ವಹಿಸಿಕೊಂಡಿದ್ದಾರೆ. ಇಷ್ಟರಲ್ಲಿಯೇ ಪುನೀತ್ ಯುವರತ್ನ ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಈ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.