Tag: max film

  • ‘ಮ್ಯಾಕ್ಸ್’ ಸಿನಿಮಾ ಶೂಟಿಂಗ್ ಎಲ್ಲಿಯವರೆಗೆ ಬಂತು? ಸುದೀಪ್ ಕೊಟ್ರು ಗುಡ್ ನ್ಯೂಸ್

    ‘ಮ್ಯಾಕ್ಸ್’ ಸಿನಿಮಾ ಶೂಟಿಂಗ್ ಎಲ್ಲಿಯವರೆಗೆ ಬಂತು? ಸುದೀಪ್ ಕೊಟ್ರು ಗುಡ್ ನ್ಯೂಸ್

    ಸ್ಯಾಂಡಲ್‌ವುಡ್ ನಟ ಸದ್ಯ ‘ಮ್ಯಾಕ್ಸ್’ (Max Film) ಸಿನಿಮಾ ಮತ್ತು ಬಿಗ್ ಬಾಸ್ ಶೋ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ‘ಮ್ಯಾಕ್ಸ್’ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಮಾಡಿದ ಮೇಲೆ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಸಿಕ್ಕಿರಲಿಲ್ಲ. ಇದೀಗ ಚಿತ್ರದ ಕೆಲಸ ಎಲ್ಲಿಯವರೆಗೂ ಬಂತು ಎಂದು ಸುದೀಪ್ (Sudeep) ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಮುನಿಸು ಮರೆತು ಮತ್ತೆ ಒಂದಾದ ಕಾರ್ತಿಕ್, ಸಂಗೀತಾ

    ಇಂದು (ಜ.16) ಬೆಳ್ಳಂಬೆಳಿಗ್ಗೆ ಬಹುನಿರೀಕ್ಷಿತ ಮ್ಯಾಕ್ಸ್ ಬಗ್ಗೆ ಸುದೀಪ್ ಮಾಹಿತಿ ನೀಡುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಸಂಕ್ರಾಂತಿ’ ನಂತರ ಮ್ಯಾಕ್ಸ್ ಸಿನಿಮಾ ಕ್ಲೈಮ್ಯಾಕ್ಸ್ ಶೂಟ್ ಪುನರಾರಂಭ ಮಾಡುತ್ತಿದ್ದೇನೆ. ಈಗಾಗಲೇ ಶೂಟ್ ಮಾಡಲಾದ ಭಾಗಕ್ಕೆ ಎಲ್ಲಾ ಹೀರೋಗಳು ಧ್ವನಿ ನೀಡಿದ್ದಾರೆ. ಚಿತ್ರದ ಉಳಿದ ಭಾಗಗಳ ಚಿತ್ರೀಕರಣ ಪ್ರಗತಿಯಲ್ಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ‘ಮ್ಯಾಕ್ಸ್’ ಸಿನಿಮಾ ಬಗ್ಗೆ ಅಭಿಮಾನಿಗಳು ಪದೇ ಪದೇ ಅಪ್‌ಡೇಟ್ ಕೇಳುತ್ತಿದ್ದರು. ನಿಮ್ಮ ಪ್ರೀತಿ, ಕ್ಯೂರಿಯಾಸಿಟಿ ನನಗೆ ಅರ್ಥವಾಗುತ್ತದೆ. ಆದರೆ, ಸಿನಿಮಾ ಶೂಟ್ ಪೂರ್ಣಗೊಳ್ಳದೆ ಆ ಬಗ್ಗೆ ಅಪ್‌ಡೇಟ್ ನೀಡೋದು ಹೇಗೆ ಅನ್ನೋದು ಸುದೀಪ್ ಅವರ ಪ್ರಶ್ನೆ. ನವೆಂಬರ್‌ನಲ್ಲಿ ಮಳೆಯಿಂದ ಶೂಟ್ ಮಾಡಲು ಸಾಧ್ಯವಾಗಿರಲಿಲ್ಲ. ಡಿಸೆಂಬರ್‌ನಲ್ಲಿ ಕೆಲವು ಅಡೆತಡೆಗಳು ಎದುರಾದವು. ಈಗ ಸಂಕ್ರಾಂತಿ ಬಳಿಕ ಮತ್ತೆ ‘ಮ್ಯಾಕ್ಸ್’ ಶೂಟಿಂಗ್ ಶುರು ಆಗಿದೆ ಎಂದು ತಿಳಿಸಿದ್ದಾರೆ.

    ‘ಮ್ಯಾಕ್ಸ್’ ಚಿತ್ರವಲ್ಲದೇ ಹಲವು ಸಿನಿಮಾಗಳು ಸುದೀಪ್ ಕೈಯಲ್ಲಿದೆ. ಬಿಗ್ ಬಾಸ್ (Bigg Boss Kannada 10) ಫಿನಾಲೆ ಮುಗಿದ ಮೇಲೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.

  • ‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಕ್ಲೈ’ಮ್ಯಾಕ್ಸ್’ ಲುಕ್ ಔಟ್

    ‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಕ್ಲೈ’ಮ್ಯಾಕ್ಸ್’ ಲುಕ್ ಔಟ್

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ‘ಮ್ಯಾಕ್ಸ್’ (Max Film) ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ‘ಮ್ಯಾಕ್ಸ್’ ಚಿತ್ರದಲ್ಲಿನ ಸುದೀಪ್ ಲುಕ್ ರಿವೀಲ್ ಆಗಿದ್ದು, ಸಖತ್ ರಗಡ್ ಲುಕ್‌ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್ ಚಿತ್ರದ ಕಿಚ್ಚನ ಕ್ಲೈಮ್ಯಾಕ್ಸ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಬಿಗ್ ಬಾಸ್ ರಿಯಾಲಿಟಿ ಶೋ ನಡುವೆಯೂ ಕಿಚ್ಚ ಸುದೀಪ್ (Kiccha Sudeep) ‘ಮ್ಯಾಕ್ಸ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣಕ್ಕೆ ಸುದೀಪ್ ಸಾಥ್ ನೀಡಿದ್ದಾರೆ. ಚಿತ್ರದಲ್ಲಿನ ಲುಕ್ ಹೇಗಿದೆ ಎಂಬುದನ್ನ ಕೂಡ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಪ್ರತಾಪ್ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ದೊಡ್ಮನೆಗೆ ಪೊಲೀಸ್ ಎಂಟ್ರಿ

    ವಿಜಯ್ ಕಾರ್ತಿಕೇಯ ನಿರ್ದೇಶದ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ನಟಿಸಿದ್ದಾರೆ. ವಿಭಿನ್ನ ಕಥೆಯಲ್ಲಿ ಸುದೀಪ್ ಜೀವತುಂಬಿದ್ದಾರೆ. ಸಿನಿಮಾದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಬೆಳವಾಡಿ ಸೇರಿದಂತೆ ಹಲವರು ನಟಿಸಿದ್ದಾರೆ.

    ಇನ್ನೂ ‘ಮ್ಯಾಕ್ಸ್’ ಚಿತ್ರದ ಟೈಟಲ್ ಟೀಸರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ವಿಕ್ರಾಂತ್ ರೋಣ (Vikrantrona) ಸಿನಿಮಾದ ನಂತರ ‘ಮ್ಯಾಕ್ಸ್’ ಚಿತ್ರದ ಮೂಲಕ ಸುದೀಪ್ ಬರುತ್ತಿದ್ದು,ಈ  ಚಿತ್ರದ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಸಿನಿಮಾದ ರಿಲೀಸ್‌ ಅಪ್‌ಡೇಟ್‌ಗಾಗಿ ಕಿಚ್ಚನ ಅಭಿಮಾನಿಗಳು ಕಾಯುತ್ತಿದ್ದಾರೆ.

  • Max: ಕೇಕ್‌ ತಿನಿಸಿ ಉಗ್ರಂ ಮಂಜು ಹುಟ್ಟುಹಬ್ಬಕ್ಕೆ ಶುಭಕೋರಿದ ಕಿಚ್ಚ & ಟೀಮ್

    Max: ಕೇಕ್‌ ತಿನಿಸಿ ಉಗ್ರಂ ಮಂಜು ಹುಟ್ಟುಹಬ್ಬಕ್ಕೆ ಶುಭಕೋರಿದ ಕಿಚ್ಚ & ಟೀಮ್

    ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ ಉಗ್ರಂ ಮಂಜು (Ugramm Manju) ಅವರ ಹುಟ್ಟುಹಬ್ಬ ಸ್ಪೆಷಲ್ ಆಗಿ ಮ್ಯಾಕ್ಸ್ ಸಿನಿಮಾ ಸೆಟ್‌ನಲ್ಲಿ ಆಚರಿಸಲಾಗಿದೆ. ಕಿಚ್ಚ & ಟೀಮ್ ನೇತೃತ್ವದಲ್ಲಿ ಉಗ್ರಂ ಮಂಜು ಅವರ ಹುಟ್ಟುಹಬ್ಬ ಆಚರಿಸಲಾಗಿದೆ.

    ಕೇಕ್ ಕತ್ತರಿಸುವ ಮೂಲಕ ಉಗ್ರಂ ಮಂಜು ಹುಟ್ಟುಹಬ್ಬದ ಸೆಲೆಬ್ರೇಶನ್ ಮೋಡ್‌ನಲ್ಲಿದ್ದಾರೆ. ಸಹನಟನಿಗೆ ಕೇಕ್ ತಿನಿಸಿ ವಿಶೇಷವಾಗಿ ಸುದೀಪ್ (Kichcha Sudeep) ಮತ್ತು ಮ್ಯಾಕ್ಸ್ ಟೀಮ್ ಶುಭಕೋರಿದ್ದಾರೆ. ಈ ವೇಳೆ, ನಟಿ ಸಂಯುಕ್ತಾ ಹೊರನಾಡ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    ‘ಮ್ಯಾಕ್ಸ್’ (Max) ಚಿತ್ರದಲ್ಲಿ ಉಗ್ರಂ ಮಂಜು ಅವರು ಪೊಲೀಸ್ ಅಧಿಕಾರಿ ರೋಲ್‌ನಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಸಿಗಲಿದೆ. ಇದನ್ನೂ ಓದಿ:ರಣ್‌ಬೀರ್ ಜೊತೆಯೂ ರಶ್ಮಿಕಾ ಲಿಪ್ ಲಾಕ್

    ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದಲ್ಲಿ ಸಂಯುಕ್ತಾ, ವರಲಕ್ಷ್ಮಿ ಶರತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 8 ವರ್ಷಗಳ ನಂತರ ಸುದೀಪ್‌ಗೆ ಜೊತೆಯಾದ ‘ಮಾಣಿಕ್ಯ’ ಚೆಲುವೆ

    8 ವರ್ಷಗಳ ನಂತರ ಸುದೀಪ್‌ಗೆ ಜೊತೆಯಾದ ‘ಮಾಣಿಕ್ಯ’ ಚೆಲುವೆ

    ಕಿಚ್ಚ ಸುದೀಪ್ ಸದ್ಯ ‘ಮ್ಯಾಕ್ಸ್’ (Max Film) ಸಿನಿಮಾದ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಕಿಚ್ಚನ ಅಡ್ಡಾದಿಂದ ಹೊಸ ಸುದ್ದಿಯೊಂದು ಸಿಕ್ಕಿದೆ. 8 ವರ್ಷಗಳ ನಂತರ ಮ್ಯಾಕ್ಸ್ ಸುದೀಪ್‌ಗಾಗಿ ತಮಿಳು ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalakshmi Sarath Kumar) ಸಾಥ್ ನೀಡಿದ್ದಾರೆ. ಮಾಣಿಕ್ಯನಿಗೆ ನಟಿ ಜೊತೆಯಾಗಿದ್ದಾರೆ. ಇದನ್ನೂ ಓದಿ:ಬೆಂಗಳೂರು ಏರ್‌ಪೋರ್ಟ್‌ಗೆ ಮಾಧವನ್‌ ಮೆಚ್ಚುಗೆ- ನರೇಂದ್ರ ಮೋದಿ ಪ್ರತಿಕ್ರಿಯೆ

    ವಿಜಯ್ ಕಾರ್ತಿಕೇಯನ್ (Vijay Karthikeyan) ನಿರ್ದೇಶನದ ಮ್ಯಾಕ್ಸ್ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಹಿಂದೆ ಮಾಣಿಕ್ಯ (Maanikya) ಸಿನಿಮಾದಲ್ಲಿ ಕಿಚ್ಚನಿಗೆ ನಾಯಕಿಯಾಗಿ ಮೋಡಿ ಮಾಡಿದ್ದ ಚೆಲುವೆ ವರಲಕ್ಷ್ಮಿ ಶರತ್‌ಕುಮಾರ್ ಈಗ ‘ಮ್ಯಾಕ್ಸ್’ ಸಿನಿಮಾದಲ್ಲೂ ನಟಿಸಿದ್ದಾರೆ ಎನ್ನಲಾಗುತ್ತಿದೆ.

    ಸದ್ಯಕ್ಕಂತೂ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಅಲ್ಲದೇ, ವರಲಕ್ಷ್ಮಿ ಸೇರ್ಪಡೆ ಬಗ್ಗೆಯೂ ಅಧಿಕೃತ ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ, ವರಲಕ್ಷ್ಮಿ ಶರತ್‌ಕುಮಾರ್ ಅವರಿಗೆ ಈ ಸಿನಿಮಾದಲ್ಲಿ ಪ್ರಧಾನ ಪಾತ್ರವಿದ್ದು, ಈಗಾಗಲೇ ಅವರು ಮಹತ್ವದ ದೃಶ್ಯಗಳ ಚಿತ್ರೀಕರಣವನ್ನೂ ಕೂಡ ಮುಗಿಸಿದ್ದಾರಂತೆ. ಇನ್ನು, ಈ ಸಿನಿಮಾದಲ್ಲಿ ಸುದೀಪ್ ಜೊತೆಗೆ ಸಂಯುಕ್ತಾ ಹೊರನಾಡು, ಅನಿರುದ್ಧ್ ಭಟ್, ಸುಕೃತಾ ವಾಘ್ಳೆ ಮುಂತಾದವರು ನಟಿಸುತ್ತಿದ್ದಾರೆ.

    ಇತ್ತೀಚಿಗೆ ರಿಲೀಸ್ ಆಗಿದ್ದ ಮ್ಯಾಕ್ಸ್ (Max Film) ಸಿನಿಮಾದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕಿಚ್ಚನ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಕೈತುಂಬಾ ಸಿನಿಮಾಗಳ ನಡುವೆ ಬಿಗ್ ಬಾಸ್ ಶೋಗೂ (Bigg Boss Kannada) ತೆರೆಮರೆಯಲ್ಲಿ ಸಖತ್ ತಯಾರಿ ನಡೆಯುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]