Tag: max film

  • ಸೆ.2ರಂದು ‘ಮ್ಯಾಕ್ಸ್’ ಸಿನಿಮಾದ ಅಪ್‌ಡೇಟ್- ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    ಸೆ.2ರಂದು ‘ಮ್ಯಾಕ್ಸ್’ ಸಿನಿಮಾದ ಅಪ್‌ಡೇಟ್- ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    ಕಿಚ್ಚ ಸುದೀಪ್ (Kiccha Sudeep) ನಟನೆಯ ಬಹುನಿರೀಕ್ಷಿತ ‘ಮ್ಯಾಕ್ಸ್’ (Max Film) ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಸುದೀಪ್ ಹುಟ್ಟುಹಬ್ಬದಂದು (ಸೆ.2) ಸಿನಿಮಾ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಹೊರಬೀಳಲಿದೆ. ಅಭಿಮಾನಿಗಳ ಕಾತರಕ್ಕೆ ಸಿಹಿಸುದ್ದಿ ಸಿಗಲಿದೆ.

    ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ 3 ವರ್ಷಗಳ ನಂತರ ಮ್ಯಾಕ್ಸ್‌ ಚಿತ್ರದ ಮೂಲಕ ಸುದೀಪ್ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಸದ್ಯ ‘ಮ್ಯಾಕ್ಸ್’ ಸಿನಿಮಾದ ಮೊದಲ ಮಾಸ್ ಸಾಂಗ್ ಅನ್ನು ಸೆ.2ರಂದು ಬೆಳಗ್ಗೆ 6:56ಕ್ಕೆ ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಜೊತೆ ನಟನೆಗೆ ಶಾಸಕ ಪ್ರದೀಪ್ ಈಶ್ವರ್‌ಗೆ ಅವಕಾಶ

     

    View this post on Instagram

     

    A post shared by MAX (@max_themovie)

    ಸದ್ಯ ಟೀಸರ್‌ನಿಂದ ಧೂಳೆಬ್ಬಿಸಿರುವ ‘ಮ್ಯಾಕ್ಸ್’ ಚಿತ್ರ ಮಾಸ್ ಸಾಂಗ್‌ನಿಂದ ಕಿಚ್ಚನ ಫ್ಯಾನ್ಸ್ ಜೋಶ್ ತುಂಬಲು ಕೌಂಟ್‌ಡೌನ್ ಶುರುವಾಗಿದೆ. ಸುದೀಪ್ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್, ಸುಕೃತಾ ವಾಗ್ಲೆ, ತಮಿಳು ನಟಿ ವರಲಕ್ಷ್ಮಿ ಸೇರಿದಂತೆ ಅನೇಕರು ನಟಿಸಿದ್ದಾರೆ.

    ಅದಷ್ಟೇ ಅಲ್ಲ, ಸುದೀಪ್ ಹುಟ್ಟುಹಬ್ಬದಂದೇ (ಸೆ.2) ಅನೂಪ್ ಭಂಡಾರಿ ಜೊತೆಗಿನ ಸಿನಿಮಾ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಗಲಿದೆ. ‘ವಿಕ್ರಾಂತ್‌ ರೋಣ’ ಬಳಿಕ ಮತ್ತೊಮ್ಮೆ ಅನೂಪ್ ಜೊತೆ ಸುದೀಪ್ ಕೈಜೋಡಿಸಲಿದ್ದಾರೆ.

  • ನಾನು ಸುದೀಪ್ ಅವರ ದೊಡ್ಡ ಅಭಿಮಾನಿ: ‘ಮ್ಯಾಕ್ಸ್’ ನಟಿ ಸಂಯುಕ್ತಾ ಹೊರನಾಡ್

    ನಾನು ಸುದೀಪ್ ಅವರ ದೊಡ್ಡ ಅಭಿಮಾನಿ: ‘ಮ್ಯಾಕ್ಸ್’ ನಟಿ ಸಂಯುಕ್ತಾ ಹೊರನಾಡ್

    ಲೈಫು ಇಷ್ಟೇನೆ, ಟೋಬಿ ಸಿನಿಮಾ ಖ್ಯಾತಿಯ ಸಂಯುಕ್ತಾ ಹೊರನಾಡ್ ‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಜೊತೆ ನಟಿಸಿದ್ದು, ಚಿತ್ರೀಕರಣ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ನಾನು ಕಿಚ್ಚ ಸುದೀಪ್ ಅವರ ದೊಡ್ಡ ಅಭಿಮಾನಿ ಎಂದು ಸಂಯುಕ್ತಾ ಮಾತನಾಡಿದ್ದಾರೆ. ಇದನ್ನೂ ಓದಿ:‘ಕ್ಯಾ ಲಫ್ಡಾ’ ಅಂತಾ ಹೆಜ್ಜೆ ಹಾಕಿದ ರಾಮ್ ಪೋತಿನೇನಿ, ಕಾವ್ಯಾ ಥಾಪರ್

    ನಾನು ಸುದೀಪ್ ಸರ್ ಅವರ ದೊಡ್ಡ ಅಭಿಮಾನಿ. ನಾನು ಈ ಹಿಂದೆ ‘ಜಿಗರ್‌ಥಂಡ’ ಸಿನಿಮಾದಲ್ಲಿ ಅವರ ಜೊತೆ ಕೆಲಸ ಮಾಡಿದ್ದೇನೆ. ಸರ್ ಕೆಲಸ ಮಾಡುವಾಗ ಸಿನಿಮಾ ಮೇಕಿಂಗ್‌ನಲ್ಲೂ ಭಾಗಿಯಾಗುತ್ತಿದ್ದರು. ಅವರ ಎನರ್ಜಿ, ಸಿನಿಮಾ ಮೇಲೆ ಅವರಿಗಿರುವ ಪ್ರೀತಿ ಮಾತ್ರ ಅದ್ಭುತ. ಅವರ ಜೊತೆ ನಾನು ತೆರೆಹಂಚಿಕೊಂಡಿರೋದಕ್ಕೆ ಖುಷಿಯಿದೆ ಎಂದು ಸಂಯುಕ್ತಾ ಹೊರನಾಡ್ (Samyukta Hornad) ಸಂತಸ ವ್ಯಕ್ತಪಡಿಸಿದ್ದಾರೆ.

    ‘ಮ್ಯಾಕ್ಸ್’ ಸಿನಿಮಾ ಈಗೀನ ಕಾಲಕ್ಕೆ ತಕ್ಕಂತೆ ಇದೆ. ಚಿತ್ರದಲ್ಲಿ ದೊಡ್ಡ ಮಟ್ಟದ ಸ್ಟಂಟ್ಸ್ ಕೂಡ ಇದೆ. ಬಾಡಿ ಡಬಲ್ ಬಳಸದೆ ಸುದೀಪ್‌ ಸರ್ ತಾವೇ ಸ್ಟಂಟ್ಸ್ ಮಾಡಿದ್ದಾರೆ. ಈ ಚಿತ್ರ ಫ್ಯಾನ್ಸ್‌ಗೆ ಪೈಸಾ ವಸೂಲ್ ಸಿನಿಮಾ ಆಗಿದೆ. ‘ಮ್ಯಾಕ್ಸ್’ ಸಿನಿಮಾ ನಿಜಕ್ಕೂ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ನಟಿ ಮಾತನಾಡಿದ್ದಾರೆ.

    ‘ಮ್ಯಾಕ್ಸ್’ (Max Film) ಸಿನಿಮಾದಲ್ಲಿ ಸುದೀಪ್ (Sudeep) ಜೊತೆ ಸಂಯುಕ್ತಾ ಹೊರನಾಡ್, ವರಲಕ್ಷ್ಮಿ ಶರತ್‌ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯ ಚಿತ್ರದ ಮೊದಲ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಸುದೀಪ್ ಮಾಸ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಈಗ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  • ಕಿಚ್ಚನ ಫ್ಯಾನ್ಸ್‌ಗೆ ಗುಡ್‌ ನ್ಯೂಸ್- ಆಗಸ್ಟ್‌ 2ರಂದು ಸುದೀಪ್‌ ಸಿನಿಮಾ ರಿಲೀಸ್‌

    ಕಿಚ್ಚನ ಫ್ಯಾನ್ಸ್‌ಗೆ ಗುಡ್‌ ನ್ಯೂಸ್- ಆಗಸ್ಟ್‌ 2ರಂದು ಸುದೀಪ್‌ ಸಿನಿಮಾ ರಿಲೀಸ್‌

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅಭಿಮಾನಿಗಳಿಗೆ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. ಸುದೀಪ್ ನಟಿಸಿರುವ ಸಿನಿಮಾ ಇದೀಗ ರಿಲೀಸ್‌ಗೆ ಸಜ್ಜಾಗಿದೆ. ‘ಹೆಬ್ಬುಲಿ’ (Hebbuli) ಸಿನಿಮಾ ಮರುಬಿಡುಗಡೆಗೆ ಸಜ್ಜಾಗಿದೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಮಾಜಿ ಪತ್ನಿಗೆ ಪ್ರೀತಿ ತೋರಿಸಿದ ಹಾರ್ದಿಕ್‌- ಮತ್ತೆ ಒಂದಾಗ್ತಾರಾ?

    ‘ಮ್ಯಾಕ್ಸ್’ (Max) ಚಿತ್ರಕ್ಕಾಗಿ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಈಗ ಸುದೀಪ್ ನಟನೆಯ ಸೂಪರ್ ಹಿಟ್ ಚಿತ್ರ ‘ಹೆಬ್ಬುಲಿ’ (Hebbuli) ಮತ್ತೊಮ್ಮೆ ಬಿಡುಗಡೆಗೆ ರೆಡಿಯಾಗಿದೆ. ಇದೇ ಆಗಸ್ಟ್ 2ರಂದು ಹೆಬ್ಬುಲಿ ಚಿತ್ರ ತೆರೆಕಾಣಲಿದೆ.

    ಸುದೀಪ್ ಜೊತೆ ಅಮಲಾ ಪೌಲ್ (Amala Paul) ಜೋಡಿಯಾಗಿ ನಟಿಸಿದ್ದರು. ‘ಗಜಕೇಸರಿ’ ಖ್ಯಾತಿಯ ಕೃಷ್ಣ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ನಿರ್ಮಾಪಕ ಉಮಾಪತಿ ನಿರ್ಮಾಣ ಮಾಡಿದ್ದರು. 7 ವರ್ಷಗಳ ನಂತರ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಈಗಾಗಲೇ ಜಾಕಿ, ಎ, ರಾಬರ್ಟ್, ಶಾಸ್ತ್ರಿ ಸಿನಿಮಾಗಳು ಮರುಬಿಡುಗಡೆಯಾಗಿ ಸದ್ದು ಮಾಡಿತ್ತು. ಹಾಗಾಗಿ ಕಿಚ್ಚನ ಸಿನಿಮಾ ರೀ ರಿಲೀಸ್ ಆಗಲಿದೆ.

    ಇನ್ನೂ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗುವ ನಿರೀಕ್ಷೆಯಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮ ಬರುತ್ತಿರುವ ಕಾರಣ ಅದಕ್ಕೂ ‘ಮ್ಯಾಕ್ಸ್’ ಚಿತ್ರ ಅಬ್ಬರಿಸಲಿದೆ ಎನ್ನಲಾಗಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ‘ಮ್ಯಾಕ್ಸ್’ ಚಿತ್ರದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್- ಸಿನಿಮಾ ಕಥೆ ಬಗ್ಗೆ ಶುರುವಾಯ್ತು ಚರ್ಚೆ

    ‘ಮ್ಯಾಕ್ಸ್’ ಚಿತ್ರದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್- ಸಿನಿಮಾ ಕಥೆ ಬಗ್ಗೆ ಶುರುವಾಯ್ತು ಚರ್ಚೆ

    ಕಿಚ್ಚ ಸುದೀಪ್ (Kichcha Sudeep) ನಟನೆಯ ‘ಮ್ಯಾಕ್ಸ್’ (Max Film) ಜು.16ರಂದು ಬಹುಭಾಷೆಗಳಲ್ಲಿ ಟೀಸರ್ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದಿದೆ. ಎಲ್ಲಾ ಭಾಷೆಯಲ್ಲೂ ಮಾಕ್ಸ್ ಚಿತ್ರದ ಟೀಸರ್ ಝಲಕ್‌ ನೋಡಿ ಫಿದಾ ಆಗಿದ್ದಾರೆ. ಈ ಬೆನ್ನಲ್ಲೇ ಮ್ಯಾಕ್ಸ್ ಸಿನಿಮಾ ಕಥೆ ಹೇಗಿರಬಹುದು ಎಂದೆಲ್ಲಾ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ಧ್ಯಾನ್, ಸದಾ ನಟನೆಯ ‘ಮೊನಾಲಿಸಾ’ ಚಿತ್ರಕ್ಕೆ 20 ವರ್ಷಗಳ ಸಂಭ್ರಮ

    ಪ್ಯಾನ್ ಇಂಡಿಯಾ ಚಿತ್ರವಾದ ‘ಮ್ಯಾಕ್ಸ್’ ಒಂದು ಮಾಸ್ ಚಿತ್ರವಾಗಿದ್ದು, ಟೀಸರ್‌ನಲ್ಲಿರುವ ಡೈಲಾಗ್ ತುಣುಕುಗಳು ಈಗಾಗಲೇ ಭರ್ಜರಿ ಸದ್ದು ಮಾಡಿ, ಸಿನಿ ಪ್ರೇಕ್ಷಕರು ಚಿತ್ರದ ಬರುವಿಕೆಯನ್ನು ಎದುರು ನೋಡುವಂತೆ ಮಾಡಿದೆ. ಬಾ ಬಾ ಬ್ಲಾಕ್ ಶಿಪ್ ಹ್ಯಾವ್ ಯೂ ಎನಿ ಕ್ಲೂ ಎಂದು ಖಡಕ್ ಡೈಲಾಗ್ ಹೇಳುವ ಮೂಲಕ ಸುದೀಪ್ ಮಸ್ತ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

    ಮಾಸ್- ಗಾಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಸುದೀಪ್‌ರನ್ನು ಕಂಡು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಟೀಸರ್‌ನಲ್ಲಿನ ಆ್ಯಕ್ಷನ್ ದೃಶ್ಯಗಳು ಮೈ ಜುಂ ಎನ್ನಿಸುವಂತಿದ್ದು ಮಾಸ್ ಅಭಿಮಾನಿಗಳ ಕಣ್ಮನ ಸೆಳೆದಿದೆ. ಸದ್ಯ ಚಿತ್ರದ ಟೀಸರ್‌ ಮಿಲಿಯನ್‌ಗಟ್ಟಲೇ ವಿವ್ಸ್‌ ಪಡೆದು ಮುನ್ನುಗ್ಗುತ್ತಿದೆ. ಕಿಚ್ಚನ ಅವತಾರಕ್ಕೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ.

    ವಿಜಯ್ ಕಾರ್ತಿಕೇಯ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ‘ಮ್ಯಾಕ್ಸ್’ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮಿ ಶರತ್ ಕುಮಾರ್ (Varalaxmi Sarathkumar), ಸಂಯುಕ್ತ ಹೊರನಾಡು (Samyukta Hornad), ಪ್ರಮೋದ್ ಶೆಟ್ಟಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮತ್ತು ಸುದೀಪ್‌ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

  • ‘ಮ್ಯಾಕ್ಸ್’ ಆಟ ಶುರು- ಮಾಸ್‌ ಆಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್

    ‘ಮ್ಯಾಕ್ಸ್’ ಆಟ ಶುರು- ಮಾಸ್‌ ಆಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್

    ಹುನಿರೀಕ್ಷಿತ ಚಿತ್ರ ‘ಮ್ಯಾಕ್ಸ್’ (Max Film) ಇಂದು (ಜು.16) ಟೀಸರ್ ಬಿಡುಗಡೆ ಮಾಡಿ ಎಲ್ಲೆಡೆ ಸದ್ದು ಮಾಡುತ್ತಿದೆ. ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರನ್ನು ಕಂಡು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಟೀಸರ್‌ನಲ್ಲಿನ ಆ್ಯಕ್ಷನ್ ದೃಶ್ಯಗಳು ಮೈ ಜುಂ ಎನ್ನಿಸುವಂತಿದ್ದು ಮಾಸ್ ಅಭಿಮಾನಿಗಳ ಕಣ್ಮನ ಸೆಳೆದಿದೆ. ಇದನ್ನೂ ಓದಿ:ಕಾಮಿಡಿ ಸ್ಟಾರ್ ಈಗ ಸ್ಯಾಂಡಲ್‌ವುಡ್‌ನ ಬೇಡಿಕೆಯ ಖಡಕ್ ವಿಲನ್

    ಪ್ಯಾನ್ ಇಂಡಿಯಾ ಚಿತ್ರವಾದ `ಮ್ಯಾಕ್ಸ್’ ಒಂದು ಮಾಸ್ ಚಿತ್ರವಾಗಿದ್ದು, ಟೀಸರ್‌ನಲ್ಲಿರುವ ಡೈಲಾಗ್ ತುಣುಕುಗಳು ಈಗಾಗಲೇ ಭರ್ಜರಿ ಸದ್ದು ಮಾಡಿ, ಸಿನಿ ಪ್ರೇಕ್ಷಕರು ಚಿತ್ರದ ಬರುವಿಕೆಯನ್ನು ಎದುರು ನೋಡುವಂತೆ ಮಾಡಿದೆ. ಬಾ ಬಾ ಬ್ಲ್ಯಾಕ್ ಶಿಪ್ ಹ್ಯಾವ್ ಯೂ ಎನಿ ಕ್ಲೂ ಎಂದು ಖಡಕ್ ಡೈಲಾಗ್ ಹೇಳುವ ಮೂಲಕ ಸುದೀಪ್ ಮಸ್ತ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

    ವಿಜಯ್ ಕಾರ್ತಿಕೇಯ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ‘ಮ್ಯಾಕ್ಸ್’ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ಬಣ್ಣ ಹಚ್ಚಿದ್ದಾರೆ.

    ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಾಗೂ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

  • ಜು.16ರಂದು ಸಿಗಲಿದೆ ‌’ಮ್ಯಾಕ್ಸ್‌’ ಚಿತ್ರದ ಅಪ್‌ಡೇಟ್‌- ಕಿಚ್ಚ ಕೊಟ್ರು ಗುಡ್‌ ನ್ಯೂಸ್

    ಜು.16ರಂದು ಸಿಗಲಿದೆ ‌’ಮ್ಯಾಕ್ಸ್‌’ ಚಿತ್ರದ ಅಪ್‌ಡೇಟ್‌- ಕಿಚ್ಚ ಕೊಟ್ರು ಗುಡ್‌ ನ್ಯೂಸ್

    ಸ್ಯಾಂಡಲ್‌ವುಡ್ ನಟ ಸುದೀಪ್ (Sudeep) ನಟನೆಯ ‘ಮ್ಯಾಕ್ಸ್’ (Max) ಸಿನಿಮಾದ ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ಭರದಿಂದ ನಡೆಯುತ್ತಿವೆ. ಇದರ ನಡುವೆ ‘ಮ್ಯಾಕ್ಸ್’ ಸಿನಿಮಾದ ಬಗ್ಗೆ ಏನು ಅಪ್‌ಡೇಟ್ ಸಿಗದೇ ಕಾಯುತ್ತಿದ್ದ ಫ್ಯಾನ್ಸ್‌ಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ.

    ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಗ್ಗೆ ಜುಲೈ 16ರಂದು ಮಧ್ಯಾಹ್ನ 12:34ಕ್ಕೆ ಬಿಗ್ ಅಪ್‌ಡೇಟ್ ಸಿಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಸಿನಿಮಾ ಬಗೆಗಿನ ಸುದ್ದಿ ಏನೆಂದು ಜು.16ರವರೆಗೂ ಕಾಯಬೇಕಿದೆ. ಇದನ್ನೂ ಓದಿ:‘ಕೆಂಡ’ ಟ್ರೈಲರ್‌ನಲ್ಲಿ ಕಂಡು ಕೇಳರಿಯದ ಕಥೆಯ ಸುಳಿವು!

    ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

    ಅಂದಹಾಗೆ, 2022ರಲ್ಲಿ ತೆರೆಕಂಡ `ವಿಕ್ರಾಂತ್ ರೋಣ ಚಿತ್ರದ ನಂತರ ಸುದೀಪ್ ಗ್ಯಾಪ್ ತೆಗೆದುಕೊಂಡರು. ಬಿಗ್ ಬಾಸ್ ಶೋ ಸೇರಿದಂತೆ ಇತರೆ ಕೆಲಸಗಳಲ್ಲಿ ಬ್ಯುಸಿಯಾದರು. ಹಾಗಾಗಿ ಮ್ಯಾಕ್ಸ್ ಚಿತ್ರ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ.

  • ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಸುದೀಪ್

    ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಸುದೀಪ್

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ನಟನೆಯ ‘ಮ್ಯಾಕ್ಸ್’ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಹೀಗಿರುವಾಗ ‘ಮ್ಯಾಕ್ಸ್’ (Max Film) ಚಿತ್ರ ರಿಲೀಸ್ ಆಗೋದು ಯಾವಾಗ ಎಂದು ಫ್ಯಾನ್ಸ್‌ಗೆ ಸುದೀಪ್ ಅಪ್‌ಡೇಟ್ ಕೊಟ್ಟಿದ್ದಾರೆ. ಇದನ್ನೂ ಓದಿ:ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಟೆಂಪಲ್‌ ರನ್‌ – ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಕೆ

    2022ರಲ್ಲಿ ತೆರೆಕಂಡ ‘ವಿಕ್ರಾಂತ್ ರೋಣ’ (Vikrant Rona) ಚಿತ್ರದ ನಂತರ ಸುದೀಪ್ ಗ್ಯಾಪ್ ತೆಗೆದುಕೊಂಡರು. ಬಿಗ್ ಬಾಸ್ ಶೋ ಸೇರಿದಂತೆ ಇತರೆ ಕೆಲಸಗಳಲ್ಲಿ ಬ್ಯುಸಿಯಾದರು. ಈಗ ‘ಮ್ಯಾಕ್ಸ್’ ಕಥೆ ಹೇಳೋಕೆ ಸುದೀಪ್ ರೆಡಿಯಾಗಿದ್ದಾರೆ. ಇದೇ ಆಗಸ್ಟ್‌ಗೆ ಸಿನಿಮಾ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸುದೀಪ್, ‘ಮ್ಯಾಕ್ಸ್’ ಚಿತ್ರದ ಡಬ್ಬಿಂಗ್ ಪೂರ್ಣಗೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಆಗಸ್ಟ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಬಹುದು ಎಂದು ಪ್ಲ್ಯಾನ್‌ ಮಾಡಿದ್ದೇವೆ ಎಂದು ಸುದೀಪ್ ತಿಳಿಸಿದರು. ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಸಿನಿಮಾ ರಿಲೀಸ್ ಆಗೋದು ಪಕ್ಕಾ. ಈ ಸುದ್ದಿ ಕೇಳಿ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.

    ಅಂದಹಾಗೆ, ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರಕ್ಕೆ ವಿಜಯ್ ಕಾರ್ತಿಕೇಯ (Vijay Karthikeya) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

  • ‘ಮ್ಯಾಕ್ಸ್’ ಸಿನಿಮಾದ ಶೂಟಿಂಗ್ ಮುಗಿಸಿದ ಕಿಚ್ಚ ಸುದೀಪ್

    ‘ಮ್ಯಾಕ್ಸ್’ ಸಿನಿಮಾದ ಶೂಟಿಂಗ್ ಮುಗಿಸಿದ ಕಿಚ್ಚ ಸುದೀಪ್

    ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಇದೀಗ ‘ಮ್ಯಾಕ್ಸ್’ (Max Film) ಸಿನಿಮಾದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ‘ಮ್ಯಾಕ್ಸ್’ ಚಿತ್ರದ ಕೊನೆಯ ದಿನದ ಶೂಟಿಂಗ್ ವಿಡಿಯೋವನ್ನು ಹಂಚಿಕೊಂಡು ಚಿತ್ರತಂಡಕ್ಕೆ ಸುದೀಪ್ ಧನ್ಯವಾದ ತಿಳಿಸಿದ್ದಾರೆ.

    ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಅರ್ಜುನ್ ಮಹಾಕ್ಷಯ್ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ. ಮಹಾಬಲಿಪುರಂನಲ್ಲಿ ಮ್ಯಾಕ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅವಕಾಶ ಸಿಕ್ಕರೆ ಕನ್ನಡದಲ್ಲಿ ನಟಿಸ್ತೇನೆ : ನಟಿ ಚಾಂದನಿ

    ಇದು ಸುದೀರ್ಘ 10 ತಿಂಗಳ ಪ್ರಯಾಣವಾಗಿದೆ. ನಾನು ಪ್ರತಿ ಕ್ಷಣ ಎಂಜಾಯ್ ಮಾಡಿದ್ದೇನೆ. ಅದ್ಭುತ ತಂಡ ಮತ್ತು ಕಲಾವಿದರ ಜೊತೆ ಕೆಲಸ ಮಾಡಿರೋದಾಗಿ ತಿಳಿಸಿದ್ದಾರೆ. ನನ್ನ ಚೆನ್ನಾಗಿ ಹೋಸ್ಟ್ ಮಾಡಿದ್ದಕ್ಕಾಗಿ ಧನ್ಯವಾದಗಳು ಧನು ಸರ್ ಎಂದು ಸುದೀಪ್ ಬರೆದುಕೊಂಡಿದ್ದಾರೆ. ನಿರ್ದೇಶಕ ವಿಜಯ್‌ಗೆ ಸುದೀಪ್ ಥ್ಯಾಂಕ್ಯೂ ಎಂದಿದ್ದಾರೆ. ಈ ಮೂಲಕ ‘ಮ್ಯಾಕ್ಸ್’ ಸಿನಿಮಾ ಕಡೆಯ ದಿನ ಶೂಟಿಂಗ್ ವಿಡಿಯೋ ಶೇರ್ ಮಾಡಿದ್ದಾರೆ.

    ಅಂದಹಾಗೆ, ಸುದೀಪ್ ಜೊತೆ ವರಲಕ್ಷ್ಮಿ ಶರತ್ ಕುಮಾರ್, ಸಂಯುಕ್ತಾ ಹೊರನಾಡ್, ಸುಕೃತಾ, ಅನಿರುದ್ಧ ಭಟ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಅಂದಹಾಗೆ, ವಿಕ್ರಾಂತ್‌ ರೋಣ ಚಿತ್ರದ ನಂತರ ‘ಮ್ಯಾಕ್ಸ್‌’ ಸಿನಿಮಾದ ಮೂಲಕ ಬರುತ್ತಿರೋ ಸುದೀಪ್‌ ನಟನೆಯ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.

  • ಭಾವಿ ಪತಿಯನ್ನು ಟ್ರೋಲ್ ಮಾಡಿದ್ದಕ್ಕೆ ‘ಮಾಣಿಕ್ಯ’ ನಟಿ ತಿರುಗೇಟು

    ಭಾವಿ ಪತಿಯನ್ನು ಟ್ರೋಲ್ ಮಾಡಿದ್ದಕ್ಕೆ ‘ಮಾಣಿಕ್ಯ’ ನಟಿ ತಿರುಗೇಟು

    ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar)  ಅವರು ಸಿನಿಮಾಗಿಂತ ವೈಯಕ್ತಿಕ ಕಾರಣಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ಅದ್ಧೂರಿಯಾಗಿ ನಿಕೋಲಾಯ್ ಜೊತೆ ಎಂಗೇಜ್‌ಮೆಂಟ್ ಆಗಿತ್ತು. ಈ ಬೆನ್ನಲ್ಲೇ ನಟಿಯ ಭಾವಿ ಪತಿ ನೆಗೆಟಿವ್ ಆಗಿ ಟ್ರೋಲ್ ಕೂಡ ಆಗಿತ್ತು. ಈ ವಿಚಾರವಾಗಿ ನಟಿ ಪ್ರತಿಕ್ರಿಯೆ ನೀಡಿದ್ದಾರೆ.

    ಡಿವೋರ್ಸ್ ಆಗಿರುವ ನಿಕೋಲಾಯ್ ಸಚ್‌ದೇವ್ (Nicholai Sachdev) ಜೊತೆ ವರಲಕ್ಷ್ಮಿ 2ನೇ ಮದುವೆ ಆಗಲು ಸಜ್ಜಾಗಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ನಟಿ ಮಾತನಾಡಿದ್ದಾರೆ. ನನ್ನ ತಂದೆ (Sarathkumar) ಕೂಡ 2ನೇ ಮದುವೆ ಆದರು. ಅದರಲ್ಲಿ ಯಾವ ತಪ್ಪು ಇಲ್ಲ. ನನ್ನ ಕಣ್ಣಿಗೆ ನಿಕ್ ಅವರು ಹ್ಯಾಂಡ್ಸಮ್ ಆಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ನೆಗೆಟಿವ್ ಆಗಿ ಮಾತನಾಡುವವರ ಬಗ್ಗೆ ನಾನು ಎಂದೂ ಕೇರ್ ಮಾಡುವುದಿಲ್ಲ ಹೇಳಿದ್ದಾರೆ.‌ ಇದನ್ನೂ ಓದಿ:ಕಾಮಾಕ್ಯ ದೇವಿಯ ದರ್ಶನ ಪಡೆದ ‘ಗಾಳಿಪಟ 2’ ನಟಿ

    ಬೇರೆಯವರಿಗೆ ನಾನು ಯಾಕೆ ಉತ್ತರ ಕೊಡಬೇಕು. ನಿಕ್ ತಂದೆ-ತಾಯಿ ಒಂದು ಆರ್ಟ್ ಗ್ಯಾಲರಿ ನಡೆಸುತ್ತಾರೆ. ನಿಕ್ ಮತ್ತು ಅವರ ಪುತ್ರಿ ಪವರ್ ಲಿಫ್ಟಿಂಗ್‌ನಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. ಅವರ ಮಾಜಿ ಪತ್ನಿ ಜೊತೆಗೂ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ. ನಮ್ಮ ನಡುವೆ ಎಲ್ಲವೂ ಚೆನ್ನಾಗಿದೆ ಎಂದಿದ್ದಾರೆ.

    ಅಂದಹಾಗೆ, ‘ಮಾಣಿಕ್ಯ’ ಸಿನಿಮಾದ ಬಳಿಕ ಮತ್ತೆ ವರಲಕ್ಷ್ಮಿ ಸುದೀಪ್ ಜೊತೆ ಕೈಜೋಡಿಸಿದ್ದಾರೆ. ಮಾಕ್ಸ್ ಸಿನಿಮಾದಲ್ಲಿ ಅವರು ನಟಿಸಿದ್ದಾರೆ.

  • Max: ಸಿನಿಮಾ ಸೆಟ್‌ನಲ್ಲಿ ಸುದೀಪ್‌ರನ್ನು ಭೇಟಿಯಾದ ಕಾರ್ತಿಕ್ ಮಹೇಶ್

    Max: ಸಿನಿಮಾ ಸೆಟ್‌ನಲ್ಲಿ ಸುದೀಪ್‌ರನ್ನು ಭೇಟಿಯಾದ ಕಾರ್ತಿಕ್ ಮಹೇಶ್

    ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ (Bigg Boss Kannada 10) ಕಾರ್ತಿಕ್ ಮಹೇಶ್ (Karthik Mahesh) ಇದೀಗ ಕಿಚ್ಚ ಸುದೀಪ್‌ರನ್ನು ಭೇಟಿಯಾಗಿದ್ದಾರೆ. ಚೆನ್ನೈನಲ್ಲಿ ನಡೆಯುತ್ತಿರುವ ಸುದೀಪ್ ನಟನೆಯ ‘ಮ್ಯಾಕ್ಸ್’ (Max Film) ಸಿನಿಮಾ ಸೆಟ್‌ಗೆ ಕಾರ್ತಿಕ್ ಆಗಮಿಸಿದ್ದು, ಕಿಚ್ಚನ ಜೊತೆಯಿರುವ ಫೋಟೋವನ್ನು ಕ್ಲಿಕ್ ಮಾಡಿದ್ದಾರೆ.

    ದೊಡ್ಮನೆ ಆಟ ಮುಗಿದ ಮೇಲೆ ಸುದೀಪ್‌ರನ್ನು ಕಾರ್ತಿಕ್ ಮಹೇಶ್ ಭೇಟಿಯಾಗಿರಲಿಲ್ಲ. ಬಹುದಿನಗಳ ನಂತರ ಚೆನ್ನೈ ಮಹಾಬಲಿಪುರಂನಲ್ಲಿ ಸುದೀಪ್‌ರನ್ನು ಭೇಟಿಯಾಗಿ ಕೆಲ ಕಾಲ ಸಮಯ ಕಳೆದಿದ್ದಾರೆ. ‘ಮ್ಯಾಕ್ಸಿಮಮ್ ಲವ್’ ಎಂದು ಅಡಿಬರಹ ನೀಡಿ ಕಿಚ್ಚನ ಜೊತೆಗಿನ ಫೋಟೋ ಶೇರ್ ಮಾಡಿ ಕಾರ್ತಿಕ್ ಮಹೇಶ್ ಸಂಭ್ರಮಿಸಿದ್ದಾರೆ.

     

    View this post on Instagram

     

    A post shared by Karthik Mahesh (@karthi_mahesh)


    ಕಣ್ಣಿಗೆ ಸ್ಟೈಲೀಶ್ ಸನ್‌ಗ್ಲಾಸ್ ತೊಟ್ಟು ಸುದೀಪ್ ಸಖತ್ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್ ಚಿತ್ರದ ಲುಕ್ ಲೀಕ್ ಆಗದೇ ಇರುವ ಹಾಗೇ ಎಚ್ಚರ ಕೂಡ ವಹಿಸಿದ್ದಾರೆ. ಇದನ್ನೂ ಓದಿ:ಚುನಾವಣೆ ಪ್ರಚಾರ ವೇಳೆ ‘ಡೆವಿಲ್’ ಡೈಲಾಗ್ ಹೊಡೆದ ದರ್ಶನ್

    ‘ವಿಕ್ರಾಂತ್‌ರೋಣ’ ಚಿತ್ರದ ನಂತರ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಈ ಸಿನಿಮಾಗೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.