Tag: max film

  • ‘ಮ್ಯಾಕ್ಸ್’ ಖ್ಯಾತಿಯ ಶ್ರೀಧರ್‌ಗೆ ಅನಾರೋಗ್ಯ- ಚಿಕಿತ್ಸೆಗೆ ಸಹಾಯ ಕೋರಿದ ನಟ

    ‘ಮ್ಯಾಕ್ಸ್’ ಖ್ಯಾತಿಯ ಶ್ರೀಧರ್‌ಗೆ ಅನಾರೋಗ್ಯ- ಚಿಕಿತ್ಸೆಗೆ ಸಹಾಯ ಕೋರಿದ ನಟ

    ‘ಮ್ಯಾಕ್ಸ್’ (Max) ಚಿತ್ರದಲ್ಲಿ ಅಭಿನಯಿಸಿದ್ದ ನಟ ಶ್ರೀಧರ್ (Shridhara) ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ಬಾಲಿವುಡ್ ಸ್ಟಾರ್ಸ್‌

    ‘ವಧು’ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಶ್ರೀಧರ್ ಅವರು ಏಕಾಏಕಿ ಅನಾರೋಗ್ಯಕ್ಕೀಡಾಗಿದ್ದಾರೆ. ಇನ್‌ಫೆಕ್ಷನ್‌ನಿಂದ ನಟ ತೀವ್ರ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಅವರು ಬೆಂಗಳೂರಿನ ಹೆಬ್ಬಾಳದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟನನ್ನು ಅವರ ತಾಯಿ ನೋಡಿಕೊಳ್ತಿದ್ದಾರೆ. ಪ್ರತಿ ದಿನ ಚಿಕಿತ್ಸೆಗೆ 10ರಿಂದ 15 ಸಾವಿರ ರೂ. ಖರ್ಚಾಗುತ್ತಿದೆ. ಹಾಗಾಗಿ ಹೆಚ್ಚಿನ ಹಣ ಸಹಾಯಕ್ಕಾಗಿ ನಟನ ಪರ ‘ಕಮಲಿ’ ಖ್ಯಾತಿಯ ಅಂಕಿತಾ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಶ್ರೀಧರ್ ಅವರ ಪ್ರಸ್ತುತ ಪರಿಸ್ಥಿತಿಯ ಫೋಟೋ, ಬ್ಯಾಂಕ್ ಮಾಹಿತಿ ಸಮೇತ ಪೋಸ್ಟ್ ಮಾಡಿದ್ದಾರೆ. ಅವರಿಗೆ ನಟಿ ಸ್ವಪ್ನಾ ದೀಕ್ಷಿತ್ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ನಾನೊಬ್ಬ ಮುಸ್ಲಿಂ ಆಗಿದ್ದಕ್ಕೆ ನಾಚಿಕೆ ಆಗ್ತಿದೆ: ಉಗ್ರರ ದಾಳಿಗೆ ಸಲೀಂ ಮರ್ಚೆಂಟ್ ಕಿಡಿ

     

    View this post on Instagram

     

    A post shared by Ankietha M (@ankietha_madhusudana)

    ನಮಸ್ಕಾರ, ನಾನು ಶ್ರೀಧರ ಇದ್ದಕ್ಕಿದ ಹಾಗೆ ಅನಾರೋಗ್ಯಕ್ಕೆ ತುತ್ತಾಗಿ ಬಹಳಷ್ಟು ಸಂಕಷ್ಟದಲ್ಲಿದ್ದೇನೆ. ಆಸ್ಪತ್ರೆಯ ಖರ್ಚನ್ನು ಭರಿಸಲಾಗದಷ್ಟು ತೊಂದರೆಯಾಗಿದೆ. ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಒಂದು ದಿನಕ್ಕೆ ಆಸ್ಪತ್ರೆಯ ಖರ್ಚು, ಮಾತ್ರೆಯ ಖರ್ಚು 10ರಿಂದ 15 ಸಾವಿರ ರೂ. ಆಗುತ್ತಿದೆ. ಇದ್ದ ಉಳಿತಾಯದ ಹಣ, ಸಹಾಯದ ಹಣ ಎಲ್ಲವೂ ಮುಗಿದುಹೋಗಿದೆ. ದಯಮಾಡಿ ತಾವೆಲ್ಲರೂ ಶ್ರೀಧರನಿಗೆ ಕೈಲಾದ ಹಣದ ಸಹಾಯ ಮಾಡಬೇಕೆಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ. ನನ್ನನ್ನು ಬದುಕಿಸಲು ಪ್ರಯತ್ನಿಸಿ, ಕೈಲಾದಷ್ಟು ಹಣದ ಸಹಾಯ ಮಾಡಿ ಎಂದು ಶ್ರೀಧರ್ ಹೇಳಿರುವುದನ್ನು ವಿಡಿಯೋದಲ್ಲಿ ನಟಿ ತಿಳಿಸಿದ್ದಾರೆ.

    ವಧು, ಪಾರು ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಅವರು ನಟಿಸಿದ್ದಾರೆ. ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

  • ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ: ಉಗ್ರರ ದಾಳಿ ಬಗ್ಗೆ ಸುದೀಪ್ ಕಿಡಿ

    ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ: ಉಗ್ರರ ದಾಳಿ ಬಗ್ಗೆ ಸುದೀಪ್ ಕಿಡಿ

    ಹಲ್ಗಾಮ್‌ನಲ್ಲಿ (Pahalgam Terrorist Attack) ಹಿಂದೂಗಳ ಮೇಲೆ ನಡೆದ ಉಗ್ರರ ದಾಳಿ ಬಗ್ಗೆ ಶಿವಣ್ಣ, ಯಶ್ (Yash), ರಾಧಿಕಾ ಪಂಡಿತ್ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ನಟ ಸುದೀಪ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ, ಉಗ್ರರ ಹೀನ ಕೃತ್ಯಕ್ಕೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಸುದೀಪ್ (Sudeep) ಮನವಿ ಮಾಡಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ ಉಗ್ರರ ಹೇಯ ಕೃತ್ಯ ಖಂಡಿಸಿದ ಶಿವಣ್ಣ, ರಶ್ಮಿಕಾ ಮಂದಣ್ಣ, ಅನುಷ್ಕಾ ಶರ್ಮಾ

    ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ. ದೇಶದ ಶಕ್ತಿಯ ಮೇಲೆ ಮಾಡಲಾದ ದಾಳಿ. ಇದು ಸುಮ್ಮನಿರುವ ಸಮಯವಲ್ಲ. ಈ ಘಟನೆಗೆ ಪ್ರತಿಕ್ರಿಯೆ ಕೊಡಲೇಬೇಕು. ಈ ಹೀನ ಕೃತ್ಯದಲ್ಲಿ ಪಾಲ್ಗೊಂಡವರ ವಿರುದ್ಧ ತಕ್ಷಣ ಕ್ರಮ ವಹಿಸಿ ಅಂತಾ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ರಾಜನಾಥ್ ಸಿಂಗ್‌ಗೆ ಎಕ್ಸ್‌ನಲ್ಲಿ ಮೂಲಕ ಸುದೀಪ್ ಮಾಡಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ: ಉಗ್ರರ ಕೃತ್ಯದ ಬಗ್ಗೆ ಅನುಪಮ್ ಖೇರ್ ಆಕ್ರೋಶ

    ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಪೈಶಾಚಿಕ ಕೃತ್ಯಕ್ಕೆ 27 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

  • ನನ್ನ ಕೈಲಾದಷ್ಟು ಸಹಾಯ ಮಾಡಿದ್ದೀನಿ, ನೀವು ಕೈಜೋಡಿಸಿ- ಅಭಿಮಾನಿಗಳಿಗೆ ಕಿಚ್ಚ ಮನವಿ

    ನನ್ನ ಕೈಲಾದಷ್ಟು ಸಹಾಯ ಮಾಡಿದ್ದೀನಿ, ನೀವು ಕೈಜೋಡಿಸಿ- ಅಭಿಮಾನಿಗಳಿಗೆ ಕಿಚ್ಚ ಮನವಿ

    ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಸಿನಿಮಾ ಹೊರತುಪಡಿಸಿ ಸಮಾಜಮುಖಿ ಕೆಲಸದಲ್ಲೂ ಮುಂದಿದ್ದಾರೆ. ಸದಾ ಸಂಕಷ್ಟದಲ್ಲಿರುವವ ನೆರವಿಗೆ ಸುದೀಪ್ ನಿಲ್ಲುತ್ತಾರೆ. ಇದೀಗ ಅಭಿಮಾನಿಯ ಪುಟ್ಟ ಮಗಳ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ವಿಡಿಯೋ ಮೂಲಕ ಸುದೀಪ್ ಮನವಿ ಮಾಡಿದ್ದಾರೆ.‌ ಇದನ್ನೂ ಓದಿ:ಟಾಲಿವುಡ್ ನೆಪೋಟಿಸಂ ಬಗ್ಗೆ ಮಾತನಾಡಿದ ‘ಲಕ್ಕಿ ಭಾಸ್ಕರ್‌’ ನಿರ್ಮಾಪಕ ನಾಗ ವಂಶಿ

    ಈ ವಿಡಿಯೋ ನೋಡುತ್ತಿರುವ ಪ್ರತಿಯೊಬ್ಬರಿಗೂ ಕಿಚ್ಚನ ನಮಸ್ತೇ. ವಿಡಿಯೋ ಮಾಡಲು ಬಹಳ ಮುಖ್ಯವಾದ ಕಾರಣ ಇದೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಹಾಗೂ ಅವರ ಪತ್ನಿ ನಾಗಶ್ರೀ ದಂಪತಿಗೆ 1 ವರ್ಷ 10 ತಿಂಗಳ ಪುಟ್ಟ ಮಗಳು (Baby Girl) ಇದ್ದಾಳೆ. ಮಗುವಿನ ಹೆಸರು ಕೀರ್ತನಾ. ಆ ಮುಗ್ಧ ಕಂದಮ್ಮನಿಗೆ ಸ್ಪೈನ್ ಮ್ಯಾಸ್ಕ್ಯೂಲಾರ್ ಅಟ್ರೋಫಿ (SMA2) ಎಂಬ ಆರೋಗ್ಯ ಸಮಸ್ಯೆ ಇದೆ. ಇದು ಬಹಳ ಅಪರೂಪದ ಕಾಯಿಲೆ. ಈ ಕಾಯಿಲೆಗೆ ಔಷಧಿ ಇದೆ. ಗುಣ ಆಗುವ ಸಾಧ್ಯತೆಯಿದೆ ಆದರೆ ಆ ವೈದ್ಯಕೀಯ ಚಿಕಿತ್ಸೆಗೆ ಬೇಕಾದ ಹಣ ಎಷ್ಟು ಎಂದು ಕೇಳಿದಂತೆ ಮೈ ಜುಮ್ ಅನಿಸುತ್ತದೆ. ಈ ಚಿಕಿತ್ಸೆ ಬೇಕಾಗಿರುವುದು 16 ಕೋಟಿ ರೂ..ಪೋಷಕರು ಆಸ್ತಿಯನ್ನು ಮಾರಿ ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಸಾಕಷ್ಟು ಜನರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಸಹಾಯ ಮಾಡಲು ಮುಂದೆ ಬಂದಿದ್ದಾರೆ. ನನ್ನ ಕೈಲಾದ ಸಹಾಯ ನಾನು ಮಾಡಿದ್ದೀನಿ. ನೀವು ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ ಎಂದು ವಿಡಿಯೋದಲ್ಲಿ ಸುದೀಪ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಂತಿಮ ಘಟ್ಟ ತಲುಪಿಕೊಂಡ ಸುಚೇಂದ್ರ ಪ್ರಸಾದ್ ನಿರ್ದೇಶನ ‘ಪದ್ಮಗಂಧಿ’!

    ಮಗುವಿನ ಚಿಕಿತ್ಸೆಗಾಗಿ ನಿಂತ ಸುದೀಪ್ ನಡೆ ನೋಡಿ ಅಭಿಮಾನಿಗಳು ಶ್ಲಾಘಿಸಿದ್ದಾರೆ. ಎಲ್ಲರೂ ಕೈಲಾದಷ್ಟು ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಸುದೀಪ್ ಮನವಿ ಮಾಡಿರೋದು ನೋಡಿ ಫ್ಯಾನ್ಸ್ ಭೇಷ್ ಎಂದಿದ್ದಾರೆ.

     

    View this post on Instagram

     

    A post shared by PUBLiC TV (@publictv)

    ಅಂದಹಾಗೆ, ‘ಮ್ಯಾಕ್ಸ್’ ಸಕ್ಸಸ್ ಬಳಿಕ ಹೊಸ ಸಿನಿಮಾದ ತಯಾರಿ ಬ್ಯುಸಿಯಾಗಿದ್ದಾರೆ. ‘ವಿಕ್ರಾಂತ್ ರೋಣ’ ಡೈರೆಕ್ಟರ್ ಅನೂಪ್ ಭಂಡಾರಿ ಜೊತೆ ಮತ್ತೆ ಸುದೀಪ್ ಕೈಜೋಡಿಸಿದ್ದಾರೆ.

  • ನಿಮ್ಮ ಬೆಂಬಲದಿಂದ ಸವಾಲುಗಳನ್ನು ಎದುರಿಸುವ ಹುಮ್ಮಸ್ಸು ನೀಡಿದೆ- ಫ್ಯಾನ್ಸ್‌ಗೆ ಸುದೀಪ್‌ ಥ್ಯಾಂಕ್ಸ್

    ನಿಮ್ಮ ಬೆಂಬಲದಿಂದ ಸವಾಲುಗಳನ್ನು ಎದುರಿಸುವ ಹುಮ್ಮಸ್ಸು ನೀಡಿದೆ- ಫ್ಯಾನ್ಸ್‌ಗೆ ಸುದೀಪ್‌ ಥ್ಯಾಂಕ್ಸ್

    ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Sudeep) ಅವರು ಜ.31ಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 29 ವರ್ಷಗಳು ಪೂರೈಸಿವೆ. ಹಾಗಾಗಿ ಪ್ರೋತ್ಸಾಹಿಸಿ ಬೆಂಬಲಿಸಿದ ಫ್ಯಾನ್ಸ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ:‘ಅಂಕಲ್, ಆಂಟಿ ಲವ್‌ಸ್ಟೋರಿ’ ಎಂದು ಟ್ರೋಲ್ ಮಾಡಿದವರಿಗೆ ತಕ್ಕ ಉತ್ತರ ಕೊಟ್ಟ ಗೌತಮಿ

    ಸುದೀಪ್ ಪೋಸ್ಟ್‌ನಲ್ಲಿ 29 ವರ್ಷಗಳು.. ಈವರೆಗಿನ ನನ್ನ ಈ ಸುದೀರ್ಘ ಪ್ರಯಾಣಕ್ಕಾಗಿ ನನ್ನಲ್ಲಿ ಕೃತಜ್ಞತಾ ಭಾವನೆ ಇದೆ. ಅಭಿಮಾನಿಗಳನ್ನು ರಂಜಿಸೋದು, ಪ್ರತಿನಿಧಿಸುವ ಕತೆಗಳಿಗೆ ನಾನು ಪಾತ್ರವಾಗುವುದು ನನ್ನ ಪಾಲಿಗೆ ಅತ್ಯಂತ ಗೌರವದ ಕೆಲಸ. ನಿಮ್ಮಿಂದ ಸಿಕ್ಕಿರುವ ಸತತ ಪ್ರೀತಿ, ಬೆಂಬಲ ನನ್ನಲ್ಲಿ ಸ್ಫೂರ್ತಿ ತುಂಬುತ್ತಲೇ ಬರುತ್ತಿದೆ. ಅಂಥ ಡೆಡಿಕೇಟೆಡ್ ಅಭಿಮಾನಿಗಳನ್ನು ಹೊಂದಿರೋದು ನನ್ನ ಸೌಭಾಗ್ಯ ಎಂದಿದ್ದಾರೆ.

    ನೀವು ನೀಡುತ್ತಿರುವ ಬೆಂಬಲದಿಂದಲೇ ಪ್ರತಿ ಸವಾಲುಗಳನ್ನು ಎದುರಿಸುವ ಹುಮ್ಮಸ್ಸು ನೀಡಿದೆ. ಅದ್ಯಾವ ಮಟ್ಟಿಗೆ ಅರ್ಥಪೂರ್ಣವಾಗಿದೆ ಎಂದು ವ್ಯಕ್ತಪಡಿಸಲು ನನ್ನಿಂದ ಸಾಧ್ಯವಿಲ್ಲ. ಈ ಅದ್ಭುತವಾದ ಪ್ರಯಾಣದ ಭಾಗವಾಗಿದ್ದಕ್ಕಾಗಿ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದಷ್ಟೇ ನಾನು ಹೇಳಬಲ್ಲೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚ ಬರೆದುಕೊಂಡಿದ್ದಾರೆ.

    https://youtu.be/3gYUPQBGmRw?si=NM4UCwKqresE3f_C

    ಇನ್ನೂ ಸುದೀಪ್ ಅವರು ‘ಸ್ಪರ್ಶ’ ಸಿನಿಮಾದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು. ಆ ನಂತರ ಹುಚ್ಚ, ನಂದಿ, ಕಾಶಿ, ತಿರುಪತಿ, ಹುಬ್ಬಳ್ಳಿ, ಗೂಳಿ, ವೀರ ಮದಕರಿ, ಕೆಂಪೇಗೌಡ ಇತ್ತೀಚಿನ ‘ಮ್ಯಾಕ್ಸ್’ (Max Film) ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

  • ಎಲ್ಲಾ ಹೀರೋಗೂ ಒಂದು ಟೈಮ್‌ಲೈನ್‌ ಇರುತ್ತದೆ: ರಿಟೈರ್‌ಮೆಂಟ್‌ ಬಗ್ಗೆ ಸುದೀಪ್‌ ಮಾತು

    ಎಲ್ಲಾ ಹೀರೋಗೂ ಒಂದು ಟೈಮ್‌ಲೈನ್‌ ಇರುತ್ತದೆ: ರಿಟೈರ್‌ಮೆಂಟ್‌ ಬಗ್ಗೆ ಸುದೀಪ್‌ ಮಾತು

    ಸುದೀಪ್ ಅವರು ‘ಮ್ಯಾಕ್ಸ್’ (Max) ಸಿನಿಮಾ ಗೆದ್ದ ಸಂಭ್ರಮದಲ್ಲಿದ್ದಾರೆ. ಇದರ ನಡುವೆ ಸುದೀಪ್ (Sudeep) ನಿವೃತ್ತಿ ಬಗ್ಗೆ ಮಾತೆತ್ತಿದ್ದಾರೆ. ಎಲ್ಲಾ ಹೀರೋಗೂ ಒಂದು ಟೈಮ್ ಲೈನ್ ಅಂತ ಇರುತ್ತದೆ. ಕೊನೆಗೆ ಅವರು ಬೋರ್ ಆಗಿಬಿಡುತ್ತಾರೆ ಅಂತ ರಿಟೈರ್‌ಮೆಂಟ್ ಬಗ್ಗೆ ಸುದೀಪ್ (Sudeep) ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ಅನಯಾ ವಸುಧಾ ಜೊತೆ ಚಾರ್ಲಿ-777 ನಿರ್ದೇಶಕ ಕಿರಣ್ ರಾಜ್ ಎಂಗೇಜ್

    ಸಂದರ್ಶನವೊಂದರಲ್ಲಿ ಸಿನಿಮಾ ಕೆರಿಯರ್ ಬಗ್ಗೆ ಮಾತನಾಡಿದ ಸುದೀಪ್, ಟೆನ್ಶನ್ ಅಂತ ಅಲ್ಲ, ಸುಸ್ತಾಗಬಹುದು. ಆದರೆ ನೀವು ಮಾಡೋದೆಲ್ಲಾ ಕರೆಕ್ಟ್ ಮಾಡಿದ್ರೆ ಎಲ್ಲಿ ಸುಸ್ತಾಗುತ್ತೆ? ನಮಗೆಲ್ಲರಿಗೂ ವಿಶ್ರಾಂತಿ ಬೇಕು. ಹೊಟ್ಟೆ ಇದೆ ಅಂತಾ ಸಿಕ್ಕಾಪಟ್ಟೆ ತಿನ್ನೋನಲ್ಲ. ನಿದ್ದೆ ಮಾಡೋಕೆ ಹಾಸಿಗೆ ಇದೆ ಅಂತ ಸುಮ್ನೆ ನಿದ್ದೆ ಮಾಡೋನಲ್ಲ. ರಿಟೈರ್‌ಮೆಂಟ್ ಆದ ಮೇಲೆ ರೆಸ್ಟ್ ಇದ್ದೇ ಇರುತ್ತೆ ಅಲ್ವಾ? ಅಲ್ಲಿಯವರೆಗೂ ಯಾಕೆ ರಿಟೈರ್ ಆಗಬೇಕು. ಕೆಲಸ ಮಾಡೋಣ ಎಂದಿದ್ದಾರೆ.

    ಪ್ರತಿಯೊಬ್ಬ ಹೀರೋಗೂ ಒಂದು ಟೈಮ್‌ಲೈನ್ ಅಂತ ಇರುತ್ತದೆ. ಕೊನೆಗೆ ಬೋರ್ ಆಗಿಬಿಡ್ತಾರೆ. ನಮ್ಮಂತವರಿಗೆಲ್ಲಾ ಅಣ್ಣನ ರೋಲ್, ತಮ್ಮನ ರೋಲ್, ಚಿಕ್ಕಪ್ಪ ರೋಲ್ ಸೂಟ್ ಆಗಲ್ಲ. ಮಾಡೋದು ಇಲ್ಲ. ಆಗ ನಮಗೆ ಏನು ಅನಿಸುತ್ತೆ ಅಂದ್ರೆ, ಏನಾದರೂ ಹೊಸದು ಮಾಡಬೇಕು ಅಂತ ಅನಿಸುತ್ತದೆ. ನಾನು ಹೀರೋ ಆಗಿ ಇನೊಬ್ಬರಿಗೆ ಕಾಯಿಸೋನಲ್ಲ, ಸೆಟ್‌ಗೆ ಬೇಗ ಹೋಗಿರುತ್ತೇನೆ. ಇನ್ನೂ ಹೀರೋ ಆಗಿ ಇಳಿದ ಮೇಲೆ ಬೇರೆ ಪಾತ್ರ ಮಾಡೋಕೆ ಹೋಗಿ ಮತ್ತೊಬ್ಬರಿಗೆ ಕಾಯುತ್ತಾ ಇರೋಕೆ ಆಗುತ್ತಾ? ಎಂದಿದ್ದಾರೆ. ಸೆಟ್‌ಗೆ ಅವರು ಬಂದಿಲ್ಲ. ಇವರು ಬಂದಿಲ್ಲ ಅನ್ನೋದು ನಮಗೆ ಸೂಟ್ ಆಗುತ್ತಾ? ಎಂದಿದ್ದಾರೆ.

    ಮುಂದೆ ಸಿನಿಮಾ ಇನ್ನೂ ಮಾಡಬಹುದು, ನಿರ್ದೇಶನ ಅಥವಾ ನಿರ್ಮಾಣ ಮಾಡಬಹುದು ಗೊತ್ತಿಲ್ಲ. ಸಿನಿಮಾ ನಮಗೆ ಬಹಳ ಹತ್ತಿರವಾಗಿರುವುದರಿಂದ, ಅದರಿಂದ ದೂರ ಆಗ್ತೀನಿ ಅಂತ ಹೇಳೋಕೆ ಆಗಲ್ಲ. ಒಬ್ಬ ನಾಯಕ ನಟನೆಯಿಂದ ದೂರ ಆಗಬಹುದು. ಅದನ್ನ ಇವತ್ತು ಅಟ್ಯಾಚ್‌ಮೆಂಟ್ ಮಾಡಿಕೊಂಡು ಕೂತಿಲ್ಲ. ಪೋಷಕ ನಟನಾಗಿ ಸೈರಾ ನರಸಿಂಹ ರೆಡ್ಡಿ, ‘ದಬಾಂಗ್’ನಲ್ಲಿ ಬೇರೆ ತರಹದ ಪಾತ್ರ ಮಾಡುತ್ತಾ ಇರಲಿಲ್ಲ. ನಾನು ಯಾವತ್ತೂ ಹೀರೋ ಇಮೇಜ್‌ಗೆ ಅಂಟಿಕೊಂಡಿಲ್ಲ. ಆ ಪಾತ್ರಗಳನ್ನ ಮಾಡೋಕೆ ಖುಷಿ ಇದೆ. ತೃಪ್ತಿ ಇದೆ ಎಂದು ಮಾತನಾಡಿರುವ ಸುದೀಪ್ ಮುಂದಿನ ಸಿನಿಮಾ ಕೆರಿಯರ್ ಪ್ಲ್ಯಾನ್‌ ಬಗ್ಗೆ ತಿಳಿಸಿದ್ದಾರೆ.

  • ಹೊಸ ವರ್ಷಕ್ಕೆ ಕಿಚ್ಚ ಕೊಟ್ರು ಗುಡ್ ನ್ಯೂಸ್: ಹೀರೋ ಆಗಿ ಸುದೀಪ್ ಅಕ್ಕನ ಮಗ ಎಂಟ್ರಿ

    ಹೊಸ ವರ್ಷಕ್ಕೆ ಕಿಚ್ಚ ಕೊಟ್ರು ಗುಡ್ ನ್ಯೂಸ್: ಹೀರೋ ಆಗಿ ಸುದೀಪ್ ಅಕ್ಕನ ಮಗ ಎಂಟ್ರಿ

    ‘ಮ್ಯಾಕ್ಸ್’ (Max) ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ಕಿಚ್ಚ ಸುದೀಪ್ (Kichcha Sudeep) ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಸುದ್ದಿ ಕೊಟ್ಟಿದ್ದಾರೆ. ಹೊಸ ವರ್ಷಕ್ಕೆ ನಟ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಕಿಚ್ಚನ ಕಡೆಯಿಂದ ಬಂದ ಸುದ್ದಿ ಕೇಳಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಅಂದಹಾಗೆ, ಇದು ಸುದೀಪ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಅಲ್ಲ, ಬದಲಾಗಿ ಸುದೀಪ್ ನಿರ್ಮಾಣ ಮಾಡುತ್ತಿರುವ ಚಿತ್ರ. ಇದನ್ನೂ ಓದಿ:ಹೊಸ ವರ್ಷದ ದಿನವೇ ‘ಡೆವಿಲ್’ ಚಿತ್ರದ ಡಬ್ಬಿಂಗ್‌ನಲ್ಲಿ ದರ್ಶನ್ ಬ್ಯುಸಿ

    ಕಿಚ್ಚನ ಸುಪ್ರಿಯಾನ್ವಿ ಪ್ರೊಡಕ್ಷನ್ ಮತ್ತು KRG ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದೆ. ಈ ಸಿನಿಮಾಗೆ ನಾಯಕನಾಗಿ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕನಾಗಿ ನಟಿಸುತ್ತಿದ್ದಾರೆ. ಸಂಚಿತ್ ಚೊಚ್ಚಲ ಸಿನಿಮಾವಾಗಿದ್ದು, ಮೊದಲ ಸಿನಿಮಾಗೆ ಸುದೀಪ್ ಬಂಡವಾಳ ಹೂಡುತ್ತಿರೋದು ಸಿನಿಮಾ ಮೇಲಿನ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿದೆ. ಇನ್ನು ‘ಎಕ್ಕ’ ಸಿನಿಮಾದ ಬಳಿಕ KRG ಸ್ಟುಡಿಯೋಸ್ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದೆ. KRG ಕಡೆಯಿಂದ ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳು ಬರುತ್ತಿದೆ. ಸುದೀಪ್ ಸಹೋದರಿಯ ಪುತ್ರನ ಸಿನಿಮಾ ಆಗಿರೋದ್ರಿಂದ ಈ ಪ್ರಾಜೆಕ್ಟ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸಂಚಿತ್ ಮೊದಲ ಸಿನಿಮಾಗೆ ವಿವೇಕ ನಿರ್ದೇಶನದ ಹೊಣೆಗಾರಿಕೆ ಹೊತ್ತಿದ್ದಾರೆ. ಇದು ನಿರ್ದೇಶಕರ ಚೊಚ್ಚಲ ಸಿನಿಮಾವಾಗಿದೆ.

    ಈ ಮೊದಲು ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿರೋ ಅನುಭವ ಹೊಂದಿರೋ ವಿವೇಕ, ಈಗ ಸ್ವತಂತ್ರ ನಿರ್ದೇಶಕನಾಗಿ ಸ್ಯಾಂಡಲ್ವುಡ್ ಎಂಟ್ರಿ ಕೊಡುತ್ತಿದ್ದಾರೆ. ಮೈಸೂರು ಮೂಲದ ವಿವೇಕ ಅವರು ಸಂಚಿತ್‌ಗೆ ವಿಭಿನ್ನ ಕಥೆಯನ್ನ ತೆರೆ ಮೇಲೆ ತರುವ ಪ್ರಯತ್ನ ಮಾಡ್ತಿದ್ದಾರೆ.

     

    View this post on Instagram

     

    A post shared by Sanchith Sanjeev (@sanchithsanjeev)

    ಇದು ಕ್ರೈಂ ಥ್ರಿಲ್ಲರ್ ಸ್ಟೋರಿ ಆಗಿದ್ದು, ಈ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಜನವರಿ 24ರಂದು ಅದ್ಧೂರಿಯಾಗಿ ಲಾಂಚ್ ಆಗಲಿದೆ. ಮುಹೂರ್ತದ ಬಳಿಕ ಶೂಟಿಂಗ್ ಕೂಡ ಅಂದಿನಿಂದಲೇ ಪ್ರಾರಂಭವಾಗಲಿದೆ. ಇನ್ನು ಈ ಸಿನಿಮಾದ ನಾಯಕಿ ಯಾರು? ತಂತ್ರಜ್ಞರು ಯಾರು ಎನ್ನುವ ಅನೇಕ ಪ್ರಶ್ನೆಗಳಿಗೆ ಮುಹೂರ್ತದ ದಿನವೇ ಉತ್ತರ ಸಿಗಲಿದೆ.

  • ಶಿವಣ್ಣ ಫೈಟರ್, ಅವರು ಯಾವತ್ತೂ ಕುಗ್ಗಿಲ್ಲ, ಕುಗ್ಗೋದು ಇಲ್ಲ: ಸುದೀಪ್

    ಶಿವಣ್ಣ ಫೈಟರ್, ಅವರು ಯಾವತ್ತೂ ಕುಗ್ಗಿಲ್ಲ, ಕುಗ್ಗೋದು ಇಲ್ಲ: ಸುದೀಪ್

    ಟ ಶಿವರಾಜ್‌ಕುಮಾರ್‌ಗೆ ಡಿ.24ರಂದು ಸರ್ಜರಿ ಇರೋ ಹಿನ್ನೆಲೆ ಇಂದು (ಡಿ.18) ಪತ್ನಿಯೊಂದಿಗೆ ಅಮೆರಿಕಗೆ ತೆರಳಲಿದ್ದಾರೆ. ಈ ಕುರಿತು ನಟ ಸುದೀಪ್‌ ಪಬ್ಲಿಕ್‌ ಟಿವಿಗೆ ಮಾತನಾಡಿ, ಶಿವಣ್ಣ ಫೈಟರ್ ಅವರು ಯಾವತ್ತೂ ಕುಗ್ಗಿಲ್ಲ, ಕುಗ್ಗೋದು ಇಲ್ಲ ಎಂದಿದ್ದಾರೆ. ಇದನ್ನೂ ಓದಿ:ಚಿಕಿತ್ಸೆಗಾಗಿ ಅಮೆರಿಕಗೆ ಹೊರಡುವ ಮುನ್ನ ಶಿವಣ್ಣರನ್ನು ನೋಡಲು ಬಂದ ಪೂರ್ಣಿಮಾ ಕುಟುಂಬ

    ಶಿವಣ್ಣ ಫೈಟರ್, ಅವರು ಯಾವತ್ತೂ ಕುಗಿಲ್ಲ, ಕುಗ್ಗೋದು ಇಲ್ಲ. ಅವರ ಪಕ್ಕದಲ್ಲಿ ದೊಡ್ಡ ಶಕ್ತಿಯಿದೆ ಅವರೇ ಗೀತಾ ಅಕ್ಕ. ಇವರ ಜೊತೆ ದೊಡ್ಡ ಶಕ್ತಿಯಾಗಿ ಕೆ.ಪಿ ಶ್ರೀಕಾಂತ್ ನಿಂತಿದ್ದಾರೆ. ಅವರು ಯಾವತ್ತೂ ಶಿವಣ್ಣರನ್ನು ಬಿಟ್ಟು ಕೊಟ್ಟಿಲ್ಲ. ಇವರೆಲ್ಲರೂ ಜೊತೆಯಾಗಿ ಇರಬೇಕಾದ್ರೆ ಇಲ್ಲಿ ಪಾಸಿಟಿವಿಟಿ ಇದೆ. ಹಾಗಾಗಿ ಶಿವಣ್ಣ ಫೈಟ್‌ ಮಾಡುತ್ತಾರೆ. ನನಗೆ ಇದರಲ್ಲಿ ಡೌಂಟ್ ಇಲ್ಲ ಎಂದಿದ್ದಾರೆ ಸುದೀಪ್.

    ಅಂದಹಾಗೆ, ಇಂದು ಶಿವಣ್ಣ ಮನೆಗೆ ಕಿಚ್ಚ ಸುದೀಪ್ ಭೇಟಿ ನೀಡಿದ್ದು, ನಟನನ್ನು ತಬ್ಬಿಕೊಂಡು ಧೈರ್ಯ ತುಂಬಿದ್ದಾರೆ. ನಟನ ಆರೋಗ್ಯದ ಕುರಿತು ಕುಶಲೋಪರಿ ವಿಚಾರಿಸಿದ್ದಾರೆ.

  • ಉಪೇಂದ್ರ ಗುರು, ನಾನು ಶಿಷ್ಯ ಎಂದ ಸುದೀಪ್ ಮಾತಿಗೆ ರಿಯಲ್ ಸ್ಟಾರ್ ಹೇಳೋದೇನು?

    ಉಪೇಂದ್ರ ಗುರು, ನಾನು ಶಿಷ್ಯ ಎಂದ ಸುದೀಪ್ ಮಾತಿಗೆ ರಿಯಲ್ ಸ್ಟಾರ್ ಹೇಳೋದೇನು?

    ಪೇಂದ್ರ ನಟನೆಯ ‘ಯುಐ’ (UI) ಸಿನಿಮಾ ಮತ್ತು ಸುದೀಪ್ ನಟನೆಯ ‘ಮ್ಯಾಕ್ಸ್’ (Max) ಡಿಸೆಂಬರ್‌ನಲ್ಲಿ ರಿಲೀಸ್‌ಗೆ ಸಜ್ಜಾಗಿದೆ. ಹೀಗಿರುವಾಗ ‘ಯುಐ’ ಸುದ್ದಿಗೋಷ್ಠಿಯಲ್ಲಿ ಈಗಾಗಲೇ ಸುದೀಪ್ ಹೇಳಿರುವ ಮಾತಿಗೆ ಉಪ್ಪಿ ರಿಯಾಕ್ಟ್ ಮಾಡಿದ್ದಾರೆ. ಉಪೇಂದ್ರ ಗುರು, ನಾನು ಶಿಷ್ಯ ಎಂದ ಸುದೀಪ್ (Sudeep) ಮಾತಿಗೆ ನಟ ರಿಯಾಕ್ಟ್ ಮಾಡಿದ್ದಾರೆ.

    ಸುದೀಪ್ ಶಿಷ್ಯ, ನಾನು ಗುರು ಹಾಗೇ ಇರಲಿ. ನಮ್ಮ ನಡುವೆ ಏನೂ ಇಲ್ಲ. ಅವರು ಹೇಳಿದ್ಮೇಲೆ ನಾನು ಏನು ಮಾತನಾಡೋದಿದೆ. ‘ಮ್ಯಾಕ್ಸ್’ ಮತ್ತು ‘ಯುಐ’ ಒಂದೇ ತಿಂಗಳಲ್ಲಿ ರಿಲೀಸ್ ಆಗುತ್ತಿದೆ. ಅದೆಷ್ಟೋ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗಿ ಸಕ್ಸಸ್ ಕಂಡಿದ್ದು ಇದೆ. ಒಬ್ಬರಿಗೊಬ್ಬರ ಬೆಂಬಲ ನೀಡೋಣ. ಸುದೀಪ್ ಕೂಡ ನಮ್ಮ ಸಿನಿಮಾಗೆ ಟ್ವಿಟ್ ಮಾಡಿದ್ದಾರೆ. ಅವರಿಗೂ ಒಳ್ಳೆಯದಾಗಲಿ ಎಂದು ಹೇಳುತ್ತೇನೆ ಎಂದು ಸುದೀಪ್ ಕುರಿತು ಉಪೇಂದ್ರ (Upendra) ಮಾತನಾಡಿದರು.

    ಅಂದಹಾಗೆ, ನಿನ್ನೆ (ಡಿ.1) ನಡೆದ ‘ಮ್ಯಾಕ್ಸ್’ ಚಿತ್ರದ ಪ್ರೆಸ್ ಮೀಟ್‌ನಲ್ಲಿ ಸುದೀಪ್ ಮಾತನಾಡಿ, ಉಪೇಂದ್ರ ಅವರು ಚಿತ್ರರಂಗಕ್ಕೆ ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ಅವರು ದೊಡ್ಡ ಸೂಪರ್ ಸ್ಟಾರ್. ನಾವೆಲ್ಲಾ ಅವರನ್ನು ನೋಡಿ ಕಲಿತುಕೊಂಡು ಬಂದವರು. ಉಪೇಂದ್ರ ಅವರಿಗೆ ಇಲ್ಲದೇ ಇರೋ ತಲೆನೋವು ನಂಗ್ಯಾಕೆ? ನಿಮಗ್ಯಾಕೆ? ಅವರೇ ಎಲ್ಲೂ ಮಾತನಾಡ್ತಾ ಇಲ್ಲ. ನಾವು ಯಾಕೆ ಸಿನಿಮಾ ರಿಲೀಸ್ ಮಾಡ್ತಾ ಇದ್ದೇವೆ ಎಂಬುದು ಅವರಿಗೂ ಗೊತ್ತು ಎಂದು ಸುದೀಪ್ ಹೇಳಿದ್ದಾರೆ. ನನ್ನ ಸಿನಿಮಾ ಅಲ್ಲದಿದ್ದರೂ, ಉಪೇಂದ್ರ ಸಿನಿಮಾ ನೋಡಿ ಎಂದಿದ್ದರು.

    UI ಸಿನಿಮಾ ಡಿ.20ರಂದು ಬರಲಿದೆ. ‘ಮ್ಯಾಕ್ಸ್’ ಡಿ.25ಕ್ಕೆ ರಿಲೀಸ್ ಆಗಲಿದೆ. ಇದರಲ್ಲಿ ಯಾವುದೇ ಕ್ಲ್ಯಾಶ್ ಇಲ್ಲ. ಗುರು ಬರುತ್ತಾ ಇದ್ದಾರೆ, ಸ್ವಲ್ಪ ದಿನ ಬಿಟ್ಟು ನಾನು ಶಿಷ್ಯ ಬರುತ್ತಿದ್ದೇನೆ. ಚಿತ್ರರಂಗದಲ್ಲಿ ಯಾವುದೇ ಕ್ಲ್ಯಾಶ್ ಇಲ್ಲ ಎಂದು ಉಪೇಂದ್ರ ಪರ ಸುದೀಪ್ ಬ್ಯಾಟ್ ಬೀಸಿದರು.

  • ಸುದೀಪ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್-‌ ಡಿ.25ಕ್ಕೆ ‘‌ಮ್ಯಾಕ್ಸ್‌’ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ಸುದೀಪ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್-‌ ಡಿ.25ಕ್ಕೆ ‘‌ಮ್ಯಾಕ್ಸ್‌’ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ನಟನೆಯ ‘ಮ್ಯಾಕ್ಸ್’ (Max Film) ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅಂತೂ ಇಂತೂ ಕಿಚ್ಚನ ಅಭಿಮಾನಿಗಳ ಕಾತರಕ್ಕೆ ಉತ್ತರ ಸಿಕ್ಕಿದೆ. ಇದೇ ಡಿಸೆಂಬರ್ 25ಕ್ಕೆ ಮ್ಯಾಕ್ಸ್ ಅಬ್ಬರ ಶುರುವಾಗಲಿದೆ. ಇದನ್ನೂ ಓದಿ:ಇಬ್ಭಾಗವಾಯ್ತು ದೊಡ್ಮನೆ- ಅಧಿಕಾರಕ್ಕಾಗಿ ಯುವರಾಣಿ ಮೋಕ್ಷಿತಾ, ಮಂಜು ನಡುವೆ ಬಿಗ್‌ ಫೈಟ್‌

    ಕಾರಣಾಂತಗಳಿಂದ ‘ಮ್ಯಾಕ್ಸ್’ ಸಿನಿಮಾದ ರಿಲೀಸ್‌ಗೆ ತಡವಾಗಿತ್ತು. ಇದೀಗ ಸುದೀಪ್ ಫ್ಯಾನ್ಸ್ ಚಿತ್ರತಂಡ ಸಿಹಿಸುದ್ದಿ ಕೊಟ್ಟಿದೆ. ಇದೇ ಡಿಸೆಂಬರ್ 25ಕ್ಕೆ ಮ್ಯಾಕ್ಸ್ ಚಿತ್ರ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕ್ರಿಸ್‌ಮಸ್‌ ಹಬ್ಬದ ವೇಳೆ, ಥಿಯೇಟರ್‌ಗೆ ಸಿನಿಮಾ ಲಗ್ಗೆ ಇಡುತ್ತಿದೆ.

    ಈ ಚಿತ್ರದಲ್ಲಿ ಸುದೀಪ್ ಜೊತೆ ‘ಬಿಗ್ ಬಾಸ್’ ಉಗ್ರಂ ಮಂಜು(Ugramm Manju), ಸಂಯುಕ್ತಾ ಹೊರನಾಡ್, ಸುಕೃತಾ ವಾಗ್ಲೆ, ವರಲಕ್ಷ್ಮಿ  ಶರತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ.

  • Bigg Boss Kannada 11:ದೊಡ್ಮನೆಯಲ್ಲಿ ಸ್ವರ್ಗ, ನರಕ ಎರಡು ಥೀಮ್ ಇಟ್ಟಿರೋದ್ಯಾಕೆ?: ಸುದೀಪ್ ಸ್ಪಷ್ಟನೆ

    Bigg Boss Kannada 11:ದೊಡ್ಮನೆಯಲ್ಲಿ ಸ್ವರ್ಗ, ನರಕ ಎರಡು ಥೀಮ್ ಇಟ್ಟಿರೋದ್ಯಾಕೆ?: ಸುದೀಪ್ ಸ್ಪಷ್ಟನೆ

    ‘ಬಿಗ್ ಬಾಸ್ ಕನ್ನಡ 11’ಕ್ಕೆ (Bigg Boss Kannada 11) ಕೌಂಟ್ ಡೌನ್ ಶುರುವಾಗಿದೆ. ದೊಡ್ಮನೆ 2ನೇ ಪ್ರೋಮೋ ರಿಲೀಸ್ ಆಗಿ ಮೆಚ್ಚುಗೆ ಗಳಿಸಿತ್ತು. ಈ ಬಾರಿ ಬಿಗ್ ಬಾಸ್‌ನಲ್ಲಿ ಸ್ವರ್ಗ ಮತ್ತು ನರಕ ಎಂದು ಥೀಮ್ ಇರಲಿದೆ ಎಂದು ಸುದೀಪ್‌ (Sudeep) ಇಂಟರೆಸ್ಟಿಂಗ್ ಮಾಹಿತಿ  ತಿಳಿಸಿದ್ದಾರೆ.

    ನಾವು ಮಾಡಿ ಕಳುಹಿಸಲಿಲ್ಲ ಅಂದರೆ ಒಳಗೆ ಹೋಗಿರುವ ಸ್ಪರ್ಧಿಗಳೇ ಟೀಮ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡುವಾಗಲೇ 2 ತಂಡ ಮಾಡುವುದೇ ಈ ಸೀಸನ್‌ನ ಸ್ಪೆಷಾಲಿಟಿ ಎಂದು ಸುದೀಪ್ ತಿಳಿಸಿದರು. ಇದನ್ನೂ ಓದಿ:ವಿನಯ್ ರಾಜ್‌ಕುಮಾರ್‌ಗೆ ದುನಿಯಾ ವಿಜಯ್ ಆ್ಯಕ್ಷನ್ ಕಟ್

    ಕಳೆದ ಬಾರಿ ಬಿಗ್ ಬಾಸ್ ಸೀಸನ್ 10 ಪ್ರಾರಂಭವಾದ ವೇಳೆ, ಸ್ಪರ್ಧಿಗಳಿಗೆ ಸಮರ್ಥರು ಮತ್ತು ಅಸಮರ್ಥರು ಎಂದು ಪರಿಗಣಿಸಿ ತಂಡಗಳಾಗಿ ವಿಂಗಡಿಸಿದ್ದರು. ಅದರಂತೆಯೇ ಈ ಬಾರಿಯು ಕೂಡ ಹೊಸ ರೀತಿಯಲ್ಲಿ ಸ್ವರ್ಗ ಮತ್ತು ನರಕ ಎಂದು ಎರಡು ತಂಡ ಮಾಡಿ ಸ್ಪರ್ಧಿಗಳನ್ನು ಕಳುಹಿಸಲಾಗುತ್ತದೆ.

    ಸುದೀಪ್ ನಿರೂಪಣೆಯಲ್ಲಿ ಇದೇ ಸೆ.29ಕ್ಕೆ ಬಿಗ್ ಬಾಸ್ ಗ್ರ್ಯಾಂಡ್ ಆಗಿ ಲಾಂಚ್ ಆಗುತ್ತಿದೆ. ಪ್ರತಿದಿನ ರಾತ್ರಿ 9:30ಕ್ಕೆ ಶೋ ಪ್ರಸಾರವಾಗಲಿದೆ.