Tag: Mauritus

  • ಪ್ರಧಾನಿ ಮೋದಿಗೆ ಮಾರಿಷಸ್‌ನಲ್ಲಿ ಬಿಹಾರಿ ಸಂಪ್ರದಾಯದಂತೆ ಸ್ವಾಗತ

    ಪ್ರಧಾನಿ ಮೋದಿಗೆ ಮಾರಿಷಸ್‌ನಲ್ಲಿ ಬಿಹಾರಿ ಸಂಪ್ರದಾಯದಂತೆ ಸ್ವಾಗತ

    ಪೋರ್ಟ್ ಲೂಯಿಸ್: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾರಿಷಸ್‌ನ ಪೋರ್ಟ್ ಲೂಯಿಸ್‌ಗೆ ಭೇಟಿ ನೀಡಿದರು. ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅವರಿಗೆ ಬಿಹಾರಿ ಸಂಪ್ರದಾಯದಂತೆ ಸ್ವಾಗತ ಕೋರಲಾಯಿತು.

    ಮಾರಿಷಸ್ ಪಿಎಂ ನವೀನ್ ರಾಮ್‌ಗೂಲಾಮ್ ಅವರು ವಿಮಾನ ನಿಲ್ದಾಣ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡು. ಪರಸ್ಪರರು ಆಲಂಗಿಸಿ ಕುಶಲೋಪರಿ ವಿಚಾರಿಸಿಕೊಂಡರು.

    ಭಾರತೀಯ ವಲಸೆಗಾರರ ​​ಸದಸ್ಯ ಶರದ್ ಬಾರ್ನ್‌ವಾಲ್, ನಾವೆಲ್ಲರೂ ತುಂಬಾ ಉತ್ಸುಕರಾಗಿದ್ದೇವೆ. ನಾವು ಬೆಳಿಗ್ಗೆ ಇಲ್ಲಿ ಒಟ್ಟುಗೂಡಿದ್ದೇವೆ. ಭಾರತ ಮತ್ತು ಮಾರಿಷಸ್ ನಡುವಿನ ಸ್ನೇಹ ಉತ್ತಮವಾಗಿದೆ. ಪಿಎಂ ಮೋದಿಯವರ ಈ ಭೇಟಿಯ ನಂತರ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಡರಾತ್ರಿ ಮಾರಿಷಸ್‌ಗೆ ಎರಡು ದಿನಗಳ ಭೇಟಿಗೆ ತೆರಳಿದ್ದಾರೆ. ಮಾ.12 ರಂದು ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ದಿನದ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

    ಸೋಮವಾರ ನಿರ್ಗಮನಕ್ಕೂ ಮೊದಲು, ದ್ವಿಪಕ್ಷೀಯ ಸಹಭಾಗಿತ್ವವನ್ನು ಹೆಚ್ಚಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುರಕ್ಷತೆ, ಅಭಿವೃದ್ಧಿಯ ಸ್ನೇಹವನ್ನು ಬಲಪಡಿಸಲು ಮಾರಿಷಸ್‌ಗೆ ಭೇಟಿ ನೀಡುತ್ತಿದ್ದೇನೆ ಎಂದು ಪಿಎಂ ಮೋದಿ ತಿಳಿಸಿದ್ದರು.