Tag: Maulana Shahabuddin Razvi Bareilvi

  • ರಂಜಾನ್ ವೇಳೆ ಎನರ್ಜಿ ಡ್ರಿಂಕ್ ಕುಡಿದಿದ್ದಕ್ಕೆ ಆಕ್ರೋಶ – ಶಮಿಯನ್ನು ಕ್ರಿಮಿನಲ್ ಎಂದ ಮುಸ್ಲಿಂ ಧರ್ಮಗುರು

    ರಂಜಾನ್ ವೇಳೆ ಎನರ್ಜಿ ಡ್ರಿಂಕ್ ಕುಡಿದಿದ್ದಕ್ಕೆ ಆಕ್ರೋಶ – ಶಮಿಯನ್ನು ಕ್ರಿಮಿನಲ್ ಎಂದ ಮುಸ್ಲಿಂ ಧರ್ಮಗುರು

    ನವದೆಹಲಿ: ರಂಜಾನ್ (Ramzan) ಉಪವಾಸದ ಹೊತ್ತಲ್ಲಿ ಉಪವಾಸ ಮಾಡದೇ ಎನರ್ಜಿ ಡ್ರಿಂಕ್ ಕುಡಿದು ಕ್ರಿಕೆಟಿಗ ಶಮಿ (Mohammed Shami) ತಪ್ಪು ಸಂದೇಶ ನೀಡುತ್ತಿದ್ದಾರೆ, ಆತ ಕ್ರಿಮಿನಲ್ ಎಂದು ಅಖಿಲಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಬುದ್ದೀನ್ ರಜ್ವಿ ಬರೆಲ್ವಿ (Maulana Shahabuddin Razvi Bareilvi ) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಇದೀಗ ಕ್ರಿಕೆಟ್ ವಿಚಾರದಲ್ಲಿಯೂ ಧರ್ಮ ದಂಗಲ್ ನಡೆಯುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ಪಂದ್ಯದಲ್ಲಿ ಮೊಹ್ಮದ್ ಶಮಿ, ರೋಜಾ (ಉಪವಾಸ) ಮಾಡದೇ ಎನರ್ಜಿ ಡ್ರಿಂಕ್ ಕುಡಿದಿದ್ದರು. ರಂಜಾನ್ ತಿಂಗಳಲ್ಲಿ ಶಮಿ ರೋಜಾ ಮಾಡುತ್ತಿಲ್ಲ. ಹೀಗಾಗಿ ಆತ ಕ್ರಿಮಿನಲ್. ರೋಜಾ ನಿಯಮ ಪಾಲನೆ ಮಾಡದೇ ಶಮಿ ಅಪರಾಧ ಎಸಗುವ ಮೂಲಕ ಜನರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ. ಅವರು ಹಾಗೇ ಮಾಡಬಾರದಿತ್ತು. ಇಸ್ಲಾಮಿಕ್ ಕಾನೂನು ದೃಷ್ಟಿಯಲ್ಲಿ ಆತ ಅಪರಾಧಿ. ದೇವರಿಗೆ ಉತ್ತರಿಸಬೇಕು ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ:ರವಿ ಗಣಿಗ ಹೇಳಿಕೆಗೆ ತಿರುಗೇಟು- ರಶ್ಮಿಕಾ ಮಂದಣ್ಣ ಪರ ರಮ್ಯಾ ಬ್ಯಾಟಿಂಗ್

    ಮುಸ್ಲಿಂರ ಕಡ್ಡಾಯ ಕರ್ತವ್ಯಗಳಲ್ಲಿ ರೋಜಾ ಕೂಡ ಒಂದು. ಅದನ್ನು ಪಾಲಿಸದವರು ಅಪರಾಧಿಗಳಾಗುತ್ತಾರೆ. ಶಮಿ ರೋಜಾ ಪಾಲಿಸದೇ ಅಪರಾಧ ಮಾಡಿದ್ದಾರೆ. ಆತ ಮಾಡಿದ ತಪ್ಪಿಗೆ ಅಲ್ಲಾನ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

    ಮೌಲಾನಾ ಶಮಿ ವಿರುದ್ಧ ಕಿಡಿಕಾರಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮೌಲಾನಾ ಹೇಳಿಕೆ ವಿಚಾರವಾಗಿ ಪರ ವಿರೋಧ ಚರ್ಚೆಗಳು ನಡೆದಿವೆ. ಎನ್‌ಸಿಪಿಯ ರೋಹಿತ್ ಪವಾರ್, ಮೌಲಾನಾ ಹೇಳಿಕೆ ಸರಿಯಲ್ಲ. ಕ್ರೀಡೆಯಲ್ಲಿ ಧರ್ಮವನ್ನು ಎಳೆದು ತರಬಾರದು ಎಂದಿದ್ದಾರೆ.ಇದನ್ನೂ ಓದಿ:ಕರ್ನಾಟಕ, ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ – ಬೆನ್ನು ತಟ್ಟಿಕೊಂಡ ಪರಮೇಶ್ವರ್

     

  • ಭಾರತದ ಪ್ರತಿಯೊಬ್ಬ ಮುಸ್ಲಿಮರೂ ಸಿಎಎಯನ್ನು ಸ್ವಾಗತಿಸಬೇಕು: ಮುಸ್ಲಿಂ ಜಮಾತ್‌ ಅಧ್ಯಕ್ಷ ಕರೆ

    ನವದೆಹಲಿ: ಭಾರತದ ಪ್ರತಿಯೊಬ್ಬ ಮುಸ್ಲಿಮರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (Citizenship Amendment Act) ಸ್ವಾಗತಿಸಬೇಕು ಎಂದು ಅಖಿಲ ಭಾರತ ಮುಸ್ಲಿಂ ಜಮಾತ್‌ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್‌ ರಜ್ವಿ ಬರೇಲ್ವಿ (Maulana Shahabuddin Razvi Bareilvi) ಹೇಳಿದ್ದಾರೆ.

    ಭಾರತ ಸರ್ಕಾರವು ಸಿಎಎ ಕಾನೂನನ್ನು ಜಾರಿಗೆ ತಂದಿದೆ. ನಾನು ಈ ಕಾನೂನನ್ನು ಸ್ವಾಗತಿಸುತ್ತೇನೆ. ಇದನ್ನು ಬಹಳ ಮುಂಚೆಯೇ ಮಾಡಬೇಕಾಗಿತ್ತು. ಈ ಕಾನೂನಿನ ಬಗ್ಗೆ ಮುಸ್ಲಿಮರಲ್ಲಿ ಸಾಕಷ್ಟು ತಪ್ಪು ತಿಳುವಳಿಕೆಗಳಿವೆ. ಈ ಕಾನೂನಿಗೆ ಏನೂ ಮಾಡಲು ಸಾಧ್ಯವಿಲ್ಲ. ಧರ್ಮದ ಆಧಾರದ ಮೇಲೆ ದೌರ್ಜನ್ಯಗಳನ್ನು ಎದುರಿಸುತ್ತಿರುವ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬರುವ ಮುಸ್ಲಿಮೇತರರಿಗೆ ಪೌರತ್ವ ನೀಡಲು ಈ ಹಿಂದೆ ಯಾವುದೇ ಕಾನೂನು ಇರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: CAA ಸ್ವಾಗತಿಸಿ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಸೀಮಾ ಹೈದರ್‌

    ಕೋಟ್ಯಂತರ ಭಾರತೀಯ ಮುಸ್ಲಿಮರಿಗೆ ಈ ಕಾನೂನಿನಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಕಾನೂನು ಯಾವುದೇ ಮುಸಲ್ಮಾನರ ಪೌರತ್ವವನ್ನು ಕಸಿದುಕೊಳ್ಳಲು ಹೋಗುವುದಿಲ್ಲ. ಕಳೆದ ವರ್ಷಗಳಲ್ಲಿ, ಪ್ರತಿಭಟನೆಗಳು ನಡೆದಿರುವುದು ಕಂಡುಬಂದಿದೆ. ಕೆಲವು ರಾಜಕೀಯ ವ್ಯಕ್ತಿಗಳು ಮುಸ್ಲಿಮರಲ್ಲಿ ತಪ್ಪು ತಿಳುವಳಿಕೆಯನ್ನು ಹುಟ್ಟುಹಾಕಿದ್ದಾರೆ. ಭಾರತದ ಪ್ರತಿಯೊಬ್ಬ ಮುಸಲ್ಮಾನನೂ ಸಿಎಎಯನ್ನು ಸ್ವಾಗತಿಸಬೇಕು ಎಂದು ಕರೆ ನೀಡಿದ್ದಾರೆ.

    ಫೆಬ್ರವರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪೌರತ್ವವನ್ನು ಒದಗಿಸಲು CAA ತರಲಾಗಿದೆಯೇ ಹೊರತು ಯಾರ ಪೌರತ್ವವನ್ನು ಕಸಿದುಕೊಳ್ಳಲು ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಸಿಎಎ ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಕಾಯಿದೆಯಲ್ಲಿ ಯಾವುದೇ ಅವಕಾಶವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವವನ್ನು ನೀಡಲಾಗಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಲೋಕಸಭಾ ಚುನಾವಣೆ ಸ್ಪರ್ಧೆಗೆ ಮಲ್ಲಿಕಾರ್ಜುನ ಖರ್ಗೆ ಹಿಂದೇಟು?

    ಪೌರತ್ವ ತಿದ್ದುಪಡಿ ಕಾಯ್ದೆ 2019 ಕ್ಕೆ ಸಂಬಂಧಿಸಿದ ನಿಯಮಗಳನ್ನು ಸೋಮವಾರ ಕೇಂದ್ರ ಸರ್ಕಾರ ಅಧಿಸೂಚನೆಯಲ್ಲಿ ಪ್ರಕಟಿಸಿದೆ.